Subscribe to Updates
Get the latest creative news from FooBar about art, design and business.
- ನೋವಿನಲ್ಲೂ ಸುಖ ಅನುಭವಿಸುವ ಜನರಿದ್ದಾರಂತೆ!: ಏನಿದು ರೋಚಕ ಮನೋವಿಜ್ಞಾನ!
- ರೈತರ ಕೈಹಿಡಿಯುವುದು ಸಿಲ್ಕು–ಮಿಲ್ಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
- ತುಮಕೂರು: ಪತ್ನಿ ಅಕ್ರಮ ಸಂಬಂಧದ ಶಂಕೆ: ಮನನೊಂದು ಪತಿ ಆತ್ಮಹತ್ಯೆ
- ತಿಪಟೂರು: ಜು.10ರಂದು ಮೀನು ಕೃಷಿಕರ ದಿನಾಚರಣೆ
- ಸಮಾನತೆಯ ಆಡಳಿತ, ಶಾಂತಿ ಕಾಪಾಡುವ ಹೊಣೆ ಪಂಚಾಯತ್ ಆಡಳಿತಾಧಿಕಾರಿಗಳ ಮೇಲಿದೆ: ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಡಾ.ಜಿ.ಪರಮೇಶ್ವರ ಕರೆ
- 175 ನೇರ ಪಾವತಿ ಪೌರಕಾರ್ಮಿಕರಿಗೆ ಆದೇಶ ಪತ್ರ: ತುಮಕೂರನ್ನು ದೇಶಕ್ಕೆ ಮಾದರಿ ನಗರವನ್ನಾಗಿಸೋಣ: ಡಿಸಿಎಂ ಡಾ.ಜಿ. ಪರಮೇಶ್ವರ
- ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಪತ್ನಿಯ ಕತ್ತು ಸೀಳಿ ಕೊಂದ ಪತಿ ಬಂಧನ
- ಕೋಟಾಗುಡ್ಡದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಚೇತನ್ ಬಾಬು ಸ್ಪಂದನೆ: ಟ್ಯಾಂಕರ್ ಮೂಲಕ ನೀರು ಪೂರೈಕೆ
Author: admin
ಬೆಂಗಳೂರು: ಮಾಧ್ಯಮಗಳಲ್ಲಿ ಗರ್ವದಿಂದ ಏನೇ ಚರ್ಚೆಗಳಾದರೂ ವಾಕ್ ಸ್ವಾತಂತ್ರ್ಯ ಇಂದು ಅಪಾಯದಲ್ಲಿದೆ. ದೊಡ್ಡ ಜಾತಿ, ಶ್ರೀಮಂತ ವ್ಯಕ್ತಿಗಳು, ಕೈಗಾರಿಕಾ ವಲಯಗಳ ವಿರುದ್ಧ ಬರೆಯಲು ಮಾಧ್ಯಮಗಳಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದರು. ನಗರದ ಎಫ್.ಕೆ.ಸಿ.ಸಿ.ಐ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ ಅವರಿಗೆ 2023ನೇ ಸಾಲಿನ `ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ಮಾಧ್ಯಮಗಳು ಇಂದು ರಾಜಕೀಯ ಶಕ್ತಿ ಕೇಂದ್ರದಲ್ಲಿರುವವರ ವಿರುದ್ಧ ಬರೆಯುವುದನ್ನು ಕಡಿಮೆ ಮಾಡಿವೆ. ಮಾಲೀಕರಿಂದ ಮಾಧ್ಯಮ ಮಿತ್ರರಿಗೆ ಲಗಾಮು ಬಿದ್ದಿದ್ದು, ತನ್ನ ತನವನ್ನು ಪತ್ರಿಕೋದ್ಯಮ ಮಂದಿ ಕಳೆದುಕೊಂಡಿದ್ದಾರೆ. ಇಷ್ಟೊಂದು ಗಂಭೀರ ಸನ್ನಿವೇಶ ಇದ್ದರೂ ಸಹ ವಾಕ್ ಸ್ವಾತಂತ್ರ್ಯದ ಬಗ್ಗೆ ಪತ್ರಿಕೋದ್ಯಮಿಗಳ ಧ್ವನಿಯೇ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಮ್ಮ ದೇಶದಲ್ಲಿ ಶೇ 50 ರಷ್ಟು ಮಾತ್ರ ವಾಕ್ ಸ್ವಾತಂತ್ರ್ಯ ಉಳಿದಿದ್ದು, ಇದರ ಅನುಭವ ಪ್ರತಿಯೊಬ್ಬರಿಗೂ ಆಗುತ್ತಿದೆ. ಇವೆಲ್ಲವೂ ಗೊತ್ತಿದ್ದರೂ ಸಹ ನಾವೆಲ್ಲರೂ ಮೌನಕ್ಕೆ ಶರಣಾಗಿದ್ದೇವೆ.…
ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಪ್ರದೇಶದಲ್ಲಿ ಮತ್ತೆ ಚಿರತೆ ಭೀತಿ ಶುರುವಾಗಿದೆ. ರಾತ್ರಿ ಸಮಯ ಚಿರತೆ ಓಡಾಟವು ಹೆಚ್ಚಾಗಿದ್ದು, ಜೀವ ಭಯವನ್ನು ಹುಟ್ಟುಹಾಕಿದೆ. ವೈಟ್ ಫೀಲ್ಡ್ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದೆ. ಬ್ರೂಕ್ ಫೀಲ್ಡ್ ನ ಎಇಸಿಎಸ್ ಲೇಔಟ್ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ ವೇಳೆ ಕಾರಿಗೆ ಅಡ್ಡಲಾಗಿ ಚಿರತೆಯೊಂದು ಓಡಿದೆ. ಇದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಇಸಿಎಸ್ ಲೇಔಟ್ ನಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರಲು ತಿಳಿಸಿದ್ದಾರೆ.
ಬೆಳಗಾವಿ: ಜಿಲ್ಲೆಯಲ್ಲಿ ಠಾಣಾಸರಹದ್ದಿಯಲ್ಲಿ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಪ್ರಾರಂಭ ಮಾಡಿದ್ದೇವೆ. ಫೇಸ್ಬುಕ್ ಟ್ಯೂಟರ್ ವಾಟ್ಸಾಪ್ ಅಥವಾ ಮತ್ತೆ ಯಾವುದೇ ಸೋಶಿಯಲ್ ಮೀಡಿಯಾ ದಲ್ಲೇ ಅವಹೇಳನಕಾರಿ ಪೋಸ್ಟ್ ಮಾಡಿದ್ದಲ್ಲಿ ನಮ್ಮ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ತಂಡ ತಕ್ಷಣವೇ ಕಾರ್ಯ ನಿರ್ವಹಿಸಲಿದೆ ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಎಸ್. ಎನ್. ಸಿದ್ದರಾಮಪ್ಪ ಹೇಳಿದರು. ಮಾದ್ಯಮದೊಂದಿಗೆ ಮಾತನಾಡಿದ ಅವರು ಸಮಾಜದ ಶಾಂತಿ ಸುವ್ಯವಸ್ಥೆ ಹಾಳು ಮಾಡುವಂತಹ ಪೋಸ್ಟ್ಗಳು ಹಾಕಿದರೆ ಅವರ ಮೇಲೆ ಸ್ವಯಂವಾಗಿ ಕೇಸ್ ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಜರ ಧರ್ಮ ನಾಯಕರಗಳ, ಜಾತಿ ಈ ವಿಷಯಗಳ ಕುರಿತು ಹೇಳಣಕಾರಿ ಪೋಸ್ಟ್ ಮಾಡಿದ್ದಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಬಜಾರ್ ಮತ್ತು ಶಹಪುರ್ ಠಾಣೆಗಳಲ್ಲಿ ವ್ಯಾಪ್ತಿಯಲ್ಲಿ ಎರಡು ಕೇಸುಗಳು ಪತ್ತೆಯಾಗಿದ್ದು ಎರಡು ವ್ಯಕ್ತಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ . ಸೋಶಿಯಲ್ ಮೀಡಿಯಾ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ರೂಪಿಸಲಾಗುತ್ತಿದೆ. ಹಾಗೂ…
ಬೆಂಗಳೂರು: ರಸ್ತೆ ಸುತ್ತಮುತ್ತಲಿನ ಪ್ರದೇಶಗಳು ಕಾಣುವಂತೆ, ಸಿಸಿ ಕ್ಯಾಮೆರಾ ಅಳವಡಿಸಬೇಕು. ಅವುಗಳು ಹೆಚ್ಚು ಕ್ವಾಲಿಟಿ ಇರಬೇಕು, ಕ್ಯಾಮೆರಾ ಯಾವಕಡೆ ಇರಬೇಕು, ನಿರ್ವಹಣೆ ಬಗ್ಗೆ ಪೋಲೀಸರು ಸಲಹೆ ನೀಡುತ್ತಾರೆ. ಒಂದು ಸಿಸಿ ಟಿವಿ, ಒಬ್ಬರು ಪೋಲೀಸ್ ಸಮ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ರಸ್ತೆಗಳಲ್ಲಿ ವಾಹನ ನಿಲುಗಡೆ, ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ದೂರು ಹೇಳಿದರು. ನಗರ ವ್ಯಾಪ್ತಿಯ ಎಲ್ಲಾ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮರ ಅಳವಡಿಸಿರಬೇಕು. ಸಿಸಿ ಕ್ಯಾಮೆರಾ ಅಳವಡಿಸದ ಮಾಲೀಕರಿಗೆ ದಂಡ ವಿಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ. ಯಲಹಂಕ ಉಪನಗರದ ಅಂಬೇಡ್ಕರ್ ಭವನದಲ್ಲಿ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಅಂಗಡಿಗಳಲ್ಲಿ ಪೋಲೀಸರ ಮಾರ್ಗದರ್ಶನದಲ್ಲಿ ಕ್ಯಾಮರಾ ಅಳವಡಿಸಬೇಕು ಎಂದು ಹೇಳಿದರು. ವರದಿ: ಆಂಟೋನಿ…
ಅಕ್ಟೋಬರ್ 29 ಕನ್ನಡಿಗರಿಗೆ ಭರಿಸಲಾಗದ ನೋವು ಕೊಟ್ಟ ದಿನ. ಚಿತ್ರರಂಗಕ್ಕೆ ತುಂಬಲಾರದ ನಷ್ಟವಾದ ದಿನ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ದೂರವಾಗಿ ಎರಡು ವರ್ಷ ಆಗ್ತಿದೆ. ಎರಡನೇ ವರ್ಷದ ಪುಣ್ಯಸ್ಮರಣೆಗೆ ಅಪ್ಪು ಸ್ಮಾರಕ ರೆಡಿಯಾಗಿದೆ. ಅನ್ನದಾನ, ರಕ್ತದಾನ, ನೇತ್ರದಾನದ ಕ್ಯಾಂಪ್ ಮಾಡುತ್ತಿದ್ದಾರೆ ಅಭಿಮಾನಿಗಳು. ದೂರದ ಊರುಗಳಿಂದ ಅಭಿಮಾನಿ ದೇವರುಗಳು ಅಪ್ಪುನ ನೋಡಲು ಈಗಾಗ್ಲೇ ಹೊರಟಿದ್ದಾರೆ. ಅಪ್ಪು ನಮನ ಮತ್ತು ಪ್ರೀತಿಯ ಧ್ಯಾನ ಮಾಡಲು ಮಧ್ಯರಾತ್ರಿಯಿಂದ ಶುರುವಾಗಿದೆ. ದೊಡ್ಮನೆ ಸದಸ್ಯರು ಅಪ್ಪು ಸ್ಮಾರಕಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಕುಟುಂಬದವರ ಪೂಜೆ ಬಳಿಕ ಅಭಿಮಾನಿ ದೇವರುಗಳು ಅಪ್ಪುಗೆ ನಮಿಸಲಿದ್ದಾರೆ. ಕೈ ಮುಗಿದು ಸ್ಮರಿಸಲಿದ್ದಾರೆ. ಹಬ್ಬದಂತೆ ಜನ ಆ ಜಾಗದಲ್ಲಿ ಸೇರುತ್ತಾರೆ. ಹೂವು ಹಾಕಿ ಅಲಂಕಾರ ಮಾಡಿ ಕಣ್ಣುತುಂಬಿಕೊಳ್ತಾರೆ. ಅಪ್ಪು ನೀನು ನಮ್ಮನ್ನ ಬಿಟ್ಟು ಹೋಗಿದ್ದು ಮೋಸ ಮೋಸ ಮೋಸ ಅಂತ ಜನ ಇಂದಿಗೂ ಕೊರಗ್ತಾರೆ. ಅಪ್ಪು ಅಮರ ಅವರ ನೆನಪು ಅಜರಾಮರ. ವರದಿ: ಆಂಟೋನಿ ಬೇಗೂರು
ಉತ್ತರ ಪ್ರದೇಶದಲ್ಲಿ ಶನಿವಾರದಂದು ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಡಿಸಿಪಿ ರಾಕೇಶ್ ಬರೋಟ್ ಮಾಹಿತಿ ನೀಡಿದ್ದು, ‘ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಬಳಿ ಸೂಸೈಡ್ ನೋಟ್ ಪತ್ತೆಯಾಗಿದೆ. ಆರ್ಥಿಕ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮುಂದಿನ ತನಿಖೆಯನ್ನು ಮುಂದುವರಿಸುತ್ತಿದ್ದೇವೆ’ ಎಂಡಿದ್ದಾರೆ. ಮೃತರ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.
ಹರಿಯಾಣದ ಕೈತಾಲ್ ನಲ್ಲಿ ಪೊಲೀಸರು ಮತ್ತು ಪುಂಡರ ನಡುವೆ ಗುಂಡಿನ ಚಕಮಕಿ ನಡೆದಿದೆ. ಎನ್‌ಕೌಂಟರ್ ವೇಳೆ, ದಾಳಿಕೋರರು ಪೊಲೀಸ್ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ವರದಿ ಪ್ರಕಾರ ಕೈತಾಲ್‌ನಲ್ಲಿ ನಾಲ್ವರು ದುಷ್ಕರ್ಮಿಗಳು ಇದ್ದಾರೆ ಎಂದು ಮಾಹಿತಿ ಬಂದ ಹಿನ್ನಲೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ಅಪರಾಧಿಯನ್ನು ಬಂಧಿಸಲಾಗಿದೆ.
ತಮಿಳುನಾಡು: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದೇಶಾದ್ಯಂತ ಭಾರೀ ಫ್ಯಾನ್ ಫಾಲೋಯಿಂಗ್ ಇದೆ. ಇದೀಗ ಅವರ ಅಭಿಮಾನಿಯೊಬ್ಬರು ಅವರಿಗಾಗಿ ದೇಗುಲವನ್ನು ನಿರ್ಮಿಸಿದ್ದಾರೆ. ಮಧುರೈನ ಕಾರ್ತಿಕ್ ಎಂಬ ರಜನಿಕಾಂತ್ ಅಭಿಮಾನಿ ಅವರಿಗಾಗಿ ದೇವಾಲಯವನ್ನು ನಿರ್ಮಿಸಿದರು. ಆ ದೇವಸ್ಥಾನದಲ್ಲಿ 250 ಕೆಜಿ ತೂಕದ ರಜನಿಕಾಂತ್ ವಿಗ್ರಹವನ್ನು ಸ್ಥಾಪಿಸಲಾಗಿದೆ. ಆ ಪ್ರತಿಮೆಯ ಕೆಳಗೆ, ಅಭಿಮಾನಿ ತನ್ನ ಹೆತ್ತವರ ಫೋಟೋ ಮತ್ತು ಗಣೇಶನ ಫೋಟೋವನ್ನು ಇರಿಸಿದ್ದು, ಪ್ರತಿ ದಿನ ರಜನಿಕಾಂತ್ ವಿಗ್ರಹಕ್ಕೆ ಆರತಿ, ಅಭಿಷೇಕ ಮತ್ತು ಪೂಜೆ ಸಲ್ಲಿಸುತ್ತಾನೆ.
ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಪ್ಲಿನ ಮೇಲೆ ನಿರ್ಬಂಧ ಹೇರುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ಈರುಳ್ಳಿಯ ಕನಿಷ್ಠ ರಫ್ತು ಬೆಲೆಯನ್ನು ಪ್ರತಿ ಟನ್ ಗೆ 800 ಡಾಲರ್‌ಗೆ ನಿಗದಿಪಡಿಸಲಾಗಿದೆ. ಈ ಬೆಲೆಯು ಡಿಸೆಂಬರ್ 31 ರವರೆಗೆ ಮಾನ್ಯವಾಗಿರುತ್ತದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ. ಬೆಲೆ ನಿಯಂತ್ರಣದ ಜತೆಗೆ ಈರುಳ್ಳಿ ದೇಶೀಯವಾಗಿ ಲಭ್ಯವಾಗುವಂತೆ ಮಾಡಲು ಕೇಂದ್ರ ಈ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ಈರುಳ್ಳಿ ಬೆಲೆ ಮತ್ತೊಮ್ಮೆ ಏರಿಕೆಯಾಗಿದೆ. ಕಳೆದ ವಾರದಲ್ಲಿ ಬೆಲೆಗಳು ದುಪ್ಪಟ್ಟಾಗಿದೆ. ಇದರಿಂದ ಜನಸಾಮಾನ್ಯರ ಸ್ಥಿತಿ ಚಿಂತಾಜನಕವಾಗಿದೆ. ಇತ್ತೀಚಿನವರೆಗೂ ಒಂದು ಕಿಲೋ ಈರುಳ್ಳಿ ಬೆಲೆ 20 ರೂ.ಯಿಂದ 30 ರೂ.ಇತ್ತು. ಈಗ ಈರುಳ್ಳಿ ಬೆಲೆ ಕೆಜಿಗೆ 40ರಿಂದ 50 ರೂಪಾಯಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ ಎಂದು ಮಾರುಕಟ್ಟೆಯ ಮೂಲಗಳು ವಿಶ್ಲೇಷಿಸುತ್ತಿವೆ. ಮುಂಗಾರು ತಡವಾಗಿ ಈ ಬಾರಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಈರುಳ್ಳಿ ಬೆಲೆ ಏರಿಕೆ ಆಗುತ್ತಿದೆ…
ಪ್ರಪಂಚದ ಪ್ರತಿಯೊಂದು ಧರ್ಮವು ತನ್ನದೇ ಆದ ವಿಶಿಷ್ಟ ಸಂಪ್ರದಾಯವನ್ನು ಹೊಂದಿದೆ ಮತ್ತು ಅಂತ್ಯಕ್ರಿಯೆಯ ವಿಧಿಗಳನ್ನು ವಿಭಿನ್ನವಾಗಿ ನಡೆಸಲಾಗುತ್ತದೆ. ಹಿಂದೂಗಳು ಶವಸಂಸ್ಕಾರ ಮಾಡುತ್ತಾರೆ, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಸಮಾಧಿ ಕಟ್ಟುತ್ತಾರೆ. ಆದರೆ ಪಾರ್ಸಿಗಳ ಅಂತ್ಯಕ್ರಿಯೆಯ ವಿಧಾನ ವಿಭಿನ್ನವಾಗಿದೆ. ಅವರಲ್ಲಿ ಯಾರಾದರೂ ಸತ್ತರೆ ಅದನ್ನು ರಣಹದ್ದುಗಳಿಗೆ ಆಹಾರವಾಗಿ ಬಿಡುತ್ತಾರೆ. ಅವರ ದೃಷ್ಟಿಯಲ್ಲಿ, ದೇಹವು ಪ್ರಕೃತಿಯ ವರವಾಗಿದೆ ಮತ್ತು ಅದನ್ನು ಪ್ರಕೃತಿಗೆ ಅರ್ಪಿಸುವುದು ಅವರ ಉದ್ದೇಶವಾಗಿದೆ.