Subscribe to Updates
Get the latest creative news from FooBar about art, design and business.
- ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ
- ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಡಿಸಿಎಂ ಡಾ. ಜಿ. ಪರಮೇಶ್ವರ್ ಭೇಟಿ
- ರೀಲ್ಸ್ ಹುಚ್ಚು: ಅಪಾಯಕಾರಿ ಬಂಡೆ ಹತ್ತಿ ಕೆಳಗೆ ಬಿದ್ದ ಉಪನ್ಯಾಸಕ
- ಪಾವಗಡ: ನುಡಿದಂತೆ ನಡೆದ ಸ್ವತಂತ್ರ ಅಭ್ಯರ್ಥಿ ಚೇತನ್ ಬಾಬು; ಬಸ್ ನಿಲ್ದಾಣಕ್ಕೆ ಆಸನಗಳ ಕೊಡುಗೆ!
- ವೈ.ಎನ್.ಹೊಸಕೋಟೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿ: ಬಸ್ ನಿಲ್ದಾಣ, ಮನೆ–ಮನೆಗೆ ತೆರಳಿ ಮಕ್ಕಳಿಗೆ ಹನಿ ಹಾಕಿದ ಆರೋಗ್ಯ ತಂಡ
- ಕೆಂಪೇಗೌಡರ ಜನಪರ ಆಡಳಿತ ರಾಜಕಾರಣಿಗಳಿಗೆ ಮಾದರಿ: ಶಾಸಕ ಬಿ.ಸುರೇಶ್ ಗೌಡ
- ಸತ್ತಿ ದೇವರ ಮಹೋತ್ಸವ ಊಟ ಸೇವಿಸಿ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಪಾವಗಡದಲ್ಲಿ ಆತಂಕ
- ವೈಜ್ಞಾನಿಕ ಹಾಗೂ ಜಾತ್ಯತೀತ ಮನೋಭಾವದ ಮಾದರಿ ನಗರ ನಿರ್ಮಾತೃ ಕೆಂಪೇಗೌಡ
Author: admin
ಸಂಸತ್ತಿನಲ್ಲಿ ಅದಾನಿ-ರಾಹುಲ್ ಗಾಂಧಿ ಅನರ್ಹತೆ ವಿಚಾರಗಳು ಇಂದೂ ಮುಂದುವರೆಯಲಿವೆ. ಸದನವನ್ನು ಮುಂದೂಡಿ ಎರಡೂ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದವು. ತುರ್ತು ಪ್ರಸ್ತಾವನೆ ಮಂಡನೆಗೆ ಅವಕಾಶ ನೀಡದಿದ್ದರೆ ಸದನದಲ್ಲಿ ಕೊನೆಯ ದಿನದಂತೆಯೇ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಲಿವೆ. ನಿನ್ನೆ ಪ್ರತಿಪಕ್ಷಗಳ ಪ್ರತಿಭಟನೆ ಕೇಂದ್ರ ಹಂತವನ್ನು ಪಡೆದುಕೊಂಡಿದೆ. ಇದೇ ವೇಳೆ ಪೀಠದ ಮೇಲೆ ಪೇಪರ್ ಎಸೆದ ಕಾಂಗ್ರೆಸ್ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸರ್ಕಾರವು ಈ ನಿಟ್ಟಿನಲ್ಲಿ ಶಿಸ್ತು ಕ್ರಮವನ್ನು ನಿರ್ಣಯವಾಗಿ ಪ್ರಸ್ತಾಪಿಸಬಹುದು. ಇಂದು ವಿಧಾನಸಭೆ ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷಗಳ ಸಭೆ, ಪ್ರತಿಭಟನೆ ನಡೆಯಲಿದೆ. ನಿನ್ನೆ ಕೇಂದ್ರಕ್ಕೆ ಬಂದ ವಿಪಕ್ಷ ಸದಸ್ಯರು ರಾಹುಲ್ ಅನರ್ಹಗೊಳಿಸಿದ ಅಧಿಸೂಚನೆ ಸೇರಿದಂತೆ ಪತ್ರಗಳನ್ನು ಹರಿದು ಹಾಕಿದರು. ನಂತರ ಎರಡು ಗಂಟೆಯವರೆಗೆ ಚರ್ಚೆ ಕಲಾಪವನ್ನು ಸ್ಥಗಿತಗೊಳಿಸಲಾಯಿತು. ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಮತ್ತೆ ಸೇರಲಿದೆ. ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷದ ಪೀಠದ ಸದಸ್ಯರು ಕೇಂದ್ರದ ವೇದಿಕೆಗೆ ಬಂದು ಕುರ್ಚಿಯತ್ತ ಪೇಪರ್…
ತ್ರಿರಾಷ್ಟ್ರ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆದ್ದುಕೊಂಡಿದೆ. ಭಾರತ ಎರಡು ಗೋಲುಗಳಿಂದ ಕಿರ್ಗಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮ್ಯಾನ್ಮಾರ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಮತ್ತೊಂದು ದೇಶವಾಗಿದೆ. ಭಾರತ ಪರ ಸಂದೇಶ್ ಜಿಂಗನ್ ಮತ್ತು ಸುನಿಲ್ ಛೆಟ್ರಿ ಗೋಲು ಗಳಿಸಿದರು. ಪೆನಾಲ್ಟಿ ಮೂಲಕ ಸುನಿಲ್ ಛೆಟ್ರಿ ಗೋಲು ದಾಖಲಿಸಿದರು. ಮೊದಲ ಪಂದ್ಯದಲ್ಲಿ ಭಾರತ ಯಾವುದೇ ಗೋಲ್‌ನಿಂದ ಮ್ಯಾನ್ಮಾರ್ ಅನ್ನು ಸೋಲಿಸಿತು. ಇಂಫಾಲದ ಖುಮಾನ್ ಲುಂಪಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಿರುಸಿನ ಪಂದ್ಯವಾಗಿತ್ತು. 34ನೇ ನಿಮಿಷದಲ್ಲಿ ಡಿಫೆಂಡರ್ ಸಂದೇಶ್ ಜಿಂಕನ್ ಭಾರತದ ಪರ ಮೊದಲ ಗೋಲು ದಾಖಲಿಸಿದರು. ಮೊದಲ ಗೋಲು ಫ್ರೀ ಕಿಕ್‌ನಿಂದ ದಾಖಲಾಗಿತ್ತು. ಬ್ರೆಂಡನ್ ಅವರ ಕಿಕ್ ಅನ್ನು ಗಿಂಗನ್ ನೆಟ್‌ಗೆ ತಿರುಗಿಸಿದರು. ಬ್ರೆಂಡನ್ ಅವರ ಕಿಕ್‌ಗೆ ಸರಿಯಾಗಿ ಓಡಿ ಬಂದ ಜಿಂಗನ್, ನೆಲಕ್ಕೆ ಅಪ್ಪಳಿಸುವ ಮೊದಲು ಚೆಂಡನ್ನು ಒದ್ದು ನೆಟ್‌ಗೆ ತಿರುಗಿಸಿದರು. ಮೊದಲಾರ್ಧದಲ್ಲಿ ಭಾರತ ಒಂದು ಗೋಲಿನ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಭಾರತ ತನ್ನ ಮುನ್ನಡೆಯನ್ನು ವಿಸ್ತರಿಸಿತು. 84ನೇ ನಿಮಿಷದಲ್ಲಿ ಸುನಿಲ್‌ಛೆಟ್ರಿ ಪೆನಾಲ್ಟಿ…
ಬೆಂಗಳೂರು : ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಗೆ ಸೇರ್ಪಡೆಯಾಗಿರುವ ತಳವಾರ ಮತ್ತು ಪರಿವಾರ ಜಾತಿಗಳನ್ನು ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ತೆಗೆದುಹಾಕಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿನ ಪರಿವಾರ ಮತ್ತು ತಳವಾರ ಜಾತಿಗಳನ್ನು ಸೇರಿಸಿರುವ ಹಿನ್ನೆಲೆಯಲ್ಲಿ ಸದರಿ ಜಾತಿಗಳಿಗೆ ಸರ್ಕಾರವು ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳನ್ನು ವಿತರಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿರುತ್ತದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಳೆದ ಎರಡು ಮೂರು ದಿನಗಳಿಂದ ನಮ್ಮ ಶಾಸಕರಿಗೆ ಫೋನ್ ಮಾಡುತ್ತಿದ್ದಾರೆ. ಟಿಕೆಟ್ ಭರವಸೆ ನೀಡುತ್ತಿದ್ದಾರೆ. ಹತಾಶೆಯಿಂದ ನಮ್ಮ ಪಕ್ಷದವರನ್ನು ಸಂಪರ್ಕಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ ಎನ್ನುವುದಕ್ಕೆ ಇದೆ ಸಾಕ್ಷಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಡಿಪಿಐ ಸಂಘಟನೆಯಿಂದ ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಮಾತನಾಡಿ, ಎಸ್ ಡಿಪಿಐನವರು ನನನ್ನು ಹೊಗಳಲು ಸಾಧ್ಯನಾ? ಎಸ್ ಡಿಪಿಐ ಒಂದು ದೇಶದ್ರೋಹಿ ಸಂಘಟನೆ. ಅವರು ದೇಶದ ವಿರುದ್ಧ ಚಟುವಟಿಕೆ ಮಾಡುವವರು. ಭಾರತದ ದೇಶದ ಅಲ್ಪಸಂಖ್ಯಾತರ ವಿರೋಧಿಗಳೇ ಎಸ್ ಡಿಪಿಐ ನವರು. ಅವರಿಂದ ನಾನೇನು ಹೊಗಳಿಕೆ ಬಯಸಲ್ಲ. ಯಾವಾಗಲು ನಮ್ಮ ವಿರೋಧಿಗಳು ಇದ್ದಾರೆ. ಅವರ ಹೇಳಿಕೆಗೆ ಸೊಪ್ಪು ಹಾಕುವುದಿಲ್ಲ. ಖಂಡಿತವಾಗಿಯೂ ಕಾನೂನು ಕ್ರಮ ಆಗುತ್ತದೆ. ಜನ ತೀರ್ಮಾನ ಮಾಡುತ್ತಾರೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಇಂದು ಬೆಳಗ್ಗೆ 11.30ಕ್ಕೆ ಕೇಂದ್ರ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ ನಡೆಯಲಿದ್ದು, ಚುನಾವಣಾ ದಿನಾಂಕ ಘೋಷಣೆ ಮಾಡಲಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಲಿದೆ. ಇಂದೇ ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ಮೇ ಮೊದಲ ವಾರದಲ್ಲಿ ರಾಜ್ಯದ 224 ಕ್ಷೇತ್ರಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುವ ಸಂಭವವಿದೆ ಎಂದು ಕೇಂದ್ರ ಚುನಾವಣಾ ಆಯೋಗ ಎಂದು ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಬೆಳಗಾವಿ: ಕಳೆದ 5 ವರ್ಷದಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 105ಕ್ಕೂ ಹೆಚ್ಚು ದೇವಸ್ಥಾನಗಳ ನಿರ್ಮಾಣ ಇಲ್ಲವೇ, ಜೀರ್ಣೋದ್ಧಾರ ಮಾಡಲಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ಮಂಗಳವಾರ ಕ್ಷೇತ್ರದ ಸುಳಗಾ (ವೈ) ಗ್ರಾಮದ ಶ್ರೀ ಭಾವಕೇಶ್ವರಿ ದೇವಿ ಮಂದಿರದ ವಾಸ್ತುಶಾಂತಿ, ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಕ್ಷೇತ್ರ ಧಾರ್ಮಿಕವಾಗಿ ಅತ್ಯಂತ ಜಾಗ್ರತ ಕ್ಷೇತ್ರವಾಗಿದೆ. ಜನರ ಭಾವನೆಗೆ ಅನುಗುಣವಾಗಿ ಎಲ್ಲ ಜಾತಿ, ಧರ್ಮಗಳ ಧಾರ್ಮಿಕ ಕಾರ್ಯಗಳಿಗೆ ಹಣ ಒದಗಿಸಲಾಗಿದೆ. ಸ್ವಂತ ಆಸಕ್ತಿ ವಹಿಸಿ ಅತ್ಯಂತ ಗುಣಮಟ್ಟದ ಕಾಮಗಾರಿ ನಡೆಯುವಂತೆ ಗಮನಹರಿಸಲಾಗಿದೆ. ಜನರ ಸಹಕಾರವನ್ನು ಎಂದಿಗೂ ನಾನು ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಕ್ಷೇತ್ರದ ಅನೇಕ ದೇವಸ್ಥಾನಗಳನ್ನು ಧಾರ್ಮಿಕ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಅವಕಾಶವಿದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಜನರ ಜೊತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ,…
ಹೊಳೆನರಸೀಪುರ: ತಾಲೂಕಿನ ಶ್ರವಣೂರು ಗ್ರಾಮದಲ್ಲಿ ಗ್ರಾಮದ ಕೆರೆ ಹಾಗೂ ಅರಣ್ಯ ಸಮೀಪ ಇರುವ ಸರ್ಕಾರಿ ಜಾಗದಲ್ಲಿ ಸ್ಥಳೀಯ ವ್ಯಕ್ತಿಗಳಿಗೆ ಸೇರಿದ ಹಸು ಹಾಗೂ ಮೇಕೆಯನ್ನು ಚಿರತೆ ಕೊಂದು ಹಾಕಿದ ಘಟನೆ ನಡೆದಿದೆ ಪುಟ್ಟಸಾಮಿನಾಯಕ ಎಂಬುವರಿಗೆ ಸೇರಿರುವ ಹಸು ಮತ್ತು ಲೋಕೇಶ್ ಎಂಬುವರಿಗೆ ಸೇರಿರುವ ಮೇಕೆ ಮೇಯುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದ್ದು, ಮೇಕೆ ಹಾಗೂ ಹಸು ಎರಡೂ ಸಾವನ್ನಪ್ಪಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡರು. ಗ್ರಾಮಸ್ಥರು ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು. ವರದಿ: ಮಂಜು, ಶ್ರವಣೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನವದೆಹಲಿ: ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡ್ ಗೆ ಜೋಡಿಸುವ ವಿಚಾರ ದೇಶಾದ್ಯಂತ ಭಾರೀ ಚರ್ಚೆಯಲ್ಲಿರುವಾಗಲೇ, ಪಾನ್ ಆಧಾರ್ ಜೋಡಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿ ಕೇಂದ್ರ ಹಣಕಾಸು ಇಲಾಖೆ ಮಂಗಳವಾರ ಆದೇಶಿಸಿದೆ. ಈ ಹಿಂದೆ ಪ್ಯಾನ್ ಆಧಾರ್ ಜೋಡಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಲೋಕ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಗಡುವು ವಿಸ್ತರಣೆ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಈ ಮನವಿಯ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 2023ರ ಮಾರ್ಚ್ 31ರಿಂದ ಆಧಾರ್ ಗೆ ಪ್ಯಾನ್ ಲಿಂಕ್ ಮಾಡಬೇಕಾದರೆ 1000 ರೂಪಾಯಿ ದಂಡ ಪಾವತಿಸಬೇಕು. ಒಂದು ವೇಳೆ ಈ ಗಡುವಿಗಿಂತ ಮೊದಲು ಲಿಂಕ್ ಮಾಡದಿದ್ದರೆ ನಂತರ ಬರುವ ಅರ್ಜಿಗಳಿಗೆ 10 ಸಾವಿರ ರೂಪಾಯಿ ದಂಡ ವಿಧಿಸಬೇಕು ಎಂದು ಹೇಳಲಾಗಿತ್ತು. ಇದರಿಂದಾಗಿ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಜೂನ್…
ಹೆಚ್.ಡಿ.ಕೋಟೆ: ನಾವು ಯಾರು ಇಂತ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವುದಿಲ್ಲ, ಹುಟ್ಟು ಸಾವಿನ ನಡುವೆ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆರ್.ಧ್ರುವನಾರಾಯಣ್ ಅವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ದಿ.ಆರ್.ಧ್ರುವನಾರಾಯಣ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ನಡೆದು ಬಂದ ದಾರಿಯ ಬಗ್ಗೆ ಅವಲೋಕನ ಮಾಡಿಕೊಂಡಾಗ ಸಾರ್ಥಕತೆಯ ತೃಪ್ತಿ ಸಿಗುತ್ತದೆ. ನಾವು ಸಮಾಜ ಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕ ಆಗಲು ಸಾಧ್ಯ. ದಿ.ಆರ್.ಧ್ರುವನಾರಾಯಣ್ ಅವರ ಅಕಾಲಿಕ ಸಾವಿನಿಂದ ದೊಡ್ಡ ಶಕ್ತಿ ಕಳೆದುಕೊಂಡಂತೆ ಆಗಿದೆ, ಅವರ ಶಕ್ತಿ ಇನ್ನೂ ಈ ನಾಡಿಗೆ ಬೇಕಿತ್ತು, ಧ್ರುವನಾರಾಯಣ್ ಅವರಿಗೆ ಧ್ರುವನಾರಾಯಣ್ ಸಾಟಿ, ಅವರ ಜಾಗ ತುಂಬಲಿಕ್ಕೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆರ್. ಧ್ರುನಾರಾಯಣ್ ಅವರಿಗೆ ಇದ್ದ ದೂರದೃಷ್ಟಿ, ಕಾಳಜಿ ಎಲ್ಲವನ್ನೂ ಅವರ ಮಗ ದರ್ಶನ್ ಅವರಲ್ಲಿ ಕಾಣಬಹುದಾಗಿದೆ, ಎಲ್ಲಾ ರೀತಿಯ ಶಕ್ತಿ…
ತಿಪಟೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಬರುವಂತೆ ಕ್ರಮಕೈಗೊಂಡಿರುವ ರಾಜ್ಯ ಸರ್ಕಾರಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಭೇಟಿಯಾಗುವ ಮೂಲಕ ಡಾ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಅಭಿನಂದನೆ ಸಲ್ಲಿಸಿತು. ಬಿ.ಸಿ. ನಾಗೇಶ್ ರವರ ಗೃಹ ಕಚೇರಿಗೆ ಭೇಟಿ ನೀಡಿದ ಸಂಘಟನೆಯ ಮುಖಂಡರು ಸರ್ಕಾರಕ್ಕೆ ಸಚಿವರ ಮೂಲಕ ಅಭಿನಂದನೆಗಳನ್ನು ತಿಳಿಸಿದರು. ಈ ವೇಳೆ ಮಾತನಾಡಿದ ಅಧ್ಯಕ್ಷರಾದ ಮತ್ತಿಘಟ್ಟ ಶಿವಕುಮಾರ್, ಕಳೆದ 25– 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬರುತ್ತಿದ್ದು, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಬರುವಂತೆ ಮಾಡಿರುವ ಹಾಗೂ ಕಳೆದ ಮೂರು ತಿಂಗಳ ಹಿಂದೆ ಮೀಸಲಾತಿ ಹೆಚ್ಚಳ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಹಾಗೂ ಸಮುದಾಯದ ಸ್ವಾಮೀಜಿಗಳಾದ ಮಾಧಾರ ಚೆನ್ನಯ್ಯ ಸ್ವಾಮಿಜಿ ಅವರಿಗೂ ಎಲ್ಲಾ ನನ್ನ ಎಲ್ಲಾ ದಲಿತ ಸಂಘಟನೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ. ತಾಲ್ಲೂಕು ಉಪಾಧ್ಯಕ್ಷರಾದ ಗುರುಗದಹಳ್ಳಿ ಮಂಜುನಾಥ್, ತಾಲೂಕು ಸಂಘಟನಾ ಅಧ್ಯಕ್ಷರಾದ ಅಶೋಕ್ ಬಳ್ಳೇಕೆರೆ, ತಾಲೂಕು ಖಜಾಂಚಿ…