Author: admin

ನವದೆಹಲಿ: ರಾಜ್ಯದ ಬಜೆಟ್ ಅಧಿವೇಶನದ ನಂತರ ನಾಲ್ಕು ಕಡೆ ರಥಯಾತ್ರೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.‌ ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕಾರಿಣಿಯಲ್ಲಿ ಹಲವಾರು ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದರು. ಚುನಾವಣೆ ನಡೆಯುವ ರಾಜ್ಯಗಳ ಬಗ್ಗೆ ವರದಿ ಮಂಡಿಸಲಾಯಿತು. ಬೂತ್ ಮಟ್ಟದ ಕಾರ್ಯಕ್ರಮಗಳಿಂದ ಹಿಡಿದು, ಸಂಘಟನೆ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲದೆ ಚುನಾವಣೆ ಎದುರಿಸುತ್ತಿದ್ದೇನೆ. ನಕಾರಾತ್ಮಕ ಪ್ರಚಾರದ ಪ್ರಯತ್ನಗಳು ನಡೆದರು ವಿಪಕ್ಷಗಳು  ಪರಿಣಾಮ ಬಿರಿಲ್ಲ. ಬಜೆಟ್ ಅಧಿವೇಶನದ ಬಳಿಕ ನಾಲ್ಕು ಕಡೆಯಿಂದ ರಥಯಾತ್ರೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ನಾಲ್ಕು ದಿಕ್ಕಿನಿಂದ ರಥಯಾತ್ರೆ ಮಾಡಬೇಕು ಎಂದು ನಿರ್ಧರಿಸಿದೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ : 2023-2024 ನೇ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮೊರರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಇತರೆ ವಸತಿ ಶಾಲೆಗಳ 6ನೇ ತರಗತಿಯ ದಾಖಲಾತಿಗಾಗಿ ಮಾರ್ಚ್ 12, 2023 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ವರೆಗೆ ಪರೀಕ್ಷೆ ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ವತಿಯಿಂದ ಪ್ರವೇಶ ಪರೀಕ್ಷೆ ಮತ್ತುಆನ್‍ಲೈನ್ ಕೌನ್ಸಿಲಿಂಗ್  ನಡೆಸಲಾಗುವುದು. ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರು/ಪೋಷಕರು ತಮ್ಮ ಮಕ್ಕಳನ್ನು 6ನೇ ತರಗತಿಗೆ ವಸತಿ ಶಾಲೆಗಳಿಗೆ ದಾಖಲಿಸಲು ಜನವರಿ 5, 2023 ರಿಂದ ಜನವರಿ 22 ರವರೆಗೆ ಅವಶ್ಯಕ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ವಸತಿ ಶಾಲೆಗಳ ಮೂಲಕ ಆನ್‍ಲೈನ್ ಅರ್ಜಿ ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೊರಟಗೆರೆ:  ಕೊರಟಗೆರೆಯಲ್ಲಿ ರೈತಚೈತನ್ಯ ಮತ್ತು ರೈತ ಸಂಕ್ರಾಂತಿ ಸಂವಾದ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು. ಕೊರಟಗೆರೆ ಪಟ್ಟಣದ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಜಾತ್ಯಾತೀತ ಜನತಾದಳ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ‘ರೈತನಾಯಕ ಕುಮಾರಣ್ಣನ ಜೊತೆ ರೈತಚೈತನ್ಯ ಮತ್ತು ರೈತ ಸಂಕ್ರಾಂತಿಯ ವಿಡೀಯೊ ಸಂವಾದ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕರ್ನಾಟಕದ 224 ಕ್ಷೇತ್ರದ ರೈತರ ಸಂಕಷ್ಟವನ್ನು ತಿಳಿಯುವ ಉದ್ದೇಶದಿಂದ ರೈತ ಸಂಕ್ರಾಂತಿ ಸಂವಾದ ಕಾರ್ಯಕ್ರಮ ನಡೆದಿದೆ. ರೈತನ ಪರವಾಗಿ ಸದಾ ಚಿಂತಿಸುವ ರೈತನಾಯಕ ಕುಮಾರಣ್ಣ ಮುಖ್ಯಮಂತ್ರಿ ಆದರೆ, ರೈತರ ಆರ್ಥಿಕ ಅಭಿವೃದ್ದಿಗೆ ಸಹಕಾರಿ ಆಗಲಿದೆ. ಕೊರಟಗೆರೆಯ ರೈತರು ಮುಸುಕಿನ ಜೋಳ ಮತ್ತು ರಾಗಿಬೆಳೆಯ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಚರ್ಚಿಸಿದ್ದಾರೆ ಎಂದು ಹೇಳಿದರು. ತೋವಿನಕೆರೆ ರೈತ ಭೀಮರಾಜು ಮಾತನಾಡಿ, ಕೊರಟಗೆರೆ ಕ್ಷೇತ್ರದಲ್ಲಿ ಮಳೆಯಿಂದ ರಾಗಿಬೆಳೆಯು ಕೊಚ್ಚಿಹೋಗಿದೆ. ರಾಗಿಬೆಳೆಗೆ ಸರಕಾರ ಬೆಂಬಲ ಬೆಲೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಗಿ ಮಾರಾಟಕ್ಕೆ ಕೊರಟಗೆರೆ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕೊರಟಗೆರೆ ಕ್ಷೇತ್ರಕ್ಕೆ…

Read More

ಮನುಷ್ಯನ ಆಸೆಗೆ ಕೊನೆಯೇ ಇಲ್ಲ, ಅದರಲ್ಲಿ ಸಾಕಷ್ಟು ಆಸೆಗಳು ಚಟವಾಗಿ ಮಾರ್ಪಡುವುದು ಹೆಚ್ಚು. ಆ ಪೈಕಿ ಮದ್ಯಪಾನ, ಧೂಮಪಾನ ಪ್ರಮುಖವಾದದ್ದು, ಮದ್ಯಪಾನ, ಧೂಮಪಾನ ಮಾಡುವುದರಿಂದ ಪುರುಷರಲ್ಲಿ ಬಂಜೆತನ ಸೃಷ್ಟಿಯಾಗುವ ಸಾಧ್ಯತೆ ಇದೆ. ಮದ್ಯಪಾನ ಒಂದೆರಡು ಪೆಗ್ ನಂತೆ ಮಿತಿಯಲ್ಲಿ ಇದ್ದರೆ, ಯಾವುದೇ ಹಾನಿ ಇರುವುದಿಲ್ಲ. ಆದರೆ, ಅದಕ್ಕೂ ಹೆಚ್ಚಿನ ಚಟ ಹೊಂದಿರುವವರ ಸಂತಾನ ಭಾಗ್ಯವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಂತೆ. 2015ರಲ್ಲಿ ನಡೆಸಿದ ಸಂಶೋಧನೆಯೊಂದರಲ್ಲಿ, ಅತೀಯಾದ ಮದ್ಯಪಾನ ಮಾಡುವುದರಿಂದ ವೀರ್ಯಾಣುಗಳು ನಾಶವಾಗಿ  ಪುರುಷರಲ್ಲಿ ಬಂಜೆತನ ಸೃಷ್ಟಿಯಾಗುವ ಶೇ.35ರಷ್ಟು ಸಾಧ್ಯತೆಗಳಿವೆ ಎಂದು ಸಿಡಿಸಿ ಹೇಳಿದೆ. ಮದ್ಯಪಾನ ಮಾಡುವುದರಿಂದ ಹಾರ್ಮೋನುಗಳ ಸಂಖ್ಯೆ ಕಡಿಮೆಯಾಗುವುದು, ಇದಲ್ಲದೇ ಫಾಲಿಕಲ್ ಉತ್ಪತ್ತಿ ಮಾಡುವ ಹಾರ್ಮೋನುಗಳು ಕೂಡ ಕಡಿಮೆಯಾಗುವುದು. ಇದರಿಂದಾಗಿ ವೀರ್ಯಗಳ ಸಂಖ್ಯೆ ಕಡಿಮೆಯಾಗುತ್ತದೆ. ಅತೀಯಾದ ಮದ್ಯಪಾನದಿಂದ ಪುರುಷರ ಜನನಾಂಗದ ಗಾತ್ರ ಕೂಡ ಕುಗ್ಗುತ್ತದೆ. ಇದರಿಂದಾಗಿ ಶೀಘ್ರಸ್ಖಲನ ಉಂಟಾಗುತ್ತದೆ. ಮದ್ಯಪಾನದ ಜೊತೆಗೆ ಗಾಂಜಾ, ಧೂಮಪಾನದಿಂದಲೂ ವೀರ್ಯಾಣುಗಳು ಕಡಿಮೆಯಾಗುತ್ತದೆ. ಸಣ್ಣ ವಯಸ್ಸಿನಿಂದಲೇ ಕುಡಿತದ ಚಟಕ್ಕೆ ಸಿಲುಕಿದವರಲ್ಲಿ ಇಂತಹ ಸಮಸ್ಯೆಗಳು ಕಂಡು ಬರುತ್ತದೆ. ಮದ್ಯಪಾನದಿಂದ…

Read More

ಮಂಜುಸ್ವಾಮಿ ಎಂ.ಎನ್. ಕೊರಟಗೆರೆ ಕೊರಟಗೆರೆ: ನಿಮ್ಮ ಆಧಾರ್ ಕಾರ್ಡು ಮನೆಗೆ ಇನ್ನೂ ಬಂದಿಲ್ವಾ.. ಬ್ಯಾಂಕು ಚೆಕ್ ಬುಕ್ ನಿಮ್ಮ ಕೈಗೆ ಇನ್ನೂ ಸೇರಿಲ್ವಾ.. ರಿಜಿಸ್ಟರ್ ಪೋಸ್ಟ್–ಸ್ಪೀಡ್ ಪೋಸ್ಟ್ ಮನೆಗೆ ಬರ್ತಾ ಇಲ್ವಾ.. ಕೆಲಸದ ಆಹ್ವಾನದ ತುರ್ತುಕರೆ ನಿಮಗೇ ಬರೋದೇ ಇಲ್ಲ ಬಿಡಿ.. ಯಾಕೆ ಗೊತ್ತಾ ಮಲ್ಲೇಕಾವು ಅಂಚೆ ಕಚೇರಿಯ ಅಂಚೆ ಪಾಲಕ ಕಳೆದ 45ದಿನಗಳಿಂದ ಕಚೇರಿಗೆ ಬಂದೇ ಇಲ್ವಂತೆ..!! ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಮಲ್ಲೇಕಾವು ಗ್ರಾಮದ ಅಂಚೆ ಕಚೇರಿಯ ಅಂಚೆ ಪಾಲಕ ನಾಗೇಂದ್ರ ಎಂಬಾತ ಕಳೆದ 45 ದಿನಗಳಿಂದ ಕರ್ತವ್ಯಕ್ಕೆ ಗೈರುಹಾಜರಿಯಾಗಿದ್ದು, ಹತ್ತಾರು ಗ್ರಾಮಗಳಿಗೆ ತುರ್ತುಸೇವೆ ನೀಡಬೇಕಾದ ಅಂಚೆ ಪಾಲಕ ಗೈರಾದ ಹಿನ್ನೆಲೆಯಲ್ಲಿ ನೂರಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಬ್ಯಾಂಕ್ ಬೆಕ್, ಆಧಾರ್ ಕಾರ್ಡು, ಕೋರ್ಟ್ ನೊಟೀಸ್, ಎಟಿಎಂ ಕಾರ್ಡು, ರೇಷನ್‍ ಕಾರ್ಡು, ಎಲ್‍ ಐಸಿ ಬಾಂಡ್, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಜಾಬ್ ನೊಟೀಸ್, ಕೊರಿಯರ್, ಪಾರ್ಸಲ್‍ ಗಳು, ಹತ್ತಾರು ಗ್ರಾಮದ ನೂರಾರು ಜನ ಗ್ರಾಹಕರ…

Read More

ಪಾವಗಡ: ತಾಲೂಕಿನ ಗಂಡುಮೆಟ್ಟಿದ ನಾಡು ಯಲ್ಲಪ್ಪನಾಯಕನ ಹೊಸಕೋಟೆಯಲ್ಲಿ ಮಾಡುವ ಕಾರ್ಯಕ್ರಮಗಳು ರಾಜ್ಯಮಟ್ಟದ ಸುದ್ದಿ ಮಾಡುತ್ತವೆ ಎಂದರೆ ಅದು ಈ ನೆಲಕ್ಕಿರುವ ಸತ್ವ ಎಂದು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎನ್.ಆರ್.ಅಶ್ವಥ ಕುಮಾರ್ ಹೇಳಿದರು. ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಆವರಣದಲ್ಲಿ ವೈ.ಎನ್.ಹೊಸಕೋಟೆ ಪುಟ್ ಬಾಲ್ ಕ್ಲಬ್ ಆಯೋಜಿಸಿದ್ದ ಪಂದ್ಯಾವಳಿಯನ್ನು ಶನಿವಾರ ಸಂಜೆ ಉದ್ಘಾಟನೆ ಮಾಡಿ ಮಾತನಾಡಿದರು. ಈ ಗ್ರಾಮದ ಕ್ರಿಡೆ ಮತ್ತು ಕಲೆಗೆ ಹೆಚ್ಚು ಹೆಸರುವಾಸಿಯಾಗಿದೆ. ಇಲ್ಲಿನ ಜನತೆ ಕ್ರೀಡಾಸಕ್ತರಾಗಿದ್ದು, ಅಭಿವೃದ್ದಿಗೆ ಶ್ರಮಿಸುತ್ತಾರೆ. ಹಾಗಾಗಿ ವೈ.ಎನ್.ಹೊಸಕೋಟೆ ಎಂದಾಕ್ಷಣ ಆಟೋಟಗಳು ಜ್ಞಾನಪಕ್ಕೆ ಬರುತ್ತವೆ. ಪ್ರಸ್ತುತ ನಡೆಯುತ್ತಿರುವ ಪುಟ್ ಬಾಲ್ ಪಂದ್ಯಾವಳಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳ ಟೀ-ಷರ್ಟ್ ಅನಾವರಣ ಮಾಡಲಾಯಿತು. ಕ್ಲಬ್ ನ ವತಿಯಿಂದ ಎನ್.ಆರ್.ಅಶ್ವಥ ಕುಮಾರ್ ಮತ್ತು ನೇರಳಕುಂಟೆ ನಾಗೇಂದ್ರ ಕುಮಾರ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಉದ್ಘಾಟನಾ ಮೊದಲ ಪಂದ್ಯ ಅತ್ಯಂತ ಸ್ಪರ್ಧಾತ್ಮಕವಾಗಿ ಮೂಡಿಬಂದು ಜನಮೆಚ್ಚುಗೆ ಪಡೆಯಿತು. ಈ ಸಂದರ್ಭದಲ್ಲಿ ಎಂ.ಆರ್.ಶಿವಾನಂದಗುಪ್ತ,…

Read More

ಭಾರತದ ಅತ್ಯಂತ ಹಳೆಯ ಪ್ರಕರಣ, ಅಂದರೆ 72 ವರ್ಷಗಳ ಹಳೆಯ ಪ್ರಕರಣವನ್ನು ಭಾರತದ ಅತ್ಯಂಹ ಹಳೆಯ ನ್ಯಾಯಾಲಯ ಪೀಠ ಕೊನೆಗೂ ಕಳೆದ ವಾರ ಇತ್ಯರ್ಥಗೊಳಿಸಿದೆ. ಇದು 1951ರಲ್ಲಿ ದಾಖಲಾಗಿದ್ದಂತಹ ಪ್ರಕರಣವಾಗಿದ್ದು, ಈ ನ್ಯಾಯಾಲಯದ ಹಾಲಿ ಮುಖ್ಯ ನ್ಯಾಯಾಧೀಶರಾದ ಪ್ರಕಾಶ್ ಶ್ರೀವಾಸ್ತವ ಅವರು ಈ ಪ್ರಕರಣ ದಾಖಲಾದ ಸುಮಾರು ಒಂದು ದಶಕದ ನಂತರ ಜನಿಸಿದ್ದಾರೆ. ಈ ಹಿಂದೆ ಬರ್ಹಂವಪೋರೆ ಬ್ಯಾಂಕ್ ಲಿ.ಎಂದು ಕರೆಯಲಾಗುತ್ತಿದ್ದ ಸಂಸ್ಥೆಗೆ ಸೇರಿದಂಥಹ ಈ ಪ್ರಕರಣ ಕೊನೆಗೂ ಇತ್ಯರ್ಥವಾಗಿರುವುದು ಕೋಲ್ಕತ್ತಾ ಉಚ್ಛ ನ್ಯಾಯಾಲಯಕ್ಕೆ ನಿಟ್ಟುಸಿರು ಬಿಟ್ಟಂತಾಗಿದೆ. ಆದರೆ ಇದಾದ ನಂತರ ಅಂದರೆ, ೧೯೫೨ರಲ್ಲಿ ದಾಖಲಾಗಿರುವಂತಹ ಇನ್ನೂ ಬಾಕಿ ಉಳಿದಿರುವ ಐದು ವರ್ಷಗಳ ಪೈಕಿ ೧೯೫೨ರಲ್ಲಿ ದಾಖಲಾಗಿರುವಂತಹ ಎರಡು ಪ್ರಕರಣಗಳ ಇನ್ನೂ ಇತ್ಯರ್ಥವಾಗಬೇಕಿದೆ. ಇನ್ನುಳಿದ ಮೂರು ಪ್ರಕರಣಗಳ ಪೈಕಿ, ಎರಡು ಸಿವಿಲ್ ವ್ಯಾಜ್ಯಗಳಾಗಿದ್ದು, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ವಿಚಾರಣೆ ನಡೆಯಲಿದೆ ಹಾಗೂ ಮತ್ತೊಂದು ಮದ್ರಾಸ್ ಉಚ್ಛ ನ್ಯಾಯಾಲಯದಲ್ಲಿ ಬಾಕಿ ಇದೆ. ಮಾಲ್ಡಾದ ನ್ಯಾಯಾಲಯಗಳು ಈ ವ್ಯಾಜ್ಯಗಳ ವಿಚಾರಣೆಯನ್ನು ಮಾರ್ಚ್ ಹಾಗೂ ನವೆಂಬರ್…

Read More

ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿಯಾಗಿ ಬಾಲಕ ಸಾವನ್ನಪ್ಪಿದ ಘಟನೆ ಪಾವಗಡ ತಾಲೂಕಿನ ಟಿ.ಎನ್ ಪೇಟೆಯ ಬಳಿ ನಡೆದಿದೆ. ಮೃತ ಬಾಲಕನನ್ನು ಚಳ್ಳಗೆರೆ ತಾಲೂಕಿನ ಗೌರಿಪುರದ ವರ್ಷಿತ್ (13)  ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಗೌರಿಪುರದ ಸುಧಾ (51), ಜಶ್ವಂತ್ (15), ನಾರಾಯಣಮ್ಮ (50), ನಾರಾಯಣಪ್ಪ (50), ತಾಲ್ಲೂಕಿನ ಜೆ. ಅಚ್ಚಮ್ಮನಹಳ್ಳಿ ಭರತ್ (16) ಎಂಬುವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಸಂಕ್ರಾತಿ ಹಬ್ಬಕ್ಕೆ ಆಂಧ್ರದ ರೊದ್ದಂ ಮಂಡಲಂ ಶೇಷಾಪುರಕ್ಕೆ ತೆರಳಿ ಆಟೋದಲ್ಲಿ ವಾಪಸ್ಸಾಗುತಿದ್ದರು. ಟಿ ಎನ್ ಪುರದಲ್ಲಿ ಆಟೋ ನಿಲ್ಲಿಸಲಾಗಿದ್ದು ಇದೇ ಸಂಧರ್ಭದಲ್ಲಿ ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ ಬಾಲಕನ್ನು ಬೆಂಗಳೂರಿನ ಆಸ್ಪತ್ರೆಗೆ  ದಾಖಲಿಸಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಅಪಘಾತಕ್ಕೆ ಕಾರಣವಾದ ಕಾರು ಚಾಲಕ ಕಾರನ್ನು ಸ್ಧಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.ಪ್ರಕರಣ ದಾಖಲಿಸಿದ ಪೋಲಿಸರು ಸ್ಧಳ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…

Read More

ತುರುವೇಕೆರೆ: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ , ಸಂಸ್ಥೆಯ ಅಧಿಕಾರೇತರ ಅಧ್ಯಕ್ಷರಾಗಿ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅವರನ್ನು ನಾಮನಿರ್ದೇಶನ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿದೆ. ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ನ ಸಂಘದ ನಿಯಮಗಳ ಅಂತರ್ ನಿಯಮ 11(4) ರ ಪ್ರದತ್ತವಾದ ಅಧಿಕಾರದನ್ವಯ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಮಸಾಲಾ ಜಯರಾಮ್ ಅವರನ್ನು ಸಂಸ್ಥೆಯ ಅಧಿಕಾರೇತರ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಗಣಿ 1) ಯ ಸರ್ಕಾರದ ಅಧೀನ ಕಾರ್ಯದರ್ಶಿ ಶಿವಪ್ರಕಾಶ್ ಅವರು ರಾಜ್ಯಪಾಲರ ಆಜ್ಞಾನುಸಾರ ಆದೇಶ ಹೊರಡಿಸಿದ್ದಾರೆ. ಶಾಸಕರಾದ ಮಸಾಲ ಜಯರಾಮ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸರ್ಕಾರದ ಸಚಿವರುಗಳಿಗೆ ಅಭಿಮಾನಿಗಳು, ಬೆಂಬಲಿಗರು ಅಭಿನಂದನೆ ಸಲ್ಲಿಸಿದ್ದಾರೆ. ವರದಿ: ಸುರೇಶ್ ಬಾಬು ಎಂ., ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಪಾವಗಡ ತಾಲೂಕಿನ ದೇವರಹಟ್ಟಿ ಗ್ರಾಮದಲ್ಲಿ ‘ಕಾಡುಗೊಲ್ಲರ ನಡೆ ಎಸ್.ಟಿ ಮೀಸಲಾತಿ ಹೋರಾಟದ ಕಡೆಗೆ’ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು. ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಕಾಡುಗೊಲ್ಲರ ಆಚಾರದಂತೆ ಮಣ್ಣಿನ ದೀಪವನ್ನು ಬೆಳಗಿಸಿ, ಕಂಬಳಿ ಜಾಡಿ ಆಕಿ ಗಣೆಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಿದರು. ಕಾರ್ಯಕ್ರಮ ಭಾಗವಹಿಸಿ ಮಾತನಾಡಿದ ಎಸಿಪಿ ಬಸವರಾಜ್, ನಮ್ಮ ಸಮುದಾಯದ ನಾಯಕರು ಕಾಡುಗೊಲ್ಲರ ಹೋರಾಟಕ್ಕೆ ಪ್ರಬಲವಾದ ಬೆಂಬಲವನ್ನು ಎರಡೂವರೆ ವರ್ಷಗಳಿಂದ ಕೊಡುತ್ತಿದ್ದಾರೆ. ಬೇರೆ ಬೇರೆ ಸಂಘ ಪರಿವಾರದ ನಾಯಕರಿಗೆ ನಮ್ಮ ಸ್ಥಿತಿಗತಿಗಳು ಮುಟ್ಟಿಸುವ ಕೆಲಸ ಮಾಡಿದ್ದೇವೆ. ಇವರಿಗೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಧ್ಯಕ್ಷರಾದ ರಾಜಣ್ಣರವರ ಪರವಾಗಿ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇನೆ ಎಂದರು. ಎಸ್.ಎಸ್.ಕೆ. ಸಂಘದ ಉಪಾಧ್ಯಕ್ಷ ಸಿ.ಎನ್.ಆನಂದ್ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುಡಕಟ್ಟು ಸಂಸ್ಕೃತಿ ಹೊಂದಿರುವ ಈ ಸಮುದಾಯ ಎಸ್.ಟಿ ಸೇರುವ ಅರ್ಹತೆ ಹೊಂದಿದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಶಿರಾ ತಾಲೂಕಿನ ಕಾಡುಗೋಲ್ಲರ ಸಂಘದ ಅಧ್ಯಕ್ಷರಾದ ಈಶ್ವರಪ್ಪ ಮಾತನಾಡಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ., ರಾಜಕೀಯವಾಗಿ,…

Read More