Author: admin

ಮಧುಗಿರಿ:ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದಂಡಿನ ದಿಬ್ಬ ಶಾಲೆಯ ಹಳೆಯ ವಿದ್ಯಾರ್ಥಿಗಳ ವತಿಯಿಂದ ಸ್ನೇಹ ಮಿಲನ ಮತ್ತು ಗುರುವಂದನ ಕಾರ್ಯಕ್ರಮ ನಡೆಸಲಾಯಿತು. ಶಾಲಾ ಆವರಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಹಿಂದೆ ಕರ್ತವ್ಯ ನಿರ್ವಹಿಸಿದ ಎಲ್ಲಾ ಶಿಕ್ಷಕರು ಆಗಮಿಸಿ ವಿದ್ಯಾರ್ಥಿಗಳಿಂದ ಗುರುವಂದನೆಯನ್ನು ಸ್ವೀಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರಾದ ಡಾ.ಯೋಗೀಶ್ ಎಲ್. ಎನ್ . ನಿರ್ವಹಿಸಿದರು. ಸ್ವಾಗತವನ್ನು ವಿದ್ಯಾರ್ಥಿನಿ ಸಾವಿತ್ರಿರವರು ನಡೆಸಿಕೊಟ್ಟರು. ಹಳೆಯ ವಿದ್ಯಾರ್ಥಿ ಹಾಗೂ ಹೊಸಕೆರೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಸುರೇಂದ್ರ ಕುಮಾರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಮುಖ್ಯ ಉಪಾಧ್ಯಾಯರಾದ ಕಮಲಮ್ಮನವರು ಅಧ್ಯಕ್ಷತೆ ವಹಿಸಿದರು. ಹಳೆಯ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ಪಿಎಸ್ಐ ಆಗಿರುವ ಕಾವ್ಯರವರು ಕಾರ್ಯಕ್ರಮ ನಡೆಸಿಕೊಟ್ಟರು. ಬಹಳ ಅದ್ದೂರಿಯಾಗಿ ನಡೆದ ಈ ಸಮಾರಂಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಅಕ್ಕಪಕ್ಕದ ಗ್ರಾಮಸ್ಥರು ಚಂದ್ರಶೇಖರ್ ಹಾಗೂ ದೊಡ್ಡೇರಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗಮಣಿ ರಂಗಸ್ವಾಮಿರವರು ಲಕ್ಷ್ಮಿಪುರ ಹಾಗೂ ದಂಡಿನ ದಿಬ್ಬ ಗ್ರಾಮ ಪಂಚಾಯತಿ ವರದರಾಜು ಶೈಲೇಂದ್ರ ಕುಮಾರ್…

Read More

ಮೇಘಾಲಯದ ತುರಾದಲ್ಲಿ ಭೂಕಂಪ. ಭೂಕಂಪನವು ರಿಕ್ಟರ್ ಮಾಪಕದಲ್ಲಿ 3.7 ರಷ್ಟಿತ್ತು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ತುರಾದಿಂದ ಉತ್ತರಕ್ಕೆ 6.57 59 ಕಿಮೀ ದೂರದಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪದ ಆಳ 29 ಕಿಮೀ ಎಂದು ವರದಿಯಾಗಿದೆ. ಮಂಗಳವಾರ ಈಶಾನ್ಯ ಪ್ರದೇಶದಲ್ಲಿ ವರದಿಯಾದ ಎರಡನೇ ಭೂಕಂಪ ಇದಾಗಿದೆ. ಇದಕ್ಕೂ ಮೊದಲು ಮಣಿಪುರದ ನೋನಿ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪನದ ಅನುಭವವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ. ಬೆಳಗಿನ ಜಾವ 2.46ರ ಸುಮಾರಿಗೆ 25 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50s

Read More

ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು  ವ್ಯಾಯಾಮ, ಧ್ಯಾನ, ಅಥವಾ ಆನಂದಿಸುವ ಏನನ್ನಾದರೂ ಮಾಡುತ ಸಮಯವನ್ನು ಕಳೆಯುವಂತಹ ಸ್ವಯಂ-ಆರೈಕೆ ಚಟುವಟಿಕೆಗಳಿಗೆ ಸಮಯವನ್ನು ಮೀಸಲಿಡಬೇಕು. ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಾಕಷ್ಟು ನಿದ್ರೆ ಮಾಡಭೇಕು ಪ್ರತಿ ರಾತ್ರಿ8 ಗಂಟೆಗಳ ನಿದ್ದೆ ಮಾಡುವ ಅಭ್ಯಾಸ. ನಿದ್ರೆ ಪಡೆಯುವುದು ನಿಮ್ಮ ಮನಸ್ಥಿತಿ, ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಾಮಾಜಿಕ ಸಂಪರ್ಕಗಳನ್ನು ಕಾಪಾಡಿಕೊಳ್ಳಬೆಕು. ಸಾಮಾಜಿಕ ಬೆಂಬಲವು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಮಾನಸಿಕ ಆರೋಗ್ಯದೊಂದಿಗೆ ನೀವು ಹೋರಾಡುತ್ತಿದ್ದರೆ, ವೃತ್ತಿಪರ ಸಹಾಯವನ್ನು ಪಡೆಯಲು ಹಿಂಜರಿಯಬಾರದು. ಒತ್ತಡವನ್ನು ನಮ್ಮ ಜೀವನದಲ್ಲಿ ಒತ್ತಡದ ಮೂಲಗಳನ್ನು ಗುರುತಿಸಿ ಮತ್ತು ಅವುಗಳನ್ನು ನಿಭಾಯಿಸಲು ಆರೋಗ್ಯಕರ ಮಾರ್ಗಗಳನ್ನು ಕಂಡುಕೊಳ್ಳಬೇಕು. ವ್ಯಾಯಾಮ, ಧ್ಯಾನ ಸ್ನೇಹಿತ ಅಥವಾ ಕುಟುಂಬದ ಸದಸ್ಯರೊಂದಿಗೆ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಆಳವಾದ ಉಸಿರಾಟ ಅಥವಾ ಧ್ಯಾನದಂತಹ ತಂತ್ರಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು…

Read More

ಬೆಳಗಾವಿ: ಮಾರಿಹಾಳ ಗ್ರಾಮದಲ್ಲಿ 52 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮರಾಠಾ ಸಾಂಸ್ಕೃತಿಕ ಭವನವನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, “ಕ್ಷೇತ್ರದ್ಯಾಂತ ಹಲವಾರು ದೇವಸ್ಥಾನಗಳ ಅಭಿವೃದ್ಧಿ, ಸಮುದಾಯ ಹಾಗೂ ಸಾಂಸ್ಕೃತಿಕ ಭವನಗಳ ಅಭಿವೃದ್ಧಿ, ಗುಡಿ ಗೋಪುರಗಳ ಅಭಿವೃದ್ಧಿ, ಶಾಲೆಗಳ ಅಭಿವೃದ್ಧಿ, ರಸ್ತೆ ಚರಂಡಿಗಳ ಅಭಿವೃದ್ಧಿ, ಬ್ರಿಡ್ಜ್ ಕಂ ಬಾಂದಾರಗಳ ಅಭಿವೃದ್ಧಿ, ಕೆರೆ ಕಟ್ಟೆಗಳ ಅಭಿವೃದ್ಧಿ, ಕುಡಿಯುವ ನೀರಿನ ಅಭಿವೃದ್ಧಿ ಹಾಗೂ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಕ್ಷೇತ್ರವನ್ನು ಮುನ್ನಡೆಸುತ್ತ ಬಂದಿದ್ದೇನೆ. ಇನ್ನೂ ಹೆಚ್ಚು ಅಭಿವೃದ್ಧಿ ಗುರಿ ಹೊಂದಿದ್ದು ಜನರ ಸಹಕಾರ ಮುಂದುವರೆಯಲಿ” ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅವರೊಳ್ಳಿ ರುದ್ರಾಕ್ಷಿಮಠದ ಪರಮಪೂಜ್ಯ ಚನ್ನಬಸವ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಂಕರಗೌಡ ಪಾಟೀಲ, ಬಸವರಾಜ ಮ್ಯಾಗೋಟಿ, ಡಾ.ಡಿ.ಎನ್. ಪಾಟೀಲ, ಅಪ್ಪಾಸಾಬ್ ಬಾಗವಾನ್, ವಿಠ್ಠಲ ಮಲ್ಲಾರಿ, ದತ್ತಾ ಮಿಸಾಳೆ, ಮರಾಠಾ ಸಮಾಜದ ಎಲ್ಲ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು ನಮ್ಮತುಮಕೂರು.ಕಾಂನ…

Read More

ಬೆಳಗಾವಿ: ನಗರದ ಕೆ ಎಸ್ ಆರ್ ಪಿ ಸಿ ಮೈದಾನದಿಂದ ಮಾಲಿನಿ ಮೈದಾನದವರೆಗೆ 10 ಕಿ.ಮೀಗಳವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಅದ್ಧೂರಿಯಾಗಿ ನಡೆದಿದ್ದು ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಜನಸಾಗರವೆ ನೆರದಿತ್ತು. ಧಾರಿಯುದ್ದಕ್ಕೂ ಮೋದಿ ಮೋದಿ ಎಂಬ ಗಂಟಾಘೋಷ ಮೊಳಗುತ್ತಲೇ ಇದ್ದು ಭಾರತ್ ಮಾತಾ ಕಿ ಜೈ ಎಂಬ ಜೈಕಾರ ಕೇಳಿಬರುತ್ತಿತ್ತು. ಹೂವಿನ ಸುರಿಮಳೆ, ವಾದ್ಯ ವಿವಿಧ ಸಾಂಸ್ಕೃತಿಕ ವೇಷ ಭೂಷಣಗಳಲ್ಲಿ ಜನ ಅವರನ್ನು ಸ್ವಾಗತಿಸಿ ಅಭಿನಂದಿಸಿದರು. ಕೆಲ ಹೊತ್ತು ಸಮಯದಲ್ಲಿ ಜನರಿಗೆ ತಲೆಬಾಗಿ 2 ಕೈಗಳನ್ನು ಜೋಡಿಸಿ ನಮಸ್ಕರಿಸಿ ಅವರತ್ತ ಹೂವುಗಳ ಬೀಸುವುದರ ಮೂಲಕ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದರು. ಈ ರೀತಿ ಬೆಳಗಾವಿಯಲ್ಲಿ ಕೆಲ ಎರಡು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಆಗಮನ ಹಾಗೂ ಅವರ ಸ್ವಾಗತದ ತಯಾರಿಯಲ್ಲಿ ಬೆಳಗಾವಿ ಜನತೆ ಹಗಲಿರಳು ಶ್ರಮಿಸಿ ನಗರವನ್ನು ಅಲಂಕಾರ ಗೊಳಿಸಿದ್ದರು. ಬೆಳಗಾವಿ ಜನತೆಗೆ ಇದು ಒಂದು ಅದ್ಭುತ ಹಾಗೂ ಎಂದು ಮರೆಯಲಾರದ ದಿನವಾಗಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…

Read More

ಶಿವಮೊಗ್ಗ: ಶಿವಮೊಗ್ಗದ ಸೋಗಾನೆಯಲ್ಲಿರುವುದು ಕೇವಲ ವಿಮಾನ ನಿಲ್ದಾಣವಲ್ಲ. ಮಲೆನಾಡಿನ ಜನರ ಕನಸು ನನಸಾಗುತ್ತಿರುವ ಶುಭ ಸಂಕೇತ. ಅಭಿವೃದ್ಧಿ ಮತ್ತಷ್ಟು ವೇಗ ಪಡೆದು ಆಗಸದೆತ್ತರಕ್ಕೆ ಏರುವ ಶುಭ ಸೂಚನೆಯಾಗಿದೆ ಎಂದು  ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮದಲ್ಲಿ  ಬಿ.ಎಸ್. ಯಡಿಯೂರಪ್ಪ ಭಾವುಕವಾಗಿ ಮಾತನಾಡಿದರು. ವಿಶ್ವವೇ ಮೆಚ್ಚುವಂತೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ರಾಷ್ಟ್ರಕವಿ ಕುವೆಂಪು ಅವರು ತಿಳಿಸಿದ ವಿಶ್ವ ಮಾನವ ತತ್ವಕ್ಕೆ ಉದಾಹರಣೆಯಾಗಿದೆ. ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ಎಂಬ ಕವಿವಾಣಿಯಂತೆ ಈ ನಾಡಿನ ಅಭಿವೃದ್ಧಿ ಕನಸಿನೊಂದಿಗೆ 70ರ ದಶಕದಲ್ಲಿ ಸಾರ್ವಜನಿಕ ಬದುಕು ಪ್ರವೇಶಿಸಿದ ನನ್ನ ಬದುಕಿನಲ್ಲಿ ಈ ದಿನ ಬಹಳ ವೈಶಿಷ್ಟ್ಯಪೂರ್ಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನೇರವಾಗಿ ವಿಮಾನದಲ್ಲಿ ಬಂದಿಳಿದು ವಿಮಾನ ನಿಲ್ದಾಣವನ್ನು ಉದ್ಘಾಟಿಸಿರುವುದು ಜಿಲ್ಲೆಯ ಜನರ ಪಾಲಿಗೆ ಸಾರ್ಥಕದ ದಿನವಾಗಿದೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಶಿವಮೊಗ್ಗಾ: ಮಲೆನಾಡ ಹೆಬ್ಬಾಲಿನಲ್ಲಿ ನಿರ್ಮಾಣವಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಅಭಿವೃದ್ಧಿಪರ ಆಡಳಿತ ಮಾಡಿದ ಬಿ.ಎಸ್ ಯಡಿಯೂರಪ್ಪ ಅವರಿಗೆ ಹಸಿರು ಶಾಲು ಹೊದಿಸಿ ಸನ್ಮಾನಿಸಿದ ಪ್ರಧಾನಿ ಮೋದಿ ಬಿ.ಎಸ್  ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ರಾಜ್ಯದ 2ನೇ ಅತಿ ದೊಡ್ಡ ಏರ್‌ ಪೋರ್ಟ್‌ ಎಂಬ ಹೆಗ್ಗಳಿಕೆ ಪಡೆದ ಶಿವಮೊಗ್ಗ ಏರ್‌ಪೋರ್ಟ್‌ ಲೋಕಾರ್ಪಣೆ ಗೊಳಿಸಿದರು. ಒಟ್ಟು 775 ಎಕರೆ ವಿಸ್ತಿರ್ಣದಲ್ಲಿ ನಿರ್ಮಾಣವಾದ ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 449.2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 3.2 ಕಿ.ಮೀ ರನ್‌ ವೇ ಹೊಂದಿದ್ದು, ಎಟಿಆರ್‌ ಸೇರಿದಂತೆ ಎಲ್ಲಾ ರೀತಿಯ ವಿಮಾನಗಳು ಲ್ಯಾಂಡಿಗ್‌ ಆಗಲಿವೆ. 4320 ಚದರಡಿ ವಿಸ್ತಿರ್ಣದ ಸುಸಜ್ಜಿತ ಪ್ಯಾಸೆಂಜರ್‌ ಟರ್ಮಿನಲ್‌ ಹಾಗೂ ವಿಮಾನ ನಿಲ್ದಾಣದ ಸುತ್ತ 15,900 ಮೀಟರ್‌ ಉದ್ದದ ಕಾಂಪೌಂಡ್‌ ಇದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಂಬಂಧಿಸಿದಂತೆ ಗೊಂದಲ, ಸಮಸ್ಯೆಗಳ ಬಗ್ಗೆ ಅನುಕೂಲವಾಗುವ ನಿಟ್ಟಿನಲ್ಲಿ, ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ, ಪರೀಕ್ಷೆ ಗೊಂದಲಗಳಿದ್ದರೇ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1800 425 0255ಗೆ ಕರೆ ಮಾಡಬಹುದು. ಪ್ರತಿದಿನ ಬೆಳಿಗ್ಗೆ 10 ರಿಂದ ಆರಂಭಗೊಂಡು, ರಾತ್ರಿ 8 ಗಂಟೆಯವರೆಗೆ ಚಾಲನೆಯಲ್ಲಿ ಇರಲಿದೆ. ಭಾನುವಾರದಂದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲಭ್ಯವಿರಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇಂದೇ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ಏರ್ ಪೋರ್ಟ್ ಲೋಕಾರ್ಪಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಇದು ನನ್ನ ಜೀವನದಲ್ಲಿ ಮರೆಯಲಾಗದ ಶುಭದಿನ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆ  ಯಡಿಯೂರಪ್ಪ ಶಿವಮೊಗ್ಗದ ತಿಲಕ ನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ರಾಯರಿಗೆ ವಿಶೇಷ ಪೂಜೆ ಸಲ್ಲಿಸಿ, ಆಶಿರ್ವಾದ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದೊಂದು ವಿಶೇಷ ಸಂದರ್ಭ ನನಗೆ. ನನ್ನ ಹುಟ್ಟು ಹಬ್ಬದ ಸಂದರ್ಭದಲ್ಲೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ ಲೋಕಾರ್ಪಣೆಗೊಳಿಸುವುದು ವಿಶೇಷವಾದ ಘಳಿಗೆಯಾಗಿದೆ. ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಮತ್ತೊಮ್ಮೆ ರಾಜ್ಯದ ಜನರು ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಬೆಳಗಾವಿ: ಮಕ್ಕಳ ಪ್ರತಿಭೆಗೆ, ಜೀವನದಲ್ಲಿ ಅತ್ಯುನ್ನತ ಸಾಧನೆ ಮಾಡಲು ಬಡತನ ಅಡ್ಡಿಯಾಗಬಾರದೆನ್ನುವ ಕಾರಣದಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ ಎಂದು ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ಭಾನುವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಮದ ಸರ್ಕಾರಿ ಹಿರಿಯ ಪಾಥಮಿಕ ಮರಾಠಿ ಶಾಲೆಯ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಗಮನಕ್ಕೆ ತಂದರೂ ಆದ್ಯತೆಯ ಮೇಲೆ ಪರಿಹರಿಸುತ್ತಿದ್ದೇನೆ. ಸರಕಾರದ ಯೋಜನೆ ಇರಬಹುದು, ಶಾಸಕರ ನಿಧಿ ಇರಬಹುದು, ಲಕ್ಷ್ಮೀ ತಾಯಿ ಫೌಂಡೇಶನ್ ಮೂಲಕ ಇರಬಹುದು. ಒಟ್ಟಾರೆ ಯಾವೊಂದು ಶಾಲೆ, ಯಾವೊಂದು ಮಕ್ಕಳು ಕೂಡ ಸಮಸ್ಯೆ ಎದುರಿಸಬಾರದೆಂದು ಎಚ್ಚರವಹಿಸಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು. ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ಜಿಮ್ ಹಾಗೂ ಕ್ರೀಡಾ ಉಪಕರಣಗಳನ್ನು ವಿತರಿಸಲಾಗುತ್ತಿದೆ. ವಯಕ್ತಿಕಾಗಿ ಹಲವಾರು ಪ್ರತಿಭೆಗಳಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ಯಾರೊಬ್ಬರೂ ತಮ್ಮ ಸಾಧನೆಯಲ್ಲಿ ಹಿಂದುಳಿಯಲು ಅವಕಾಶ ಕೊಡುವುದಿಲ್ಲ.…

Read More