Author: admin

ನವದೆಹಲಿ: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಇಂದು ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ದರವನ್ನು 50ರೂ ಹೆಚ್ಚಳ ಮಾಡಲಾಗಿದೆ. ಅಲ್ಲದೇ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 350.50 ರೂ ಹೆಚ್ಚಳ ಮಾಡಲಾಗಿದೆ ಎಂದು ಎಎನ್ಐ ವರದಿ ಮಾಡಿದೆ. ಈ ಮೂಲಕ ಸಿಲಿಂಡರ್ ಬೆಲೆ ಏರಿಕೆಯಿಂದ ಜನರಿಗೆ ಬಿಗ್ ಶಾಕ್ ನೀಡಲಾಗಿದೆ.14.2 ಕೆಜಿ ದೇಶೀಯ ದ್ರವೀಕೃತ ಪೆಟ್ರೋಲಿಯಂ ಅನಿಲ (Domestic liquefied petroleum gas – LPG) ಸಿಲಿಂಡರ್ ಬೆಲೆಯನ್ನು ( cylinder Price ) ಇಂದಿನಿಂದ ಜಾರಿಗೆ ಬರುವಂತೆ 50 ರೂ.ಗೆ ಹೆಚ್ಚಿಳಮಾಡಲಾಗಿದೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ, ದೇಶೀಯ ಸಿಲಿಂಡರ್  domestic cylinder ) ಬೆಲೆ ದೆಹಲಿಯಲ್ಲಿ ಇಂದಿನಿಂದ ಪ್ರತಿ ಸಿಲಿಂಡರ್ ಗೆ 1103 ರೂ.ಗೆ ಏರಲಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ತ್ರಿಶ್ಶೂರ್ ಕಲ್ಲೇತುಮ್ಕರ ಇರಿಂಚದಪ್ಪಿಲ್ಲಿ ಶ್ರೀ ಶ್ರೀ ಕೃಷ್ಣ ದೇವಸ್ಥಾನ ತಿಟಂಪೆಟಿ ಯಂತ್ರ ಆನೆ . ‘ಇರಿನ್ಯಾಡಪಿಲ್ಲಿ ರಾಮನ್’ ಎಂಬ ಆನೆ ತೀರಿಹೋಗಿತ್ತು.ರೊಬೊಟಿಕ್ ಆನೆ ಕೇರಳದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಕೊಂಬು ಇರುವ ಹಬ್ಬಕ್ಕೆ ಮೆರುಗು ನೀಡಿದೆ. ಇರಿನಾಡಪಿಲ್ಲಿ ರಾಮನ ಎತ್ತರ ಹತ್ತೂವರೆ ಅಡಿ. 800 ಕೆಜಿ ತೂಕ. ನಾಲ್ಕು ಜನರನ್ನು ಹೊರಗೆ ಕರೆದೊಯ್ಯಬಹುದು. ನಿರ್ಮಾಣ ವೆಚ್ಚ 5 ಲಕ್ಷ ರೂ. ದುಬೈ ಉತ್ಸವಕ್ಕೆ ಯಾಂತ್ರಿಕ ಆನೆಗಳನ್ನು ತಯಾರಿಸಿದ ಹೀ ಆರ್ಟ್ಸ್ ಕ್ರಿಯೇಷನ್ಸ್ ಗೆ ಚಾಲಕುಡಿ ಪೋಟದ ಶಿಲ್ಪಿಗಳಾದ ಪಿ.ಪ್ರಶಾಂತ್, ಕೆ.ಎಂ.ಗಿನೇಶ್, ಎಂ.ಆರ್.ರಾಬಿನ್ ಮತ್ತು ಸ್ಯಾಂಟೋ ಜೋಸ್ ಅವರು 2 ತಿಂಗಳಲ್ಲಿ ಆನೆಯನ್ನು ತಯಾರಿಸಿದ್ದಾರೆ. ಆನೆಯ ತಲೆ, ಕಣ್ಣು, ಬಾಯಿ, ಕಿವಿ ಮತ್ತು ಬಾಲ ಎಲ್ಲವೂ ವಿದ್ಯುತ್‌ನಲ್ಲಿ ಕೆಲಸ ಮಾಡುತ್ತವೆ. ಇವುಗಳನ್ನು ಯಾವಾಗಲೂ ಚಲಿಸುವಂತೆ ಮಾಡಲಾಗುತ್ತದೆ. ರೋಬೋಟಿಕ್ ಆನೆಯು ಐದು ಮೋಟಾರ್‌ಗಳಿಂದ ಚಾಲಿತವಾಗಿದೆ. ಟ್ರಂಕ್ ಮಾತ್ರ ಕಂಟ್ರೋಲ್ ಆಗುವಂತೆ ನಿರ್ಮಾಣವಾಗಿದೆ. ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಎಂಬ…

Read More

ಕನಿಷ್ಠ ಒಂದು ಎಲ್‌ಐಸಿ ಪಾಲಿಸಿ ಇಲ್ಲದವರೂ ಕಡಿಮೆ ಇರುತ್ತಾರೆ. ಆದರೆ ಇದು ಪಾಲಿಸಿ ಗ್ರಾಹಕರನ್ನು ಕಡಿತಗೊಳಿಸುವ ನಗದು ಪಾವತಿಯಾಗಿದೆ. ಪ್ರೀಮಿಯಂ ಪಾವತಿಸಲು ನೀವು ಬ್ಯಾಂಕ್, ಎಲ್ಐಸಿ ಕಚೇರಿ ಅಥವಾ ಎಲ್ಐಸಿ ಏಜೆಂಟ್ ಅನ್ನು ಅವಲಂಬಿಸಬೇಕಾಗಿರುವುದು ಮುಖ್ಯ ಸವಾಲು. ಆದರೆ ಡಿಜಿಟಲ್ ಯುಗದ ಭಾಗವಾಗಿ ಎಲ್ಐಸಿ ತನ್ನನ್ನು ತಾನು ಆಧುನೀಕರಿಸಿಕೊಂಡಿದೆ. UPI ಮೂಲಕ ಗ್ರಾಹಕರು ಸುಲಭವಾಗಿ ಪಾವತಿಸಲು ಪಾಲಿಸಿ ಪ್ರೀಮಿಯಂ ಸಿದ್ಧವಾಗಿದೆ. Paytm, Phone Pay, Google Pay ನಂತಹ ಅನುಮೋದಿತ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಗ್ರಾಹಕರು ಮನೆಯಲ್ಲಿಯೇ LIC ಪಾಲಿಸಿ ಪ್ರೀಮಿಯಂ ಅನ್ನು ಪಾವತಿಸಬಹುದು. ಈ ಆಯ್ಕೆಯು ಬಹಳ ಹಿಂದಿನಿಂದಲೂ ಇದೆಯಾದರೂ, ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲ. ಹೆಚ್ಚಿನ ಜನರು ಇನ್ನೂ ಪಾಲಿಸಿ ಪಾವತಿಗಾಗಿ ಬ್ಯಾಂಕ್‌ಗಳು ಮತ್ತು ಎಲ್‌ಐಸಿ ಏಜೆಂಟ್‌ಗಳನ್ನು ಅವಲಂಬಿಸಿದ್ದಾರೆ. ಪ್ರೀಮಿಯಂ ಪಾವತಿಗಾಗಿ UPI ಅನ್ನು ಬಳಸುವುದು LIC ಅನ್ನು ಯಾವುದೇ ಇತರ ಪಾವತಿಯಂತೆ ಸುಲಭಗೊಳಿಸುತ್ತದೆ. ಪಾವತಿ ಅಪ್ಲಿಕೇಶನ್ ತೆರೆಯಿರಿ ಮತ್ತು ‘ಬಿಲ್‌ಗಳು ಮತ್ತು ರೀಚಾರ್ಜ್‌ಗಳು’ ಆಯ್ಕೆಯ ಮೇಲೆ ಕ್ಲಿಕ್…

Read More

ಖಿದ್ಮಾ ಫೌಂಡೆಶನ್ ಕರ್ನಾಟಕ ನೀಡುವ ಖಿದ್ಮಾ ಕಾವ್ಯ ಪ್ರಶಸ್ತಿಗೆ ಪ್ರೊ ಫರ್ಹಾನಾಜ಼್ ಆಯ್ಕೆ ಆಗಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲ ಇಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಸಾಹಿತ್ಯ ಕ್ಷೇತ್ರ ದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಹಲವು ಪುಸ್ತಕ ಬರೆದಿದ್ದಾರೆ ಅಲ್ಲದೆ ಹಲವು ಪತ್ರಿಕೆ ಗಳಲ್ಲಿ ಇವರ ಲೇಖನ ಗಳು ಪ್ರಕಟ ಗೊಂಡು ಜನರ ಮೆಚ್ಚುಗೆಯನ್ನು ಪಡೆದಿವೆ.ಅಲ್ಲದೆ ಸಾಮಾಜಿಕ ಜಾಗೃತಿ ಚಟುವಟಿಕೆ ಗಳಲ್ಲಿ ಇವರು ಸಕ್ರಿಯ ರಾಗಿದ್ದಾರೆ. ಇವರ ಸಾಹಿತ್ಯ ಸೇವೆ ಪರಿಗಣಿಸಿ ಖಿದ್ಮಾ ಫೌಂಡೆಶನ್ ಕರ್ನಾಟಕ ತನ್ನ 4 ನೇ ವರ್ಷದ ವಾರ್ಷಿಕೊತ್ಸವ ಪ್ರಯುಕ್ತ ಮಾರ್ಚ್ 5 ರನ್ದು ಧಾರವಾಡ ದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಇವರಿಗೆ ಖಿದ್ಮಾ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ವರದಿ : ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಕೊರಟಗೆರೆ:- ಬಿಜೆಪಿ ಪ್ರಬಲ ಆಕಾಂಕ್ಷಿತ ಅಭ್ಯರ್ಥಿ ಮುನಿಯಪ್ಪನವರು ಕ್ಷೇತ್ರದ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಾ.5 ರಂದು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಎಂದು ಬಿಜೆಪಿ ಯುವ ಮುಖಂಡ ಚೇತನ್ ಮುನಿಯಪ್ಪ ತಿಳಿಸಿದರು. ಪಟ್ಟಣದ ಕನಕದಾಸ ವೃತ್ತದ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಾನ್ವಿತ ಯುವಕ-ಯುವತಿಯರು ಸಾಕಷ್ಟು ಇದ್ದು, ಉನ್ನತ ಹಂತದ ಶಿಕ್ಷಣ ಪಡೆದರು ಒಂದು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಉಳಿದಿದ್ದಾರೆ, ಅಂತಹವರಿಗಾಗಿ ಮಾರ್ಚ್ 05 ರ ಭಾನುವಾರದಂದು ಉದ್ಯೋಗ ಮೇಳ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಉದ್ಯೋಗ ಮೇಳದಲ್ಲಿ ರಾಜ್ಯಾದ್ಯಾಂತ ಹೆಸರಾಂತ 50ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ ಎಂದು ಹೇಳಿದರು. ಉದ್ಯೋಗ ಮೇಳದಲ್ಲಿ ಭಾಗವಹಿಸುವಂತಹ ಯುವಕ-ಯುವತಿಯರು ಆಧಾರ್ ಕಾರ್ಡ್, ಬಯೋಡಟಾ, ಪೋಟೊ, ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ತಪ್ಪದೇ ತನ್ನಿ, ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಉದ್ಯೋಗ ಪತ್ರ ವಿತರಿಸಲಾಗುವುದು ಎಂದರು. ಈ ಕಾರ್ಯಕ್ರಮಕ್ಕೆ ಯುವಕರ ಕಣ್ಮಣಿ ಬಿಜೆಪಿ ಪಕ್ಷದ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರರವರು, ಆಂದ್ರಪ್ರದೇಶದ…

Read More

ಪಾವಗಡ: ತಾಲೂಕಿನಲ್ಲಿ ಇರುವಂತಹ ಎಲ್ಲಾ ಸರ್ಕಾರಿ ನೌಕರರು ಮಾರ್ಚ್ 1ನೇ ತಾರೀಕಿನಂದು ಕರ್ತವ್ಯಕ್ಕೆ ಹಾಜರಾಗದೆ ತಮ್ಮ ಮನೆಗಳಲ್ಲಿ ಇದು 7ನೇ ವೇತನ ಆಯೋಗವನ್ನು ಜಾರಿ ಗೊಳಿಸಬೇಕು ಎಂದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಪಾವಗಡ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಾ.ಜಿ. ಕಿರಣ್ ತಿಳಿಸಿದರು. ಪಾವಗಡ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನಾ ಸಮಯದಲ್ಲಿ ಕರ್ನಾಟಕ ಸರ್ಕಾರದ ಸರ್ಕಾರಿ ನೌಕರರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಗಲಿರುಳು ಸೇವೆ ಮಾಡಿರುತ್ತೇವೆ. 5 ವರ್ಷಗಳು ಮುಗಿದ ನಂತರವೂ ಸಹ ಏಳನೇ ವೇತನ ಆಯೋಗವನ್ನು ಜಾರಿ ಮಾಡದೆ ಸರ್ಕಾರ ನಿರ್ಲಕ್ಷಿಸಿದೆ. ಇದಲ್ಲದೆ ಎನ್‌ ಪಿಎಸ್ ಸಹ ರದ್ದುಗೊಳಿಸಿ ಒಪಿಎಸ್ ಜಾರಿ ಮಾಡಬೇಕು ಎಂದು ಇದೇ ವೇಳೆ ಗಟ್ಟಿ ಧ್ವನಿಯಲ್ಲಿ ಪಾವಗಡ ತಾಲೂಕಿನ ಸರ್ಕಾರಿ ನೌಕರರು ಗುಡುಗಿದ್ದಾರೆ ಎಂದರು. ಇನ್ನು ಸರ್ಕಾರ ಈ ಒಂದು ಬೇಡಿಕೆಗಳನ್ನು ಫೆಬ್ರವರಿ 27ರ ಒಳಗಾಗಿ ಈಡೇರಿಸದಿದ್ದರೆ. ಮಾರ್ಚ್ ಒಂದನೇ ತಾರೀಖಿನಿಂದ ತಾಲೂಕಿನಲ್ಲಿ ಇರುವ ಎಲ್ಲಾ ಸರ್ಕಾರಿ ಶಾಲೆಗಳು,…

Read More

ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋದಿಯಾರವರ ಬಂಧನ ಖಂಡಿಸಿ ಬೆಂಗಳೂರಿನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಎದುರು ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ವೇಳೆ ಮಾತನಾಡಿದ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ದೆಹಲಿಯ ಆಮ್‌ ಆದ್ಮಿ ಪಾರ್ಟಿ ಪಕ್ಷವನ್ನು ವಿಭಜಿಸಿ ಬಿಜೆಪಿಯಲ್ಲಿ ವಿಲೀನಗೊಳಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದರು. ಆದರೆ ಆಮ್‌ ಆದ್ಮಿ ಪಾರ್ಟಿ ನಾಯಕರಲ್ಲಿರುವ ಬದ್ಧತೆಯಿಂದಾಗಿ ಈ ಪ್ರಯತ್ನ ವಿಫಲವಾಯಿತು. ಇದರಿಂದ ಹತಾಶೆಗೊಂಡ ಬಿಜೆಪಿಯು ಬೆದರಿಕೆ ತಂತ್ರವಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಎಎಪಿ ನಾಯಕರಿಗೆ ಕಿರುಕುಳ ನೀಡುತ್ತಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ನೂತನ ಅಬಕಾರಿ ನೀತಿಯನ್ನು ದೆಹಲಿಯಲ್ಲಿ ಇನ್ನೂ ಜಾರಿಗೆ ತಂದಿಲ್ಲ ಹಾಗೂ ಹಲವು ರಾಜ್ಯಗಳಲ್ಲಿ ಇದೇ ನೀತಿ ಜಾರಿಯಲ್ಲಿದೆ. ಆದರೂ ಸಿಸೋದಿಯಾರವರನ್ನು ಕೇಂದ್ರ ಸರ್ಕಾರ ಟಾರ್ಗೆಟ್‌ ಮಾಡುತ್ತಿರುವುದು ಖಂಡನೀಯ” ಎಂದು ಹೇಳಿದರು. “ಸುಮಾರು ಒಂದು ವರ್ಷದಿಂದ ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಸಿಸೋದಿಯಾರವರನ್ನು ಗುರಿಯಾಗಿಸಿಕೊಂಡು ದಾಳಿ…

Read More

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಶ್ರೀ ಚೌಡೇಶ್ವರಿ ಶಿಕ್ಷಣ ಸಂಸ್ಥೆಯು 20 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದು, ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಟಿ.ಉಮೇಶ್ ತಿಳಿಸಿದರು. ಶಾಲೆಯಲ್ಲಿ ಹಮ್ಮಿಕೊಂಡಿದ್ದ 20ನೇ ವಾರ್ಷಿಕೋತ್ಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಗೆ ಮೂಲಭೂತ ಶಿಕ್ಷಣ ಅತ್ಯಗತ್ಯ. ಪ್ರಾಥಮಿಕ ಹಂತದಲ್ಲಿ ಕಲಿತ ಕಲಿಕೆಯು ಇಡೀ ಜೀವಮಾನದ ಕಲಿಕೆಯ ಮೇಲೆ ಗಾಢ ಪ್ರಭಾವ ಬೀರುತ್ತದೆ. ಹಾಗಾಗಿ ಮೊದಲ ಹಂತದ ಕಲಿಕೆಗೆ ನಮ್ಮ ಶಾಲೆಯಲ್ಲಿ ಹೆಚ್ಚು ಒತ್ತು ನೀಡುತ್ತಿದ್ದೇವೆ. ಇದರ ಫಲವಾಗಿ ವಿದ್ಯಾರ್ಥಿಗಳು ಮುಂದಿನ ಹಂತಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು. ಪ್ರತಿಭಾ ಕಾರಂಜಿ, ಸ್ಪರ್ಧಾಟಗಳು ಮತ್ತು ಪಠ್ಯ ಚಟುವಟಿಕೆಗಳಲ್ಲಿ ಎಲ್ಲಾ ಶಾಲೆಗಳಿಗೆ ಸ್ಪರ್ಧೆಗಳಲ್ಲಿ ಸವಾಲು ಒಡ್ಡುವ ರೀತಿಯಲ್ಲಿ ಪ್ರಗತಿ ಕಾಣುತ್ತಿರುವುದು ಹೆಮ್ಮ ಎನಿಸುತ್ತಿದೆ ಎಂದರು. ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಲೆಗಳನ್ನು ಮತ್ತು ನೃತ್ಯಗಳನ್ನು ಪ್ರದರ್ಶಿಸಿದರು. ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ರಾಮಚಂದ್ರಪ್ಪ,…

Read More

ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳ್ ನ ಕುವೆಂಪು ನಗರದ.ಎಸ್.ಕೆ.ಐ.ಹಿರಿಯ ಪ್ರಾಥಮಿಕ(ಆಂಗ್ಲ ಮಾಧ್ಯಮ) ಶಾಲೆಯಲ್ಲಿ ‘ಹೊಂಗನಸು’ ಎಂಬ ಶೀರ್ಷಿಕೆ ಅಡಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.’ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ನಾಗೇಶ್ವರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಅಚ್ಚುವ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಮಾಜ ಸೇವಕರಾದ ಆರ್.ಟಿ.ಓ.ಮಲ್ಲಿಕಾರ್ಜುನ್, ಜೀವನದಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ, ಕನಸು ಕಾಣಬೇಕು, ಕನಸ್ಸು ಕಂಡರೆ ಮಾತ್ರ ನನಸಾಗವುದು. ಮಕ್ಕಳ ಪ್ರತಿಭೆ ಕಾಣಬೇಕೆಂದರೆ ಇಂತಹ ಸುಂದರ ಸಂಜೆಯಂತಹ ಸಮಾರಂಭಗಳು ನಡೆಯಬೇಕೆಂದರು. ಶಾಲೆಯ ಮುಖ್ಯ ಶಿಕ್ಷಕಿಯಾದ ಆಯಿಶಾ ಪಾತಿಮಾ ಆವರು ಶಾಲೆಯ ವಾರ್ಷಿಕ ವರದಿ ಓದಿದರು. ಈ ಸಮಯದಲ್ಲಿ ಐದನೇಯ ತರಗತಿಯಲ್ಲಿ ನವೋದಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತ್ತು. ಈ ಸಮಯದಲ್ಲಿ ಪುಟ್ಟಾಣಿ ಮಕ್ಕಳಿಂದ ನಮ್ಮ ನಾಡಿನ ಹಿರಿಮೆಯಾದ ದೇಶ ಭಕ್ತಿ ಗೀತೆ, ರೈತ ಗೀತೆ, ಭಕ್ತಿ ಗೀತೆ, ನಾಡಗೀತೆ ಹಾಗೂ ಚಲನಚಿತ್ರಗಳಿಗೆ ಬಣ್ಣ ಬಣ್ಣದ ಉಡುಪುಗಳನ್ನು ತೊಟ್ಟು ಮಕ್ಕಳು ಕುಣಿದ್ದು…

Read More

ಹಾಸನ: ಜಿಲ್ಲೆ ಹೊಳೆನರಸೀಪುರದ ತಾಲ್ಲೂಕು ಪಂಚಾಯಿತಿಯಲ್ಲಿ ಇಂದು ವಿಕಲಚೇತನರಿಗೆ 5% ಅನಿರ್ಭಂಧಿತ ಅನುದಾನದ ಅಡಿಯಲ್ಲಿ 23 ತ್ರಿ ಚಕ್ರ ಬೈಕ್ ವಿತರಣೆ ಮಾಡಲಾಯಿತು. ಹೊಳೆನರಸೀಪುರ ಶಾಸಕರಾದ ಎಚ್.ಡಿ.ರೇವಣ್ಣನವರ ಅದ್ಯಕ್ಷತೆಯಲ್ಲಿ ಹಾಸನ ಜಿಲ್ಲಾ ಪಂಚಾಯಿತಿಯ ಸದಸ್ಯರಾದ ಭವಾನಿ ರೇವಣ್ಣನವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಹೊಳೆನರಸೀಪುರ ಕೃಷಿ ಇಲಾಖೆಯ ಆವರಣದಲ್ಲಿ ಎಚ್.ಡಿ.ರೇವಣ್ಣ ನವರು ವಿಶೇಷ ಚೇತನರಿಗೆ ಬೈಕ್ ವಿತರಣೆ ಮಾಡಿದರು. ವಿಶೇಷ ಚೇತನರ ಕಲ್ಯಾಣ ಅಧಿಕಾರಿಗಳಾದ ಅನುಪಮಾ ಅವರು ಅಂಗವಿಕಲರಿಗೆ ರಸ್ತೆಯ ನಿಯಮಾವಳಿ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ E O ಆದ ಗೋಪಾಲ್ ರವರು ಹಾಗೂ ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತರು ಕೆ.ಬಿ.ಹರೀಶ್.ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ವರದಿ: ಮಂಜು ಶ್ರವಣೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50s

Read More