Subscribe to Updates
Get the latest creative news from FooBar about art, design and business.
- ಸ್ಕೀಮ್ ನೌಕರರ ಬೃಹತ್ ಪ್ರತಿಭಟನೆ: ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗೆ ಆಗ್ರಹಿಸಿ ‘ಕರಾಳ ದಿನಾಚರಣೆ’
- ಸ್ವಚ್ಛ ಪರಿಸರಕ್ಕಾಗಿ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ: ಔರಾದ್ ತಾಲೂಕಿನ ಹೊಕ್ರಾಣಾದಲ್ಲಿ ಜಾಗೃತಿ ಜಾಥಾ
- ಗುಬ್ಬಿ: ಜು.13ರಂದು ಎಸ್ ಸಿ–ಎಸ್ ಟಿ ಕುಂದುಕೊರತೆ ಸಭೆ
- ಮಕ್ಕಳಲ್ಲಿ ಶಿಕ್ಷಣದ ಪ್ರೀತಿ ಹುಟ್ಟಿಸುವ ಕಲಿಕೆ ಬದುಕಿನ ಆದ್ಯತೆಯಾಗಲಿ: ವೇಣುಗೋಪಾಲ್
- ತಿಪಟೂರು: ಲಯನ್ಸ್ ಕ್ಲಬ್ ನ 8ನೇ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿ
- ಕಳ್ಳಿ ಗಿಡದ ಹಣ್ಣು ತಿನ್ನುವುದು ಹೇಗೆ? ಇಲ್ಲಿದೆ ಸುಲಭ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು!
- ಪಾವಗಡ: ಮಹಿಳೆ ಮೇಲೆ ಹಲ್ಲೆ ನಡೆಸಿ ಆಭರಣ ಕದ್ದಿದ್ದ ಆರೋಪಿ ಸೆರೆ
- ಡೆಂಗ್ಯೂ ರೋಗ ನಿಯಂತ್ರಣಕ್ಕೆ ಸಹಕರಿಸಿ: ಡಾ.ಚಂದ್ರಶೇಖರ್
Author: admin
ಭಾರತಕ್ಕೆ ತೆರಳುತ್ತಿದ್ದ ಸರಕು ಸಾಗಣೆ ಹಡಗನ್ನು ಹೌತಿಗಳು ವಶಪಡಿಸಿಕೊಂಡಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಭಾರತದ ಪೀಪವಾವ್ ಬಂದರಿನಿಂದ ಹೊರಡುವಾಗ ಹೌತಿಗಳು ಕೆಂಪು ಸಮುದ್ರದಲ್ಲಿ ಹಡಗನ್ನು ವಶಪಡಿಸಿಕೊಂಡರು. ಹಡಗಿನಲ್ಲಿ ಬಲ್ಗೇರಿಯಾ, ಫಿಲಿಪೈನ್ಸ್, ಮೆಕ್ಸಿಕೊ ಮತ್ತು ಉಕ್ರೇನ್ ಸೇರಿದಂತೆ ವಿವಿಧ ದೇಶಗಳ 25 ಸಿಬ್ಬಂದಿ ಇದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಸರಕು ಹಡಗನ್ನು ವಶಪಡಿಸಿಕೊಳ್ಳುವುದಾಗಿ ಘೋಷಿಸಿತು. ಬ್ರಿಟಿಷ್ ಒಡೆತನದ ಹಡಗು ಜಪಾನಿನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಹಡಗು ಕೊನೆಯದಾಗಿ ಟರ್ಕಿಯ ಕೊರ್ಫೆಸ್ ಬಳಿ ಇತ್ತು ಎಂದು ವರದಿಯಾಗಿದೆ.
ವಿಶ್ವಕಪ್ –2023ಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಮಾರ್ನಸ್ ಲಾಬುಶೇನ್ ಹಾಗೂ ಟ್ರಾವಿಸ್ ಹೆಡ್ ಅವರ ಜೊತೆಯಾಟ ಆಸ್ಟ್ರೇಲಿಯ ಗೆಲುವಿಗೆ ಸಹಕಾರಿಯಾಯಿತು. ಕೇವಲ ನಾಲ್ಕು ವಿಕೆಟ್ ಗಳ ನಷ್ಟದೊಂದಿಗೆ ಆಸ್ಟ್ರೇಲಿಯಾ ಭರ್ಜರಿ ಮುನ್ನಡೆ ಸಾಧಿಸಿತು. ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಬೌಲರ್ಸ್ ಮೂರು ವಿಕೆಟ್ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ, 10 ವಿಕೆಟ್ ಗಳ ನಷ್ಟಕ್ಕೆ 241 ರನ್ ಗಳ ಗುರಿಯನ್ನು ಆಸ್ಟ್ರೇಲಿಯಾ ತಂಡಕ್ಕೆ ನೀಡಿತು. ಮಾರ್ನಸ್ ಲಾಬುಶೇನ್ ಹಾಗೂ ಟ್ರಾವಿಸ್ ಹೆಡ್ ಅವರ ಅಬ್ಬರದ ಬ್ಯಾಟಿಂಗ್ ಆಸ್ಟ್ರೇಲಿಯಾದ ಗೆಲುವಿಗೆ ಸಹಕಾರಿಯಾಯಿತು.
ಆಸ್ಟ್ರೇಲಿಯಾ ತಂಡಕ್ಕೆ 240ರನ್ ಗಳ ಸವಾಲು ನೀಡಿರುವ ಟೀಮ್ ಇಂಡಿಯಾ ಇದೀಗ 2 ವಿಕೆಟ್ ಗಳನ್ನು ಪಡೆದುಕೊಂಡಿದೆ. ಆಸ್ಟ್ರೇಲಿಯಾ 3 ವಿಕೆಟ್ ಗಳ ನಷ್ಟಕ್ಕೆ 47 ರನ್ ಗಳನ್ನು ಗಳಿಸಿದೆ. ಮೊಹಮ್ಮದ್ ಶಮಿ ಎಸೆದ 2ನೇ ಓವರ್ ನ 2ನೇ ಎಸೆತದಲ್ಲಿ ಸ್ಲಿಪ್ ನಲ್ಲಿದ್ದ ವಿರಾಟ್ ಕೊಹ್ಲಿಗೆ ಡೇವಿಡ್ ವಾರ್ನರ್ ಕ್ಯಾಚ್ ನೀಡಿದರು. 3 ಎಸೆತಗಳಲ್ಲಿ 7 ರನ್ ಪಡೆದುಕೊಂಡ ವಾರ್ನರ್ ಆಟ ಮುಗಿಸಿದರು. ಜಸ್ ಪ್ರೀಸ್ ಬುರ್ಮಾ ಎಸೆದ 5ನೇ ಓವರ್ ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಗೆ ಕ್ಯಾಚ್ ನೀಡಿದ ಮಿಚೆಲ್ ಮಾರ್ಷ್ ಮೈದಾನದಿಂದ ಹೊರ ನಡೆದರು. ಮಿಚೆಲ್ ಮಾರ್ಷ್ 15 ಎಸೆತಗಳಲ್ಲಿ 15 ರನ್ ಪಡೆದುಕೊಂಡು ಆಟ ಮುಗಿಸಿದರು. ಜಸ್ ಪ್ರೀಸ್ ಬುರ್ಮಾ ಎಸೆದ 7ನೇ ಓವರ್ ನ ಕೊನೆಯ ಎಸೆತದಲ್ಲಿ ಎಲ್ ಬಿಡಬ್ಲ್ಯೂ ಆಗಿ ಸ್ಮಿತ್ ಮೈದಾನದಿಂದ ನಿರ್ಗಮಿಸಿದರು. ಸ್ಮಿತ್ ಕೇವಲ 4 ರನ್ ಗಳೊಂದಿಗೆ ಮೈದಾನದಿಂದ ತೆರಳಿದರು.
ನಾನು ನೀಲಿ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದೆ ಎಂದು ಆರೋಪ ಮಾಡಿರುವ ಕುಮಾರಣ್ಣ ಬುದ್ದಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು. ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು. ನಾನು ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಟೂರಿಂಗ್ ಟಾಕೀಸ್ ಗಳನ್ನು ಇಟ್ಟಿದ್ದೇ. ಒಂದಲ್ಲ ಮೂರ್ನಾಲ್ಕು ಕಡೆ ಟೆಂಟ್‌ಗಳನ್ನು ಇಟ್ಟಿದ್ದೆ. ದೊಡ್ಡಆಲಹಳ್ಳಿ, ಹಾರೋಬೆಲೆ, ಕೋಡಿಹಳ್ಳಿಗಳಲ್ಲಿ ನಡೆಸುತ್ತಿದ್ದೆ. ಹುಣಸೇಹಳ್ಳಿಯಲ್ಲಿ ಈಗಲೂ ಟೆಂಟ್ ಇದೆ. ಈ ಊರುಗಳಿಗೆ ಹೋಗಿ ಮಾದ್ಯಮದವರೇ ಸಮೀಕ್ಷೆ ನಡೆಸಿ, ನಾನು ಯಾವ ಚಿತ್ರಗಳ ಪ್ರದರ್ಶನ ಮಾಡಿಸುತ್ತಿದ್ದೆ ಎಂದು ಜನರ ಬಳಿ ಕೇಳಿ. ಕುಮಾರಸ್ವಾಮಿ ಅವರಿಗೆ ನೀವೆ ಉತ್ತರಿಸಿ ಎಂದರು. ಕುಮಾರಸ್ವಾಮಿ ಪದೇ, ಪದೇ ನಿಮ್ಮ ಮೇಲೆ ಸರಣಿ ಆರೋಪಗಳನ್ನು ಮಾಡುತ್ತಿರುವುದರ ಹಿಂದಿನ ಕಾರಣವೇನು ಎಂದು ಕೇಳಿದಾಗ “ಅವರು ದೊಡ್ಡವರು, ಏನೇ ಹೇಳಿದರು ನಾವು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಅವರು ಬಳಸುತ್ತಾರೆ ಎಂದು ನಾನು ಏಕವಚನ ಬಳಸುವುದಿಲ್ಲ ಎಂದರು.
ತಿಪಟೂರು: ತಾಲೂಕಿನ ಹೊನ್ನವಳ್ಳಿ ವಲಯದ ಹೊನ್ನವಳ್ಳಿ ಗ್ರಾಮದ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿಯ ವಿಭಾಗದ ವತಿಯಿಂದ 1,50,000/ರೂ ಅನುದಾನದ ಡಿ ಡಿಯ ಮೊತ್ತವನ್ನು ಯೋಜನಾಧಿಕಾರಿಯವರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಯೋಜನಾಧಿಕಾರಿಯವರು ಮಾರ್ಗದರ್ಶನ ನೀಡುತ್ತಾ, ಈಗಿನ ಅತ್ಯಾಧುನಿಕ ಆಧುನಿಕತೆಯಿಂದ ಜನ ಸಾಮಾನ್ಯರು ಪಾಶ್ಚಿಮಾತ್ಯ ಜೀವನ ಶೈಲಿಗೆ ಮಾರುಹೋಗಿದ್ದು ಭಕ್ತಿಯ ಶ್ರದ್ಧಾ ಕೇಂದ್ರಕ್ಕೆ ಸಮಯ ನೀಡದೇ ಇರುವುದು ಅತ್ಯಂತ ಶೋಚನೀಯವಾಗಿದೆ. ಹಾಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಪೂಜ್ಯ ಧರ್ಮಾಧಿಕಾರಿಗಳಾದ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಸನಾತನ ಶ್ರದ್ಧಾ ಕೇಂದ್ರಗಳನ್ನ ಜೀರ್ಣೋದ್ದಾರ ಮಾಡುವ ಪುಣ್ಯದ ಕಾಯಕದಲ್ಲಿ ತೊಡಗಿದ್ದು ಮುಂದಿನ ಯುವ ಪೀಳಿಗಿಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡುತ್ತಿದ್ದಾರೆಂದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಪರಶಿವ ಮೂರ್ತಿ, ಸೇವಾ ಪ್ರತಿನಿಧಿಗಳು, ದೇವಸ್ಥಾನ ಜೀರ್ಣೋಧ್ಧಾರ ಸಮಿತಿಯ ಸದಸ್ಯರು, ಯೋಜನೆಯ ಫಲಾನುಭವಿಗಳು ಇದ್ದರು. ವರದಿ: ಆನಂದ್ ತಿಪ್ಟೂರ್
ತುಮಕೂರು: ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆಯನ್ನು ವಿಭಿನ್ನವಾಗಿ ಆಚರಣೆ ಮಾಡಲಾಗಿದ್ದು ತುಮಕೂರಿನ ಇಂದಿರಾ ಕ್ಯಾಂಟೀನ್ನಲ್ಲಿ ಜನರಿಗೆ ಹೋಳಿಗೆ ಊಟ ಹಾಕಲಾಯಿತು. ದೇಶದ ಮೊದಲ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಜನ್ಮ ದಿನವನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ರಾಜಣ್ಣ ಅವರ ನೇತೃತ್ವದಲ್ಲಿ ನಗರದ ಪಾಲಿಕೆ ಆವರಣದಲ್ಲಿರುವ ಇಂದಿರಾ ಕ್ಯಾಟೀನ್‌ನಲ್ಲಿ ಆಚರಿಸಲಾಯಿತು. ದಿ.ಇಂದಿರಾಗಾAಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು,ಕಚೇರಿ ಕಾರ್ಯಕ್ರಮಕ್ಕೆ ಬದಲಾಗಿ,ಸಾವಿರಾರು ಬಡ ಜನರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಟೀನ್ ಬಳಿ ಕಾರ್ಯಕ್ರಮ ಆಯೋಜಿಸಿ,ಇಂದು ಊಟಕ್ಕೆ ಬರುವ ಎಲ್ಲರಿಗೂ ಹೊಳಿಗೆ ಊಟದ ವ್ಯವಸ್ಥೆ ಮಾಡಿ,ಕಾಂಗ್ರೆಸ್ ಪಕ್ಷ ಎಂದಿಗೂ ಬಡವರ ಪರ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದರು. ಮಹಿಳೆ ಎಂದಿಗೂ ಅಬಲೆಯಲ್ಲ.ಸಬಲೆ, ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂಬುದನ್ನು ಸುಮಾರು…
ಬೆಂಗಳೂರು : ಕೆ. ಆರ್. ಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪದಡಿ ಬಾಲಕ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ್ದಕ್ಕಾಗಿ ಆತನ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಟಿಐ ಗೇಟ್ ಮುಖ್ಯರಸ್ತೆ ಹಾಗೂ ಕೆ. ಆರ್. ಪುರ ರೈಲ್ವೆ ನಿಲ್ದಾಣ ಬಳಿಯ ಕೆಳ ಸೇತುವೆ ರಸ್ತೆಯಲ್ಲಿ ಇಬ್ಬರು ಪ್ರತ್ಯೇಕವಾಗಿ ವೀಲೆ ಮಾಡುತ್ತಿದ್ದರು. ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆಯಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 2ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿಯೂ ಅರ್ಹ ಕ್ರೀಡಾಪಟುಗಳಿಗೆ ಮೀಸಲಾತಿ ಒದಗಿಸಿ, ಕ್ರೀಡಾ ಚಟುವಟಿಕೆಗಳನ್ನು ಮುಂದುವರಿಸಲು ಪ್ರೋತ್ಸಾಹಿಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ಆಡುಗೋಡಿಯ ನಗರ ಸಶಸ್ತ್ರ ಮೀಡಲು ಪಡೆಯ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದ ಅವರು, ಪಿಎಸ್‌ಐ ಹುದ್ದೆಗಳನ್ನ ಖಾಲಿ ಇಟ್ಟುಕೊಳ್ಳಲು ಆಗಲ್ಲ ಎಂದು ಹೇಳಿದರು.
ಯುಪಿ ಸರ್ಕಾರವು ಹಲಾಲ್ ಟ್ಯಾಗ್ ಮಾಡಿದ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ. ವಿವಿಧ ಉತ್ಪನ್ನಗಳಿಗೆ ಹಲಾಲ್ ಪ್ರಮಾಣಪತ್ರ ನೀಡಿದ್ದಕ್ಕಾಗಿ ಲಕ್ನೋದಲ್ಲಿ ಬಿಜೆಪಿ ಕಾರ್ಯಕರ್ತನ ದೂರಿನ ಮೇರೆಗೆ ಕಂಪನಿ ಮತ್ತು ಮೂರು ಸಂಘಟನೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ನಂತರ ಹಲಾಲ್ ಅನ್ನು ನಿಷೇಧಿಸಲಾಯಿತು. ನಿಷೇಧ ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಹಲಾಲ್ ಪ್ರಮಾಣೀಕೃತ ಆಹಾರ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದರಂತೆ, ಮಾಂಸ, ಡೈರಿ ಉತ್ಪನ್ನಗಳು, ಸಕ್ಕರೆ, ಬೇಕರಿ ಉತ್ಪನ್ನಗಳು ಇತ್ಯಾದಿಗಳನ್ನು ಹಲಾಲ್ ಟ್ಯಾಗ್‌ನೊಂದಿಗೆ ತಯಾರಿಸಬಾರದು ಅಥವಾ ಮಾರಾಟ ಮಾಡಬಾರದು ಎಂದಿದೆ. ಆಹಾರ ಪದಾರ್ಥಗಳು ಮತ್ತು ಸೌಂದರ್ಯವರ್ಧಕಗಳಿಗೆ ಹಲಾಲ್ ಪ್ರಮಾಣಪತ್ರ ನೀಡುವುದು ಧಾರ್ಮಿಕ ಭಾವನೆಗಳ ಶೋಷಣೆ ಮತ್ತು ವಿಶೇಷ ಅಜೆಂಡಾದ ಭಾಗವಾಗಿದೆ ಎಂದು ಪ್ರಕರಣ ದಾಖಲಿಸಿದ ನಂತರ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ
ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಮಹಿಳೆ ಮತ್ತು ಆಕೆಯ ಐದು ವರ್ಷದ ಮಗಳು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯೊಳಗೆ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತರನ್ನು ಅನಿತಾ ದೇವಿ (29) ಮತ್ತು ಅವರ ಪುತ್ರಿ ಸೋನಿ ಕುಮಾರಿ ಎಂದು ಗುರುತಿಸಲಾಗಿದೆ. ಬಳ್ಳಾಪುರ ಗ್ರಾಮದ ನಿವಾಸದಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ ಎಂದು ಬಕ್ಸರ್ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕುಮಾರ್ ತಿಳಿಸಿದ್ದಾರೆ. ಘಟನೆ ನಡೆದಾಗ ಅನಿತಾ ಅವರ ಪತಿ ಇರಲಿಲ್ಲ. ಮೃತದೇಹಗಳನ್ನು ಮೊದಲು ಕಂಡವರು ಪುತ್ರರು. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸ್ಥಳದಿಂದ ವಶಪಡಿಸಿಕೊಂಡ ವಸ್ತುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಯಾರನ್ನೂ ಬಂಧಿಸಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.