Author: admin

ಇಲ್ಲ ಸಾರ್ ನಾವು ಜೀವಂತವಾಗಿ ಹಿಂತಿರುಗುತ್ತೇವೆ ಎಂಬ ಆಸೆಯನ್ನೇ ಬಿಟ್ಟಿದ್ದೇವೆ. ಯಾವ ಸಂದರ್ಭದಲ್ಲಾದರೂ ನಮ್ಮ ಮೇಲೆ ಶೆಲ್ ದಾಳಿ ನಡೆಯಬಹುದು. ಒಂದು ವೇಳೆ ನಾವು ಗುಂಡೇಟಿನಿಂದ ಸಾಯದಿದ್ದರೂ ಹೊಟ್ಟೆಗೆ ಊಟ ಇಲ್ಲದೆ ಸಾಯೋದಂತೂ ಗ್ಯಾರಂಟಿ. ಇದು ನಿನ್ನೆಯಷ್ಟೆ ಉಕ್ರೇನ್‍ನಲ್ಲಿ ಶೆಲ್ ದಾಳಿಗೆ ಬಲಿಯಾದ ಹಾವೇರಿಯ ನವೀನ್ ಸ್ನೇಹಿತ ಶ್ರೀಕಾಂತ್ ಅವರ ಆಕ್ರಂದನ. ಬೆಂಗಳೂರಿನ ಬಿಎಂಟಿಸಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಹರೀಶ್ ಅವರ ಸಹೋದರರಾಗಿರುವ ಶ್ರೀಕಾಂತ್ ದೂರದ ಉಕ್ರೇನ್‍ನಲ್ಲಿ ಎಂಬಿಬಿಎಸ್ ಮಾಡುತ್ತಿದ್ದಾರೆ. ಉಕ್ರೇನಿನ ಬಂಕರ್‍ನಲ್ಲಿ ಜೀವ ಕೈಯಲ್ಲಿಡಿದುಕೊಂಡು ತಮ್ಮ ಮನೆಯವರೊಂದಿಗೆ ಮಾತನಾಡಿದ ಶ್ರಿಕಾಂತ್ ಅವರು, ಅದೃಷ್ಟವಿದ್ದರೆ ಬದುಕಿ ಬರುತ್ತೇವೆ. ನನ್ನಂತೆ ಇಲ್ಲಿ ಸಿಕ್ಕಿಹಾಕಿಕೊಂಡಿರುವ ಸಾವಿರರು ಕನ್ನಡಿಗರು ಹಾಗೂ ಭಾರತೀಯರಿಗಾಗಿ ನೀವು ಅಲ್ಲಿಂದಲ್ಲೇ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ನನ್ನ ಸ್ನೇಹಿತ ನವೀನ್ ಬಲಿಯಾದ ನಂತರ ನಮಗೆ ಕ್ಷಣ ಕ್ಷಣಕ್ಕೂ ಸಾವಿಗೆ ಹತ್ತಿರವಾಗುತ್ತಿದ್ದೇವೆ ಎನಿಸುತ್ತಿದೆ. ನಮ್ಮನ್ನ ರಕ್ಷಿಸೋಕೆ ಯಾರು ಬರುತ್ತಿಲ್ಲ. ಹೊರಜಗತ್ತಿನ ಸಂಪರ್ಕವೇ ಕಡಿದುಹೋಗುತ್ತಿದೆ. ಬರೀ ಶೆಲ್ ಹಾಗೂ ಬಾಂಬ್ ದಾಳಿಯ ಶಬ್ದ ಮಾತ್ರ ಕೇಳಿಸುತ್ತಿದೆ.…

Read More

ತುಮಕೂರು: ತುಮಕೂರು ಜಿಲ್ಲೆಯಿಂದ ವಿದ್ಯಾಭ್ಯಾಸಕ್ಕೆಂದು ಉಕ್ರೇನ್ ಗೆ ತೆರಳಿರುವ ವಿದ್ಯಾರ್ಥಿಗಳು ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಸಿಲುಕಿಕೊಂಡಿದ್ದು, ಅಂತಹ ವಿದ್ಯಾರ್ಥಿಗಳನ್ನು ತುಮಕೂರು ಜಿಲ್ಲೆಗೆ ಕರೆತರಲು ತುಮಕೂರು ಜಿಲ್ಲಾಡಳಿತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜೊತೆ ನಿರಂತರ ಪ್ರಯತ್ನ ಮುಂದುವರೆದಿದೆ ಎಂದು ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ. ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ಪೋಷಕರು ಹಾಗೂ ಮುಖಂಡ ಮುರಳೀಧರ್ ಹಾಲಪ್ಪ ನೇತೃತ್ವದ ತಂಡದ ಜೊತೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಗಳು, ಇದುವರೆಗೂ ತುಮಕೂರು ಜಿಲ್ಲೆಯಿಂದ 27 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆಂದು ಯುಕ್ರೇನ್ ಗೆ ತೆರಳಿದ್ದು, ಒಬ್ಬ ವಿದ್ಯಾರ್ಥಿನಿ ಈಗಾಗಲೇ ತುಮಕೂರು ಜಿಲ್ಲೆಗೆ ಆಗಮಿಸಿದ್ದಾಳೆ. ಇಂದು ಇಬ್ಬರು ವಿದ್ಯಾರ್ಥಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ. ಉಳಿದ 24 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ತುಮಕೂರು ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರುವ ಬಗ್ಗೆ ಮಾಹಿತಿಯನ್ನು ನೀಡಿದರು. ಸರ್ಕಾರದ ನಿರ್ದೇಶನದಂತೆ ಎಲ್ಲ ಕುಟುಂಬಗಳ ಜೊತೆ ತುಮಕೂರು ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದ್ದು, ಈಗಾಗಲೇ ಇದಕ್ಕೆ…

Read More

ಕೊರಟಗೆರೆ : ಪಟ್ಟಣದ ಶ್ರೀ ಗಂಗಾಧರೇಶ್ವರ ರಥೋತ್ಸವಕ್ಕೆ ತಹಸೀಲ್ದಾರ್ ನಹೀದಾ ಜಮ್.ಜಮ್ ಚಾಲನೆ ನೀಡಿದರು . ಪ್ರತಿವರ್ಷ ನಡೆಯುವಂತೆ ಶಿವರಾತ್ರಿ ಹಬ್ಬದ ಮಾರನೇ ದಿನ ಶ್ರೀ ಗಂಗಾಧರೇಶ್ವರಸ್ವಾಮಿ ರಥೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ  ಅದ್ಧೂರಿಯಿಂದ  ನೆರವೇರಿಸಲಾಗುತ್ತದೆ . ಪ್ರತಿವರ್ಷವೂ ಶಿವರಾತ್ರಿ ಹಬ್ಬದಂದು ಭಕ್ತಾದಿಗಳು ಉಪವಾಸದಿಂದ ಜಾಗರಣೆ ಮಾಡುತ್ತಾರೆ. ಮರುದಿನ ಬೆಳಿಗ್ಗೆ ಶ್ರೀ ಗಂಗಾಧರೇಶ್ವರಸ್ವಾಮಿ ರಥೋತ್ಸವ ನಡೆದ ಮೇಲೆ ಉಪವಾಸವನ್ನು ಕೈ ಬಿಟ್ಟು ಭೋಜನ ಸವಿಯುತ್ತಾರೆ. ಕೊರೊನಾ ಮಹಾಮಾರಿಯಿಂದ ಜಾತ್ರೆ ಇನ್ನಿತರ ಶುಭ ಸಮಾರಂಭಗಳು ನಿಂತು ಹೋಗಿದ್ದವು.  ಇದೀಗ ಕೊವಿಡ್ ಪ್ರಮಾಣ  ಕೊಂಚ ಕಡಿಮೆಯಾಗಿರುವುದರಿಂದ  ಎಲ್ಲ ಶುಭ ಸಮಾರಂಭಗಳು ಜಾತ್ರೆಗಳು ಹಿಂದಿನಂತೆ ನಡೆಯುತ್ತಿದೆ ಎಂದು ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಪವನ್ ಕುಮಾರ್ ತಿಳಿಸಿದರು. ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಚಿತ್ರದುರ್ಗ: ಶಿವರಾತ್ರಿಯ ಪ್ರಯುಕ್ತ ಜಿಲ್ಲೆಯ ಹಿರಿಯೂರು ನಗರದ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷವಾದ ಪೂಜೆ ನಡೆಯಿತು.  ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಾಶಿವರಾತ್ರಿಯ ವಿಶೇಷತೆಗಳೆಂದರೆ,  ಈ ದಿನ ಮಹಾದೇವ ಶಿವನು ದೇವಿ ಪಾರ್ವತಿಯನ್ನು ವಿವಾಹವಾದರು ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ.  ಶಿವರಾತ್ರಿಯ ದಿನ ಜಾಗರಣೆ ಇದ್ದು ಶಿವ-ಪಾರ್ವತಿಯನ್ನು ಪೂಜಿಸುವುದರಿಂದ ಬದುಕಿನ ಎಲ್ಲಾ ಕಷ್ಟಗಳು ದೂರಾಗುವುದು ಎನ್ನುವ ನಂಬಿಕೆಗಳಿವೆ. ಶಿವರಾತ್ರಿ ದಿನದಂದು ಪತಿ-ಪತ್ನಿ ಇಬ್ಬರೂ ಜಾಗರಣೆ ಇದ್ದು ಶಿವನನ್ನು ಪೂಜಿಸಬೇಕು, ಅವನ ಮಂತ್ರಗಳನ್ನು ಪಠಿಸಬೇಕು ಎಂದು ಜನರು ನಂಬುತ್ತಾರೆ. ಶಿವರಾತ್ರಿಯ ದಿನ ಶಿವನ  ದೇವಾಲಯಗಳಲ್ಲಿ ಭಕ್ತರು ಶಿವನ ದರ್ಶನ ಮಾಡಿ ಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಶಿವರಾತ್ರಿಯ  ದಿನದಂದು ಶಿವನ ಮೂರ್ತಿ ಹಾಗೂ ಶಿವನ ಲಿಂಗವನ್ನು ಪೂಜಿಸಲಾಗುತ್ತದೆ. ಶಿವಲಿಂಗವು  ಶಿವನ ಸಂಕೇತವಾಗಿದೆ.  ಶಿವ ಎಂದರೆ ಕಲ್ಯಾಣ ಮತ್ತು ಲಿಂಗ ಎಂದರೆ ಸೃಷ್ಟಿ ಎಂದರ್ಥ. ಪೌರಾಣಿಕ ಗ್ರಂಥಗಳ ಪ್ರಕಾರ, ಭಗವಾನ್  ಶಿವನು ಭೂಮಿಯ ಮೇಲೆ ಜೀವನವನ್ನು…

Read More

ತುಮಕೂರು:  ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಳೆದ 20ವರ್ಷಗಳಿಂದ ಶನೇಶ್ವರ ಸ್ವಾಮಿ ಸೇವಾಸಮಿತಿ ಮಹಾಶಿವರಾತ್ರಿ ಹಬ್ಬದ ಮರುದಿವಸ ಪ್ರತಿ ವರ್ಷವು ಸಹ ಮಹಾ ದಾಸೋಹ ನಡೆಸುವ ಮೂಲಕ  ದೇವಾಲಯವು ಹೆಸರುಗಳಿಸಿದೆ. ಪ್ರತಿ ಬಾರಿಯೂ ಸಹ ಭಕ್ತರ ಸಹಕಾರ ದಿಂದ ದಾಸೋಹ ಸೇವೆಗಳು ನೆಡೆದುಕೊಂಡು ಬರುತ್ತಿದೆ. ಕಲ್ಲೂರು ಗ್ರಾಮಕ್ಕೆ ಸೇರಿರುವ ಸಾಕಷ್ಟು ಹಳ್ಳಿ ಗಳಿಂದ ಶ್ರೀ ಶನೇಶ್ವರ ಸ್ವಾಮಿ ದೇವಾಲಯದ ಪೂಜಾ ಕಾರ್ಯಕ್ರಮ ದಲ್ಲಿ ಭಾಗವಹಿಸುವ ಸಹಾಸ್ರರು ಭಕ್ತರು ಮಹಾಶಿವರಾತ್ರಿ ಹಬ್ಬದ ಮರುದಿವಸ ದಾಸೋಹ ವ್ಯವಸ್ಥೆಯನ್ನು ದವಸ ಧಾನ್ಯಗಳನ್ನು ನೀಡುವ ಮೂಲಕ ಭಕ್ತರು ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಇತಿಹಾಸ ಪ್ರಸಿದ್ಧ ವಾದ ಈ ಶನೇಶ್ವರ ಸ್ವಾಮಿ ದೇವಾಲಯವು ಈ ಭಾಗದ ಜನತೆಯ ಆರಾಧ್ಯದೈವವಾಗಿದೆ.  ಮಹಾಶಿವರಾತ್ರಿ ಹಬ್ಬದ ದಿನದಲ್ಲಿ ಶನೇಶ್ವರ ಸ್ವಾಮಿ ಗೆ ವಿಶೇಷ ಅಲಂಕಾರ. ಪೂಜಾ ಕಾರ್ಯಕ್ರಮ ನೆಡೆಯಲಿದ್ದು ದೂರದ ಜಿಲ್ಲೆ. ತಾಲೂಕು ಕೇಂದ್ರಗಳಿಂದ ಕ್ಷೇತ್ರ ಕ್ಕೆ ಭಕ್ತರು ಆಗಮಿಸುತ್ತಾರೆ. ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಕಲ್ಲೂರು  ಗ್ರಾಮ…

Read More

ತುಮಕೂರು: ಮೈಸೂರಿಗೆ ದಸರಾ ಹಬ್ಬ ಹೇಗೆ ಭೂಷಣವೋ, ಹಾಗೆಯೇ ಕಲ್ಪತರು ನಾಡಿಗೆ ಸಿದ್ದಗಂಗಾ ಮಠ ಜಾತ್ರೆ ಕೂಡ ಪ್ರಮುಖ ಹಬ್ಬವಾಗಿದೆ. ಈ ಜಾತ್ರೆಯ ಸಂದರ್ಭದಲ್ಲಿ ಮಠದಲ್ಲಿ ಭಕ್ತರಿಗೆ ವಿತರಿಸಲಾಗುವ ಪ್ರಸಾದ ಕೂಡ ವಿಶೇಷತೆಯಿಂದ ಕೂಡಿದೆ. ಕೊರೊನಾದಿಂದ ಕಳೆಗುಂದಿದ್ದ ಜಾತ್ರೆಯನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಜಾತ್ರೆಗೆ ಆಗಮಿಸುತ್ತಿರುವ ಭಕ್ತರಲ್ಲಿ ಹಬ್ಬದ ಸಡಗರ ಮನೆ ಮಾಡಿದೆ. ಶಿವರಾತ್ರಿ  ಅಂಗವಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ತಂಬಿಟ್ಟು ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಕಡ್ಲೆ, ಶೇಂಗಾ, ಅಕ್ಕಿ, ಎಳ್ಳು, ಕೊಬ್ಬರಿ,  ಏಲಕ್ಕಿಯಂತಹ ತರಹೇವಾರಿಯ 34 ಸಾವಿರ ತಂಬಿಟ್ಟು ತಯಾರಿಸಲಾಗಿದೆ. ಈ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಸಿದ್ದಗಂಗಾ ಮಠದ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಕೆ.ಎಸ್. ಉಮಾಮಹೇಶ್ , ನಮ್ಮ ಸಿದ್ದಗಂಗಾಮಠವು ಸುಮಾರು ಏಳು  ಶತಮಾನವುಳ್ಳ ಮಠವಾಗಿದೆ. ಗ್ರಾಮೀಣ ಪ್ರದೇಶದವರ ಶ್ರೇಯೋಭಿವೃದ್ಧಿಗಾಗಿ ತುಡಿತ ಹೊಂದಿದ್ದ ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು 1964ರಲ್ಲಿ ಸಣ್ಣ ಪ್ರಮಾಣದಲ್ಲಿ ಈ ವಸ್ತು ಪ್ರದರ್ಶನವನ್ನು ಪ್ರಾರಂಭಿಸಿದರು. ಇಂದು ಹೆಮ್ಮರವಾಗಿ ಬೆಳೆದು…

Read More

ಪಾವಗಡ: ಶ್ರೀ ರಾಮಕೃಷ್ಣ  ಸೇವಾಶ್ರಮ , ಪಾವಗಡ  ಹಾಗೂ ಇನ್ಫೋಸಿಸ್ ಫೌಂಡೇಶನ್  ಪ್ರವಾಹ ಪರಿಹಾರ ಕಾರ್ಯದ ಮುಂದುವರಿ ಭಾಗವಾಗಿ, ಲಕ್ಷಾಂತರ ರೂಪಾಯಿ ಬೆಲೆಬಾಳುವ ವಿದ್ಯಾಭ್ಯಾಸದ ಸಾಮಗ್ರಿಗಳನ್ನು ಆಂಧ್ರಪ್ರದೇಶದ  ಕಡಪ, ಚಿತ್ತೂರ್, ತಿರುಪತಿ  ಪ್ರವಾಹದ ಪ್ರದೇಶಗಳಿಗೆ ನೀಡಲಾಯಿತು. ಸರಿಸುಮಾರು 126 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ಸಾಮಗ್ರಿಗಳನ್ನು ವಿತರಿಸಲು ಏರ್ಪಾಡು ಮಾಡಲಾಗಿದೆ. ಕಂಪ್ಯೂಟರ್ ಗಳು, ನೋಟ್ ಬುಕ್ಸ್, ಮೇಜು, ಬೆಂಚುಗಳು, ಅಡುಗೆಪಾತ್ರೆಗಳು, ನೀರಿನ ಬಾಟಲಿಗಳು ಸೇರಿದಂತೆ ನಾನಾ ರೀತಿಯ ಶಿಕ್ಷಣ ಪರಿಕರಗಳನ್ನು ಎರಡು ಬೃಹತ್ ಲಾರಿಗಳಲ್ಲಿ ರವಾನಿಸಲಾಯಿತು. ಸ್ವಾಮಿ ಜಪಾನಂದಜೀ ರವರ ನೇತೃತ್ವದಲ್ಲಿ ಈ ಯೋಜನೆ ಕಳೆದ ಹಲವಾರು ತಿಂಗಳುಗಳಿಂದ ಏಕ ಪ್ರಕಾರವಾಗಿ ನಡೆಯುತ್ತಿದೆ. ಇಂದು ಎಲ್ಲಾ ಪರಿಕರಗಳನ್ನು  ಹೊತ್ತ ವಾಹನ ಕಡಪದ ಕಡೆಗೆ ಹೊರಟಿತು . ಈ ಸಂದರ್ಭದಲ್ಲಿ ಆಶ್ರಮದ ಸೇವಾವೃತ್ತಿಗಳಾದ ಸುಧೇಶಬಾಬುಜಿ, ಲೋಕೇಶ್ ದೇವರಾಜ್ ಹಾಗೂ  ಬೆಂಗಳೂರ ಶ್ರೀ ರಾಮಕೃಷ್ಣ  ಮಠದ ಸ್ವಯಂ ಸೇವಕರು ಭಾಗವಹಿಸಿದ್ದರು . ವರದಿ:  ನಂದೀಶ,  ಕೊತ್ತೂರು ನಿಡಗಲ್ ಹೋಬಳಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತುರುವೇಕೆರೆ:  ತಾಲ್ಲೂಕಿನ ಜೋಡಿಲಿಂಗೇಶ್ವರ ಕ್ಷೇತ್ರವಾದ ಕೋಡಿನಾಗಸಂದ್ರದಲ್ಲಿ ಇಂದು  ಶ್ರೀ ಕೋಡಿಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬಹಳ ವೈಭವದ ಮತ್ತು ವಿಜೃಂಭಣೆಯಿಂದ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಳೆದ 14 ವರ್ಷಗಳಿಂದ ಇಲ್ಲಿ ಮಹಾಶಿವರಾತ್ರಿ ಹಬ್ಬ ನಡೆಯುತ್ತಿದೆ. ಈ ವಿಶೇಷ ಪೂಜಾ ಕಾರ್ಯಕ್ಕೆ ಸಾವಿರಾರು ಜನರು ಸೇರುತ್ತಿದ್ದಾರೆ. ಈ ಬಾರಿ ಪೂಜಾ ಕಾರ್ಯಕ್ಕೆ  ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಮಹಾಶಿವರಾತ್ರಿಯ ಪ್ರಯುಕ್ತ ಪಕ್ಕದ ಕೆರೆಯಲ್ಲಿ ವಿಶೇಷವಾಗಿ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದು, ಇದು ಪೂಜಾ ಕಾರ್ಯದ ಕೇಂದ್ರ ಬಿಂದುವಾಗಿತ್ತು. ಮೆರವಣಿಗೆ ಮತ್ತು ಪೂಜಾ ಕಾರ್ಯಕ್ರಮ ಮುಗಿದ ಮೇಲೆ, ನೆರೆದಿದ್ದ ಸಾವಿರಾರು ಭಕ್ತರಿಗೆ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಕಾರ್ಯ ನಡೆಯಿತು. ವರದಿ : ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಯುದ್ಧಪೀಡಿತ ಉಕ್ರೇನ್‍ನಿಂದ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಕಾರ್ಯಾಚರಣೆಗಿಳಿಯುವಂತೆ ಪ್ರಧಾನಿ ನರೇಂದ್ರಮೋದಿ ಭಾರತೀಯ ವಾಯುಸೇನೆಗೆ ಸೂಚನೆ ನೀಡಿದ್ದಾರೆ. ಕಳೆದ ಗುರುವಾರದಿಂದ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದು, ಯುದ್ದ ಆರಂಭವಾಗಿದೆ. ಉಕ್ರೇನ್‍ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ವಾಪಸ್ ಕರೆತರಲು ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೂ ಖಾಸಗಿ ವಿಮಾನಗಳನ್ನು ಬಳಕೆ ಮಾಡಿ ಆಪರೇಷನ್ ಗಂಗಾ ನಡೆಸಲಾಗುತ್ತಿದೆ. ಉಕ್ರೇನ್‍ನಲ್ಲಿ ಪರಿಸ್ಥಿತಿ ದಿನೇ ದಿನೇ ವಿಳಂಬ ಮಾಡುವುದು ಅಪಾಯಕಾರಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ವಾಯುಸೇನೆಗೆ ಈ ಸೂಚನೆ ನೀಡಿದ್ದು, ಇಂದಿನಿಂದಲೇ ಸಿ-17 ವಿಮಾನಗಳ ಮೂಲಕ ಸೇನೆ ಕಾರ್ಯಾಚರಣೆಗಿಳಿಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವರದಿ:  ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

Read More

ಕೋಲಾರ: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದ ಆರು ಮಂದಿ ಡಕಾಯಿತರು ಎಪಿಎಂಸಿ ಮಾಜಿ ಅಧ್ಯಕ್ಷರ ಮನೆಗೆ ನುಗ್ಗಿ ಪಿಸ್ತೂಲು, ಮಾರಕಾಸ್ತ್ರ ತೋರಿಸಿ ಬೆದರಿಸಿ 25 ಲಕ್ಷ ನಗದೂ ಸೇರಿದಂತೆ 45 ಲಕ್ಷ ಮೌಲ್ಯದ 1 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಕೋಲಾರದ ಸಿ.ಬೈರೇಗೌಡನಗರ(ಬೆಮೆಲ್ ಲೇಔಟ್)ದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ಅವರ ಮನೆಯಲ್ಲಿ ಈ ಡಕಾಯಿತಿ ನಡೆದಿದೆ. ಎರಡು ಅಂತಸ್ತಿನ ಮನೆಯ ಮೊದಲನೆ ಮಹಡಿಯಲ್ಲಿ ಪತ್ನಿ, ಮಗನೊಂದಿಗೆ ರಮೇಶ್ ವಾಸವಾಗಿದ್ದಾರೆ. ಬೆಳಗ್ಗೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ರಮೇಶ್ ಅವರು ರಾತ್ರಿ 7.30ರಲ್ಲಿ ಮನೆಗೆ ಬಂದಿದ್ದಾರೆ. 8 ಗಂಟೆ ಸುಮಾರಿನಲ್ಲಿ ಇನೋವಾ ಕಾರಿನಲ್ಲಿ ಬಂದ ಆರು ಮಂದಿ ಡಕಾಯಿತರು ರಮೇಶ್ ಅವರ ಮನೆ ಬಾಗಿಲು ತಟ್ಟಿದ್ದಾರೆ. ಒಳಗಿನಿಂದಲೇ ಯಾರೆಂದು ವಿಚಾರಿಸಿದಾಗ, ತಾವು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ನಿಮ್ಮ ಮನೆ ತಪಾಸಣೆ ಮಾಡಬೇಕೆಂದು ಹೇಳಿದ್ದಾರೆ. ರಮೇಶ್ ಅವರ ಪತ್ನಿ ಅನುಮಾನಗೊಂಡು…

Read More