Author: admin

ಆಂಟೋನಿ, ಬೇಗೂರು ಬೆಂಗಳೂರು: ಬೇಗೂರು ಲೂರ್ದು ಮಾತೆಯ ಹಬ್ಬವನ್ನು ಫೆಬ್ರವರಿ 12ರಂದು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು. ಏನಿದು ಈ ಬೇಗೂರಿನ  ಗವಿಮಾತೆಯ ವಿಶೇಷತೆ ತಿಳಿಯೋಣ ಬನ್ನಿ… ಗವಿ ಮಾತೆಯ ಇತಿಹಾಸ (ಲೂರ್ದು ಮಾತೆಯ ) ವಿಶೇಷತೆ. ಯಾರು ಈ ಮಾತೆ ? ನೂರಾರು ವರ್ಷಗಳಿಂದ ಬೆಳೆದು ಬಂದ ಬೇಗೂರು ಗ್ರಾಮದಲ್ಲಿ ಇದ್ದಕ್ಕಿದ್ದ ಹಾಗೆ 1940ರಲ್ಲಿ ಭೀಕರವಾದ ಪ್ಲೇಗ್ ರೋಗವು ಊರನ್ನು ಆವರಿಸಿಕೊಂಡು ಮರಣ ತಾಂಡವವಾಡತೊಡಗಿತು. ನೂರಾರು ಜನರು ದಿನದಿಂದ ದಿನಕ್ಕೆ ಈ ಭೀಕರವಾದ ರೋಗಕ್ಕೆ ಬಲಿಯಾಗುತ್ತಾ ಇಡೀ ಊರೇ ನಾಶದ ಪಥದಲ್ಲಿ ಸಿಲುಕಿತು. ಅಂದಿನ ವಿಚಾರಣೆ ಗುರುಗಳು ಮತ್ತು ಊರ ಜನರು ಇಂಥ ಭಯಂಕರ ಕಾಯಿಲೆಯಿಂದ ಪಾರಾಗಲು ಏನು ಮಾಡುವುದು ಎಂದು ಅರಿಯದೆ “ದೇವರೇ ದಿಕ್ಕು” ಎಂದು, ಲೋಕದ ರಕ್ಷಣೆಗೆ ನೆರವಾಗಲು ಮಣಿದ ದೇವ ಮಾತೆಯ ಸ್ವರೂಪವನ್ನು ಪ್ರತಿಷ್ಠಾಪಿಸಿ ಎಡಬಿಡದೆ ಅವಳಲ್ಲಿ ಪ್ರಾರ್ಥಿಸುತ್ತಾ, ಜಪಮಾಲೆಯನ್ನು ಹೇಳುತ್ತಾ, ಭಕ್ತಿಯಿಂದ ಮೊರೆಯಿಟ್ಟರು. ಬೇಡಿದವರನ್ನು ಇದುವರೆಗೂ  ಭೂಮಂಡಲದಲ್ಲಿ ನಿರಾಕರಿಸದಿರುವ ಈ ಮಾತೆಯು, ತನ್ನ ಕೃಪಾವರವನ್ನು…

Read More

ಬೆಳಗಾವಿಯ ಆಜಮ್ ನಗರದಲ್ಲಿ ನೇಣು ಬಿಗಿದುಕೊಂಡು ಕೆಎಎಸ್ ಅಧಿಕಾರಿ (KAS Officer) ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಆಜಮ್ ನಗರದ ನಿವಾಸದಲ್ಲಿ ಎಫ್‌ಡಿಎ ಜಾಫರ್ ಫೀರ್ಜಾದೆ (39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಡಿಟಿಐ‌ನಲ್ಲಿ ಎಫ್‌ಡಿಎ ತರಬೇತಿಯಲ್ಲಿದ್ದರು. ಇವರು ಹಿಡಕಲ್ ಡ್ಯಾಂ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ KAS ಅಧಿಕಾರಿ ರೇಷ್ಮಾ ತಾಳಿಕೋಟೆ ಅವರ ಪತಿ. ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಜಾಫರ್ ಅವರ ಮರಣೋತ್ತರ ಪರೀಕ್ಷೆ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗುತ್ತಿದೆ‌. ಜಾಫರ್ ಫಿರ್ಜಾದೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಪತ್ನಿ ರೇಷ್ಮಾ ತಾಳಿಕೋಟಿ ಅವರ ಆಗಮನಕ್ಕಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ದಾಖಲಾದ 2ನೇ ಫೋಕ್ಸೋ ಪ್ರಕರಣ ಸಂಬಂಧ ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ದೃಢಪಟ್ಟಿದ್ದು, ಪೊಲೀಸರು 761 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಎ ಮತ್ತು ಬಿ ಎರಡು ಭಾಗವಾಗಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಮಾತ್ರವಲ್ಲದೆ, 12 ಮತ್ತು 14 ವರ್ಷದ ಸಂತ್ರಸ್ತ ಬಾಲಕಿಯರ ಹೇಳಿಕೆಯನ್ನು ಸಿಆರ್​ಪಿಸಿ 161 ಅಡಿ ದಾಖಲಿಸಿಕೊಳ್ಳಲಾಗಿದೆ. ಟಿವಿ ನೋಡುತ್ತ ರೂಮಿನಲ್ಲಿ ಕುಳಿತಾಗ ಮುರುಘಾಶ್ರೀ ರೇಪ್ ಮಾಡಿದರು ಎಂದು 12 ವರ್ಷದ ಬಾಲಕಿ ಹೇಳಿಕೆ ನೀಡಿದ್ದು, ಸ್ವಾಮೀಜಿ ನೀಡಿದ ಚಾಕ್ಲೇಟ್ ತಿಂದ ಬಳಿಕ ನಿದ್ದೆ ಬಂದು ಮಲಗಿದ್ದೆ,  ಎಂದು 14 ವರ್ಷದ ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ದೃಢಪಟ್ಟಿದ್ದು, ಮಕ್ಕಳು ಮತ್ತು ಕುಟುಂಬಸ್ಥರ ಅನುಕಂಪ, ಗೌರವ ಗಳಿಸಿ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಹಾಸ್ಟೆಲ್ ವಾರ್ಡನ್ ರಶ್ಮಿ ಮೂಲಕ ಮಕ್ಕಳನ್ನು ಕೊಠಡಿಗೆ ಕರೆಸಿಕೊಂಡು ನಿದ್ದೆ ಭರಿಸುವ ಚಾಕ್ಲೆಟ್ ನೀಡಿ ಲೈಂಗಿಕ…

Read More

ಬೆಂಗಳೂರು: ಅಮೆರಿಕದ ರಕ್ಷಣಾ ಕ್ಷೇತ್ರದ ದಿಗ್ಗಜ ಸಂಸ್ಥೆ ಲಾಖ್ಹೀಡ್ ಮಾರ್ಟಿನ್ ಭಾರತದಲ್ಲಿ ಅತಿದೊಡ್ಡ ವಿಮಾನ ದುರಸ್ತಿ ಕೇಂದ್ರ ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಿದೆ. ಇದು ಏಷ್ಯಾದಲ್ಲೇ ಅತಿದೊಡ್ಡ ಕೇಂದ್ರವಾಗಿರಲಿದೆ. ವಿಶ್ವದಲ್ಲೇ ಮೂರನೇ ಅತಿದೊಡ್ಡ ಕೇಂದ್ರವಾಗಿರಲಿದೆ. ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನಗಳ ದುರಸ್ತಿ ಮತ್ತು ನಿರ್ವಹಣೆಗೆಂದೇ ವಿಶೇಷವಾಗಿ ನಿರ್ಮಿಸಲಾಗುತ್ತಿರುವ ಕೇಂದ್ರ ಇದಾಗಿರಲಿದೆ. ಈಕುರಿತು ಲಾಖ್ಹೀಡ್ ಮಾರ್ಟಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ, ಸಿಇಒ ವಿಲಿಯಮ್ ಬ್ಲೇರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಉಪಗ್ರಹಗಳು, ಸೆನ್ಸರ್​ಗಳು, ಗ್ರೌಂಡ್ ಸ್ಟೇಷನ್​ಗಳು ಹಾಗೂ ಮಷಿನ್ ಸೊಲ್ಯೂಷನ್ಸ್​ಗಳಿಗೆ ಸಂಬಂಧಿಸಿ ಭಾರತದಲ್ಲಿ ಕಾರ್ಯಾಚರಣೆ ವಿಸ್ತರಿಸುವ ಸಲುವಾಗಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋ ಮತ್ತು ಇತರ ಸ್ಟಾರ್ಟಪ್​ಗಳ ಜತೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಪ್ರದರ್ಶನ ಮಳಿಗೆಯಲ್ಲಿ ಲಾಖ್ಹೀಡ್ ಮಾರ್ಟಿನ್ ಕಂಪನಿಯು ಎಫ್​​-21 ಯುದ್ಧವಿಮಾನ, ಸಿ-130ಜೆ ಟ್ರಾಸ್​​ಪೋರ್ಟ್​​ ಏರ್​​ಕ್ರಾಫ್ಟ್, ಎಂಎಚ್​​-60ಆರ್ ರೋಮೊ ಮಲ್ಟಿ-ಮಿಷನ್ ಹೆಲಿಕಾಪ್ಟರ್, ಜಾವೆಲಿನ್ ವೆಪನ್ ಸಿಸ್ಟಂ ಹಾಗೂ ಎಸ್​​​-92 ಮಲ್ಟಿ ರೋಲ್…

Read More

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಇಂದು ಇಬ್ಬರು ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು. ಈ ಇಬ್ಬರ ನೇಮಕದೊಂದಿಗೆ ಸುಪ್ರೀಂಕೋರ್ಟ್​ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 34 ಆಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಪೂರ್ಣಪ್ರಮಾಣದಲ್ಲಿ ಜಡ್ಜ್​ಗಳ ನೇಮಕವಾದಂತಾಗಿದೆ. ಸುಪ್ರೀಂಕೋರ್ಟ್​ ನ ಕೊಲೆಜಿಯಂ ಜನವರಿ 31ರಂದು ನ್ಯಾ. ರಾಜೇಶ್ ಬಿಂದಲ್ ಮತ್ತು ನ್ಯಾ. ಅರವಿಂದ್ ಕುಮಾರ್ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಬಡ್ತಿ ನೀಡಲು ಶಿಫಾರಸು ಮಾಡಿತ್ತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗುವ ಮೊದಲು ನ್ಯಾ. ಅರವಿಂದ್ ಕುಮಾರ್ ಅವರು ಗುಜರಾತ್ ಹೈಕೋರ್ಟ್​ನ ಮುಖ್ಯನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿದ್ದರು. ನ್ಯಾ. ರಾಜೇಶ್ ಬಿಂದಲ್ ಅವರು ಅಲಹಾಬಾದ್ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶರಾಗಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧುಗಿರಿ: ದೊಡ್ಡೇರಿ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದೊಡ್ಡೇರಿ ಕ್ಲಸ್ಟರ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ಆಯೋಜನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಾಸಪ್ಪನವರು ಮಾತನಾಡಿ, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲಿ ಉತ್ತಮವಾದ ಗುಣಮಟ್ಟದ ಬೋಧನೆ, ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡಿರುತ್ತವೆ. ಇದನ್ನು ತಮ್ಮ ಮಕ್ಕಳು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ನಮ್ಮ ಮಕ್ಕಳು ಓದುವುದರಿಂದ ಕನ್ನಡ ಉಳಿಸುವಂತೆ ಮಾಡಬಹುದು ಎಂದು ಕರೆ ನೀಡಿದರು. ಶಾಲೆಯ ಮುಖ್ಯ ಶಿಕ್ಷಕರಾದ ನರಸಪ್ಪನವರು ಮಾತನಾಡಿ, ಇಂದು ಶಾಲಾ ವಾರ್ಷಿಕೋತ್ಸವಕ್ಕೆ ಎಲ್ಲಾ ಮಕ್ಕಳ ತಂದೆ ತಾಯಂದಿರ ಆಶೀರ್ವಾದದೊಂದಿಗೆ, ಊರಿನ ಗಣ್ಯರೊಂದಿಗೆ ನಡೆಯುತ್ತಿರುವುದು ಸಂತೋಷ ತಂದಿದೆ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಾರ್ಯಕ್ರಮಗಳು ಆಯೋಜನೆ ಮಾಡಿದರೆ, ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳ ಕಾರ್ಯಕ್ರಮಕ್ಕಿಂತ ನಮ್ಮ ಸರ್ಕಾರಿ ಶಾಲೆ ಉತ್ತಮ ಎಂದು ನೋಡಿಸಬಹುದಾಗಿರುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದಲ್ಲಿ ಆಯ್ಕೆಯಾದ ರಾಜ್ಯಮಟ್ಟ ಮತ್ತು ಜಿಲ್ಲಾಮಟ್ಟದ ಮಕ್ಕಳಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ…

Read More

ಈ ಬಾರಿಯ ಏರ್ ಶೋ ಎಲ್ಲರೂ ಹೆಮ್ಮೆಪಡುವಂತಾಗಿದೆ. ಈ ಬಾರಿಯ ಏರ್​ ಶೋ ಎಲ್ಲಾ ದಾಖಲೆಗಳನ್ನು ಮೆಟ್ಟಿ ನಿಂತಿದೆ. ಈ ಐದು ದಿನದ ಏರ್ ಶೋನಲ್ಲಿ ದೇಶ, ವಿದೇಶಿ ನಿರ್ಮಿತ ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಬೆಂಗಳೂರಿನಲ್ಲಿ ಆಯೋಜಿಸಿರುವ ಏರೋ ಇಂಡಿಯಾ 2023ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,  ಏರ್ ಶೋನಿಂದ ಕರ್ನಾಟಕದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕರ್ನಾಟಕದ ಯುವ ಜನತೆ ಹೊಸ ಹೊಸ ತಂತ್ರಜ್ಞಾನ ಸ್ವಾಗತಿಸುತ್ತಿದ್ದಾರೆ. ಕರ್ನಾಟಕ ತಂತ್ರಜ್ಞಾನದಲ್ಲಿ ಮುಂದಿದೆ ಎಂದು ಹೇಳಿದರು. ಏರ್ ಶೋ ಮೂಲಕ ಹೊಸ ಹೊಸ ಉದ್ಯೋಗ ಸೃಷ್ಟಿಯಾಗಲಿವೆ. ಇದೊಂದು ಕೇವಲ ಕಾರ್ಯಕ್ರಮ ಆಗಿ ಉಳಿದಿಲ್ಲ. ಇದು ವಿಶ್ವದಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸುತ್ತದೆ. ಏರ್ ಶೋ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇಂತಹ ಒಂದು ಅದ್ಭುತ ಕ್ಷಣಕ್ಕೆ ಬೆಂಗಳೂರು ಸಾಕ್ಷಿಯಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಬೆಳಗಾವಿ: ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯನ್ನು ವೈದ್ಯ ಕೊಲೆ ಮಾಡಿರುವ ಘಟನೆ ನಡೆದಿದ್ದು, ಜಿಲ್ಲೆಯ ಗೋಕಾಕ್‌ ನಗರದ ನಿವಾಸಿ ರಾಜು ಝಂವರ ಮೃತ ದುರ್ದೈವಿ. ಉದ್ಯಮಿ ಫೆ.10ರಂದು ಗೋಕಾಕ್‌ ನಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಫೆ.11ರಂದು ಗೋಕಾಕ್ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಉದ್ಯಮಿ ರಾಜು ಝಂವರ್‌ಗೆ ಕೊನೆ ಬಾರಿ ಕರೆ ಮಾಡಿದ್ದವರನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ರಾಜು ಝಂವರ್‌ ನಾಪತ್ತೆ ಬಳಿಕ ವೈದ್ಯ ಡಾ.ಸಚಿನ್ ಶಿರಗಾವಿ ಕೂಡ ರಾಜುಗೆ ದೂರವಾಣಿ ಕರೆ ಮಾಡಿದ್ದನು. ಡಾ.ಸಚಿನ್ ಶಿರಗಾವಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ಸತ್ಯ ಬಾಯಿಬಿಟ್ಟಿದ್ದಾನೆ. ತಾನು (ಡಾ.ಸಚಿನ್ ಶಿರಗಾವಿ) ರಾಜುವನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ ಘಟಪ್ರಭಾ ನದಿ ಬಲದಂಡೆ ಕಾಲುವೆಯಲ್ಲಿ ಎಸಿದಿರುವುದಾಗಿ ಹೇಳಿದ್ದಾನೆ. ಸದ್ಯ ನಾಪತ್ತೆಯಾಗಿದ್ದ ಉದ್ಯಮಿ ರಾಜುಗಾಗಿ ಕೊಳವಿ ಬಳಿ ಘಟಪ್ರಭಾ ನದಿ ಬಲದಂಡೆ ಕಾಲುವೆಯಲ್ಲಿ ಶೋಧ ಕಾರ್ಯ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ಬೆಳಗಾವಿ: ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಾತೇರಿ ಬೆಳವಟ್ಕರ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಭಾರತೀಯ ಜನತಾ ಪಕ್ಷದ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ನಾವು ಬೆಳಗಾವಿ ದಕ್ಷಿಣ ಮತಕ್ಷೇತ್ರ ಈಗ ಕಾಂಗ್ರೆಸ್ ಮಾಯವಾಗುತ್ತಾ ಇರುವುದು ನಮ್ಮ ನಾಯಕರಗಳ ಫಲತ್ಕೃತಿಯಾಗಿದೆ . ಈ ಸರ್ಕಾರ ಹಾಗೂ ಇಲ್ಲಿಯ ಶಾಸಕರ ಧೋರಣೆಗಳಿಂದ ಜನರು ಬೆಸೆತ್ತು ಹೋಗಿದ್ದಾರೆ ನಾವು ಈಗ ಯಾರಿಗೂ ಹೆದರುವುದಿಲ್ಲ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿ ಹೊಳೆ, ಶಾಸಕಿ ಅಂಜಲಿ ನಿಂಬಾಳ್ಕರ್ ಮಾರ್ಗದರ್ಶನದಲ್ಲಿ ದಕ್ಷಿಣ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಧ್ವಜ ಹಾರಿಸುತ್ತೇವೆ. ನಿಮ್ಮ ಆಶೀರ್ವಾದ ನಿಮ್ಮ ಬೆಂಬಲ ನಮ್ಮ ಜೊತೆ ಇರಲಿ ಎಂದು ನಾನು ಆಶಿಸುತ್ತೇನೆ ತಮಗೆ ನಾನು ಆಶ್ವಾಸನೆ ನೀಡಬಯಸುತ್ತೇನೆ ದಕ್ಷಿಣದ ಸರ್ವಾಂಗಿನ ಅಭಿವೃದ್ಧಿ ಕಾಂಗ್ರೆಸ್ ಪಕ್ಷದ ಗುರಿಯಾಗಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಹುಟ್ಟು ಹಬ್ಬದ ದಿನದಂದೇ ಚೂಡಿದಾರ್ ನ ಶಾಲ್ ಯಂತ್ರಕ್ಕೆ ಸಿಲುಕಿ ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡಿನ ಮಂಜೇಶ್ವರ ತೂಮಿನಾಡಿನಲ್ಲಿ ನಡೆದಿದೆ.ಮೃತ ದುರ್ದೈವಿಯನ್ನು ಜಯಶೀಲ (24) ಎಂದು ವರದಿಯಾಗಿದೆ. ಜಯಶೀಲ ತೂಮಿನಾಡಿನಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬೃಹತ್ ಗ್ರೈಂಡರ್‌ನಲ್ಲಿ ತೆಂಗಿನಕಾಯಿ ಅರೆಯುತ್ತಿದ್ದ ವೇಳೆ ಕೆಳಬದಿಯ ತಿರುಗುವ ಕಬ್ಬಿಣದ ಹಿಡಿಗೆಯಲ್ಲಿ ಆಕೆ ಧರಿಸಿದ್ದ ಚೂಡಿದಾರ್ ನ ಶಾಲ್ ಸಿಲುಕಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ. ಒಂದೂವರೆ ವರ್ಷಗಳ ಹಿಂದೆ ಜಯಶೀಲ ಅವರ ಮದುವೆಯಾಗಿತ್ತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More