Subscribe to Updates
Get the latest creative news from FooBar about art, design and business.
- ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!
- ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
- ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ
- ತಿಪಟೂರು: ಜು.10ರಂದು ಮೀನು ಕೃಷಿಕರ ದಿನಾಚರಣೆ
- ಸಮಾನತೆಯ ಆಡಳಿತ, ಶಾಂತಿ ಕಾಪಾಡುವ ಹೊಣೆ ಪಂಚಾಯತ್ ಆಡಳಿತಾಧಿಕಾರಿಗಳ ಮೇಲಿದೆ: ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಡಾ.ಜಿ.ಪರಮೇಶ್ವರ ಕರೆ
- 175 ನೇರ ಪಾವತಿ ಪೌರಕಾರ್ಮಿಕರಿಗೆ ಆದೇಶ ಪತ್ರ: ತುಮಕೂರನ್ನು ದೇಶಕ್ಕೆ ಮಾದರಿ ನಗರವನ್ನಾಗಿಸೋಣ: ಡಿಸಿಎಂ ಡಾ.ಜಿ. ಪರಮೇಶ್ವರ
- ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ ಪತಿ ಬಂಧನ
- ಕೋಟಾಗುಡ್ಡದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಚೇತನ್ ಬಾಬು ಸ್ಪಂದನೆ: ಟ್ಯಾಂಕರ್ ಮೂಲಕ ನೀರು ಪೂರೈಕೆ
Author: admin
ಹಾಸನ: ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ನಡುವೆ ಗಲಾಟೆ ಆರಂಭವಾಗಿ ಗಲಾಟೆ ವಿಕೋಪಕ್ಕೆ ತಿರುಗಿ, ಪತಿ-ಪತ್ನಿಯನ್ನೇ ಕೊಂದು ಬಿಟ್ಟ. ಆ ನಂತರ ಮೃತದೇಹ ಯಾರಿಗೂ ತಿಳಿಯದಂತೆ ಮಣ್ಣಿನಲ್ಲಿ ಹೂತಿಟ್ಟು, ಊರು ಬಿಟ್ಟಿದ್ದ. ಆದರೆ ಮೂರು ತಿಂಗಳ ಬಳಿಕ ಬೀದಿ ನಾಯಿಗಳಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಂತಿವಾಸು(28) ಹತ್ಯೆಯಾದವಳು. ಪವನ್ ಕುಮಾರ್ ಆರೋಪಿಯಾಗಿದ್ದಾನೆ. ಮೂರು ತಿಂಗಳ ಹಿಂದೆ ಪವನ್ ಕುಮಾರ್ ಹಾಗೂ ಶಾಂತಿವಾಸು ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಪವನ್ ಕುಮಾರ್ ಪತ್ನಿ ಶಾಂತಿವಾಸು ಮೇಲೆ ಹಲ್ಲೆ ಮಾಡಿದ್ದ. ಗಂಭೀರ ಗಾಯಗೊಂಡಿದ್ದ ಶಾಂತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪತ್ನಿ ಮೃತಪಟ್ಟಿದ್ದಕ್ಕೆ ಹೆದರಿದ ಪವನ್ ಕುಮಾರ್ ಕೃತ್ಯ ಹೊರಗೆ ಬಂದರೆ ಜೈಲು ಸೇರುವುದು ಗ್ಯಾರಂಟಿ ಎಂದು ನೆನೆಸಿ ಆತನ ಕ್ರಿಮಿನಲ್ ಮೈಂಡ್ ಸಕ್ರಿಯವಾಗಿತ್ತು. ಹೇಗಾದರೂ ಸರಿ ಇದರಿಂದ ಬಚಾವ್ ಆಗಬೇಕು ಎಂದಕೊಂಡವನು ಮನೆಯಿಂದ ಸಮೀಪವಿರುವ ಹಳ್ಳದ ಪಕ್ಕದ ಗುಂಡಿಯಲ್ಲಿ ಮಣ್ಣು ತೆಗೆದು ಶವನ್ನು ಹೂತು…
ಹುಬ್ಬಳ್ಳಿ: ದಾಂಪತ್ಯದಲ್ಲಿ ಕಲಹ ಮೂಡಿದ್ದು, ಪೊಲೀಸರ ಸಂಧಾನಕ್ಕೆ ಒಪ್ಪದೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನಿಖಲ್ (28) ಆತ್ಮಹತ್ಯೆ ಮಾಡಿಕೊಂಡ ಪತಿ. 11 ತಿಂಗಳ ಹಿಂದೆ ನಿಖಿಲ್ ಮತ್ತು ಪ್ರೀತಿ ವಿವಾಹವಾಗಿತ್ತು. ಆದರೆ ದಂಪತಿ ನಡುವೆ ಆರಂಭದಿಂದಲೂ ಸಾಮರಸ್ಯ ಮೂಡದೆ ವೈಮನಸ್ಸು ಬೆಳೆದು ನಿತ್ಯ ಜಗಳವಾಡುತ್ತಿದ್ದರು. ಇದರಿಂದಾಗಿ ಪ್ರೀತಿ ತವರು ಮನೆಗೆ ಹೋಗಿದ್ದಳು. ಪ್ರೀತಿ ಮತ್ತು ಕುಟುಂಬಸ್ಥರು ನಿಖಿಲ್ ನನ್ನು ಕೇಶ್ವಾಪುರ ಠಾಣೆಗೆ ಕರೆಯಿಸಿದ್ದರು. ಠಾಣೆಯಲ್ಲಿ ಪೊಲೀಸರು ನಿಖಲ್ ಗೆ ಮಾನಸಿಕವಾಗಿ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಕೇಶ್ವಾಪುರ ಪೊಲೀಸರು ನಿಖಲ್ ಗೆ ಒಂದೇ ದಿನದಲ್ಲಿ 2 ಲಕ್ಷ ರೂ. ನೀಡುವಂತೆ ತಾಕೀತು ಮಾಡಿದ್ದರು. ಇದರಿಂದ ಮನನೊಂದು ಮನೆಗೆ ಬಂದ ನಿಖಿಲ್, ಇಂದು ಬೆಳಗಿನ ಜಾವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೈಸೂರು ಪೊಲೀಸ್ ಬಡಾವಣೆ ರಿಂಗ್ ರೋಡ್ ಬಳಿ ಬೈಕ್ ಹಾಗೂ ಬುಲೆರೋ ವಾಹನ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಅಪಘಾತದ ನಂತರ ಬುಲೆರೋ ವಾಹನದ ಚಾಲಕ ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿದ್ದಾರ್ಥ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ಸಿದ್ದಾರ್ಥ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿ ಆಗಿರುವ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ತೂತುಕುಡಿ: ಮೂರು ದಿನಗಳ ಹಿಂದೆಯಷ್ಟೇ ಮನೆಯವರ ಅಪೇಕ್ಷೆಗೆ ವಿರುದ್ಧವಾಗಿ ಮನೆಯಿಂದ ಓಡಿಹೋಗಿ ಮದುವೆಯಾಗಿದ್ದ ಜೋಡಿಯನ್ನು, ಗುರುವಾರ ರಾತ್ರಿ ತೂತುಕುಡಿ ಪಟ್ಟಣದ ಮುರುಗೇಶನ್ ನಗರದಲ್ಲಿ, ಐವರು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡ ಹತ್ಯೆ ಮಾಡಿದೆ. ಈ ಕೊಲೆಯಲ್ಲಿ ಮಹಿಳೆಯ ಕುಟುಂಬದವರ ಕೈವಾಡವಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪೊಲೀಸರ ಪ್ರಕಾರ, ಒಂದೇ ಸಮುದಾಯಕ್ಕೆ ಸೇರಿದ ದಂಪತಿ, ತಿರುವಿ ಕಾ ನಗರದ ವಿ ಮರಿ ಸೆಲ್ವಂ (24) ಮತ್ತು ಕಾರ್ತಿಕಾ (20) ಎರಡು ವರ್ಷಗಳ ಪ್ರೀತಿಯ ನಂತರ ವಿವಾಹವಾದರು. ಕಾರ್ತಿಕಾ ಅಕ್ಟೋಬರ್ 30 ರಂದು ಮಾರಿ ಸೆಲ್ವಂ ಅವರೊಂದಿಗೆ ಕೋವಿಲ್ಪಟ್ಟಿಗೆ ಓಡಿಹೋದರು ಮತ್ತು ಅವರು ರಕ್ಷಣೆ ಕೋರಿ ಕೋವಿಲ್ಪಟ್ಟಿ ಪೂರ್ವ ಪೊಲೀಸ್ ಠಾಣೆಗೆ ಹೋಗಿದ್ದರು. ನಂತರ ಅದೇ ದಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾದ ಅವರು ಬುಧವಾರದವರೆಗೆ ಕೋವಿಲ್ಪಟ್ಟಿಯಲ್ಲಿ ಇದ್ದರು. ಮದುವೆಗೆ ಎರಡೂ ಕುಟುಂಬಗಳಿಂದ ತೀವ್ರ ವಿರೋಧವಿತ್ತು, ಆದರೆ, ಹುಡುಗನ ಮನೆಯವರು ಮಂಗಳವಾರ ಅವರ ಮದುವೆಯನ್ನು ಒಪ್ಪಿಕೊಂಡರು. ಇದರ ಬೆನ್ನಲ್ಲೇ…
ಖ್ಯಾತ ನಟಿ ವಿಜಯಶಾಂತಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ವರದಿಯಾಗಿದೆ. ತೆಲಂಗಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನಟಿ ವಿಜಯಶಾಂತಿ ಅವರ ಹೆಸರು ಸೇರ್ಪಡೆಯಾಗಿಲ್ಲ. ಈ ಹಿನ್ನೆಲೆ ಅವರು ಮತ್ತು ಅವರ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ. ‘ಬಿಆರ್ ಎಸ್ ಕುಟುಂಬದ ರಾಜಕೀಯ ಆಡಳಿತದಿಂದ ಜನರನ್ನು ರಕ್ಷಿಸಲು ಕಾಂಗ್ರೆಸ್ ಹೋರಾಡಬೇಕು’ ಎಂದು ನಟಿ ವಿಜಯಶಾಂತಿ ಹೇಳಿಕೆ ನೀಡಿದ್ದಾರೆ. ಇವರು ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ, ಅಗ್ನಿಶಾಮಕ ದಳಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವಿವಿಧ ಮುನ್ಸಿಪಲ್ ಕಾರ್ಪೊರೇಶನ್ ಗಳು ವಿಭಿನ್ನ ಮಾನದಂಡಗಳನ್ನು ಅನುಸರಿಸುತ್ತಿವೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಜಿಎಸ್ ಕುಲಕರ್ಣಿ ಮತ್ತು ಜಿತೇಂದ್ರ ಜೈನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿವಿಧ ನಿಗಮಗಳು ಬಳಸುವ ವಿಭಿನ್ನ ಅಳತೆಗೋಲುಗಳು ತಾರತಮ್ಯದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿದೆ. ಅಕ್ಟೋಬರ್ ನಲ್ಲಿ, ಬಾಂಬೆ ಹೈಕೋರ್ಟ್ ವಿವಿಧ ನಿಗಮಗಳು ವಿಭಿನ್ನ ಮಾನದಂಡಗಳನ್ನು ಹೊಂದಿರಬಾರದು, ಇದು ಮಹಿಳಾ ಅಭ್ಯರ್ಥಿಗಳ ನಡುವೆ ತಾರತಮ್ಯವನ್ನು ಉಂಟುಮಾಡುತ್ತದೆ ಎಂದು ಹೇಳಿತ್ತು.
ಮೈಸೂರು: ಸರ್ಕಾರಿ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ನಿಲಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮುಖ್ಯ ಶಿಕ್ಷಕ ಮಹದೇವಯ್ಯ, ಶಿಕ್ಷಕಿ ಮೀನಾಕ್ಷಿ ಮತ್ತು ವಿದ್ಯಾರ್ಥಿಗಳಾದ ಧನುಷ್, ಪೃಥ್ವಿ, ಹಾಗೂ ಗೌತಮ್ ಗೆ ಗಂಭೀರ ಗಾಯವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಸಿಲಿಂಡರ್ ಘಟನೆ ಬಗ್ಗೆ ನರಸೀಪುರ ಪೊಲೀಸರು ಮಾಹಿತಿ ಪಡೆಯುತ್ತಿದ್ದು, ಆಸ್ಪತ್ರೆಗೆ ಬಿಇಒ ಶೋಭಾ ಭೇಟಿ ನೀಡಿದ್ದಾರೆ.
ಹಣ ಪಡೆದು ಪ್ರಶ್ನೆ ಕೇಳುತ್ತಿರುವ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಲೋಕಸಭೆಯ ನೈತಿಕ ಸಮಿತಿಯಲ್ಲಿ ಸಂವೇದನಾಶೀಲ ಹೇಳಿಕೆ ನೀಡಿದ್ದಾರೆ. ಗುರುವಾರ ಸಮಿತಿಯ ಮುಂದೆ ಹಾಜರಾದ ಲೋಕಸಭೆಯ ನೈತಿಕ ಸಮಿತಿಯ ಅಧ್ಯಕ್ಷರು ಆಕೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು. ಈ ಅವಮಾನವು ದ್ರೌಪದಿಯ ವಸ್ತ್ರಾಪಹರಣದಂತಿದ್ದು, ಹಾಗಾಗಿ ಸಭೆಯ ಮಧ್ಯದಲ್ಲಿಯೇ ಹೊರ ಬಂದಿರುವುದಾಗಿ ತಿಳಿಸಿರುವ ಅವರು ನಂತರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮೂರು ಪುಟಗಳ ಪತ್ರ ಬರೆದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ಅಡಿಕೆ ವ್ಯಾಪಾರಿ ಎಚ್. ಎಸ್. ಉಮೇಶ್ ಅವರಿಗೆ ಸೇರಿದ್ದ ಕೆ 1 ಕೋಟಿ ನಗದು ಕಳ್ಳತನ ಪ್ರಕರಣ ಭೇದಿಸಿರುವ ಉಪ್ಪಾರಪೇಟೆ ಠಾಣೆ ಪೊಲೀಸರು, ಕಾರಿನ ಚಾಲಕ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದ ಸ್ವಾಮಿ ಪಿ. ಬಿ. (34), ಬೆಂಗಳೂರು ಮಹದೇವಪುರ ಲಕ್ಷ್ಮಿಸಾಗರ ಬಡಾವಣೆಯ ಅನುಪಮ ಎನ್. ಎಂ. (38), ಚಿತ್ರದುರ್ಗ ಜಿಲ್ಲೆಯ ಕೆಳಗೋಟೆಯ ಪವನ್ ಎನ್. (30) ಹಾಗೂ ಸಕಲೇಶಪುರ ಮಹೇಶ್ವರಿನಗರದ ಎಸ್. ಆರ್. ಕಾರ್ತಿಕ್ (27) ಬಂಧಿತರು.
ಬೆಂಗಳೂರು: ಧೂಮಪಾನ, ಮದ್ಯಪಾನ, ಡ್ರಗ್ ವ್ಯಸನದಿಂದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಶ್ವವಾಯುವಿಗೆ ಒಳಗಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ತಿಳಿಸಿದೆ. ವಿಶ್ವ ಪಾರ್ಶ್ವವಾಯು ದಿನದ ಪ್ರಯುಕ್ತ ಸಂಸ್ಥೆಯು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ‘ದೇಶದಲ್ಲಿ ವಾರ್ಷಿಕ ಪಾರ್ಶ್ವವಾಯು ಪೀಡಿತರಲ್ಲಿ ಶೇ. 14ರಷ್ಟು ಮಂದಿ ಯುವಜನರಾಗಿದ್ದಾರೆ ಎಂದರು. ಸಂಸ್ಥೆಯಲ್ಲಿ ಪಾರ್ಶ್ವವಾಯು ಪೀಡಿತರ ಆರೈಕೆಗೆ 24 ಹಾಸಿಗೆಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದೆ.