Author: admin

ಬೆಳಗಾವಿ: ವಿಶ್ವಗುರು ಬಸವಣ್ಣ 12ನೇ ಶತಮಾನದಲ್ಲಿ ಕಂಡ ಸಮಾನತೆಯ ಕನಸನ್ನು ನನಸು ಮಾಡಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಇಲ್ಲಿಯ ಬಾಳೇಕುಂದ್ರಿ ಕೆ ಎಚ್ ಗ್ರಾಮದಲ್ಲಿ ಬಸವ ಮೂರ್ತಿಯ ಪ್ರತಿಷ್ಟಾಪನೆ ಹಾಗೂ ವಿಶ್ವಗುರು ಬಸವ ಮಂಟಪದ ಉದ್ಘಾಟನೆಯಯನ್ನು ಭಾನುವಾರ ನೆರವೇರಿಸಿ ಅವರು ನೆರವೇರಿಸಿದರು. ಜಾತೀಯತೆಯನ್ನು ಹೋಗಲಾಡಿಸಿ, ಮಹಿಳಾ ಸಮಾನತೆ ಸಾಧಿಸುವ ಮೂಲಕ ಸಮಾಜದಲ್ಲಿ ಮೇಲು ಕೀಳೆಂಬ ಭಾವವನ್ನು ಹೋಗಾಲಾಡಿಸಬೇಕೆಂದು ಬಸವಣ್ಣನವರು ಕರೆ ನೀಡಿದ್ದರು. ಆ ದಿಸೆಯಲ್ಲಿ ಸಾಕಷ್ಟು ಕೆಲಸಗಳನ್ನೂ ಮಾಡಿದ್ದರು. ಆದರೆ ಇಂದಿಗೂ ಅವರ ಕನಸನ್ನೂ ನನಸಾಗಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಈಗ ಲೋಕಸಭೆಯಲ್ಲಿ ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡುವ ಮಸೂದೆ ಅಂಗೀಕಾರವಾಗಿದೆ. ಅದು ಬೇಗ ಜಾರಿಯಾಗಿ ಚುನಾಯಿತ ಪ್ರತಿನಿಧಿಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಬೇಕು ಎಂದು ಹೆಬ್ಬಾಳಕರ್ ಹೇಳಿದರು.

Read More

ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳು ಬಂದ್ ಆಗುವ ಸಾಧ್ಯತೆ ಹೆಚ್ಚಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಇಂದಿರಾ ಗಾಂಧಿ ಅವರ ಜನ್ಮದಿನ ಆಚರಣೆ ವೇಳೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲ್ಲ. ಆದರೆ, ನಮ್ಮ ಯೋಜನೆಗಳನ್ನು ವಿರೋಧಿಸುತ್ತಿರುವ ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಯಾವುದಾದರು ಕಾನೂನು ತಂದು ಗ್ಯಾರಂಟಿ ಯೋಜನೆಗಳಿಗೆ ಸಮಸ್ಯೆ ಮಾಡಬಹುದು ಎಂದಿದ್ದಾರೆ.

Read More

ಕಳೆದ 6 ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ ಮತ್ತು ಸಮಾಜದ ಶಾಂತಿ-ಸಾಮರಸ್ಯದ ರಕ್ಷಣೆ ನಮ್ಮ ಸರ್ಕಾರದ ಪ್ರಮುಖ ಉದ್ದೇಶ ಎಂದರು. ಸಾಧಿಸಿದ್ದು ಹಲವು, ಸಾಗಬೇಕಾದ ಹಾದಿ ಬಹುದೂರ ಇದೆ. ಕರ್ನಾಟಕ ಅಭಿವೃದ್ಧಿ ಮಾದರಿಯ ಈ ಪಯಣದಲ್ಲಿ ಜೊತೆಯಾಗಿ ಸಾಗೋಣ ಎಂದರು.

Read More

ಉತ್ತರಕಾಶಿ ಸುರಂಗ ಅಪಘಾತದಲ್ಲಿ ಸಿಲುಕಿರುವ ಕಾರ್ಮಿಕರ ದೃಶ್ಯಾವಳಿಗಳು ಹೊರಬಿದ್ದಿವೆ. ಕಾರ್ಮಿಕರು ಹೆಲ್ಮೆಟ್ ಧರಿಸಿ ಅವರ ಕಣ್ಣುಗಳಲ್ಲಿ ಭರವಸೆಯಿರುವುದನ್ನು ವೀಡಿಯೊ ತೋರಿಸುತ್ತದೆ. ರಕ್ಷಣಾ ಕಾರ್ಯಾಚರಣೆ 10ನೇ ದಿನಕ್ಕೆ ಕಾಲಿಟ್ಟಿದೆ. ಕೊರೆಯುವ ಯಂತ್ರವನ್ನು ಬಳಸುವ ರಕ್ಷಣಾ ಕಾರ್ಯಾಚರಣೆಯು ಮಧ್ಯಾಹ್ನ ಪ್ರಾರಂಭವಾಗುತ್ತದೆ. ರಕ್ಷಣಾ ಕಾರ್ಯಾಚರಣೆಯು ಕಾರ್ಮಿಕರನ್ನು ಉಳಿಸಲು ಅವಿರತ ಪ್ರಯತ್ನದಲ್ಲಿದೆ. ಈ ಪ್ರಯತ್ನಗಳು ಉದಯೋನ್ಮುಖ ದೃಶ್ಯಗಳಿಂದ ಉತ್ತೇಜಿಸಲ್ಪಟ್ಟಿವೆ. ಸುರಂಗದ ಮೂಲಕ ಹಾದುಹೋದ ಎಂಡೋಸ್ಕೋಪಿಕ್ ಫ್ಲೆಕ್ಸಿ ಕ್ಯಾಮೆರಾದ ದೃಶ್ಯಾವಳಿಗಳು ಹೊರಬಂದಿವೆ. ರಕ್ಷಕರು ವಾಕಿ-ಟಾಕಿಗಳ ಮೂಲಕ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರೊಂದಿಗೆ ಮಾತನಾಡಿದರು. ಆಹಾರ, ನೀರು, ಔಷಧ ಇತ್ಯಾದಿಗಳನ್ನು ಪೈಪ್‌ಗಳ ಮೂಲಕ ತಲುಪಿಸಲಾಯಿತು. ದುರಂತದ ಮುಖಾಂತರ ಭರವಸೆಯ ನಗುವಿನೊಂದಿಗೆ ಕಾರ್ಮಿಕರು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಳೆದ 10 ದಿನಗಳಿಂದ ಸಿಲ್ಕ್ಯಾರಾ ಸುರಂಗ ಕುಸಿದು 41 ಕಾರ್ಮಿಕರು ಅದರಲ್ಲಿ ಸಿಲುಕಿಕೊಂಡಿದ್ದಾರೆ. ಸುರಂಗದ ಹೊರಗೆ ಬಿಡಾರ ಹೂಡಿರುವ ಆತಂಕದಲ್ಲಿರುವ ಸಂಬಂಧಿಕರಿಗೆ ಕಾರ್ಮಿಕರ ದರ್ಶನ ಸಮಾಧಾನ ತಂದಿದೆ.

Read More

ಕೌಶಲ್ಯ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರಿಗೆ ರಿಲೀಫ್. 371 ಕೋಟಿ ವಂಚನೆ ಪ್ರಕರಣದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಗ್ಯ ಸಮಸ್ಯೆಗಳ ಆಧಾರದ ಮೇಲೆ ಜಾಮೀನು ನೀಡಲಾಗಿದೆ. ನಾಯ್ಡು ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ ಮಲ್ಲಿಕಾರ್ಜುನ ರಾವ್ ಅವರು ತೀರ್ಪು ಪ್ರಕಟಿಸಿದರು. ಮೊಹರು ಮಾಡಿದ ಕವರ್‌ ನಲ್ಲಿ ವೈದ್ಯಕೀಯ ವಿವರಗಳನ್ನು ಎಸಿಬಿ ನ್ಯಾಯಾಲಯ ಮತ್ತು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಅಕ್ಟೋಬರ್ ಆರಂಭದಲ್ಲಿ, ಚಂದ್ರಬಾಬು ನಾಯ್ಡು ಅವರ ಬಲಗಣ್ಣಿನ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಾಲ್ಕು ವಾರಗಳ ಮಧ್ಯಂತರ ವೈದ್ಯಕೀಯ ಜಾಮೀನು ನೀಡಲಾಯಿತು. ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿರುವ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ನ್ಯಾಯಾಲಯವು ನಾಯ್ಡು ಅವರನ್ನು ನಿರ್ಬಂಧಿಸಿಲ್ಲ ಎಂಬುದು ಗಮನಾರ್ಹ. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಕೌಶಲ ಅಭಿವೃದ್ಧಿ ನಿಗಮದ…

Read More

ತುಮಕೂರು: ಜಿಲ್ಲಾ ಪೊಲೀಸ್ ಇಲಾಖೆಯ ಗಸ್ತು ವಾಹನವಾಗಿರೋ 112 ವಾಹನವನ್ನೆ ವ್ಯಕ್ತಿಯೊಬ್ಬ ಅಪಹರಿಸಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ನಡೆದಿದೆ. ಮುನಿಯ ಎಂಬಾತನೇ 112 ವಾಹನವನ್ನು ಅಪಹರಿಸಿದ ಅಸಾಮಿ ಆಗಿದ್ದಾನೆ. ತಡರಾತ್ರಿ ಗ್ರಾಮದ ಸಹೋದರಿಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಆರೋಪಿ ಸಹೋದರ 112 ಗೆ ಕರೆ ಮಾಡಿದ್ದನು. ಜಗಳ ಬಿಡಿಸಲು ಗ್ರಾಮಕ್ಕೆ 112 ವಾಹನದಲ್ಲಿ ಪೊಲೀಸರು ಬಂದಿದ್ದರು. ಈ ವೇಳೆ 112 ವಾಹನದ ಹಿಂಬದಿಯ ಗಾಜನ್ನು ಮುನಿಯ ಹೊಡೆದು ಹಾಕಿದ್ದಾನೆ. ಕಾರು ನಿಲ್ಲಿಸಿ ಹಿಂಬದಿಯ ಗಾಜು ನೋಡಲು ಹೋದ ಪೊಲೀಸರು, ಈ ವೇಳೆ ವೇಗವಾಗಿ ಕಾರು ಓಡಿಸಿಕೊಂಡು ಮುನಿಯ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಸತತ ಮೂರು ಗಂಟೆಗಳ ಕಾಲ ಪೊಲೀಸರು ಹುಡುಕಾಟ ನಡೆಸಿದರೂ 112 ವಾಹನ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ನಂತರ ತುಮಕೂರು ತಾಲೂಕಿನ ಹೆಬ್ಬೂರು ಬಳಿ 112 ವಾಹನ ಪತ್ತೆಯಾಗಿದೆ. ಸಿಎಸ್ ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಹೋದರಿಬ್ಬರ ಗಲಾಟೆ ನಡೆದಿತ್ತು. ಆರೋಪಿಯನ್ನು ಪೊಲೀಸರು…

Read More

ಏಕದಿನ ಕ್ರಿಕೆಟ್ ವಿಶ್ವಕಪ್‌ ನಲ್ಲಿ ಭಾರತ ಸೋಲಿನ ನಂತರ 23 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಹುಲ್ ಲೋಹರ್ ಎಂಬ ಯುವಕನ ಸಾವಿನ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಕುಟುಂಬವೊಂದು ಆರೋಪ ಮಾಡಿದೆ. ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ. 23 ವರ್ಷದ ರಾಹುಲ್ ಗಾರ್ಮೆಂಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ ವೀಕ್ಷಿಸಲು ಹೊರಡಲಾಗಿತ್ತು. ಭಾರತ ಸೋತ ಬಳಿಕ ಕೊಠಡಿಗೆ ನುಗ್ಗಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದವರು ಹೇಳುತ್ತಾರೆ. ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ರಾಹುಲ್‌ ಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಜೀವನದಲ್ಲಿ ಯಾವುದೇ ತೊಂದರೆ ಇರಲಿಲ್ಲ ಮತ್ತು ಸಂತೋಷವಾಗಿದ್ದರು ಎಂದು ಕುಟುಂಬದವರು ಹೇಳುತ್ತಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read More

ತಿಪಟೂರು: ಮೂರು ಚಿರತೆ ಪ್ರತ್ಯಕ್ಷವಾಗಿದ್ದು, ಈ ಪೈಕಿ ಒಂದು ಬಾವಿಗೆ ಬಿದ್ದಿರುವ ಘಟನೆ ತಿಪಟೂರು ನಗರದ ಮಾರನ್ಗೆರೆ ಬಡಾವಣೆಯಲ್ಲಿ ನಡೆದಿದೆ. ಸಂಗಮೇಶ್ವರ ತೋಟದ ಬಾವಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ತೋಟದ ಮಾಲಿಕ ಸಂಗಮೇಶ್ ಅವರು ತಿಳಿಸಿದ್ದಾರೆ. ಒಟ್ಟು ಮೂರು ಚಿರತೆಗಳು ಪತ್ತೆಯಾಗಿವೆ. ಈ ಪೈಕಿ ಒಂದು ಬಾವಿಗೆ ಬಿದ್ದಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ವರದಿ: ಆನಂದ್ ತಿಪ್ಟೂರ್

Read More

ತುಮಕೂರು: ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವರ ಮೇಲೆ ಹೆಜ್ಜೇನುಗಳು ದಾಳಿ ಮಾಡಿದ ಪರಿಣಾಮ ಓರ್ವ ಮೃತಪಟ್ಟು, 25ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ನಡೆದಿದೆ. ನಾಮಕರಣ ಕಾರ್ಯಕ್ರಮವನ್ನು ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ದಿಢೀರನೆ ದಾಳಿ ನಡೆಸಿದ ಹೆಜ್ಜೇನು ದಾಳಿ ಮಾಡಿವೆ.47 ವರ್ಷದ ವೀರಭದ್ರಯ್ಯ ಎಂಬುವರು ಹೆಜ್ಜೇನು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೆಜ್ಜೇನು ದಾಳಿಯಾದವರಿಗೆ ಗುಬ್ಬಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಮಕರಣ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸಮೀಪದಲ್ಲಿಯೇ ಮರದಲ್ಲಿದ್ದ ಹೆಜ್ಜೇನುಗಳು ಸಮೀಪ ಬರುತ್ತಿದ್ದಂತೆ ಜನರು ದೇವಸ್ಥಾನದ ಒಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡಿದ್ದರು. ನಂತರ ನಾಮಕರಣ ಕಾರ್ಯಕ್ರಮಕ್ಕೆಂದು ಬಂದಿದ್ದ ಶಿವಣ್ಣ ಎಂಬವರು ಹೊರಗಡೆ ಜನರು ಯಾರು ಇಲ್ಲದ್ದನ್ನು ಗಮನಿಸಿದ್ದಾರೆ. ಆಗ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ದೇವಸ್ಥಾನದ ಒಳಗೆ ಸೇರಿಕೊಂಡಿದ್ದವರು ದೇಗುಲದ ಹೊರಗೆ ಜೇನುನೊಣಗಳು ಇರುವುದನ್ನು ತಿಳಿಸಿದ್ದಾರೆ. ಅಲ್ಲದೆ ತಕ್ಷಣ ದೇಗುಲದ ಒಳಗೆ…

Read More

ಬೆಂಗಳೂರು: ಬ್ಯಾಟರಾಯನಪುರದಲ್ಲಿ ಪೌರ ಕಾರ್ಮಿಕ ಕೊಲೆ ಮಾಡಿದ ಆಟೊ ಚಾಲಕ ಬಂಧಿಸಲಾಗಿದೆ. ಪ್ರಭು ಬಂಧಿತ. ಭರತ್, ಬಿಬಿಎಂಪಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಪ್ರಭು ಆಟೊ ಚಾಲಕ. ಇವರಿಬ್ಬರು ಪರಿಚಿತರಾಗಿದ್ದರು’ ಎಂದು ಪೊಲೀಸರು ಹೇಳಿದ್ದಾರೆ. ಪಂತರಪಾಳ್ಯದಲ್ಲಿ ವ್ಯಕ್ತಿಯೊಬ್ಬರು ನಿಧನ ಹೊಂದಿದ್ದರು. ಮನೆ ಎದುರು ಪಾರ್ಥಿವ ಶರೀರವನ್ನು ದರ್ಶನಕ್ಕೆ ಇರಿಸಲಾಗಿತ್ತು. ಅದೇ ಸ್ಥಳದಲ್ಲಿ ಭರತ್ ಹಾಗೂ ಪ್ರಭು ಒಟ್ಟಿಗೆ ಸೇರಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಅವರಿಬ್ಬರ ನಡುವೆ ಗಲಾಟೆ ಶುರುವಾಗಿತ್ತು. ಕೊಲೆಯಲ್ಲಿ ಅಂತ್ಯಗೊಂಡ ಗಲಾಟೆ.

Read More