Subscribe to Updates
Get the latest creative news from FooBar about art, design and business.
- ಮಧುಗಿರಿ: ದಲಿತರ ಸಮಾಧಿ ರಕ್ಷಣೆಗೆ ಆಗ್ರಹ
- ತುಮಕೂರು: ಕಾರ್ಮಿಕನ ಮೇಲೆ ಲಾರಿ ಹರಿದು ಸಾವು
- ಓಟಿಪಿ ಪಡೆದು ಮಹಿಳೆಯ ಖಾತೆಯಿಂದ 41 ಸಾವಿರ ಹಣ ದೋಚಿದ ಸೈಬರ್ ಕಳ್ಳರು!
- ರೈತರ ಸಮಸ್ಯೆಗಳ ಕುರಿತು ಸಿಎಂಗೆ ಮನವಿ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಿರ್ಧಾರ
- ಮಧುಗಿರಿ: ಮೇ ನಲ್ಲಿ 2 ತಿಂಗಳ ಪಡಿತರ ವಿತರಣೆ
- ಸಿದ್ದರಾಮಯ್ಯ ಸರ್ಕಾರಕ್ಕೆ 3 ವರ್ಷ: ಮೇ 19ರಂದು ತುಮಕೂರಿನಲ್ಲಿ ಸಾಧನಾ ಸಮಾವೇಶ
- ಕೆರೆಯ ಮಣ್ಣೆತ್ತಲು ರೈತರಿಗೆ ಅಡ್ಡಿಪಡಿಸುವಂತಿಲ್ಲ: ಜಿಲ್ಲಾಧಿಕಾರಿಗೆ ವಿ.ಸೋಮಣ್ಣ ಸೂಚನೆ
- ಗುರು ಶಿಷ್ಯರು: ಈ ದಿನದ ಕಥೆ
Author: admin
ಬಾಲಿವುಡ್ ನ ಹೆಸರಾಂತ ಗಾಯಕ ಲಕ್ಕಿ ಅಲಿ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಎಕ್ಸ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಲಕ್ಕಿ ಅಲಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಎಎಸ್ ಪತಿ ಸುಧೀರ್ ರೆಡ್ಡಿ ಭೂ ಮಾಫಿಯಾ ಜೊತೆಗೆ ಕೈ ಜೋಡಿಸಿಕೊಂಡು ಅತಿಕ್ರಮಿಸುತ್ತಿದ್ದಾರೆ. ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನಿರಾಕರಿಸುತ್ತಿದ್ದಾರೆ. ಆದರೆ ಇದು ಸಂಪೂರ್ಣ ಕಾನೂನು ಬಾಹಿರ ಎಂದು ಕಾನೂನು ಸಲಹೆಗಾರರು ಹೇಳುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಸೆಕ್ಷನ್ 12ರ ಪ್ರಕಾರ ಗಂಡನಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ ಪತ್ನಿಯು, ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ, ಜೀವನಾಂಶ ಪಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ. ಆ ಮೂಲಕ ವಿಚ್ಛೇದಿತ ಪತಿಯಿಂದ ಜೀವನಾಂಶ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪತ್ನಿಗೆ ಜೀವನಾಂಶ ನೀಡುವಂತೆ ಪತಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು ನ್ಯಾ. ರಾಜೇಂದ್ರ ಬಾದಾಮಿಕರ್ ವಿಚಾರಣೆ ನಡೆಸಿದರು
ಪ್ರಸಕ್ತ ವರ್ಷದ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮಾನ್ಯತೆ ಪಡೆಯುವ ಮತ್ತು ನವೀಕರಣಕ್ಕೆ ಆನ್ ಲೈನ್ ಮೂಲಕ 3,260 ಅರ್ಜಿಗಳು ಸಲ್ಲಿಕೆಯಾಗಿದ್ದು, 823 ಅರ್ಜಿಗಳನ್ನು ಮಾತ್ರ ಪುರಸ್ಕರಿಸಿ ಮಾನ್ಯತೆ ನವೀಕರಿಸಲಾಗಿದೆ. ಹಾಗಾಗಿ ಮಾನ್ಯತೆ ಪಡೆಯಲು ಅ. 25ರೊಳಗೆ ಪುನಾಃ ಅರ್ಜಿಯನ್ನು ಸಲ್ಲಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಹಾಗೆಯೇ 2021-22 ಹಾಗೂ 2022-23ನೆ ಸಾಲಿನಲ್ಲಿ ಮಾನ್ಯತೆ ಪಡೆಯಲು ಅರ್ಜಿ ಸಲ್ಲಿಸಿದ್ದು, ಅರ್ಜಿಗಳು ತಿರಸ್ಕೃತವಾಗಿದ್ದರೆ ಪುನಃ ಅರ್ಜಿಗಳನ್ನು ಸಲ್ಲಿಸಬೇಕು.
ಬೆಂಗಳೂರು: ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಖಾದೀರ್ ಅಹಮ್ಮದ್ (29) ಅವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ರಾಜೇಂದ್ರ ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಪೂಜಿ ಬಡಾವಣೆ ನಿವಾಸಿ ಖಾದೀರ್ ಹಾಗೂ ಸ್ನೇಹಿತರು, ಆರೋಪಿ ರಾಜೇಂದ್ರ ಪ್ರಸಾದ್ ಮಾಲೀಕತ್ವದ ನಿರ್ಮಾಣ ಹಂತದ ಕಟ್ಟಡದಲ್ಲಿ ಸಾಮಗ್ರಿಗಳನ್ನು ಕದಿಯಲು ಹೋಗಿದ್ದರೆಂಬ ಆರೋಪವಿದೆ.
ಕಂಕೇರ್: ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಛತ್ತೀಸ್ ಗಢದಲ್ಲಿ ತಮ್ಮ ಪಕ್ಷ ಅಧಿಕಾರವನ್ನು ಉಳಿಸಿಕೊಂಡರೆ, ಬಿಹಾರದಲ್ಲಿ ನಡೆಸಿದ ರೀತಿಯಲ್ಲೇ ಜಾತಿ ಗಣತಿಯನ್ನು ರಾಜ್ಯದಲ್ಲೂ ನಡೆಸಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಹೇಳಿದ್ದಾರೆ. ಛತ್ತೀಸ್ ಗಢದ ಕಂಕೇರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮವಾದ ‘ನಾಗರಿಯಾ ನಿಕಾಯ್ ಏವಂ ಪಂಚಾಯತ್ ರಾಜ್ ಮಹಾಸಮ್ಮ್ಲೇನ್’ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ವರ್ಷಾಂತ್ಯದ ಚುನಾವಣೆಯಲ್ಲಿ ತಮ್ಮ ಪಕ್ಷವು ಮತ್ತೊಮ್ಮೆ ಚುನಾಯಿತರಾದರೆ ಬಡವರಿಗೆ ಹತ್ತು ಲಕ್ಷ ಮನೆಗಳನ್ನು ನೀಡುವುದಾಗಿ ಭರವಸೆ ನೀಡಿದರು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಗಾಂಧಿ, ಇದು ಶ್ರೀಮಂತರಿಗಾಗಿ ಮತ್ತು ಬಡವರ ಅಥವಾ ಮಧ್ಯಮ ವರ್ಗದ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂದು ಆರೋಪಿಸಿದರು. ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಜಾತಿ ಸಮೀಕ್ಷೆಯ ಮಾದರಿಯಲ್ಲಿಯೇ ರಾಜ್ಯದಲ್ಲಿ ಜಾತಿ ಗಣತಿ ನಡೆಸಲಾಗುವುದು ಎಂದು ಅವರು ಹೇಳಿದರು. “ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗಳಿಗೆ 15 ಲಕ್ಷ…
ನಮಗೆಲ್ಲರಿಗೂ ತಿಳಿದಿರುವಂತೆ ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ ಮತ್ತು ಸಹಾಯವನ್ನು ಪಡೆಯುವುದು ಶಕ್ತಿಯ ಸಂಕೇತವಾಗಿದೆ. ನಿಯಮಿತ ವ್ಯಾಯಾಮವು ಮಾನಸಿಕ ಆರೋಗ್ಯದ ಮೇಲೆ ಗಣನೀಯ ಮತ್ತು ಧನಾತ್ಮಕ ಪರಿಣಾಮ ಬೀರುತ್ತದೆ. ಈ ಸಂಬಂಧವು ಬಹುಮುಖಿಯಾಗಿದ್ದು, ಮಾನಸಿಕ ಯೋಗಕ್ಷೇಮದ ವಿವಿಧ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಆತಂಕ ಮತ್ತು ಖಿನ್ನತೆಯ ರೋಗಲಕ್ಷಣಗಳ ಇಳಿಕೆಗೆ ಸ್ಥಿರವಾಗಿ ಸಂಬಂಧಿಸಿದೆ. ದೈಹಿಕ ಚಟುವಟಿಕೆಯು ಅರಿವಿನ ಸಾಮರ್ಥ್ಯಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಮೆಮೊರಿ, ಗಮನ ಮತ್ತು ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಮೆದುಳಿಗೆ ಹೆಚ್ಚಿದ ರಕ್ತದ ಹರಿವಿಗೆ ಕಾರಣವಾಗಿದೆ, ಇದು ಮೆದುಳಿನ ಕೋಶಗಳನ್ನು ಪೋಷಿಸುತ್ತದೆ ಮತ್ತು ಹೊಸ ನ್ಯೂರಾನ್ ಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ನಿಯಮಿತ ವ್ಯಾಯಾಮವು ನಿದ್ರೆಯ ಮಾದರಿಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ನಿದ್ರಿಸುವುದನ್ನು ಸುಲಭಗೊಳಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಭಾವನಾತ್ಮಕ ನಿಯಂತ್ರಣ ಮತ್ತು ಮಾನಸಿಕ ಸ್ಪಷ್ಟತೆಗೆ ಗುಣಮಟ್ಟದ ನಿದ್ರೆ ಅತ್ಯಗತ್ಯ. ವ್ಯಾಯಾಮವು ಶಕ್ತಿಯುತ ಒತ್ತಡ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.…
ರಾಜ್ಯದಲ್ಲಿ ಅಭಿವೃದ್ಧಿ ಹಾಳು ಮಾಡಿದ್ದು ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದುರ್ಗದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಬರ ಅಧ್ಯಯನ ತಂಡ ಭೇಟಿ ನೀಡಿದೆ. ಈಗಾಗಲೇ ರಾಜ್ಯದಲ್ಲಿ 195 ತಾಲೂಕು ಬರ ಅಂತ ಘೋಷಣೆ ಮಾಡಲಾಗಿದೆ. ಇನ್ನು ರಾಜ್ಯದಲ್ಲಿ ಮಳೆ ಇಲ್ಲದೆ 30 ಸಾವಿರ ಕೋಟಿ ಬೆಳೆಹಾನಿ ಆಗಿದೆ. 42 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ ಎಂದು ಮಾಹಿತಿ ನೀಡಿದರು. ಮಳೆ ಇಲ್ಲದೆ ರಾಜ್ಯದ ನಮ್ಮ ಜಲಾಶಯದಲ್ಲಿ ಸಹ ನೀರು ಇಲ್ಲ, ಅಪ್ಪರ್ ಕೃಷ್ಣ, ನಾರಾಯಣಪುರ ಡ್ಯಾಂ ಬಿಟ್ರೆ ಎಲ್ಲಾ ಡ್ಯಾಂಗಳಲ್ಲಿ ನೀರು ಕಡಿಮೆ ಆಗಿದೆ ಎಂದು ಹೇಳಿದರು. ಅಲ್ಲದೆ ನಾವು 4,860 ಕೋಟಿ ಪರಿಹಾರವನ್ನು ಕೇಂದ್ರಕ್ಕೆ ಕೇಳಿದ್ದೇವೆ. ಈ ಬಾರಿ ಒಂದು ರೀತಿ ಹಸಿರು ಬರ ಆಗಿದೆ. ಇದು ರಾಜ್ಯದಲ್ಲಿ ವಾಸ್ತವ ಪರಿಸ್ಥಿತಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತುಮಕೂರು: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮಧ್ಯೆ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿ ಜಿಲ್ಲೆಯ ರಕ್ಷಣಾ ವೇದಿಕೆ ಕಾರ್ಯಕರ್ತರು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಮೂಲಕ ತುಮಕೂರು ಜಿಲ್ಲೆಯಲ್ಲಿ ಕಾವೇರಿ ನದಿ ನೀರು ಹಂಚಿಕೆಯಲ್ಲಿ ತೀವ್ರ ಅನ್ಯಾಯವಾಗುತ್ತಿದೆ ಇದನ್ನು ಸರಿಪಡಿಸುವ ನಿಟ್ಟನಲ್ಲಿ ಕೇಂದ್ರ ಸರ್ಕಾರ ಮುಂದಾಳತ್ವ ವಹಿಸಿ ಇದನ್ನು ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿದರು. 17 ಜನ ಕರ್ನಾಟಕ ರಕ್ಷಣಾ ವೇದಿಯ ಕಾರ್ಯಕರ್ತರಿಂದ ರಕ್ತದ ಮೂಲಕ ಪತ್ರ ಬರೆಯಲಾಗಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನ ಕರವೇ ಕಾರ್ಯಕರ್ತರಿಂದ ವಿನೂತನ ಚಳುವಳಿ ಆರಂಭವಾಗಿದೆ. ಕಾವೇರಿ ನಮ್ಮದು, ಕಾವೇರಿ ಹೋರಾಟಕ್ಕೆ ಜಯಸಿಗಲಿ ಎಂದು ರಕ್ತದಿಂದ ಪ್ರಧಾನಿಗೆ ರಕ್ಷಣಾ ವೇದಿಕೆ ಕಾರ್ಯಕರ್ತರು ಪತ್ರ ಬರೆದಿದ್ದಾರೆ.
ತುಮಕೂರು: ಗೊಲನ ಎಂಟರ್ ಪ್ರೈಸಸ್ ನ ವತಿಯಿಂದ ತುಮಕೂರಿನ ಹೆಸರಾಂತ ಕಂಪನಿಯಲ್ಲಿ ಕೆಲಸ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಯುವಕರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು: ವಿದ್ಯಾರ್ಹತೆ: SSLC,PUC , ITI,JOC,DIPLOMO/Any Degree ಸಂಬಳ: 13,000 to 18,000/- ಕಂಪನಿಯ ಸೌಲಭ್ಯಗಳು: 1) ಪಿಎಫ್ (PF) 2) ಇ ಎಸ್ ಐ (ESI) ತಕ್ಷಣ ಸಂಪರ್ಕಿಸಿ ಮೊಬೈಲ್ ಸಂಖ್ಯೆ: 97431 03968
ಶ್ರವಣೂರು: ಇನ್ಮುಂದೆ ಪ್ರತಿ ಮನೆ ಮನೆ ಬಾಗಿಲಿಗೆ ಆರೋಗ್ಯ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಶ್ರವಣೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾದ ಸಂತೋಷ್ ರವರು ತಿಳಿಸಿದರು. ಹೊಳೆನರಸೀಪುರ ತಾಲ್ಲೂಕಿನ ಶ್ರವಣೂರು ಗ್ರಾಮದ ರಂಗಸ್ಥಳ ಆವರಣದಲ್ಲಿ ವಿಶ್ವ ರತ್ನ ಡಾ.ಅಂಬೇಡ್ಕರ್ ದಲಿತ ಕ್ಷೇಮಾಭಿವೃದ್ಧಿ ಸಂಘ ಹಾಗೂ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಕಾರ್ಯಕ್ರಮವು ಯುವ ಮುಖಂಡ ಶ್ರೀಧರ್ ಸತೀಶ್ ಅಧ್ಯಕ್ಷತೆಯಲ್ಲಿ, ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿಯಾದ ವೀರಭದ್ರಯ್ಯ ಮತ್ತು ಗಣ್ಯರಿಂದ ದೀಪ ಹಚ್ಚುವ ಮೂಲಕ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಸುತ್ತ ಮುತ್ತ ಹಳ್ಳಿಯ ಆಶಾ ಕಾರ್ಯಕರ್ತೆಯರು ಲೋಕೇಶ್ ಎಮ್.ಎನ್.ಶಿವರಾಜ್.ಜಿ.ಡಿ. ಡಾ.ಯಶ್ವಂತ್.NCD ಕೌನ್ಸಿಲರ್ ಎಸ್. ಕಮಲೇಶ್.ಪ್ರಕಾಶ್. ರವರು ಹಾಗೂ ಅಂಬೇಡ್ಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ: ಮಂಜು ಶ್ರವಣೂರು