Author: admin

ಬಿಟಿಎಂ ಬಡವಣೆಯಲ್ಲಿ ಶ್ರೀರಾಮ್ ನವಮಿಯನ್ನು ಸಂಭ್ರಮ ಮತ್ತು ಶುದ್ಧ ಭಕ್ತಿಯಿಂದ ಆಚರಣೆ ಮಾಡಲಾಯಿತು. ರಾಮನವಮಿ ಪ್ರಯುಕ್ತ ಅಲ್ಲಲ್ಲಿ ಅರವಂಟಿಕೆ ಸ್ಥಾಪನೆ ಮಾಡಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಮಜ್ಜಿಗೆ ಕೋಸಂಬರಿ ಹಾಗೂ ಪಾನಕ ವಿತರಸಲಾಯಿತು. ಬಿಟಿಎಂ ಲೇಔಟ್ ನಲ್ಲಿ ಶ್ರೀ ಗುರು ರಾಘವೇಂದ್ರ ಆಶ್ರಯ ಫೌಂಡೇಶನ್ ವತಿಯಿಂದ ಭಕ್ತರಿಗೆ ವಿಶೇಷ ರೀತಿಯಲ್ಲಿ ಅನ್ನದಾನ  ವಿತರಣೆ ಮಾಡಲಾಯಿತು. ಜಾತಿ ಧರ್ಮ ಬಿಟ್ಟು ಸರ್ವರೂ ಬಂದು ಮಜ್ಜಿಗೆ, ಪಾನಕ, ಕೋಸಂಬರಿ ತೆಗೆದುಕೊಂಡು ಹೋದರು. ಈ ಹಬ್ಬಕ್ಕೆ ವಿಶೇಷ ಏನೆಂದರೆ ಬೇಸಿಗೆಯಲ್ಲಿ ಜನ ಕುಡಿಯುವ ನೀರಿಗಾಗಿ ಪರದಾಟ ಮಾಡುತ್ತಿರುವ ಸಂದರ್ಭದಲ್ಲಿ ಶ್ರೀರಾಮ್ ನವಮಿ ಹಬ್ಬದ ಹೆಸರಲ್ಲಿ ದಣಿದವರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ಕೊಟ್ಟು ಅವರ ದಣಿವನ್ನು ನೀಗಿಸುವುದು. ವರದಿ : ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಆಗಿದ್ದು, ಸದ್ಯದಲ್ಲೇ ಅಭ್ಯರ್ಥಿಗಳ ಕುರಿತು ಸಂಸದೀಯ ಮಂಡಳಿ ತೀರ್ಮಾನ ಮಾಡಲಿದೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ರಾಜ್ಯದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʻಜಗನ್ನಾಥ ಭವನʼದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭ್ಯರ್ಥಿಗಳ ಘೋಷಣೆಯಾದ ನಂತರ ಚುನಾವಣೆ ಮುಗಿಯುವವರೆಗೆ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ನಾನು, ನಮ್ಮ ಸಂಸದರು ಪ್ರವಾಸ ಮಾಡಲಿದ್ದೇವೆ ಎಂದು ಹೇಳಿದರು. ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ, ಅಷ್ಟೇ ಖಚಿತವಾಗಿ ನಾವು ಸ್ಪಷ್ಟ ಬಹುಮತದೊಂದಿಗೆ ಈ ಚುನಾವಣೆಯಲ್ಲಿ ಸರ್ಕಾರ ರಚಿಸುತ್ತೇವೆ. ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ನಾಯಕರು ಬಿಜೆಪಿಯಲ್ಲಿದ್ದು, ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಿಗೆ ದೇವದುರ್ಲಭ ಸ್ವಾಗತ ಲಭಿಸುತ್ತಿದೆ. 4 ತಂಡಗಳ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ, ಸಾರ್ವಜನಿಕ ಸಭೆಗಳಲ್ಲಿ ಸೇರಿದ ಜನರನ್ನು ಗಮನಿಸಿ ಕಾಂಗ್ರೆಸ್‍ನವರು ದಿಗ್ಭ್ರಾಂತರಾಗಿದ್ದಾರೆ. ಜನ ಇವತ್ತು ಮೋದಿಜಿ, ಬಿಜೆಪಿ ಪರ ಇದ್ದಾರೆ ಎಂಬುದು…

Read More

ಮಧ್ಯಪ್ರದೇಶ: ಶ್ರೀರಾಮ ನವಮಿ ಆಚರಣೆ ವೇಳೆ ಭಾರೀ ಅವಘಡ ಸಂಭವಿಸಿದ್ದು, ಮಧ್ಯ ಪ್ರದೇಶದ ಇಂದೋರ್ ನ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ಕುಸಿದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ. ರಾಮನವಮಿ ಪ್ರಯುಕ್ತ ಹೆಚ್ಚಿನ ಜನರು ದೇವಸ್ಥಾನದಲ್ಲಿ ಸೇರಿದ್ದರು. ಜನರ ಭಾರ ಸಹಿಸಲು ಸಾಧ್ಯವಾಗದೇ ದೇವಸ್ಥಾನದ ಮೆಟ್ಟಿಲುಬಾವಿ ಕುಸಿದಿದೆ ಎಂದು ಹೇಳಲಾಗಿದೆ. ಬಾವಿಯ ಮೇಲ್ಭಾಗ ಕುಸಿದಿದ್ದು, ಪರಿಣಾಮವಾಗಿ ಮಕ್ಕಳು ಮಹಿಳೆಯರು ಸೇರಿದಂತೆ ಹಲವು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯಕ ಭರದಿಂದ ಸಾಗಿದೆ. ಇದೊಂದು ದುರದೃಷ್ಟಕರ ಘಟನೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜನರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಮೇ 10 ನಡೆಯಲಿರುವ  ಚುನಾವಣೆ ಎದುರಿಸಲು   ಬಿಜೆಪಿ   ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಬಲಿಷ್ಟ ಕೇಡರ್ ಇರುವ, ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಈಗಾಗಲೇ ಹಲವಾರು ಅಭಿಯಾನ ಮಾಡಿದೆ ಎಂದರು ನಿರಂತರವಾಗಿ ಪಕ್ಷದ ಸಂಘಟನೆ ಮಾಡಿಕೊಂಡು ಬಂದಿದ್ದು, ಬೂತ್ ಮಟ್ಟದ ಅಭಿಯಾನ, ಮೋರ್ಚಾಗಳ ಸಮ್ಮೇಳನ,  ಸಂಕಲ್ಪ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಚುನಾವಣೆ ಎದುರಿಸಲು  ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಗುರುಗ್ರಾಮ: ಕುರ್ಚಿ ವಿಚಾರವಾಗಿ ನಡೆದ ವಾದ ವಿವಾದ ವಿಕೋಪಕ್ಕೆ ತಿರುಗಿ ಉದ್ಯೋಗಿಯ ಮೇಲೆ ಆತನ ಸಹೋದ್ಯೋಗಿ ಗುಂಡು ಹಾರಿಸಿದ ಘಟನೆ ಗುರುಗ್ರಾಮದ ರಾಮದಾ ಹೋಟೆಲ್ ಬಳಿ ನಡೆದಿದೆ. ದಾಳಿಗೊಳಗಾದ ವ್ಯಕ್ತಿಯನ್ನು ಗುರುಗ್ರಾಮ್‌ನ ಸೆಕ್ಟರ್ 9 ರ ಫಿರೋಜ್ ಗಾಂಧಿ ಕಾಲೋನಿ ನಿವಾಸಿ ವಿಶಾಲ್ (23) ಎಂದು ಗುರುತಿಸಲಾಗಿದೆ. ಹರ್ಯಾಣದ ಹಿಸಾರ್‌ ಮೂಲದ ಅಮನ್ ಜಂಗ್ರಾ ಎಂಬಾತ ಗುಂಡಿನ ದಾಳಿ ನಡೆಸಿದ ಆರೋಪಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಶಾಲ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸಹೋದರ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ್ದಾರೆ. ಮಂಗಳವಾರ ಕಚೇರಿಯಲ್ಲಿ ಕುರ್ಚಿ ವಿಚಾರವಾಗಿ ತನ್ನ ಸಹೋದ್ಯೋಗಿ ಅಮನ್ ಜಂಗ್ರಾ ಅವರೊಂದಿಗೆ ವಾಗ್ವಾದ ನಡೆಸಿರುವುದಾಗಿ ವಿಶಾಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬುಧವಾರ, ಅವರು ಅದೇ ವಿಷಯದ ಬಗ್ಗೆ ಮತ್ತೆ ವಾಗ್ವಾದ ನಡೆಸಿದರು ಮತ್ತು ನಂತರ ಅವರು ಕಚೇರಿಯಿಂದ ಹೊರನಡೆದರು ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಮನ್ ಹಿಂದಿನಿಂದ ಬಂದು ಪಿಸ್ತೂಲ್ ತೆಗೆದುಕೊಂಡು ತನ್ನ ಮೇಲೆ ಗುಂಡು ಹಾರಿಸಿ…

Read More

ಚಿಕ್ಕನಂದಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಗುದ್ದಲಿ ಪೂಜೆಯನ್ನು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷರು ಹೆಚ್.ಸಿ.ನರಸಿಂಹಮೂರ್ತಿ ನೆರವೇರಿಸಿದರು. ಬಳಿಕ ಮಾತನಾಡಿದ ಅವರು,  “ಇವತ್ತಿನ ದಿನ ಪ್ರತಿಯೊಂದು ಹಳ್ಳಿಗಳಲ್ಲಿ ದೇವಸ್ಥಾನದ ಬದಲು ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮಾಡುತ್ತಿರುವುದು ಹೆಚ್ಚಾಗಿ ಕಾಣುತ್ತಿದ್ದೇವೆ.  ಏಕೆಂದರೆ ನಾವು ಇವತ್ತು ಸಮಾನತೆಯಿಂದ ವಿದ್ಯೆಯನ್ನು ಕಲಿತು ಒಳ್ಳೆಯ ಹುದ್ದೆಯನ್ನು ಪಡೆದು ಸ್ವತಂತ್ರವಾಗಿ   ಬದುಕುತ್ತಿದ್ದೇವೆ ಅಂದ್ರೆ ಅದಕ್ಕೆ ಸಂವಿಧಾನವೇ ಕಾರಣ ಎಂದರು. ಸಂವಿಧಾನ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಚಾರ, ಚಿಕ್ಕನಂದಿ ಗ್ರಾಮದ ಅಂಬೇಡ್ಕರ್ ಪುತ್ಥಳಿಗೆ ನನ್ನ ಕೈಲಿ ಆದ ಸಹಾಯ ಮಾಡ್ತೀನಿ, ಇವತ್ತು ನಾವು ಸಮಾನತೆಯಿಂದ ಎಲ್ಲರಂತೆ ಬದುಕಬೇಕೆಂದರೆ ಅದೊಂದೇ ಅಸ್ತ್ರ. ವಿದ್ಯಾ, ನಿಮ್ಮ ಮಕ್ಕಳನ್ನ ಹೆಚ್ಚು ವಿದ್ಯಾವಂತರಾಗಿ ಮಾಡಿ, ಒಳ್ಳೆಯ ಹುದ್ದೆಗೆ ಹೋಗುವುದಕ್ಕೆ ಸಂಪೂರ್ಣ ಬೆಂಬಲ ಕೊಡಿ  ಹಾಗೂ ಅಂಬೇಡ್ಕರ್ ಭವನಕ್ಕೆ ಅನುದಾನ ತರಿಸುವಲ್ಲಿ ಸಂಪೂರ್ಣ ಬೆಂಬಲ ಕೊಡುತ್ತೇನೆ‌ ನಿಮ್ಮ ಗ್ರಾಮದ ಕಷ್ಟ ಸುಖಗಳಿಗೆ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದರು. ಪುರಸಭೆ ಸದಸ್ಯ…

Read More

ಬೆಂಗಳೂರು: ಗುಬ್ಬಿ ಶ್ರೀನಿವಾಸ್ ಅವರು ಇಂದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದು, ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ನೊಳಗೆ ಅಸಮಾಧಾನ ಸ್ಫೋಟಗೊಂಡಿದೆ. ಹೌದು…! ವರದಿಗಳ ಪ್ರಕಾರ,  ತುಮಕೂರಿನ ಪ್ರಭಾವಿ ರಾಜಕಾರಣಿ, ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ, ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ಅವರಿಂದ ಪಕ್ಷವು ಯಾವುದೇ ಅಭಿಪ್ರಾಯ ಪಡೆಯದೇ ಗುಬ್ಬಿ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ ಅನ್ನೋ ಅಸಮಾಧಾನ ಕೇಳಿ ಬಂದಿದೆ. ಗುಬ್ಬಿ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಕಾರ್ಯಕ್ರಮಕ್ಕೆ ಜಿ.ಪರಮೇಶ್ವರ್ ಅವರನ್ನು ಆಹ್ವಾನಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎನ್ನುವ ಅಸಮಾಧಾನ ಪಕ್ಷದೊಳಗೆ ಕೇಳಿ ಬಂದಿದೆ. ಈ ಹಿಂದೆ ಕೂಡ ಪರಮೇಶ್ವರ್‌ ಅವರ ಗಮನಕ್ಕೆ ಬಾರದೇ ಕಾಂಗ್ರೆಸ್ ನಲ್ಲಿ ಹಲವಾರು ಚಟುವಟಿಕೆಗಳನ್ನು ಮಾಡಲಾಗಿತ್ತು. ಪಕ್ಷದ ಹಿರಿಯ ಮುಖಂಡರನ್ನು ಕಡೆಗಣಿಸುವ ಕಾಂಗ್ರೆಸ್ ನಾಯಕರ ನಡೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಧುಗಿರಿ: ದಸ್ತಾವೇಜು ಬರಹಗಾರರ ವತಿಯಿಂದ ಮಧುಗಿರಿಯ ಸಬ್ ರಿಜಿಸ್ಟರ್ ಕಚೇರಿ ಬಳಿಯಲ್ಲಿ ಶ್ರೀ ರಾಮನವಮಿ ಪೂಜೆಯನ್ನು ನೇರವೇರಿಸಲಾಯಿತು. ಪೂಜೆಯನ್ನು ದಾಸ್ತಾವೇಜು ಬರಹಗಾರರಾದ ಸಂಘದ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಸಹ ರಾಮೋತ್ಸವ ಪೂಜೆಯನ್ನು ಬಹಳ ಸರಳವಾಗಿ ಆಚರಿಸಲಾಯಿತು. ಇದೇ ವೇಳೆ ಭಕ್ತಾದಿಗಳಿಗೆ ಹೆಸರು ಬೆಳೆ, ಕೋಸಂಬರಿ ಪಾನಕ, ಮಜ್ಜಿಗೆಯ ಪ್ರಸಾದವನ್ನು ವಿತರಿಸಿದ್ದರು. ದಾಸ್ತವೇಜು ಬರಹಗಾರರ ಕೆ.ಗೋವಿಂದಯ್ಯ, ಪ್ರಸನ್ನಕುಮಾರ್, ವೀರ ನಾಗಪ್ಪ, ಲಿಂಗಪ್ರಸಾದ್, ವೆಂಕಟೇಶ್ ಬಾಬು, ಅರ್ಚಕರಾದ ವೀರೇಶ್, ಕೆ.ಜಿ. ಲಕ್ಷ್ಮಿ ನಾರಾಯಣಪ್ಪ ಹಾಗೂ ಭಕ್ತಾದಿಗಳು ಹಾಜರಿದ್ದರು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪಶ್ಚಿಮ ಬಂಗಾಳದಲ್ಲಿ ರಾಮ ನವಮಿ ಆಚರಣೆಯ ಸಂದರ್ಭದಲ್ಲಿ ಶಸ್ತ್ರಸಜ್ಜಿತ ಯುವಕರ ಶೌರ್ಯ. ಬುಧವಾರ ಸಂಜೆ ಬಂಗಾಳದ ಹೌರಾದಲ್ಲಿ ಯುವಕರ ಗುಂಪು ಕತ್ತಿ ಮತ್ತು ಹಾಕಿ ಸ್ಟಿಕ್‌ಗಳೊಂದಿಗೆ ಬೀದಿಗಿಳಿದಿದೆ. ರಾಮನವಮಿ ರ್ಯಾಲಿಯಲ್ಲಿ ವಿವೇಕಾನಂದ ಸೇವಾ ಸಂಘದ ಯುವಕರು ಕತ್ತಿ, ಹಾಕಿ ಸ್ಟಿಕ್‌ಗಳನ್ನು ಗಾಳಿಯಲ್ಲಿ ಬೀಸುವ ಮೂಲಕ ಭಯಭೀತರಾದರು. ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಹೌರಾದ ಸಂಕ್ರೈಲ್ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಶಸ್ತ್ರಸಜ್ಜಿತ ಯುವಕರು ರ್ಯಾಲಿಯನ್ನು ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಾಜಗಂಜ್ ರಥ ಥಾಲ್ ಮೇಳ ಮೈದಾನದಿಂದ ಮಾಣಿಕಪುರ ಬೆಲ್ತಳದವರೆಗೆ ಎರಡು ಕಿಲೋಮೀಟರ್ ವರೆಗೆ ಮೆರವಣಿಗೆ ಸಾಗಿತು. ರಾಮ ನವಮಿ ಆಚರಣೆಯ ಅಂಗವಾಗಿ, ಹಿಂದೂ ಸಂಘಟನೆಗಳು ರಾಜ್ಯದ ಐನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಮೆರವಣಿಗೆ ನಡೆಸಲು ಯೋಜಿಸಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಫಿಕ್ಸ್ ಆಗಿದ್ದು ನಿನ್ನೆಯಿಂದಲೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಮುಗಿಯುವವರೆಗೆ ಬೆಂಗಳೂರಿನಲ್ಲಿ ಲೈಸೆನ್ಸ್ ಹೊಂದಿರುವ ಶಸ್ತ್ರಾಸ್ತ್ರ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಆದೇಶಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ನೀತಿ ಸಂಹಿತೆ ಮುಕ್ತಾಯದವರೆಗೆ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರ ಒಪ್ಪಿಸಬೇಕು. ಮೇ 16ರ ಬಳಿಕ ಸಾರ್ವಜನಿಕರು ಶಸ್ತ್ರಾಸ್ತ್ರಗಳನ್ನ ವಾಪಸ್ ಪಡೆಯಬಹುದು ಎಂದು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More