Subscribe to Updates
Get the latest creative news from FooBar about art, design and business.
- ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ
- ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು
- ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ
- ಕೊರಟಗೆರೆ: 10,016 ಮಕ್ಕಳಿಗೆ ಪೋಲಿಯೋ ಲಸಿಕಾ ಗುರಿ: ಡಾ.ಜ್ಯೋತ್ಸ್ನಾ ರೆಡ್ಡಿ ಕರೆ
- ಜುಲೈ 3ರಂದು ‘ದಲಿತ ಜನಾಗ್ರಹ ಸಮಾವೇಶ’: ಸರಗೂರು ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಬಿಡುಗಡೆ
- ಮಧುಗಿರಿ: ಸಿದ್ಧಾರ್ಥ ವಸತಿ ಪ್ರೌಢಶಾಲೆಯಲ್ಲಿ 2006ರ ಬ್ಯಾಚ್ ಹಳೆಯ ವಿದ್ಯಾರ್ಥಿಗಳಿಂದ ಉಚಿತ ಸಮವಸ್ತ್ರ ವಿತರಣೆ
- SIR: ಅರ್ಹ ನಾಗರಿಕರ ಮತದಾನದ ಹಕ್ಕು ಕಸಿದುಕೊಳ್ಳುವ ಅಪಾಯ: ಹೆಚ್.ವಿ. ವಾಸು ಆತಂಕ
- ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ
Author: admin
ನವದೆಹಲಿ: ಅದಾನಿ ಸಮೂಹದ ವಿರುದ್ಧದ ಆರೋಪಗಳ ಕುರಿತು ಜಂಟಿ ಸಂಸದೀಯ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಇತ್ತೀಚೆಗೆ ನಿಧನರಾದ ಪುಣೆ ಸಂಸದ ಗಿರೀಶ್ ಬಾಪಟ್ ಮತ್ತು ಕೇರಳದ ಮಾಜಿ ಸಂಸದ ಇನ್ನೋಸೆಂಟ್ ವರೀದ್ ಅವರಿಗೆ ಸಂತಾಪ ಸೂಚಕವಾಗಿ ಲೋಕಸಭೆ ಕಲಾಪವನ್ನೂ ಮುಂದೂಡಲಾಯಿತು. ಅದಾನಿ ಸಮೂಹದ ವಿರುದ್ಧದ ಷೇರು ಅಕ್ರಮದ ಆರೋಪಗಳ ಕುರಿತು ಜಂಟಿ ಸಂಸದೀಯ ತನಿಖೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವುದರಿಂದ ಉಬಯ ಸದನಗಳು ಹಲವು ಬಾರಿ ಮುಂದೂಡಿಕೆಯಾಗಿವೆ. ಹೀಗಾಗಿ ಚರ್ಚೆ ಇಲ್ಲದೇ ಬಜೆಟ್ ಅನುಮೋದನೆಗೊಂಡಿದೆ. ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ಎರಡನೇ ಭಾಗವು ಏ.6ರ ವರೆಗೆ ನಡೆಯಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ:…
ತಾಕತ್ ಇದ್ದರೆ ಪ್ರತಿ ಕುಟುಂಬದ ಮಹಿಳೆಯರಿಗೆ 5 ಸಾವಿರ ರೂಪಾಯಿ ಘೋಷಣೆ ಮಾಡಿ ಎಂದು ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ನ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ಬಿಜೆಪಿಗೆ ಸವಾಲು ಹಾಕಿದ್ದಾರೆ. ತಿಗಳ ಮತ್ತು ನಾಯಕರ ಸಮುದಾಯದ ಸಮಾವೇಶದಲ್ಲಿದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜನರ ಹಸಿವನ್ನು ನೀಗಿಸುವ ಕೆಲಸ ಮಾಡಿದರೆ, ಬಿಜೆಪಿ ಸರ್ಕಾರ ಅನ್ನವನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಬೆಲೆ ಏರಿಕೆ ಒಂದನ್ನು ಬಿಟ್ಟು, ಬಿಜೆಪಿಯವರ ಕೈಯಿಂದ ಇನ್ನೇನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರ ಏನು ಮಾಡುತ್ತಿದೆ ಎನ್ನುವುದನ್ನು ತಿಳಿಯ ಬೇಕಾದ್ರೆ ವಿಧಾನ ಸೌಧದ ಕಂಬಗಳಿಗೆ ಕಿವಿಕೊಟ್ಟು ಕೇಳಿ, ಪ್ರತಿ ಕಂಬವೂ 40 ಪರ್ಸೆಂಟ್ ಕಮಿಷನ್ ಎಂದು ಹೇಳುತ್ತದೆ ಎಂದು ಅವರು ವ್ಯಂಗ್ಯವಾಡಿದರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದ ಜನರಿಗೆ ಕೊಟ್ಟಂತಹ ಮಾತುಗಳನ್ನು ನೆರವೇರಿಸಿದೆ ಮುಂದೆಯೂ ಮಾತಿಗೆ ಬದ್ದವಿರುತ್ತೇವೆ. ಈಗಲೂ ಅಷ್ಟೇ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಪ್ರತಿ ಕುಟುಂಬದ ಮಹಿಳೆಗೆ 2000, 10 ಕೆಜಿ ಅಕ್ಕಿ, 200…
ರಾತ್ರಿ ವೇಳೆಯಲ್ಲಿ ದುಷ್ಕರ್ಮಿಗಳು ರೈತನ ತೋಟಕ್ಕೆ ಬೆಂಕಿಯಿಟ್ಟು ಪರಾರಿಯಾದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬಂದ್ರೆಹಳ್ಳಿಯಲ್ಲಿ ನಡೆದಿದೆ. ಬಂದ್ರೆಹಳ್ಳಿ ಗ್ರಾಮದ ರೈತ ಮಧು ಅವರಿಗೆ ಸೇರಿದ ತೋಟಕ್ಕೆ ಬೆಂಕಿ ಹಚ್ಚಲಾಗಿದೆ. ತಡ ರಾತ್ರಿ ವೇಳೆ ತೋಟಕ್ಕೆ ಬೆಂಕಿ ಹತ್ತಿಕೊಂಡಿರುವುದನ್ನು ಕಂಡು ಬೆಂಕಿ ಆರಿಸಲು ಹರಸಾಹಸ ಪಟ್ಟರೂ ತೆಂಗು, ತೇಗ, ಹುಣಸೇ ಮರಗಳು ಸುಟ್ಟ ಭಸ್ಮವಾಗಿವೆ. ತಡ ರಾತ್ರಿ ವೇಳೆ ಯಾರೋ ದುಷ್ಕರ್ಮಿಗಳು ತೋಟಕ್ಕೆ ಬೆಂಕಿ ಹಚ್ಚಿದ್ದಾರೆ. ತಡ ರಾತ್ರಿ ತೋಟ ಹೊತ್ತಿ ಉರಿದಿದ್ದು, ರೈತನಿಗೆ ಭಾರೀ ನಷ್ಟವಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ವಿಚಾರವಾಗಿ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರು ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಮೊದಲು ಕೋಲಾರದಲ್ಲಿ ಸ್ಪರ್ಧೆ ಮಾಡ್ಬೇಕು ಅಂತ ತೀರ್ಮಾನ ಮಾಡಿದ್ರು. ಅಲ್ಲಿನ ಮುಖಂಡರೆಲ್ಲಾ ಬಂದು ನಮ್ಮ ಕೋಲಾರದಲ್ಲಿ ಸ್ಪರ್ಧೆ ಮಾಡಿ. ಬಾದಾಮಿ ಬಹಳ ದೂರ ಆಗುತ್ತೆ ಅಂತ ಅವರಿಗೆ ಒತ್ತಾಯ ಮಾಡಿ ಕರ್ಕೊಂಡು ಹೋಗಿ, ಒಂದು ರೀತಿಯಲ್ಲಿ ಕಮಿಟ್ಮೆಂಟ್ ಮಾಡಿಸಿದ್ರು. ಆ ನಂತರ ಅವರು ಅದನ್ನ ಒಪ್ಪಿಕೊಂಡು ಕೋಲಾರದಲ್ಲಿ ಸ್ಪರ್ಧೆ ಮಾಡೋಕೆ ತೀರ್ಮಾನ ಮಾಡಿದ್ರು. ತದ ನಂತರ ಅವರಿಗೆ ಬೇರೆ ಏನು ಅಭಿಪ್ರಾಯ ಬಂತು. ವರುಣಾದಲ್ಲಿ ಸ್ಪರ್ಧೆ ಮಾಡ್ತಿನಿ ಅಂದ್ರು. ವರುಣಾದಲ್ಲಿ ಅವರ ಹೆಸರನ್ನ ಘೋಷಣೆ ಮಾಡಿದ್ದಾರೆ. ಈಗ ಕೋಲಾರದವರು ನೀವು ಮೊದಲು ಆ ರೀತಿ ಹೇಳಿ, ಈಗ, ನಿಲ್ಲೋದಿಲ್ಲ ಹಾಗೇ- ಹೀಗೆ ಹೇಳೋದು ಬೇಡ. ನೀವು ಎರಡು ಕಡೆ ಸ್ಪರ್ಧೆ ಮಾಡಿ ಅಂತ ಒತ್ತಾಯ ಮಾಡ್ತಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ನಾನು ಈ ವಿಚಾರವನ್ನ ಹೈಕಮಾಂಡ್…
ನವದೆಹಲಿ: ಮಲೇಷ್ಯಾದಲ್ಲಿ ಪಫರ್ ಮೀನು ತಿಂದು 83 ವರ್ಷದ ಲಿಮ್ ಸಿವ್ ಗುವಾನ್ ಎಂಬ ವೃದ್ಧ ಮಹಿಳೆ ಸಾವನ್ನಪ್ಪಿದ್ದಾರೆ, ಆಕೆಯ ಪತಿ ಕೋಮಾದಲ್ಲಿದ್ದಾರೆ ಎಂದು ನ್ಯೂಯಾರ್ಕ್ ವರದಿ ಮಾಡಿದೆ. ಈ ವರದಿಯ ಪ್ರಕಾರ, ವೃದ್ಧ ದಂಪತಿಯ ಮಗಳು ಸ್ಥಳೀಯ ಅಂಗಡಿಯಿಂದ ಮೀನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಯವಾಗಲು ಅದೇ ಅಂಗಡಿಯಿಂದ ಮೀನು ಖರೀದಿಸುತ್ತಿರುವುದರಿಂದ ಈ ಬಾರಿ ಮೀನು ಕೊಳ್ಳುವ ವೇಳೆ ಗುಣಮಟ್ಟವನ್ನು ಪರಿಶೀಲಿಸಲಿಲ್ಲ ಎನ್ನಲಾಗಿದೆ. ವರದಿಯ ಪ್ರಕಾರ, ಮಧ್ಯಾಹ್ನದ ಊಟಕ್ಕೆ ಮೀನನ್ನು ಸೇವಿಸಿದ ನಂತರ, ಮಹಿಳೆ ನಡುಗಲು ಮತ್ತು ಉಸಿರಾಟದ ತೊಂದರೆಗಳನ್ನು ಅನುಭವಿಸಲು ಪ್ರಾರಂಭಿಸಿದರು. ಆಕೆಯ ಪತಿಯಲ್ಲಿ ಕೂಡ ಸುಮಾರು ಒಂದು ಗಂಟೆಯ ನಂತರ ಇದೇ ರೀತಿಯ ರೋಗಲಕ್ಷಣಗಳು ಕಂಡುಬಂದವು ಎಂದು ಹೇಳಲಾಗಿದೆ. ಅ ಸಮಯದಲ್ಲಿ ಅವರ ಮಗ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೃದ್ಧ ಮಹಿಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಕೋಮಾದಲ್ಲಿರುವ ಆಕೆಯ ಪತಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ…
ದುಬೈ: ಮುಂದಿನ ತಿಂಗಳಿನಿಂದ ವರ್ಷಾಂತ್ಯದ ವರೆಗೆ ಪ್ರತಿ ದಿನ 5 ಲಕ್ಷ ಬ್ಯಾರೆಲ್‌ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ಸೌದಿ ಅರೇಬಿಯಾ ನಿರ್ಧರಿಸಿದೆ. ಜಗತ್ತಿನ ಪ್ರಮುಖ ತೈಲೋತ್ಪಾದನೆ ಮಾಡುವ ಸೌದಿ ಅರೇಬಿಯಾದ ಈ ನಿರ್ಧಾರದಿಂದ ಬೆಲೆ ಏರಿಕೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಸೌದಿ ಅರೇಬಿಯಾ ಮತ್ತು ಅಮೆರಿಕ ನಡುವಿನ ಬಾಂಧವ್ಯದಲ್ಲಿ ಬಿರುಕು ಮೂಡಿರುವಂತೆಯೇ ಈ ನಿರ್ಧಾರ ಪ್ರಕಟವಾಗಿದೆ ಎಂದು ಹೇಳಲಾಗಿದೆ. ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ- ಒಪೆಕ್, ಒಕ್ಕೂಟದ ಸದಸ್ಯರಲ್ಲದೇ ಇರುವ ರಾಷ್ಟ್ರಗಳ ಜತೆಗೆ ಈ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಸೌದಿ ಅರೇಬಿಯಾದ ಇಂಧನ ಸಚಿವಾಲಯ ಭಾನುವಾರ ಈ ಘೋಷಣೆ ಮಾಡಿದೆ. ಯುಎಇ ಪ್ರತಿ ದಿನ 1.44 ಲಕ್ಷ ಬ್ಯಾರೆಲ್, ಕುವೈತ್1.28 ಲಕ್ಷ ಬ್ಯಾರೆಲ್, ಇರಾಕ್ 2.11 ಲಕ್ಷ ಬ್ಯಾರೆಲ್, ಒಮನ್ 40 ಸಾವಿರ, ಅಲ್ಜೀರಿಯಾ ಪ್ರತಿ ದಿನ 48 ಸಾವಿರ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆ ಇಳಿಕೆ ಮಾಡಲಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಗ್ರಾಮದಿಂದ ಜಗತ್ತಿನಾದ್ಯಂತ ಉಂಟಾಗಿರುವ…
ಸ್ಪೇನ್: ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಆರೋಗ್ಯ ಹದಗೆಡುತ್ತಿರುವ ನಡುವೆ, ಸ್ಪೇನ್‌ನ 64 ವರ್ಷದ ವ್ಯಕ್ತಿ ಒಳಚರಂಡಿ ಸಂಸ್ಕರಣಾ ಉದ್ಯೋಗಿಯಾಗಿದ್ದಾನೆ. ಈತ ಅತಿಸಾರ ಮತ್ತು ತುರಿಕೆ ದದ್ದುಗಳನ್ನು ಅನುಭವಿಸಲು ಪ್ರಾರಂಭಿಸಿದಾಗ ಏನಾಯಿತು ಎಂದು ತಿಳಿಯಲು ಆಗಲಿಲ್ಲ ನಂತರ ಆಸ್ಪತ್ರೆಗೆ ದಾಖಲಾದಾಗ ಆತನ ಚರ್ಮದ ಒಳಗೆ ಹುಳುಗಳು ತೆವಳುತ್ತಿರುವುದನ್ನು ಕಂಡು ಸ್ಟ್ರಾಂಗ್‌ಲೋಯಿಡ್ಸ್ ಸ್ಟೆರ್ಕೊರಾಲಿಸ್‌ಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ. ಇದು ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ವಾಸಿಸುವ ಪರಾವಲಂಬಿ ರೌಂಡ್ ವರ್ಮ್ ಜಾತಿಯ ಹುಳುವಿನ ಒಂದು ವಿಧವಾಗಿದೆ ಮತ್ತು ಸ್ಟ್ರಾಂಗ್ಲೋಯಿಡಿಯಾಸಿಸ್ ಎಂಬ ರೋಗವನ್ನು ಉಂಟುಮಾಡುತ್ತದೆ. ದುಂಡಾಣು ಹುಳುಗಳು ಮಾನವನ ಚರ್ಮ ಮತ್ತು ಕಲುಷಿತ ಮಣ್ಣಿನ ನಡುವಿನ ಸಂಪರ್ಕದ ಮೂಲಕ ಹರಡುತ್ತವೆ, ನಂತರ ಅವು ಮಾನವನ ಆತಿಥೇಯವನ್ನು ಭೇದಿಸಿ ಕರುಳನ್ನು ತಲುಪುತ್ತವೆ ಮತ್ತು ಅಲ್ಲಿ ಅವು ವಯಸ್ಕರಾಗಿ ಬೆಳೆದು ಮೊಟ್ಟೆಗಳನ್ನು ಉತ್ಪತ್ತಿ ಮಾಡುತ್ತವೆ. ನೈರ್ಮಲ್ಯ ಕೆಲಸಗಾರನಿಗೆ ಹೇಗೆ ಸೋಂಕು ತಗುಲಿತು ಎಂಬುದು ತಿಳಿದು ಬಂದಿಲ್ಲ, ಆದರೆ ಆ ವ್ಯಕ್ತಿ ಸ್ಪೇನ್‌ನ ನಗರ…
ಚೆನ್ನೈ ತಂಡ ಇಂದು ಐಪಿಎಲ್‌ನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಚೆನ್ನೈ ತನ್ನ ಎರಡನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೂಪರ್ ಕಿಂಗ್ಸ್ ಐದು ವಿಕೆಟ್‌ಗಳಿಂದ ಸೋತಿತ್ತು. ಕೊನೆಯ ಪಂದ್ಯದಲ್ಲಿ ರಿತುರಾಜ್ ಗಾಯಕ್ವಾಡ್ ಅವರ ಅಬ್ಬರದ ಬಲದಿಂದ ಚೆನ್ನೈ ಏಳು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ದುರದೃಷ್ಟವಶಾತ್ ಶತಕ ವಂಚಿತರಾದ ರಿತುರಾಜ್ 50 ಎಸೆತಗಳಲ್ಲಿ 4 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಹಿತ 92 ರನ್ ಗಳಿಸಿ ಪ್ರೇಕ್ಷಕರನ್ನು ರಂಜಿಸಿದರೆ, ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಕೊನೆಯ ಓವರ್‌ಗಳಲ್ಲಿ ತಮ್ಮ ಪ್ರತಿಭೆ ಮಂಕಾಗಿಲ್ಲ ಎಂದು ಸಾಬೀತುಪಡಿಸಿದರು. ಗುಜರಾತ್‌ಗೆ 179 ರನ್‌ಗಳ ಗುರಿಯೊಂದಿಗೆ ಆರಂಭಿಕರಾದ ಗಿಲ್ ಮತ್ತು ವೃದ್ಧಿಮಾನ್ ಸಹಾ ಉತ್ತಮ ಆರಂಭ ನೀಡಿದರು. ಧೋನಿ ಮತ್ತು ಸಹ ಕೊನೆಯ ಓವರ್‌ಗಳಲ್ಲಿ ಗುಜರಾತ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು ಆದರೆ ಗೆಲುವು ಗುಜರಾತ್‌ಗೆ ಸೇರಿತ್ತು. ಸ್ಪಿನ್ನರ್ ಗಳ ಪಾತ್ರ ಪ್ರಮುಖವಾಗಿರುವ ಎಂಎ…
ಬೆಳಗಾವಿ: ಚುನಾವಣೆ ಘೋಷಣೆಯಾದ ನಂತರ ಬೆಳಗಾವಿ ರಾಜಕಾರಣ ಪ್ರತಿ ಕ್ಷೇತ್ರಗಳಲ್ಲಿ ಹೊಸ ಹೊಸ ಬೆಳವಣಿಗೆಗಳು ಆಗುತ್ತಿವೆ .ಪ್ರಬಲ ಆಕಾಂಕ್ಷಿಗಳು ಟಿಕೆಟ್ ಪಡೆಯಲು ಜನರ ಹಾಗೂ ನಾಯಕರ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಆದರೆ ಕ್ಷೇತ್ರದ ಮತದಾರರ ಲೆಕ್ಕಾಚಾರವೇ ಬೇರೆಯಾಗಿದೆ ಇದರಿಂದಾಗಿ ಪಕ್ಷಕ್ಕೆ ತಲೆನೋವು ತರುವುದು ಮಾತ್ರ ಶತಸಿದ್ಧ. ಬೆಳಗಾವಿ ದಕ್ಷಿಣ ಕ್ಷೇತ್ರವು ಮರಾಠಾ ಸಮುದಾಯದ ಪ್ರಬಲವಾದ ಬಲ ಇರುವ ಕ್ಷೇತ್ರ. ದಕ್ಷಿಣ ಕ್ಷೇತ್ರ ಇಲ್ಲಿ ಮತದಾರರ ಸ್ಪಷ್ಟವಾದ ನಿಲವು ಬಹು ಸಂಖ್ಯೆಯ ಹೊಂದಿರುವ ಮರಾಠ ಸಮುದಾಯದ ಅಭ್ಯರ್ಥಿಯೆ ನಮ್ಮ ಆಯ್ಕೆ ಎಂದು ಸ್ಪಷ್ಟವಾಗಿ ಪ್ರಚಾರಕ್ಕೆ ತೆರಳಿದಂತಹ ನಾಯಕರುಗಳಿಗೆ ಹಾಗೂ ಕಾರ್ಯಕರ್ತರಿಗೆ ಹೇಳುತ್ತಿದ್ದಾರೆ. ಆದರೆ ರಾಜಕೀಯ ಲೆಕ್ಕಾಚಾರಗಳನ್ನು ಹೊರತುಪಡಿಸಿ ಅಭ್ಯರ್ಥಿಗಳು ತಮ್ಮದೇ ಆದಂತ ನಿಲುವುಗಳನ್ನು ತಾಳಿ ಸ್ವಯಂ ಘೋಷಿತ ಅಭ್ಯರ್ಥಿಯೆಂದು ಘೋಷಣೆ ಮಾಡುತ್ತಾ ಇದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರಚನ್ನಗೊಳ್ಳುತ್ತಾ ಹೋಗುತ್ತಿದೆ. ಇನ್ನೂ ಅಧಿಕೃತವಾದ ಅಭ್ಯರ್ಥಿಗಳ ಘೋಷಣೆ ಆಗದೇ ಇರುವುದು ಈ ಘಟನೆಗಳಿಗೆ ಮತ್ತಷ್ಟು ಬಲಬಂದಂತೆ ಆಗಿದೆ. ಕಾಂಗ್ರೆಸ ದಕ್ಷಿಣ…
ನವದೆಹಲಿ: ಮಾನನಷ್ಟ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಿರುವ ಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸೋಮವಾರ ಸೂರತ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕಾನೂನು ತಂಡವು 2 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸೂರತ್‌ನ ಸೆಷನ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಆಧಾರಿಸಿ ವರದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA