Author: admin

ಕಲಬುರ್ಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿ ವೇಳೆ ದೈಹಿಕ ಪರೀಕ್ಷೆಯಲ್ಲಿ ಉತ್ತಿರ್ಣವಾಗಲು ಕಾಲಿಗೆ ಗೋದಿ ಹಿಟ್ಟು ಮೆತ್ತಿಕೊಂಡು ಪರೀಕ್ಷೆಗೆ ಹಾಜರಾಗಿ ಸಿಕ್ಕಿಬಿದ್ದಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 1619 ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿಗೆ 38 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಮೊದಲ ಹಂತದ ದೇಹದಾರ್ಡ್ಯ ಪರೀಕ್ಷೆ ನಡೆಸಲಾಗುತ್ತಿದೆ. ಚಾಲಕ ಕಂ ನಿರ್ವಾಹಕನಾಗಲು 55 ಕೆಜಿ ತೂಕ, 163 ಸೆಂಟಿ ಮೀಟರ್ ಎತ್ತರವಿರಬೇಕು. ಆದ್ರೆ, ಟೆಸ್ಟ್ಗೆ ಬಂದಿದ್ದ ನಾಲ್ವರು ಖದೀಮರು ತೂಕ ಹೆಚ್ಚಳಕ್ಕಾಗಿ ಒಳ ಉಡುಪಿನಲ್ಲಿ ಕೆಜಿ ಕಲ್ಲು, ಕಾಲುಗಳಿಗೆ, ಸೊಂಟಕ್ಕೆ ಕಬ್ಬಿಣದ ಪೀಸ್‌ಗಳನ್ನು ಕಟ್ಟಿಕೊಂಡಿದ್ರು. ಓರ್ವ ಅಭ್ಯರ್ಥಿ ತನ್ನ ತೊಡೆಗೆ ಗೋದಿ ಹಿಟ್ಟನ್ನು ಮೆತ್ತಿಕೊಂಡು ಬಂದ್ದಿದ್ದಾನೆ. ಇಲಾಖೆಯ ಸಿಬ್ಬಂದಿ ಪರಿಶೀಲನೆ ವೇಳೆ ಅಭ್ಯರ್ಥಿ ಕಳ್ಳಾಟ ಬಯಲಾಗಿದೆ. ಸದ್ಯ ಅಭ್ಯರ್ಥಿಯನ್ನು ನೇಮಕಾತಿ ಪ್ರಕ್ರಿಯೆಯಿಂದಲೇ ಕೈಬಿಡಲಾಗಿದೆ. ಮಾನವೀಯತೆ ದೃಷ್ಟಿಯಿಂದ ಕೇಸ್​​ ದಾಖಲಿಸದೆ ಬಿಟ್ಟು ಕಳಿಸಲಾಗಿದೆ.…

Read More

ಮಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ನಮ್ಮದೆ ಪಕ್ಷದಿಂದ ಸರಕಾರ ರಚಿಸಬೇಕೆಂದು ಶತಾಯ ಗತಾಯ ಪ್ರಯತ್ನಗಳನ್ನು ಮಾಡುತ್ತಿವೆ. ಎಲ್ಲ ಪಕ್ಷಗಳು ಯಾತ್ರೆ, ನಡಿಗೆ ಸೇರಿದಂತೆ ಹಲವಾರು ತಂತ್ರ ಗಳನ್ನು ರೂಪಿಸಿಕೊಂಡು ಮತದಾರರ ಮನೆ ಬಾಗಿಲಿಗೆ ತೆರಳುತ್ತಿದ್ದು ಮತದಾರರನ್ನು ತಮ್ಮತ್ತ ಒಲೈಸುಕೊಳ್ಳಲು ಹಲವಾರು ಪ್ರಯತ್ನಗಳನ್ನು ನಡೆಸುತ್ತಿವೆ ಇದರ ಬೆನ್ನಲ್ಲೆ ಬಿಜೆಪಿ ಪ್ರಣಾಳಿಕೆ ಅಭಿಯಾನ ಸಮಿತಿಯ ಮೊದಲ ಸಭೆಯು ನಿನ್ನೆ ಬಿಜೆಪಿಯ ಕೇಂದ್ರ ಕಚೇರಿ ಜಗನ್ನಾಥ್ ಭವನದಲ್ಲಿ ನಡೆದಿದೆ. ಸದ್ಯ ಇಂದು ಕೇಂದ್ರ ಸಚಿವ ಅಮಿತ್ ಶಾ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೀದರ್ ತಾಲೂಕಿನ ಸೋಲಪೂರ್ ಗ್ರಾಮದ ಕೆರೆಯ ಸಮೀಪದಲ್ಲಿ ಮದುವೆ ನಿರಾಕರಿಸಿದ್ದಕ್ಕೆ ಪಾಗಲ್​ ಪ್ರೇಮಿಯೊಬ್ಬ (Lover) ತಾನು ಪ್ರೀತಿಸುತ್ತಿದ್ದ ಹುಡುಗಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ. ಶಿವಲೀಲಾ (18) ಕೊಲೆಯಾಗಿರುವ ಯುವತಿ. ಈಕೆ ಬ್ರೀಮ್ಸ್​ನಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಳು. ಇನ್ನೂ ಶ್ರೀನಿವಾಸ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮದುವೆಯಾಗಲು (Marriage) ಇಷ್ಟವಿಲ್ಲ ಎಂದು ಹೇಳಿದ್ದಕ್ಕೆ ಶ್ರೀನಿವಾಸ ಸೋಲಪೂರ್ ಕೆರೆಯ ಬಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ಶ್ರೀನಿವಾಸ ಚಾಂಬೋಳ ಗ್ರಾಮದ ನಿವಾಸಿ. ಶಿವಲೀಲಾ ಮಲ್ಲಿಕ್ ಮಿರ್ಜಾಪೂರ್ ಗ್ರಾಮದ ಹುಡುಗಿ. ಬೀದರ್ ನಗರದ ಮಂಗಲ್ ಪೇಟೆಯಲ್ಲಿ ತಾಯಿಯೊಂದಿಗೆ ವಾಸವಾಗಿದ್ದಳು. ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಶ್ರೀನಿವಾಸನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಕುರಿತು ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರನನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.ಥಣಿಸಂದ್ರದ ಮಂಜುನಾಥ್ ನಗರದಲ್ಲಿ ಐಎಸ್ ​ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರ ಆರೀಫ್​ ಎಂಬುವವನ್ನ ಬಂಧಿಸಿದ್ದಾರೆ. ಶಂಕಿತ ಉಗ್ರ ಆರೀಫ್ ಅಲ್​ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಈತ ಕಳೆದ 2 ವರ್ಷಗಳಿಂದ ಅಲ್​ಖೈದಾ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ವರ್ಕ್ ಫರ್ಮ್ ಹೋಮ್ ಮೂಲಕ ಮನೆಯಲ್ಲೆ ಕೆಲಸ ಮಾಡ್ತಿದ್ದ ಆರೀಫ್​ಗೆ ಉಗ್ರ ಸಂಘಟನೆಗಳಲ್ಲಿ ಸೇರಿಕೊಳ್ಳಬೇಕು ಎಂಬ ಕನಸಿತ್ತು. ಅದರಂತೆ ಸಾಮಾಜಿಕ ಜಾಲತಾಣಗಳು, ವೆಬ್​ ಸೈಟ್​ ಮೂಲಕ ಉಗ್ರ ಸಂಘಟನೆಗಳನ್ನು ಸೇರಲು ತಯಾರಿ ನಡೆಸಿದ್ದ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧುಗಿರಿ: ಮಧುಗಿರಿ ತಾಲೂಕು ದಂಡಾದಿಕಾರಿಗಳ ಕಾರ್ಯಾಲಯದಲ್ಲಿ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯ ರಾಜ್ಯ ಖಜಾಂಚಿ ಜೀವಿಕ ಮಂಜು ಮಾತನಾಡಿ,  ಜೀತ ಪದ್ದತಿ ಒಂದು ಅಮಾನವೀಯ ಪದ್ದತಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರದಾನಿ ಇಂದಿರಾಗಾಂಧಿಯವರ ಇಪ್ಪತ್ತು ಅಂಶಗಳ ಕಾರ್ಯಕ್ರಮದಲ್ಲಿ ಜೀತ ಪದ್ದತಿಯಂತ ಅನಿಷ್ಟ ಪದ್ದತಿಯು ಒಂದು ಪ್ರಮುಖವಾದದ್ದು ತಿಳಿಸಿದ್ದು, ಆಗಾಗಿ ದೇಶದಲ್ಲಿ ಕೋಟ್ಯಾಂತರ ಬಡ ಶೋಷಿತರು ಮನುಷ್ಯರಾಗಿ ಬದುಕಲು ದಾರಿಯಾಯಿತು ಇದರ ಉದ್ದೇಶ ಎಲ್ಲಾ ಸ್ಥಳೀಯ ಸರ್ಕಾರಿ ಸರ್ಕಾರೇತರ ಸಂಸ್ಥೆ ಗಳಲ್ಲು ತಳ ಮಟ್ಟದ ಅದಿಕಾರಿಗಳು ಸಹ ಇಂದು ಜೀತ ಪದ್ದತಿ ಹೋಗಲಾಡಿಸಲು ಕಾಳಜಿ ವಹಿಸಬೇಕು ಮತ್ತು ತಮ್ಮ ಜವಾಬ್ದಾರಿ ಕರ್ತವ್ಯ ದೇಶದ ಅಭಿವೃದ್ದಿ ಕೂಡ ಎಂದರು. ಕಾರ್ಯಕ್ರಮ ದಲ್ಲಿ ಉಪ ತಹಶೀಲ್ದಾರ್ ತಿಪ್ಪೇಸ್ವಾಮಿ ಸೌಹಾರ್ದ ಕರ್ನಾಟಕ ಸಂಘಟನೆಯ ಹೋರಾಟಗಾರ್ತಿ ಜೀವಿಕ ಚಿಕ್ಕಮ್ಮ, ಅಂಬೇಡ್ಕರ್ ಸೇನೆ ಮಾರುತಿ ಗೂಬಲಗುಟ್ಟೆ, ಅಂಜಿನಪ್ಪ ಎಲ್ಲಾ ಅಧಿಕಾರಿಗಳು ಹಾಜರಿದ್ದರು. ವರದಿ: ಆಬಿದ್, ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ತುರುವೇಕೆರೆ: ಪಟ್ಟಣದಿಂದ ದಬ್ಬೇಘಟ್ಟ ಗ್ರಾಮದವರಿಗೆ ಸೂಳೇಕೆರೆ ಮೂಲಕ ಹಾದು ಹೋಗುವ ಮುಖ್ಯ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಇದೀಗ ಈ ರಸ್ತೆಗೆ ತಾಲೂಕು ರಾಜ್ಯ ಮಾಹಿತಿ ಹಕ್ಕು ಸಮಿತಿ ಮರುಜೀವ ನೀಡಿದೆ. ಪಟ್ಟಣದಿಂದ ದಬ್ಬೇಘಟ್ಟ ಗ್ರಾಮದವರಿಗೆ ಸೂಳೇಕೆರೆ ಮೂಲಕ ಹಾದು ಹೋಗುವ ಮುಖ್ಯ ರಸ್ತೆ , ಪಟ್ಟಣದಿಂದ ಕೇವಲ ಒಂದುವರೆ ಕಿಲೋಮೀಟರ್ ದೂರದವರೆಗೆ ಉತ್ತಮವಾದ ರಸ್ತೆ ನಿರ್ಮಾಣವಾಗಿದ್ದು, ಇನ್ನು ಸೂಳೆಕೆರೆ ಗ್ರಾಮದ ಹತ್ತಿರ ಅರ್ಧ ಕಿಲೋಮೀಟರ್ ನಷ್ಟು ರಸ್ತೆಯು ಅಧಿಕಾರಿಗಳ ನಿರ್ಲಕ್ಷದಿಂದ ಸುಮಾರು ತಿಂಗಳಿನಿಂದ ನೆನೆಗುದಿಗೆ ಬಿದ್ದಿದ್ದು,  ಹದಗೆಟ್ಟು ಹೋಗಿತ್ತು, ಈ ರಸ್ತೆಯಲ್ಲಿ ಸುಮಾರು ದ್ವಿಚಕ್ರವಾಹನದ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದರು,  ಈ ರಸ್ತೆಯಿಂದ ಆಗುವ ಸಮಸ್ಯೆಯಿಂದ ಬೇಸತ್ತಿದ್ದ ಸಾರ್ವಜನಿಕರನ್ನು ಗಮನಿಸಿದ, ತಾಲೂಕು ರಾಜ್ಯ ಮಾಹಿತಿ ಹಕ್ಕು  ತಾಲೂಕು ಅಧ್ಯಕ್ಷರಾದ ರುದ್ರೇಶ್, ಗಮನಿಸಿ ತಕ್ಷಣ ತಾಲೂಕಿನ ಶಾಸಕರಿಗೆ ವಿಷಯ ಮುಟ್ಟಿಸಿದ್ದಾರೆ, ಇದಕ್ಕೆ ಸ್ಪಂದಿಸಿದ ತಾಲೂಕು ಶಾಸಕರಾದ ಮಸಾಲ ಜಯರಾಮ್ ಅವರು ತಕ್ಷಣ ಈ ರಸ್ತೆಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಕೂಡಲೇ ದೂರವಾಣಿ ಕರೆ ಮೂಲಕ…

Read More

ಪಾವಗಡ ಕುರುಬರಹಳ್ಳಿ ಗೇಟ್ ಬಳಿ ಇರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆಗೆ ಗುರುವಾರ ಮೂರು ಜನರ ನ್ಯಾಕ್ ತಂಡ ಭೇಟಿ ನೀಡಿ ಕಾಲೇಜಿನ ಸಂಪೂರ್ಣ ಮಾಹಿತಿ ಪಡೆಯುವುದರ ಜೊತೆಗೆ ಶೈಕ್ಷಣಿಕ ಗುಣಮಟ್ಟ ವಿದ್ಯಾರ್ಥಿಗಳ ಜೊತೆ ಸಂವಾದ ಪೋಷಕರ ಜೊತೆ ಸಂವಾದ ಹಾಗೂ  ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ನ್ಯಾಕ್ ತಂಡದ ಚೇರ್ ಪರ್ಸನ್, ದೇವಶೀಶ್ ಭಟ್ಟಾಚಾರ್ಯ ಜಿ , ಡಾ, ರೇಖಾ ಪಾಂಡೆ, ಡಾ,ಮಂಜುಶ್ರೀ, ರವರ ತಂಡ ಭಾಗವಹಿಸಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ಈ ಒಂದು ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಒ.ಮಾರಪ್ಪ,  ಕಾಲೇಜು ಅಭಿವೃದ್ಧಿ ಸಮಿತಿಯ ಮೈಲಪ್ಪ, ಸಣ್ಣರಾಮರೆಡ್ಡಿ, ಮಾರಣ್ಣ,ಕೆ.ವಿ.ಶ್ರೀನಿವಾಸ್, ಶ್ರೀಧರ್ ಗುಪ್ತಾ, ಕಾಲೇಜಿನ ಪದ್ಮನಾಭ, ರಾಮಾಂಜಿನಮ್ಮ ಪಿ.ಓ., ಮಧುಕುಮಾರ್ ಎಂ., ನಾಗರಾಜು ಎಚ್., ರಾಜಣ್ಣ, ಕಿರಣ್ ಸಿ.ಕೆ., ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ಮಮತಾ ಎಂ., ಮಿನು, ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರದಿ: ನಂದೀಶ್ ನಾಯ್ಕ್ ನಮ್ಮತುಮಕೂರು.ಕಾಂನ ಕ್ಷಣ…

Read More

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು “ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ” ಎಂಬ ಘೋಷವಾಕ್ಯದೊಂದಿಗೆ 1996ರಲ್ಲಿ ಸ್ಥಾಪನೆಯಾಗಿ, 18 ವರ್ಷದಿಂದ 80 ವರ್ಷ ವಯೋಮಾನದವರೆಗಿನ ಲಕ್ಷಾಂತರ ಮಂದಿಗೆ ವಿದ್ಯೆ ನೀಡಿ, ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದು, ವಿಶ್ವವಿದ್ಯಾನಿಲಯವು ಕರ್ನಾಟಕದಾದ್ಯಂತ ಪ್ರಸ್ತುತ ಜಿಲ್ಲಾ ಕೇಂದ್ರಗಳಲ್ಲಿ 23 ಪ್ರಾದೇಶಿಕ ಕೇಂದ್ರಗಳನ್ನು ತೆರೆದು ವಿದ್ಯಾರ್ಥಿಗಳಿಗೆ ರೆಗ್ಯೂಲರ್ ವಿಶ್ವವಿದ್ಯಾನಿಲಯಗಳ ಉನ್ನತ ಶಿಕ್ಷಣಕ್ಕೆ ಸರಿಸಮನಾಗಿ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ಕೊಡುವಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ, 10+2 (ಪದವಿ ಪೂರ್ವ)., 10+2+3 (ಸ್ನಾತಕ ಪದವಿ) ವಿದ್ಯಾರ್ಹತೆ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಕರಾಮುವಿಯಲ್ಲಿ ಪ್ರವೇಶಾತಿ ಪಡೆಯಬಹುದು ಎಂದು  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಶರಣಪ್ಪ ವಿ.ಹಲಸೆ ತಿಳಿಸಿದರು. ಕ.ರಾ.ಮು.ವಿ.ಯು ಕರ್ನಾಟಕ ರಾಜ್ಯದಲ್ಲಿ ಮೈಸೂರಿನ ಮುಕ್ತಗಂಗೋತ್ರಿಯಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ಅತ್ಯಂತ ಸುಂದರವಾದ ಹಸಿರು ಪರಿಸರದಲ್ಲಿ ಸುಸಜ್ಜಿತ ಆಡಳಿತ ಭವನ, ಪರೀಕ್ಷಾ ಭವನ, ವಿಜ್ಞಾನ ಭವನ, ಗ್ರಂಥಾಲಯ, ಪ್ರಾಯೋಗಿಕ ಪ್ರಯೋಗಾಲಯವನ್ನು…

Read More

ಮಧ್ಯಪ್ರದೇಶದ ಇಂದೋರ್ ರೈಲು ನಿಲ್ದಾಣದ ಬಳಿ ನಿಂತಿದ್ದ ಯುವತಿಗೆ ಆರೋಪಿ ರಾಹುಲ್ ಯಾದವ್ (23) ಪ್ರಪೋಸ್ ಮಾಡಿದ್ದಾನೆ. ಆದರೆ ಮಹಿಳೆ ನಿರಾಕರಿಸಿದ್ದಾಳೆ. ಆಗ ರಾಹುಲ್ ಪಿಸ್ತೂಲ್ ತೆಗೆದುಕೊಂಡು ಬಾಲಕಿಯತ್ತ ತೋರಿಸಿದ್ದಾನೆ. ಕಿರುಚಾಟ ಕೇಳಿ ಸಂಸ್ಕರ್ ವರ್ಮ ಓಡೋಡಿ ಬಂದ. ಮಹಿಳೆಯನ್ನು ರಕ್ಷಿಸುವ ವೇಳೆ ಆತನ ತಲೆಗೆ ಗುಂಡು ತಗುಲಿದೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಯಾದವ್ ಮತ್ತು ಅವರ ಕುಟುಂಬ ಸದಸ್ಯರು ತಲೆಮರೆಸಿಕೊಂಡಿದ್ದಾರೆ. ಶರ್ಮಾ ಸಾವಿನ ನಂತರ, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಜನರು ಪೊಲೀಸ್ ನಿಯಂತ್ರಣ ಕೊಠಡಿಯ ಹೊರಗೆ ಪ್ರತಿಭಟನೆ ನಡೆಸಿದರು. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಹುಲಿ ಅಭಯಾರಣ್ಯಗಳಲ್ಲಿ ಮೃಗಾಲಯಗಳನ್ನು ನಿರ್ಮಿಸುವುದನ್ನು ಸುಪ್ರೀಂ ಕೋರ್ಟ್ ವಿರೋಧಿಸಿತು. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಉತ್ತರಾಖಂಡ ಸರ್ಕಾರದಿಂದ ನಿರ್ಮಾಣ ಅಭಿಯಾನದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಬಂದಿದೆ. ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಒಳಗೆ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಳಿದೆ. ಹುಲಿ ಅಭಯಾರಣ್ಯಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಮೃಗಾಲಯಗಳು ಮತ್ತು ಸಫಾರಿಗಳನ್ನು ಸ್ಥಾಪಿಸುವ ಕುರಿತು ಸುಪ್ರೀಂ ಕೋರ್ಟ್ ಸಮಿತಿಯ ಶಿಫಾರಸುಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಹುಲಿ ಅಭಯಾರಣ್ಯಗಳಲ್ಲಿ ವಿವಿಧ ಅಕ್ರಮ ನಿರ್ಮಾಣಗಳನ್ನು ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಮೊದಲ ನೋಟದಲ್ಲಿ, ಹುಲಿ ಮೀಸಲು ಅಥವಾ ರಾಷ್ಟ್ರೀಯ ಉದ್ಯಾನವನಗಳಲ್ಲಿ ಮೃಗಾಲಯವನ್ನು ಹೊಂದುವ ಅಗತ್ಯವಿಲ್ಲ. ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನಗಳಲ್ಲಿ ವಾಸಿಸಲು ಅವಕಾಶ ನೀಡುವುದು ಸಫಾರಿಗಳ ಉದ್ದೇಶವಾಗಿದೆ ಮತ್ತು ಕೃತಕ ಪರಿಸರದಲ್ಲಿ ಅಲ್ಲ ಎಂದು ನ್ಯಾಯಾಲಯ ಹೇಳಿದೆ.…

Read More