Subscribe to Updates
Get the latest creative news from FooBar about art, design and business.
- ಮೂರು ವರ್ಷಗಳ ರಸ್ತೆ ಸಮಸ್ಯೆಗೆ ಅಂತ್ಯ ಹಾಡಿದ ನಮ್ಮತುಮಕೂರು ವರದಿ!: ಕೊಟ್ಟ ಮಾತಿನಂತೆ ನಡೆದ ಅಧಿಕಾರಿಗಳು
- ವೀರೇಂದ್ರ ಹೆಗ್ಗಡೆ ಜನತೆಯ ನೆಮ್ಮದಿಗಾಗಿ ಹಗಲಿರಲು ಶ್ರಮಿಸುತ್ತಿದ್ದಾರೆ: ನರಸಿಂಹಮೂರ್ತಿ
- ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಭಾರತದ ಸಂವಿಧಾನ: ವೈ.ಡಿ.ರಾಜಣ್ಣ
- ರಾಜ್ಯದಲ್ಲಿ ಮುಚ್ಚುತ್ತಿರುವ 40,000 ಹಾಗೂ ತುಮಕೂರು ಜಿಲ್ಲೆಯ 1,802 ಸರ್ಕಾರಿ ಶಾಲೆಗಳ ಪಟ್ಟಿ ಬಿಡುಗಡೆ: ಎಐಡಿಎಸ್ ಓ
- ಸಂವಿಧಾನ ಯಥಾವತ್ತಾಗಿ ಜಾರಿಯಾಗಿದ್ದರೆ, ಭಾರತ ಶ್ರೀಮಂತವಾಗುತ್ತಿತ್ತು: ಎಸ್.ಡಿ.ಸಣ್ಣಸ್ವಾಮಿ
- ನ.27: ಬೆಳ್ಳಾವಿಯಲ್ಲಿ ಶ್ರೀ ಕನಕದಾಸರ ಜಯಂತಿ: ಕನ್ನಡ ರಾಜ್ಯೋತ್ಸವ
- ಗಣಪತಿ ಮಹೋತ್ಸವ, ಕಲ್ಪೋತ್ಸವ: ಸ್ವಚ್ಛತಾ ಸೈನಿಕರಾದ ಪೌರ ಕಾರ್ಮಿಕರ ಕಾರ್ಯಕ್ಕೆ ಮೆಚ್ಚುಗೆ
- ಖಾತೆದಾರರ ಹಣ ಲೂಟಿ: ಅಂಚೆ ಅಧಿಕಾರಿಗಳು, ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ
Author: admin
ಯುವತಿಯನ್ನು ಥಳಿಸಿ ವಿವಸ್ತ್ರಗೊಳಿಸಿ ವಿಕೃತಿ ಮೆರೆದಿರುವ ಘಟನೆ ರಾಜಸ್ಥಾನದ ಪ್ರತಾಪಗಢದಲ್ಲಿ ನಡೆದಿದೆ. ಪತಿಯಿಂದ ದೂರ ಉಳಿದು ಬೇರೊಬ್ಬ ಯುವಕನೊಂದಿಗೆ ವಾಸಿಸಲು ಮಹಿಳೆ ನಿರ್ಧರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಾಗ ಮಹಿಳೆಯ ಪತಿ ಸಂಬಂಧಿಕರು ಜೊತೆಗಿದ್ದರು ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ಆರು ತಂಡಗಳನ್ನು ರಚಿಸಲಾಗಿದ್ದು, ತನಿಖೆ ತೀವ್ರವಾಗಿ ನಡೆಯುತ್ತಿದೆ ಎಂದು ಪ್ರತಾಪಗಢ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಮಹಿಳೆಯರ ಮೇಲಿನ ಅಪರಾಧಗಳಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಟೀಕಿಸಿದರು.
ಕಾವೇರಿ ನದಿ ನೀರು ತಮಿಳುನಾಡಿಗೆ ಹಂಚಿಕೆ ವಿಚಾರವಾಗಿ ಸೆಪ್ಟೆಂಬರ್ 6 ಕ್ಕೆ ವಿಚಾರಣೆ ಇದ್ದು, ಅಲ್ಲಿಯವರೆಗೂ ನೀರು ಹರಿಯುತ್ತದೆ. ಮೊದಲು ನೀರು ಹರಿಸುವುದನ್ನು ನಿಲ್ಲಿಸಿ ಆಮೇಲೆ ವಾದ ಮಾಡಬೇಕು ಎಂದು ಮಾಜಿ ಸಿಎಂ ಬೊಮ್ಮಾಯಿ ಆಗ್ರಹಿಸಿದ್ದಾರೆ. ಸರ್ಕಾರ ತಮಿಳುನಾಡು ಎಷ್ಟು ನೀರು ಬಳಕೆ ಮಾಡಿದೆ ಅಂತ ವಾದ ಮಾಡಲು ತಯಾರಿಲ್ಲಾ. ಸರ್ಕಾರವೇ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕುಡಿಯೋ ನೀರಿನ ವಿಚಾರದಲ್ಲಿ ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಹೇಳಿದರು. ತಮಿಳುನಾಡು ಕಾವೇರಿ ನೀರನ್ನು ಎಷ್ಟು ಬಳಸಿಕೊಂಡಿದೆ ಎಂದು ವಾದ ಮಾಡದೇ ಸರ್ಕಾರ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಸೆಪ್ಟೆಂಬರ್ 6 ರಂದು ಕಾವೇರಿ ನೀರಿನ ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಕಾವೇರಿ ವಿಚಾರದಲ್ಲಿ ಸಿಡಬ್ಲೂಎಂಎ ಆದೇಶದಂತೆ ನೀರು ಬಿಡುತ್ತಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದಿರುವ ಬಗ್ಗೆ ಸಮಗ್ರವಾಗಿ ಯಾಕೆ ವಾದ ಮಾಡುತ್ತಿಲ್ಲವೊ ಗೊತ್ತಿಲ್ಲ ಎಂದರು.
ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಬ್ಯಾಂಕ್ ನಿಂದ 538 ಕೋಟಿ ರೂಪಾಯಿ ವಂಚನೆ ಆರೋಪದಡಿ ಅವರನ್ನು ಬಂಧಿಸಲಾಗಿತ್ತು. ಒಂದು ದಿನದ ವಿಚಾರಣೆಯ ನಂತರ ಇಡಿ ಬಂಧನವಾಗಿದೆ. ನಾಳೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇಡಿ ಪ್ರಕರಣವು ಈ ವರ್ಷದ ಮೇ ಆರಂಭದಲ್ಲಿ ಸಿಬಿಐ ದಾಖಲಿಸಿದ ಎಫ್ ಐಆರ್ ಅನ್ನು ಆಧರಿಸಿದೆ. ಕೆನರಾ ಬ್ಯಾಂಕ್ ಗೆ 538 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಜೆಟ್ ಏರ್ ವೇಸ್, ಗೋಯಲ್, ಅವರ ಪತ್ನಿ ಅನಿತಾ ಮತ್ತು ಕೆಲವು ಮಾಜಿ ಕಂಪನಿ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಿತ್ತು. ಜೆಟ್ ಏರ್ ವೇಸ್ ಗೆ 848.86 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿದ್ದು, ಅದರಲ್ಲಿ 538.62 ಕೋಟಿ ರೂಪಾಯಿ ಬಾಕಿ ಇದೆ ಎಂದು ಆರೋಪಿಸಿ ಬ್ಯಾಂಕ್ ನ ದೂರಿನ ಮೇರೆಗೆ ಎಫ್ ಐಆರ್ ದಾಖಲಿಸಲಾಗಿದೆ. ಎಫ್ ಐಆರ್ ಪ್ರಕಾರ, ಗೋಯಲ್ ಕುಟುಂಬದ ಉದ್ಯೋಗಿಗಳ ವೈಯಕ್ತಿಕ ವೆಚ್ಚಗಳಾದ…
ಭಾರತ ಹಿಂದೂ ರಾಷ್ಟ್ರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಪುನರುಚ್ಚರಿಸಿದ್ದಾರೆ. ಎಲ್ಲಾ ಭಾರತೀಯರು ಹಿಂದೂಗಳು ಮತ್ತು ಹಿಂದೂಗಳು ಎಲ್ಲಾ ಭಾರತೀಯರನ್ನು ಪ್ರತಿನಿಧಿಸುತ್ತಾರೆ ಎಂದು ಮೋಹನ್ ಭಾಗವತ್ ಹೇಳಿದರು. ಆರ್‌ಎಸ್‌ಎಸ್ ಮುಖ್ಯಸ್ಥರು ‘ದೈನಿಕ್ ತರುಣ್ ಭಾರತ್’ ದೈನಿಕವನ್ನು ನಡೆಸುತ್ತಿರುವ ಶ್ರೀ ನರ್ಕೇಸರಿ ಪ್ರಕಾಶನ ಲಿಮಿಟೆಡ್‌ನ ನೂತನ ಕಟ್ಟಡ ‘ಮಧುಕರ್ ಭವನ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದೂಸ್ತಾನ್ ಒಂದು ‘ಹಿಂದೂ ರಾಷ್ಟ್ರ’, ಇದು ಸತ್ಯ. ಸೈದ್ಧಾಂತಿಕವಾಗಿ, ಎಲ್ಲಾ ಭಾರತೀಯರು ಹಿಂದೂಗಳು ಮತ್ತು ಹಿಂದೂಗಳು ಎಂದರೆ ಎಲ್ಲಾ ಭಾರತೀಯರು. ಇಂದು ಭಾರತದಲ್ಲಿರುವ ಪ್ರತಿಯೊಬ್ಬರೂ ಹಿಂದೂ ಸಂಸ್ಕೃತಿ, ಹಿಂದೂ ಪೂರ್ವಜರು ಮತ್ತು ಹಿಂದೂ ಭೂಮಿಗೆ ಸಂಬಂಧಿಸಿದೆ, ಬೇರೇನೂ ಅಲ್ಲ. ಕೆಲವರು ಅದನ್ನು ಅರ್ಥಮಾಡಿಕೊಂಡಿದ್ದಾರೆ, ಕೆಲವರು ತಮ್ಮ ಅಭ್ಯಾಸ ಮತ್ತು ಸ್ವಾರ್ಥದಿಂದ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಕೆಲವರು ಅದನ್ನು ಮರೆತಿದ್ದಾರೆ’ – ಮೋಹನ್ ಭಾಗವತ್ ಹೇಳಿದರು. ನಮ್ಮ ಸಿದ್ಧಾಂತಕ್ಕೆ ಪರ್ಯಾಯವಿಲ್ಲ ಎಂದು ಭಾಗವತ್ ಹೇಳಿದ್ದಾರೆ. ಮಾಧ್ಯಮ ಕಾರ್ಯವು ನ್ಯಾಯೋಚಿತ ಮತ್ತು ಸತ್ಯಾಧಾರಿತವಾಗಿರಬೇಕು ಮತ್ತು ತನ್ನದೇ…
ನಟ ಮತ್ತು ನಿರ್ದೇಶಕ ಆರ್ ಮಾಧವನ್ ಅವರು ಪುಣೆ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಇದನ್ನು ಕೇಂದ್ರ ಮಾಹಿತಿ ಪ್ರಸಾರ ಸಚಿವಾಲಯ ಬಿಡುಗಡೆ ಮಾಡಿದೆ. ಮಾಜಿ ಅಧ್ಯಕ್ಷ ನಿರ್ದೇಶಕ ಶೇಖರ್ ಕಪೂರ್ ಅವರ ಅವಧಿ ಮಾರ್ಚ್ 3,2023 ರಂದು ಕೊನೆಗೊಂಡಿತು. ಆರ್ ಮಾಧವನ್ ಅವರನ್ನು ಫಿಲಂ ಇನ್ ಸ್ಟಿಟ್ಯೂಟ್ ಮುಖ್ಯಸ್ಥರನ್ನಾಗಿ ನೇಮಿಸಿರುವ ಬಗ್ಗೆ ಮಾಹಿತಿ ಪ್ರಸಾರ ಸಚಿವಾಲಯ ಅಧಿಕೃತವಾಗಿ ಮಾಹಿತಿ ನೀಡಿದೆ ಎಂದು ಎಫ್ ಟಿಐಐ ರಿಜಿಸ್ಟ್ರಾರ್ ಸೈಯದ್ ರಬಿಹಾಶ್ಮಿ ತಿಳಿಸಿದ್ದಾರೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಚಲನಚಿತ್ರ ಸಂಸ್ಥೆಯ ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು. ಚಲನಚಿತ್ರ ಜಗತ್ತಿಗೆ ಆರ್ ಮಾಧವನ್ ಅವರ ಕೊಡುಗೆಗಳು ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಆರ್ ಮಾಧವನ್ ಅವರನ್ನು ಫಿಲಂ ಇನ್ ಸ್ಟಿಟ್ಯೂಟ್ ಮುಖ್ಯಸ್ಥರನ್ನಾಗಿ ನೇಮಿಸಿದ್ದಕ್ಕಾಗಿ ಕೇಂದ್ರ ಸಚಿವರಿಗೆ ಧನ್ಯವಾದ ಅರ್ಪಿಸಿದರು. ರಾಕೆಟ್ರಿ: ದಿ ನಂಬಿ ಎಫೆಕ್ಟ್, ಮಾಧವನ್ ನಿರ್ದೇಶಿಸಿ ಮತ್ತು ನಟಿಸಿದ್ದು, ಕಳೆದ ವಾರ ಘೋಷಿಸಲಾದ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ…
ಬೆಂಗಳೂರು: ದಾಖಲೆ ಪರಿಶೀಲನೆ ನಡೆಸದೆ ಅವಧಿಗೂ ಮುನ್ನ ಪಿಂಚಣಿ ಮಂಜೂರು ಮಾಡಿದ ಉಪ ತಹಸೀಲ್ದಾರ್ ಸೇರಿ ಐವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಖಲೆ ಪರಿಶೀಲನೆ ನಡೆಸದೆ ಅವಧಿಗೂ ಮುನ್ನ ಪಿಂಚಣಿ ಮಂಜೂರು ಮಾಡಿದ ಉಪ ತಹಸೀಲ್ದಾರ್ ಸೇರಿ ಐವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು ತಹಸೀಲ್ದಾರ್ ಎಚ್. ಶ್ರೀನಿವಾಸ್, ಈ ಕುರಿತು ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಬೆಂಗಳೂರು ದಕ್ಷಿಣ ತಾಲ್ಲೂಕು ಉಪತಹಸೀಲ್ದಾರ್ ಅಂಜನ್‌ಕುಮಾರ್, ರಾಜಸ್ವ ನಿರೀಕ್ಷಕ ಮಂಜುನಾಥ ರೆಡ್ಡಿ ಮತ್ತು ಮಾಶಾಸನಕ್ಕೆ ನಕಲಿ ದಾಖಲೆ ಸಲ್ಲಿಸಿದ್ದ ನಾಗಮಣಿ, ಜಯರಾಮ್ ಮತ್ತು ಮಹದೇವ ಎಂಬುವರ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 60 ವರ್ಷ ಮೇಲ್ಪಟ್ಟವರು ಮಾಶಾಸನ/ಪಿಂಚಣಿಗೆ ಅರ್ಜಿ ಸಲ್ಲಿಸಲು ಅರ್ಹ ಆಗಿರುತ್ತಾರೆ. ಆದರೆ, ನಾಗಮಣಿ, ಜಯರಾಮ್ ಮತ್ತು ಮಹದೇವ ಎಂಬುವರು, ಅರ್ಹತೆ ಇಲ್ಲದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಅರ್ಜಿ ಸಲ್ಲಿಸಿದ್ದರು. ಮಾಶಾಸನದ ಅರ್ಜಿ ಮತ್ತು…
ಬೆಂಗಳೂರು: ‘ಒಂದೇ ಸೂರಿನಡಿ 27 ಕಲಾವಿದರನ್ನು ಭೇಟಿ ಮಾಡಿ, ಅವರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ನಗರದ ಜನರಿಗೆ ‘ಆರ್ಟ್ ಪಾರ್ಕ್ ಬೆಂಗಳೂರು’ ಕಲ್ಪಿಸಿದ್ದು, ಸೆ. 3ರಂದು ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಜೆ. ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದ ಬಳಿಯಿರುವ ಶಿಲ್ಪ ಉದ್ಯಾನದಲ್ಲಿ ‘ಮೀಟ್ ದಿ ಆರ್ಟಿಸ್ಟ್’ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದು ಕಲಾವಿದ ಎಸ್. ಜಿ. ವಾಸುದೇವ್ ಅವರ ಪರಿಕ್ಷನೆಯಾಗಿದ್ದು, ಪ್ರತಿ ತಿಂಗಳು ನಡೆಯಲಿದೆ. 2014ರಲ್ಲಿ ಮೊದಲ ಬಾರಿ ಈ ಕಾರ್ಯಕ್ರಮ ನಡೆಸಲಾಗಿತ್ತು.
ಬೆಂಗಳೂರು: ಪೊಲೀಸ್ ಕಮಿಷನರೇಟ್ ನ ಶ್ವಾನದಳದಲ್ಲಿದ್ದ ‘ಕಾವ್ಯಾ’ ಹೆಸರಿನ ಶ್ವಾನ, ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಕಾವ್ಯಾ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಸಿಬ್ಬಂದಿ, ಅಂತ್ಯಕ್ರಿಯೆ ನೆರವೇರಿಸಿದರು. ‘2014ರಲ್ಲಿ ಜನಿಸಿದ್ದ ಶ್ವಾನ, ಅದೇ ವರ್ಷ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತ್ತು. ಅಂದಿನಿಂದ ಹತ್ತು ವರ್ಷಗಳವರೆಗೆ ಶ್ವಾನದಳದಲ್ಲಿತ್ತು. ಹುಸಿ ಬಾಂಬ್ ಬೆದರಿಕೆ ಕರೆ ಹಾಗೂ ಗಣ್ಯ ವ್ಯಕ್ತಿಗಳ ಭದ್ರತೆ ಕೆಲಸದಲ್ಲಿ ಶ್ವಾನ ಚುರುಕಾಗಿತ್ತು’ ಎಂದು ಸಿಬ್ಬಂದಿ ಹೇಳಿದರು.
ಮದ್ಯದ ಅಮಲಿನಲ್ಲಿ ಪಿಸ್ತೂಲ್ ನಿಂದ ಗುಂಡು ಹಾರಿಸಿ ಭಯವನ್ನುಂಟು ಮಾಡಿದ್ದ ಆರೋಪದಡಿ ಮಾಜಿ ಸೈನಿಕ ಪ್ರಶಾಂತ್ (39) ಅವರನ್ನು ಬಂಧಿಸಿದ್ದ ತಿಲಕ್ ನಗರ ಠಾಣೆ ಪೊಲೀಸರು, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 26ರಂದು ತಡರಾತ್ರಿ ನಡೆದಿದ್ದ ಘಟನೆ ಸಂಬಂಧ ಪಿ. ಪಿ. ಅನಿಲ್ ಕುಮಾರ್ ಅವರು ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಯನ್ನು ಸೆರೆ ಹಿಡಿಯಲಾಗಿತ್ತು. ಇದೀಗ, ಅವರನ್ನು ಬಿಡುಗಡೆ ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಬೆಂಗಳೂರು: ಗಣೇಶ ಮೂರ್ತಿ ವಿಸರ್ಜನೆ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಸಭೆ ನಡೆಯಿತು. ಬಿಬಿಎಂಪಿ, ಪೊಲೀಸ್, ಬೆಸ್ಕಾಂ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ಲೆಕ್ಸ್ ಬ್ಯಾನರ್ ಮತ್ತು ಪ್ಲಾಸ್ಟಿಕ್ ಬಳಕೆ ಮಾಡಬಾರದು. ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಮತ್ತಿತರ ಕಡೆಗಳಲ್ಲಿ ನಿಮಜ್ಜನಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ