Author: admin

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹರಿದು 40 ವರ್ಷದ ಮಹಿಳೆ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ ಘಟನೆ ನಡೆದಿದೆ. ಈ ಕುರಿತು ಪೊಲೀಸರು ಅಧಿಕೃತ ಮಾಹಿತಿ ತಿಳಿಸಿದ್ದಾರೆ. ಕಾಸಂಪುರದಲ್ಲಿ ಮಾನವಸಹಿತ ರೈಲ್ವೇ ಕ್ರಾಸಿಂಗ್ ಇದ್ದು, ಅದನ್ನು ಈ ಕುಟುಂಬ ದಾಟಬೇಕಿತ್ತು. ಆಗ ಪತಿ ನರೇಶ್ ರೈಲ್ವೇ ಗೇಟ್ ಕೆಳಗೆ ಚಲಿಸಿ ರೈಲು ಹಳಿ ದಾಟುತ್ತಿದ್ದರು. ಅರೆಕ್ಷಣದಲ್ಲೇ ಬಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಾಡಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಂಡಿಯಲ್ಲಿ ಹಿಂದೆ ಕುಳಿತಿದ್ದ ಮೋನಾ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳ ಮೇಲೆ ರೈಲು ಹರಿದು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ಕಂಕರಖೇರಾ ನಿವಾಸಿ ನರೇಶ್ ಅವರು ಬಂಡಿಯನ್ನು ಎಳೆದುಕೊಂಡು (ಕೈಯಿಂದ ಎಳೆಯುಬಹುದಾದ ಮೂರು ಚಕ್ರದ ಬಂಡಿ-ಸೈಕಲ್) ಹೊರಟಿದ್ದರು. ಘಟನೆಯ ವೇಳೆ ವ್ಯಕ್ತಿ ಕುಡಿದ ಅಮಲಿನಲ್ಲಿದ್ದ ಅಂತಲೂ ಹೇಳಲಾಗುತ್ತಿದೆ. ಇದು ಕೇವಲ…

Read More

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ “ಜಾಗೃತಿ ಅರಿವು ಸಪ್ತಾಹ-2023″ರ ಅಂಗವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಜಾಗೃತ ವಿಭಾಗ) ವತಿಯಿಂದ ಇಂದು ನಡೆದ ಭ್ರಷ್ಟಾಚಾರ ವಿರುದ್ಧ ಪ್ರತಿಜ್ಞಾ ವಚನ ಬೋಧನಾ ಕಾರ್ಯಕ್ರಮದಲ್ಲಿ, ರಾಜ್ಯ ಸರ್ಕಾರದ ಎಲ್ಲಾ ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಜ್ಞಾ ವಚನ ಬೋಧನೆ ಮಾಡಿ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ನೌಕರರು ಪಾಲ್ಗೊಂಡಿದ್ದರು.

Read More

ದುಬೈ: ಉತ್ತಮ ಬದುಕು ರೂಪಿಸಿಕೊಳ್ಳಲು ಹೊರನಾಡಿಗೆ ಬಂದಿರುವ ಕನ್ನಡಿಗರು ನಮ್ಮ ಸಂಸ್ಕೃತಿ, ಭಾಷೆ, ನೆಲ ಜಲದ ಮೇಲೆ ಇರಿಸಿರುವ ಪ್ರೀತಿ, ಬದ್ಧತೆ ಕಂಡು ನನ್ನ ಹೃದಯ ಉಕ್ಕಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಯುಎಇ ಒಕ್ಕಲಿಗರ ಸಂಘ ಇಂದು ಹಮ್ಮಿಕೊಂಡಿದ್ದ ದುಬೈನ ದುಬೈನಲ್ಲಿ ಶೇಕ್ ರಶೀದ್ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೊರನಾಡಿನಲ್ಲಿ ನೆಲೆಸಿದ್ದರೂ ತಾಯ್ನಾಡಿನ ಪ್ರೇಮ ಉಳಿಸಿಕೊಂಡು, ಕನ್ನಡ ಸೊಗಡನ್ನು ಬದುಕಿನಲ್ಲಿ ಹಾಸುಹೊಕ್ಕಾಗಿಸಿಕೊಂಡು ಬಾಳ್ವೆ ನಡೆಸುತ್ತಿರುವ ಕನ್ನಡಿಗರಿಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಸಾಲದು. ಈ ದಿನ ನಡೆದ ಕೆಂಪೇಗೌಡರ ಉತ್ಸವದಲ್ಲಿ ಕನ್ನಡ ಸಂಸ್ಕೃತಿಯ ಸೊಗಡು ಸಾಕ್ಷಾತ್ಕಾರವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ನಾಡಪ್ರಭು ಕೆಂಪೇಗೌಡ ಅವರ ಆಡಳಿತ, ದೂರದೃಷ್ಟಿ ಎಲ್ಲೆ, ಸೀಮೆಗಳು ಇಲ್ಲ. ಅವರ ಆದರ್ಶ ಆಡಳಿತ ಎಲ್ಲರೂ ಅನುಕರಣೀಯ ಮಾಡಬೇಕು. ಸರ್ವರನ್ನು ಸಮನಾಗಿ ಕಂಡು ಆಳ್ವಿಕೆ ನಡೆಸಿದವರು. ಅಂತಹವರನ್ನು ಇಂದು ದುಬೈನಲ್ಲಿ ಸ್ಮರಿಸಿಕೊಳ್ಳುಟ್ಟಿರುವುದು ಅರ್ಥಪೂರ್ಣವಾಗಿದೆ…

Read More

ಬೆಳಗಾವಿಯಲ್ಲಿ ಇಮ್ಯಾಜಿನ್ ಸ್ಟೋರ್ ಇಂದು ಖ್ಯಾತನಟ ಪ್ರಜ್ವಲ್ ದೇವರಾಜ್ ಮತ್ತು ಅವರ ಪತ್ನಿ ರಾಗಿಣಿ ಪ್ರಜ್ವಲ್ ಈ ನೂತನ ಸ್ಟೋರವನ್ನು ಉದ್ಘಾಟಿಸಿ ಪತ್ರಕರ್ತರ ಜೊತೆ ತಮ್ಮ ಖುಷಿಯನ್ನು ಹಂಚಿಕೊಂಡರು. ಇಮ್ಯಾಜಿನ್ ಸ್ಟೋರ್, ಬೆಳಗಾವಿಯಲ್ಲಿ ತನ್ನ ಮೊದಲನೇ ಮಳೆಗೆ ಇದಾಗಿದ್ದು ಕರ್ನಾಟಕದಲ್ಲಿ ಈ ಸಂಸ್ಥೆ 17ನೇ ಮಳಿಗೆ ಬೆಳಗಾವಿಯಲ್ಲಿ ಪ್ರಾರಂಭ ಮಾಡಲಾಗಿದೆ ಪ್ರಜ್ವಲ್ ದೇವರಾಜ್ ದಂಪತಿಗಳು ಈ ಮಳಗೆಯನ್ನು ಉದ್ಘಾಟಿಸಿದ್ದಾರೆ ಆಪ್ಯಲ್ ಕಂಪನಿ ಉತ್ಪನ್ನಗಳು ಈಗ ಎಲ್ಲರೂ ಕೈಯಲ್ಲಿ ಸಿಗುವಂತಾಗಿದೆ ಪ್ರತಿಯೊಬ್ಬರಿಗೂ ಐಫೋನ್ ಗಳನ್ನು ಖರೀದಿ ಮಾಡುವ ಶಕ್ತಿ ಸಾಮರ್ಥ್ಯ ಹೊಂದಿದ್ದಾರೆ.ನಾನು ಆಪಲ್ ಐ ಫೋನನ್ನು ಮೊದಲಿನಿಂದಲೂ ಉಪಯೋಗ ಮಾಡುತ್ತ ಇದ್ದೇನೆ ಎಂದು ಹೇಳಿದರು. ಆಪಲ್ ಕಂಪನಿ ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ನಾರಂಗ್ ಅವರು ಮಾತನಾಡಿ ಈ ಉತ್ಸವದ ದಿನಗಳಲ್ಲಿ ಬೆಳಗಾವಿಯನ್ನು ತಮ್ಮ ನೂತನ ಮಳೆಗೆ ಹಬ್ಬದ ಉತ್ಸಹ ಹೆಚ್ಚಿಸಲು ನಾವು ಪೂರ್ಣ ತಯಾರಿ ಮಾಡಿಕೊಂಡಿದ್ದೇವೆ ಬೆಳಗಾವಿ ಜನತೆ ಇದನ್ನು ಪ್ರೋತ್ಸಾಹ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ. ವೈವಿಧ್ಯಪೂರ್ಣ ಮ್ಯಾಕ್ ಬುಕ್ ಏರ(…

Read More

ನೀಟ್ ಪರೀಕ್ಷೆ ಮೋದಿ ಮಾಡಿರುವ ಕಾರಣಕ್ಕೆ ವಿರೋಧಿಸುತ್ತಾರೆ. ಮೋದಿ ಏನು ಮಾಡಿದ್ರು ವಿರೋಧಿಸುವ ಮಾನಸಿಕತೆ ಅವರಿಗಿದೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಮಹದಾಯಿ ಹಿಡಿದು ಎಲ್ಲ ವಿಷಯದಲ್ಲಿ ಕಾಂಗ್ರೆಸ್ ನಿಂದ ಅನ್ಯಾಯ ಆಗಿದೆ. ಸೋನಿಯಾ ಗಾಂಧಿ ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಅಂದಿದ್ರು. ರಾಜ್ಯದಲ್ಲಿ ಯಾವುದೋ ಕಾರಣಕ್ಕೆ ಜನ ನಮ್ಮನ್ನು ಸೋಲಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿರಬಹುದು. ರಾಷ್ಟ್ರಮಟ್ಟದಲ್ಲಿ ನಿಮಗೆ ನಾಯಕತ್ವ ಇಲ್ಲ. ಮೂರನೇ ಬಾರಿಯೂ ಕಾಂಗ್ರೆಸ್ ಪಕ್ಷದ ಸ್ಥಿತಿ ಹಾಗೇ ಆಗಲಿದೆ ಎಂದರು.

Read More

ರಾಜ್ಯಸಭಾ ಸಂಸದರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಮ ಈರಣ್ಣ ಕಡಾಡಿ ಅವರು “ನನ್ನ ಮಣ್ಣು ನನ್ನ ದೇಶ” ಅಭಿಯಾನದ ಅಂಗವಾಗಿ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿರುವ “ಅಮೃತ ಕಳಸ ಯಾತ್ರೆ”ಯನ್ನು ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಿ, “ಅಮೃತ ಕಳಸ ಯಾತ್ರೆ”ಯ ವಿಶೇಷ ರೈಲುಗೆ ಹಸಿರು ನಿಶಾನೆ ತೋರಿಸುವ ಮೂಲಕ ಬೆಳಗಾವಿ ಜಿಲ್ಲೆಯಿಂದ ಸಂಗ್ರಹಿಸಿದ ಮಣ್ಣನ್ನು ಹಾಗೂ ಕಾರ್ಯಕರ್ತರನ್ನು ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಶಾಸಕರಾದ ಶ್ರೀ ಅಭಯ ಪಾಟೀಲ, ಮೇಯರ್ ಶ್ರೀಮತಿ ಶೋಭಾ ಸೋಮನಾಚೆ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಶ್ರೀ ರಾಜೇಶ್ ನೇರ್ಲಿ, ಬೆಳಗಾವಿ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಶ್ರೀ ಸುಭಾಸ ಪಾಟೀಲ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಹಾವೇರಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರದ ಒಳಗೂ ಮತ್ತು ಹೊರಗು ನಾನು ಹೋರಾಟ ಮಾಡುತ್ತೇನೆ. ಬಿಜೆಪಿ ಸರ್ಕಾರ ಇದ್ದಾಗ ಬೇರೆ, ಈಗ ಬೇರೆ ಎಂದು ಏನು ಇಲ್ಲ. ಅಂದು ಇಂದು ನಾನು ಪಂಚಮಸಾಲಿ ಪರವಾಗಿದ್ದೇನೆ. ಇವತ್ತಿಗೂ ನಾನು ಪಂಚಮಸಾಲಿ ಹೋರಾಟದ ಪರವಾಗಿದ್ದೇನೆ ಎಂದರು.

Read More

ಊಟ ಸಿಗದಿದ್ರೂ ಪರವಾಗಿಲ್ಲ, ಜನರಿಗೆ ನ್ಯಾಯ ತುಂಬಾ ಅಗತ್ಯ. ಪೊಲೀಸರು ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ಹಹಿಸಬೇಕು ಎಂದು ಮಂಗಳೂರಿನ ಪಿಲಿಕುಳದಲ್ಲಿ ನಡೆಯುತ್ತಿರುವ ಪೊಲೀಸ್ ಇಲಾಖೆ ಕಾರ್ಯಕ್ರಮದಲ್ಲಿ ಯು.ಟಿ.ಖಾದರ್ ಹೇಳಿದರು. ಪೊಲೀಸ್ ಇಲಾಖೆಯಲ್ಲಿ ಶೇ.90ರಷ್ಟು ಒಳ್ಳೆಯ ಪೊಲೀಸರಿದ್ದಾರೆ. ಶೇಕಡಾ 10ರಷ್ಟು ಮಾತ್ರ ಕೆಟ್ಟ ಪೊಲೀಸರಿದ್ದಾರೆ. ಅಂತಹ ಸಿಬ್ಬಂದಿಯಿಂದ ಒಳ್ಳೆಯ ಪೊಲೀಸರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.

Read More

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಧ್ವಜ ಸ್ತಂಭ ನೆಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಯುವಕ ಮೃತಪಟ್ಟಿದ್ದಾರೆ. ರಾಜ್ಯೋತ್ಸವದ ಹಿನ್ನೆಲೆ ಬಸ್ ನಿಲ್ದಾಣದ ಮುಂದೆ ಧ್ವಜಸ್ಥಂಬ ನೆಡುವ ವೇಳೆ ದುರ್ಘಟನೆ ಸಂಭವಿಸಿದೆ. ಪ್ರಜ್ವಲ್ ಚನ್ನಗೌಡ ಮುನೇಪ್ಪನವರ(18) ಮೃತ ದುರ್ದೈವಿ.

Read More

ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿವರ್ಷ ರಾಜ್ಯೋತ್ಸವ  ವದಂದು ವಿರೋಧದ ನಡುವೆಯೂ ಕರಾಳ ದಿನಾಚರಣೆ ಆಚರಿಸುತ್ತ ಬರುತ್ತಿದೆ. ಅದರಂತೆ ಈ ವರ್ಷವೂ ನವೆಂಬರ್​ 1 ರಂದು ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಆಚರಿಸಲು ಎಂಇಎಸ್​ ಸಿದ್ಧತೆ ನಡೆಸುತ್ತಿದೆ. ಈ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬೆಂಬಲ ವ್ಯಕ್ತಪಡಿಸುವ ಮೂಲಕ ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಹೌದು ನವೆಂಬರ್​​​ 1ರಂದು ಎಂಇಎಸ್ ​​ನ ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಪ್ರತಿನಿಧಿ ಕಳಿಸುವುದಾಗಿ ಸಿಎಂ ಶಿಂಧೆ ಹೇಳಿದ್ದಾರೆ.

Read More