Author: admin

ಕೊರಟಗೆರೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಥರಟಿ ಗ್ರಾಮದ ಸರ್ವೆ ನಂ.76/4ರಲ್ಲಿರುವ ತಿಮ್ಮಕ್ಕ ಅವರ ಜಮೀನಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭೇಟಿ ನೀಡಿ ಬೆಳೆಗಳ ಸ್ಥಿತಿ–ಗತಿಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರ ಕೃಷಿ ಉಪಕರಣಗಳ ವಿತರಣೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ ಅವರಿಗೆ ಸೂಚನೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ ಮಾತನಾಡಿ, 2025ನೇ ಸಾಲಿನಲ್ಲಿ ಕೊರಟಗೆರೆ ತಾಲೂಕಿನಲ್ಲಿ ಇದುವರೆಗೆ ಒಟ್ಟು 3748 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯಗಳು ನಡೆದಿದ್ದು, ಶೇಂಗಾ, ರಾಗಿ ಹಾಗೂ ಜೋಳ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಗೊಂಡಿವೆ ಎಂದು ಮಾಹಿತಿ ನೀಡಿದರು. ತಾಲೂಕಿನಲ್ಲಿ 3071 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಈವರೆಗೂ 1210 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆ ಮಾಡಲಾಗಿದೆ. ಪ್ರಸ್ತುತ 1861 ಮೆಟ್ರಿಕ್ ಟನ್ ಲಭ್ಯವಿದ್ದು, ರೈತರಿಗೆ ಯಾವುದೇ ರಸಗೊಬ್ಬರದ ಕೊರತೆ ಉಂಟಾಗುವುದಿಲ್ಲ. ತಾಲೂಕಿನಲ್ಲಿರುವ ನಾಲ್ಕು ರೈತ…

Read More

ತಿಪಟೂರು:  ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಮ್ಮೇಳನದಿಂದ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಕ್ಷೇತ್ರಗಳಲ್ಲಿ ಯುವ ಇಂಜಿನಿಯರ್ ಗಳಿಗೆ ಪ್ರಪಂಚದಾದ್ಯಂತ ಅವಕಾಶ ಬಾಗಿಲು ತೆರೆಯುತ್ತಿದೆ, ಸಕಾಲದಲ್ಲಿ ಅಧ್ಯಯನ ನಡೆಯುವ ಮೂಲಕ ಉದ್ಯೋಗಗಳನ್ನು ಕಾತರಿ ಪಡಿಸಿಕೊಳ್ಳಬೇಕೆಂದು ಫಿಲಿಪೈನ್ಸ್ ನ  ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಡಾ.ಲೀನಾ ಕಾ ಲೋ ಸ್ಯಾಂಟ್ರೋಸ್ ತಿಳಿಸಿದರು. ಮೂರನೇ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅಮೆರಿಕ ಇಂಗ್ಲೆಂಡ್ ಹಾಂಗ್ ಕಾಂಗ್ ಚೀನಾ ಮುಂತಾದ ದೇಶಗಳಲ್ಲಿ ಕೌಶಲ್ಯಯುತ ಎಂಜಿನಿಯರಿಗಾಗಿ ಬೇಡಿಕೆ ಹೆಚ್ಚಿದೆ ಇಂಥ ಸಮ್ಮೇಳನದಲ್ಲಿ ನೂತನ ಅನ್ವೇಷಣೆಗಳು ಪ್ರಸ್ತುತಪಡಿಸುವ ಮೂಲಕ ಹೆಚ್ಚಿನ ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂದು ತಿಳಿಸಿದರು. ಬೆಂಗಳೂರು ಇಂಟೆಲ್ ಕಾರ್ಪೊರೇಷನ್ ಮ್ಯಾನೇಜರ್ ಕುಮಾರ್ ಮಾತನಾಡಿ, ಸಾಕಷ್ಟು ಹೊಸ ಅವಕಾಶಗಳು ಪ್ರಾರಂಭವಾಗುತ್ತಿದ್ದು, ನೂತನ ಇಂಜಿನಿಯರ್ ಗಳು ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜಿ.ಪಿ.ದೀಪಕ್ ಕಾರ್ಯದರ್ಶಿಗಳಾದ ಎಂ.ಆರ್. ಸಂಗಮೇಶ್,  ಜೆ.ಎ.ಉಮಾ ಶಂಕರ್ ಬಾಗೇಪಲ್ಲಿ, ನಟರಾಜ್ ಅನೇಕ ಬೋಧಕ ಬೋಧಕೇತರ ಕಾಲೇಜಿನ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ…

Read More

ಬೀದರ್: ಜಿಲ್ಲಾದಾದ್ಯಂತ ಜೂನ್ 1ರಿಂದ ಜುಲೈ 25ರವರೆಗೆ ಸುರಿದ ಮುಂಗಾರು ಮಳೆಯಿಂದ ಒಟ್ಟು 36 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಜಿಲ್ಲೆಯ ಬಸವಕಲ್ಯಾಣ (20), ಭಾಲ್ಕಿ (6), ಚಿಟಗುಪ್ಪ (5), ಔರಾದ್ (4), ಹಾಗೂ ಹುಮನಾಬಾದ್ ತಾಲೂಕಿನಲ್ಲಿ (1) ಮನೆಗಳು ನಿರಂತರವಾಗಿ ಸುರಿದ ಮಳೆಗೆ ಭಾಗಶಃ ಗೋಡೆ ಉರುಳಿದೆ. ಇನ್ನು ಚಿಟಗುಪ್ಪ ಬಸವಕಲ್ಯಾಣ,ಹುಲಸೂರ ಹಾಗೂ ಔರಾದ್ ತಾಲ್ಲೂಕಿನಲ್ಲಿ ಸಿಡಿಲು ಬಡಿದು ಒಟ್ಟು 6 ಜಾನುವಾರು ಸಾವನ್ನಪ್ಪಿರುವುದು ಬಗ್ಗೆ ವರದಿಯಾಗಿದೆ. ಜೂನ್ 1ರಿಂದ ಆರಂಭವಾದ ಮಳೆಯಿಂದಾಗಿ ಜಿಲ್ಲೆಯ ಭಾಲ್ಕಿ ತಾಲ್ಲೂಕಿನಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವುದಾಗಿ ಜಿಲ್ಲಾಡಳಿತ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಕೊರಟಗೆರೆ : ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ. ರಾಜ್ಯದ ಅನೇಕ ಭಾಗಗಳಲ್ಲಿ ಸ್ವಾಮಿಯ ಭಕ್ತರಿದ್ದಾರೆ. ಸಮಿತಿಯು ರಾಜ ಗೋಪುರ ಅಭಿವೃದ್ಧಿಗೆ ತೀರ್ಮಾನಿಸಿದ್ದು, ಭಕ್ತರ ಸಹಕಾರ ಅಗತ್ಯವಾಗಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ.ರಾಮಮೂರ್ತಿ ತಿಳಿಸಿದರು. ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಾಲಯ ರಾಜಗೋಪುರ ನೀಲಿನಕ್ಷೆ ಈಗಾಗಲೇ ಸಿದ್ದವಾಗಿದೆ. 45 ಅಡಿ ಎತ್ತರ, 23 ಅಡಿ ಅಗಲ, ಬಾಗಿಲು ಕಲ್ಲು ಎತ್ತರ 16 ಅಡಿಯನ್ನು ಹೊಂದಿದೆ. ರಾಜಗೋಪುರ ಅಭಿವೃದ್ಧಿಗೆ ಗಾರೆ, ಸುಣ್ಣ, ಚಿನ್ನ, ಇಟ್ಟಿಗೆ, ಕಲ್ಲು, ಸಿಮೆಂಟ್ ಬಳಸಲಿದ್ದು, ಮುಜುರಾಯಿ ಇಲಾಖೆ ಒಳಪಟ್ಟ ದೇವಾಲಯವಾದ್ದರಿಂದ 10 ಲಕ್ಷ ನೀಡುವಂತೆ ಸಮಿತಿಯು ಈಗಾಗಲೇ ಮನವಿ ಮಾಡಿದೆ ಎಂದು ಹೇಳಿದರು. ಗುತ್ತಿಗೆದಾರ ಮಹಾಲಿಂಗಪ್ಪ ಮಾತನಾಡಿ, ಕೊರಟಗೆರೆ ತಾಲ್ಲೂಕು ಪುಣ್ಯಕ್ಷೇತ್ರಗಳ ಬೀಡು. ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ತನ್ನದೇ ಆದ ಇತಿಹಾಸವನ್ನು…

Read More

ಸರಗೂರು: ಶಿವಮೊಗ್ಗ ಪತ್ರಿಕಾ ಭವನದಲ್ಲಿ ಇತ್ತೀಚೆಗೆ ನಡೆದ ಧೀವರು ಮತ್ತು ಜಾತಿ ಗಣತಿ ಕುರಿತು ಒಂದು ಸಮಾಲೋಚನೆ ನಡೆಯಿತು. ಆ ಸಭೆಯಲ್ಲಿ ಹಿರಿಯರಾದ ಮಧು ಗಣಪತಿ ರಾವ್ ಡಾ.ಜಿ.ಡಿ.ನಾರಾಯಣಪ್ಪ ಶಿವಾನಂದ ಕುಗ್ವೆ ಧರ್ಮರಾಜು ಮಂಜಪ್ಪ ಡಿ.ಆರ್.ಮೋಹನ್ ಚಂದ್ರಗುತ್ತಿ ಇನ್ನೂ ಹಲವಾರು ಮುಖಂಡರು ಭಾಗವಹಿಸಿ ಆ ಸಭೆಯಲ್ಲಿ ಜಾತಿ ಗಣತಿಯನ್ನು ಧೀವರು ಎಂದು ನಮೂದಿಸಬೇಕು ಎಂದು ನಿರ್ಣಯ ಮಾಡಿದ್ದಾರೆ ಅದು ಸರಿಯಲ್ಲ.  ಸರ್ಕಾರ ಸೌಲಭ್ಯಗಳನ್ನು ಪಡೆಯಲು ಅನುಕೂಲವ ನಿಟ್ಟಿನಲ್ಲಿ  ನಾವುಗಳು ಧೀವರು ಅನ್ನೋ ಬದಲು ಈಡಿಗ ಎಂದು ಜಾತಿ ಆದಾಯ ಪತ್ರ ನಮೂದಿಸಿ. ಆದ್ದರಿಂದ ಶಿವಮೊಗ್ಗ, ಮಂಗಳೂರು, ಉಡುಪಿ  ಜಿಲ್ಲೆಗಳಲ್ಲಿ ಹೆಚ್ಚಾಗಿರುವುದರಿಂದ ನಮ್ಮ ಸಮಾಜದವರು ಇರುವುದರಿಂದ ಈಡಿಗ ಎಂದು ನಮೂದಿಸಬೇಕು ಎಂದು ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆ ಆರ್ಯ ಈಡಿಗ ಸಮಾಜದ ಸಂಘಟನಾ ಕಾರ್ಯದರ್ಶಿ ಹಾಗೂ ಸರಗೂರು ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎಸ್.ಎನ್.ನಾಗರಾಜು ಒತ್ತಾಯಿಸಿದರು. 12ನೆ ಶತಮಾನದಲ್ಲಿ ಹೆಂಡದ ಮಾರಾಯ ಸೇಂದಿಯನ್ನು ಇಳಿಸಿ ವ್ಯಾಪಾರ ಮಾಡುತ್ತ ಬಂದಿದ್ದರು ಅದಾದ…

Read More

ಕೊರಟಗೆರೆ : ಕೊರಟಗೆರೆ ಪಟ್ಟಣದ ಬೀದಿಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿಗಳು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿದ್ದು, ಸಾರ್ವಜನಿಕರು ಪಟ್ಟಣದ ರಸ್ತೆಯಲ್ಲಿ ಓಡಾಡಲು ಭಯ ಉಂಟು ಮಾಡುವ ವಾತಾವರಣ ನಿರ್ಮಾಣವಾಗಿದೆ. ಕೊರಟಗೆರೆ ಪಟ್ಟಣದಲ್ಲಿ ಮಾಂಸ ಮತ್ತು ಚಿಕನ್ ಮಾರಾಟ ಅಂಗಡಿಗಳ ಬಳಿ ಹಾಗೂ ಮಾರಮ್ಮ ದೇವಾಲಯ, ಕಟ್ಟೆಗಣಪತಿ ದೇವಾಲಯ ರಸ್ತೆ, ದೊಡ್ಡಪೇಟೆ ಸೇರಿದಂತೆ ಪಟ್ಟಣದ ಎಲ್ಲಾ ರಸ್ತೆಗಳಲ್ಲಿ ಬೀಡು ಬಿಟ್ಟಿರುವ ಬೀದಿನಾಯಿಗಳು, ಗುಂಪು–ಗುಂಪುಗಳಾಗಿ ಓಡಾಡುತ್ತಿದ್ದು 10 ರಿಂದ 15 ನಾಯಿಗಳು ಗುಂಪುಗಳಾಗಿ ಓಡಾಡುವುದರಿಂದ ಸಾರ್ವಜನಿಕರಿಗೆ ಭಯದ ವಾತಾವರಣ ಉಂಟಾಗಿದೆ. ರಸ್ತೆಗಳಲ್ಲಿ ಮಾಂಸ ಮತ್ತು ಚಿಕನ್ ಮಾರಾಟ ಅಂಗಡಿಗಳ ಮುಂದೆ ಹಸಿ ಮಾಂಸ ಮತ್ತು ಹೊಟೇಲ್‌ಗಳ ಮುಂದೆ ತ್ಯಾಜ್ಯಗಳನ್ನು ಬಿಸಾಡುವುದರಿಂದ ಅವುಗಳನ್ನು ತಿನ್ನುವ ನಾಯಿಗಳು ಗುಂಪು–ಗುಂಪಾಗಿ ಪಟ್ಟಣದ ರಸ್ತೆಗಳಲ್ಲಿ ಓಡಾಡುತ್ತಿದ್ದು ಹಸಿ ಮಾಂಸ ತಿಂದ ನಾಯಿಗಳು ರಸ್ತೆಯಲ್ಲಿ ಓಡಾಡುವ ಮನಷ್ಯರ ಮೇಲೂ ದಾಳಿ ನಡೆಸುತ್ತಿವೆ, ಮುಂಜಾನೆ ಮತ್ತು ಸಂಜೆ ನಡೆದಾಡುವವರನ್ನು ದ್ವಿಚಕ್ರ ವಾಹನ ಸವಾರರನ್ನು ಶಾಲೆಗೆ ಹೋಗುವ ವಿದ್ಯಾರ್ಥಿಗಳನ್ನು…

Read More

ಸರಗೂರು:  ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕುಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರಗತಿ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್.ಡಿ.ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಯ್ಯನ ಮುದ್ದಯನ ಹುಂಡಿಯಲ್ಲಿ ಕಾಮಗಾರಿಗಳನ್ನು ಪರಿಶೀಲಿಸಿ, ಈಗಾಗಲೇ ಮೀಟರ್ ಅಳವಡಿಸಿ ನಳ್ಳಿ ಸಂಪರ್ಕ ಪೂರ್ಣಗೊಂಡು ನೀರನ್ನು ಪೂರೈಸುತ್ತಿರುವ ಕಡೆ ಜನರಿಗೆ ಮೀಟರ್ ರೀಡಿಂಗ್ ಪ್ರಾರಂಭಿಸಿ ಅರಿವು ಮೂಡಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಅಣ್ಣೂರಿನ ಭುಕ್ತನ ಮಾಳ, ಬೀಚನಹಳ್ಳಿ ಅಂತರಸಂತೆ ಹೊನ್ನೂರು ಕುಪ್ಪೆ ಹಾಗೂ ಅಂತರಸಂತೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗನ್ನು ಪರಿಶೀಲಿಸಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ, ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು. ಬಳಿಕ ಸರಗೂರು ತಾಲ್ಲೂಕಿನ ಬಿದರಹಳ್ಳಿಯ ನಂಜನಾಥಪುರ ಹಾಗೂ ಬಿ.ಮಟಕೆರೆಯ ಕೂಡಗಿ ಹಾಡಿಗೆ ಸಹ ಭೇಟಿ ನೀಡಿ…

Read More

ಚಿಕ್ಕಮಗಳೂರು: ಮಗ ಪಿಕಪ್ ಸಹಿತವಾಗಿ ಭದ್ರಾ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆಯಿಂದ ನೊಂದು ಮಗನ ಮೃತದೇಹ ಸಿಗುವುದಕ್ಕೂ ಮೊದಲೇ ತಾಯಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನ ರವಿಕಲಾ (48) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಭದ್ರಾ ನದಿಗೆ ಬಿದ್ದ ಪರಿಣಾಮ ರವಿಕಲಾ ಪುತ್ರ ಶಮಂತ್ (23) ಸಾವನ್ನಪ್ಪಿದ್ದರು. ಈ ವೇಳೆ ಭದ್ರಾ ನದಿ ಬಳಿ ಬಂದಿದ್ದ ಶಮಂತ್ ತಾಯಿ ಮಗನ ನೆನೆದು ಕಣ್ಣೀರಿಟ್ಟಿದ್ದರು. ಆದರೆ, ಮಗನ ಮೃತದೇಹ ಸಿಗುವ ಮುನ್ನವೇ ರಾತ್ರಿ ವೇಳೆ ಮನೆಯ ಹಿಂದಿನ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೀದರ್: ನಗರದ ಖಾಸಗಿ ಶಾಲೆಯೊಂದರ ನರ್ಸರಿಯಲ್ಲಿ ಓದುತ್ತಿರುವ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುರುವಾರ (ಜು.24) ಪ್ರಕರಣ ದಾಖಲಾಗಿದೆ. ಜು.23ರಂದು ಬಾಲಕಿ ಎಂದಿನಂತೆ ಶಾಲೆಗೆ ಹೋಗಿ ಮನೆಗೆ ಮರಳಿದ್ದಳು. ಮಗಳ ಶಾಲಾ ಉಡುಪು ತಾಯಿ ಬದಲಿಸುತ್ತಿರುವ ವೇಳೆ ರಕ್ತಸ್ರಾವವಾಗಿರುವುದು ತಾಯಿಗೆ ಗೊತ್ತಾಗಿದೆ. ಹೀಗಾಗಿ ವೈದ್ಯರ ಬಳಿ ಹೋಗಿ ಚಿಕಿತ್ಸೆ ಕೊಡಿಸಿದ್ದು, ಬಳಿಕ ಮಹಿಳಾ ಠಾಣೆಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಪೋಷಕರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಕೊರಟಗೆರೆ: ಮಗಳನ್ನು ಚುಡಾಯಿಸಿದ್ದನ್ನ ಪ್ರಶ್ನಿಸಿದ ತಂದೆಗೆ ಆರೋಪಿ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಚಾಕು ಹಾಕಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕೊರಟಗೆರೆ ತಾಲೂಕ್ ಸಿಎನ್ ದುರ್ಗಾ ಹೋಬಳಿ ಬೋರಪ್ಪನಹಳ್ಳಿ ಗ್ರಾಮದಲ್ಲಿ ದುರ್ಘಟನೆ ಜರುಗಿದ್ದು, ಶಾಲಾ ವಿದ್ಯಾರ್ಥಿನಿಯನ್ನ ಅನಾವಶ್ಯಕವಾಗಿ ರೇಗಿಸುತ್ತಿದ್ದ ಯುವಕನನ್ನ ಪ್ರಶ್ನಿಸಿದ ತಂದೆ ಗಿರೀಶ್ ಎಂಬುವರ ಮೇಲೆ ಮೂರು ಜನ ದಾಳಿ ನಡೆಸಿ, ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಮಾರಣಾಂತಿಕ  ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡುವ ಯತ್ನ ಮಾಡಲಾಗಿದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. 9ನೇ ತರಗತಿಯ ವಿದ್ಯಾರ್ಥಿಯನ್ನ ಇದೇ ಗ್ರಾಮದ ಪೃಥ್ವಿರಾಜ್ ಎಂಬ ಯುವಕ ಪದೇ ಪದೇ ಚುಡಾಯಿಸುವುದನ್ನು ಪ್ರಶ್ನಿಸಿದ ತಂದೆ ಗಿರೀಶ್ ನನ್ನ ಆರೋಪಿ ಪೃಥ್ವಿರಾಜ್, ಅಣ್ಣ ತಿಮ್ಮೇಗೌಡ ಹಾಗೂ ತಂದೆ ಹನುಮಂತರಾಯ ಎಂಬುವರು ಏಕಾಏಕಿ ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದು ನಂತರ ಚಾಕುವಿನಿಂದ ಭುಜ ಭಾಗ ಹಾಗೂ ತೊಡೆ ಸೇರಿದಂತೆ ಹಲವು ಕಡೆ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಪಟ್ಟರು…

Read More