Subscribe to Updates
Get the latest creative news from FooBar about art, design and business.
- ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!
- ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
- ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ
- ತಿಪಟೂರು: ಜು.10ರಂದು ಮೀನು ಕೃಷಿಕರ ದಿನಾಚರಣೆ
- ಸಮಾನತೆಯ ಆಡಳಿತ, ಶಾಂತಿ ಕಾಪಾಡುವ ಹೊಣೆ ಪಂಚಾಯತ್ ಆಡಳಿತಾಧಿಕಾರಿಗಳ ಮೇಲಿದೆ: ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಡಾ.ಜಿ.ಪರಮೇಶ್ವರ ಕರೆ
- 175 ನೇರ ಪಾವತಿ ಪೌರಕಾರ್ಮಿಕರಿಗೆ ಆದೇಶ ಪತ್ರ: ತುಮಕೂರನ್ನು ದೇಶಕ್ಕೆ ಮಾದರಿ ನಗರವನ್ನಾಗಿಸೋಣ: ಡಿಸಿಎಂ ಡಾ.ಜಿ. ಪರಮೇಶ್ವರ
- ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ ಪತಿ ಬಂಧನ
- ಕೋಟಾಗುಡ್ಡದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಚೇತನ್ ಬಾಬು ಸ್ಪಂದನೆ: ಟ್ಯಾಂಕರ್ ಮೂಲಕ ನೀರು ಪೂರೈಕೆ
Author: admin
ರಾಧನಾಥ್ ಸಿಕ್ಸರ್ ಅವರು 1852ರಲ್ಲಿ ಮೌಂಟ್ ಎವರೆಸ್ಟ್ ನ ಎತ್ತರವನ್ನು ಕಂಡುಹಿಡಿದ ವ್ಯಕ್ತಿ. ದಕ್ಷಿಣ ಕೊರಿಯಾದಲ್ಲಿ 20 ರಿಂದ 28 ವರ್ಷದೊಳಗಿನ ಪ್ರತಿಯೊಬ್ಬ ಪುರುಷನೂ ಕೂಡ ಸೇನೆಯಲ್ಲಿ 20 ತಿಂಗಳ ಕಾಲ ತೊಡಗಿಸಿಕೊಂಡಿರಬೇಕು. ಅಂದರೆ ಕೆ-ಪೋಪ್ ಸ್ಟಾರ್ ಗಳು ಸಹ ಸೇನೆಗೆ ಸೇರಬೇಕು. ಜಪಾನ್ ದೇಶದಲ್ಲಿ ಕೈತೊಳೆಯಲು ಬಳಸಿದ ನೀರನ್ನೇ ಟಾಯ್ಲೆಟ್ ಫ್ರೆಶ್ ಮಾಡಲು ಬಳಸುತ್ತಾರೆ. ಕರ್ನಾಟಕದಲ್ಲಿ ಹಣದ ನೋಟು ಮುದ್ರಣಾಲಯವನ್ನು ಹೊಂದಿರುವ ಏಕೈಕ ನಗರ ಮೈಸೂರು.
ಕುವೆಂಪು ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಲ್ಲಿ ತಾಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಪ್ಪ ತಾಯಿ ಸೀತಮ್ಮ. ಇವರು ಭಾರತೀಯ ಕವಿ, ನಾಟಕಕಾರ, ಕಾದಂಬರಿಕಾರ ಮತ್ತು ವಿಮರ್ಶಕ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ, ಕರ್ನಾಟಕ ರಾಜ್ಯ ಗೀತೆ ‘ಜಯ ಭಾರತ ಜನನಿಯ ತನುಜಾತೆ’ ಬರೆದ ಕೀರ್ತಿಗೆ ಕುವೆಂಪು ಭಾಜನರಾಗಿದ್ದಾರೆ. ಪ್ರಸಿದ್ಧ ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಮಹಾಕಾವ್ಯ ‘ಶ್ರೀ ರಾಮಾಯಣ ದರ್ಶನಂ’ ಮತ್ತು ‘ಕಾನೂರು ಹೆಗ್ಗಡಿತಿ’ (ಕಾನೂರಿನ ಮಾಲೀಕ) ನಂತಹ ಕಾದಂಬರಿಗಳು ಅವರ ಅತ್ಯುತ್ತಮ ಕೃತಿಗಳಲ್ಲಿ ಸೇರಿವೆ. ಕುವೆಂಪು ಅವರು ನವೆಂಬರ್ 11 ರಂದು 1994 ರಲ್ಲಿ ನಿಧನರಾದರು.
ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅಂದರೆ ಕನ್ನಡ ಸಾಹಿತ್ಯದ ನಿಜವಾದ ಸಾಕ್ಷಿ ಪ್ರಜ್ಞೆ, ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು. ಶ್ರೇಷ್ಠ ಗ್ರಾಮೀಣ ಸೊಗಡಿನ ಕುಂದಾನಗರಿಯ ವರಕವಿ ಬೇಂದ್ರೆಯವರು ಜೀವನದಲ್ಲಿ ನೊಂದು, ಬೆಂದು ಬಳಲಿದವರಾದರೂ ಕಾವ್ಯದ ಮೂಲಕವಾಗಿ ಮಿಂಚಿದ ರತ್ನ. ಜೀವನದಲ್ಲಿ ಮಕ್ಕಳ ಸಾವು, ಪತ್ನಿಯ ಸಾವು ಬೆಂದ್ರೆಯವರಿಗೆ ಅತೀವ ದುಃಖವನ್ನುಂಟು ಮಾಡಿದವು. ಆದರೂ ಇದಾವುದಕ್ಕೂ ಧೃತಿಗೆಡದೆ ಕೊರತೆಯ ಬದುಕಿನಲ್ಲಿಯೇ ಅಪಾರವಾದ ಶ್ರೇಷ್ಠ ಸಾಹಿತ್ಯ ಸಂಪತ್ತನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಬೇಂದ್ರಯವರಿಗೆ ಸಲ್ಲುತ್ತದೆ. ತಾವು ಬರೆಯುವುದಕ್ಕೂ, ಬದುಕುವುದಕ್ಕೂ ಸಂಬಂಧವೇ ಇಲ್ಲದಂತಿರುವ ಅನೇಕ ಕವಿ ಸಾಹಿತಿಗಳಿಗೆ ಬೇಂದ್ರೆಯವರ ಜೀವನ ಒಂದು ಪಾಠ. ಬೇಂದ್ರೆಯವರ ಜೀವನವೇ ಕಾವ್ಯ, ಕಾವ್ಯವೇ ಜೀವನ.
ದೇಶದಲ್ಲಿ ಇತ್ತೀಚೆಗೆ ರೈಲು ಅಪಘಾತಗಳು ಆತಂಕ ಮೂಡಿಸುತ್ತಿವೆ. ವಿಜಯನಗರದಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದು ಸಂಭವಿಸಿದ ದುರಂತವನ್ನು ಮರೆಯುವ ಮುನ್ನವೇ ಇತ್ತೀಚೆಗೆ ಮತ್ತೊಂದು ರೈಲು ಅಪಘಾತ ಸಂಭವಿಸಿದೆ. ಸುಹೈಲ್ ದೇವ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಉತ್ತರ ಪ್ರದೇಶದ ಪ್ರಯಾಗರಾಜ್ ರೈಲು ನಿಲ್ದಾಣದ ಬಳಿ ಹಳಿತಪ್ಪಿದೆ. ನಿನ್ನೆ ರಾತ್ರಿ ನಡೆದ ಈ ಅವಘಡದಲ್ಲಿ ಎಂಜಿನ್ ಸೇರಿದಂತೆ ಇನ್ನೂ ಎರಡು ಬೋಗಿಗಳು ಹಳಿ ತಪ್ಪಿವೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಪಘಾತಕ್ಕೆ ಕಾರಣ ತನಿಖೆ ನಡೆಸಲಾಗುತ್ತಿದೆ.
ಹಣದುಬ್ಬರದ ಬೇಗೆಯಲ್ಲಿ ಬಳಲಿದ್ದ ಜನತೆಗೆ ಬಿಗ್ ಶಾಕ್ ಸಿಕ್ಕಂತಾಗಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನಾಂಕದಂದು ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸುತ್ತವೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 100 ರಿಂದ 103 ರೂಪಾಯಿವರೆಗೆ ಏರಿಕೆಯಾಗಿದ್ದು, ಇದು ಗೃಹ ಬಳಕೆ ಸಿಲಿಂಡರ್ ಬಳಕೆದಾರರಿಗೆ ಅನ್ವಯ ಆಗಲ್ಲ. ಇಂದಿನಿಂದಲೇ ಈ ಬೆಲೆ ಜಾರಿಗೆ ಬರಲಿದ್ದು, ಬೆಂಗಳೂರಿನಲ್ಲಿ 1,813 ರೂ. ಇದ್ದ ಗ್ಯಾಸ್ ಬೆಲೆ 1,914.50ರೂ.ಗೆ ತಲುಪಿದೆ.
ಬೆಂಗಳೂರು: ಹೊರರಾಜ್ಯ, ಹೊರದೇಶಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಪರಭಾಷೆ ಮಾತನಾಡುವವರಿಗೆ ನಾವು ಕನ್ನಡ ಕಲಿಸಬೇಕು ಎಂದು ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರು ವಿನಂತಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು “ಕನ್ನಡ ರಾಜ್ಯೋತ್ಸವ”ದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದಿನದಿನವೂ ನಾವು ಕನ್ನಡದ ಒಂದಷ್ಟು ಪದಗಳನ್ನು ಕಳಕೊಳ್ಳುವ ಪರಿಸ್ಥಿತಿ ಇದೆ. ಬೆಂಗಳೂರಿನ ಕನ್ನಡಿಗರು ವಿಶಾಲ ಹೃದಯಿಗಳು. ಯಾರಾದರೂ ಕನ್ನಡ ಅಲ್ಪಸ್ವಲ್ಪ ಕಲಿತು ಮಾತನಾಡುತ್ತಿದ್ದರೂ ಅವರು ಕನ್ನಡದಲ್ಲಿ ಮಾತನಾಡಲು ಅವಕಾಶ ಕೊಡದೆ ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ಅದನ್ನು ನಿಲ್ಲಿಸಿ ಕನ್ನಡದಲ್ಲೇ ಮಾತನಾಡಿ ಎಂದು ಮನವಿ ಮಾಡಿದರು. ಕಳೆದ ವರ್ಷ ಯಥೇಚ್ಛವಾಗಿ ಮಳೆ ಬಂದಿತ್ತು. ಈ ವರ್ಷ ಮಳೆಯ ಕೊರತೆ ಆಗಿದೆ. ಕೊರತೆಯ ಸಂದರ್ಭದಲ್ಲೂ ಕಾವೇರಿ ನದಿಯಲ್ಲಿ ನೀರಿಲ್ಲ. ನೀರಿನ ಪ್ರಮಾಣ ಅರ್ಧಕ್ಕೂ ಕಡಿಮೆಯಾಗಿದೆ. ಈ ನಡುವೆ ಸುಪ್ರೀಂ ಕೋರ್ಟಿನ ಸೂಚನೆಯಂತೆ ನಾವು 2600 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಸರಕಾರ ಕಾವೇರಿ…
ಭಾರತೀಯ ಜನತಾ ಪಕ್ಷದ ವಿಚಾರವಾಗಿ ಹೆಚ್ಚು ತಲೆಕೆಡಿಸಿಕೊಳ್ಳಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಬಿಜೆಪಿಯ ಪ್ರತಿಯೊಬ್ಬ ನಾಯಕರೂ ನಮ್ಮ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯವರಿಗೆ ನಮ್ಮ ಪಕ್ಷದ ಮೇಲೆ ಹೆಚ್ಚು ಆಸಕ್ತಿ ಇದ್ದಂತೆ ಕಾಣ್ತಿದೆ. ಅವರೆಲ್ಲರೂ ನಮ್ಮ ಪಕ್ಷಕ್ಕೆ ಬರ್ತಾರೇನೋ. ಅದಕ್ಕಾಗಿ ನಮ್ಮ ಪಕ್ಷದ ಬಗ್ಗೆ ಹೆಚ್ಚು ಚರ್ಚೆ ನಡೆಸುತ್ತಿದ್ದಾರೇನೋ? ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಸಚಿವ ಡಾ.ಜಿ. ಪರಮೇಶ್ವರ್ ಕಿಡಿಕಾರಿದರು.
ಬೆಳಗಾವಿ: ಡಿಕೆ ಶಿವಕುಮಾರ್ ಆದಷ್ಟು ಬೇಗನೆ ಮಾಜಿ ಮಂತ್ರಿ ಆಗುತ್ತಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ ‘ಕೆಲವೊಬ್ಬರು ಕೆಲಸ ಇಲ್ಲದಕ್ಕೆ ಇಂತಹ ಉಸಾಬರಿ ಮಾಡುತ್ತಿರುತ್ತಾರೆ ಎನ್ನುವ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ‘ಮೈ ತುಂಬಾ ಕೆಲಸ ಇದ್ದಾಗ ಯಾವುದೂ ನೆನಪು ಆಗುವುದಿಲ್ಲ. ಕೆಲಸ ಇಲ್ಲದ ಸಮಯದಲ್ಲಿ ಇಂತಹ ವಿಚಾರಗಳು ಬರುತ್ತಿರುತ್ತವೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲು ಹೋಗಲ್ಲ ಎಂದರು.
ಕರ್ನಾಟಕ ರಾಜ್ಯಕ್ಕೆ ಡಾ|| ಅಂಬೇಡ್ಕರ್ ನಾಮಕರಣ ಮಾಡಬೇಕೆಂದು ಮಾಜಿ ಸಚಿವ ಶಾಸಕ ರಮೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ. ಇಂದು ಬೆಳಗಾವಿ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಜಯಪುರ ಜಿಲ್ಲೆಯ ಹೆಸರನ್ನು ಜಗದ್ಗುರು ಬಸವೇಶ್ವರ ಹೆಸರಿನಲ್ಲಿ ಬದಲಾವಣೆ ಮಾಡಬೇಕೆಂದು ಸರ್ಕಾರ ಆಲೋಚನೆಯಲ್ಲಿದೆ ಎಂಬ ಪ್ರಶ್ನೆಗೆ, ಉತ್ತರಿಸಿದ ಮಾಜಿ ಸಚಿವ “ಇತಿಹಾಸ ಓದಿದ್ದೇವೆ. ಆದರೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ಮಧ್ಯದಲ್ಲಿ ಇದ್ದು, ಸಮಾಜ ಬದಲಾವಣೆ ಮಾಡಿರುವಂತಹ ಮಹಾನ್ ಮಾನವತವಾದಿ ಆದ್ದರಿಂದ, ಕರ್ನಾಟಕ ರಾಜ್ಯಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಾಡು ಎಂದು ನಾಮಕರಣ ಮಾಡಲು ನನ್ನ ಆಗ್ರಹ ಇದೆ.” ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೋಲಾರದಲ್ಲಿ ಶ್ವೇತ ಬಣದ ನಾಗರಹಾವು (ಬಿಳಿ ನಾಗರಹಾವು) ಪತ್ತೆಯಾಗಿದೆ. ಕೋಲಾರದ ಮುನೇಶ್ವರ ನಗರದ ರವೀಂದ್ರ ಮನೆಯಲ್ಲಿ 6 ಅಡಿ ಉದ್ಧದ ಶ್ವೇತ ಬಣ್ಣದ ನಾಗರಹಾವು ಕಾಣಿಸಿಕೊಂಡಿತ್ತು. ಅಪರೂಪದ ಬಿಳಿನಾಗರ ಹಾವನ್ನು ನೋಡಲು ಜನ ಮುಗಿಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಉರುಗರಕ್ಷಕ ರವಿ ನಾಗರವನ್ನು ಸುರಕ್ಷಿತವಾಗಿ ರಕ್ಷಿಸಿ, ಕೋಲಾರದ ಅಂತರಗಂಗೆ ಅರಣ್ಯಪ್ರದೇಶದಲ್ಲಿ ಬಿಟ್ಟಿದ್ದಾರೆ.