Subscribe to Updates
Get the latest creative news from FooBar about art, design and business.
- ಖಾತೆದಾರರ ಹಣ ಲೂಟಿ: ಅಂಚೆ ಅಧಿಕಾರಿಗಳು, ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ
- ಸಾರ್ವಜನಿಕರಿಗೆ ತಲೆನೋವಾಗಿದ್ದ ಹುಲಿ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಜನ
- ಕೊರಟಗೆರೆ | ಡಿ.1, 2ಕ್ಕೆ ಶ್ರೀ ಹನುಮ ಜಯಂತಿ ಆಚರಣೆ
- ಸ್ಕೌಟ್ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಶಾ ಪ್ರಸನ್ನ ಕುಮಾರ್ ಆಯ್ಕೆ
- ಕರ್ನಾಟಕ ರಣಧೀರರ ವೇದಿಕೆ: ಅದ್ಧೂರಿ ಕನ್ನಡ ರಾಜ್ಯೋತ್ಸವ, ತಾಯಿ ಭುವನೇಶ್ವರಿ ಹಬ್ಬ
- ಸಹಾಯಧನ ಸೌಲಭ್ಯಕ್ಕಾಗಿ ಮೀನುಗಾರರಿಂದ ಅರ್ಜಿ ಆಹ್ವಾನ
- ಕೊಳೆಗೇರಿಗಳು ನವನಗರ ಆಗಬೇಕು: ಪ್ರಾಧ್ಯಾಪಕ ಪ್ರೊ.ಪ್ರಕಾಶ್ ಎಂ. ಶೇಟ್
- ನವೆಂಬರ್ 30ರಂದು ಕನ್ನಡ ರಾಜ್ಯೋತ್ಸವ ಆಚರಣೆ: ಆಟೋ ಚಾಲಕರಿಗೆ ಅಪಘಾತ ವಿಮಾ ಸೌಲಭ್ಯ
Author: admin
ವರಮಹಾಲಕ್ಷ್ಮಿ ಹಬ್ಬಕ್ಕೆಂದು ತಾವರೆ ಹೂ ಕೀಳಲು ಹೋಗಿದ್ದ ತಂದೆ ಮಗ ದುರಂತವಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿಯ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿಗಳಾದ ಪುಟ್ಟರಾಜು(42), ಮಗ ಕೇಶವ(14) ಮೃತಪಟ್ಟವರು. ವರಮಹಾಲಕ್ಷ್ಮಿ ಹಬ್ವಕ್ಕೆಂದು ತಾವರೆ ಹೂ ತಂದು ಮಾರಾಟ ಮಾಡಲು ತಂದೆ ಮಗ ಪ್ಲಾನ್ ಮಾಡಿದ್ದರು. ಹೀಗಾಗಿ ಹೂ ತರಲು ಭೂಚನಹಳ್ಳಿ ಕೆರೆಗೆ ಇಳಿದಿದ್ದಾರೆ. ಮೊದಲು ಹೂ ಕೀಳಲು ಪುತ್ರ ಕೇಶವ ಕೆರೆಗೆ ಇಳಿದಿದ್ದಾನೆ. ಆದರೆ, ಏಕಾಏಕಿ ಕೇಶವ್ ನೀರಿನಲ್ಲಿ ಮುಳುಗಿದ್ದು, ಕೂಡಲೇ ತಂದೆ ಪುಟ್ಟರಾಜು ಸಹ ಪುತ್ರನನ್ನು ರಕ್ಷಿಸಲು ನೀರಿಗಿಳಿದಿದ್ದಾರೆ.ಆದರೆ, ದುರದೃಷ್ಟವಶಾತ್ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಗಿದೆ.
ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳದ ಕುರಿತು ಪತ್ರಿಕಾಗೋಷ್ಟಿಯು ತುಮಕೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಎಐಡಿಎಸ್ ಓ ರಾಜ್ಯ ಅಧ್ಯಕ್ಷರಾದ ಅಶ್ವಿನಿ ಕೆ.ಎಸ್ ಮಾತನಾಡಿದರು. “ಶಿಕ್ಷಣವೆಂದರೆ ಅಗಾಧ ಪ್ರಮಾಣದ ಮಾಹಿತಿಯನ್ನು ಮೆದುಳೊಳಗೆ ತುಂಬಿಕೊಂಡು, ಜೀವನವಿಡೀ ಜೀರ್ಣವೇ ಆಗದಂತೆ ಅಲ್ಲಿಯೇ ಕೊಳೆಸುವಂತಹದ್ದಲ್ಲ. ನಮಗೆ ಜೀವನವನ್ನು ಕಟ್ಟಿಕೊಳ್ಳುವ, ಮನುಷ್ಯರನ್ನಾಗಿಸುವ ಮೌಲ್ಯಗಳನ್ನು ಬೆಳೆಸುವ – ಈ ಎಲ್ಲ ವಿಚಾರಗಳನ್ನು ಸಮೀಕರಿಸುವಂತಹ ಶಿಕ್ಷಣ ಬೇಕು. ಶಿಕ್ಷವು ಕೇವಲ ಮಾಹಿತಿ ಎಂದಾಗಿಬಿಟ್ಟರೆ, ಗಂಥಾಲಯಗಳೇ ಪ್ರಪಂಚದ ಮಹಾನ್ ಸಂತರುಗಳಾಗಿ ಮತ್ತು ವಿಶ್ವಕೋಶವೇ ಋಷಿಗಳಾಗಿರುತ್ತಿದ್ದವು.”ಶಿಕ್ಷಣದ ಗುರಿ ಮತ್ತು ಮಹತ್ವದ ಕುರಿತು ವಿವೇಕಾನಂದರು ಈ ರೀತಿ ಹೇಳುತ್ತಾರೆ. ಅಂತೆಯೇ, ನಮ್ಮ ದೇಶದ ನವೋದಯ ಚಿಂತಕರಾದ ಈಶ್ವರಚಂದ್ರ ವಿದ್ಯಾಸಾಗರ್, ರಾಜಾರಾಮ್ ಮೋಹನ್ ರಾಯ್, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ ಇವರು ವೈಜ್ಞಾನಿಕ, ಪ್ರಜಾತಾಂತ್ರಿಕ ಹಾಗೂ ಧರ್ಮನಿರಪೇಕ್ಷ ಶಿಕ್ಷಣ ನಮ್ಮದಾಗಬೇಕು ಎಂಬ ಮಹತ್ತರ ಆಶಯಗಳನ್ನು ಹೊಂದಿದ್ದರು. ಅಪ್ರತಿಮ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಈ ಮೇಲಿನ ಆಶಯಗಳನ್ನು ಎತ್ತಿ…
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಬೆಂಗಳೂರಿನ ಕೆ.ಆರ್.ಪುರ ತಾಲೂಕು ಕಚೇರಿ ಸರ್ವೆ ಸೂಪರ್ ವೈಸರ್ ರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಕೆ.ಆರ್.ಪುರ ತಾಲೂಕು ಕಚೇರಿ ಸರ್ವೆ ಸೂಪರ್ ವೈಸರ್ ಕೆ.ಟಿ.ಶ್ರೀನಿವಾಸಮೂರ್ತಿ ಅವರನ್ನು ಲೋಕಾಯುಕ್ತ ಬಂಧಿಸಿದೆ. ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಶ್ರೀನಿವಾಸಮೂರ್ತಿ ಅವರ ನಿವಾಸ, ಕಚೇರಿ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸಮೂರ್ತಿ ಅವರನ್ನು ಲೋಕಾಯುಕ್ತ ಬಂಧಿಸಿ ವಿಚಾರಣೆಗೊಳಪಡಿಸಿದೆ. ಬೆಂಗಳೂರಿನ ಕಲ್ಕೆರೆ ನಿವಾಸದ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ ಶ್ರೀನಿವಾಸ್ ಸೋದರಿ ಹಾಗೂ ಸೋದರನ ಮನೆ ಸೇರಿದಂತೆ 14 ಕಡೆ ದಾಳಿ ಮಾಡಿದ್ದರು. ರಿಯಲ್ ಎಸ್ಟೇಟ್ ನಲ್ಲೂ ಹೂಡಿಕೆ ಮಾಡಿರುವ ಬಗ್ಗೆ ದಾಖಲೆ ಲಭ್ಯವಾಗಿವೆ. ಹೀಗಾಗಿ ಶ್ರೀನಿವಾಸ್ ಅವರನ್ನು ಬಂಧಿಸಿದ್ದು, ಆಸ್ತಿ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಇನ್ನು ಶ್ರೀನಿವಾಸ್ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದು, ಆ ವೇಳೆ ತಮ್ಮ…
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಭಾರತದ ಚುನಾವಣಾ ಆಯೋಗದ ಐಕಾನ್. ಯುವಕರಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಸಚಿನ್ ತೆಂಡೂಲ್ಕರ್ ಅವರನ್ನು ‘ರಾಷ್ಟ್ರೀಯ ಮುಖ’ವನ್ನಾಗಿ ಮಾಡಲು ಚುನಾವಣಾ ಆಯೋಗ ನಿರ್ಧರಿಸಿದೆ. ಚುನಾವಣಾ ಆಯೋಗವು ಮುಂದಿನ ಮೂರು ವರ್ಷಗಳ ಕಾಲ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಎಂಒಯುಗೆ ಸಹಿ ಹಾಕಿದೆ. 2024ರ ಸಾರ್ವತ್ರಿಕ ಚುನಾವಣೆ ಸೇರಿದಂತೆ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಆಯೋಗವು ವಿವಿಧ ಯೋಜನೆಗಳನ್ನು ರೂಪಿಸಲಿದೆ. ಈ ನಿಟ್ಟಿನಲ್ಲಿ ಯುವಕರಲ್ಲಿ ತೆಂಡೂಲ್ಕರ್ ಅವರ ಪ್ರಭಾವದ ಲಾಭವನ್ನೂ ಆಯೋಗ ಬಳಸಿಕೊಳ್ಳಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯಲ್ ಅವರ ಸಮ್ಮುಖದಲ್ಲಿ ಸಚಿನ್ ತಮ್ಮ ಜೀವನದಲ್ಲಿ ಹೊಸ ‘ಇನ್ನಿಂಗ್’ ಆರಂಭಿಸಿದರು. ಪಂಕಜ್ ತ್ರಿಪಾಠಿ, ಎಂಎಸ್ ಧೋನಿ, ಅಮೀರ್ ಖಾನ್, ಮೇರಿ ಕೋಮ್ ಮತ್ತು ಇತರರು ಹಿಂದಿನ ವರ್ಷಗಳಲ್ಲಿ ಚುನಾವಣಾ ಆಯೋಗದ ಐಕಾನ್ ಗಳಾಗಿದ್ದರು.
ಚಂದ್ರಯಾನ 3 ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಉಡಾವಣೆ. ರೋವರ್ ಅಧ್ಯಯನ ನಡೆಸಲು 14 ದಿನಗಳು. ಭಾರತದ ಅಧ್ಯಕ್ಷೆ ದ್ರೌಪದಿ ಮುರ್ಮು ಟ್ವಿಟರ್ ನಲ್ಲಿ ಅಭಿನಂದನೆಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದಾರೆ. ರೋವರ್ ಇಳಿದ ಗಂಟೆಗಳ ನಂತರ ಹೊರಬಂದಿತು. ಲ್ಯಾಂಡರ್ ಇಳಿಯುತ್ತಿದ್ದಂತೆ ಮೇಲ್ಮೈ ಧೂಳಿನಿಂದ ಆವೃತವಾಗಿತ್ತು. ನಂತರ ಅದು ಲ್ಯಾಂಡರ್ ಅನ್ನು ಸುತ್ತುವರೆದಿದೆ. ಈ ಬದಲಾವಣೆಯ ನಂತರವೇ ರೋವರ್ ಹೊರಬಂದಿತು. ಭೂಮಿಯ ಮೇಲಿನ 14 ದಿನಗಳಿಗೆ ಹೋಲಿಸಿದರೆ ಲ್ಯಾಂಡರ್ ಮತ್ತು ರೋವರ್ ನ ಜೀವನವು ಕೇವಲ ಒಂದು ಚಂದ್ರನ ದಿನವಾಗಿದೆ. ಪ್ರತಿ ಸೆಕೆಂಡಿಗೆ ಸುಮಾರು ಒಂದು ಸೆಂಟಿಮೀಟರ್ ವೇಗದಲ್ಲಿ ಪ್ರಯಾಣಿಸುವ ಪ್ರಗ್ಯಾನ್ ನ್ಯಾವಿಗೇಷನ್ ಕ್ಯಾಮೆರಾಗಳೊಂದಿಗೆ ಚಂದ್ರನ ಪರಿಸರವನ್ನು ಸ್ಕ್ಯಾನ್ ಮಾಡುತ್ತಾರೆ. ಈ ಅಲ್ಪಾವಧಿಯಲ್ಲಿ, ಚಂದ್ರಯಾನ 3 ತನಿಖೆಯು ದಕ್ಷಿಣ ಧ್ರುವದಿಂದ ಚಂದ್ರನ ಮೇಲೆ ಇದುವರೆಗೆ ಯಾರೂ ಸ್ಪರ್ಶಿಸದ ಸಾವಿರಾರು ವಿಷಯಗಳನ್ನು ಅಧ್ಯಯನ ಮಾಡುತ್ತದೆ. ಈ ಹದಿನಾಲ್ಕು ದಿನಗಳಲ್ಲಿ ರೋವರ್ ಕಾರ್ಯಾಚರಣೆಯಲ್ಲಿರುತ್ತದೆ ಮತ್ತು ಲ್ಯಾಂಡರ್ ಮತ್ತು ಲ್ಯಾಂಡರ್ ನಿಂದ ಬರುವ ಐದು ಉಪಕರಣಗಳಿಂದ ಬರುವ ಡೇಟಾವನ್ನು…
ಗೂಂಡಾ ಕಾಯ್ದೆಯಡಿ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಅಧೀನ ಕಾರ್ಯದರ್ಶಿಗೆ ನೊಟೀಸ್ ಜಾರಿಗೊಳಿಸಿದೆ.
ಬೆಂಗಳೂರು: ಮದುವೆಗೆ ಸೀರೆ ಖರೀದಿಸುವ ಸೋಗಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಬೆಲೆಯ ಸೀರೆಗಳನ್ನು ಕದ್ದು ಪರಾರಿಯಾಗುತ್ತಿದ್ದ ಆಂಧ್ರಪ್ರದೇಶ ಮೂವರು ಮಹಿಳೆಯರೂ ಸೇರಿದಂತೆ ಆರು ಮಂದಿಯನ್ನು ಹೈಗೌಂಡ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಧುಪಾಟಿ ರಾಣಿ (33), ಈಟಾ ಸುನಿತಾ (45), ಗುಂಜಿ ಶಿವರಾಮ್ ಪ್ರಸಾದ್ (34), ಕನುಮುರಿ ವೆಂಕಟೇಶ್ವರ ರಾವ್(42), ತಣ್ಣೀರು ಶಿವಕುಮಾರ್(33), ತೊತ್ತಕ್ಕೆ ಭರತ್(30) ಬಂಧಿತರು, ಬಂಧಿತರಿಂದ ನಾಲ್ಕು ಲಕ್ಷ ಮೌಲ್ಯದ 22 ಸೀರೆ ಜಪ್ತಿ ಮಾಡಿಕೊಳ್ಳಲಾಗಿದೆ.
ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಲಕ್ಕಯ್ಯ ಬಡಾವಣೆಯ ಪೊಲಮ್ಮಾಸ್ ಹೋಟೆಲ್ ಬಳಿ ನಡೆದಿದೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಪೊಲಮ್ಮಾಸ್ ಮೆಸ್ ಪಕ್ಕದ ಬಿಲ್ಡಿಂಗ್ ನ ಕೆಳಮಹಡಿಯಲ್ಲಿ ಅಡುಗೆ ಅನಿಲ ಸೋರಿಕೆ ಯಿಂದ ಸ್ಫೋಟ ಸಂಭವಿಸಿದೆ. ಪರಿಣಾಮ, ಕಟ್ಟಡದ ಹೊರಭಾಗದಲ್ಲಿ ಮಲಗಿದ್ದ ರವಿ (40) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪೊಲೀಸ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಪೊಲೀಸರ ಹೆಸರಿನಲ್ಲಿ ನಕಲಿ ‘ಎಕ್ಸ್ ಟ್ವಿಟರ್’ ಖಾತೆ ಸೃಷ್ಟಿಸಿ, ಅದರಲ್ಲಿ ಐಪಿಎಲ್ ಪಂದ್ಯಗಳ ಸ್ಕೋರ್ ಹಾಗೂ ಮತ್ತಿತರ ಮಾಹಿತಿ ಟ್ವಿಟ್ ಮಾಡಿ ಪೊಲೀಸರಂತೆ ಬಿಂಬಿಸುತ್ತಿದ್ದ ತಮಿಳುನಾಡಿನ ವ್ಯಕ್ತಿಯನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ರಾಜ್ಯದ ಚೆಟಪೇಟ್ ನ ಮಗೇಶ್ ಕುಮಾರ್ ಬಂಧಿತ ಆರೋಪಿ, ಪ್ರಕರಣ ದಾಖಲಾದ ಮೇಲೆ ವಿಶೇಷ ತಂಡ ರಚಿಸಲಾಗಿತ್ತು. ವಿಶೇಷ ತಂತ್ರಜ್ಞಾನದ ನೆರವಿನಿಂದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾಧಿ ನಿಷಾಗೆ ನಗರದ ತ್ವರಿತ ವಿಶೇಷ ನ್ಯಾಯಾಲಯವು (ಎಫ್‌ಟಿಎಸ್ -4) ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿಯು 2018ರ ಫೆಬ್ರವರಿ 26ರಂದು ಮನೆಯ ಅಕ್ಕಪಕ್ಕ ಆಟವಾಡುತ್ತಿದ್ದ ಮಗುವನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಬಳಿಕ ಮಗುವಿನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಕೊತ್ತನೂರು ಪೊಲೀಸರು ಆತನ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆತನನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.