Subscribe to Updates
Get the latest creative news from FooBar about art, design and business.
- ಪಾವಗಡ: ಶಾಲೆಗಳಲ್ಲಿ ಅಣುಕು ಮತದಾನ: ಪ್ರಜಾಪ್ರಭುತ್ವದ ಅರಿವು ಮೂಡಿಸುವ ಪರಿಣಾಮಕಾರಿ ಪ್ರಯೋಗ
- ಎಲ್ಲ ದಾನಗಳಿಗಿಂತ ಅನ್ನ, ನೀರು ಹಾಗೂ ವಸ್ತ್ರ ದಾನ ಶ್ರೇಷ್ಠ: ಸೌಮ್ಯ ಅನಿಲ್ ಚಿಕ್ಕಮಾದು
- ಮಾದರ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ: ಅಧ್ಯಕ್ಷ ಗೋಪಾಲಯ್ಯ ವಿರುದ್ಧ ಬಾಣದ ರಂಗಯ್ಯ ಆಕ್ರೋಶ
- ಮಧುಗಿರಿ ಬಿಜೆಪಿ ಜಿಲ್ಲಾ ಮೋರ್ಚಾ ಪದಾಧಿಕಾರಿಗಳ ಆಯ್ಕೆಗೆ ತಾತ್ಕಾಲಿಕ ತಡೆ: ಬಿ.ಎಚ್. ಅನಿಲ್ ಕುಮಾರ್
- ಮತದಾರರ ಪರಿಷ್ಕರಣೆಯಿಂದ ಬಾಂಗ್ಲಾ ದೇಶದ ವಲಸೆಗಾರರನ್ನು ಹೊರಗಿಡಿ: ಜೆಡಿಎಸ್ ಒತ್ತಾಯ
- ಮಕ್ಕಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಶಿಕ್ಷಣಾಧಿಕಾರಿ ಮಮತಾಮಣಿ ಕರೆ
- ಸರ್ಕಾರಿ ಶಾಲೆಗಳ ಅಳಿವು — ಉಳಿವು ಸರ್ಕಾರದ ನಿರ್ಧಾರದಲ್ಲಿದೆ: ಪೋಷಕರು—ಶಿಕ್ಷಕರು ಎಚ್ಚರವಹಿಸಿ: ಶ್ರೀ ರುದ್ರಮುನಿ ಸ್ವಾಮೀಜಿ
- ಮಿಡಿಗೇಶಿ: ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ: ಸಾವು
Author: admin
ರಾಯಚೂರು: ಇನ್ಸ್ಟಾಗ್ರಾಂನಲ್ಲಿ ಅನ್ಯಕೋಮಿನ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಕ್ಕೆ ಎರಡು ಕೋಮಿನ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ಹೆಚ್ ಕ್ಯಾಂಪ್ ಎರಡರಲ್ಲಿ ನಡೆದಿದೆ. ಹಿಂದೂ ಯುವಕರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಜನರ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಬರ್, ಶಾಮೀದ್, ತಾಜುದ್ದೀನ್, ಸಮೀರ್ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿ ಹೆಸರಿನ ಖಾತೆ ಮೂಲಕ ಇನ್ಸ್ಟಾಗ್ರಾಂನಲ್ಲಿ ಅನ್ಯಕೋಮಿನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ನಂತರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಈ ಪೋಸ್ಟ್ ಸ್ಥಳೀಯ ವಾಟ್ಸಾಪ್ ಗ್ರೂಪ್ ಳಲ್ಲೂ ಹರಿದಾಡಿದೆ. ಹೀಗಾಗಿ ಈ ಪೋಸ್ಟ್ ಯಾರು ಹಾಕಿದ್ದಾರೆ ಎಂದು ಅನ್ಯಕೋಮಿನ ಯುವಕರು ವಿಚಾರಿಸಲೆಂದು ಆರ್ಹೆಚ್ ಕ್ಯಾಂಪ್ ಗೆ ಆಗಮಿಸಿದ್ದಾರೆ. ವಿಚಾರಿಸಲೆಂದು ಬಂದ ಅನ್ಯಕೋಮಿನ ಯುವಕರಲ್ಲಿ ಓರ್ವ ಆರ್ಹೆಚ್ ಕ್ಯಾಂಪ್ ಎರಡರ ದುರ್ಗಾದೇವಿ ದೇವಸ್ಥಾನದಲ್ಲಿ ಮಲಗಿ ಹೈಡ್ರಾಮಾ ಸೃಷ್ಟಿಸಿದ್ದಾನೆ.…
ಮೊಬೈಲ್ ನಂಬರ್ ಕೊಡಲಿಲ್ಲವೆಂಬ ಕಾರಣಕ್ಕೆ ಮಹಿಳೆಯೊಬ್ಬರ ಕಾರಿನ ಗಾಜು ಒಡೆದು ಬೆದರಿಕೆಯೊಡ್ಡಲಾಗಿದ್ದು, ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ನಿವಾಸಿಯಾಗಿರುವ ಮಹಿಳೆ, ಕಂಪನಿಯೊಂದರ ಉದ್ಯೋಗಿ, ಶನಿವಾರ ರಾತ್ರಿ ನಡೆದಿರುವ ಘಟನೆ ಸಂಬಂಧ ದೂರು ಪಡೆದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಮೊಬೈಲ್ ನಂಬರ್ ವಿಚಾರವಾಗಿ ಮಹಿಳೆ ಹಾಗೂ ಪಕ್ಕದ ಮನೆಯವರ ನಡುವೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆರೋಪಿ, ಕಾರಿನ ಗಾಜು ಒಡೆದು ಬೆದರಿಕೆ ಹಾಕಿರುವುದಾಗಿ ಗೊತ್ತಾಗಿದೆ. ಘಟನೆಗೆ ಪ್ರಮುಖ ಕಾರಣವೇನು ಎಂಬುಂದು ತನಿಖೆಯಿಂದ ತಿಳಿಯಬೇಕಿದೆ’ ಎಂದು ತಿಳಿಸಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಂಡಿದ್ದ 4.5 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ‘ನಗರ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಕೆರೆ, ಕುಂಟೆ, ಗೋಮಾಳ, ಸ್ಮಶಾನ ಹಾಗೂ ರಾಜಕಾಲುವೆ ಒತ್ತುವರಿ ಆಗಿತ್ತು. ಒಟ್ಟು 1 ಎಕರೆ 13 ಗುಂಟೆ ಒತ್ತುವರಿ ತೆರವು ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ. ಎ. ದಯಾನಂದ ಮಾಹಿತಿ ನೀಡಿದ್ದಾರೆ. ಯಲಹಂಕ ತಾಲ್ಲೂಕಿನಲ್ಲಿ ಸರ್ಕಾರಿ ಗೋಮಾಳ, ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಬೀಳು ಜಮೀನು, ಬೆಂಗಳೂರು ಉತ್ತರ, ಆನೇಕಲ್ ತಾಲ್ಲೂಕಿನಲ್ಲಿ ಖರಾಬು ಜಮೀನು, ಯಲಹಂಕ ಹಾಗೂ ಆನೇಕಲ್ ನಲ್ಲಿ ಸ್ಮಶಾನ ಜಮೀನು ಒತ್ತುವರಿ ಆಗಿತ್ತು ಎಂದು ವಿವರಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕನ್ನಡೇತರ ಅಧಿಕಾರಿಗಳು, ನೌಕರರಿಗೆ ಕನ್ನಡ ಕಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಕನ್ನಡ ಕಲಿಕಾ ಶಿಬಿರವನ್ನು ಪ್ರಾರಂಭಿಸಿದೆ. ರಾಜಾಜಿ ನಗರದಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಸಂಸ್ಥೆಯಲ್ಲಿ ನಡೆಸಲಾದ ಶಿಬಿರವನ್ನು ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ ಉದ್ಘಾಟಿಸಿದರು. ಶಿಬಿರದಲ್ಲಿ ಅಲ್ಲಿನ ಅಧಿಕಾರಿಗಳು ಹಾಗೂ ನೌಕರರಿಗೆ ಕನ್ನಡ ಕಲಿಸಲಾಯಿತು. ‘ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಕಾರ್ಖಾನೆಗಳು, ಬ್ಯಾಂಕ್ ಗಳು, ಅಪಾರ್ಟ್‌ಮೆಂಟ್ ಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಕನ್ನಡೇತರರು ವಾಸಿಸುವ ಪ್ರದೇಶಗಳಲ್ಲಿ ಕನ್ನಡ ಕಲಿಕಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದು ಸಂತೋಷ ಹಾನಗಲ್ಲ ತಿಳಿಸಿದರು. ‘ಕನ್ನಡ ಕಲಿಕಾ ತರಗತಿಗಳನ್ನು ಪ್ರಾರಂಭಿಸಲು ಹಾಗೂ ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡವನ್ನು ಕಡ್ಡಾಯಗೊಳಿಸಲು ಸರ್ಕಾರ ಬದ್ಧವಾಗಿದೆ. ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ಮಸೂದೆ-2022 ಅನುಮೋದನೆಗೊಂಡಿದೆ. ಕನ್ನಡ ಬಳಕೆಗೆ ನಿರಾಕರಿಸಿದಲ್ಲಿ ಶಿಕ್ಷೆಗೆ ಅವಕಾಶವಿದೆ’ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ರಾಜ್ಯದಲ್ಲಿನ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಇನ್ನು ಮೊಬೈಲ್ ನಿಷಿದ್ಧ ಎಂಬ ಆದೇಶವನ್ನು ಸರ್ಕಾರ ಹೊರಡಿಸಿದೆ. ಈಗಾಗಲೇ ದೇವಾಲಯಕ್ಕೆ ಬರುವ ಭಕ್ತರು ಮೊಬೈಲ್ ಗಳನ್ನು ದೇವಾಲಯದ ಪ್ರಾಂಗಣಕ್ಕೆ ತಂದು, ಇತರೆ ಭಕ್ತಾಧಿಗಳಿಗೂ ತೊಂದರೆ ಉಂಟು ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ, ದೇವಾಲಯದಲ್ಲಿ ಭಕ್ತಿಗಿಂತ ಹೆಚ್ಚು ಮೊಬೈಲ್ ಗಳ ರಿಂಗ್ ಗಳೇ ಕೇಳುತ್ತಿರುವ ಕಾರಣ, ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ದೇವಾಲಯಗಳಲ್ಲಿ ಮೊಬೈಲ್ ನಿಷಿದ್ಧ ಎಂಬ ಆದೇಶ ಹೊರಡಿಸಿದೆ. ಇನ್ನು ಆದೇಶದಲ್ಲಿ ಇರುವ ವಿಚಾರವಾದ್ರೂ ಏನು? ಎಂಬುದನ್ನು ನೋಡುವುದಾದ್ರೆ, ದೇವಾಲಯಗಳಲ್ಲಿ ಮೊಬೈಲ್ ಗಳು ಹೆಚ್ಚು ಸದ್ದು ಮಾಡುತ್ತಿರುವ ಕಾರಣ, ಯಾವುದೇ ಭಕ್ತಾಧಿಗಳು ದೇವಾಲಯ ಪ್ರವೇಶ ಮಾಡಿದ್ರೂ, ಅವರು ತಮ್ಮ ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿರಬೇಕು. ಇಲ್ಲವಾದ್ರೆ, ದೇವಾಲಯಕ್ಕೆ ಮೊಬೈಲ್ ಗಳನ್ನು ತರಬಾರದು. ಇದು ಕೇವಲ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಕ್ಕೆ ಮಾತ್ರ ಎಂದು ಆದೇಶದಲ್ಲಿ ಸರ್ಕಾರ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ಯುಪಿಎ ಹಾಗೂ ಅವುಗಳ ಮಿತ್ರ ಪಕ್ಷಗಳ ಮಹಾಘಟಬಂಧನ್ ಸಭೆಗೆ ಈಗಾಗಲೇ ಬೆಂಗಳೂರು ಸಿದ್ಧವಾಗಿದ್ದು, ಇಂದು ಬೆಳಿಗ್ಗೆ 11 ಘಂಟೆಗೆ ಖಾಸಗಿ ಹೊಟೇಲ್ ನಲ್ಲಿ ಸಭೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ದೇಶದ ವಿವಿಧ ರಾಜ್ಯಗಳ ನಾಯಕರುಗಳನ್ನು ಸ್ವಾಗತಿಸಲು ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಪ್ಲೆಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿದ್ದು, ಇತ್ತ ಬೆಂಗಳೂರಿಗೆ ಆಗಮಿಸಿರುವ ನಿತೀಶ್ ಕುಮಾರ್ ವಿರುದ್ಧ ಕೆಲ ಕಿಡಿಗೇಡಿಗಳು ಬ್ಯಾನರ್ ಗಳನ್ನು ಆಳವಡಿಸಿದ್ದಾರೆ. ಬ್ರಿಡ್ಜ್ ಗಳನ್ನೇ ಸರಿಯಾಗಿ ನಿರ್ಮಿಸಲು ಸಾಧ್ಯವಾಗದ ಮುಖ್ಯಮಂತ್ರಿ ಈಗ ಪ್ರಧಾನಿ ಹುದ್ದೆಯ ರೇಸ್ ನಲ್ಲಿ ಬಂದಿದ್ದಾರೆ ಎಂದು ಅವಹೇಳನ ಮಾಡುವಂತಹ ಪೋಸ್ಟರ್ ಗಳನ್ನು ರಾತ್ರೋರಾತ್ರಿ ಆಳವಡಿಕೆ ಮಾಡಿದ್ದು, ಬೆಂಗಳೂರಿನ ಕಾವೇರಿ ಜಂಕ್ಷನ್ ನಿಂದ ತಾಜ್ ವೆಸ್ಟೆಂಡ್ ಹೋಟೆಲ್ ಹಾಗೂ ಚಾಲುಕ್ಯ ಸರ್ಕಲ್ ನಲ್ಲಿ ಪೋಸ್ಟರ್ ಆಳವಡಿಕೆ ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನಗರದ ಜೋಗುಪಾಳ್ಯದಲ್ಲಿ ನೇಣು ಬಿಗಿದುಕೊಂಡು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 30 ವರ್ಷದ ದಿವ್ಯಾ ಆತ್ಮಹತ್ಯೆಗೆ ಶರಣಾದ ಟೆಕ್ಕಿ. 2014 ರಲ್ಲಿ ಅರವಿಂದ್ ಎಂಬ ಟೆಕ್ಕಿಯನ್ನ ಮೃತ ದಿವ್ಯ ವಿವಾಹವಾಗಿದ್ದರು. ಮದುವೆಯ ನಂತರ ಗಂಡನ ಕುಟುಂಬಸ್ಥರಿಂದ ಮಾನಸಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ದಿವ್ಯಾ ಡೋರ್ ಲಾಕ್ ಮಾಡಿಕೊಂಡಿದ್ದಾಳೆಂದು ಅತ್ತೆ ಮನೆಯವರಿಗೆ ಪತಿ ಅರವಿಂದ್ ಕರೆ ಮಾಡಿದ್ದಾರೆ. ದಿವ್ಯ ಕುಟುಂಬಸ್ಥರು ಬಂದು ನೋಡಿದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ದಿವ್ಯ ಸಾವನ್ನಪ್ಪಿದ್ದಾರೆ. ಹೀಗಾಗಿ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಮೃತ ದಿವ್ಯಾ ಪೋಷಕರು ಕೊಲೆ ಆರೋಪ ಮಾಡಿದ್ದು, ಹಲಸೂರು ಪೊಲೀಸರಿಂದ ಆರೋಪಿ ಪತಿ ಅರವಿಂದ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ಅಮಾವಾಸ್ಯೆ ಎಂದು ದೇವಸ್ಥಾನಕ್ಕೆ ಹೋದ ಸಂದರ್ಭ, ಪತ್ನಿಯ ಎದುರೇ ಗಂಡನ ಬರ್ಬರ ಹತ್ಯೆ ಮಾಡಿರುವ ಘಟನೆ ಮೂಡಲಗಿ ತಾಲೂಕಿನ ಬನಸಿದ್ದೇಶ್ವರ ದೇವಸ್ಥಾನ ಮುಂದೆ ನಡೆದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿ ಬನಸಿದ್ದೇಶ್ವರ ದೇವಸ್ಥಾನದ ಮುಂದೆ ಹೆಂಡತಿಯ ಕಣ್ಣೆದುರೇ ಗಂಡನ ಮೇಲೆ ಮಚ್ಚು ಲಾಂಗುಗಳಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಘಟನೆಯಲ್ಲಿ ಶಂಕರ್ ಸಿದ್ದಪ್ಪ ಜಗಮುತ್ತಿ(25) ಮೃತಪಟ್ಟಿದ್ದಾರೆ. ಮೃತ ಶಂಕರ್ ಕಳೆದ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಅಮಾವಾಸ್ಯೆ ಹಿನ್ನೆಲೆ ಇಂದು ಪತ್ನಿ ಪ್ರಿಯಾಂಕಾ ಜೊತೆಗೆ ದೇವಸ್ಥಾನಕ್ಕೆಂದು ಬಂದಿದ್ದರು. ವಡೇರಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದ ವೇಳೆ ಘಟನೆ ನಡೆದಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಮೆರೆಯುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಕಾಂಗ್ರೆಸ್ ನಿಂದ ಹೊರಬಂದು ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಹಿರಂಗ ಸವಾಲ್ ಹಾಕಿದ್ದಾರೆ. ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ವಿರುದ್ಧ ಮಾತನಾಡಿದ್ದಾರೆ. 123 ಸೀಟು ಬಂದ್ರೆ ಪಕ್ಷ ವಿಸರ್ಜನೆ ಮಾಡೋದಾಗಿ ಹೇಳಿದ್ರು. ಇನ್ನೂ ಮಾಡಿಲ್ಲ ಅಂತ ಮಾತಾಡಿದ್ದಾರೆ. ಕನ್ನಡದ ಬಗ್ಗೆ ಪಾಠ ಮಾಡೋ ಸಿದ್ದರಾಮಯ್ಯ ಅವರಿಗೆ ಕನ್ನಡ ಗೊತ್ತಿದೆಯಾ? ವಿಧಾನಸಭೆಯಲ್ಲಿ ಮಾತಾಡಿದ್ರೆ ಆಗ ಉತ್ತರ ಕೊಡ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ. ನಾನು ಸ್ಪಷ್ಟವಾಗಿ ಹೇಳಿದ್ದೇನೆ. 123 ಸ್ಥಾನ ಕೊಟ್ಟು ಪಂಚರತ್ನ ಯೋಜನೆ ಜಾರಿ ಮಾಡದೇ ಹೋದ್ರೆ ಪಕ್ಷ ವಿಸರ್ಜನೆ ಮಾಡ್ತೀನಿ ಅಂತಾ ಹೇಳಿದ್ದೆ. 123 ಬಂದಿಲ್ಲ ವಿಸರ್ಜನೆ ಮಾಡಿಲ್ಲ ಅಂತ ಅಲ್ಲಿ ಟೇಂಕಾರದ ಮಾತು ಆಡ್ತಾರೆ. ಇದೇ ಮನುಷ್ಯ 58 ಸ್ಥಾನ ನನ್ನಿಂದ ಬಂತು ಅಂತಾ ಹೇಳಿದ್ದರು. 1999ರಲ್ಲಿ ಇದೇ ಮನುಷ್ಯ ಜೆಡಿಎಸ್ ಅಧ್ಯಕ್ಷ ಆಗಿದ್ದಾಗ 10…
ಜೈಪುರ್: ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಗೆಳೆಯನ ಮುಂದೆಯೇ ಸಾಮೂಹಿಕ ಅತ್ಯಾಚಾರವೆಸಗಿದ್ದ ಮೂವರು ಆರೋಪಿಗಳನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಹಾಗೂ ಆಕೆಯ ಗೆಳೆಯ ಶನಿವಾರ ಅಜ್ಮೀರ್‍ನಿಂದ ರಾತ್ರಿ 10:30 ರ ಸುಮಾರಿಗೆ ಬಸ್ ನಲ್ಲಿ ಜೋಧ್ ಪುರಕ್ಕೆ ಬಂದಿದ್ದಾರೆ. ಬಳಿಕ ಉಳಿದುಕೊಳ್ಳಲು ರೂಮ್ ಪಡೆಯಲು ಅತಿಥಿ ಗೃಹಕ್ಕೆ ತೆರಳಿದ್ದರು. ಆದರೆ ಅಲ್ಲಿನ ಅತಿಥಿ ಗೃಹದ ಸಿಬ್ಬಂದಿ ಹುಡುಗಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ನಂತರ ಅಲ್ಲಿಂದ ಇಬ್ಬರೂ ತೆರಳಿದ್ದಾರೆ. ಅತಿಥಿ ಗೃಹದ ಹೊರಗೆ ನಿಂತಿದ್ದ ಇಬ್ಬರನ್ನೂ ಮಾತಾಡಿಸಿದ ಆರೋಪಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಬಳಿಕ ರೈಲ್ವೇ ನಿಲ್ದಾಣಕ್ಕೆ ಕರೆದೊಯ್ಯುತ್ತಿರುವುದಾಗಿ ನಂಬಿಸಿ ಜೆಎನ್ ವಿಯು ಕ್ಯಾಂಪಸ್ ಬಳಿಯ ಕ್ರೀಡಾಂಗಣಕ್ಕೆ ಕಳುಹಿಸಿದ್ದಾರೆ. ಅಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅತಿಥಿಗೃಹದ ಮೇಲ್ವಿಚಾರಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆಳಗ್ಗಿನ ಜಾವ ಮೈದಾನಕ್ಕೆ ಜನ ವಾಕಿಂಗ್ ಗೆ ಬರುತ್ತಿದ್ದಂತೆ ಆರೋಪಿಗಳು…