nammatumakuru

    Subscribe to Updates

    Get the latest creative news from FooBar about art, design and business.

    What's Hot

    ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್:  ಕುಣಿಗಲ್ ನಲ್ಲಿ ಅಭಿಮಾನಿಗಳಿಂದ ಸ್ವಾಗತ

    June 6, 2026

    6 ವರ್ಷದ ಮಗುವಿನ ನಿಗೂಢ ಸಾವು: ತಾಯಿ, ಲಿವ್–ಇನ್ ಪಾರ್ಟ್ನರ್ ವಿರುದ್ಧ ಕೊಲೆ ಪ್ರಕರಣ ದಾಖಲು!

    June 6, 2026

    ಮಾಯಸಂದ್ರ: ಲಿಲೋ ಮಾರ್ಗ ನಿರ್ಮಾಣ: ಆಕ್ಷೇಪಣೆಗೆ ಅವಕಾಶ

    June 6, 2026
    Facebook Twitter Instagram
    ಟ್ರೆಂಡಿಂಗ್
    • ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್:  ಕುಣಿಗಲ್ ನಲ್ಲಿ ಅಭಿಮಾನಿಗಳಿಂದ ಸ್ವಾಗತ
    • 6 ವರ್ಷದ ಮಗುವಿನ ನಿಗೂಢ ಸಾವು: ತಾಯಿ, ಲಿವ್–ಇನ್ ಪಾರ್ಟ್ನರ್ ವಿರುದ್ಧ ಕೊಲೆ ಪ್ರಕರಣ ದಾಖಲು!
    • ಮಾಯಸಂದ್ರ: ಲಿಲೋ ಮಾರ್ಗ ನಿರ್ಮಾಣ: ಆಕ್ಷೇಪಣೆಗೆ ಅವಕಾಶ
    • ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ
    • ಸರ್ಕಾರದ ಆದೇಶ ಪಾಲನೆ ನಿರ್ಲಕ್ಷ್ಯ: ಗ್ರಾಮ ಆಡಳಿತಾಧಿಕಾರಿಗಳಿಗೆ ನೋಟೀಸ್
    • ಹೊಸ ಬಾಟಲಿಯಲ್ಲಿ ಹಳೆಯ ಮದ್ಯ, ಡಿಕೆಶಿ ಪ್ರಾಮಾಣಿಕ ಆಡಳಿತ ನೀಡಲು ಹೇಗೆ ಸಾಧ್ಯ?: ಸುರೇಶ್ ಗೌಡ ಟೀಕೆ
    • ತುಮಕೂರು: ಜೂನ್ 9ರಂದು ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂದರ್ಶನ
    • ಪಾವಗಡದಲ್ಲಿ ವಿಶ್ವ ಪರಿಸರ ದಿನಾಚರಣೆ: ‘ಗಿಡ ಬೆಳೆಸುವುದು ನಮ್ಮ ಕರ್ತವ್ಯ’: ಸಿಡಿಪಿಓ ಸುನಿತಾ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹೆಚ್.ಡಿ.ಕುಮಾರಸ್ವಾಮಿ ಜೊತೆಗೆ ರೈತ ಚೈತನ್ಯ ಮತ್ತು ರೈತ ಸಂಕ್ರಾಂತಿ ಸಂವಾದ
    ಕೊರಟಗೆರೆ January 16, 2023

    ಹೆಚ್.ಡಿ.ಕುಮಾರಸ್ವಾಮಿ ಜೊತೆಗೆ ರೈತ ಚೈತನ್ಯ ಮತ್ತು ರೈತ ಸಂಕ್ರಾಂತಿ ಸಂವಾದ

    By adminJanuary 16, 2023No Comments2 Mins Read
    raitha sankrathi

    ಕೊರಟಗೆರೆ:  ಕೊರಟಗೆರೆಯಲ್ಲಿ ರೈತಚೈತನ್ಯ ಮತ್ತು ರೈತ ಸಂಕ್ರಾಂತಿ ಸಂವಾದ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು.

    ಕೊರಟಗೆರೆ ಪಟ್ಟಣದ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಜಾತ್ಯಾತೀತ ಜನತಾದಳ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ‘ರೈತನಾಯಕ ಕುಮಾರಣ್ಣನ ಜೊತೆ ರೈತಚೈತನ್ಯ ಮತ್ತು ರೈತ ಸಂಕ್ರಾಂತಿಯ ವಿಡೀಯೊ ಸಂವಾದ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.


    Provided by
    Provided by

    ಕರ್ನಾಟಕದ 224 ಕ್ಷೇತ್ರದ ರೈತರ ಸಂಕಷ್ಟವನ್ನು ತಿಳಿಯುವ ಉದ್ದೇಶದಿಂದ ರೈತ ಸಂಕ್ರಾಂತಿ ಸಂವಾದ ಕಾರ್ಯಕ್ರಮ ನಡೆದಿದೆ. ರೈತನ ಪರವಾಗಿ ಸದಾ ಚಿಂತಿಸುವ ರೈತನಾಯಕ ಕುಮಾರಣ್ಣ ಮುಖ್ಯಮಂತ್ರಿ ಆದರೆ, ರೈತರ ಆರ್ಥಿಕ ಅಭಿವೃದ್ದಿಗೆ ಸಹಕಾರಿ ಆಗಲಿದೆ. ಕೊರಟಗೆರೆಯ ರೈತರು ಮುಸುಕಿನ ಜೋಳ ಮತ್ತು ರಾಗಿಬೆಳೆಯ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಚರ್ಚಿಸಿದ್ದಾರೆ ಎಂದು ಹೇಳಿದರು.

    ತೋವಿನಕೆರೆ ರೈತ ಭೀಮರಾಜು ಮಾತನಾಡಿ, ಕೊರಟಗೆರೆ ಕ್ಷೇತ್ರದಲ್ಲಿ ಮಳೆಯಿಂದ ರಾಗಿಬೆಳೆಯು ಕೊಚ್ಚಿಹೋಗಿದೆ. ರಾಗಿಬೆಳೆಗೆ ಸರಕಾರ ಬೆಂಬಲ ಬೆಲೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಗಿ ಮಾರಾಟಕ್ಕೆ ಕೊರಟಗೆರೆ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕೊರಟಗೆರೆ ಕ್ಷೇತ್ರಕ್ಕೆ ರಾಗಿ ಖರೀದಿ ಕೇಂದ್ರದ ಅವಶ್ಯಕತೆಯು ಇದೆ. ಸರಕಾರ ರಾಗಿಬೆಳೆಗೆ ಬೆಂಬಲ ಬೆಲೆಯ ಜೊತೆ ಆರ್ಥಿಕವಾಗಿ ಅನುಕೂಲ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು.

    raitha sankrathi

    ಪುರವಾರ ರೈತ ಗೋವರ್ಧನ್ ಮಾತನಾಡಿ, ಕೃಷಿಬೆಳೆಗೆ ಸರಕಾರ ಬೆಳೆವಿಮೆ ಕಟ್ಟಿಸಿಕೊಂಡಿದೆ. ಮಳೆರಾಯನ ಆರ್ಭಟಕ್ಕೆ ಕೃಷಿಬೆಳೆಯು ಸಂಪೂರ್ಣ ನಷ್ಟವಾಗಿದೆ. ಬೆಳೆವಿಮೆ ಯೋಜನೆಯಿಂದ ರೈತರಿಗೆ ಅನುಕೂಲ ಆಗುತ್ತಿಲ್ಲ. ಕೊರಟಗೆರೆಯ ರೈತರಿಗೆ ಲಕ್ಷಾಂತರ ರೂ ಬೆಳೆನಷ್ಟವಾದ್ರು ಬೆಳೆವಿಮೆಯ ಹಣವೇ ಬರುತ್ತಿಲ್ಲ. ರೈತರು ಯಾವ ಇಲಾಖೆಗೆ ಕೇಳಬೇಕು ಎಂಬುದೇ ಗೊತ್ತಿಲ್ಲ ಎಂದು ತಿಳಿಸಿದರು.

    ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ, ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ವಕ್ತಾರ ಲಕ್ಷ್ಮೀಶ್, ಜಿ.ಪಂ. ಸದಸ್ಯ ಶಿವರಾಮಯ್ಯ, ಮುಖಂಡರಾದ ಸಿದ್ದಮಲ್ಲಪ್ಪ, ಕಾಮರಾಜು, ವೀರಕ್ಯಾತರಾಯ, ಲಕ್ಷ್ಮೀಕಾಂತ, ರವಿವರ್ಮ, ಸಾಕಣ್ಣ, ನಾಗರಾಜು, ರಮೇಶ್, ಸತೀಶ್, ಲಕ್ಷ್ಮೀನರಸಪ್ಪ ಸೇರಿದಂತೆ ಇತರರು ಇದ್ದರು.

    ರೈತರ ಪ್ರಶ್ನೆಗಳಿಗೆ ಕುಮಾರಸ್ವಾಮಿ ಉತ್ತರ..

    kumaraswamy

    ವಿಧಾನಸಭೆಯಲ್ಲಿ ಹತ್ತಾರು ಸಲ ಬೆಳೆವಿಮೆಯ ಬಗ್ಗೆ ಚರ್ಚಿಸಲಾಗಿದೆ. ಕೇಂದ್ರ ಸರಕಾರದ ಖಾಸಗಿ ಕಂಪನಿಯ ಬೆಳೆವಿಮೆ ಯೋಜನೆಯು ರೈತರಿಗೆ ದಾರಿ ತಪ್ಪಿಸುವ ಕೆಲಸ ಮಾಡ್ತಿದೆ. ರಾಗಿಖರೀದಿ ಕೇಂದ್ರಗಳಿಂದ ರೈತರಿಗೆ ಅನುಕೂಲ ಆಗುತ್ತಿಲ್ಲ. ರೈತರ ಬೆಳೆಗಳಿಗೆ ತಕ್ಷಣ ಮಾರಾಟ ಹಣ ನೀಡಬೇಕಿದೆ. ಕರ್ನಾಟಕದ ರೈತ ಯಾವುದೇ ಕಾರಣಕ್ಕೂ ಸಂಕಷ್ಟಕ್ಕೆ ಸಿಲುಕಬಾದ್ರು. ರಾಜ್ಯ ಸರಕಾರದಿಂದಲೇ ಬೆಳೆವಿಮೆ ಯೋಜನೆ ಜಾರಿಗೊಳಿಸುತ್ತೇನೆ ಎಂದು ಕೊರಟಗೆರೆ ಕ್ಷೇತ್ರದ ರೈತರ ಪ್ರಶ್ನೆಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಉತ್ತರ ನೀಡಿದರು.

    ವರದಿ : ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    admin
    • Website

    Related Posts

    ತಣ್ಣೇನಹಳ್ಳಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

    June 5, 2026

    ಜಾಗತಿಕ ಸಮಸ್ಯೆಗಳ ಬಗ್ಗೆ ಸಿದ್ದರಬೆಟ್ಟ ಶ್ರೀಗಳ ಕಳಕಳಿ; ಸಮಾಜದ ಏಳಿಗೆಗೆ ಮೌಲ್ಯಗಳು ಮುಖ್ಯ ಎಂದ ಎಲಿಜಬೆತ್ ಚೆರಿಯನ್

    June 5, 2026

    ಕೊರಟಗೆರೆ: ಡಾ.ಜಿ. ಪರಮೇಶ್ವರ್ 2ನೇ ಬಾರಿಗೆ ಡಿಸಿಎಂ; ಅಭಿಮಾನಿಗಳಿಂದ ಭರ್ಜರಿ ಸಂಭ್ರಮಾಚರಣೆ

    June 5, 2026

    Comments are closed.

    Our Picks

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕುಣಿಗಲ್

    ನೊಣವಿನಕೆರೆ ಅಜ್ಜಯ್ಯನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್:  ಕುಣಿಗಲ್ ನಲ್ಲಿ ಅಭಿಮಾನಿಗಳಿಂದ ಸ್ವಾಗತ

    June 6, 2026

    ಕುಣಿಗಲ್: ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರನ್ನು ಅಂಚೆ ಪಾಳ್ಯದ ಕೈಗಾರಿಕಾ ವಲಯದದಲ್ಲಿ ಶಾಸಕ ಡಾ.ಎಚ್.ಡಿ.ರಂಗನಾಥ್ ಹಾಗೂ ಕಾಂಗ್ರೆಸ್…

    6 ವರ್ಷದ ಮಗುವಿನ ನಿಗೂಢ ಸಾವು: ತಾಯಿ, ಲಿವ್–ಇನ್ ಪಾರ್ಟ್ನರ್ ವಿರುದ್ಧ ಕೊಲೆ ಪ್ರಕರಣ ದಾಖಲು!

    June 6, 2026

    ಮಾಯಸಂದ್ರ: ಲಿಲೋ ಮಾರ್ಗ ನಿರ್ಮಾಣ: ಆಕ್ಷೇಪಣೆಗೆ ಅವಕಾಶ

    June 6, 2026

    ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

    June 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.