Author: admin

ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್ (X) ಅನ್ನು ಡೇಟಿಂಗ್ ವೇದಿಕೆಯಾಗಿ ಪರಿವರ್ತಿಸಲಾಗುವುದು ಎಂದು ಕಂಪನಿಯ ಮಾಲೀಕ ಎಲೋನ್ ಮಸ್ಕ್ ಘೋಷಿಸಿದ್ದಾರೆ. ಎಕ್ಸ್ ಅನ್ನು ಉದ್ಯೋಗ ನಿಯೋಜನೆಗಳಿಗೆ ವೇದಿಕೆಯಾಗಿ ಬದಲಾಯಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. X CEO ಲಿಂಡಾ ಯಾಕಾರಿನೊ ಮತ್ತು ಕಂಪನಿಯ ಉದ್ಯೋಗಿಗಳೊಂದಿಗಿನ ಸಭೆಯಲ್ಲಿ, ಎಲೋನ್ ಮಸ್ಕ್ ಅವರು ಲಿಂಕ್ಸ್ ಇನ್, ಯೂಟ್ಯೂಬ್ & ಫೇಸ್ಟೈಮ್ ಸೇರಿದಂತೆ ಡೇಟಿಂಗ್ ಅಪ್ಲಿಕೇಶನ್‌ಗಳೊಂದಿಗೆ ಹೇಗೆ X ಸ್ಪರ್ಧಿಸಲು ಬಯಸುತ್ತದೆ ಎಂಬುದನ್ನು ವಿವರಿಸಿದರು.

Read More

ಉತ್ತರ ಪ್ರದೇಶದ ಬಂದಾ ಎಂಬಲ್ಲಿ ದಲಿತ ಮಹಿಳೆಯ ಅತ್ಯಾಚಾರ ಮಾಡಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ದಲಿತ ಮಹಿಳೆ (40) ರಾಜ್‌ ಕುಮಾರ್ ಶುಕ್ಲಾ ಎಂಬುವರ ಮನೆಗೆ ಹಿಟ್ಟಿನ ಗಿರಣಿಯನ್ನು ಸ್ವಚ್ಛಗೊಳಿಸಲು ಹೋಗಿದ್ದರು. ಮನೆಗೆ ಬಾರದೆ ಇದ್ದಾಗ ಸಂತ್ರಸ್ತೆಯ ಮಗಳು ಅಲ್ಲಿಗೆ ಹೋದ ವೇಳೆ ಮನೆಯ ಕೊಠಡಿಯೊಂದರಲ್ಲಿ ಕಿರುಚಾಟ ಕೇಳಿ ಬಂದಿದ್ದು, ಬಾಗಿಲು ತೆರೆದು ನೋಡಿದಾಗ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಎಂದು ಮಗಳು ಹೇಳಿದ್ದಾಳೆ. ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Read More

ಬೆಂಗಳೂರು: ಬೆಂಗಳೂರಿನಲ್ಲಿ ಮೂರು ಬೀದಿನಾಯಿಗಳು ಕಣ್ಮರೆಯಾಗಿದ್ದು, ಕಾಣೆಯಾದ ಬೀದಿ ನಾಯಿಗಳನ್ನು ಹುಡುಕಿ ಕೊಡಬೇಕೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಕುಮಾರ ಪಾರ್ಕ್ ಬಳಿಯ ಕಂಪನಿಯೊಂದರ ಬಳಿ ಇದ್ದ ಬೀದಿ ನಾಯಿಗಳು ಕಾಣೆಯಾದ ಕುರಿತು ನಾಯಿಗಳಿಗೆ ಊಟ ಹಾಕಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಪ್ರಕಾಶ್ ಎಂಬುವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯ ವ್ಯಕ್ತಿಗಳು ನಾಯಿಗಳನ್ನ ಬೇರೆಡೆ ತೆಗೆದುಕೊಂಡು ಹೋಗಿ ಬಿಟ್ಟಿರಬೇಕು ಎಂದು ಪ್ರಕಾಶ್ ಸಂಶಯ ವ್ಯಕ್ತಪಡಿಸಿದ್ದಾರೆ.

Read More

ಬೆಂಗಳೂರು: ಬೆಂಗಳೂರಿನ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆ ರಾಜ್ಯೋತ್ಸವದ ದಿನ ಕಾರ್ಯಾಚರಣೆ ವೇಳೆ ಮೃತಪಟ್ಟಿದೆ. ಅರಣ್ಯ ಅಧಿಕಾರಿಗಳು ಹೊಡೆದ ಗುಂಡು ಚಿರತೆಯ ಮರಣಕ್ಕೆ ಕಾರಣವಾಗಿದ್ದು ಸ್ವತಃ ಅರಣ್ಯ ಅಧಿಕಾರಿಗಳೇ ಇದನ್ನು ಒಪ್ಪಿಕೊಂಡಿದ್ದಾರೆ. ಚಿರತೆ ಸಾವಿಗೀಡಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅನೇಕ ಜನ ಚಿರತೆಗಾಗಿ ನೋವಿನಿಂದ ಬರೆದುಕೊಳ್ಳುತ್ತಿದ್ದಾರೆ. ಕೆಲವರಂತೂ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

Read More

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಬೋರ್ ವೆಲ್ ಕೊರೆಯೋರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಜಲಮಂಡಳಿ ಮಹತ್ವದ ಕ್ರಮ ಕೈಗೊಂಡಿದೆ. ಅನುಮತಿ ಪಡೆಯದೇ ಬೋರ್ ವೆಲ್ ಕೊರೆದರೆ ಅಂತವರ ವಿರುದ್ಧ ಪೊಲೀಸರಿಗೆ ದೂರು ನೀಡಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ. ಸಿಲಿಕಾನ್ ಸಿಟಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರೋ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಜೊತೆಗೆ ಕಾವೇರಿ ನೀರಿನ ಸಂಕಷ್ಟ ಎದುರಾದ ಬೆನ್ನಲ್ಲೇ ಬೋರ್ ವೆಲ್ ಕೊರೆಯುತ್ತಿರೋರ ಸಂಖ್ಯೆ ಹೆಚ್ಚಾಗಿದೆ. ಮೇಡಹಳ್ಳಿಯ ಸಾಯಿ ಬಡಾವಣೆಯಲ್ಲಿ ಅನುಮತಿ ಇಲ್ಲದೆ ಬೋರ್ ವೆಲ್ ಕೊರೆಯುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿ ಠಾಣೆಗೆ ದೂರು ನೀಡಿದೆ. ದೂರು ಕೊಟ್ಟು ಬೋರ್‌ವೆಲ್ ಕೊರೆಯೋದನ್ನು ನಿಲ್ಲಸಿ ಅನಧಿಕೃತವಾಗಿ ಕೊರೆಯುವವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಆಗ್ರಹಿಸಿದೆ. ನೀರಿಗೆ ಸಂಕಷ್ಟ ಎದುರಾದ ಬೆನ್ನಲ್ಲೇ ಬೋರ್‌ವೆಲ್ ಕೊರೆಯುವ ಹಾವಳಿ ಜಲಮಂಡಳಿ ನಿದ್ದೆಗೆಡಿಸಿದೆ. ಅಂತರ್ಜಲದ ಸಮಸ್ಯೆಯಿಂದಾಗಿ ಬೋರ್‌ವೆಲ್ ಕೊರೆಯುವವರ ಸಂಖ್ಯೆಯೂ ಹೆಚ್ಚಿದೆ. ಇದರಿಂದ ಜಲಮಂಡಳಿ ಕ್ರಮ ಕೈಗೊಳ್ಳುತ್ತಿದೆ. ವರದಿ: ಆಂಟೋನಿ ಬೇಗೂರು

Read More

ಬೆಂಗಳೂರು: ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ, ಬದಲಿಗೆ ಕೆಲಸ ಮಾಡುವ ಸಮಯವನ್ನು ಹೆಚ್ಚು ಉಪಯುಕ್ತವಾಗಿ ಕಳೆದು, ಉಳಿದ ಸಮಯವನ್ನು ನಿಮ್ಮ ಕುಟುಂಬದೊಂದಿಗೆ ಕಳೆಯಿರಿ ಎಂದು ನ್ಯಾ.ಸಂತೋಷ್ ಹೆಗ್ಡೆ ಸಲಹೆ ನೀಡಿದರು. ಬೆಂಗಳೂರಿನಲ್ಲಿ ಆಯೋಜಿಸಿದ್ದ ಟ್ರೇಡರ್ಸ್ ಮೀಟಪ್, ಎಜುಕೇಷನ್ ಹೀರೋಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಚ್ಚು ಸಮಯ ಕೆಲಸ ಮಾಡುವುದು ಹೆಚ್ಚು ಉತ್ಪಾದಕತೆ ಎನ್ನುವುದು ತಪ್ಪು ಕಲ್ಪನೆ. ಕೆಲಸ ಮಾಡುವ ಅವಧಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದಷ್ಟೇ ಮುಖ್ಯ ಎಂದರು.

Read More

ಬೆಂಗಳೂರು: ಆರ್ಗಾನಿಕ್ ಚೀಲದ ಹೆಸರಲ್ಲಿ ಕೋಟಿ ಕೋಟಿ ವಂಚನೆ ಮಾಡಿರುವ ಆರೋಪದ ಮೇಲೆ ಎನ್ವಿ ಗ್ರೀನ್ ಕಂಪೆನಿ ಮಾಲೀಕನ ವಿರುದ್ಧ ಎಫ್‌ಐಆ‌ ದಾಖಲು ಮಾಡಲಾಗಿದೆ. ಎನ್ವಿ ಗ್ರೀನ್ ಮಾಲೀಕ ಅಶ್ವತ್ ಹೆಗ್ಡೆ ವಿರುದ್ಧ ಈಗ ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಶ್ವಥ್ ಹೆಗ್ಡೆ ವಿರುದ್ಧ ಉದ್ಯಮಿ ನಿಲಿಮಾ ಅವರು ದೂರು ನೀಡಿದ್ದಾರೆ. ಪ್ಲಾಸ್ಟಿಕ್ ಬದಲು ಆರ್ಗಾನಿಕ್ ಬ್ಯಾಗ್ ಕಂಡು ಹಿಡಿದಿರುವುದಾಗಿ ಹೇಳಿಕೊಂಡಿದ್ದ ಅಶ್ವತ್ ಹೆಗ್ಡೆ ಈ ಬಗ್ಗೆ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿದ್ದರು.

Read More

ವನ್ಯಜೀವಿಗಳನ್ನು ಬೇಟೆ ಆಡೋದು, ಸ್ವಾಧೀನ ಪಡಿಸಿಕೊಳ್ಳೋದು, ಇಟ್ಟು ಕೊಳ್ಳೋದು ಸೇರಿದಂತೆ ಖರೀದಿಸೋದು, ಸಾಗಾಣೆ ಮಾಡೋದು ಅಲ್ಲದೇ ಮಾಂಸ ಮಾರಾಟ, ಭಕ್ಷಣೆ ಕೂಡ ಅಪರಾಧವೆಂದು ರಾಜ್ಯ ಸರ್ಕಾರ ತಿಳಿಸಿದೆ. ವನ್ಜೀವಿಗಳ ವಸ್ತುಗಳಾದಂತ ಕೊಂಬು, ಚರ್ಮ, ಟ್ರೋಫಿಗಳು, ಹಲ್ಲು, ಗೊರಸು ಅಥವಾ ಇವುಗಳಿಂದ ತಯಾರಾದಂತ ಆಲಂಕಾರಿಕ ವಸ್ತುಗಳ ವ್ಯಾಪಾರ, ಉಡುಗೋರೆ ನೀಡೋದು, ಪಡೆಯೋದು, ಖರೀದಿಸೋದು, ಸಾಗಾಟ ಮಾಡೋದು, ಇನ್ನೊಬ್ಬರಿಗೆ ವರ್ಗಾಯಿಸೋದು ಕೂಡ ಅಪರಾಧ ಎಂದು ರಾಜ್ಯ ಅರಣ್ಯ ಇಲಾಖೆ ನೀಡಿದೆ.

Read More

ಕಬ್ಬನ್ ಉದ್ಯಾನವನ್ನು ಸಂರಕ್ಷಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂರಕ್ಷಣಾ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಮಿತಿಯು 33 ಸದಸ್ಯರನ್ನು ಒಳಗೊಂಡಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು, ತಜ್ಞರು, ವಾಯುವಿಹಾರಿಗಳು ಮತ್ತು ಪರಿಸರವಾದಿ ಇದ್ದಾರೆ. ಉದ್ಯಾನದ ಆವರಣದಲ್ಲಿ ನಡೆಯುವ ಚಟುವಟಿಕೆಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಂಸ್ಥೆಗಳು ಬದ್ಧರಾಗಬೇಕು ಎಂದು ತಿಳಿಸಿದೆ.

Read More

ಬೆಂಗಳೂರು: ಬೆಂಗಳೂರಿನಲ್ಲಿ ಮನನೊಂದು ಗೃಹಿಣಿ ಆತ್ಮಹತ್ಯೆ ಪ್ರಕರಣ ಸಂಬಂಧ ಮೃತ ಐಶ್ವರ್ಯ ಪತಿ ರಾಜೇಶ್ ಸೇರಿ ಐವರು ಆರೋಪಿಗಳನ್ನ ಗೋವಿಂದರಾಜನಗರ ಪೊಲೀಸರು ಬಂಧನ ಮಾಡಿದ್ದಾರೆ. ಮಾವ ಗಿರಿಯಪ್ಪ, ಅತ್ತೆ ಸೀತಾ, ಪತಿ ರಾಜೇಶ್, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಿನ್ ರನ್ನ ಬಂಧನ ಮಾಡಿದ್ದಾರೆ. ಸೊಸೆ ಸುಸೈಡ್ ಬಳಿಕ ಗೋವಾ, ಮುಂಬೈನಲ್ಲಿ ಪತಿ ಮನೆಯ ಸದಸ್ಯರು ಪಾರ್ಟಿ ಮಾಡ್ತಿದ್ರು. ಮನೆಯಲ್ಲಿ ಯಾರು ಇಲ್ಲದ ವೇಳೆ ಪ್ಯಾನಿಗೆ ನೇಣು ಬಿಗಿದುಕೊಂಡು ಗೃಹಿಣಿ ಸುಸೈಡ್ ಮಾಡಿಕೊಂಡಿದ್ದಾಳೆ.

Read More