Subscribe to Updates
Get the latest creative news from FooBar about art, design and business.
- ಪ್ರಥಮ ಬಿ.ಸಿ.ಎ. ಪದವಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
- ಕುಣಿಗಲ್ ಪುರಸಭಾ ವ್ಯಾಪ್ತಿಯ ಸಾರ್ವಜನಿಕರಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
- ತುಮಕೂರು: ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಸಿನಿಮಾ ಮುಹೂರ್ತ ಸಮಾರಂಭ
- ತುಮಕೂರು: ಪಾದರಕ್ಷೆ ತಯಾರಿಕಾ ಸ್ಪರ್ಧೆಗೆ ಅರ್ಜಿ
- ಭೀಕರ ಅಪಘಾತ: ಶನಿಮಹಾತ್ಮ ದೇವಾಲಯ ವ್ಯವಸ್ಥಾಪಕ ಜಗನ್ನಾಥ್ ನಿಧನ
- ನೈರ್ಮಲ್ಯ ಕಾಪಾಡಿ, ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟಿ: ಮಹಿಳೆಯರಿಗೆ ಕಾವೇರಿ ಎನ್. ಕರೆ
- ಪೌತಿ ಖಾತೆ, ಕಂದಾಯ ಗ್ರಾಮ ಹಕ್ಕುಪತ್ರ, ಪೋಡಿ ಮುಕ್ತ ಅಭಿಯಾನ: ರೈತರ ಅಲೆದಾಟ ತಪ್ಪಿಸಲು ಸರ್ಕಾರದ ಮಹತ್ವದ ಕ್ರಮ
- ತುಮಕೂರನ್ನು ಬೆಂಗಳೂರಿನ ಭಾಗವಾಗಿಸಿ: ಸಾಧನಾ ಸಮಾವೇಶದಲ್ಲಿ ಡಾ.ಜಿ.ಪರಮೇಶ್ವರ್ ಪ್ರಸ್ತಾಪ
Author: admin
ದೇಶದ ಅತಿ ದೊಡ್ಡ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆ ವೇದಿಕೆಯಾಗಲಿದೆ. ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮತ್ತು ಮುಂಬೈ ಮೂಲದ ಬಿಜೆಪಿ ಮುಖಂಡ ಹಾಜಿ ಅರಾಫತ್ ಶೇಖ್, ಅಯೋಧ್ಯೆಯಿಂದ 25 ಕಿ.ಮೀ. ದೂರದಲ್ಲಿರುವ ಧನಿಪುರದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ. 2024ರಲ್ಲಿ ಕಟ್ಟಡದ ಶಂಕುಸ್ಥಾಪನೆ ನಡೆಯಲಿದೆ ಎಂದು ತಿಳಿದು ಬಂದಿದೆ. 21 ಅಡಿ ಎತ್ತರ ಹಾಗೂ 36 ಅಡಿ ಅಗಲದಲ್ಲಿ 9 ಸಾವಿರ ಮಂದಿ ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವಂತೆ ಮಸೀದಿ ನಿರ್ಮಿಸಲಾಗುವುದು ಎಂದು ವರದಿಯಾಗಿದೆ.
ಕರ್ನಾಟಕದ 18ಕ್ಕೂ ಅಧಿಕ ಜಿಲ್ಲೆಗಳಲ್ಲಿ ಡಿಸೆಂಬರ್ 17ರಿಂದ 2 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರಾವಳಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು: ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಉಳಿದಿದೆ. ಈ ಮಧ್ಯೆ ಕ್ರಿಸ್ಮಸ್ ಸಲುವಾಗಿ ಬೆಂಗಳೂರಿನಲ್ಲಿ ಕೇಕ್ ಶೋ ಆಯೋಜನೆ ಮಾಡಿದ್ದು, ಇಂದಿನಿಂದ ಶುರುವಾಗಿ ಜನವರಿ 01ರ ವರೆಗೂ ನಡೆಯಲಿದೆ. ಯುಬಿ ಸಿಟಿ ಸಮೀಪದ ಸೇಂಟ್ ಜೋಸೆಫ್ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಕೇಕ್ ಶೋ ಥಿಂಕ್ ಲೋಕಲ್- ಆಕ್ಟ್ ಗ್ಲೋಬಲ್ ಪರಿಕಲ್ಪನೆಯಲ್ಲಿ ಕೇಕ್ ಪ್ರದರ್ಶನಕ್ಕೆ ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದೆ. ಈ ಕೇಕ್ ಶೋಗೆ ಭೇಟಿ ನೀಡಿ ವಿಶೇಷ ರೀತಿಯ, ವಿಶೇಷ ವಿನ್ಯಾಸದ ಕೇಕ್ ಗಳನ್ನು ಸವಿಯಲು ಸುವರ್ಣಾವಕಾಶವನ್ನು ನೀಡಲಾಗಿದೆ.
ತುಮಕೂರು: ಸೈಬರ್ ವಂಚಕರು ಮುಂಬೈ ಪೊಲೀಸರ ಹೆಸರಿನಲ್ಲಿ ಮಹಿಳೆಯನ್ನ ಬೆದರಿಸಿ 27 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಮಹೇಂದ್ರಿ ಎಂಬ ವೃದ್ಧೆ ವಂಚಿತರಾದವರಾಗಿದ್ದಾರೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಮಹೇಂದ್ರಿ ಎಂಬ ವೃದ್ಧೆಗೆ ದೂರವಾಣಿ ಕರೆ ಮಾಡಿದ ಸೈಬರ್ ಖದೀಮರು 27 ಲಕ್ಷ ದೋಚಿದ್ದಾರೆ. ನಾವು ಮುಂಬೈ ಪೊಲೀಸರು, ನೀವು ಸಾರ್ವಜನಿಕರಿಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದೀರಿ ಎಂದು ದೂರು ದಾಖಲಾಗಿದೆ. ಇದನ್ನು ಮುಚ್ಚಿ ಹಾಕಲು ಹಣ ನೀಡುವಂತೆ ಬೇಡಿಕೆ ಇಟ್ಟು 27 ಲಕ್ಷ ಹಣ ವಂಚಿಸಿದ್ದಾರೆ. ಬಳಿಕ ಸೈಬರ್ ವಂಚಕರ ಮೋಸದ ಬಲೆಗೆ ಬಿದ್ದಿರುವುದು ತಿಳಿದ ವೃದ್ಧೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಪಟ್ನಾ: ವಿಚಾರಣೆಗೆಂದು ಕೈದಿಗಳನ್ನು ಕರೆದುಕೊಂಡು ಬರುತ್ತಿರುವಾಗ, ಪೊಲೀಸರ ಮುಂದೆಯೇ ಬಿಹಾರದ ದಾನಪುರ ಕೋರ್ಟ್ ನ ಬಳಿ ಅಪರಿಚಿತ ವ್ಯಕ್ತಿಗಳು, ಇಬ್ಬರು ಕೈದಿಗಳ ಮೇಲೆ ಫೈರಿಂಗ್ ಮಾಡಿರುವ ಘಟನೆ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದರೆ ಮತ್ತೊಬ್ಬ ಕೈದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಕೈದಿಯನ್ನು ಆಸ್ಪತ್ರೆ ಕರೆದುಕೊಂಡು ಹೋಗಲಾಗಿದೆ. ಬಲಿಯಾದ ಕೈದಿಯನ್ನು ಅಭಿಷೇಕ್ ಕುಮಾರ್ ಅಕಾ ಚೋಟೆ ಸರ್ಕಾರ್ ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತರುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಭಿಷೇಕ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ಗುಂಡಿನ ದಾಳಿ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಅಭಿಷೇಕ್ ಕುಮಾರ್ ಅಕಾ ಚೋಟೆ ಸರ್ಕಾರ್ ಮೇಲೆ ಇಬ್ಬರು ವ್ಯಕ್ತಿಗಳು ದಾನಪುರ ನ್ಯಾಯಾಲಯದಲ್ಲಿ ಗುಂಡು ಹಾರಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ದಾಳಿಯಲ್ಲಿ ಅಭಿಷೇಕ್ ಕುಮಾರ್ ಮೃತಪಟ್ಟಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಾಟ್ನಾ ಸಿಟಿ ಎಸ್ಪಿ ರಾಜೇಶ್…
ಬೆಂಗಳೂರು: ಡಿಸೆಂಬರ್ 14ರ ರಾತ್ರಿ ಅಲಿಪಿರಿ ಕಾಲುದಾರಿಯಲ್ಲಿ ಎರಡೂವರೆ ಗಂಟೆಗಳ ಕಾಲ ನಡೆದು ದೇವಾಲಯದ ಆವರಣವನ್ನು ತಲುಪಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಿರುಪತಿಗೆ ಆಗಮಿಸಿ ವೆಂಕಟೇಶ್ವರನ ಆಶೀರ್ವಾದ ಪಡೆದಿದ್ದಾರೆ. ಸಹೋದರಿ ಮತ್ತು ಗಾಲ್ಫ್ ಆಟಗಾರ್ತಿ ಅನಿಶಾ ಪಡುಕೋಣೆಯೊಂದಿಗೆ ದೇವಾಲಯದ ಮೆಟ್ಟಿಲುಗಳನ್ನು ಹತ್ತುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಿರುಮಲದಲ್ಲಿರುವ ರಾಧೇಯಂ ಅತಿಥಿಗೃಹದಲ್ಲಿ ತಂಗಿದ್ದ ಅವರು ಇಂದು ಬೆಳಗ್ಗೆ ದೇವರ ದರ್ಶನ ಪಡೆದರು. ದೀಪಿಕಾ ಪಡುಕೋಣೆ ಗುರುವಾರ ರಾತ್ರಿ ಅಲಿಪಿರಿಯಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ಬೆಟ್ಟ ಹತ್ತಿ ದೇವಸ್ಥಾನಕ್ಕೆ ತಲುಪಿದ್ದಾರೆ. ಅಲ್ಲಿನ ರಾಧೆ ಶ್ಯಾಮ ಗೆಸ್ಟ್ ಹೌಸ್ ನಲ್ಲಿ ತಂಗಿದ್ದು, ವಿಐಪಿ ಪಾಸ್ ಪಡೆದು, ಇಂದು ಬೆಳಗ್ಗೆ ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ದೀಪಿಕಾ ದೈವ ಭಕ್ತರು ಕೂಡ ಆಗಿರುವುದಿಂದ ಆಗಾಗ ದೇವಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದಿದ್ದಾರೆ.
ಬೆಂಗಳೂರು: ನೆಲಮಂಗಲ ತಾಲೂಕಿನ ಬಾಣವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ. ಶಶಿಕುಮಾರ್(27) ಮೃತ ದುರ್ದೈವಿಯಾಗಿದ್ದಾನೆ. ಶಶಿಕುಮಾರ್ ಬಾಣವಾಡಿ ಗ್ರಾಮ ಪಂಚಾಯತಿ ಕಾರ್ಯಾಲಯದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಇನ್ನು ಘಟನೆಗೆ ಸಂಬಂಧಿಸಿದಂತೆ ಕ್ಯಾಂಟರ್ ಅನ್ನು ಜಪ್ತಿ ಮಾಡಿ, ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಕ್ಕು ಬಾಧ್ಯತೆ ಅಡಿಯಲ್ಲಿ ಅಕ್ಕಿರಾಂಪುರ ಗ್ರಾ.ಪಂ. ಬಿಲ್ ಕಲೆಕ್ಟರ್ ಮತ್ತು ನರೇಗಾ ಕಂಪ್ಯೂಟರ್ ಆಪರೇಟರ್ ನೌಕರರ ಅಮಾನತು
ಕೊರಟಗೆರೆ: ಗ್ರಾಮ ಪಂಚಾಯಿತಿಯೊಂದರ ಕರವಸೂಲಿ ಮಾಡುವ ಬಿಲ್ ಕಲೆಕ್ಟರ್ 1.5ಲಕ್ಷ ಹಣ ದುರುಪಯೋಗ ಹಾಗೂ ನರೇಗಾ (ಎನ್ ಆರ್ ಇ ಜಿ ಎ) ಕಂಪ್ಯೂಟರ್ ಆಪರೇಟರ್ ಕರ್ತವ್ಯ ಲೋಪವೆಸಿಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಮಾನತ್ತುಗೊಳಿಸಿ ಆದೇಶ ಹೊರಡಿಸಿರುವ ಘಟನೆಯೊಂದು ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಡಿಸೆಂಬರ್ 11ರ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಂಜುನಮ್ಮ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪಂಚಾಯತಿಯ ಕಂದಾಯ ವಸೂಲಿಗಾರ ಅಂಜನಪ್ಪ ಹಾಗೂ ನರೇಗಾ ಕಂಪ್ಯೂಟರ್ ಆಪರೇಟರ್ ಮಂಜುನಾಥ್ ಹೆಚ್.ಎಂ ಎಂಬುವರನ್ನು ಕರ್ತವ್ಯ ಲೋಪ ಹಾಗೂ ಹಣ ದುರುಪಯೋಗ ಕಾರಣಗೊಂಡಿ, ಇಬ್ಬರು ನೌಕರರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಕ್ಕಿರಾಂಪುರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಸೂಚನೆ ಸಂಖ್ಯೆ ಏಳರ ಅಡಿಯಲ್ಲಿ ಗ್ರಾಮ ಪಂಚಾಯಿತಿ ಕಂದಾಯ ವಸೂಲಿದಾರ ಅಂಜಿನಪ್ಪ ಎಂಬುವರನ್ನು ಸಾಮಾನ್ಯ ಸಭೆಯಲ್ಲಿ ಲೆಕ್ಕಪತ್ರ ವಿಚಾರಿಸಿದ ಸಂದರ್ಭದಲ್ಲಿ ಸಮರ್ಪಕವಾಗಿ ಉತ್ತರ ಕೊಡದೆ ನುಸುಳಿಕೊಂಡು…
ಬೀದರ್: ಕಳೆದ ಒಂದು ವಾರಗಳಲ್ಲಿ ಬೀದರ್ ಪೊಲೀಸರು ನಡೆಸಿದ ಇಸ್ಟಿಟ್, ಮಟ್ಕಾ, ಜೂಜಾಟ ವಿರುದ್ಧದ ಕಾರ್ಯಾಚರಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ. ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಜಿಲ್ಲೆಯ ಚಿಟಗುಪ್ಪಾ, ಬ.ಕಲ್ಯಾಣ ಗ್ರಾಮೀಣ, ಹುಮನಾಬಾದ, ಮನ್ನಾಏಖೇಳಿ, ಸಂತಪೂರ, ಭಾಲ್ಕಿ ಗ್ರಾಮೀಣ, ಭಾಲ್ಕಿ ನಗರ ಪೊಲೀಸ್ ಠಾಣೆಗಳ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ನಗದು, ಮೊಬೈಲ್ ಸೇರಿ ಒಟ್ಟು 1,74,475 ರೂ. ಜಪ್ತಿ ಮಾಡಿಕೊಂಡಿದ್ದು, ಸಂಬಂಧಪಟ್ಟ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್
ತಿಪಟೂರು: ಗುರುವಾರ ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ 33ನೇ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕ — ಬಾಲಕಿಯರ ಹೊನಲು ಬೆಳಕಿನ ಖೊ-ಖೊ ಚಾಂಪಿಯನ್ ಶಿಪ್- 2023 ರ ಕಾರ್ಯಕ್ರಮದ ಅಂಗವಾಗಿ ಠಾಗೂರ್ ವಿದ್ಯಾಸಂಸ್ಥೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಕಳೆದ ಬುಧವಾರದಿಂದ ಆರಂಭವಾದ ಚಾಂಪಿಯನ್ ಶಿಪ್- 2023ರ ಕಾರ್ಯಕ್ರಮಕ್ಕೆ ನಿನ್ನೆ ಸಂಜೆ ಟಾಗೋರ್ ಶಾಲೆಯ ಮಕ್ಕಳು ಕಲ್ಪತರು ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಜನಪದ ಕಲೆಗಳ ವೈಭವವನ್ನು ಸಾರುವ ಪ್ರದರ್ಶನ ನಡೆದಿದ್ದು, ಯಕ್ಷಗಾನ, ಕೋಲಾಟ, ಕಂಸಾಳೆ, ಭರತನಾಟ್ಯ ಹಾಗೂ ಕೊಡಗು ನೃತ್ಯ ಕಲೆಗಳನ್ನು ಪ್ರದರ್ಶಿಸಿದ್ದಾರೆ. ಈ ನೃತ್ಯ ಕಾರ್ಯಕ್ರಮಕ್ಕೆ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ: ಆನಂದ್ ತಿಪಟೂರು