Subscribe to Updates
Get the latest creative news from FooBar about art, design and business.
- 14 ವರ್ಷದ ಬಾಲಕಿ ತಾಯಿಯಾದ ಪ್ರಕರಣ; ಪೋಕ್ಸೋ ಕೇಸ್ ದಾಖಲು: ನಾಲ್ವರು ವೈದ್ಯರ ವಿರುದ್ಧವೂ FIR
- ಸರ್ಕಾರದ ಚಿತಾವಣೆಯಿಂದ ಬಿಡದಿ ಟೌನ್ ಶಿಪ್ ಗೆ ಸರ್ವೆ: ಹೆಚ್.ಡಿ. ಕುಮಾರಸ್ವಾಮಿ ಆರೋಪ
- ಬಿಡದಿ ಟೌನ್ ಶಿಪ್ ಜಟಾಪಟಿ: ಸರ್ವೆಗೆ ಬಂದ ಅಧಿಕಾರಿಗಳಿಗೆ ರೈತರಿಂದ ಪೊರಕೆ ಏಟು!
- ಸರಗೂರು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಣವೇ ಭದ್ರ ಬುನಾದಿ: ಶಂಭುಮೂರ್ತಿ
- ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ: ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್
- ಮನೆಗೆ ಮರು ಪೇಂಟಿಂಗ್ ಮಾಡಿಸುವಾಗ ಈ ತಪ್ಪುಗಳನ್ನು ಮರೆತೂ ಮಾಡಬೇಡಿ!
- ತುಮಕೂರು: ಎಸ್ ಐಆರ್ ಗೊಂದಲ, ಹೆಲ್ಪ್ ಲೈನ್ ಗೆ ಚಾಲನೆ ನೀಡಿದ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ
- ತುಮಕೂರು: ಮಕ್ಕಳ ಜನನ ಪ್ರಮಾಣಪತ್ರ ಲೋಪದೋಷ ನಿವಾರಣೆಗೆ ಸರ್ಕಾರಿ ಆದೇಶ
Author: admin
ಕಳೆದ 24 ಗಂಟೆಗಳಲ್ಲಿ ಮಣಿಪುರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಐವರು ಮೇಥಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಿಷ್ಣುಪುರ್ ಮತ್ತು ಕಾಂಗ್ ಪೋಕ್ಪಿ ಜಿಲ್ಲೆಗಳಲ್ಲಿ ಘರ್ಷಣೆ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಕೇಂದ್ರ ಬಿಗಿ ಭದ್ರತೆ ಕೈಗೊಂಡಿದೆ. ಮೋರ್ ಸೇರಿದಂತೆ ಸಂಘರ್ಷ ವಲಯಗಳಲ್ಲಿ ಹೆಚ್ಚಿನ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ಇದೇ ವೇಳೆ ಮಣಿಪುರದಲ್ಲಿ ನಡೆದ ಘರ್ಷಣೆಯಲ್ಲಿ ಮೂವರು ಬಿಎಸ್ ಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ತೌಬಲ್ ಜಿಲ್ಲೆಯ ಪೊಲೀಸ್ ಪ್ರಧಾನ ಕಛೇರಿಯ ಮೇಲೆ ಗುಂಪೊಂದು ದಾಳಿ ಮಾಡುವುದನ್ನು ತಡೆಯಲು ಪ್ರಯತ್ನಿಸುತ್ತಿರುವಾಗ ಬಿಎಸ್ ಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕಳೆದ ದಿನ ಮೋರಿಯಾದಲ್ಲಿ ಇಬ್ಬರು ಪೊಲೀಸ್ ಕಮಾಂಡೋಗಳನ್ನು ಗುಂಪು ಗುಂಡಿಕ್ಕಿ ಕೊಂದಿತ್ತು. ಕಳೆದ ದಿನ ಸಂಘರ್ಷ ನಡೆದ ಮೋರೆಯು ತೌಬಲ್ ಜಿಲ್ಲೆಯಿಂದ ಕೇವಲ 100 ಕಿ.ಮೀ. ದೂರದಲ್ಲಿದೆ. ಜನಸಮೂಹವು ಮೊದಲು ತೌಬಲ್ ನಲ್ಲಿರುವ ಇಂಡಿಯನ್ ರಿಸರ್ವ್ ಬೆಟಾಲಿಯನ್ ಸಂಕೀರ್ಣವನ್ನು ಗುರಿಯಾಗಿಸಿತು. ಆದರೆ, ಬಿಎಸ್ ಎಫ್ ಅವರನ್ನು ತಕ್ಷಣವೇ ವಜಾಗೊಳಿಸುವಲ್ಲಿ ಯಶಸ್ವಿಯಾಯಿತು. ನಂತರ ಗುಂಪೊಂದು ಪೊಲೀಸ್ ಕೇಂದ್ರ…
ಚಳಿಗಾಲದ ತೀವ್ರ ಅಲೆ ಉತ್ತರ ಭಾರತವನ್ನು ಆವರಿಸಿದೆ. ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ದಟ್ಟ ಮಂಜು ಕವಿದಿದೆ. ದೆಹಲಿಯಲ್ಲಿ ವಿಮಾನಗಳು ಮತ್ತು ರೈಲುಗಳು ವಿಳಂಬವಾಗಿವೆ. ಇನ್ನೂ ಎರಡು ದಿನಗಳ ಕಾಲ ತೀವ್ರ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಕೇಂದ್ರವು ಮಾಹಿತಿ ನೀಡಿದೆ. ಮಂಜುಗಡ್ಡೆಯಿಂದ ಗೋಚರತೆ ಅಡ್ಡಿಯಾಗುವುದರಿಂದ ರಸ್ತೆ, ರೈಲು ಮತ್ತು ವಿಮಾನ ಸಂಚಾರವು ವ್ಯಾಪಕವಾಗಿ ವಿಳಂಬವಾಗಿದೆ ಅಥವಾ ಅಡಚಣೆಯಾಗಿದೆ. ಇದೇ ವೇಳೆ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಪ್ರಯಾಣಿಕರ ಬಿಕ್ಕಟ್ಟು ನೀಗಿಸಲು ವಿಮಾನ ನಿಲ್ದಾಣಗಳಲ್ಲಿ ‘ವಾರ್ ರೂಂ’ಗಳನ್ನು ಸ್ಥಾಪಿಸಲಾಗುವುದು, ಮುಂಬೈ, ದೆಹಲಿ, ಬೆಂಗಳೂರು, ಆರು ಮೆಟ್ರೋ ನಗರಗಳ ವಿಮಾನ ನಿಲ್ದಾಣಗಳಲ್ಲಿ ವಾರ್ ರೂಮ್ ಗಳನ್ನು ಸ್ಥಾಪಿಸಲಾಗುವುದು. ಹೈದರಾಬಾದ್, ಕೋಲ್ಕತ್ತಾ ಮತ್ತು ಚೆನ್ನೈ ಎಂದು ಅವರು ಸೇರಿಸಿದರು.
ಉಡುಪಿ: ಕೃಷ್ಣ ಮಠ ಸಾಮಾಜಿಕವಾಗಿ, ಧಾರ್ಮಿಕವಾಗಿ ತೊಡಗಿಸಿಕೊಂಡ ಕೇಂದ್ರ. ಪುತ್ತಿಗೆ ಮಠದ ಪರ್ಯಾಯದಲ್ಲಿ ಭಾಗಿಯಾಗಿರೋದು ಪುಣ್ಯದ ಕೆಲಸ ಎಂದು ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ಹೇಳಿದರು. ಉಡುಪಿ ಕೃಷ್ಣ ಮಠದ ಪುತ್ತಿಗೆ ಪರ್ಯಾಯ ದರ್ಬಾರ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧಾರ್ಮಿಕ ಕೇಂದ್ರಗಳಿಗೆ ಸಮಾಜವನ್ನು ತಿದ್ದುವ ಶಕ್ತಿಯಿದೆ. ಸಮಾಜ ಒಡೆದು ಹೋಗುವ ಸಂದರ್ಭದಲ್ಲಿ ಮಠಾಧೀಶರು ಜೋಡಿಸಬೇಕು. ಪುತ್ತಿಗೆ ಶ್ರೀಗಳು ಧಾರ್ಮಿಕವಾಗಿ ದೇಶ-ವಿದೇಶದಲ್ಲಿ ತೊಡಗಿಸಿಕೊಂಡವರು ಎಂದರು. ರಾಜ್ಯ, ದೇಶದಲ್ಲಿ ಸಾಮರಸ್ಯ ಬೆಳೆಯಲು ಮಠಗಳು ದಾರಿದೀಪವಾಗಬೇಕು. ಹಿಂದಿನಿಂದಲೂ ನಾನು ಕೃಷ್ಣ ಮಠಕ್ಕೆ ಸಂಬಂಧಪಟ್ಟ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಮಠ ಕೇವಲ ಧಾರ್ಮಿಕವಾಗಿ ಕಾರ್ಯಾಚರಿಸದೆ, ಶೈಕ್ಷಣಿಕ, ಸಾಮಾಜಿಕವಾಗಿ ಕೂಡಾ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ನಿನ್ನೆ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ವಿಗ್ರಹಣದ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. ಇಂದು ರಾಮನ ಮೂರ್ತಿ ಗರ್ಭಗುಡಿ ಪ್ರವೇಶಿಸಿದೆ. ಮತ್ತೊಂದೆಡೆ ವಿಜಯಪುರದ ಜ್ಞಾನಯೋಗಿ ಸಿದ್ದೇಶ್ವರಶ್ರೀ ಆಸ್ಪತ್ರೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಉಚಿತ ಹೆರಿಗೆ ಘೋಷಣೆ ಮಾಡಲಾಗಿದೆ. ಇಂದಿನಿಂದ ಜನವರಿ 22ರವರೆಗೆ ಜನಿಸಿದ ನವಜಾತ ಶಿಶುಗಳನ್ನು ರಾಮ ಹಾಗೂ ಸೀತೆ ಪ್ರತಿರೂಪ ಎಂದು ಪರಿಗಣಿಸಿ ಉಚಿತ ಹೆರಿಗೆ ಯೋಜನೆ ಘೋಷಿಸಲಾಗಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಧ್ಯಕ್ಷತೆಯ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ನಿರ್ಮಿತ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ. 22ರಂದು ಅಯೋಧ್ಯೆಯಲ್ಲಿ ಜರುಗಲಿರುವ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಅಯೋಧ್ಯಾ ಸಂಭ್ರಮೋತ್ಸವನ್ನು ಆಚರಿಸುವ ಉದ್ದೇಶದಿಂದ ಉಚಿತ ಹೆರಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರ ಶಾಸಕರಾದ ಬಸನಗೌಡ ರಾ. ಪಾಟೀಲ್ ಯತ್ನಾಳ ಅವರ ಅಪೇಕ್ಷೆಯಂತೆ ಇಂದಿನಿಂದ…
ಬಾಗಲಕೋಟೆ: ಆರೋಗ್ಯವು ಅಮೂಲ್ಯ ಸಂಪತ್ತಾಗಿದ್ದು ಪೌಷ್ಟಿಕ ಆಹಾರ, ಮಿತ ವ್ಯಾಯಾಮದ ಮೂಲಕ ಕಾಪಾಡಿಕೊಳ್ಳಬೇಕು. ಹಣದಿಂದ ಅವಶ್ಯಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಆದರೆ ಆರೋಗ್ಯವನ್ನು ಪಡೆದುಕೊಳ್ಳುವುದು ಕಷ್ಟಕರ ಎಂದು ಮನೋವೈದ್ಯರಾದ ಡಾ.ಸಿ.ಆರ್. ಚಂದ್ರಶೇಖರ ಹೇಳಿದರು. ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೇಹ ಮನಸ್ಸು ಮತ್ತು ಆರೋಗ್ಯದರಿವಿನ ಅಭಿಯಾನ ಕಾರ್ಯಕ್ರಮದಲ್ಲಿ ಮನೋವಿಜ್ಞಾನಕ್ಕೆ ಸಂಬಂಧಿಸಿ, 9 ಕಿರು ಪುಸ್ತಕಗಳನ್ನು ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಆರೋಗ್ಯವಂತ ವ್ಯಕ್ತಿ ಏನನ್ನಾದರೂ ಸಾಧಿಸಬಲ್ಲ. ಪ್ರತಿಯೊಬ್ಬರಲ್ಲಿಯೂ ಸಾಧರಣ ಬುದ್ಧಿ ಸಾಮರ್ಥ್ಯವಿದ್ದು ಅದನ್ನು ಉಪಯೋಗಿಸಿಕೊಳ್ಳಬೇಕು. ಆಲೋಚನೆ, ಕಲಿಕೆ, ಸಂವಹಣ, ಸೃಜನಶೀಲತೆ ಮತ್ತು ಕೌಶಲ್ಯ ಬೆಳವಣಿಗೆಯಿಂದ ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು. ಪ್ರತಿಯೊಬ್ಬರಿಗೂ ಐದು ಭಾಷೆಗಳನ್ನು ಕಲಿಯುವ ಸಾಮರ್ಥ್ಯವಿದೆ. ಒಂದೇ ಭಾಷೆಗೆ ಸೀಮಿತವಾಗದೆ, ಬಹು ಬಾಷೆಗಳನ್ನು ಕಲಿತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಿ. ದುಡುಕು ನಿರ್ಧಾರಗಳಿಗೆ ಬಲಿಯಾಗದೇ ಭಾವನೆಗಳನ್ನು ನಿಯಂತ್ರಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಿ. ಕೋಪ, ಭಯ, ಉದ್ವಿಗ್ನತೆಯನ್ನು ಹತೋಟಿಗೆ ತೆಗೆದುಕೊಂಡರೆ…
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ-2024 ರ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿವತಿಯಿಂದ ಜನವರಿ 21 ರಂದು ಬೆಳಗ್ಗೆ 9 ಗಂಟೆಯಿಂದ ಕಲಾವಿದರಿಗಾಗಿ ‘ವ್ಯಂಗ್ಯಚಿತ್ರ ಪ್ರದರ್ಶನ ಮತ್ತು ಕಾರ್ಯಾಗಾರ’ವನ್ನು ವಿಧಾನಸೌಧ ಪೂರ್ವದಿಕ್ಕಿನ ಬಸವಣ್ಣನ ಪ್ರತಿಮೆ ಎದುರುಗಡೆಯಲ್ಲಿ ಏರ್ಪಡಿಸಲಾಗಿದೆ. ವೃತ್ತಿಪರ ಮತ್ತು ಹವ್ಯಾಸಿ ವ್ಯಂಗ್ಯಚಿತ್ರಕಾರರು, ಹವ್ಯಾಸಿ ಕಲಾವಿದರು, ಕಲಾ ವಿದ್ಯಾರ್ಥಿಗಳು ಈ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಚುನಾವಣೆ, ಮತದಾನದ ಮಹತ್ವ ಸಾರುವ, ಮತದಾನ ಪ್ರಕ್ರಿಯೆಯಲ್ಲಿ ನಾಗರಿಕರು ಭಾಗವಹಿಸುವುದನ್ನು ಪ್ರೋತ್ಸಾಹಿಸುವಂತಹ ವ್ಯಂಗ್ಯಚಿತ್ರಗಳನ್ನು ರಚಿಸಬೇಕು. ಆಯ್ಕೆಯಾದ 100 ವ್ಯಂಗ್ಯಚಿತ್ರಗಳನ್ನು ಜ.21ರಂದು ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅತ್ಯುತ್ತಮ 25 ಚಿತ್ರಗಳನ್ನು ಮತದಾನ ಜಾಗೃತಿ, ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತದೆ ಹಾಗೂ ಆ ವ್ಯಂಗ್ಯಚಿತ್ರಗಳಿಗೆ ಗೌರವಧನವನ್ನು ಸಹ ನೀಡಲಾಗುತ್ತದೆ. ಷರತ್ತು ಹಾಗು ನಿಬಂಧನೆಗಳು: • ಚಿತ್ರಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರಚಾರ ಮತ್ತು ವ್ಯಂಗ್ಯ ಇರಬಾರದು • ಚಿತ್ರಗಳು ಹೊಸದಾಗಿದ್ದು, ಈ ಹಿಂದೆ ಯಾವುದೇ ಪ್ರಚಾರದಲ್ಲಿ ಬಳಸಿಕೊಂಡಿರಬಾರದು. • ಚಿತ್ರಗಳು ಸ್ವಂತ ರಚನೆಯಲ್ಲಿರಬೇಕು. (ಗ್ರಾಫಿಕ್ಸ್, ಕುಂಚ,…
ಬೆಂಗಳೂರು: ಸೈಬರ್ ಅಪರಾಧಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ತುಮಕೂರು ಜಿಲ್ಲೆಯ ಗುಬ್ಬಿ ಮತ್ತು ಕೊರಟಗೆರೆ ತಾಲ್ಲೂಕಿನ 7,500 ಕ್ಕೂ ಹೆಚ್ಚು ಮಕ್ಕಳನ್ನು ಒಳಗೊಂಡಿರುವ 44 ಸರ್ಕಾರಿ ಶಾಲೆಗಳಲ್ಲಿ ಅಭಿಯಾನ ಆರಂಭವಾಗಿದೆ. ಜನವರಿ 17 ರಂದು ಈ ಅಭಿಯಾನ ಆರಂಭಗೊಂಡಿದ್ದು, ಶುಕ್ರವಾರ ಮುಕ್ತಾಯವಾಗಲಿದೆ. ಬೆಂಗಳೂರು ಮೂಲದ ಇಂಟರ್‌ನ್ಯಾಶನಲ್ ಸ್ಕೂಲ್ ಆಫ್ ಬ್ಯುಸಿನೆಸ್ & ರಿಸರ್ಚ್‌ನ 350 ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು, ಫೌಂಡೇಶನ್ ಮತ್ತು ಇಂಡಿಯಾ ಲಿಟರಸಿ ಪ್ರಾಜೆಕ್ಟ್‌ನ ಸಹಯೋಗದೊಂದಿಗೆ ಈ ಅಭಿಯಾನ ಕೈಗೊಂಡಿದ್ದಾರೆ. ಇದಕ್ಕೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಕೂಡಾ ಬೆಂಬಲ ವ್ಯಕ್ತಪಡಿಸಿದೆ. 8, 9 ಮತ್ತು 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಅವಧಿಗಳ ಮೂಲಕ ಶಿಕ್ಷಣ ನೀಡುವ ಗುರಿಯನ್ನು ಅಭಿಯಾನ ಹೊಂದಿದೆ. ಉಪನ್ಯಾಸಗಳು, ವೈಯಕ್ತಿಕ ಸುರಕ್ಷತೆ ಮತ್ತು ಸುರಕ್ಷತಾ ಅಪಾಯಗಳಿಗೆ ಸಂಭವನೀಯ ಬೆದರಿಕೆಗಳ ಮಾಹಿತಿಯನ್ನು ಒಳಗೊಂಡಿರುತ್ತದೆ. ಜೊತೆಗೆ ಅವುಗಳನ್ನು ತಡೆ ಮತ್ತು ಎದುರಿಸುವ ಕ್ರಮಗಳನ್ನು ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.
ಸಿಎಂ ಸಿದ್ದರಾಮಯ್ಯ ವಿರುದ್ದ ಏಕವಚನ ಬಳಕೆ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ದ ಕಾಂಗ್ರೆಸ್ ನಾಯಕರಲ್ಲದೇ ಬಿಜೆಪಿ ಕೆಲ ಮುಖಂಡರು ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಶಿವರಾಜ್ ತಂಗಡಗಿ, ಅನಂತ್ ಕುಮಾರ್ ಹೆಗಡೆ ಹುಚ್ಚ ಎಂದು ಬಿಜೆಪಿಯವರೇ ತಿಳಿದುಕೊಂಡಿದ್ದಾರೆ ಎಂದು ಈಗ ಸಾಬೀತಾಯಿತು. ಹೆಗಡೆ ಅವರ ಮಾತಿಗೆ ಬೆಲೆ ಕೊಡಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಅನಂತ್ ಕುಮಾರ್ ಹೆಗಡೆ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಆತ ಬಿಜೆಪಿಯಲ್ಲಿ ಹುಚ್ಚ. ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಲೇವಡಿ ಮಾಡಿದರು. ಅನಂತ್ ಕುಮಾರ್ ಹೆಗಡೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಿ ಇಲ್ಲದಿದ್ದರೇ ನಾವು ಕೊಡಿಸುತ್ತೇವೆ. ಹೆಗಡೆ ವಿರುದ್ದ ಕ್ರಮ ಕೈಗೊಳ್ಳಲು ಸಿಎಂ, ಡಿಸಿಎಂ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಗೌರಿಬಿದನೂರಿನ ಮಂಚೇನಹಳ್ಳಿ ಸಮೀಪದ ಟ್ರಾನ್ಸ್ ಫಾರ್ಮರ್ ಬಳಿ ಹಾಕಿರುವ ಗೈ ವೈರ್ ಎಳೆಯಲು ಹೋಗಿ ಆಕಸ್ಮಿಕ ವಿದ್ಯುತ್ ತಗಲಿ ಚಿಂದಿ ಆಯುವ ಬಾಲಕ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ನಾಗೇಂದ್ರ (8) ಮೃತಪಟ್ಟ ಬಾಲಕ. ಆತ ಇಂದು ಬೆಳಗ್ಗೆ ಚಿಂದಿ ಆಯುವ ಸಂದರ್ಭದಲ್ಲಿ ಟ್ರಾನ್ಸ್ ಫಾರ್ಮರ್ ಗೆ ಹೊಂದಿಕೊಂಡಿರುವ ಚರಂಡಿ ಬಳಿ ಇರುವ ಗೈ ವೈರ್ ಅನ್ನು ಬಲವಾಗಿ ಎಳೆದಿದ್ದರಿಂದ ಗೈ ವೈರ್ ಎಲ್ ಟಿ ಕಿಟ್ ಗೆ ತಾಕಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಬಾಲಕ ನಾಗೇಂದ್ರ ಮೃತ ಪಟ್ಟಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು, ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಅವರ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಚಿಕ್ಕಾಬಳ್ಳಾಪುರ- ಗೌರಿಬಿದನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜೊತೆಗೆ ಟ್ರಾನ್ಸ್ ಫಾರ್ಮರ್ ಬಳಿವಿರುವ ಚರಂಡಿ ದುರಸ್ಥಿ ಕಾರ್ಯ ಕೂಡ ನಡೆಯುತ್ತಿದೆ. ಬಾಲಕ, ಚರಂಡಿ ಆಚೆ ಇರುವ ಗೈ ವೈರ್ ಅನ್ನು ಎಳೆದ ಪರಿಣಾಮ ಈ ಘಟನೆ ಸಂಭವಿಸಿದೆ. ಈ…
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಜನವರಿ 22 ರಂದು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಅಂದು ಅರ್ಧ ದಿನ ಸರ್ಕಾರಿ ರಜೆಯನ್ನ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಕುರಿತು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ. ಜನವರಿ 22 ರಂದು ಕೇಂದ್ರಸರ್ಕಾರದ ಕಚೇರಿಗಳಿಗೆ ಕೇಂದ್ರದ ಶಿಕ್ಷಣ ಸಂಸ್ಥೆಗಳು ಕೇಂದ್ರ ಕಾರ್ಖಾನೆಗಳಿಗೆ ಮಧ್ಯಾಹ್ನ 2.30ರವರೆಗೆ ರಜೆ ಘೋಷಣೆ ಮಾಡಲಾಗಿದೆ.