Author: admin

ಹೆಚ್.ಡಿ.ಕೋಟೆ :  ಕೃಷ್ಣಾಪುರ ಗ್ರಾಮದ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರು ಬಾಬು ಜಗಜೀವನ್  ರಾಮ್ ವಿಚಾರ ವೇದಿಕೆಯ ಗೌರವಾಧ್ಯಕ್ಷರು ಮತ್ತು ಡಿಸಿಸಿ ಸದಸ್ಯರು ಹಾಗೂ ತಂಬಾಕು ಮಂಡಳಿಯ ಸದಸ್ಯ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರ ಪರಶಿವಮೂರ್ತಿ ಕೃಷ್ಣಾಪುರ ಅವರ ಹುಟ್ಟುಹಬ್ಬವನ್ನು ಮಾತಂಗ ಜನಜಾಗೃತಿ ವೇದಿಕೆ ಸೇರಿದಂತೆ ಅಭಿಮಾನಿಗಳು ಮುಖಂಡರು ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ ಕೃಷ್ಣಾಪುರ ಸರ್ಕಲ್ ಬಳಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ನಂತರ ಹುಟ್ಟುಹಬ್ಬ ಕುರಿತು ನಾಗನಹಳ್ಳಿ ಪ್ರದೀಪ್, ಎಡತೊರೆ ಚೆಲುವರಾಜು, ಮಾತಂಗ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ರವೀಶ್, ಉಪಾಧ್ಯಕ್ಷ ವಿನೋದ್ ಪ್ರಸಾದ್ ಕೆಟಿಎಸ್, ಕೊತ್ತೇಗಾಲ ಮಹದೇವು, ಕಲ್ಲಟ್ಟಿ ನಾಗೇಶ್, ವನಸಿರಿ ಶಂಕರ್ ಅವರು ಹುಟ್ಟು ಹಬ್ಬ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್.ಸಿ.ಮಂಜುನಾಥ್, ಕರವೇ ಸತೀಶ್ ಗೌಡ, ಉಡ ನಾಗರಾಜ್, ಗುತ್ತಿಗೆದಾರ ಮಹೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜ್, ಮಲಾರ ಶಿವಣ್ಣ, ಕಳಸೂರು…

Read More

ಬೆಂಗಳೂರು: ಆರ್ ​ಸಿಬಿ (RCB) ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯನ್ನು ವಿಧಾನಸೌಧದ ಎದುರು ನಡೆಸುವಂತೆ ಕರೆ ಕೊಟ್ಟಿದ್ದೇ ಸರ್ಕಾರ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆರೋಪಿಸಿದೆ ಎಂದು ವರದಿಯಾಗಿದೆ. ಕರ್ನಾಟಕ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರು ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ಸ್ ವೇದಿಕೆಯಲ್ಲಿ ಆಟಗಾರರನ್ನು ಸನ್ಮಾನಿಸಿದ್ದಾರೆ. ಸರ್ಕಾರ, ಸಚಿವರ ಮೇಲಿನ ಜನರ ಆಕ್ರೋಶದ ಹಾದಿ ತಪ್ಪಿಸಲು ಎಫ್ ​ಐಆರ್ ದಾಖಲಿಸಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ಕೆಎಸ್​​ ಸಿಎ ಉಲ್ಲೇಖಿಸಿದೆ. ಘಟನೆಯ ಹೊಣೆಯನ್ನು ಕೆಎಸ್​​ ಸಿಎ ಮೇಲೆ ಹೊರಿಸಲು ಯತ್ನಿಸಲಾಗುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನದಟ್ಟಣೆ ನಿರ್ವಹಣೆ ಆರ್​ ಸಿಬಿ ಹಾಗೂ ಪೊಲೀಸರ ಕರ್ತವ್ಯ. ಕರ್ನಾಟಕದ ಕ್ರಿಕೆಟ್ ನಿಯಂತ್ರಣವಷ್ಟೇ ಕೆಎಸ್​​ ಸಿಎ ಜವಾಬ್ದಾರಿ ಎಂದು ಸಂಸ್ಥೆ ಹೇಳಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತುಮಕೂರು:   ಬೆಂಗಳೂರಿನಲ್ಲಿ ಆರ್ ಸಿ ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಸರ್ಕಾರ ಹೊಣೆಗೇಡಿತನದಿಂದ  ನಡೆದುಕೊಂಡಿದೆ ಎಂದು  ಆರೋಪಿಸಿ ತುಮಕೂರು ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಟೌನ್ ಹಾಲ್ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ನೇತೃತ್ವದಲ್ಲಿ  ಜಮಾಯಿಸಿದ ಬಿಜೆಪಿ ಪಕ್ಷದ ಕಾರ್ಯಕರ್ತರು, ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಅಧಿಕಾರಿಗಳನ್ನು ಅಮಾನತು ಮಾಡುವಂತಹ ನಿರ್ಧಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದರು. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಆರ್‌ ಸಿಬಿ ವಿಜಯೋತ್ಸವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ್ದರೂ ಅದನ್ನು ಲೆಕ್ಕಿಸದೆ ಸರ್ಕಾರ ಕಾರ್ಯಕ್ರಮ ಆಯೋಜಿಸಿದ್ದು ದುರಂತಕ್ಕೆ ಕಾರಣವಾಗಿದೆ ಎಂದು ದೂರಿದರು. ಸಿಎಂ ಭಾವಚಿತ್ರಕ್ಕೆ ಬೆಂಕಿ: ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ 11 ಮಂದಿ RCB ಅಭಿಮಾನಿಗಳು ಮೃತಪಟ್ಟ ಘಟನೆಗೆ  ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ನೇರ ಕಾರಣ ಎಂದು ಆರೋಪಿಸಿ ತುಮಕೂರು ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಅವರ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ನಗರದ ಟೌನ್ ಹಾಲ್ ವೃತ್ತದಲ್ಲಿ ಜಮಾಯಿಸಿದ…

Read More

ಬಾಗೇಪಲ್ಲಿ: ತಾಲೂಕಿನ ಗೋಳೂರು ವಲಯ ವ್ಯಾಪ್ತಿಗೆ ಬರುವ ನಲ್ಲಪ್ಪ ರೆಡ್ಡಪಲ್ಲಿ ಕಾರ್ಯಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ, (ಬಿ ಸಿ) ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ಆಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಗಂಗುಲಪ್ಪ, ಮಾಜಿ ಗ್ರಾ.ಪಂ. ಸದಸ್ಯರಾದ ಚೌಡಪ್ಪ, ವಲಯದ ಮೇಲ್ವಿಚಾರಕರಾದ ಅರುಣ, ಒಕ್ಕೂಟ ಪದಾಧಿಕಾರಿಗಳು ಸಂಘದ ಸದಸ್ಯರು ಸೇವಾ ಪ್ರತಿನಿಧಿ ನಾಗಮಣಿ ಶಾಲೆಯ ಮುಖ್ಯ, ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW ————————————

Read More

ಸರಗೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 12 ವಾರ್ಡ್ನ ನಾಮಧಾರಿ ಸಮುದಾಯದ ಭವನದ ರಸ್ತೆಯ ಬಳಿ ಚರಂಡಿಯಲ್ಲಿ ಕೊಳಚೆ ನೀರು ತುಂಬಿಕೊಂಡು ಹಾಗೂ ಸ್ವಚ್ಛತೆಯಿಲ್ಲದೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಚರಂಡಿಯಲ್ಲಿ ಕೊಳಚೆ ನೀರು ನಿಂತು ಸೊಳ್ಳೆಯ ಉತ್ಪಾದನೆ ಕೇಂದ್ರವಾಗಿ ವಾರ್ಡಿನ ಜನರಿಗೆ ಅನಾರೋಗ್ಯಕ್ಕೆ ತುತ್ತುವಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದರು. 12 ನೇ ವಾರ್ಡ್ ನಾಮಧಾರಿ ಸಮುದಾಯದಲ್ಲಿ ಮದುವೆ ಸಮಾರಂಭ ಮಾಡುವುದರಿಂದ ವಸ್ತುಗಳನ್ನು ಬಿಸಾಕಿ ಹಿಂಬದಿಯ ರಸ್ತೆ ಬದಿಯಲ್ಲಿ ಸಮರ್ಪಕ ಚರಂಡಿಯಿಲ್ಲ ಅಲ್ಲೆ ನೀರು ನಿಂತು ಕೊಂಡುತಿರುಗಾಡಲು ವಾಗುತ್ತಿಲ್ಲ. ಕುಡಿಯುವ ನೀರಿನ ಕೊಳಾಯಿ ಬಳಿ ಬೋಲ್ ವೆಲ್ ಇದ್ದು ಅಲ್ಲಿ ಕೊಳಚೆ ನೀರು ಚರಂಡಿಯಲ್ಲಿ ಸದಾ ನಿಂತಿರುತ್ತದೆ ಎಂದು ಇಲ್ಲಿನ ನಿವಾಸಿಗಳ ಆರೋಪವಾಗಿದೆ. ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕೊರತೆ ಎದ್ದು ಕಾಣುತ್ತಿದ್ದು, ಚರಂಡಿಗಳ ಅಭಿವೃದ್ಧಿಯಾಗಿಲ್ಲ ಎಂದು ಅಲ್ಲಿನ ಜನರ ಪಟ್ಟಣ ಪಂಚಾಯಿತಿ ಆಡಳಿತದ ಸುಮಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಆಡಳಿತ ವಿರುದ್ಧ ಆರೋಪಿಸಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ…

Read More

ತುಮಕೂರು:  ನನ್ನ ಮಗನ ಸಾವಿಗೆ ಕ್ರಿಕೆಟ್‌ ಮ್ಯಾಚ್‌ ನಡೆಸಿದವರೆ ಕಾರಣ ಎಂದು ಮೃತ ಮನೋಜ್‌ ನ ತಾಯಿ ಲಕ್ಷ್ಮಮ್ಮ ಆರೋಪಿಸಿದ್ದಾರೆ. ಯಾರನ್ನು ಮಗ ಅಂತ ಕರೆಯಲಿ ಎಂದು ಮನೋಜ್‌ ತಾಯಿ ರೋಧಿಸಿದ್ದಾರೆ. ಸ್ನೇಹಿತರು ಕರೆದುಕೊಂಡು ಹೋಗಿ ಕರೆದುಕೊಂಡು ಬಂದಿಲ್ಲ, ಸ್ನೇಹಿತರು ಚೆನ್ನಾಗಿದ್ದಾರೆ ಮಗ ಮೃತಪಟ್ಟಿದ್ದಾನೆ. ಸರಕಾರದ ದುಡ್ಡು ತೆಗೆದುಕೊಂಡು ಏನು ಮಾಡಲಿ, ನನಗೆ ಮಗ ಬೇಕು ಎಂದಿದ್ದಾರೆ. ಮೊಬೈಲ್‌ ಮರೆತು ಹೋಗಿದ್ದ ವಾಪಸ್‌ ಬಂದು ತೆಗೆದುಕೊಂಡು ಹೋಗಿದ್ದ ಅದೇ ಕೊನೆಯದಾಗಿತ್ತು ಎಂದಿದ್ದಾರೆ. ಈ ರೀತಿ ಪ್ಲಾನ್‌ ಮಾಡಬಾರದಿತ್ತು: ಐಪಿಎಲ್‌ ವಿಜಯೋತ್ಸವದ ಕಾಯಕ್ರಮ ಈ ರೀತಿ ಪ್ಲಾನ್‌ ಮಾಡಬಾರದಿತ್ತು, ಸರಕಾರ ಬೇಕಾಬಿಟ್ಟಿ ಧೋರಣೆಯಿಂದ ಕಾಯಕ್ರಮ ಮಾಡಿದ್ದರಿಂದ ರಾಜ್ಯದಲ್ಲಿ ೧೧ ಜನ ಮೃತಪಟ್ಟಿದ್ದಾರೆ. ಇದಕ್ಕೆ ನೇರ ಹೊಣೆ ರಾಜ್ಯ ಸರಕಾರವಾಗಿದೆ ಎಂದು ವಿಜಯೋತ್ಸವದ ವೇಳೆ ಮೃತಪಟ್ಟ ಐಪಿಎಲ್‌ ಅಭಿಮಾನಿ ಮನೋಜ್‌ ಅವರ ಅಂಕಲ್‌ ತಿಮ್ಮಪ್ಪ ತಿಳಿಸಿದ್ದಾರೆ. ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಿ ಮುಂದೆ ಚೆನ್ನಾಗಿರಬಹುದು ಎಂದು ಊರಿಂದ ಊರಿಗೆ ಹೋಗಿ ಕೂಲಿ ಮಾಡಿ ವಿದ್ಯಾಬ್ಯಾಸ ಕೊಡಿಸಿದ್ದಾರೆ.…

Read More

ತುಮಕೂರು:  ನಗರದ ಹೊರವಲಯದ ನಂದಿಹಳ್ಳಿ ಬಳಿ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ರಾಜೇಶ್ (25),  ಧನಂಜಯ (27),  ಧನುಷ್ (23) ಎಂದು ಗುರುತಿಸಲಾಗಿದೆ. ಮೂವರು ಒಂದೇ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸಮೀಪದ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೊರಬರುತ್ತಿದ್ದಂತೆ ಎದುರಾದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ತಕ್ಷಣ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಹಾಗೂ ಡಿವೈಎಸ್ಪಿ ಚಂದ್ರಶೇಖರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿ ಸ್ಥಳ ಪರಿಶೀಲನೆ ಮಾಡಿದ್ದಾರೆ.  ಮೃತಪಟ್ಟಿರುವ ಮೂವರು ದಾಬಸ್ ಪೇಟೆಯ ಸೋಲಾರ್ ಕಂಪನಿಯೊಂದರಲ್ಲಿ ಗಾರ್ಡುಗಳಾಗಿ ಕೆಲಸ ಮಾಡುತ್ತಿದ್ದರು. ಬೆಳಗಿನ ಜಾವ ತಮ್ಮ ಕೆಲಸವನ್ನು ಮುಗಿಸಿಕೊಂಡು ವಾಪಸ್ ತುಮಕೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More

ತುರುವೇಕೆರೆ: ಕ್ಷೇತ್ರದ ಶಾಸಕರಾದ ಎಂ.ಟಿ.ಕೃಷ್ಣಪ್ಪ ಅವರ 75ನೇ ಜನ್ಮದಿನದ ಅಂಗವಾಗಿ ಎಂ.ಟಿ.ಕೃಷ್ಣಪ್ಪ ಅಭಿಮಾನಿ ಬಳಗದ ವತಿಯಿಂದ ಜೂ. 10ರಂದು  ಪಟ್ಟಣದ ಚೌದ್ರಿ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಗಟ್ಟ ಚಂದ್ರೇಶ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ್ಮದಿನಾಚರಣೆಗೆ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕರಿಗೆ ಶುಭಾಶಯ ಕೋರಲು ತಾಲೂಕಿಗೆ ಆಗಮಿಸುತ್ತಿದ್ದು,  ಬೃಹತ್ ಆರೋಗ್ಯ ತಪಾಸಣಾ ಶಿಬಿರ  ಶ್ರೀ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ಸಹಯೋಗದೊಂದಿಗೆ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಈ ಶಿಬಿರದಲ್ಲಿ KIMS ಆಸ್ಪತ್ರೆ, ಬೆಂಗಳೂರು, ಹಾಗೂ ವಿವಿಧ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಉಚಿತ ಔಷಧ ವಿತರಣೆ ಸೇರಿದಂತೆ ವಿವಿಧ ಸೇವೆಗಳು ಸಾರ್ವಜನಿಕರಿಗೆ ಲಭಿಸಲಿವೆ ಎಂದು ತಿಳಿಸಿದರು. ಶಿಬಿರದಲ್ಲಿ ಲಭ್ಯವಿರುವ ವೈದ್ಯಕೀಯ ವಿಭಾಗಗಳು: ಹೃದಯ ತಜ್ಞರು (ECG,…

Read More

ಕೊರಟಗೆರೆ : ತಾಲ್ಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳಲಸಂದ್ರ ಗ್ರಾಮದ ಕೊಳಗದಮ್ಮ ಮತ್ತು ವಡಸಲಮ್ಮ ದೇವಿಯ ದೇವಸ್ಥಾನ ಅಭಿವೃದ್ಧಿಗೆ ಮುಂದಾದ ಭಕ್ತರು, ದೇವಸ್ಥಾನ ನಿರ್ಮಾಣಕ್ಕಾಗಿ 5 ಹಳ್ಳಿ ಗ್ರಾಮಸ್ಥರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಅಗಮಿಸುತ್ತಿದ್ದಾರೆ. ಕೊಳಗದಮ್ಮ ಸೇವಾ ಸಮಿತಿಯ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವುಳ್ಳ ವಡಸಲಮ್ಮ ದೇವಿಯು ಅತ್ಯಂತ ಶಕ್ತಿಶಾಲಿಯಾಗಿದ್ದು ಬೇಡಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ, ಸಾವಿರಾರು ಭಕ್ತಾದಿಗಳ ನಂಬಿಕೆಗೆ ಪಾತ್ರಳಾಗಿದ್ದಾಳೆ. ಭಕ್ತರ ಸಹಾಯದಿಂದ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಮಾಡಲು ಮುಂದಾಗಿದ್ದು. ದೇವಸ್ಥಾನ ಅಭಿವೃದ್ಧಿಗಾಗಿ ಐದು ಹಳ್ಳಿಯ ಪಣಗಾರರಾದ ರಾಮೇಗೌಡ್ರು ಹಾಗೂ ಕಮಲಮ್ಮನವರ ಕುಟುಂಬದ ಮಕ್ಕಳು ಮೊಮ್ಮಕ್ಕಳು ಇಂದು ಹತ್ತು ಲಕ್ಷದ ಒಂದು ರೂ. ಗಳನ್ನು  ದೇವಾಲಯದ ನಿರ್ಮಾಣಕ್ಕಾಗಿ ದೇಣಿಗೆ ರೂಪದಲ್ಲಿ ಹಣ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ದೇವಸ್ಥಾನ ಇನ್ನು ಹೆಚ್ಚು ಅಭಿವೃದ್ಧಿಯಾಗಲಿ ಎಂದರು. ನಟ ಅರ್ಜುನ್ ಯೋಗಿ ಮಾತನಾಡಿ, ವಡಸಲಮ್ಮ ದೇವಿಯ ದೇವಾಲಯವು ಈಗಾಗಲೇ ಒಂದು ಹಂತಕ್ಕೆ ತಲುಪಿದ್ದು,  ನಮ್ಮ…

Read More

ತುಮಕೂರು:  ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮನೋಜ್ (19)ಅಂತ್ಯಕ್ರಿಯೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನದ ನಡುವೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಎಡೆಯೂರು ಬಳಿಯ ‌ನಾಗಸಂದ್ರ ಗ್ರಾಮದಲ್ಲಿ ನಡೆಯಿತು. ಮನೋಜ್ ಅವರ ಅಂತ್ಯಕ್ರಿಯೆ ತೋಟದಲ್ಲಿ ನಡೆಯಿತು.  ಅಂತ್ಯಕ್ರಿಯೆ ವೇಳೆ ಮೃತದೇಹದ ಮುಂದೆ ಕುಟುಂಬಸ್ಥರು ಕಣ್ಟಿರಿಟ್ಟರು. ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರದ ರೆಸಿಡೆನ್ಸಿ ಕಾಲೇಜಿನಲ್ಲಿ ಬಿಬಿಎಂ ಮಾಡುತ್ತಿದ್ದ ಮನೋಜ್,  ಯಲಹಂಕದಲ್ಲಿ ತಂದೆ ತಾಯಿ ಹಾಗೂ ತಂಗಿ ಜೊತೆ ವಾಸವಿದ್ದನು. ನಿನ್ನೆ ಸ್ನೇಹಿತರ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದ ಮನೋಜ್, ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದನು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More