Author: admin

ಹೈದರಾಬಾದ್ ‌ನಲ್ಲಿ ಬಿರಿಯಾನಿ ಹಬ್ಬದ ವೇಳೆ ಯುವಕನೊಬ್ಬನನ್ನು ಹೊಡೆದು ಕೊಂದ ಘಟನೆ ನಡೆದಿದೆ. ಇಂಡಿಯಾ ಟುಡೇ ವರದಿ ಪ್ರಕಾರ ಬಿರಿಯಾನಿ ಜೊತೆ ಸಲಾಡ್ ಕೊಡುವ ವಿವಾದ ಕೊಲೆಗೆ ಕಾರಣವಾಯಿತು. ಪಂಚಗುಟ್ಟದಲ್ಲಿರುವ ‘ಮೆರಿಡಿಯನ್ ರೆಸ್ಟೋರೆಂಟ್’ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಲಿಯಾಕತ್ ನಿಧನರಾದರು. ಬಿರಿಯಾನಿ ಫೆಸ್ಟ್ ನಲ್ಲಿ ಪಾಲ್ಗೊಳ್ಳಲು ಸ್ನೇಹಿತರೊಂದಿಗೆ ರೆಸ್ಟೋರೆಂಟ್ ಗೆ ಬಂದಿದ್ದರು. ಬಿರಿಯಾನಿ ಜತೆಗೆ ಸಲಾಡ್‌ ನೀಡುವಂತೆ ಹೋಟೆಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ವಿವಾದ ತಾರಕಕ್ಕೇರುತ್ತಿದ್ದಂತೆ ಕೈಕೈ ಮಿಲಾಯಿಸಿತು. ಎರಡೂ ಬಣಗಳು ಪರಸ್ಪರ ಹಲ್ಲೆ ನಡೆಸುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಮಸ್ಯೆ ಬಗೆಹರಿಸಲು ಎರಡೂ ಗುಂಪುಗಳು ರಾತ್ರಿ 11 ಗಂಟೆಗೆ ಪಂಚಗುಟ್ಟಾ ಪೊಲೀಸ್ ಠಾಣೆಗೆ ಬಂದರು. ಆದರೆ, ಉಸಿರಾಟದ ತೊಂದರೆ ಹಾಗೂ ಎದೆನೋವಿನ ಕಾರಣ ಲಿಯಾಖತ್ ನಿಲ್ದಾಣಕ್ಕೆ ಬಂದ ಕೆಲವೇ ನಿಮಿಷಗಳಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ. ಹೋಟೆಲ್ ಮ್ಯಾನೇಜರ್ ಸೇರಿದಂತೆ…

Read More

ತಮಿಳುನಾಡಿನ ಡಿಎಂಕೆ ಪಕ್ಷದ ಮಧುರೈ ಮಂಡಲ ಅಧ್ಯಕ್ಷ ವಿ. ಕೆ. ಗುರುಸ್ವಾಮಿ ಕೊಲೆ ಯತ್ನ ಪ್ರಕರಣದ ಆರೋಪಿ ಪ್ರಸನ್ನನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ತಮಿಳುನಾಡಿನ ಠಾಣೆಯೊಂದರ ರೌಡಿ ಪಟ್ಟಿಯಲ್ಲಿ ಗುರುಸ್ವಾಮಿ ಹೆಸರಿತ್ತು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಗುರುಸ್ವಾಮಿ, ಏಜೆಂಟರನ್ನು ಭೇಟಿಯಾಗಲು ಸೆ.11ರಂದು ಬೆಂಗಳೂರಿನ ಕಮ್ಮನಹಳ್ಳಿಯ ಸುಖಸಾಗರ್ ಹೋಟೆಲ್‌ ಗೆ ಬಂದಿದ್ದಾಗ ಕೊಲೆಗೆ ಯತ್ನ ನಡೆದಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

Read More

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ 21 ವರ್ಷದ ಯುವಕನೊಬ್ಬ ತನ್ನ ತಂದೆ ಮತ್ತು ಅಜ್ಜನನ್ನು ಕೊಂದಿದ್ದಾನೆ. ಕೌಟುಂಬಿಕ ಸಮಸ್ಯೆಯೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ 7ರ ರಾತ್ರಿ ಜೋಡಿ ಕೊಲೆ ನಡೆದಿತ್ತು. ವಿಕ್ರಮಜಿತ್ ರಾವ್ ಮತ್ತು ರಾಮ್‌ ಕುಮಾರ್ ಹತ್ಯೆಯಾದವರು. ಕೌಟುಂಬಿಕ ಕಲಹದಿಂದ ವಿಕ್ರಮಜಿತ್ ರಾವ್ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಘಟನೆಯ ರಾತ್ರಿ ಆರೋಪಿಗಳು ಡಂಕೌರ್‌ ನ ಬಲ್ಲು ಖೇರಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಫಿಲ್ಮ್ ಸ್ಟುಡಿಯೋಗೆ ಬಂದು ಜಾಸ್ಮಿನ್ ತಂದೆಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಾಸ್ಮಿನ್ ಸ್ಟುಡಿಯೋದಲ್ಲಿಟ್ಟಿದ್ದ ಕೊಡಲಿಯಿಂದ ರವಿಯ ಮುಖ, ಕತ್ತು ಮತ್ತು ತಲೆಗೆ ತುಂಡರಿಸಿದ್ದಾಳೆ. ಕಿರುಚಾಟ ಕೇಳಿ ಎಚ್ಚರಗೊಂಡ ರೋಡ್‌ ವೇಸ್‌ ನ ನಿವೃತ್ತ ಉದ್ಯೋಗಿ ಅಜ್ಜ ರಾಮ್‌ಕುಮಾರ್ ಅವರ ಮೇಲೂ ಜಾಸ್ಮಿನ್ ಹಲ್ಲೆ ನಡೆಸಿದ್ದಾರೆ. ರಾಮ್‌ ಕುಮಾರ್ ಗುರುತು ಹಿಡಿಯುತ್ತಾರೆ ಭೀತಿಯಿಂದ ಹಲ್ಲೆ ನಡೆಸಲಾಗಿದೆ. ಕತ್ತರಿಸಿದರೂ ರಾಮಕುಮಾರ್ ಚಲಿಸುತ್ತಿರುವುದನ್ನು ಕಂಡ ಜಾಸ್ಮಿನ್ ಅವರು ತಪ್ಪಿಸಿಕೊಳ್ಳುವ ಭಯದಲ್ಲಿ ಸುತ್ತಿಗೆಯಿಂದ…

Read More

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ  ಗ್ಯಾರಂಟಿಗಳ ಅಡ್ಡ ಪರಿಣಾಮದಿಂದ ಜನರಿಗೆ ಪಕ್ಷಪಾತವು ಅರಾಜಕತೆ ಸೃಷ್ಟಿಸಿದೆ. ಅವೈಜ್ಞಾನಿಕ, ಅರೆಬೆಂದ ‘ಶಕ್ತಿ’ ಯೋಜನೆಯ ಫಲವಾಗಿ ಇವತ್ತು ಖಾಸಗಿ ಸಂಚಾರ ವ್ಯವಸ್ಥೆ ಬುಡ ಮೇಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ  ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಬಂದ್ ನಿಂದ ಖಾಸಗಿ ಸಾರಿಗೆ ಜಾಲ ಸಂಪೂರ್ಣ ಸ್ಥಗಿತವಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು, ವಿಮಾನ ನಿಲ್ದಾಣಕ್ಕೆ ತೆರಳುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಸಾಗಣೆಯಲ್ಲಿ ವ್ಯತ್ಯಯ ಆಗಿ ಸರ್ಕಾರದ ಪ್ರತಿಷ್ಠೆಯಿಂದ ಸಾಮಾನ್ಯ ಜನರು ಸಂಕಷ್ಟ ಪಡುವಂತಾಗಿದೆ ಎಂದಿದ್ದಾರೆ. ಸರಕಾರವು ಖಾಸಗಿ ಸಾರಿಗೆ ಒಕ್ಕೂಟದವರ ಬೇಡಿಕೆಗಳನ್ನು ಪ್ರತಿಷ್ಠೆ ಪಕ್ಕಕ್ಕಿಟ್ಟು ಮಾನವೀಯತೆಯಿಂದ ಪರಿಶೀಲಿಸಬೇಕು. ಅವರ ಬೇಡಿಕೆಗಳು ಈಡೇರಿಸಲಾಗದ ಅಸಾಧ್ಯ ಡಿಮ್ಯಾಂಡ್ ಗಳೇನೂ ಅಲ್ಲ. ಅವರಿಗೂ ಕುಟುಂಬಗಳಿವೆ, ತಂದೆ ತಾಯಿ, ಮಕ್ಕಳು ಇರುತ್ತಾರೆ ಎನ್ನುವುದನ್ನು ಸರಕಾರ ಮರೆಯಬಾರದು ಎಂದಿದ್ದಾರೆ.

Read More

ಬಾಗಲಕೋಟೆ: ಧಕ್ಷಿಣ ಕರ್ನಾಟಕದ ಪ್ರಮುಖ ಜಾನಪದ ಕಲೆಗಳಲ್ಲಿ ಒಂದಾದ ಕಂಸಾಳೆ ಭಕ್ತಿ ನೃತ್ಯವನ್ನು ಬೆಂಗಳೂರು ಬಿಡದಿಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿಧ್ಯಾರ್ಥಿನಿಯರಿಂದ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಪ್ರದರ್ಶನ  ಮಾಡಲಾಯಿತು. ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯಗಳ ಸಹಯೋಗದಲ್ಲಿ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಾಡುತ್ತ ಭಾವಾವೇಶದಿಂದ ನೃತ್ಯಮಾಡುವ ಮಲೆ ಮಾದೇಶ್ವರನನ್ನು ಆರಾಧಿಸುವ ಮತ್ತು ಪೂಜಿಸವ ಜಾನಪದ ಕಲೆ ಇದಾಗಿದ್ದು ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ಮಾಡಿದರು. ಈ ವೇಳೆ ಬಿಡದಿ ಬಸವೇಶ್ವರ ಪದವಿ ಕಾಲೇಜಿನ ನಿರ್ದೇಶಕರಾದ ಡಾ. ವ್ಹಿ ಎಸ್ ಕಟಗಿಹಳ್ಳಿಮಠ ಅವರು ಮಾತನಾಡಿ ಚಾಮರಾಜ ನಗರ ಜಿಲ್ಲೆಯ ಧಾರ್ಮಿಕ ಕುಣಿತ ಇದಾಗಿದೆ. 15 ನೇ ಶತಮಾನದಲ್ಲಿ ಮಹಾದೇಶ್ವರ ಎನ್ನುವವರು ಕಂಸಾಳೆ ನೃತ್ಯದ ಮೂಲಕ ಭಗವಂತನನ್ನು ಒಲಿಸಿಕೊಳ್ಳುತ್ತಾನೆ. ಅಂದಿನಿಂದ ಕಂಸಾಳೆ ಧ್ವನಿಯಲ್ಲಿ ಶಿವನು ನೆಲಸಿದ್ದಾನೆ ಎಂಬ ಭಾವನೆಯಲ್ಲಿ ನೃತ್ಯ ಮಾಡಲಾಗುತ್ತದೆ.  ಇದು ಓಂಕಾರದ ನಿನಾದದ ಒಂದು ಭಾಗವಾಗಿದ್ದು ಆ…

Read More

ಬೆಂಗಳೂರು: ಆರ್ ಆರ್ ನಗರ ವಲಯದ ಕೆಂಗೇರಿ ವಿಭಾಗದ ವಾರ್ಡ್ ಹೆಮ್ಮಿಗೆಪುರ ವ್ಯಾಪ್ತಿಯ ತಲಘಟ್ಟಪುರ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ, Casa Grand ವಸತಿ ಸಮುಚ್ಚಯ ನಿರ್ಮಾಣ ಮಾಡುವ ಸಂಸ್ಥೆಯು ಪ್ಲೆಕ್ಸ್‌ ಗಳನ್ನು ಹಾಕಿದ್ದು, ಪ್ಲೆಕ್ಸ್ ‌ಗಳನ್ನು ತೆರವುಗೊಳಿಸಿ 50, 000 ರೂ.ಗಳ ದಂಡವನ್ನು ವಸೂಲಿ ಮಾಡಲಾಗಿರುತ್ತದೆ. ಸಹಾಯಕ ಕಾರ್ಯಪಾಲಕ ಅಭಿಯಂತರರು ಪೂರ್ಣಿಮಾ, ಮೋತಿಲಾಲ್ ಚೌಹಾಣ್ ವಾರ್ಡ್ ಮಾರ್ಷಲ್ ಸೇರಿದಂತೆ ಇನ್ನಿತರರು ವಲಯದ ಅಧೀಕ್ಷಕ ಅಭಿಯಂತರ ನಂದೀಶ. ಜೆ. ಆರ್ ರವರ ನಿರ್ದೇಶನದಂತೆ ದಂಡ ವಿಧಿಸಲಾಗಿದೆ.

Read More

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗಳಿಗೆ ತೆರಳಿ ಚಿನ್ನದ ಸರಗಳನ್ನು ಕೊರಳಿಗೆ ಹಾಕಿಕೊಂಡು ಪರಾರಿ ಆಗುತ್ತಿದ್ದ ಆರೋಪಿಯನ್ನು ಗೋವಿಂದರಾಜನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಯಶವಂತಪುರ ಎನ್ಎಚ್ ಕಾಲೊನಿ ಅಯ್ಯಪ್ಪ ದೇವಸ್ಥಾನ ಬಳಿಯ ನಿವಾಸಿ ಜೆ. ರೋಹಿತ್ ಬಂಧಿತ ಆರೋಪಿ. ಆರೋಪಿಯಿಂದ 12.50 ಲಕ್ಷ ಬೆಲೆ ಬಾಳುವ 45 ಗ್ರಾಂ. ತೂಕದ ಚಿನ್ನದ ಸರ, ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

Read More

ಬೆಂಗಳೂರು: ಮನೆ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಚಿನ್ನಾಭರಣ ಹಾಗೂ ನಗದು ಕಳವು ಮಾಡುತ್ತಿದ್ದ ಆರೋಪಿಯನ್ನು ಗೋವಿಂದರಾಜನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರದ ಕುರುಪೇಟೆಯ ಗೋಪಿನಾಥ್ ಅಲಿಯಾಸ್ ಗೋಪಿ ಬಂಧಿತ ಆರೋಪಿ, ಈತ ನಗರದ ಕೋಣನಕುಂಟೆಯ ಬೀರೇಶ್ವರ ನಗರದಲ್ಲಿ ನೆಲೆಸಿದ್ದ. ಬಂಧಿತನಿಂದ 76.50 ಲಕ್ಷದ 107 ಚಿನ್ನಾಭರಣ, ‍ 1.14 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ನಾಡಿನ ಅರಣ್ಯ ಮತ್ತು ವನ್ಯಜೀವಿಗಳ ಸಂಪತ್ತನ್ನು ಸಂರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಹುತಾತ್ಮರಾದ ಅರಣ್ಯ ಸಿಬ್ಬಂದಿಗಳಿಗೆ ಇಂದು ಅರಣ್ಯ ಇಲಾಖೆ ಗೌರವ ನಮನಗಳನ್ನು ಸಲ್ಲಿಸಿತು. ಬೆಳಗಾವಿ ವೃತ್ತದ ಅರಣ್ಯ ಇಲಾಖೆ ಸಂಕೀರ್ಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ವತಿಯಿಂದ ಪರೇಡ್ ಗೌರವ ವಂದನೆ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳು ಹಾಗೂ ಮುಖ್ಯ  ಸಂರಕ್ಷಣಾಧಿಕಾರಿಗಳು ಅತಿಥಿಗಳು ಇಲಾಖೆಯ ಅಧಿಕಾರಿ ವರ್ಗ, ವಿವಿಧ ಸಂಘದ ಪದಾಧಿಕಾರಿಗಳು, ಅರಣ್ಯ ಹುತಾತ್ಮರವರಿಗೆ ಹೂ ಗುಚ್ಚ ಅರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ್ ಅವರು ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡುತ್ತಾ ಅರಣ್ಯ ಸಿಬ್ಬಂದಿ ಕೆಲಸ ಸುಲಭದ ಕೆಲಸವಲ್ಲ ತಮ್ಮ ಜೀವದ ಹಂಗಿಲ್ಲದೆ ಕಾರ್ಯನಿರ್ವಹಿಸುತ್ತಿರುತ್ತಾರೆ. ಹಾಸನದಲ್ಲಿ ಆನೆಯ ದಾಳಿಗೆ ಅರಣ್ಯ ಸಿಬ್ಬಂದಿ ಹುತಾತ್ಮರನ್ನು ಸ್ಮರಣೆ ಮಾಡಿದರು. ಅತಿಥಿಯಾಗಿ ಪ್ರಧಾನಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ವಿಜಯಲಕ್ಷ್ಮಿ ದೇವಿ, ಮಂಜುನಾಥ್ ಚವ್ಹಾಣ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ, ಪೊಲೀಸ್ ಆಯುಕ್ತರಾದ ಸಿದ್ದರಾಮಪ್ಪ, ಕಮಾಂಡರ್ ಪಿ.ಸಿ.ವಿಂಗ್ ಬ್ರಿಗೇಡ್ ಸಿ.ದಯಾಲನ್,  ಜಿಲ್ಲಾ ಪೊಲೀಸ್…

Read More

ಬೈಲಹೊಂಗಲ: ಸಹಕಾರಿ ಸಂಘಗಳು ರೈತರನ್ನು ಆರ್ಥಿಕವಾಗಿ ಬೆಳವಣಿಗೆಗೆ ಹೊಂದಲು ಅತ್ಯಂತ ಮಹತ್ವವನ್ನು ಹೊಂದಿದ್ದು ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸವದತ್ತಿ ತಾಲೂಕಿನ ಡಿಸಿಸಿ ಬ್ಯಾಂಕ್ ನಿರ್ದೇಶಕಿ ರತ್ನಕ್ಕಾ ಮಾಮನಿ ಹೇಳಿದರು. ಸಮೀಪದ ಹೊಸೂರ ಗ್ರಾಮದ ಶತಮಾನದ ಅಂಚಿನಲ್ಲಿರುವ ಪ್ರಾಕೃಪಸ ಸಂಘದ ನೂತನ ಕೃಷಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ರೈತರ ಕೃಷಿ ಚಟುವಟಿಕೆಗಳಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಹಾಗೂ ಪ್ರತಿಶತ 3ರಂತೆ ದೀರ್ಘಾವಧಿಯ ಸಾಲವನ್ನು ಡಿಸಿಸಿ ಬ್ಯಾಂಕ್ ಮುಖಾಂತರ ರೈತರಿಗೆ ವಿತರಿಸುತಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸಕಾಲಕ್ಕೆ ಮರುಪಾವತಿಬೇಕು. ದಿ. ಆನಂದ ಮಾಮನಿಯವರು ತಾಲೂಕಿನ ಸಹಕಾರಿ ಸಂಘಗಳ ಬೆಳವಣಿಗೆಗ ಸಾಕಷ್ಟು ಮುತವರ್ಜಿವಹಿಸಿದ್ದರು. ಅವರಿಗೆ ನೀಡಿದ ಸಹಕಾರದಿಂದ ತಾಲೂಕಿನ ಸಂಘಗಳು ಆರ್ಥಿಕವಾಗಿ ಸದೃಡವಾಗುವದರೊಂದಿಗೆ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿವೆ ಎಂದರು. ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ 1930ರಲ್ಲಿ ಸಾವಿರ ರೂಪಾಯಿ ಬಂಡವಾಳದಿಂದ ಗ್ರಾಮದ ಹಿರಿಯರು ಪ್ರಾರಂಭಿಸಿದ ಸಂಸ್ಥೆ ಇಂದು 10ಕೋಟಿ ರೂಪಾಯಿ ವಹಿವಾಟ ನಡೆಸುವದರೊಂದಿಗೆ 14ನೂರು ರೈತ…

Read More