Author: admin

ತುಮಕೂರಿನ ಇಪಿಎಫ್‌ ಒ, ಪ್ರಾದೇಶಿಕ ಕಚೇರಿ  ನೂತನ ಕಚೇರಿ ಕಟ್ಟಡವನ್ನು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ರಾಮೇಶ್ವರ ತೇಲಿ ಅವರು ನವೆಂಬರ್ 1ರಂದು  ನಡೆದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್  ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ  ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್ ಅವರು ಉಪಸ್ಥಿತರಿದ್ದರು ಎಂದು ತುಮಕೂರು ಪ್ರಾದೇಶಿಕ  ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬೆಂಗಳೂರು: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ಬರುವ ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ಸಂಸ್ಥೆಗೆ (ಕೆ.ಆರ್.ಐ.ಡಿ.ಎಲ್)‌ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆಗೊಂಡಿರುವ 74 ಮಂದಿ ಅಭಿಯಂತರರು ಹಾಗೂ ಸಹಾಯಕರಿಗೆ ಇಂದು ನಡೆದ ಸರಳ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರೂ ಆದ ಸಂಸ್ಥೆಯ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ ನೇಮಕಾತಿ ಆದೇಶಗಳನ್ನು ವಿತರಿಸಿದರು. ನೂತನವಾಗಿ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ಗ್ರಾಮೀಣ ಜನರ ಸೇವೆ ಮಾಡುವ ಅವಕಾಶಗಳಿದ್ದು ಅಭ್ಯರ್ಥಿಗಳು ಶ್ರದ್ಧೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಲು ಈ ಸಂದರ್ಭದಲ್ಲಿ ಸಚಿವರು ಕರೆ ನೀಡಿದರು. ಆಯ್ಕೆಗೊಂಡ ಅಭ್ಯರ್ಥಿಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು. ಸರ್ಕಾರದ ಅನುಮತಿಯಂತೆ ಸಂಸ್ಥೆಯ 16 ವಿವಿಧ ವೃಂದದ 76 ಹುದ್ದೆಗಳನ್ನು ಭರ್ತಿ ಮಾಡಲು ಸಂಸ್ಥೆ ಕ್ರಮ ಕೈಗೊಂಡಿತ್ತು. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿತ್ತು. ಪ್ರಾಧಿಕಾರ ನೇಮಕಾತಿ…

Read More

ಬೆಂಗಳೂರು: ಯಾವುದೇ ದೇಶ ಮತ್ತು ಸಮಾಜದ ಅಭಿವೃದ್ಧಿಯು ಮಹಿಳೆಯರ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದೆ, ಮಹಿಳೆಯರಿಲ್ಲದೆ ವೈಯಕ್ತಿಕ, ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ನಗರದ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಮೊದಲನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತವು ತನ್ನ ಇತಿಹಾಸ ಮತ್ತು ಸಂಸ್ಕೃತಿಯಿಂದಾಗಿ ಇಡೀ ಪ್ರಪಂಚದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಮ್ಮ ದೇಶವು ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ಮಿಲಿಟರಿ ಶಕ್ತಿ ಇತ್ಯಾದಿಗಳಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಸೇರಿದೆ. ಭಾರತೀಯ ಇತಿಹಾಸದಲ್ಲಿ ಮತ್ತು ನಮ್ಮ ಧರ್ಮಗ್ರಂಥಗಳು ಮತ್ತು ಪುರಾಣಗಳಲ್ಲಿ ಮಹಿಳೆಯರಿಗೆ ಗೌರವ ನೀಡುವ ಉಲ್ಲೇಖವಿದೆ. ಲಿಂಗ ಸಮಾನತೆಯ ತತ್ವವನ್ನು ಭಾರತೀಯ ಸಂವಿಧಾನದ ಪೀಠಿಕೆ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ನಿರ್ದೇಶನ ತತ್ವಗಳಲ್ಲಿ ಪ್ರತಿಪಾದಿಸಲಾಗಿದೆ. ಸಂವಿಧಾನವು ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ಒದಗಿಸುತ್ತದೆ ಮತ್ತು ಮಹಿಳೆಯರ ಪರವಾಗಿ ‘ದೃಢೀಕರಣ’ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಅಧಿಕಾರ ನೀಡುತ್ತದೆ ಎಂದು…

Read More

ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕದ ಮೇಲೆ ದ್ವೇಷ ಇಟ್ಟುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ,ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕದ ಮೇಲೆ ದ್ವೇಷ ಇಟ್ಟುಕೊಂಡಿದೆ, ಯಾವಾಗಲೂ ತಮಿಳುನಾಡಿಗೆ ನೀರು ಬಿಡಿ ಅಂತ ಹೇಳುತ್ತಿದೆ, ಪ್ರಾಧಿಕಾರ ನಮ್ಮ ಅಫೀಲ್ ಕೇಳ್ತಾನೆ ಇಲ್ಲ ಪ್ರಾಧಿಕಾರ ನಮ್ಮ ಪರ ಇಲ್ಲ ಅಂತ ನನಗೆ ಅನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೊದಲಿಂದಲೂ ಸಹ ಪ್ರಾಧಿಕಾರ ನಮ್ಮ ಪರ ನಿಂತಿಲ್ಲ, ಇದನ್ನೆಲ್ಲ ನೋಡಿದರೆ ಕರ್ನಾಟಕದ ಮೇಲೆ ಪ್ರಾಧಿಕಾರ ದ್ವೇಷ ಸಾಧಿಸುತ್ತಿದೆ ಎನಿಸುತ್ತದೆ, ನಮಗೆ ನೀರಿಲ್ಲ ಇನ್ನೂ ತಮಿಳುನಾಡಿಗೆ ಎಲ್ಲಿಂದ ನೀರು ಬಿಡುವುದು, ಸಿಎಂ ಕೂಡ ಅದನ್ನೇ ಹೇಳಿದ್ದಾರೆ.ನಮ್ಮ ರೈತರನ್ನ ಬಲಿ ಕೊಡಲ್ಲ ಅಂತ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು. ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅವರ ಅನಿಸಿಕೆ ಹೇಳಿದ್ದಾರೆ. ನನಗೇನು ಗೊತ್ತಿಲ್ಲ, ಹೈ ಕಮಾಂಡ್ ಇದೆ ತೀರ್ಮಾನ ಮಾಡುತ್ತೆ, ಕಾಂಗ್ರೆಸ್…

Read More

ಉಡುಪಿ : ಗೃಹ ಲಕ್ಷ್ಮಿ ಯೋಜನೆಯ ಹಣ ವಿತರಣೆಯಲ್ಲಿ ದೊಡ್ಡ ಸಮಸ್ಯೆ ಏನಿಲ್ಲ. ಬ್ಯಾಂಕಿನಲ್ಲಿ ಸಮಸ್ಯೆ ಇದ್ದಲ್ಲಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯಲು ಸಲಹೆ ನೀಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಶೇ. 88 ಜನರಿಗೆ ಹಣ ತಲುಪಿದೆ. ಸಮಸ್ಯೆಯನ್ನು ಬಗೆಹರಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು. ಎರಡನೇ ರಾಜಧಾನಿಯಾಗಲು ಬೆಳಗಾವಿ ಎಲ್ಲ ಮೂಲಭೂತ ಸೌಕರ್ಯ ಹಾಗೂ ಅರ್ಹತೆಗಳನ್ನು ಹೊಂದಿದ್ದು, ಆ ದಿಸೆಯಲ್ಲಿ ಸರಕಾರ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಿದೆ. ಬೆಳಗಾವಿಯಲ್ಲಿ ಈಗಾಗಲೆ ಸುವರ್ಣ ವಿಧಾನಸೌಧವಿದೆ. ವಿಮಾನ ನಿಲ್ದಾಣವಿದೆ. ಬಹು ವಿಶಾಲವಾದ ಜಿಲ್ಲೆಯಾಗಿದ್ದು, 18 ಶಾಸಕರನ್ನು ಹೊಂದಿದೆ. ಹಾಗಾಗಿ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು. ಎರಡನೇ ರಾಜಧಾನಿಯಾಗಿ ಬೆಳಗಾವಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು. ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರತಿಭಟನೆ ಹಾಗೂ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ…

Read More

ಬೆಂಗಳೂರು: ಅಂತಾರಾಜ್ಯ ಅಡಿಕೆ ವ್ಯಾಪಾರಿಯ 1 ಕೋಟಿ ರೂ. ಹಣ ಕಳವು ಪ್ರಕರಣ ಆರೋಪಿಗಳನ್ನು  ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲಕ ಸಂತೋಷ್‌ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಅ.7 ರಂದು ಅಂತಾರಾಜ್ಯ ಅಡಿಕೆ ವ್ಯಾಪಾರಿ ಹೆಚ್‌.ಎಸ್. ಉಮೇಶ್‌ ಚಿತ್ರದುರ್ಗದಿಂದ ವಿವಿಧ ಜಿಲ್ಲೆಗಳ ಅಡಿಕೆ ಖರೀದಿಗಾಗಿ  ಕಾರಿನಲ್ಲಿನೀಲಿ ಬಣ್ಣದ ಬ್ಯಾಗಿನಲ್ಲಿ ಬರೋಬ್ಬರಿ 1 ಕೋಟಿ ರೂ. ಹಣವನ್ನು ಕಾರಿನ ಡಿಕ್ಕಿಯಲ್ಲಿ ತಂದಿದ್ದರು. ಊಟಕ್ಕೆಂದು ಗಾಂಧೀನಗರದ ಹೋಟೆಲ್‌ ಮುಂಭಾಗ ಕಾರು ನಿಲ್ಲಿಸಿದ್ದರು. ನಂತರ ಚಂದ್ರಾಲೇಔಟ್, ದಾಬಸ್ ಪೇಟೆ ಬಳಿಯೂ ಕಾರು ನಿಲ್ಲಿಸಿದ್ದರು. ಸಂಜೆ 7:45 ರ ವೇಳೆಗೆ ಚಿತ್ರದುರ್ಗದ ಭೀಮಸಮುದ್ರದ ಅಂಗಡಿಗೆ ತೆರಳಿ ಕಾರಿನ ಡಿಕ್ಕಿ ಪರಿಶೀಲಿಸಿದಾಗ ಕಳವು ಬೆಳಕಿಗೆ ಬಂದಿತ್ತು. ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸರಿಗೆ  ದೂರು ನೀಡಲಾಗಿತ್ತು. ಶಿರಾ, ತುಮಕೂರು ಮಾರ್ಗವಾಗಿ ಬೆಂಗಳೂರಿನ ಗಾಂಧೀ‌ನಗರಕ್ಕೆ ಬಂದಿದ್ದ ವೇಳೆ ಅಡಿಕೆ ವ್ಯಾಪಾರಿ ಉಮೇಶ್ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನಲೆ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್‌…

Read More

ದಾಸವಾಳದ ಹೂವುಗಳನ್ನು ಕೂದಲಿನ ಆರೋಗ್ಯಕ್ಕಾಗಿ ಬಳಸಲಾಗುತ್ತದೆ. ಕೂದಲಿನ ಹೊರತಾಗಿ, ದಾಸವಾಳವು ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಹೂವಿನಿಂದ ತಯಾರಿಸಿದ ಟೀ ಕುಡಿಯುವುದರಿಂದ ಶುಗರ್, ಆತಂಕ ಮತ್ತು ಅಧಿಕ ಬಿಪಿ ಕಡಿಮೆಯಾಗುತ್ತದೆ. ಮೈಗ್ರೇನ್, ಮೊಡವೆ ಮತ್ತು ವಸಡು ಸಮಸ್ಯೆಗಳು ದೂರವಾಗುತ್ತವೆ. ಒಂದು ಲೋಟ ನೀರಿಗೆ ಒಂದು ದಾಸವಾಳದ ಹೂವು, ಒಂದು ಚಮಚ ಕರಿಮೆಣಸಿನ ಪುಡಿ, ಗ್ರಾಂ ದಾಲ್ಟಿನ್ನಿ ಪುಡಿಯನ್ನು ಸೇರಿಸಿ ಮತ್ತು ಅರ್ಧ ಗ್ಲಾಸ್ ಆಗುವವರೆಗೆ ಕುದಿಸಿ ದಾಸವಾಳದ ಚಹಾವನ್ನು ತಯಾರಿಸಲಾಗುತ್ತದೆ.

Read More

ಅಮೆರಿಕದ ಲಾರೆನ್ಸ್ ಫಾಸೆಟ್ ಅವರು ಈ ವರ್ಷದ ಸೆಪ್ಟೆಂಬರ್ ‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಹಂದಿ ಹೃದಯವನ್ನು ಅಳವಡಿಸಿದರು. ಹಂದಿಯ ಹೃದಯವು ಒಂದು ತಿಂಗಳು ಚೆನ್ನಾಗಿ ಕೆಲಸ ಮಾಡಿತು ಮತ್ತು ನಂತರ ನಿಧಾನವಾಗಿ ಸಹಕರಿಸುವುದನ್ನು ನಿಲ್ಲಿಸಿತು. ಹಂದಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ 40 ದಿನಗಳ ನಂತರ ಸಾವನ್ನಪ್ಪಿದ್ದಾನೆ. ಹಿಂದೆ, ಮೊದಲ ಕಸಿ ಮಾಡಿದ ಹಂದಿ ಹೃದಯವೂ 2 ತಿಂಗಳ ನಂತರ ಸತ್ತಿತು. ಈ ಶಸ್ತ್ರಚಿಕಿತ್ಸೆಗೆ ಒಳಗಾದ ಎರಡನೇ ವ್ಯಕ್ತಿ ಲಾರೆನ್ಸ್ ಈಗ ಸಾವನ್ನಪ್ಪಿದ್ದಾರೆ.

Read More

ಬೆಂಗಳೂರು: ಸಿದ್ದರಾಮಯ್ಯಗೆ ಸರ್ಕಾರದ ಮೇಲೆ ಹಿಡಿತ ಇಲ್ಲ. ಸಿದ್ದರಾಮಯ್ಯ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆರು ತಿಂಗಳಾದರೂ ಮುಂದೆ ಹೋಗುತ್ತಿಲ್ಲ . ಸರ್ಕಾರದ ಚಕ್ರಗಳಲ್ಲಿ ಗಾಳಿ ಇಲ್ಲ, ಮುಂದೆ ಹೋಗುತ್ತಿಲ್ಲ. ಸಿದ್ದರಾಮಯ್ಯಗೆ ಸರ್ಕಾರದ ಮೇಲೆ ಹಿಡಿತ ಇಲ್ಲ. ಸಿದ್ದರಾಮಯ್ಯ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದಾರೆ .ದಿನ ಬೆಳಿಗ್ಗೆಯಾದರೆ  ಕಾಂಗ್ರೆಸ್‌ ನಾಯಕರು ಕಚ್ಚಾಡುತ್ತಾರೆ .ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ ಆಗಿದೆ. ಉಚಿತ ವಿದ್ಯುತ್ ಕೊಡ್ತೀವಿ ಅಂತ ಹೇಳಿ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಬರ ಪೀಡಿತ ಪ್ರದೇಶಗಳಿಗೆ ಸಿಎಂ, ಸಚಿವರು ಹೋಗಿಲ್ಲ. ಶಾಸಕರಿಗೆ ಕೇವಲ 50 ಲಕ್ಷ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಎಸ್ಸಿ, ಎಸ್ಟಿ ನಿಗಮಗಳಿಗೆ ಹಣ ಕೊಟ್ಟಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್ ಸಂಪರ್ಕದ ಖರ್ಚು ರೈತನೇ ಭರಿಸಬೇಕು ಎಂಬ ಆದೇಶ ಹೊರಡಿಸಲು ಸರ್ಕಾರ ಹೊರಟಿದೆ. ಉಚಿತ…

Read More

ತುರುವೇಕೆರೆ: ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆಗಳು ಅಗತ್ಯವಾಗಿದೆ ಎಂದು ಶಾಸಕ ಎಂ ಟಿ ಕೃಷ್ಣಪ್ಪ ಹೇಳಿದರು. ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಬೆಂಗಳೂರು ಕ್ಲಿನಿಕ್ ಮಾಲೀಕತ್ವದ ಡಾ. ಶಶಿಧರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಆಸ್ಪತ್ರೆಗಳ ಸೇವೆಗಳು ಉತ್ತಮವಾಗಿದ್ದರೂ ಸಹ, ಕೆಲವೊಮ್ಮೆ ಖಾಸಗಿ ಆಸ್ಪತ್ರೆಗಳ ತುರ್ತು ಸೇವೆಗಳು ಸಹ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಖಾಸಗಿ ಆಸ್ಪತ್ರೆಗಳು ತೆರೆದಿದ್ದು, ಎಲ್ಲರೂ ಸಹ ಬಡವರಿಗೆ, ಸಾರ್ವಜನಿಕರಿಗೆ, ರೈತರಿಗೆ, ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು ಎಂದು ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಮತ್ತು ಬೆಂಗಳೂರು ಕ್ಲಿನಿಕ್ ಡಿ. ಶಶಿಧರ್ ರವರಿಗೆ ಶುಭ ಹಾರೈಸುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಡಾ. ಶ್ರೀನಿವಾಸ್. ಡಾ.ವೀಣಾ ಯೋಗೇಶ್. ಮಂಜುನಾಥ್ ಗ್ರಾ.ಪಂ. ಅಧ್ಯಕ್ಷರು. ಹೆಡಗಿಹಳ್ಳಿ ವಿಶ್ವನಾಥ್ ತಾಲೂಕು…

Read More