Author: admin

ದಾವಣಗೆರೆ: ಭ್ರಷ್ಟಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬೇಲ್ ಸಿಕ್ಕ ಬಳಿಕ ಯುದ್ಧ ಗೆದ್ದು ಬಂದಂತೆ ಪೋಸ್ ನೀಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮೊದಲನೇ ಆರೋ‍ಪಿಯಾಗಿ ತಲೆಮರೆಸಿಕೊಂಡಿದ್ದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಭ್ರಷ್ಟಾಚಾರ ಪ್ರಕರಣದಲ್ಲಿ ಬೇಲ್ ಸಿಕ್ಕಿದ ಬಳಿಕ ಯುದ್ಧವನ್ನೇ ಗೆದ್ದು ಬಂದಂತೆ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ತಲೆಮರೆಸಿಕೊಂಡಿದ್ದ ತಮ್ಮ ನಾಯಕ ಬರುತ್ತಿದ್ದಂತೆಯೇ ಮಾಡಳ್ ಅವರ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಜಾಮೀನು ಆದೇಶ ತಲುಪಿದ 48 ಗಂಟೆಗಳ ಒಳಗಾಗಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಅವರಿಗೆ ಸೂಚಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಬೆಂಗಳೂರಿನ ನಾಗರಿಕರ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಅತಿ ಹೆಚ್ಚಿನ ಗಮನವನ್ನು ನೀಡಲಾಗಿದ್ದು, ಬೆಂಗಳೂರಿಗೆ ಆರೋಗ್ಯಕ್ಕಾಗಿ ವಿಶೇಷ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ  ವತಿಯಿಂದ ಜಯನಗರದಲ್ಲಿ ಆಯೋಜಿಸಿದ್ದ  ಜನೌಷಧಿ ದಿವಸ್ ಆಚರಣೆ-2023 ಮತ್ತು 100 ನೇ ಜನೌಷಧಿ ಕೇಂದ್ರವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ  ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಪ್ರತಿ ವಾರ್ಡಿಗೆ ನಮ್ಮ ಕ್ಲಿನಿಕ್  ಪ್ರಾರಂಭ ಮಾಡಲಾಗಿದೆ.  ಈಗಾಗಲೇ 100 ಪ್ರಾರಂಭ ಮಾಡಲಾಗಿದ್ದು, ಇನ್ನೂ ನೂರು ಇದೇ ವಾರದಲ್ಲಿ ಪ್ರಾರಂಭಿಸಲಾಗುತ್ತಿದೆ. 240 ವಾರ್ಡುಗಳಲ್ಲಿ ನಮ್ಮ ಕ್ಲಿನಿಕ್  ಪ್ರಾರಂಭವಾಗುತ್ತಿದೆ. ಸುಮಾರು 19  ಪಿ.ಹೆಚ್.ಸಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 4  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಎಲ್ಲೆಡೆ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಇಂದು ಸಂಚಾರಿ ಆಸ್ಪತ್ರೆಯನ್ನೂ ಹಾಗೂ  ಡಯಾಲಿಸಿಸ್ ಕೇಂದ್ರವನ್ನೂ ಉದ್ಘಾಟಿಸಲಾಗಿದ್ದು, ರೋಗಿಗಳ ಮುಖದಲ್ಲಿ ಮಂದಹಾಸ ನೋಡಿದಾಗ ಸಾರ್ಥಕ…

Read More

ಮಧುಗಿರಿ: ಐತಿಹಾಸಿಕ ಶ್ರೀ ಕೋಡಿ ಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಬಹುಭಾಷಾ ನಟ ಅರ್ಜುನ್ ಸರ್ಜಾ ಮತ್ತು ಖ್ಯಾತ ನಟ ಧ್ರುವ ಸರ್ಜಾ ಆಗಮಿಸಿದ್ದು, ದೊಡ್ಡೇರಿ ಜಕ್ಕೇನಹಳ್ಳಿ  ಗ್ರಾಮದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ವಿಶೇಷ ಮೆರುಗು ತಂದರು. ಪ್ರತಿ ವರ್ಷದಂತೆ ಈ ವರ್ಷವೂ ಗಂಗಾ ಪೂಜೆ ಧ್ವಜಾರೋಹಣ ಆದಲೂರಿನ ಶ್ರೀರಾಮ ದೇವರ ಆಗಮನ ಕಾರ್ಯಕ್ರಮಗಳು ವಿಜೃಂಭಣೆಯಿಂದ  ನಡೆದವು. ಬಳಿಕ  ಶ್ರೀ ಕೋಡಿಲಿಂಗೇಶ್ವರ ಸ್ವಾಮಿ ಹಾಗೂ ಶಿವ ಪಾರ್ವತಿ ಅಮ್ಮನ ರವರ ಶ್ರೀ ಸ್ವಾಮಿಯ ಬ್ರಹ್ಮರಥೋತ್ಸವ ನೆರವೇರಿತು. ಕಾರ್ಯಕ್ರಮದಲ್ಲಿ ಅನ್ನ ಸಂತರ್ಪಣೆ ಹಾಗೂ ಬಸ್ಮಾಸುರನ ವಧೆ ಯಕ್ಷಗಾನ, ನಾಟಕ,  ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಜಾತ್ರಾ ಮಹೋತ್ಸವಕ್ಕೆ ಸುಮಾರು 6,000 ಭಕ್ತಾದಿಗಳು ಭಾಗಿಯಾಗಿದ್ದರು. ಈ ಜಾತ್ರೆಯಲ್ಲಿ ಗಣ್ಯರು ಭಾಗವಹಿಸಿದರು  ಶಾಸಕರಾದ ಎಂ.ವಿ.ವೀರಭದ್ರಯ್ಯ,  ಮಾಜಿ ಕೆ.ಎನ್.ರಾಜಣ್ಣ,  ಮತ್ತು ಹನುಮಂತೇಗೌಡರವರು ಸೇರಿದಂತೆ  ಹಲವು ಮುಖಂಡರುಗಳು ಭಾಗವಹಿಸಿದ್ದರು. ಪ್ರತಿ ವರ್ಷದಂತೆ ಮಂಗಳಮ್ಮ ನರಸಯ್ಯ ಕುಟುಂಬದಿಂದ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ವರದಿ: ದೊಡ್ಡೇರಿ ಮಹಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಬೆಂಗಳೂರು:  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯು ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳೆಯರಿಗೆ ಎಲ್ಲ ಬಸ್ ಗಳಲ್ಲಿ  ಉಚಿತ ಪ್ರಯಾಣ ಕಲ್ಪಿಸಲು ನಿರ್ಧರಿಸಿದೆ. ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಎಲ್ಲಾ ಮಹಿಳಾ ಪ್ರಯಾಣಿಕರಿಗೂ ಒಂದು ದಿನ ಉಚಿತ ಸೇವೆ ನೀಡಲು  ಸರ್ಕಾರ ಅನುಮೋದನೆ ನೀಡಿದೆ. ನಾಳೆ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬಿಎಂಟಿಸಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಮೂಲಕ ಮಹಿಳಾ  ದಿನಾಚರಣೆಗೆ ವಿಶೇಷ ಕೊಡುಗೆ ನೀಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯ, ನವದೆಹಲಿಯ ಅಧೀನ ಕಚೇರಿಯಾದ ಪರಿಶಿಷ್ಟ ಜಾತಿ, ಪಂಗಡದ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಆವರಣ, ಕೌಶಲ್ಯ ಭವನ ಹಿಂಭಾಗ ಡೈರಿ ಸರ್ಕಲ್, ಬೆಂಗಳೂರು- 560 029 ಕಚೇರಿಯು  ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗೆ ಒಂದು ವರ್ಷ ಅವಧಿಯ ವಿಶೇಷ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಜ್ಞಾನ, ಕಂಪ್ಯೂಟರ್ ಜ್ಞಾನ, ನ್ಯೂಮಿರಿಕಲ್ ಅಬಿಲಿಟಿ, ಶಾರ್ಟ್ ಹ್ಯಾಂಡ್/ಸ್ಪೆನೋಗ್ರಾಫಿ ವಿಷಯಗಳ ತರಬೇತಿ ನೀಡಲಾಗುವುದು.  ತರಬೇತಿ ಅವಧಿಯಲ್ಲಿ  ಹಾಜರಾತಿ ನಿಯಮಗಳಿಗೊಳಪಟ್ಟು ತರಬೇತಿ ಭತ್ಯೆ ನೀಡಲಾಗುತ್ತದೆ. ಅರ್ಜಿಯನ್ನು  ಕಚೇರಿಯ ಸಮಯದಲ್ಲಿ  ಸಂಪರ್ಕಿಸಿ, ಅಗತ್ಯ ದಾಖಲೆಗಳೊಂದಿಗೆ  ಏಪ್ರಿಲ್ 30ರ ಸಂಜೆ 5ರ ಒಳಗಾಗಿ ಕಚೇರಿಗೆ  ನೋಂದಾಯಿತ ಪೋಸ್ಟ್  ಅಥವಾ ಖುದ್ದಾಗಿ ಬಂದು ಸಲ್ಲಿಸಲು ತಿಳಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಯನ್ನು ಪಡೆಯಲು ಕಚೇರಿಯ ಮುಖ್ಯಸ್ಥರಾದ ಉಪ—ಪ್ರಾದೇಶಿಕ ಉದ್ಯೋಗಾಧಿಕಾರಿಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೂರವಾಣಿ ಸಂಖ್ಯೆ 080—29756192, 9916188914…

Read More

ನಾವು ಯಾವಾಗ ಬೇಕಾದರೂ ಚುನಾವಣೆ ಎದುರಿಸಲು ಸಿದ್ಧ. ಆದರೆ ಚುನಾವಣಾ ದಿನಾಂಕ ಘೋಷಣೆ ದಿನೇ ದಿನೇ ಮುಂದಕ್ಕೆ ಹೋಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿ ಕಾರಿದರು. ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಮುಂದಿನ ದಿನಗಳಲ್ಲಿ ಬಿಜೆಪಿ ಶಾಸಕರು ಕೂಡ ಕಾಂಗ್ರೆಸ್ ಸೇರುತ್ತಾರೆ. ಇವತ್ತು ಕಾಂಗ್ರೆಸ್ ಸೇರ್ಪಡೆಯಾಗುವವರ ದೊಡ್ಡಪಟ್ಟಿ ಇತ್ತು. ಕಾಂಗ್ರೆಸ್ ಸೇರುವ ಕೆಲವರ ಹೆಸರನ್ನ ಚರ್ಚೆ ಮಾಡಬೇಕಿತ್ತು ಎಂದರು. ಬಿಜೆಪಿಯವರು ಚುನಾವಣೆಗೆ ಹೋಗಬೇಕೆಂದು ಚರ್ಚೆ ಮಾಡಿದರು. ಅಧಿಕಾರಿಗಳನ್ನ ಕರೆದು ಚರ್ಚೆ ಮಾಡಿದರು. ಆದರೆ ಈಗ ಚುನಾವಣೆ ಮುಂದಕ್ಕೆ ಹಾಕಲಾಗುತ್ತಿದೆ. ಈಗ ಶಾರ್ಟ್ ಟರ್ಮ್ ಟೆಂಡರ್ ಕರೆಯುತ್ತಿದ್ದಾರೆ. ಆದಷ್ಟು ಬೇಗ ಚುನಾವಣೆ ಮಾಡಿ. ಬ್ರಹ್ಮಾಂಡ ಭ್ರಷ್ಟಾಚಾರವನ್ನ ತಡೆಯಬೇಕು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು. ಬಿಜೆಪಿಯರವಿಗೆ ನಿತ್ಯ ಜನರೇ ಶಾಕಿಂಗ್ ನ್ಯೂಸ್ ಕೊಡುತ್ತಿದ್ದಾರೆ. ಆದರೂ ಯಾವುದನ್ನ ಗಮನಿಸದೇ ಬಿಜೆಪಿಯವರು ಟೆಂಡರ್ ಕರೆಯುತ್ತಿದ್ದಾರೆ ಎಂದು ಗುಡುಗಿದ ಡಿ.ಕೆ ಶಿವಕುಮಾರ್, ಪ್ರತಿ ತಾಲ್ಲೂಕಿನಲ್ಲಿ ಸೋಲಾರ್ ತಂದಿದ್ದೇವೆ. ನಾವು…

Read More

ಸಿದ್ಧರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ಕೇವಲ ಕಾಫೀ – ತಿಂಡಿ – ಬಿಸ್ಕೆಟ್‍ ಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಈ ಸಂಬಂಧ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಎನ್.ಆರ್ ರಮೇಶ್, ಸಿದ್ಧರಾಮಯ್ಯ ಮತ್ತು ಅವರ ಕಛೇರಿಯ ಸಿಬ್ಬಂದಿವರ್ಗ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಯ ಅಂದಿನ ಅಧಿಕಾರಿಗಳು ಭಾಗಿಗಳಾಗಿ ಬೃಹತ್ ಹಗರಣ ನಡೆದಿದೆ. 2013-14 ರಿಂದ 2017-18 ರವರೆಗಿನ 05 ವರ್ಷಗಳ ಅವಧಿಯಲ್ಲಿ – ಮುಖ್ಯಮಂತ್ರಿಗಳ ಕಛೇರಿಯ ಸಭೆಗಳು ಮತ್ತು ಮುಖ್ಯಮಂತ್ರಿಗಳ ಕಛೇರಿಗೆ ವಿವಿಧ ಕಾರ್ಯಗಳ ಪ್ರಯುಕ್ತ ಹೊರಗಿನಿಂದ ಬರುವಂತಹ ಅತಿಥಿಗಳ / ಗಣ್ಯರ ಉಪಚಾರ ಕಾರ್ಯಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಲಾಗಿದೆ. ಈ 05 ವರ್ಷಗಳ ಅವಧಿಯಲ್ಲಿ ಕೇವಲ…

Read More

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಮನೆಯಲ್ಲಿ 8 ಕೋಟಿ ರೂ. ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದ ಮಾಡಾಳ್ ಮಿಸ್ಸಿಂಗ್ ಪೋಸ್ಟರ್’ ಅಭಿಯಾನ ನಡೆಯುತ್ತಿದೆ. ಪ್ರಕರಣದ ಎ1 ಆರೋಪಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕೆ ಲೋಕಾಯುಕ್ತ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಈ ಮಧ್ಯೆ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಪೋಸ್ಟರ್​​​ ಅಭಿಯಾನ‌ ನಡೆಸುತ್ತಿದ್ದು, ಮಾಡಾಳ್ ಮಿಸ್ಸಿಂಗ್ ಪೋಸ್ಟರ್ ಅಂಟಿಸುತ್ತಿದ್ದಾರೆ. ಲೋಕಾಯುಕ್ತ ಪ್ರಕರಣದಲ್ಲಿ A1 ಆರೋಪಿಯಾಗಿರುವ ಶಾಸಕ‌ ಮಾಡಾಳ್ ವಿರೂಪಾಕ್ಷಪ್ಪ 6ನೇ ದಿನವಾದರೂ ಪತ್ತೆ ಇಲ್ಲ. ಅವರನ್ನು ಹುಡುಕಿಕೊಡಿ ಎಂದು ದಾವಣಗೆರೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ನೇತೃತ್ವದಲ್ಲಿ ಅಭಿಯಾನ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮಿಸ್ಸಿಂಗ್ ಪೋಸ್ಟರ್ ಅಂಟಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಣೆಯಾದವರ ಪಟ್ಟಿ ಮಾದರಿಯಲ್ಲಿ ಪೋಸ್ಟರ್ ಅಂಟಿಸಿದ ಕಾಂಗ್ರೆಸ್, ಕೊನೆ ಬಾರಿ ಕಾಣಿಸಿಕೊಂಡಿದ್ದು ಸಿಎಂ ಕಚೇರಿಯಲ್ಲಿ.…

Read More

ಹಲವು ದಿನಗಳ ಅನಿಶ್ಚಿತತೆಯ ನಂತರ ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ಸಚಿವ ಸಂಪುಟ ಇಂದು ಅಧಿಕಾರ ವಹಿಸಿಕೊಳ್ಳಲಿದೆ. ಹಾಲಿ ಮುಖ್ಯಮಂತ್ರಿಗಳಾದ ಕಾನ್ರಾಡ್ ಸಂಗ್ಮಾ ಮತ್ತು ಸೋದರಳಿಯ ರಿಯೊ ನಾಗಾಲ್ಯಾಂಡ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೇಘಾಲಯದ ವಿವಿಧ ರಾಜಕೀಯ ಪಕ್ಷಗಳ ಒಕ್ಕೂಟವಾದ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (MDA) ಅನ್ನು ಕ್ಯಾಬಿನೆಟ್ ರಚನೆಗೆ ಮುಂಚಿತವಾಗಿ ಪುನರ್ರಚಿಸಲಾಯಿತು. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅಧ್ಯಕ್ಷತೆಯ ಸಮಿತಿಯು ಬಿಜೆಪಿ, ಯುಡಿಪಿ, ಎಚ್‌ಎಸ್‌ಪಿಡಿಪಿ ಮತ್ತು ಪಿಡಿಎಫ್‌ಗಳನ್ನು ಒಳಗೊಂಡಿದೆ. ಹೊಸ ಸಂಪುಟದಲ್ಲಿ ಸಂಗ್ಮಾ ಅವರ ಎನ್‌ಪಿಪಿ 8 ಸಚಿವರನ್ನು ಪಡೆಯಲಿದೆ. ಯುಡಿಪಿ, ಎಚ್‌ಎಸ್‌ಪಿಡಿಪಿ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ಸಿಗಲಿದೆ. ಮುಖ್ಯಮಂತ್ರಿ ಸೇರಿದಂತೆ 12 ಸಚಿವರಲ್ಲಿ 4 ಮಂದಿ ಗಾರೋ ಹಿಲ್ಸ್‌ನಿಂದ ಮತ್ತು 8 ಮಂದಿ ಖಾಸಿ-ಜೈನ್ತಿಯಾ ಹಿಲ್ಸ್‌ನವರು. 11 ಶಾಸಕರನ್ನು ಹೊಂದಿರುವ ಯುಡಿಪಿ ಮತ್ತು 2 ಶಾಸಕರನ್ನು ಹೊಂದಿರುವ ಪಿಡಿಎಫ್ ಬೆಂಬಲದೊಂದಿಗೆ ಸಂಗ್ಮಾ ಸರ್ಕಾರಕ್ಕೆ 45 ಶಾಸಕರ ಬೆಂಬಲವಿದೆ. ನಾಗಾಲ್ಯಾಂಡ್‌ನ ದೀರ್ಘಾವಧಿಯ ಮುಖ್ಯಮಂತ್ರಿ ನೆಫ್ಯೂ ರಿಯೊ…

Read More

ಬಿಜೆಪಿ ಕರ್ನಾಟಕ ಅಧ್ಯಕ್ಷ ನಳಿನ್ ಕುಮಾರ್ ಕಟ್ಟಿಲ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಮಕ್ಕಳನ್ನು ಹೊಂದುವ ಸಾಮರ್ಥ್ಯ ಇಲ್ಲದ ಕಾರಣ ರಾಹುಲ್ ಗಾಂಧಿ ಮದುವೆಯಾಗಿಲ್ಲ ಎಂದು ನಳಿನ್ ಕುಮಾರ್ ಅವಮಾನಿಸಿದ್ದಾರೆ. ಬಿಜೆಪಿಯ ಸಂಕಲ್ಪ ಯಾತ್ರೆಯ ಭಾಗವಾಗಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕರ್ನಾಟಕ ಎಂಎಲ್‌ಸಿ ಮಂಜುನಾಥ್ ಅವರನ್ನು ಉಲ್ಲೇಖಿಸಿ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆ. ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಈ ಹಿಂದೆ ಕೋವಿಡ್ ಲಸಿಕೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದರು. ಲಸಿಕೆ ಹಾಕಿದರೆ ಮಕ್ಕಳಾಗುವುದಿಲ್ಲ ಎಂದರು. ಆದರೆ ನಂತರ ಅವರು ಲಸಿಕೆ ತೆಗೆದುಕೊಂಡರು. ರಾಹುಲ್ ಗಾಂಧಿ ಮದುವೆಯಾಗದೇ ಇರಲು ಅವರಿಗೆ ಮಕ್ಕಳಾಗುವ ಸಾಮರ್ಥ್ಯ ಇಲ್ಲದಿರುವುದೇ ಕಾರಣ ಎಂದು ಎಂಎಲ್ ಸಿ ಮಂಜುನಾಥ್ ಕಳೆದ ದಿನ ಹೇಳಿದ್ದರು. ನಳಿನ್‌ಕುಮಾರ್‌ ನಿಂದನೆ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದರು. ನಳಿನ್ ಕುಮಾರ್ ಅವರಿಗೆ ಗಂಭೀರ ಮಾನಸಿಕ ಸಮಸ್ಯೆಗಳಿವೆ ಎಂದು ಕಾಂಗ್ರೆಸ್ ಶಾಸಕ ಮತ್ತು ರಾಜ್ಯ ಸಂವಹನ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಟ್ವೀಟ್…

Read More