Author: admin

ದೆಹಲಿಯಲ್ಲಿ ನೈಜೀರಿಯಾದ ಯುವಕನೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪೋಷಕರ ಸಾವಿನ ಸುದ್ದಿ ಕೇಳಿ 37 ವರ್ಷದ ಯುವಕ ಮನೆಯ ಎರಡನೇ ಮಹಡಿಯ ಬಾಲ್ಕನಿಯಿಂದ ಜಿಗಿದಿದ್ದಾನೆ. ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಯತ್ನದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ಮಾರ್ಚ್ 18 ರಂದು ಈ ಘಟನೆ ನಡೆದಿದೆ. 37 ವರ್ಷದ ಎನ್ಡಿನೋಜುವೊ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಿರುಚಿಕೊಂಡ ನಂತರ ಎರಡನೇ ಮಹಡಿಯ ಬಾಲ್ಕನಿಯಿಂದ ಜಿಗಿದಿದ್ದಾನೆ. ಒಬ್ಬ ವ್ಯಕ್ತಿ ಅವನಿಗೆ ಸಹಾಯ ಮಾಡಲು ಬಂದನು. ಯುವಕರು ಆತನನ್ನು ಹಿಡಿದು ಬಿಡಲು ನಿರಾಕರಿಸಿದರು. ನೈಜೀರಿಯಾ ಪ್ರಜೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಸಹಾಯಕ ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಸುತ್ತಮುತ್ತಲಿನ ಜನರು ಜಮಾಯಿಸಿ ಸಹಾಯಕನನ್ನು ಬಿಡಿಸಲು ಯುವಕರನ್ನು ದೊಣ್ಣೆ ಇತ್ಯಾದಿಗಳಿಂದ ಹೊಡೆದು ಒದ್ದರು. ನೈಜೀರಿಯನ್ ಪ್ರಜೆಯನ್ನು ನಂತರ ಪೊಲೀಸರು ಬಂಧಿಸಿ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ಸ್ಥಳಾಂತರಿಸಿದರು. ಎನ್ಡಿನೊಜುವೊಗೆ ಸಣ್ಣಪುಟ್ಟ ಗಾಯಗಳು ಮತ್ತು ಕಾಲು ಮುರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಮಲಯಾಳಂ ಆಟಗಾರ ಸಂಜು ಸ್ಯಾಮ್ಸನ್ ಬಿಸಿಸಿಐ ಜೊತೆ ವಾರ್ಷಿಕ ಒಪ್ಪಂದವನ್ನು ಪಡೆದರು. ಇತ್ತೀಚಿನ ವಾರ್ಷಿಕ ಒಪ್ಪಂದದಲ್ಲಿ ಸಂಜು ಕೂಡ ಸೇರಿದ್ದಾರೆ. ಸಂಜು ರೂ.1 ಕೋಟಿ ವೇತನದೊಂದಿಗೆ ಸಿ ದರ್ಜೆಯಲ್ಲಿದ್ದಾರೆ. ಸದ್ಯ ಐಪಿಎಲ್‌ಗೂ ಮುನ್ನ ಆಟಗಾರ ರಾಜಸ್ಥಾನ ರಾಯಲ್ಸ್‌ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅತ್ಯುನ್ನತ ದರ್ಜೆಯು ಗ್ರೇಡ್ ಎ ಪ್ಲಸ್ ಆಗಿದ್ದು ವಾರ್ಷಿಕ 7 ಕೋಟಿ ರೂ. ಇದರಲ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಸೇರಿದ್ದಾರೆ. ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ 5 ಕೋಟಿ ಸಂಭಾವನೆಯೊಂದಿಗೆ ಗ್ರೇಡ್ ಎ ಮತ್ತು ಚೇತೇಶ್ವರ ಪೂಜಾರ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್ ಮತ್ತು ಶುಬ್ಮನ್ ಗಿಲ್ 3 ಕೋಟಿ ಸಂಭಾವನೆಯೊಂದಿಗೆ ಗ್ರೇಡ್ ಬಿಯಲ್ಲಿದ್ದಾರೆ. ಉಮೇಶ್ ಯಾದವ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್,…

Read More

ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿ ರದ್ದತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ. ಅಲ್ಪಸಂಖ್ಯಾತರ ಮೀಸಲಾತಿಯನ್ನು ಸಂವಿಧಾನಕ್ಕೆ ಅನುಗುಣವಾಗಿ ಜಾರಿಗೊಳಿಸಲಾಗಿಲ್ಲ, ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಹೇಳಿದರು. ಕರ್ನಾಟಕದಲ್ಲಿ ಮುಸ್ಲಿಮರಿಗೆ ಇದ್ದ ಶೇಕಡ ನಾಲ್ಕು ಮೀಸಲಾತಿಯನ್ನು ಕಳೆದ ದಿನ ರದ್ದುಗೊಳಿಸಲಾಗಿತ್ತು. ಇದನ್ನು ಆಧರಿಸಿ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ರದ್ದುಗೊಳಿಸಿದೆ. ಕಾಂಗ್ರೆಸ್ ನ ವೋಟ್ ಬ್ಯಾಂಕ್ ರಾಜಕಾರಣ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ ನೀಡಿದೆ. ಈಗ ಅದನ್ನು ರದ್ದುಗೊಳಿಸಲಾಗಿದೆ. ಧ್ರುವೀಕರಣದ ರಾಜಕೀಯದ ಭಾಗವಾಗಿ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರಿಗೆ ಶೇಕಡಾ 4 ಮೀಸಲಾತಿಯನ್ನು ಜಾರಿಗೆ ತಂದಿತು. ಅಂದರೆ ಲಿಂಗಾಯತ ಮತ್ತು ಒಕ್ಕಲಿಗರಿಗೆ ತಲಾ ಎರಡರಷ್ಟು ಮೀಸಲಾತಿ ಸಿಗಲಿದೆ. ಇಂತಹ ದೃಢ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಸರಕಾರವನ್ನು ಅಭಿನಂದಿಸುತ್ತೇನೆ” ಎಂದು ಅಮಿತ್ ಶಾ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…

Read More

ಬೆಳಗಾವಿ: “ನನ್ನ ರಾಜಕೀಯ ವಿರೋಧಿಗಳು ಕೇವಲ ರಾಜಕೀಯಕ್ಕೆ ಮಾತ್ರ ನನ್ನ ಬಗ್ಗೆ ಆಕ್ಷೇಪಗಳನ್ನು ಹುಡುಕಬೇಕೇ ಹೊರತು ಅಭಿವೃದ್ಧಿ ವಿಷಯದಲ್ಲಿ ಆಕ್ಷೇಪ ವ್ಯಕ್ತಪಡಿಸಲು ಯಾವುದೇ ಅವಕಾಶಗಳೇ ಉಳಿದಿಲ್ಲ. ಶಾಸಕತ್ವದ ಮೊದಲ ಅವಧಿಯಲ್ಲೇ ಇದನ್ನು ಸಾಧಿಸಲು ಆಶೀರ್ವದಿಸಿದ ಜನತೆಗೆ ಎಲ್ಲ ಶ್ರೇಯಸ್ಸು ಸಲ್ಲುತ್ತದೆ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್  ಹೇಳಿದರು. ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆಎ‍ಚ್‌ ಗ್ರಾಮದ ಸಿದ್ಧೇಶ್ವರ ನಗರ ಹಾಗೂ ರಜಾಕ್ ಕಾಲೋನಿಯ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಇಂದು ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ರಸ್ತೆಗಳ ನಿರ್ಮಾಣಕ್ಕೆ ಲಕ್ಷ್ಮೀ ಹೆಬ್ಬಾಳಕರ ಅವರು ಲೋಕೋಪಯೋಗಿ ಇಲಾಖೆಯಿಂದ 46 ಲಕ್ಷ ರೂ. ಬಿಡುಗಡೆ ಮಾಡಿಸಿದ್ದಾರೆ. “ಕ್ಷೇತ್ರದಲ್ಲಿ ಜಾತಿ, ಧರ್ಮ, ರಾಜಕೀಯ ಎಲ್ಲವನ್ನೂ ಬದಿಗಿಟ್ಟು ಕೇವಲ ಅಭಿವೃದ್ಧಿಯನ್ನೇ ಗುರಿಯಾಗಿರಿಸಿಕೊಂಡು ಕೆಲಸ ಮಾಡಿದ್ದೇನೆ. ಈ ಅಭಿವೃದ್ಧಿಯ ಅಭಿಯಾನದಲ್ಲಿ ಮಕ್ಕಳು, ಮಹಿಳೆಯರು ಎನ್ನದೆ ಎಲ್ಲರನ್ನೂ ಸಮಾನವಾಗಿ ಕಂಡು ಸ್ಪಂದಿಸಿದ್ದೇನೆ. ತಾರತಮ್ಯಕ್ಕೆ ಎಲ್ಲೂ ಅವಕಾಶ ನೀಡಿಲ್ಲ. ಜನಸಾಮಾನ್ಯರ ಮಧ್ಯೆ ಸಾಮಾನ್ಯಳಾಗಿ ಬೆರೆತು ಕ್ಷೇತ್ರದ ಬೆಳವಣಿಗೆಯಲ್ಲಿ…

Read More

ಹೆಚ್.ಡಿ.ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕಿನ ವಿಶ್ವಕರ್ಮಸಮಾಜದ ಅಧ್ಯಕ್ಷ ಕುಲುಮೆರಾಜುರವರ ನೇತೃತ್ವದಲ್ಲಿ  ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರರುಣಿ. ನಾನು ಮಾಡಿದ ಅಭಿವೃದ್ಧಿ ಕಾರ್ಯವನ್ನು ನೆನೆಸಿಕೊಂಡು ಅಭಿನಂದನೆ ಸಲ್ಲಿಸುತ್ತಿರುವುದು ವಿಶ್ವಕರ್ಮ ಸಮಾಜದ ಬದ್ದತೆ ಎತ್ತಿ ತೋರುತ್ತದೆ. ಹಾಗಾಗಿ ನಿಮ್ಮ ಆಶೀರ್ವಾದ ನನ್ನ ಮೇಲಿದ್ದರೆ, ನಿಮ್ಮ ಸೇವೆಯನ್ನು ನಾನು ಬದುಕಿರುವವರಗೆ ಮಾಡುತ್ತೇನೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಸಮಾಜದ ನೂರಾರು ಮುಖಂಡರು ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮದ ಗ್ರಾಮಸ್ಥರು ಭಾಗಿಯಾಗಿದ್ದರು. ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಕಾರ್ಯಕ್ರಮದಲ್ಲಿ ಎಲ್ಲಾ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು ಹಾಗೂ ವಿಶ್ವಕರ್ಮ ಸಮಾಜದ  ಅದ್ಯಕ್ಷ ಕುಲುಮೆ ರಾಜುರವರನ್ನು ಅಭಿನಂದಿಸಲಾಯಿತು ಈ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ನರಸೀಪುರ ರವಿ, ಹೆಚ್.ಸಿ.ನರಸಿಂಹಮೂರ್ತಿ, ಐಡಿಯ ವೆಂಕಟೇಶ, ನಾಗರಾಜು, ನಾಯಾಜ್, ಮೂರ್ತಿಆಚಾರ್, ನಾಗರಾಜು, ಸೌಮ್ಯಮಂಜುನಾಥ್ ಹಾಗೂ ವಿಶ್ವಕರ್ಮ ಸಮಾಜದ…

Read More

ಪಾವಗಡ: ತಾಲ್ಲೂಕಿನ ಭೂಪೂರು ಗ್ರಾಮದಲ್ಲಿ ಶನಿವಾರ ಪಲವಳ್ಳಿಯಿಂದ ಬಿ.ಕೆ.ಹಳ್ಳಿ ರಸ್ತೆ ಕಾಮಗಾರಿಗೆ ಶಾಸಕ ವೆಂಕಟರಮಣಪ್ಪ ಅವರು ಗುದ್ದಲಿ ಪೂಜೆ ನೆರವೇರಿಸಿದರು. 5 ಕೋಟಿ ವೆಚ್ಚದಲ್ಲಿ  7 ಕಿಲೋ ಮೀಟರ್ ರಸ್ತೆ ಕಾಮಗಾರಿ ಇದಾಗಿದ್ದು, ಬಹುಬೇಗನೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು. ರಸ್ತೆ ಸಮಸ್ಯೆ ಬಿಟ್ಟರೆ ಯಾವುದೇ ಸಮಸ್ಯೆ ಇದ್ದಲ್ಲಿ ತಿಳಿಸಿ ಎಂದು ಕಾರ್ಯಕ್ರಮದಲ್ಲಿದ್ದ ಸಾರ್ವಜನಿಕರಿಗೆ ಹೇಳಿದರು. ಈ ವೇಳೆ ಜೆಡಿಎಸ್ ಮುಖಂಡರಾದ ಚೆನ್ನಕೇಶವ ರೆಡ್ಡಿ ಹಾಗೂ ನಾಗಾರ್ಜುನ ರೆಡ್ಡಿ ಮತ್ತು ಅಂಬರೀಷ್, ಗೋಪಾಲ್, ರಾಮಾಂಜಿ, ಮೂತ್ಯಾಲಪ್ಪ, ಮಾರಪ್ಪ ಇನ್ನಿತರರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ  ಕಾಮನದುರ್ಗ  ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಾಂಜಿ ನಾಯ್ಕ, ಗಂಗಾಧರ ರೆಡ್ಡಿ, ಜಗನ್ನಾಥ್ ಶೆಟ್ಟಿ ಇನ್ನಿತರರಿದ್ದರು. ವರದಿ: ನಂದೀಶ್ ನಾಯ್ಕ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ಉದಾಹರಿಸಬಹುದಾದ  ಅಥವಾ ನವೀನತೆಯಿಂದ ಕೂಡಿದ ವಿಶೇಷಗಳೇನೂ ಕಾಣಿಸಲಿಲ್ಲ. ಬಹುತೇಕ ವಿಧಾನ ಸಭೆಯ ಸದಸ್ಯರು, ಕಳೆದ ಬಾರಿ ಸೋತವರಿಗೆ ಟಿಕೆಟ್ ನೀಡಲಾಗಿದೆ. ಒಂದೆರಡು ಕ್ಷೇತ್ರಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು. ಅವುಗಳೆಂದರೇ ವರುಣಾ ಮತ್ತು ಟಿ. ನರಸೀಪುರ ಕ್ಷೇತ್ರಗಳು. ಈ ಎರಡೂ ಕ್ಷೇತ್ರಗಳಲ್ಲಿ ಪುತ್ರರು ತಮ್ಮ ತಮ್ಮ ತಂದೆಯವರ ರಾಜಕೀಯ ಭವಿಷ್ಯಕ್ಕೆ ತಮ್ಮ ರಾಜಕೀಯ  ಭವಿಷ್ಯವನ್ನು ಬದಿಗಿಟ್ಟಿದ್ದಾರೆ. ಇನ್ನು ಟಿ.ನರಸೀಪುರದಲ್ಲಿ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸುವ ಕನಸು ಕಂಡಿದ್ದ ಸುನೀಲ ಬೊಸ್ ಕನಸು ಭಗ್ನವಾಗಿದೆ. ಅವರೂ ಸಹ ತಮ್ಮ ತಂದೆಗಾಗಿ ಕ್ಷೇತ್ರವನ್ನು ತ್ಯಾಗ ಮಾಡುವಂತಾಗಿದೆ. ಅವರ ತಂದೆ ಹೆಚ್ ಸಿ ಮಹದೇವಪ್ಪ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದರು. ದುರಾದೃಷ್ಟವಶಾತ್ ಆರ್. ಧ್ರುವ ನಾರಾಯಣ್ ನಿಧನದಿಂದ ಅವರ ಪುತ್ರ ದರ್ಶನ್ ಗೆ ಆ ಕ್ಷೇತ್ರ ಬಿಡಬೇಕಾಯಿತು. ಸಿದ್ದರಾಮಯ್ಯನವರು ಮತ್ತೊಂದು ಕ್ಷೇತ್ರದಲ್ಲಿ ಸೆಣಸಲು ಅಣಿಯಾಗಿದ್ದಾರೆ. ತಮ್ಮ ಮಗ ಬಿಟ್ಟುಕೊಟ್ಟ ಕ್ಷೇತ್ರವನ್ನು ಮರಳಿ ನೀಡುವ ಉದ್ದೇಶವೂ ಇದರಲ್ಲಿ ಅಡಗಿದೆ. ಆದರೆ…

Read More

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕೋವಿಡ್ ಇದ್ದಾಗ ಬರಲಿಲ್ಲ, ಪ್ರವಾಹ ಬಂದಾಗ ಬರಲಿಲ್ಲ. ಈಗ ಮಾತ್ರ ಕರ್ನಾಟಕದ ಬಗ್ಗೆ ಪ್ರೀತಿ ಹುಕ್ಕಿಹರಿಯುತ್ತಿದೆ. ಕೇವಲ ಬರುತ್ತಾರೆ, ಹೋಗುತ್ತಾರೆ ಅಷ್ಟೇ. ಶಾಸಕರು, ಸಚಿವರು ಮಾಡುವ ಉದ್ಘಾಟನೆಗೆ ಮೋದಿ ಕರೆಸುತ್ತಿದ್ದಾರೆ. ಮೋದಿ ಬಂದು ಶಂಕುಸ್ಥಾಪನೆ ಮಾಡಿ ಹೋಗುತ್ತಾರೆ ಅಷ್ಟೇ ಎಂದು ಕಿಡಿಕಾರಿದರು. ಚನ್ನಪಟ್ಟಣದ ಕಾರ್ಯಕರ್ತರು ನನಗೆ ರಾಜ್ಯ ಕಟ್ಟುವ ಕೆಲಸ ಕೊಟ್ಟಿದ್ದಾರೆ. ರಾಮನಗರ, ಚನ್ನಪಟ್ಟಣ, ಮಾಗಡಿ ಜನರು ನನ್ನ ಮನೆ ಮಗನಂತೆ ನೋಡುತ್ತಿದ್ದಾರೆ. ಯಾರು ಏನೇ ಅಪಪ್ರಚಾರ ಮಾಡಿದರು ಜನ ಕಿವಿಕೊಡಲ್ಲ. ಜನರೇ ನನಗೆ ರಕ್ಷಣೆ ನೀಡುತ್ತಾರೆ. ಎಲ್ಲವನ್ನೂ ಜನರಿಗೆ ಬಿಟ್ಟು ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಕಾಂಗ್ರೆಸ್​ನಿಂದ ಯಾರೇ ನಿಂತರೂ ತಲೆಕೆಡಿಸಿಕೊಳ್ಳಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ನಾನು ಸಾವರ್ಕರ್ ಅಲ್ಲ, ಗಾಂಧಿ ಕುಟುಂಬದ ರಾಹುಲ್. ನನ್ನ ಹೋರಾಟ ಮುಂದುವರೆಯುತ್ತೆ. ನನ್ನನ್ನು ಸಂಸದ ಸ್ಥಾನದಿಂದ ಶಾಶ್ವತವಾಗಿ ಅನರ್ಹಗೊಳಿಸಿದರೂ, ನಾನು ನನ್ನ ಹೋರಾಟವನ್ನ ಮುಂದುವರೆಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತ ನನಗೆ ಪ್ರೀತಿ ಗೌರವ ಎರಡನ್ನೂ ಕೊಟ್ಟಿದೆ. ವಯನಾಡು ಲೋಕಸಭಾ ಕ್ಷೇತ್ರದ ಜನರಿಗೆ ನಾನು ಪತ್ರ ಬರೆದಿದ್ದೇನೆ. ವಯನಾಡು ಕ್ಷೇತ್ರದ ಜನರು ತಮ್ಮ ಹೃದಯದಲ್ಲಿ ನನಗೆ ಸ್ಥಾನ ನೀಡಿದ್ದಾರೆ. ನನ್ನ ಬೆನ್ನಿಗೆ ನಿಂತಿರುವ ವಿರೋಧ ಪಕ್ಷಗಳಿಗೆ ಧನ್ಯವಾದ ಹೇಳುತ್ತೇನೆ ಸದಸ್ಯತ್ಬ ಅನರ್ಹಗೊಳಿಸಿದ್ದಾರೆ. ನನ್ನ ಹೋರಾಟ ಮುಂದುವರೆಸುತ್ತೇನೆ ಎಂದರು. ಭ್ರಷ್ಟ ಅದಾನಿ ವಿರುದ್ದ ಮೋದಿ ಯಾಕೆ ಕ್ರಮ ಕೈಗೊಂಡಿಲ್ಲ ಅಂತಾ ಜನ ಪ್ರಶ್ನಿಸುತ್ತಿದ್ದಾರೆ. ಅಂದು ನಾನು ಮಾಡಿರುವ ಭಾಷಣದಲ್ಲಿ ಯಾವುದೇ ನಿರ್ದಿಷ್ಟ ಜಾತಿಯನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿರಲಿಲ್ಲ. ಅದಾನಿ ಕುರಿತ ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಹೆದರಿದ್ದು, ಅವರ ಕಣ್ಣಲ್ಲಿ ಅದನ್ನು ಕಂಡಿದ್ದೇನೆ. ಅದಕ್ಕಾಗಿಯೇ, ಮೊದಲು ಗೊಂದಲಕ್ಕೀಡಾಗಿ ನಂತರ ನನ್ನನ್ನು…

Read More

ಬೀದರಿನ ಗುರು ನಾನಕ್ ಆಸ್ಪತ್ರೆ, ಕಲಬುರ್ಗಿಯ ಡಾ. ಓಮ್ ಇಂಡೋ ಜರ್ಮನ್ ಆಸ್ಪತ್ರೆ ಚಿತ್ತಾಪುರ, ಉಡುಪಿಯ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ, ಕೊಳ್ಳೇಗಾಲದ ‘ಹೋಲಿ ಕ್ರಾಸ್ ಕಾನ್ವೆಂಟ್ ಆಸ್ಪತ್ರೆ’. ಮತ್ತು ಕೊಪ್ಪಳದ ಗವಿಸಿದ್ಧೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ಆಂಬುಲೆನ್ಸ್ ಹಸ್ತಾಂತರಿಸಲಾಗಿದೆ. ಈ ಬಾರಿ ಪ್ರಕಾಶ್ ರಾಜ್ ಫೌಂಡೇಶನ್ ಜತೆಗೆ ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ಮೂಲಕ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅವರು ಕೂಡ ಕೈ ಜೋಡಿಸಿದ್ದಾರೆ. ಜೊತೆಗೆ ತಮಿಳಿನ ಸೋದರ ನಟ ಸೂರ್ಯ ಅವರು ತಮ್ಮ 2 ಡಿ ಎಂಟರ್ಟೈನ್ಮೆಂಟ್ ಮೂಲಕ. ನಮ್ಮ ಕನ್ನಡದ ಹೆಮ್ಮೆಯ ನಾಯಕ ನಟ ಯಶ್ ಅವರು ತಮ್ಮ ಸಂಸ್ಥೆ ‘ಯಶೋಮಾರ್ಗ’ ದ ಮೂಲಕ ಬಹಳ ದೊಡ್ಡ ಸಹಾಯವಾಗಿ ನಿಂತಿದ್ದಾರೆ. ಜೊತೆಗೆ ಅವರ ಸ್ನೇಹಿತ ನಿರ್ಮಾಪಕರಾದ ವೆಂಕಟ್ ಅವರು ತಮ್ಮ ಕೆವಿಎನ್ ಫೌಂಡೇಶನ್ ಮೂಲಕ ಬೆಂಬಲ ನೀಡಿದ್ದಾರೆ. ತಮ್ಮ ಸಜ್ಜನಿಕೆಯಿಂದ, ಧಾರಾಳ ಮನಸ್ಸಿನಿಂದ ಹಾಗೂ ಉತ್ತಮ ವ್ಯಕ್ತಿತ್ವದಿಂದಾಗಿ ನಮ್ಮೆಲ್ಲರ ನಡುವೆ ಎಂದೆಂದೂ ಮಾಸದ ನೆನಪಾಗಿ ಉಳಿದಿರುವವರು…

Read More