Subscribe to Updates
Get the latest creative news from FooBar about art, design and business.
- ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಬಾಳಲ್ಲಿ ದುರಂತ!
- ತುರುವೇಕೆರೆ ಪೊಲೀಸ್ ಠಾಣೆಗೆ ದಕ್ಷ IPS ಅಧಿಕಾರಿ ದಿ.ಡಾ.ಕೆ.ಮಧುಕರ್ ಶೆಟ್ಟಿ ಭಾವ ಚಿತ್ರ ಕೊಡುಗೆ
- ಬಸ್ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಆಕ್ರೋಶ: ತುರುವೇಕೆರೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ತಡೆದು ಪ್ರತಿಭಟನೆ
- ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್: ಕಂದೇಗಾಲ ಶಿವರಾಜು
- ಕುವೆಂಪು ಅವರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು: ಎಂ.ಎಂ.ನಟರಾಜು ಅಭಿಪ್ರಾಯ
- ಅಭಿವೃದ್ಧಿ ಕಾಮಗಾರಿಗಳಿಗೆ ವೇಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಗತಿ ಪರಿಶೀಲನೆ
- ಏನೂ ಮಾಡದ ಸ್ಪಂದನಾ ಸೇಫ್ ಆಗುತ್ತಿರುವುದು ಹೇಗೆ? | ಮಾಳು ನಿಪನಾಳ್ ಅಸಮಾಧಾನ
- ಮನೆಯವರಿಗೆ, ಸ್ನೇಹಿತರಿಗೆ ಗೊತ್ತಾಗದಂತೆ ಮಾಸ್ಕ್ ಧರಿಸಿ 14 ಕೋಟಿ ಲಾಟರಿ ಬಹುಮಾನ ಪಡೆದ ಯುವಕ: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ…!
Author: admin
ಬೀದರ್ : ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಇ–ಪಾವತಿ ಅಭಿಯಾನ (ವಾರಸುದಾರರ ಹಕ್ಕು ಬದಲಾವಣೆ) ಆಂದೋಲನ ಜಾರಿಗೆ ತಂದಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಔರಾದ್ ನ ತಹಶೀಲ್ದಾರ್ ಮಹೇಶ ಪಾಟೀಲ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಮರಣ ಹೊಂದಿದ ಪಟ್ಟೆದಾರರ ಹೆಸರು ತೆಗೆದು, ಅವರ ಕಾನೂನು ಬದ್ಧ ವಾರಸುದಾರರ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಎಲ್ಲ ರೈತರು ಮೃತರ ಮರಣ ಪ್ರಮಾಣ ಪತ್ರ, ಕುಟುಂಬದ ವಂಶವೃಕ್ಷ, ಆಧಾರ್ ಕಾರ್ಡ್ ಹಾಗೂ ಪಹಣಿಯೊಂದಿಗೆ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ. ಮರಣ ಹೊಂದಿದ ಪಟ್ಟೆದಾರರ ಹೆಸರು ಪಹಣಿಯಲ್ಲಿ ಮುಂದುವರಿದರೆ, ಬ್ಯಾಂಕ್ ಲೋನ್, ಬೆಳೆ ಪರಿಹಾರ, ಬೆಳೆ ವಿಮೆ, ಪಿಎಂ ಕಿಸಾನ್ ಯೋಜನೆ, ಬೀಜ, ಗೊಬ್ಬರ ಹಾಗೂ ಇತರೆ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ಎಲ್ಲ ರೈತರು ಇ-ಪಾವತಿ ಖಾತೆ ಅಭಿಯಾನದ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ…
ಬೀದರ್ : ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆದೇಶಿಸಿದೆ. ಭಾಲ್ಕಿ ತಾಲ್ಲೂಕಿನ ಮೇಹಕರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಅಳವಾಯಿ ಗ್ರಾಮದಲ್ಲಿ 2024 ರಲ್ಲಿ ಪೋಕ್ಸೋ ಪ್ರಕರಣಕ್ಕೆ ಒಳಪಡುವ ಘಟನೆ ನಡೆದಿತ್ತು. ಈ ಘಟನೆ ವಿರುದ್ಧ ಮೇಹಕರ್ ಪೊಲೀಸ್ ಠಾಣೆಯಲ್ಲಿ ಅಂದಿನ ಎಎಸ್ ಐ ಚಂದ್ರಕಾಂತ್ ಅವರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು. ಮುಂದಿನ ತನಿಖೆಯನ್ನು ಭಾಲ್ಕಿ ಗ್ರಾಮೀಣ ಪೊಲೀಸ್ ವೃತ ನಿರೀಕ್ಷಕ ಜಿ.ಎಸ್.ಬಿರಾದಾರ್ ಅವರು ವಹಿಸಿಕೊಂಡು ಪ್ರಕರಣದ ತನಿಖೆಯನ್ನು ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬಿ.ಕೆ.ಕೋಮಲಾ ಅವರು ಅಪರಾಧಿಯನ್ನು ಶಿಕ್ಷೆಗೆ ಒಳಪಡಿಸಿ ಆದೇಶಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…
ಚೆನ್ನೈ: ಕಮಲ್ ಸರ್ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದೆ. ಹಾಗಾಗೀ ಅವರ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತವಾಯಿತು. ಕಮಲ್ ಸರ್ ಕ್ಷಮೆ ಕೇಳಬೇಕಿತ್ತು ಎಂದು ಚೆನ್ನೈನಲ್ಲಿ ತಮಿಳು ಮಾಧ್ಯಮಗಳ ಪ್ರಶ್ನೆಗೆ ಖಡಕ್ ಉತ್ತರ ನೀಡಿದ್ದಾರೆ. ಪ್ರೇಮ್ ನಿರ್ದೇಶನದ, ನಟ ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರದ ಇತ್ತೀಚಿಗೆ ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ ಶುಕ್ರವಾರ ಚೆನ್ನೈನಲ್ಲಿ ಪ್ರಚಾರದ ಭಾಗವಾಗಿ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡದೇ ಇರುವ ತಮಿಳು ಮಾಧ್ಯಮಗಳ ಪ್ರಶ್ನೆಗೆ ಕನ್ನಡದಲ್ಲಿಯೇ ಪ್ರೇಮ್ ಉತ್ತರಿಸಿದ್ದಾರೆ. ನಾವೇನು ಬೇರೆ ದೇಶದಲ್ಲಿಲ್ಲ. ಇನ್ನೂರು–ಮುನ್ನೂರು ಕಿಲೋ ಮೀಟರ್ ದೂರದಲ್ಲಿದ್ದೇವೆ ಅಷ್ಟೇ. ಎಲ್ಲರೂ ಒಂದೇ. ತಾಯಿಗೆ ಯಾರಾದರೂ ಬೈದರೆ ಸುಮ್ಮನಿರುತ್ತಾರಾ? ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ಎಲ್ಲಾ ತಮಿಳು ಸಿನಿಮಾಗಳು ಚೆನ್ನಾಗಿ ಓಡುತ್ತವೆ. ನಾನೂ ತಮಿಳು ಸಿನಿಮಾಗಳನ್ನು ನೋಡುತ್ತೇನೆ. ಕರ್ನಾಟಕದಲ್ಲಿ ತಮಿಳು ಸಿನಿಮಾಗಳ ಬಿಡುಗಡೆಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಕಮಲ್ ಸರ್ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದೆ. ಹಾಗಾಗೀ ಅವರ ಸಿನಿಮಾ…
ಬೆಂಗಳೂರು: ನನ್ನ ಖಾಸಗಿ ಕಾರ್ಯಕ್ರಮಗಳಿಗೆ ರಾಜಕೀಯ ಬಣ್ಣ ಹಚ್ಚುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಾನು ಖಾಸಗಿ ಕಾರ್ಯಕ್ರಮ ನಿಮಿತ್ತ ಶಿರಡಿ ಮತ್ತಿತರ ಕಡೆ ಭೇಟಿ ನೀಡಿದ್ದೇನೆ. ಆದರೆ ಕೆಲವು ಟಿವಿ ಚಾನೆಲ್ ಮತ್ತಿತರ ಮಾಧ್ಯಮಗಳಲ್ಲಿ ಹೈಕಮಾಂಡ್ ಬುಲಾವ್ ಮೇರೆಗೆ ದಿಲ್ಲಿಗೆ ತೆರಳಿದ್ದೇನೆ ಎಂದು ವರದಿ ಆಗಿರುವುದು ಸಂಪೂರ್ಣ ಸತ್ಯಕ್ಕೆ ದೂರವಾದ ವಿಚಾರ. ನನ್ನ ಖಾಸಗಿ ಕಾರ್ಯಕ್ರಮಗಳಿಗೆ ರಾಜಕೀಯ ಬಣ್ಣ ಹಚ್ಚುವುದು ಸಲ್ಲದು ಎಂದು ಹೇಳಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಡಿಕೆ.ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿಯವರು ಭೇಟಿಗೆ ಸಮಯ ನೀಡಿರಲಿಲ್ಲ. ಭೇಟಿಗೆ ಕಾದು ಕುಳಿತು ಅವಕಾಶ ಸಿಗದೇ ಶುಕ್ರವಾರ ಬೆಂಗಳೂರಿಗೆ ವಾಪಸ್ಸಾಗಿದ್ದರು. ಅದರೆ, ಇದೀಗ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ…
ಕೊರಟಗೆರೆ : ಕರ್ನಾಟಕದ 234 ತಾಲ್ಲೂಕಿನಲ್ಲಿ ಈಗಾಗಲೇ ನಮ್ಮ ಸಂಘಟನೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘಟನೆ ಬಲ ಪಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಪ್ರವಾಸ ಕೈಗೊಂಡಿದ್ದೇನೆ ಎಂದು ನಮ್ಮ ಕರ್ನಾಟಕ ರಾಜ್ಯ ಅಹಿಂದ ಜನಪರ ವೇದಿಕೆ ರಾಜ್ಯಾಧ್ಯಕ್ಷ ನಗರ‍್ಲು ನರಸಿಂಹಪ್ಪ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ರಾಜ್ಯ ಅಹಿಂದ ಜನಪರ ವೇದಿಕೆ ನೂತನ ತಾಲ್ಲೂಕು ಘಟಕ ಉದ್ಘಾಟನಾ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಉದ್ಯೋಗ ರೂಪಿಸಿಕೊಳ್ಳಲು ಮುಂದಾದ ಯುವಕರಿಗೆ ಸಂಘಟನೆ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲದ ರೂಪದಲ್ಲಿ ನೀಡಲಾಗುವುದು. ಅಹಿಂದ ತತ್ವವನ್ನು ಅನುಸರಿಸಿ ನೊಂದವರಿಗೆ ಸಾಮಾಜಿಕ ಶೈಕ್ಷಣ ಕ ಆರ್ಥಿಕ ಸಮಾನತೆ ಸಿಗುವಂತೆ ಮಾಡುವ ಉದ್ದೇಶ ಹೊಂದಿದೆ ಈ ಸಂಘಟನೆ ಪಕ್ಷಾತೀತವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಮತ್ತು ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಟಿ.ಬಿ. ಮಾತನಾಡಿ, ಅಲ್ಪಾಸಂಖ್ಯಾತರು, ಹಿಂದುಳಿದ ವರ್ಗಗಳ, ತಳ ಮಟ್ಟದ ಜನರನ್ನ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ…
ಸರಗೂರು: ಶಾಸಕ ಅನಿಲ್ ಚಿಕ್ಕಮಾದುರವರ ವಿರುದ್ಧ ವಿರೋಧ ಪಕ್ಷದ ಮುಖಂಡರು ಅಭಿವೃದ್ಧಿ ಕೆಲಸ ನೋಡೋಕೆ ಆಗದೇ ಇತರ ಪಿತ್ತೂರಿ ನಡೆಸುತ್ತಿದ್ದಾರೆ ಎಂದು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರದಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ ತಿಳಿಸಿದರು. ವಿರೋಧ ಪಕ್ಷದ ನಾಯಕ ಮತ್ತು ಮುಖಂಡರು ಸಾರ್ವಜನಿಕರಿಗೆ ಶಾಸಕರ ವಿರುದ್ಧ ಲೋಕಲ್ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಜನರಿಗೆ ಸತ್ಯಾಂಶ ಗೊತ್ತಿಲ್ಲ. ಗೊತ್ತಾಗಿದರೆ ಶಾಸಕರ ವಿರುದ್ಧ ಮಾತನಾಡುವುದಿಲ್ಲ. ತಾಲೂಕಿನ ಕಬಿನಿ, ತಾರಕ, ನುಗು ಜಲಾಶಯಗಳ ಹಿನ್ನೀರು ಪ್ರದೇಶಗಳಲ್ಲಿ ರೆಸಾರ್ಟ್ ರಾಜಕೀಯ ನಾಯಕರಿಗೆ ಮಾಡಿಸಿಕೊಂಡಿದ್ದಾರೆ ಎಂದು ಜಾಲತಾಣ ಮತ್ತು ಮಾಧ್ಯಮಗಳು ವರದಿ ಮಾಡಿದ್ದಾರೆ. ಅವುಗಳಲ್ಲಿ ಯಾವುದೇ ಸತ್ಯಾಂಶ ದಾಖಲೆಗಳು ಇಲ್ಲದೆ ಶಾಸಕರ ವಿರೋಧಿಗಳು ಆರೋಪ ಮಾಡಿದ್ದಾರೆ ಅಷ್ಟೇ. ತಾಲೂಕಿನ ಬಗ್ಗೆ ಎಲ್ಲಾ ಸಮುದಾಯದ ಪ್ರತಿ ಒಂದು ಗ್ರಾಮಗಳಿಗೆ ಭೇಟಿ ನೀಡಿ ಕೇಳಿದರೂ ನಮ್ಮ ಶಾಸಕ ಅನಿಲ್ ಚಿಕ್ಕಮಾದು ರವರ ಬಗ್ಗೆ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಹೇಳುತ್ತಾರೆ. ನಮ್ಮ…
ಸರಗೂರು: ತಾಲೂಕಿನ ಸರಗೂರು ಸಮೀಪದ ಗೊಂತಗಾಲದ ಹುಂಡಿ ಬಳಿಯಲ್ಲಿ ಚಲಿಸುತ್ತಿದ್ದ ಸರಕಾರಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಕೆರೆಗೆ ನುಗ್ಗಿದ ಘಟನೆ ಗುರುವಾರ ರಾತ್ರಿ ನಡೆದಿದೆ. ವಿಚಾರ ಗಮನಕ್ಕೆ ಬಂದ ಕೂಡಲೇ ಶಾಸಕ ಅನಿಲ್ ಕುಮಾರ್ ಎಚ್.ಡಿ.ಕೋಟೆಯ ಸಾರ್ವಜನಿಕರ ಆಸ್ಪತ್ರೆಯಲ್ಲಿ ಭೇಟಿ ನೀಡಿ ಗಾಯಾಳುಗಳನ್ನು ಆರೋಗ್ಯ ಬಗ್ಗೆ ವಿಚಾರಿಸಿ ಮಾತನಾಡಿದರು. ತಾಲೂಕಿನ ಯಾವುದೇ ಸಮಯದಲ್ಲಿ ಈಥರ ಘಟನೆಗಳು ನಡೆಯಬಾರದಾಗಿತ್ತು . ಕೆಎಸ್ಸಾರ್ಟಿಸಿ ವ್ಯವಸ್ಥಾಪಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಬಸ್ ನ ಅಪಘಾತ ಸಂಭವಿಸಿರುವ ಗಾಯಾಳಗಳಿಗೆ ಜವಾಬ್ದಾರಿಯನ್ನು ಇಲಾಖೆಯವರು ಉಳಿಸಿಕೊಳ್ಳಬೇಕೆಂದು ಸೂಚನೆ ನೀಡಿದರು. ಬೊಂತಗಾಲದ ಹುಂಡಿ ಬಳಿಯಲ್ಲಿ ಗುರುವಾರ ಸಂಜೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸರಕಾರಿ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಕೆರೆಯ ನೀರಿಗೆ ನುಗ್ಗಿದ ಘಟನೆ ನಡೆದಿತ್ತು. ಘಟನೆಯಲ್ಲಿ ಗಾಯಗೊಂಡಿದ್ದ 7 ಮಂದಿ ಗಾಯಾಳುಗಳನ್ನು ಸರಗೂರು ಸ್ವಾಮಿ ವಿವೇಕಾನಂದ ಆಸ್ಪತ್ರೆಗೆ ಪೊಲೀಸರು ಸ್ಥಳಾಂತರಿಸಿದರು. ಬಾಲಕನೊಬ್ಬ ಸೇರಿದಂತೆ 3 ಮಂದಿಯನ್ನು ಮೈಸೂರು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾನೂನು ಕ್ರಮ…
ತುಮಕೂರು: ತುಮಕೂರಿನ ಗೊಲನ ಎಂಟರ್ ಪ್ರೈಸಸ್ ಉದ್ಯಮ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿದ್ದು, ಕೇಂದ್ರ ಸರ್ಕಾರದ ಮಾನ್ಯತೆಯನ್ನು ಪಡೆಯುವ ಮೂಲಕ ತುಮಕೂರು ಜಿಲ್ಲೆಗೆ ಹೆಮ್ಮೆ ತಂದಿದೆ. ಗೊಲನ ಎಂಟರ್ ಪ್ರೈಸಸ್ ಸಂಸ್ಥೆಯ ಯಶಸ್ವಿಗೆ ಸಂಸ್ಥೆಯ ಸಂಸ್ಥಾಪಕರಾದ ನಟರಾಜು ಜಿ.ಎಲ್. ಅವರ ಪರಿಶ್ರಮ ಮತ್ತುಉದ್ಯೋಗ ಸೃಷ್ಟಿಯ ಸಾಮಾಜಿಕ ಕಳಕಳಿ ಕಾರಣವಾಗಿದೆ. ಕೇವಲ ಉದ್ಯಮವಾಗಿ ಅಲ್ಲದೇ ಉದ್ಯೋಗ ಸೃಷ್ಟಿಯ ಮೂಲಕ ಗೊಲನ ಎಂಟರ್ ಪ್ರೈಸಸ್ ಮಾದರಿಯಾಗಿದೆ. 2016ರಲ್ಲಿ ಆರಂಭವಾದ ಸಂಸ್ಥೆಯು ಕಾರ್ಮಿಕರ ನಿಯೋಜನೆ, ಗೃಹ ಸಹಾಯ ಸೇವೆ, ಲೋಡಿಂಗ್-ಅನ್‌ಲೋಡಿಂಗ್, ತೋಟಗಾರಿಕೆ, ರಸ್ತೆ ಹಾಗೂ ಶೌಚಾಲಯ ಶುದ್ಧೀಕರಣ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ, ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ. ಕೇಂದ್ರ ಸರ್ಕಾರದ ಮಾನ್ಯತೆ: ಗೊಲನ ಎಂಟರ್ ಪ್ರೈಸಸ್, ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC) ಇವರಿಂದ ಗೌರವಪೂರ್ಣ ಪ್ರಮಾಣಪತ್ರವನ್ನು ಪಡೆದಿದೆ. ಸಮಯಕ್ಕೆ ಸರಿಯಾಗಿ ಜಿಎಸ್ ಟಿ ತೆರಿಗೆ ಪಾವತಿಸಿ, ಶಿಸ್ತಿನ ಮಾದರಿಯಾಗಿ ನಡೆದುಕೊಂಡಿರುವುದಕ್ಕಾಗಿ ಈ ಮಹತ್ವದ ಮಾನ್ಯತೆಯನ್ನು ನೀಡಲಾಗಿದೆ.…
ಚಾಮರಾಜನಗರ: ಖಾಸಗಿ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಖಾಸಗಿ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟ ಪ್ರಕರಣ ಜಿಲ್ಲೆಯಲ್ಲಿ ಇದು ಎರಡನೆಯದಾಗಿದೆ. ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಗುರುಸಿದ್ದು(55) ಮೃತ ಬಸ್ ಚಾಲಕರಾಗಿದ್ದಾರೆ. ಯಳಂದೂರಿನಿಂದ ಗುಂಡ್ಲುಪೇಟೆಗೆ ತೆರಳುವ ಆರ್ ಪಿಕೆ ಎಂಬ ಖಾಸಗಿ ಬಸ್ ಚಾಲಕರಾಗಿದ್ದ ಗುರುಸಿದ್ದು ಅವರಿಗೆ ಬಸ್ ಚಾಲನೆ ವೇಳೆಯೇ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್ನ ಸಿಬ್ಬಂದಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪ್ರಾಥಮಿಕ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ. ಜಿಲ್ಲೆಯಲ್ಲಿ ಖಾಸಗಿ ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟ ಎರಡನೇ ಪ್ರಕರಣ ಇದಾಗಿದೆ. ಹನೂರು ತಾಲೂಕಿನ ಮಿಣ್ಯಂ ಗ್ರಾಮದ ಖಾಸಗಿ ಬಸ್ ಚಾಲಕ ರಮೇಶ್ (47) ಹನೂರು ಪಟ್ಟಣದಿಂದ ಕೊಳ್ಳೇಗಾಲಕ್ಕೆ ಖಾಸಗಿ ಬಸ್ ಚಾಲನೆ ಮಾಡಿಕೊಂಡು ತೆರಳುತ್ತಿದ್ದಾಗ ಮಧುವನಹಳ್ಳಿ ಗ್ರಾಮದ ಬಳಿಎದೆ ನೋವು ಕಾಣಿಸಿಕೊಂಡು ಮೃತಪಟ್ಟಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ಬೆಂಗಳೂರು: ಮೂರು ಮರಿಗಳಿಗೆ ಹುಲಿಯೊಂದು ಜನ್ಮ ನೀಡಿ ಬಿಟ್ಟು ಹೋಗಿದ್ದು, ಪರಿಣಾಮವಾಗಿ ಮರಿಗಳು ಸಾವನ್ನಪ್ಪಿರುವ ಗಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ. ಹಿಮಾದಾಸ್ ಹುಲಿಯು ಜುಲೈ 7 ರಂದು ಮೂರು ಮರಿಗಳಿಗೆ ಜನ್ಮ ನೀಡಿತು. ಆದರೆ, ಅದು ತನ್ನ ಮರಿಗಳನ್ನು ನೋಡಿಕೊಳ್ಳಲಿಲ್ಲ. ತಾಯಿ ಹುಲಿಯ ನಿರ್ಲಕ್ಷ್ಯದ ಪರಿಣಾಮವಾಗಿ, ಮೂರು ಮರಿಗಳು ಗಾಯಗೊಂಡಿದ್ದವು ಎಂದು ಅವರು ಹೇಳಿದರು. ಬಿಬಿಪಿ ಪ್ರಕಾರ, ಮರಿಗಳನ್ನು ತೀವ್ರ ನಿಗಾ ಮತ್ತು ಕೈ ಆರೈಕೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಮರಿಗಳು ಸಾವಿಗೀಡಾಗಿವೆ. ಜುಲೈ 8 ರಂದು ಒಂದು ಗಂಡು ಮರಿ ಸಾವಿಗೀಡಾಯಿತು ಮತ್ತು ಜುಲೈ 9 ರಂದು ಮತ್ತೊಂದು ಗಂಡು ಮರಿ ಮತ್ತು ಒಂದು ಹೆಣ್ಣು ಮರಿ ಮೃತಪಟ್ಟಿತು. ಪಶುವೈದ್ಯಕೀಯ ತಂಡವು ಮರಣೋತ್ತರ ಪರೀಕ್ಷೆ ನಡೆಸಿತುಒಂದು ಗಂಡು ಮರಿ ತುಳಿದ ಕಾರಣ ಗರ್ಭಕಂಠದ ಗಾಯದಿಂದ ಸಾವಿಗೀಡಾಗಿದ್ದು, ಮತ್ತೊಂದು ಗಂಡು ಮರಿ ತಾಯಿ ಹುಲಿಯು ಅದರ ತಲೆಯನ್ನು ಕಚ್ಚಿದ ಪರಿಣಾಮವಾಗಿ ಮೆದುಳಿನ ಗಾಯಗಳು ಮತ್ತು ಆಂತರಿಕ ರಕ್ತಸ್ರಾವದಿಂದ…