Author: admin

ಮುಂಬೈನ ವಾಂಖೆಡೆ ಮತ್ತು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ಮತ್ತು ಸೋಮವಾರದಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಗೆಲುವಿನ ಸಂಭ್ರಮಾಚರಣೆಗೆ ಪಟಾಕಿ ಬಳಸುವುದನ್ನು ಬಿಸಿಸಿಐ ನಿಷೇಧಿಸಿದೆ. ಬಾಂಬೆ ಹೈಕೋರ್ಟ್ ಮುಂಬೈನ ವಾಯು ಗುಣಮಟ್ಟವನ್ನು ಗಮನಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ಪ್ರಾರಂಭಿಸಿದ ಬಳಿಕ ಬಿಸಿಸಿಐ ಈ ನಿರ್ಧಾರ ಪ್ರಕಟಿಸಿದೆ. ಮುಂಬೈ ಮತ್ತು ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Read More

ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಓರ್ವ ಗಾಯಗೊಂಡ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಳ್ಳಾರಿ ರಸ್ತೆಯ ಬಿಎಸ್ ಎಫ್ ಗೇಟ್-2ರ ಮುಂಭಾಗ ನಡೆದಿದೆ. ಬಿಎಸ್ ಎಫ್ ಯೋಧ ಸುಧಾಕರ್ (41) ಹಾಗೂ ಕೋಲಾರ ಮೂಲದ ಗಿರೀಶ್ (ಗಣಿ) (32) ಮೃತರು. ಬಿಎಸ್ ಎಫ್ ಯೋಧ ಸುಧಾಕರ್ ಗೇಟ್-2ರ ಮೂಲಕ ಸರ್ವಿಸ್ ರಸ್ತೆಗೆ ಬಂದು ಬಾಗಲೂರು ಕಡೆಗೆ ತೆರಳಲು ದ್ವಿಚಕ್ರ ವಾಹನವನ್ನು ಮುಖ್ಯರಸ್ತೆ ಕಡೆಗೆ ತಿರುಗಿಸಿದ್ದಾರೆ. ಈ ವೇಳೆ ಎರಡೂ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

Read More

ಬೆಂಗಳೂರು: ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಚ್‌ ಎಂಟಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರ ಎಂಜಿನಿಯರ್ ಮೃತಪಟ್ಟಿದ್ದಾರೆ. ಪೀಣ್ಯ 2ನೇ ಹಂತದ ನಿವಾಸಿ ಸುಭಾಷ್(26) ಮೃತರು. ಮಂಗಳವಾರ ಬೆಳಿಗ್ಗೆ ಎಲೆಕ್ಟ್ರಿಕ್ ಬೈಕ್‌ ನಲ್ಲಿ ಎಚ್‌ ಎಂಟಿ ರಸ್ತೆಯಲ್ಲಿ ತೆರಳುತ್ತಿದ್ದರು. ಆಗ ಅತೀ ವೇಗವಾಗಿ ಬಂದ ವಾಹನಕ್ಕೆ ಡಿಕ್ಕಿಯಾಗಿದೆ. ರಕ್ತಸ್ರಾವದಿಂದ ಬಿದ್ದಿದ್ದ ಸುಭಾಷ್, ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಮೃತಪಟ್ಟರು.

Read More

ಬೆಂಗಳೂರು: ಬೆಂಗಳೂರಿನ ಲುಲು ಮಾಲ್‌ ನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ ವ್ಯಕ್ತಿಯ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಸವೇಶ್ವರನಗರ ನಿವಾಸಿ ಅಶ್ವಥ್ ನಾರಾಯಣ್ ಎಂದು ಗುರುತು ಪತ್ತೆಯಾಗಿದೆ. ಆದರೆ ಅಶ್ವಥ್ ನಾರಾಯಣ್ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾನೆ. ಆರೋಪಿ ಪ್ರತಿಷ್ಠಿತ ಮಠಕ್ಕೆ ಸೇರಿದ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ನಿವೃತ್ತನಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮಾಗಡಿ ರೋಡ್ ಪೊಲೀಸರು ಆರೋಪಿಯ ಪತ್ತೆಗೆ ಹುಡುಕಾಟ ಮುಂದುವರೆಸಿದ್ದಾರೆ.

Read More

ಕರ್ನಾಟಕ ಕಲಾವಿದರ ಸಂಘದ ಸದಸ್ಯ, ಗಾಯಕ, ಸಂಗೀತ ಸಂಯೋಜಕ ಮನೋಜ್ ವಸಿಷ್ಠ ಅವರು ನಿಧನರಾಗಿದ್ದಾರೆ. ಅವರಿಗೆ ಸುಮಾರು 35 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕ ಮನೋಜ್ ವಸಿಷ್ಠ ಅವರು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕರ್ನಾಟಕ ಕಲಾವಿದರ ಸಂಘದ ಸದಸ್ಯರೂ ಆಗಿದ್ದ ಮನೋಜ್ ವಸಿಷ್ಠ ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಪಾರ್ಥೀವ ಶರೀರವನ್ನು ಜಯನಗರದ ಆಮಿಟಿ ದೇವಸ್ಥಾನ ಬೇ ಅಪಾರ್ಟೆಂಟ್ ನಲ್ಲಿ ಇಡಲಾಗಿದೆ.

Read More

ಸಾದಹಳ್ಳಿ ಗೇಟ್ ಸಮೀಪದ ಐಟಿಸಿ ಕಾರ್ಖಾನೆ ಎದುರು ಬುಧವಾರ ಬೆಳಿಗ್ಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ದಿನಪತ್ರಿಕೆ ವಿತರಣೆಗೆ ತೆರಳುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೊಣ್ಣಪ್ಪನಹಳ್ಳಿ ಗ್ರಾಮದ ಮನೋಜ್(18) ಮೃತಪಟ್ಟವರು. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಖ್ಯರಸ್ತೆಯ ಪಕ್ಕದಲ್ಲಿರುವ ಸೇವಾ ರಸ್ತೆಯಲ್ಲಿ ಬೆಳಿಗ್ಗೆ 6.30ರ ಸುಮಾರಿಗೆ ಮನೋಜ್ ಪತ್ರಿಕೆ ವಿತರಿಸಲು ಉತ್ತನಹಳ್ಳಿ ಕಡೆಗೆ ತೆರಳುತ್ತಿದ್ದ ಎನ್ನಲಾಗಿದೆ.

Read More

ಬೆಂಗಳೂರು: ಜಾತಿ ನಿಂದನೆ ಆರೋಪದಡಿ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಪುನೀತ್ ಕೆರೆಹಳ್ಳಿ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ ಐಆರ್ ದಾಖಲಾಗಿದೆ. ರಣಧೀರ ಪಡೆಯ ಮುಖಂಡ ಬೈರಪ್ಪ ಹರೀಶ್‌ ಕುಮಾರ್ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ಫೇಸ್‌ ಬುಕ್‌ ನಲ್ಲಿ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಪುನೀತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡಿದ್ದಾರೆ.

Read More

ಬೆಂಗಳೂರು: ಕರ್ತವ್ಯನಿರತ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯ ಎಎಸ್‌ ಐ ಒಬ್ಬರಿಗೆ ನಿಂದಿಸಿದ ಆರೋಪದಡಿ ವಸ್ತ್ರ ವಿನ್ಯಾಸಕ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಸೋಮನ ಬಿದ್ದಪ್ಪ ವಿರುದ್ಧ ಮತ್ತೊಂದು ಎಫ್ ‌ಐಆರ್ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಪೊಲೀಸ್ ಅಧಿಕಾರಿಗೆ ನಿಂದನೆ ಆರೋಪದಡಿ ಈ ಪ್ರಕರಣ ದಾಖಲಾಗಿದೆ. ಈ ಹಿಂದೆ ಇದೇ ಪೊಲೀಸ್ ಠಾಣೆಯಲ್ಲಿ ಅತೀ ವೇಗದ ಕಾರು ಚಾಲನೆ ಹಾಗೂ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.

Read More

ಸಾಮಾಜಿಕ ಮಾಧ್ಯಮದಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಅವಮಾನಿಸಿ ಪೋಸ್ಟ್ ಹಾಕಿದ್ದಾರೆ. ಎಂಬ ಆರೋಪದಡಿ ಬೆಳಗಾವಿ ಜಿಲ್ಲೆ ಸವದತ್ತಿಯ ರತನ್ ಸನಾತನಿ ಎಂಬುವರ ವಿರುದ್ಧ ಎಚ್‌ ಎಸ್‌ಆರ್ ಬಡಾವಣೆ ಸೈಬರ್ ಠಾಣೆಯಲ್ಲಿ ಎಫ್‌ ಐ ಆರ್ ದಾಖಲಾಗಿದೆ. ಆರೋಪಿ, ನಾಥರಾಂ ಗೋಡ್ರೆ ಫೋಟೊ ಬಳಸಿ ಗಾಂಧೀಜಿ ಅವಮಾನಿಸಿದ್ದಾರೆ ಎಂದು ಬೊಮ್ಮನಹಳ್ಳಿ ಕಾಂಗ್ರೆಸ್ ಮುಖಂಡ ಅನಿಲ್ ರೆಡ್ಡಿ ದೂರು ನೀಡಿದ್ದರು. ‘ಸಮಾಜದಲ್ಲಿ ಸಾಮರಸ್ಯ ಕದಡುವ ಪ್ರಯತ್ನ ನಡೆಸಿದ್ದಾರೆ. ಅವರ ಬರಹ ಕೋಮು ಗಲಭೆಗೆ ಪ್ರಚೋದನಕಾರಿ ಆಗಿದೆ. ರತನ್ ಸನಾತನಿ ಅವರನ್ನು ಬಂಧಿಸಬೇಕು’ ಎಂದು ಕೋರಿದ್ದಾರೆ.

Read More

ಭಾರತದ ಕಥೋಲಿಕ ಕ್ರೈಸ್ತರು ಆಚರಿಸುವ ಹಬ್ಬಗಳಲ್ಲಿ ಸಕಲ ಆತ್ಮಗಳ ಹಬ್ಬ ಅಥವಾ ಸಮಾಧಿಗಳ ಹಬ್ಬವೆಂದು ಪ್ರತಿ ವರ್ಷ ನವೆಂಬರ್ ಎರಡರಂದು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ಬನ್ನಿ ಈ ಹಬ್ಬದ ಮಹತ್ವವನ್ನು ತಿಳಿಯೋಣ. ಸಾಮಾನ್ಯವಾಗಿ ನಮ್ಮನ್ನಗಲಿರುವ ನಮ್ಮವರು, ಸತ್ತ ನಂತರ ನಮ್ಮಿಂದ ದೂರ ಉಳಿದಿರುವ ಆತ್ಮಗಳು, ಮತ್ತೆ ಹುಟ್ಟಿಬರುತ್ತಾರೆ ಎನ್ನುವ ನಂಬಿಕೆ ಇದೆ. ಮತ್ತೆ ಹುಟ್ಟದಿದ್ದರು ನಾವು ಅವರನ್ನು ಸೇರುತ್ತೇವೆ ಎನ್ನುವ ವಿಶ್ವಾಸ ಮಾತ್ರ ಇನ್ನು ಉಳಿದಿದೆ. ಹೀಗೆ ಅಗಲಿದವರ ಆತ್ಮಗಳನ್ನು ಪೂಜಿಸುವ ವಿಶೇಷ ಆಚರಣೆಯೊಂದು ಮಾಡುತ್ತಾರೆ .ಅದುವೇ ಸಮಾಧಿಗಳ ಹಬ್ಬ ಅಥವಾ ಆಲ್ ಸೋಲ್ಸ್ ಡೇ. ಈ ದಿನದ ವಿಶೇಷದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಸಮಾಧಿ ಹಬ್ಬ: ಸತ್ತಾಗ ಸಮಾಧಿಗೆ ಹೂವಿನ ಅಲಂಕಾರ ಮಾಡುವುದು ಸಹಜ. ಜೊತೆಗೆ ಮಹಾಲಯ ಅಮಾವಾಸ್ಯೆ ದಿನ ಮೃತರ ಸಮಾಧಿಗೆ ಪೂಜೆ ಮಾಡಿ ಬರುವುದು ಹಿಂದೂ ಸಂಪ್ರದಾಯ ಹಾಗೂ ನಂಬಿಕೆ. ಆದರೆ ಇಡೀ ಸ್ಮಶಾನಕ್ಕೆ ಅಲಂಕಾರ ಮಾಡಿ, ಸಮಾಧಿಗಳನ್ನು ಸಿಂಗಾರ ಮಾಡಿ ಪೂಜೆ ಮಾಡುವ ವಿಶಿಷ್ಟ…

Read More