Subscribe to Updates
Get the latest creative news from FooBar about art, design and business.
- ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್: ಕಂದೇಗಾಲ ಶಿವರಾಜು
- ಕುವೆಂಪು ಅವರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು: ಎಂ.ಎಂ.ನಟರಾಜು ಅಭಿಪ್ರಾಯ
- ಅಭಿವೃದ್ಧಿ ಕಾಮಗಾರಿಗಳಿಗೆ ವೇಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಗತಿ ಪರಿಶೀಲನೆ
- ಏನೂ ಮಾಡದ ಸ್ಪಂದನಾ ಸೇಫ್ ಆಗುತ್ತಿರುವುದು ಹೇಗೆ? | ಮಾಳು ನಿಪನಾಳ್ ಅಸಮಾಧಾನ
- ಮನೆಯವರಿಗೆ, ಸ್ನೇಹಿತರಿಗೆ ಗೊತ್ತಾಗದಂತೆ ಮಾಸ್ಕ್ ಧರಿಸಿ 14 ಕೋಟಿ ಲಾಟರಿ ಬಹುಮಾನ ಪಡೆದ ಯುವಕ: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ…!
- ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಗೆಲುವು ಕಟ್ಟಟ್ಟ ಬುತ್ತಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
- ವಾಜಪೇಯಿ ಅವರ 101ನೇ ಜಯಂತಿ: ವಾಜಪೇಯಿ ನಡೆದು ಬಂದ ಹಾದಿ ಸದಾ ಪ್ರೇರಣೆ: ವಿಹೆಚ್ ಪಿ ಜಿಲ್ಲಾಧ್ಯಕ್ಷರಾದ ಪ್ರದೀಪ್
- “ಧಂ ಹೋಡಿಯೋದ್ ಕಮ್ಮಿ ಮಾಡ್ಬೇಕಲೈ…!” | ಒಂದು ಸಿಗರೇಟ್ ಬೆಲೆ ಎಷ್ಟು ಏರಲಿದೆ? 72 ರೂ. ಆಗೋದು ಸತ್ಯನಾ?
Author: admin
ಸರಗೂರು: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ದೇವನಹಳ್ಳಿ ಚನ್ನರಾಯಪಟ್ಟಣ ಭೂ ಹೋರಾಟ ಸಮಿತಿಯಿಂದ ರೈತ ಹುತಾತ್ಮ ದಿನ ಆಚರಿಸಲಾಯಿತು. ಈ ವೇಳೆ ಸರಳವಾಗಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು . ನಂತರ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಚನ್ನನಾಯಕ, ಶಿಕ್ಷಣ ಚನ್ನರಾಯಪಟ್ಟಣದ 1777 ಎಕರೆ ಭೂಸ್ವಾಧೀನವನ್ನು ಕೈಬಿಟ್ಟಿದ್ದು ಇದನ್ನು ಕೂಡಲೇ ಗೆಜೆಟ್ ಮಾತಿನಂತೆ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಮುಂಬರುವ ಅಧಿವೇಶನದಲ್ಲಿ ವಾಪಸ್ಸು ಪಡೆಯಬೇಕು ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ರೈತಪರ ಗಟ್ಟಿಗೊಳಿಸಬೇಕು ಎಂದು ತಿಳಿಸಿದರು. ರೈತ ಸಂಘದ ಯುವ ಘಟಕದ ಅಧ್ಯಕ್ಷ ನವೀನ್ ಹಳೆಹೆಗ್ಗುಡಿಲು ಮಾತನಾಡಿ, ಕೇಂದ್ರ ನ್ಯಾಷನಲ್ ಕೃಷಿ ಮಾರುಕಟ್ಟೆ, ಪ್ರೇಮ್ ವರ್ಕ್ ನೀತಿಯನ್ನು ತಿರಸ್ಕರಿಸ ಬೇಕು ಹಾಗೇನೆ ವಿದ್ಯುತ್ ಖಾಸಗೀಕರಣವನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಕಾರ್ಮಿಕತಿದ್ದುಪಡಿ ಕೋಡ್ ಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು. ರಸ ಗೊಬ್ಬರದ ಕೊರತೆಯನ್ನು ಸರಿಪಡಿಸಬೇಕು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಬೇಕು.…
ಸರಗೂರು: ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ 84 ನೇ ವರ್ಷದ ಹುಟ್ಟು ಹಬ್ಬವನ್ನು, ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ನೀಡುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಹಾಗೂ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು, ವೈಯಕ್ತಿಕ ಜೀವನ ಮತ್ತು ರಾಜಕೀಯ ಬದುಕಿನಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್ ನಲ್ಲೇ ಅತ್ಯಂತ ಹಿರಿಯರು ಎನಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ಜುಲೈ 21 ಸೋಮವಾರ 83 ವಸಂತಗಳನ್ನು ಪೂರೈಸಿ 84 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ರಾಜಕೀಯ ಬದುಕಿನಲ್ಲಿ 50 ವರ್ಷಗಳ ಸುದೀರ್ಘ ಹಾದಿ ಕ್ರಮಿಸಿ, ಐದು ದಶಕಗಳ ಸಾರ್ವಜನಿಕ ಬದುಕು ಪೂರೈಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ ಎಂದರು. ಪಪಂ ಸದಸ್ಯ ಹಾಗೂ ನಾಯಕ ಸಮಾಜದ ತಾಲ್ಲೂಕು ಉಪಾಧ್ಯಕ್ಷ ಶ್ರೀನಿವಾಸ ಮಾತನಾಡಿ, 5 ದಶಕಗಳ ಪಕ್ಷ ನಿಷ್ಠೆಯ…
ಕೊರಟಗೆರೆ : ಗೊಬ್ಬರ ತುಂಬಿದ್ದ ಲಾರಿ ಬ್ರೇಕ್ ಫೇಲ್ಯೂರ್ ಆಗಿ ಬೇಕರಿಗೆ ನುಗ್ಗಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಕೋಳಾಲ ಗ್ರಾಮದಲ್ಲಿ ಮಂಗಳವಾರ ಬೆ.12 ಗಂಟೆ ಸುಮಾರಿಗೆ ಕೋಳಾಲ ಪೋಲಿಸ್ ಠಾಣೆ ರಸ್ತೆ ಕಡೆಯಿಂದ ಬಂದ ಗೊಬ್ಬರದ ಲಾರಿ ಬ್ರೇಕ್ ಫೇಲ್ಯೂರ್ ನಿಂದ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬೈರವೇಶ್ವರ ಬೇಕರಿಗೆ ನುಗ್ಗಿದ್ದು, ಈ ದುರಂತದಲ್ಲಿ ಬೇಕರಿ ಮುಂದೆಯಿದ್ದ ರಂಗಶಾಮಯ್ಯ(70), ಬೈಲಪ್ಪ(65), ಜಯಣ್ಣ(55) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಾಜಿ ತಾ.ಪಂ. ಸದಸ್ಯೆ ಸಿದ್ದಗಂಗಮ್ಮ ಪ್ರಜ್ಞಾಹೀನಗೊಂಡಿದ್ದು, ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂಬುದು ತಿಳಿದು ಬಂದಿದೆ. ಬೇಕರಿ ಮಾಲೀಕನು ಈ ದುರಂತದಿಂದ ಪಾರಾಗಿದ್ದು. ಹಿಂದೆಯೂ ಕೂಡ ಇದೇ ರೀತಿ ನಡೆದ ಉದಾಹರಣೆ ಇದೆ. ರೋಡ್ ಹಂಪ್ ಇಲ್ಲದ ಕಾರಣ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಸ್ಥಳೀಯ ಸಾರ್ವಜನಿಕರು ಸಂಭಂದಪಟ್ಟ ಅಧಿಕಾರಿಗಳ ವಿರುದ್ದ…
ಸರಗೂರು: ಕಾಡುಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ನೀಡಬೇಕು, ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಲಂಕೆ ಗ್ರಾಮಸ್ಥರು, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸೋಮವಾರ ಪಟ್ಟಣದ ಸರಗೂರು ವಲಯ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಕಾರರು, ರೈತರ ಜಮೀನುಗಳು ಕಾಡಂಚಿನ ಭಾಗಗಳಲ್ಲಿದ್ದು, ಈ ಭಾಗದಲ್ಲಿ ಬೆಳೆಯುವ ಹತ್ತಿ, ಜೋಳ, ಬಾಳೆ, ಕಬ್ಬು, ರಾಗಿ, ಭತ್ತ, ತೊಗರಿ, ತೋಟಗಾರಿಕ ಬೆಳೆಗಳು, ತರಕಾರಿ ಬೆಳೆಗಳಿಗೆ ಕಾಡುಪ್ರಾಣಿಗಳು ಹಾನಿ ಮಾಡುತ್ತಿವೆ. ಚಿಕ್ಕದೇವಮ್ಮನ ಬೆಟ್ಟದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಾವಳಿ ತಡೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವ್ಯಕ್ತಪಡಿಸಿದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದರು. ಮನುಗನಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಂಕೆ ರಮೇಶ್ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾವಲು ಕಾಯಬೇಕು. ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕು.…
ಯುವ ರಾಜ್ ಕುಮಾರ್ ನಟನೆಯ ‘ಎಕ್ಕ’ ಚಿತ್ರ ಕಳೆದ ವಾರ ತೆರೆಗಪ್ಪಳಿಸಿದೆ. ಈ ಚಿತ್ರ ಈ ಸಾಲಿನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪಿಆರ್ ಕೆ ಪ್ರೊಡಕ್ಷನ್ಸ್ ನ ಅಶ್ವಿನಿ ಪುನೀತ್ ರಾಜ್ ಕುಮಾರ್, ಜಯಣ್ಣ ಫಿಲ್ಮ್ಸ್ನ ಜಯಣ್ಣ ಮತ್ತು ಭೋಗೇಂದ್ರ ಹಾಗೂ ಕೆಆರ್ ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರ ಕಳೆದ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ 6.12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶುಕ್ರವಾರ 1.45 ಕೋಟಿ ರೂ., ಶನಿವಾರ 1.35 ಕೋಟಿ ರೂ., ಭಾನುವಾರ 1.65 ಕೋಟಿ ರೂ., ಸೋಮವಾರ 0.78 ರೂಪಾಯಿ ಒಟ್ಟು 5.23 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಒಳ್ಳೆಯ ಚಿತ್ರಗಳನ್ನು ಮಾಡಿದರೆ ಜನ ಖಂಡಿತವಾಗಿಯೂ ಸಿನಿಮಾ ಮಂದಿರಕ್ಕೆ ಬರುತ್ತಾರೆ ಎನ್ನುವುದು ಸಾಬೀತಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಮಾದೇವ ಚಿತ್ರ ಕೂಡ ದೊಡ್ಡ ಯಶಸ್ಸನ್ನು ಪಡೆದಿದೆ. ಸಿನಿಮಾ…
ಮಂಡ್ಯ: ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ಮೂಲದ ಭರತ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಓದಿನ ಬಗ್ಗೆ ನಿರಾಸಕ್ತಿ ಹೊಂದಿದ್ದ ಭರತ್ ಮೊದಲ ವರ್ಷದ ಪರೀಕ್ಷೆಗಳಿಗೆ ಗೈರಾಗಿದ್ದ. ಅಲ್ಲದೇ ಕಾಲೇಜಿಗೂ ಸಹ ಭರತ್ ಸರಿಯಾಗಿ ಹೋಗುತ್ತಿರಲಿಲ್ಲ. ಫುಟ್ಬಾಲ್ ಆಟದಲ್ಲಿ ಭರತ್ ಹೆಚ್ಚಿನ ಆಸಕ್ತಿ ಹೊಂದಿದ್ದ. ಮೊದಲ ವರ್ಷ ಗೈರು ಆಗಿದ್ದ ಪರೀಕ್ಷೆಗಳನ್ನು ಈ ಬಾರಿ ಪಾಸ್ ಮಾಡಿಕೊಳ್ಳಬೇಕೆಂದು ಪರೀಕ್ಷಾ ಶುಲ್ಕವನ್ನು ಕಟ್ಟಲು ಭರತ್ ಮುಂದಾಗಿದ್ದ ಎನ್ನಲಾಗಿದೆ. ಭಾನುವಾರ ರಾತ್ರಿ 12 ಗಂಟೆವರೆಗೆ ಹಾಸ್ಟೆಲ್ ನ ವಿದ್ಯಾರ್ಥಿಗಳೊಂದಿಗೆ ಭರತ್ ಮಾತನಾಡಿದ್ದಾನೆ. ಬಳಿಕ ತನ್ನ ಕೊಠಡಿಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಮಂಡ್ಯ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ಕೊರಟಗೆರೆ : ಪಾವಗಡದಿಂದ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವರ ಕ್ಷೇತ್ರ ಕೊರಟಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸನ್ಮಾನಿಸಿದರು. ಪಾವಗಡ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳು ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಿಗ್ಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಳೆ ಹಾಗೂ ಮೋಡಕವಿದ ವಾತಾವರಣ ಇರುವ ಕಾರಣ ರಸ್ತೆ ಮೂಲಕ ಸಂಚಾರ ಮಾಡಿದರು. ಗೃಹಸಚಿವ ಕ್ಷೇತ್ರವಾದ ಕೊರಟಗೆರೆ ಬೈಪಾಸ್ ಬಳಿ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸನ್ಮಾನಿಸಿ ಗೌರವಿಸಿದರು. ಇದೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಶ್ವಥ್ ನಾರಾಯಣ್, ಅರಕೆರೆ ಶಂಕರ್, ವಾಲೆಚಂದ್ರಯ್ಯ, ಮಾಜಿ ಜಿಪಂ ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ, ಜಯಮ್ಮ, ಬೈರೇಶ್, ಕಾರ್ ಮಹೇಶ್, ಟಿ.ಸಿ.ರಾಮಯ್ಯ, ಮೈಲಾರಪ್ಪ, ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು. ವರದಿ: ಮಂಜುಸ್ವಾಮಿ ಎಂ.ಎನ್. ನಮ್ಮತುಮಕೂರಿನ ಕ್ಷಣ ಕ್ಷಣದ…
ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಬಣ ರಾಜಕೀಯ ತಾರಕಕ್ಕೇರುತ್ತಿದೆ. ಎರಡು ಬಣಗಳು ದೆಹಲಿಯಲ್ಲಿ ತಂತ್ರ, ಪ್ರತಿ ತಂತ್ರ ಹೆಣೆಯುತ್ತಿದೆ. ಒಂದೆಡೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೆಂಬಲಿಗರು ದೆಹಲಿಗೆ ತೆರಳಿ ವಿರೋಧಿ ಬಣದ ವಿರುದ್ಧ ದೂರು ನೀಡಿದೆ. ಇನ್ನೊಂದೆಡೆ ವಿಜಯೇಂದ್ರ ವಿರೋಧಿ ಬಣ ದೆಹಲಿ ಯಾತ್ರೆಗೆ ಸಜ್ಜಾಗಿದೆ. ಕಳೆದ ವಾರ ದೆಹಲಿಗೆ ತೆರಳಿದ್ದ ಎಂಪಿ ರೇಣುಕಾಚಾರ್ಯ ತಂಡ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್ ಅವರನ್ನು ಭೇಟಿಯಾಗಿ, ದಾವಣಗೆರೆಯಲ್ಲಿ ಪ್ರತ್ಯೇಕ ಸಮಾವೇಶ ನಡೆಸಿದ ಬಗ್ಗೆ ದೂರು ಸಲ್ಲಿಸಿತ್ತು. ಇದೀಗ ವಿಜಯೇಂದ್ರ ವಿರುದ್ಧದ ಬಣ ಮುಂದಿನ ವಾರ ದೆಹಲಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದೆ. ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಭಿನ್ನರ ತಂಡದ ಸದಸ್ಯರು ಈ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ. ಇವರ ಜೊತೆಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಬಿ.ಪಿ. ಹರೀಶ್ ಕೂಡ ತೆರಳಲಿದ್ದಾರೆ ಎಂದು ವರದಿ ತಿಳಿಸಿದೆ. ವಿಜಯೇಂದ್ರ ವಿರೋಧಿ ಬಣ ಬಿಜೆಪಿ ರಾಜ್ಯಾಧ್ಯಕ್ಷ…
ವಿಜಯಪುರ: 2 ತಿಂಗಳಲ್ಲಿ ಮತ್ತೆ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟನೆ ಆಗಿರೋದು ನಾನು. ಹಾಗೇ ನೋಡಿದ್ರೆ 18 ವರ್ಷ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು. ಆದ್ರೆ ನೋಡಿ 2 ತಿಂಗಳಲ್ಲಿ ಮತ್ತೆ ಮರಳಿ ನನ್ನನ್ನ ಸೇರಿಸಿಕೊಳ್ತಾರೆ ಎಂದರು. ನಮ್ಮ ಶಕ್ತಿ ಇದ್ದರೆ ಎಲ್ಲರೂ ಕರೆಯುತ್ತಾರೆ. ಇಲ್ಲ ಅಂದ್ರೆ ಅಪ್ಪಾಜಿ ಎನ್ನುತ್ತ ಯಡ್ಡಿಯೂರಪ್ಪ, ವಿಜಯೇಂದ್ರ ಕೈ, ಕಾಲು ಹಿಡಿಯಬೇಕಾಗುತ್ತೆ ಎಂದು ವಾಗ್ದಾಳಿ ನಡೆಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೆಂಗಳೂರು: ಮ್ಯಾನ್ ಹೋಲ್ ಗೆ ಇಳಿದು ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರಿನ RMC ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಆಶ್ರಯನಗರದ ನಿವಾಸಿ ಪುಟ್ಟಸ್ವಾಮಿ ಮೃತ ದುರ್ವೈವಿ. ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಆಂಥೋನಿ ಹಾಗೂ ಪುಟ್ಟಸ್ವಾಮಿ ಒಳಚರಂಡಿಗೆ ಇಳಿದಿದ್ದರು. ಸುಮಾರು ಅರ್ಧ ಗಂಟೆ ಒಳಗಡೆ ಕೆಲಸ ಮಾಡಿದ್ದಾರೆ. ಬಳಿಕ ಉಸಿರುಗಟ್ಟಿದಂತಾಗಿದೆ ಮೇಲೆ ಅಂಥೋನಿ ಹಾಗೂ ಪುಟ್ಟಸ್ವಾಮಿ ಆಚೆ ಬಂದಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಾಗದೆ ಪುಟ್ಟಸ್ವಾಮಿ ಮನೆಗೆ ತೆರಳಿದ್ದ ವೇಳೆ ಸಾವನ್ನಪ್ಪಿದ್ದಾನೆ. ಇನ್ನು ಅಸ್ವಸ್ಥಗೊಂಡಿದ್ದ ಆಂಥೋನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಣದ ಆಸೆ ತೋರಿಸಿ ಒಳಚರಂಡಿಗೆ ಇಳಿಸಿರುವ ಶಂಕೆ ವ್ಯಕ್ತವಾಗಿದ್ದು, ಯಾರು ಇಳಿಸಿದ್ದು ಸೇರಿದಂತೆ ಈ ಬಗ್ಗೆ ಇನ್ನಿತರ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC