Author: admin

ಗುಜರಾತ್ ‌ನ ಭರೂಚ್ ಜಿಲ್ಲೆಯ ಅಂಕಲೇಶ್ವರದ ಅತುಲ್ ಗಿರಿ ಎಂಬ ವ್ಯಕ್ತಿ ಐದು ವರ್ಷಗಳ ಹಿಂದೆ ಚಾಕು ಇರಿತಕ್ಕೊಳಗಾಗಿದ್ದು, ಸ್ಥಳೀಯ ಭರೂಚ್ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆ ವೇಳೆ ಅಲ್ಲಿನ ವೈದ್ಯರು ಅತುಲ್ ಗಿರಿ ಸರಿಯಾಗಿ ಪರೀಕ್ಷಿಸದೆ ಮಾತ್ರೆಗಳನ್ನು ನೀಡಿ ಕಳುಹಿಸಿದ್ದರು. ಕ್ರಮೇಣ ಹೊಟ್ಟೆ ನೋವು ಕಾಣಿಸಿಕೊಂಡಿತು. 5 ವರ್ಷಗಳ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೊಟ್ಟೆನೋವು ಎಂದು ವೈದ್ಯರಿಗೆ ತಿಳಿಸಿ ಎಕ್ಸ್ ರೇ ತೆಗೆಸಿದಾಗ ಹೊಟ್ಟೆಯಲ್ಲಿ ಚಾಕು ಪತ್ತೆಯಾಗಿದೆ.

Read More

ನವೆಂಬರ್ ನಲ್ಲಿ ವಾರಾಂತ್ಯ ಸೇರಿದಂತೆ ಒಟ್ಟು 15 ದಿನ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ನವೆಂಬರ್ 1: ಕನ್ನಡ ರಾಜ್ಯೋತ್ಸವ/ಕುತ್/ಕರ್ವಾ ಚೌತ್ ನವೆಂಬರ್:  ಭಾನುವಾರ ನವೆಂಬರ್ 10: ವಂಗಲಾ ಹಬ್ಬ ನವೆಂಬರ್ 11: ಎರಡನೇ ಶನಿವಾರ ನವೆಂಬರ್ 12: ಭಾನುವಾರ ನವೆಂಬರ್ 13: ಗೋವರ್ಧನ ಪೂಜೆ ನವೆಂಬರ್ 14: ದೀಪಾವಳಿ ಅಥವಾ ಲಕ್ಷ್ಮಿ ಪೂಜೆ ನವೆಂಬರ್ 15: ಬೈದೂಜ್/ಲಕ್ಷ್ಮಿ ಪೂಜೆ/ ದೀಪಾವಳಿ ನವೆಂಬರ್ 19: ಭಾನುವಾರ ನವೆಂಬರ್ 20: ಛತ್ ಪೂಜೆ ನವೆಂಬರ್ 23: ಸೆಂಗ್ ಕುತ್ಸನೆಮ್, ಇಗಾಸ್ ಬಾಗವಾಲ್ ಹಬ್ಬ ನವೆಂಬರ್ 25: ನಾಲ್ಕನೇ ಶನಿವಾರ ನವೆಂಬರ್ 26: ಭಾನುವಾರ ನವೆಂಬರ್ 27: ಗುರುನಾನಕ್ ಜಯಂತಿ ನವೆಂಬರ್ 30: ಕನಕದಾಸ ಜಯಂತಿ

Read More

ಕರ್ತವ್ಯ ಲೋಪ ಆರೋಪದಡಿ ಕಂದಾಯ ಇಲಾಖೆಯ 8 ಜನ ಅಧಿಕಾರಿಗಳನ್ನು ಅಮಾನತು ಮಾಡಿ ಡಿಸಿ ಡಾ.ಸುಶೀಲಾ.ಬಿ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಭೆಗೆ ಗೈರು ಜೊತೆಗೆ ಕೆಲಸದಲ್ಲಿ ಪ್ರಗತಿ ಸಾಧಿಸದ್ದಕ್ಕೆ ಒಂದೇ ದಿನ ಆರು ಗ್ರಾಮ ಆಡಳಿತಾಧಿಕಾರಿಗಳು, ಇಬ್ಬರು ಕಂದಾಯ ನಿರೀಕ್ಷಕರು ಅಮಾನತು ಮಾಡಲಾಗಿದೆ. ಶ್ರೀಮಂತ, ಬಸವರಾಜ್, ಇಮ್ಯಾನುವೆಲ್, ಸಿದ್ದಲಿಂಗಪ್ಪ, ಗಿರೀಶ್ ರಾಯಕೋಟಿ, ಬಸವರಾಜ್, ಎಸ್‌ಡಿಎ ಸೂಗುರೇಶ್ ಹಾಗೂ ಎಫ್‌ಡಿಎ ಮಹೇಶ್ ಅಮಾನತು ಆದ ಅಧಿಕಾರಿಗಳು.

Read More

ಬೆಂಗಳೂರಿನಲ್ಲಿ ಭಾರೀ ಬೆಂಕಿ ವೀರಭದ್ರನಗರ ಬಳಿಯ ಬಸ್ ಡಿಪೋದಲ್ಲಿ 40ಕ್ಕೂ ಹೆಚ್ಚು ಬಸ್ ಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿಗೆ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಬೆಂಕಿ ಅವಘಡದಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Read More

ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ಲೋಕಸಭೆ ಸಂಸದನಿಗೆ ಚಾಕು ಇರಿತ. ಬಿಆರ್ ಎಸ್ ಸಂಸದ ಕೋಠಾ ಪ್ರಭಾಕರ್ ರೆಡ್ಡಿಗೆ ಚಾಕು ಇರಿತ. ಸಿದ್ದಿಪೇಟೆಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಸಂಸದರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಸಿದ್ದಿಪೇಟ್ ಜಿಲ್ಲೆಯ ದೌಲತಾಬಾದ್ ಕ್ಷೇತ್ರದ ಸೂರಂಪಲ್ಲಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಹೊಟ್ಟೆಗೆ ಚಾಕುವಿನಿಂದ ಇರಿದ ಮೇದಕ್ ಲೋಕಸಭಾ ಕ್ಷೇತ್ರದ ಸಂಸದರನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಿತಿ ತೃಪ್ತಿಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಸದರಲ್ಲದೆ ದುಬ್ಬಾಕ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಕಾರ್ಮಿಕರು ದಾಳಿಕೋರನನ್ನು ಸುತ್ತುವರಿದು ಥಳಿಸಿದ್ದಾರೆ. ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಿದ್ದಿಪೇಟೆ ಪೊಲೀಸ್ ಆಯುಕ್ತ ಎನ್ ಶ್ವೇತಾ ಪಿಟಿಐಗೆ ತಿಳಿಸಿದ್ದಾರೆ.

Read More

ಡಿಸಿಎಂ ಡಿಕೆ ಶಿವಕುಮಾರ್ ಸಿಡಿ ಮಾಸ್ಟರ್ ಮೈಂಡ್. ಸಿಡಿನೇ ಡಿಕೆಶಿ ಶಕ್ತಿಯಾಗಿದ್ದು ಆತ ಒಬ್ಬ ಪುಕ್ಕಲ, ಮೋಸಗಾರ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನಕಪುರದಲ್ಲಿ ನಡೆದ ಎಲ್ಲಾ ಚುನಾವಣೆ ಹೊಂದಾಣಿಕೆ ಆಗಿವೆ. ರಾಜ್ಯದಲ್ಲಿ ಆಪರೇಷನ್ ಕಮಲ ಎಲ್ಲವೂ ಸುಳ್ಳು. ಜನರ ಗಮನ ಬೇರೆಡೆ ಸೆಳೆಯಲು ಈ ರೀತಿಯ ಯತ್ನ ಮಾಡಲಾಗುತ್ತಿದೆ. ಲಾಟರಿ ಮಂತ್ರಿ, ಶಾಸಕರು ಯಾವಾಗಲೂ ಡೇಂಜರ್ ಎಂದರು. ಡಿಸಿಎಂ ಡಿಕೆ ಶಿವಕುಮಾರ್ ನಾಟಕ ಮಂಡಳಿ ಬಿಜೆಪಿ ನಾಯಕರ ಹೆಸರು ಕೆಡಿಸುತ್ತಿದ್ದಾರೆ. 50, 100 ಕೋಟಿ ಎಂದು ಅಪಪ್ರಚಾರ ಮಾಡಲಾಗಿದೆ. 2019ರಲ್ಲಿ ಡಿಕೆಶಿ ಸೊಕ್ಕು, ದುರಾಡಳಿತದಿಂದ ನಾವೆಲ್ಲ ಪಕ್ಷಾಂತರ ಮಾಡಿದ್ದೇವೆ. ಆಪರೇಷನ್ ಕಮಲ ಎಲ್ಲವೂ ನಡೆಯುತ್ತಿಲ್ಲ ಎಲ್ಲವೂ ಸುಳ್ಳು. ಗ್ಯಾರಂಟಿ ಯೋಜನೆ ಫೇಲ್ ಆಗಿದೆ. ಹೀಗಾಗಿ ಜನರ ದಿಕ್ಕು ಬದಲು ಮಾಡಲು ಈ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ಹೇಳಿದರು. ಶಿವಕುಮಾರ್ ಅಷ್ಟೇ ಯಾಕೆ ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ. ಅನಿವಾರ್ಯವಾಗಿ…

Read More

ರಾಯಚೂರು: ಹಳೇ ವೈಷಮ್ಯದ ಹಿನ್ನೆಲೆ ವ್ಯಕ್ತಿಯೋರ್ವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಬಣಕಲ್ ಕ್ಯಾಂಪ್ ಬಳಿ ನಡೆದಿದೆ. ಮದ್ಲಾಪುರ ಗ್ರಾಮದ ಪ್ರಸಾದ್ (38) ಕೊಲೆಯಾದ ವ್ಯಕ್ತಿ. ಹಳೇ ವೈಷಮ್ಯ ಹಿನ್ನೆಲೆ ಮಾರಾಕಾಸ್ತ್ರದಿಂದ ದಾಳಿ ಮಾಡಿ ಕೊಲೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಳಗ್ಗೆ ಭತ್ತದ ಗದ್ದೆಗೆ ನೀರುಕಟ್ಟಲು ಹೋದ ಸಂದರ್ಭ ಏಕಾಏಕಿ ಮೂವರು ದಾಳಿ ಮಾಡಿದ್ದಾರೆ. ಜಮೀನಿನಲ್ಲಿ ಕಾದು ಕುಳಿತು ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ರಬಣಕಲ್ ಗ್ರಾಮದ ರಾಮು, ಕೇಶವ ಸೇರಿ ಮೂರು ಮಂದಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಯಾದಗಿರಿ: ಮನೆಯ ಮುಂದೆ ಕೊಳಚೆ ನೀರು ಹರಿಸುವ ವಿಚಾರಕ್ಕೆ ಅಕ್ಕ ಪಕ್ಕದ ಮನೆಯವರ ನಡುವೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಸೀರೆ ಎಳೆದಾಡಿದ್ದಕ್ಕೆ ಮನನೊಂದು ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸುರಪುರದ ಕುಚಕನೂರಿನಲ್ಲಿ ನಡೆದಿದೆ. ವಿಜಯಲಕ್ಷ್ಮಿ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದು ಬಂದಿದೆ. ಮಹಿಳೆ ಆತ್ಮಹತ್ಯೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ಮಹಿಳೆಯ ಕುಟುಂಬಸ್ಥರು ಆಕೆಯ ಶವವನ್ನು ಹುಣಸಗಿ ಪೊಲೀಸ್ ಠಾಣೆಯ ಮುಂದಿಟ್ಟು ಪ್ರತಿಭಟಿಸಿದ್ದಾರೆ. ಈ ವೇಳೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಮಹಿಳೆಯ ಪಕ್ಕದ ಮನೆಯವರ ನಡುವೆ ಆಗಾಗ ಕಸ ಹಾಗೂ ಕೊಳಚೆ ನೀರಿನ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ಮನೆ ಮುಂದೆ ನೀರು ಬಿಟ್ಟ ವಿಚಾರಕ್ಕೆ ಎರಡೂ ಕುಟುಂಬದ ನಡುವೆ ಜಗಳ ನಡೆದಿತ್ತು. ಈ ವೇಳೆ ವ್ಯಕ್ತಿಯೊಬ್ಬ ಮಹಿಳೆಯ ಸೀರೆ ಹಿಡಿದು ಎಳೆದಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಮಹಿಳೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

Read More

ಬೆಂಗಳೂರು: ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಅಗ್ನಿ ದುರಂತಗಳಿಂದ ಪ್ರಾಣಾಪಾಯಗಳು ಹೆಚ್ಚುತ್ತಿರುವ ಹಿನ್ನೆಲೆ ಜನಸಾಮಾನ್ಯರಲ್ಲೂ ಆತಂಕ ಮನೆಮಾಡಿದ್ದು, ಮುಂದಿನದಿಗಳ್ಲಿ ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿ ಶಾಮಕದಳವನ್ನು ಉನ್ನತೀಕರಣಗೊಳಿಸಬೇಕುಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು. ವಿಕಾಸಸೌಧದ ಕಂದಾಯ ಇಲಾಖೆ ಸಚಿವರ ಕಚೇರಿಯಲ್ಲಿ ಅಗ್ನಿ ಶಾಮಕದಳ ಪೊಲೀಸ್ ಮಹಾ ನಿರ್ದೇಶಕರಾದ ಕಮಲ್ ಪಂತ್ ಅವರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಸಚಿವರು ಕಳೆದ 20 ದಿನಗಳ ಅವಧಿಯಲ್ಲಿ ಬೆಂಗಳೂರಿನಲ್ಲೇ ಮೂರು ಕಡೆಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸಿವೆ. ನಗರ ಪ್ರದೇಶಗಳೂ ಸೇರಿದಂತೆ ರಾಜ್ಯಾದ್ಯಂತ ಅಗ್ನಿ ದುರಂತಗಳು ಸಂಭವಿಸಿದಂತೆ ಅಗ್ನಿಶಾಮಕ ದಳ ತಡೆಯುವಂತಾಗಬೇಕು ಎಂದು ಹೇಳಿದರು. ಅತ್ತಿಬೆಲೆ ಪಠಾಕಿ ಗೋದಾಮಿನ ದುರಂತದಲ್ಲಿ ತಮಿಳುನಾಡು ಮೂಲದ 13 ಕಾರ್ಮಿಕರು ಮೃತಪಟ್ಟಿದ್ದರು, ಅಕ್ಟೋಬರ್ 19 ರಂದು ಕೋರಮಂಗಲದ ಮಡ್ಪೈಪ್ ಅನ್ನೋ ರೆಸ್ಟೋಕೆಫೆ ಅಗ್ನಿ ದುರಂತದಲ್ಲಿ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಹಜ್ ಭವನದ ಬೆಂಕಿ ಆಹುತಿಗೆ, ರೂ 3 ಕೋಟಿ ನಷ್ಟವಾಗಿದೆ ಎಂದು ತಿಳಿಸಿದ ಸಚಿವರು, ಇಂತಹ…

Read More

ಶ್ರೀನಗರದ ಡೌನ್‌ ಟೌನ್ ಪ್ರದೇಶದ ಹೃದಯಭಾಗದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ಘಟನೆಯ ಹಿನ್ನೆಲೆಯಲ್ಲಿ, ಇನ್‌ ಸ್ಪೆಕ್ಟರ್ ಮಸ್ರೂರ್ ವಾನಿ ತೀವ್ರವಾಗಿ ಗಾಯಗೊಂಡಿದ್ದಾರೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು (ಜೆಕೆಪಿ) ಇಂದು ‘ರಕ್ಷಕ್’ ಮತ್ತು ‘ಶೌರ್ಯ’ ಎಂಬ ಹೆಸರಿನ ಸುಧಾರಿತ ವಾಹನಗಳ ಹೊಸ ಫ್ಲೀಟ್ ಅನ್ನು ಅನಾವರಣಗೊಳಿಸಿದ್ದಾರೆ. ಇತ್ತೀಚಿನ ಭಯೋತ್ಪಾದಕ ಘಟನೆಗೆ ಪ್ರತಿಕ್ರಿಯೆಯಾಗಿ J&K ಪೊಲೀಸರು ‘ರಕ್ಷಕ್’ ಮತ್ತು ‘ಶೌರ್ಯ’ ವಾಹನಗಳನ್ನು ಪರಿಚಯಿಸಿದ್ದಾರೆ. ಭಯೋತ್ಪಾದನೆ-ವಿರೋಧಿ ಕಾರ್ಯಾಚರಣೆಗಳಿಗಾಗಿ J&K ಪೋಲೀಸ್‌ನಿಂದ ಮಾಡ್ಯುಲರ್ ವಾಹನಗಳನ್ನು ಸೇರಿಸಿಕೊಳ್ಳಲಾಗಿದೆ. ಈ ಸುಧಾರಿತ ವಾಹನಗಳು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟುಮಾಡುವ ಭರವಸೆಯನ್ನು ನೀಡುತ್ತವೆ ಮತ್ತು ಸಾರ್ವಜನಿಕ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಯಾವುದೇ ಪರಿಸ್ಥಿತಿಗೆ ದೃಢವಾದ ಪ್ರತಿಕ್ರಿಯೆಯನ್ನು ಒದಗಿಸುತ್ತವೆ. ಈ ವಾಹನಗಳ ಮಧ್ಯಭಾಗದಲ್ಲಿ ಅವುಗಳ ಸುಧಾರಿತ ಕಣ್ಗಾವಲು ಉಪಕರಣಗಳಿವೆ, ಇದು ಮೇಲ್ವಿಚಾರಣೆ ಮತ್ತು ಸಾಕ್ಷ್ಯ ಸಂಗ್ರಹ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಇಂತಹ ತಂತ್ರಜ್ಞಾನವು JKP ಗೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಪರಿಹರಿಸಲು ಮತ್ತು…

Read More