Author: admin

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಬಯಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಏಪ್ರಿಲ್ 18ರಂದು ಅಪಾರ ಬೆಂಬಲಿಗರೊಂದಿಗೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಗ್ಗೆ ಹಿಂಡಲಗಾ ಗಣಪತಿ ಹಾಗೂ ಸುಳೇಬಾವಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಲಕ್ಷ್ಮೀ ಹೆಬ್ಬಾಳಕರ್ ನಂತರ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸುವರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈಗಾಗಲೆ ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿರುವ ಲಕ್ಷ್ಮೀ ಹೆಬ್ಬಾಳಕರ್, ಇಡೀ ಕ್ಷೇತ್ರಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಕಳೆದ ಬಾರಿ ಒಂದು ಲಕ್ಷಕ್ಕಿಂತ ಹೆಚ್ಚು ಮತ ಪಡೆದು, 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಕಳೆದ 5 ವರ್ಷದಲ್ಲಿ ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರುವುದರಿಂದ ಈ ಬಾರಿ ಹಿಂದಿನಕ್ಕಿಂತ ಹೆಚ್ಚಿನ ಅಂತರದಿಂದ ಗೆಲ್ಲುವುದು ನಿಶ್ಚಿತ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಎಲ್ಲೇ ಹೋದರೂ ಮನೆ ಮಗಳೆಂದು ಅತ್ಯಂತ ಪ್ರೀತಿ, ವಿಶ್ವಾಸ,…

Read More

ಬೆಂಗಳೂರು: ವಿಧಾನಸಭೆ ಚುನಾವಣೆಗೆ BJP ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಅಸಮಾಧಾನ, ಭಿನ್ನಮತ ಸ್ಫೋಟಗೊಂಡಿದೆ. ಇದೀಗ ಬಂಡಾಯ ತಣಿಸುವ ಜವಾಬ್ದಾರಿ ಹೊತ್ತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್  ಬುಧವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವಂತೆ ವರಿಷ್ಠರಿಂದ ಬಂದ ಸೂಚನೆಗೆ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಬಂಡಾಯವೆದ್ದಿದ್ದರು. ಅವರನ್ನು ದೆಹಲಿಗೆ ಕರೆಸಿಕೊಂಡು ಅವರ ಅಸಮಾಧಾನ ಶಮನಗೊಳಿಸುವಲ್ಲಿ ಹೈಕಮಾಂಡ್ ಬಹುಮಟ್ಟಿಗೆ ಯಶಸ್ವಿಯಾಗಿದೆ. ಆದಾಗ್ಯೂ, ರಾಜ್ಯದ ಹಲವೆಡೆ ಬಂಡಾಯ ಅಭ್ಯರ್ಥಿಗಳಿಂದ ಪಕ್ಷೇತರರಾಗಿ ಸ್ಪರ್ಧಿಸುವ ಬೆದರಿಕೆ, ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ ಮುಂದುವರಿದಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಕಾರವಾರ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಕಾರವಾರದಲ್ಲಿ ನಡೆದಿದೆ. ಧನ್ಯಾ ಗೌಡ ಕಂಚಾಳ ಮೃತಪಟ್ಟ ವಿದ್ಯಾರ್ಥಿನಿ. 8ನೇ ತರಗತಿ ಓದುತ್ತಿರುವ ಈಕೆ ಸಿದ್ದಾಪುರದ ಹರ್ಲಗುಂಡಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಧನ್ಯಾ ಹರ್ಲಗುಂಡಿ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದಳು. ಹೊಳೆ ಆಳವಿದ್ದರಿಂದ ಈಜು ಬಾರದೇ ಮುಳುಗಿದ್ದಾಳೆ. ಈ ಸಂಬಂಧ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಪೆರ್ನಾಜೆ: ಶ್ವೇತಾಂಬಿಕಾ ಪಿ. ಅವರಿಗೆ  ‘ಅ ಸ್ಟಡಿ ಒನ್ ದ ಇಫೆಕ್ಟಿವ್ನೆಸ್ ಓಫ್ ಪ್ಲಾಂಟ್ ಎಕ್ಸಟ್ರಾಕ್ಟಸ್ ಆಸ್ ಕೊರೋಸಿವ್ ಇನ್ಹಿಬಿಟರ್ಸ್ ಓನ್ ಮೈಲ್ಡ್ ಸ್ಟೀಲ್ ಆಂಡ್ ಅಲುಮಿನಿಯಂ’ ಎಂಬ ಪ್ರಬಂಧಕ್ಕಾಗಿ ರಸಾಯನಶಾಸ್ತ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‌ ಡಿ ಪದವಿ ನೀಡಿದೆ. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಶ್ವೇತಾಂಬಿಕಾ ಪಿ. ಅವರು ಡಾ.ಎಂ.ಆರ್. ಮದ್ದಾನಿ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ವಿಜಯಲಕ್ಷ್ಮಿ ಆರ್.ಭಟ್ ಹಾಗೂ ರಾಘವೇಂದ್ರ ಭಟ್ ಪೆರ್ನಾಜೆ ಅವರ ಪುತ್ರಿಯಾಗಿದ್ದಾರೆ. ನವೀನ್ ಕುಮಾರ್ ಕೆ. ಅವರ ಪತ್ನಿಯಾಗಿದ್ದಾರೆ. ವರದಿ: ಕುಮಾರ್ ಪೆರ್ನಾಜೆ, ಪುತ್ತೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುರುವೇಕೆರೆ: ಹೇಮಾವತಿ ಇಲಾಖೆಯಿಂದ ತುರುವೇಕೆರೆ ಕಲ್ಲೂರು ಕ್ರಾಸ್ ಮಾರ್ಗ ಮಧ್ಯೆ ಇರುವ ಕಲ್ಲೂರ್ ಕ್ರಾಸ್ ಮುಖ್ಯ ರಸ್ತೆಯಿಂದ ಪುರದಪಾಳ್ಯ ಪುರ, ಸಂಪರ್ಕ ರಸ್ತೆಯಾಗಿದ್ದು ಪುರದ ಪಾಳ್ಯದವರೆಗೆ ಸುಮಾರು ಎಂಟುನೂರು ಮೀಟರ್ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಕಾರಿಯು ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಡಾಂಬರನ್ನು ಹಪ್ಪಳದ ರೀತಿಯಲ್ಲಿ ಹೆತ್ತಬಹುದಾಗಿದ್ದು, ಡಾಂಬರೀಕರಣ ಮಾಡುವ ಮೊದಲು ಜಲ್ಲಿಯ ಮೇಲೆ ಸಿಂಪಡಿಸಬೇಕಾದ ಆಯಿಲ್ ಅನ್ನು ಸಿಂಪಡಿಸದೆ ಡಾಂಬರೀಕರಣ ಮಾಡುತ್ತಿದ್ದಾರೆ. ರಸ್ತೆಯ ಅಗಲವನ್ನು ಕಿರಿದು ಮಾಡಿರುದ್ದಾರೆ ಮತ್ತು ಡಾಂಬರನ್ನು ಹಾಕಬೇಕಾದ ದಪ್ಪವನ್ನು ಕೂಡ ಕಡಿಮೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರುಗಳು ಸಹಾಯಕ ಎಂಜಿನಿಯರ್ ಅವರನ್ನು ಗ್ರಾಮಸ್ಥರು ಪ್ರಶ್ನಿಸಿದಾಗ, ನೀವೇನು ಇಂಜಿನಿಯರ?  ಇಂಜಿನಿಯರ್ ನಾನು ಇದರ ಕ್ವಾಲಿಟಿ ಏನು ಎಂಬುದು ನನಗೆ ಗೊತ್ತಿದೆ ಎಂದು ದರ್ಪದ ಮಾತುಗಳನ್ನಾಡಿದ್ದಾರೆ. ಗುತ್ತಿಗೆದಾರನ ಬಳಿ ಪ್ರಶ್ನಿಸಿದರೆ, ನೀವು ಇಂಜಿನಿಯರ್ ಜೊತೆಗೆ ಮಾತನಾಡಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ತುರುವೇಕೆರೆ…

Read More

ಭಾರತೀಯ ಜನತಾ ಪಕ್ಷ ಮೊದಲನೇ ಪಟ್ಟಿ ಬಿಡುಗಡೆಯಾದ ನಂತರ ಆಕ್ರೋಶ ಭುಗಿಲೆದ್ದಿದೆ. ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ್ ಬೇನಕೆ ಅವರ ಟಿಕೆಟ್ ಕೈ ತಪ್ಪಿರುವುದರಿಂದಾಗಿ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಇಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಭಾರತೀಯ ಜನತಾ ಪಕ್ಷದ ನಾಯಕರುಗಳ ಹಾಗೂ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಅನಿಲ್ ಬೆನಕೆ ಅವರಿಗೆ ಅನ್ಯಾಯ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪಕ್ಷದ ನಾಯಕರಿಗೆ ದಿಕ್ಕಾರ ಕೂಗಿದರು. ನಂತರ ಸಂಸದ ಮಂಗಳ ಸುರೇಶ್ ಅಂಗಡಿ ಅವರ ಕಾಲ್ನಡಿಗೆ ಮೂಲಕ ನಿವಾಸಕ್ಕೆ ಬಂದು ಕೆಲ ಹೊತ್ತು ಧರಣಿ ನಡೆಸಿದರು. ಸಂಸದೆ ಮಂಗಳಾಅಂಗಡಿ ಕಾರ್ಯಕರ್ತರನ್ನು ಸಮಾಧಾನ ಮಾಡುವಲ್ಲಿ ವಿಫಲರಾದರು. ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ಅಧ್ಯಕ್ಷರಾದ ನಳಿನ್ ಕಟೀಲ್ ಅವರ ಜೊತೆ ದೂರವಾಣಿ ಮುಖಾಂತರ ಮಾತನಾಡ ಬೇಕೆಂದು ಒತ್ತಾಯಿಸಿದರು. ಅವರ ಒತ್ತಾಯದವರಿಗೆ ರಾಜ್ಯಧ್ಯಕ್ಷರಿಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿದರು ಕೂಡ ದೂರವಾಣಿ ಸ್ವಿಚ್ ಆಫ್…

Read More

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಹಲವು ರಾಜ್ಯದ ಮಾದರಿಗಳನ್ನು ಕರ್ನಾಟಕದ ಮುಂದಿಟ್ಟು ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಕಮಲ ಪಡೆ 52 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ. ಇತ್ತಕಡೆ ಹೊಸಬರ ಪಾದಾರ್ಪಣೆಯಾಗುತ್ತಿದ್ದಂತೆ ಹಲವು ಮಾಜಿ ಅಭ್ಯರ್ಥಿಗಳು ಕಣ್ಣೀರಿಟ್ಟರೆ ಇನ್ನು ಹಲವರು ಬಂಡಾಯದ ಮುನ್ಸುಚನೆಯ ಮಾತಗಳನ್ನಾಡಿದ್ದಾರೆ ಇದರ ಮದ್ಯೆಯೆ ಕಾಂಗ್ರೆಸ್ ಇನ್ನು ಹಲವು ಕ್ಷೇತ್ರಗಳ ಅಭ್ಯರ್ಥಿಗಳನ್ನು ಮೂರನೇ ಪಟ್ಟಿಯಲ್ಲಿ ಬಿಡುಗಡೆ ಮಾಡಲಿದ್ದು ಬಿಜೆಪಿಯ ಹಲವರು ಕಾಂಗ್ರೆಸ್ ಕಡೆಗೆ ಜಾರಿದರೆ ಎಂಬ ತಲೆನೋವು ಕೂಡ ಬಿಜೆಪಿಗೆ ಶುರುವಾಗಿದೆ. ಮೊದಲ ಪಟ್ಟಿ ಬಿಡುಗಡೆಯಾದ ಕೆಲವ ಗಂಟೆಗಳಲ್ಲಿ ಬಂಡಾಯದ ಬೀತಿ: ಮಂಗಳವಾರ ರಾತ್ರಿ ಬಿಜೆಪಿ ಮೊದಲ ಪಟ್ಟಿ ದೆಹಲಿಯಲ್ಲಿ ಬಿಡುಗಡೆಯಾಗುತ್ತಿದ್ದಂತೆ ಕರ್ನಾಟಕದಲ್ಲಿ ಬಂಡಾಯದ ಬೀತಿ ಶುರುವಾಗಿದೆ. ಕಳೆದ ಚುನಾವಣೆಗಳಲ್ಲಿ ಬೆರಳೆಣಿಕೆಯಷ್ಟು ಮತಗಳ ಅಂತರದಲ್ಲಿ ಸೋತಿದ್ದ 52 ಕ್ಷೇತ್ರಗಲ್ಲಿ ಮಾಜಿಗಳನ್ನು ಪಕ್ಕಕ್ಕಿಟ್ಟು ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದ್ದಂತೆಯೇ ಅಥಣಿ ಕ್ಷೇತ್ರದ ಲಕ್ಷ್ಮಣ್ ಸವದಿ, ಬೆಳಗಾವಿ ಉತ್ತರದ ಅನಿಲ ಬೆನಕೆ ಸೇರಿದಂತೆ ಹಲವರು ಟಿಕೆಟ್ ಸಿಗದಿದ್ದರೆ ಬಿಜೆಪಿಗೆ ಗುಡ್…

Read More

ಬೀರೂರು: ಬೋರ್‌ವೆಲ್ ಲಾರಿಯೊಂದು ಕಾರ್ ಮೇಲೆ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೀರೂರು ಕೋರನಹಳ್ಳಿ ಸಮೀಪದಲ್ಲಿ ನಡೆದಿದೆ. ಮಧ್ಯಾಹ್ನ ಬೀರೂರು ಪಟ್ಟಣದ ಬಸಪ್ಪ ಬಡಾವಣೆ ನಿವಾಸಿ ದರ್ಶನ್ ಎಂಬುವವರು ಅಜ್ಜಂಪುರ ತಾಲ್ಲೂಕು ಸೊಕ್ಕೆ ಗ್ರಾಮದಲ್ಲಿರುವ ಮಧ್ಯಾಹ್ನ ತೋಟಕ್ಕೆ ಹೊರಟಿದ್ದರು ಎನ್ನಲಾಗಿದೆ. ಬೀರೂರಿನಿಂದ ಹೊರಟವರು ಕೋರನಹಳ್ಳಿ ಗ್ರಾಮದ ಹುಣಸಘಟ್ಟ ಮಾರ್ಗದಲ್ಲಿ ಚಲಿಸುತ್ತಿರುವಾಗ ರಸ್ತೆಯ ಮಧ್ಯದಲ್ಲಿ ಸೇತುವೆ ಇದ್ದು ಎದುರಿನಿಂದ ಲಾರಿ ಬರುವುದು ಅವರಿಗೆ ಕಾಣಿಸಿತ್ತು. ಸೇತುವೆ ಮೇಲೆ ಕೇವಲ ಒಂದು ವಾಹನ ಮಾತ್ರ ಚಲಿಸುವಷ್ಟು ಸ್ಥಳಾವಕಾಶ ಇದ್ದುದರಿಂದ ಲಾರಿಗೆ ಜಾಗಕೊಟ್ಟು ಸೇತುವೆಗಿಂತ ಹಿಂದೆಯೇ ಕಾರು ನಿಲ್ಲಿದ್ದರು. ಎದುರಿನಿಂದ ಬಂದ ಲಾರಿ ತಿರುವು ತೆಗೆದುಕೊಳ್ಳುವ ಸಮಯದಲ್ಲಿ ಆಯ ತಪ್ಪಿ ಕಾರಿನ ಮೇಲೆ ಉರುಳಿ ಬಿದ್ದ ಸಮಯದಲ್ಲಿ ಲಾರಿಯಲ್ಲಿದ್ದ ಕಬ್ಬಿಣದ ಪೈಪ್ ಗಳು ಕಾರಿನ ಮೇಲೆ ಬಿದ್ದಿದ್ದರಿಂದ ದರ್ಶನ್ ಸ್ಥಳದಲ್ಲಿಯೇ ಮೃತಪಟ್ಟರು. ಬೋರ್‌ಲಾರಿ ಅಪಾರ ತೂಕ ಇರುವುದರಿಂದ ಬೀರೂರು ಪೊಲೀಸರು ಕ್ರೇನ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿದರೂ ದೇಹ ಹೊರತೆಗೆಯಲು…

Read More

ಚಿಕ್ಕಮಗಳೂರು: ಶೇ.೭೦ ರಷ್ಟು ಪ್ರಾಮಾಣಿಕ ಎಂದು ಹೇಳಿಕೊಂಡಿರುವ ಕಾಂಗ್ರೆಸ್ ಮುಖಂಡ ಎಚ್.ಡಿ.ತಮ್ಮಯ್ಯ ತಾನೊಬ್ಬ ಅಪ್ರಾಮಾಣಿಕ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಡಿ.ಸುಧೀರ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರು ಕಾಂಗ್ರೆಸ್ ನಲ್ಲಿ ಟಿಕೆಟ್ ಕೈತಪ್ಪಿ ಹೋಗುತ್ತಿದೆ ಎಂಬ ಭಯದಲ್ಲಿ ಕಾಂಗ್ರೆಸ್ಸಿಗರ ಮೇಲಿನ ಸಿಟ್ಟನ್ನು ಸಿ.ಟಿ.ರವಿ ಅವರ ಮೇಲೆ ತೋರಿಸುವ ಭರದಲ್ಲಿ ತಾನೊಬ್ಬ ಅಪ್ರಾಮಾಣಿಕ ಎಂದು ಹೇಳುವ ಮೂಲಕ ಆರಂಭದಿಂದಲೂ ನನಗೆ ಅಧಿಕಾರ ಕೊಟ್ಟ ಪಕ್ಷಗಳಿಗೆ ವಂಚನೆ ಮಾಡುತ್ತಾ ಬಂದಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಚಂಡಿಘಡ: ಪಂಜಾಬ್‌ನ ಭಠಿಂಡದಲ್ಲಿರುವ ʼಭಠಿಂಡ ಮಿಲಿಟರಿ ಸ್ಟೇಷನ್‌ʼನಲ್ಲಿ ಇಂದು ಸಂಭವಿಸಿದ  ಗುಂಡಿನ  ದಾಳಿಯಲ್ಲಿ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಇದು ಭಯೋತ್ಪಾದಕರ ದಾಳಿಯೇ ಎನ್ನುವುದು ಇನ್ನೂ ಸ್ಪಷ್ಟವಾಗಿ ಕಂಡುಬಂದಿಲ್ಲ . ಆದರೆ ಪಂಜಾಬ್‌ ಪೋಲಿಸರು ಇದು ಭಯೋತ್ಪಾದಕ ದಾಳಿ ಅಲ್ಲ ಎಂದು ಹೇಳಿದ್ದಾರೆ. ಇಂದು  ಬೆಳಿಗ್ಗೆ  4.35ರ ವೇಳೆಗ ಗುಂಡಿನ ದಾಳಿ ನಡೆದಿದೆ .ಗುಂಡಿನ   ದಾಳಿ ಭಯೋತ್ಪಾದನೆ ಕೃತ್ಯದಂತೆ ಕಾಣಿಸುತ್ತಿಲ್ಲ. ಯಾರೋ ಹತಾಶ ಮನಸ್ಥಿತಿಯವರು ಎಸಗಿದ ಕೃತ್ಯವಾಗಿರುವ ಶಂಕೆಯಿದೆ ಎಂದು ಪಂಜಾಬ್‌ ಎಸ್‌ಎಸ್‌ಪಿ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More