Author: admin

ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಶ್ರೀ ಕ್ಷೇತ್ರ ಹೊಸಪಟ್ಟಣದ ಶ್ರೀ ದುರ್ಗಾಂಭ ದೇವಿಯವರ ಜಾತ್ರಾ ಮಹೋತ್ಸವವು ಇಂದಿನಿಂದ ಮಾರ್ಚ್  1ರವರೆಗೆ ಜರಗಲಿದೆ. ಈ ಸಂಬಂಧ ಕರೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ದುರ್ಗಾಂಭ ದೇವಿ ಸೇವಾ ಸಮಿತಿ (ರಿ) ಮತ್ತು ದೇವಾಲಯದ ಗುಡಿಗೌಡರಾದ ಮಹಾಲಿಂಗಯ್ಯ ಜಾತ್ರಾ ಮಹೋತ್ಸವದ ಕುರಿತು ಮಾಹಿತಿ ನೀಡಿದರು. ಗ್ರಾಮದ ಧೂತರಾಯ ಸ್ವಾಮಿ, ಚೌಡೇನಹಳ್ಳಿ ಗ್ರಾಮದ ಬೀರಲಿಂಗೇಶ್ವರ ಸ್ವಾಮಿ ಮತ್ತು ಚೌಡೇನಹಳ್ಳಿ ಗ್ರಾಮದ ಧೂತರಾಯ ಸ್ವಾಮಿ ಆಗಮನದೊಂದಿಗೆ ದಿನಾಂಕ: 26/27.02.2023 ನೇ ಭಾನುವಾರ ಮತ್ತು ಸೋಮವಾರ ಅಮ್ಮನವರ ಮಧುವಣಗಿತ್ತಿ ಶಾಸ್ತ್ರ,, ದಿನಾಂಕ: 28.02.2023 ನೇ ಮಂಗಳವಾರ ಶ್ರೀ ದೇವಿಯವರಿಗೆ ಮುತ್ತಿನ ಪಲ್ಲಕ್ಕಿ ಉತ್ಸವ ಮತ್ತು ಆರತಿಬಾನ. ರಾತ್ರಿ ರಸಮಂಜರಿ (ಆರ್ಕೆಸ್ಟ್ರಾ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ದಿನಾಂಕ:01.03.2023 ನೇ ಬುಧವಾರ ಗಂಗಾಸ್ನಾನ,ಸಿಡಿ ಉತ್ಸವ ನಂತರ ಮಧ್ಯಾಹ್ನ 01:30 ಕ್ಕೆ ಶ್ರೀ ದೇವಿಯವರ  ದಿವ್ಯ ರಥೋತ್ಸವ, ನಂತರ ಅನ್ನ ಸಂತರ್ಪಣೆ, ಸಂಜೆ ಜಗದೊಡೆಯ ಧೂತಯ್ಯನವರ ಅದ್ದೂರಿ ಮಣೇವು  ಕಾರ್ಯಕ್ರಮವಿದ್ದು, ಈ ಜಾತ್ರಾ…

Read More

ಗದಗ: ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ. ಆದ್ರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ರಂತೆ ಯಡಬಿಡಂಗಿ ಥರ ಆಗಬಾರದು ಎಂದು ಹಿರಿಯ ನಟ, ಆಪ್ ಮುಖಂಡ ಮುಖ್ಯಮಂತ್ರಿ ಚಂದ್ರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿ ಮಾತನಾಡಿ, ಮಠಾಧೀಶರು ರಾಜಕೀಯ ಪ್ರವೇಶ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಲಾಯರ್ ಕೋರ್ಟ್​ನಲ್ಲಿ ಮಾತ್ರ ಲಾಯರ್. ಹೊರಗೆ ಬಂದ್ರೆ ಏನು ಬೇಕಾದ್ರೂ ಮಾಡಬಹುದು. ಆ ಸ್ವಾತಂತ್ರ್ಯ ಭಾರತ ದೇಶದಲ್ಲಿದೆ. ಹಾಗೆಯೇ ಸ್ವಾಮೀಜಿಗಳು ಕೂಡ ಕಾವಿ ಬಟ್ಟೆ ಹಾಕದೇ ರಾಜಕೀಯಕ್ಕೆ ಬಂದ್ರೆ ಒಳ್ಳೆಯದು. ಕಾವಿ ಬಟ್ಟೆ ಹಾಕಿಕೊಂಡು ಬಂದ್ರೆ ಗೌರವ ಇರಲ್ಲ. ಎಲ್ಲವನ್ನೂ ಬಿಟ್ಟು ಬಂದ್ರೆ ಓಕೆ. ಇಲ್ಲವಾದರೆ ಉತ್ತರ ಪ್ರದೇಶದ ಸಿಎಂ ಯೋಗಿಯಂತೆ ಯಡಬಿಡಂಗಿ ಥರ ಆಗಬಾರದು ಎಂದು ಕಿಡಿಕಾರಿದರು. ಸ್ವಾಮೀಜಿಗಳಿಗೆ ಕಾವಿ ಧಾರ್ಮಿಕ ಚಿಂತನೆ ಮಾಡತಕ್ಕಂತ ಭಾವನೆ ಇದೆ. ಅದನ್ನು ಇಟ್ಕೊಂಡು ರಾಜಕೀಯ ಮಾಡ್ತೀನಿ ಅಂದ್ರೆ ಮೂಲ ಸಿದ್ದಾಂತ ದುರುಪಯೋಗ ಆಗುತ್ತೆ ಅನ್ನೋ ಭಯವಿದೆ. ಮೂಲ ಸಿದ್ಧಾಂತ,…

Read More

ಪ್ರಕೃತಿ ಮತ್ತು ಪ್ರಾಣಿಗಳು, ಮನುಷ್ಯನ ಉತ್ತಮ ಸ್ನೇಹಿತರು. ದೇಶೀಯ ಸಾಕುಪ್ರಾಣಿಗಳನ್ನು ಮಾತ್ರ ಹಿಂತಿರುಗಿ ನೋಡಬೇಕಾಗಿದೆ. ಅವರು ನಮ್ಮ ಹತ್ತಿರದ ಸ್ನೇಹಿತರು. ಸಹಚರರು ಅಥವಾ ಮಕ್ಕಳಂತಹ ಸಾಕುಪ್ರಾಣಿಗಳನ್ನು ಮನುಷ್ಯರು ಕಾಳಜಿ ವಹಿಸುತ್ತಾರೆ. ಮನುಷ್ಯರು ಮತ್ತು ಈ ಪ್ರಾಣಿಗಳ ನಡುವೆ ಆಳವಾದ ಸ್ನೇಹವು ಹೆಚ್ಚಾಗಿ ಬೆಳೆಯುತ್ತದೆ. ಖಿನ್ನತೆ ಮತ್ತು ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ವೃದ್ಧರಿಗೆ ಸಾಂತ್ವನ ನೀಡುವ ಕುದುರೆಗಳ ಗುಂಪನ್ನು ಈಗ ಸಾಮಾಜಿಕ ಮಾಧ್ಯಮಗಳು ನೋಡುತ್ತಿವೆ. ಕುದುರೆಗಳು ತಮ್ಮ ಸಾಮೀಪ್ಯದಿಂದ  ಜನರಿಗೆ ಮಾನಸಿಕ ನೆಮ್ಮದಿ ಮತ್ತು ಸಂತೋಷವನ್ನು ತರುತ್ತವೆ. ಈ ಪ್ರಾಣಿಗಳ ಉಪಸ್ಥಿತಿಯು ವಯಸ್ಕರಿಗೆ ಚಿಕಿತ್ಸೆಯಂತಿದೆ. ಇಂತಹ ಹಲವಾರು ಮನ ಕಲಕುವ ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದಕ್ಕೂ ಮುನ್ನ ತಾಯಿ ಮತ್ತು ಮಗುವಿನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ತೆಗೆದಿದ್ದರು. ಈ ತಾಯಿ ತನ್ನ ಮಗುವನ್ನು ಸೈಕಲ್‌ನಲ್ಲಿ ಕರೆದುಕೊಂಡು ಹೋಗುವ ರೀತಿ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ. ಸೈಕಲ್ ನಲ್ಲಿದ್ದ ಮಗುವಿಗೆ ತಾಯಿ ಕುರ್ಚಿಯಲ್ಲಿ ಹಿಂಬದಿಯ ಸೀಟನ್ನು ಸಿದ್ಧಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…

Read More

ಫೆಬ್ರುವರಿ 27ಕ್ಕೆ ಬೆಳಗಾವಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಕಮಲ ಪಡೆ ಅದ್ದೂರಿಯಿಂದ ತಯಾರಿ ನಡೆಸಿದೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಹಗಲು ರಾತ್ರಿ ಎನ್ನದೆ ಬೆಳಗಾವಿ ನಗರದ ಗಲ್ಲಿಗಳಲ್ಲಿ ರಸ್ತೆ ಉದ್ದದ ದೀಪ ಕಂಬಗಳಿಗೆ ಭಾರತೀಯ ಜನತಾ ಪಕ್ಷದ ಧ್ವಜ ಪತಾಕೆಗಳು ಹಾಗೂ ಸ್ವಾಗತ ಕೋರುವ ಪ್ಲೆಕ್ಸ್ ಗಳನ್ನು ಅಲ್ಲಲ್ಲಿ ಅಳವಡಿಸಲಾಗುತ್ತಿದೆ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಲ್ಲಿ ಈ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಬರುತ್ತಿರುವುದು ಅತಿಯ ಸಂತೋಷ ಹಾಗೂ ಆನಂದ ಸಂಭ್ರಮ ವನ್ನು ಉಂಟು ಮಾಡಿದೆ. ಅಲ್ಲದೆ ದಕ್ಷಿಣ ಮತ್ತು ಉತ್ತರ ಶಾಸಕರಗಳಾದ ಅಭಯ್ ಪಾಟೀಲ್ ಹಾಗೂ ಅನಿಲ್ ಬೇನಕೆ ಇವರ ನೇತೃತ್ವದಲ್ಲಿ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಈ ಕಡೆ ಬೂಡಾ ಅಧ್ಯಕ್ಷರಾದ ಸಂಜಯ್ ಬೆಳಗಾವ್ಕರ್ ತಮ್ಮ ಕಾರ್ಯಕರ್ತರೊಂದಿಗೆ ಬೆಳಗಾವಿ ನಗರಗಳ ರಸ್ತೆ ಉದ್ದಕ್ಕೂ ಅಲಂಕಾರ ಕಾರ್ಯದಲ್ಲಿ ತೊಡಗಿದ್ದಾರೆ. ಒಟ್ಟಾರೆ ಬೆಳಗಾವಿ ಕೇಸರಿಮಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಹಾಸನ: ರಾಜ್ಯದಲ್ಲಿ ಕುಮಾರಸ್ವಾಮಿಯವರ ಸರ್ಕಾರ ಹೋದ ಮೇಲೆ ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಆಗುತ್ತಿರುವ ಕಿರುಕುಳ ನನಗೆ ತಿಳಿದಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಹಾಸನದ ಬೈಲಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾರ್ಯಕರ್ತರ ಮೇಲೆ 107 ಕೇಸ್ ದಾಖಲಿಸಿದ್ದಾರೆ. ಕೆಲವರು ಚುನಾವಣೆ ಸಂದರ್ಭದಲ್ಲಿ ಗಲಾಟೆ ಮಾಡಿ ಕಾರ್ಯಕರ್ತರನ್ನು ಜೈಲಿಗೆ ಕಳಿಸುವ ಅಥವಾ ಗಡಿಪಾರು ಮಾಡುವ ಹುನ್ನಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಕೆಲವರು ದುಡ್ಡಿನಿಂದ ರೌಡಿಸಂ ಮಾಡಲು ಹೊರಟಿದ್ದಾರೆ. ನಿನ್ನೆ ಉಗನೆ ಗ್ರಾಮಕ್ಕೆ ಹೋಗಿದ್ದೆ. ಅಲ್ಲಿ ಜನ ನನ್ನ ಬಳಿ ರಕ್ಷಣೆ ಬೇಕು ಎಂದು ಹೇಳುತ್ತಾರೆ. ಈ ಕ್ಷೇತ್ರವನ್ನು ನಾನು ಸವಾಲಾಗಿ ಸ್ವೀಕರಿಸಿ ಮುನ್ನಡೆಸುವ ಕುರಿತು ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿ ತಿರ್ಮಾನ ಕೈಗೊಳ್ಳುತ್ತೇನೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಶಿವಮೊಗ್ಗ: 7ನೇ ವೇತನ ಆಯೋಗ ಜಾರಿ ಹಾಗೂ ಎನ್​ಪಿಎಸ್​ ರದ್ದುಪಡಿಸಿ, ಒಪಿಎಸ್ ಯೋಜನೆಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ಮಾರ್ಚ್ 1 ರಿಂದ ಸರ್ಕಾರಿ ನೌಕರರು ತಮ್ಮ ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಇಂದು ಶಿವಮೊಗ್ಗದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ರಾಜ್ಯ ಸರ್ಕಾರಿ‌ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮಾತನಾಡಿ ಫೆಬ್ರವರಿ 21 ರಂದು ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನದಂತೆ ಈ ಬಾರಿ ಕರ್ನಾಟಕದ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಸೇರಿದಂತೆ ಹದಿನಾರು ಲಕ್ಷ ಮಂದಿ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ನಾವು ಬದ್ದರಾಗಿದ್ದು, ಚುನಾವಣಾ ನೀತಿ ಸಂಹಿತೆ ಇನ್ನೇನು ಜಾರಿಯಾಗಲಿದೆ. ಇದಲ್ಲದೇ ಇಡೀ ರಾಜ್ಯದಲ್ಲಿ ಕಡಿಮೆ ಸಂಬಳ ವನ್ನು ತೆಗೆದುಕೊಳ್ಳುವವರು, ನಾವು ಹೀಗಾಗಿ ನಾವು ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೆವೆ ಅಂತ ತಿಳಿಸಿದರು. ಈ ವೇಳೆಯಲ್ಲಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು ಅಂತ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಚಾಮರಾಜನಗರ: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ನಿಶಾಂತ್ ಎಂಬವರು  ಕಳೆದ 8 ತಿಂಗಳಲ್ಲಿ ನೂರಾರು ದೇಗುಲ, ಭವನ ನಿರ್ಮಾಣ ಮಾಡಿ ಭಾವನಾತ್ಮಕ ಮತಬೇಟೆ ನಡೆಸಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿರುವ ನಿಶಾಂತ್ ಸರಿಸುಮಾರು 149 ದೇಗುಲ, 25 ಮಠಗಳನ್ನು ಜೀರ್ಣೋದ್ಧಾರ ಮಾಡಿದ್ದು ಕಡಿಮೆ ಅವಧಿಯಲ್ಲೇ ಜನರ ಗಮನ ಸೆಳೆದು ಅಚ್ಚರಿ ಮೂಡಿಸಿದ್ದಾರೆ. ಇತರ ಅಭ್ಯರ್ಥಿಗಳಿಗೆ ಶಾಕ್ ನೀಡಿದ್ದಾರೆ. ಬೇಡಗಂಪಣ ಹಾಗೂ ಸೋಲಿಗ ಮತವು ಹನೂರು ಕ್ಷೇತ್ರದಲ್ಲಿ ನಿರ್ಣಾಯಕ ಆಗಿರುವುದರಿಂದ ನಿಶಾಂತ್ ಅವರ ಈ‌ ಧಾರ್ಮಿಕ ಕಾರ್ಯಗಳು ಜನರ ಮನ ಗೆಲ್ಲುತ್ತಿದೆ. ಸೋಲಿಗ ಮಹಿಳೆಯೊಬ್ಬರು ತಮ್ಮ ಮಗುವಿಗೆ ನಿಶಾಂತ್ ಎಂದು ನಾಮಕರಣ ಮಾಡಿರುವುದು 8 ತಿಂಗಳಲ್ಲಿ ನಿಶಾಂತ್ ಮಾಡಿರುವ ಮೋಡಿಗೆ ಸಾಕ್ಷಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಟು ಸತ್ಯವನ್ನು  ಎದುರಿಸುವ ಕಾಲ ಬಂದಿದೆ   ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅರ್ಕಾವತಿ ಬಡಾವಣೆ  ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಸಿಎಂ.ಸುಳ್ಳು  ಹೇಳಿದ್ದಾರೆ ಎಂಬ ಆರೋಪಕ್ಕೆ ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರೇ ನೇಮಿಸಿದ್ದ  ನ್ಯಾಯಮೂರ್ತಿ  ಕೆಂಪಣ್ಣ ಅವರ ಆಯೋಗವು  ಸುದೀರ್ಘವಾಗಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ  ತನಿಖೆ ನಡೆಸಿದ ವರದಿಯನ್ನು  ನಾನು ಓದಿದ್ದೇನೆ. ನಾನು ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ.  ಸಿದ್ದರಾಮಯ್ಯನವರು  ಸುಳ್ಳು  ಹೇಳುತ್ತಿದ್ದಾರೆ.   ಅಧಿಕಾರಿಗಳು ಕಡತ ತಂದರು  ಅನುಮೋದಿಸಿದೆ ಎಂದು ಬರೆದಿರುವುದಾಗಿ  ಅವರೇ ಹೇಳಿರುವುದರ  ಅರ್ಥ, ತಪ್ಪು ಮಾಡಿರುವುದನ್ನು ಒಪ್ಪಿಕೊಂಡಂತೆ. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಬೆಂಗಳೂರು: ಜಾನಪದ ಕ್ಷೇತ್ರದಲ್ಲಿನ ಅಪೂರ್ವ ಕೊಡುಗೆಗಾಗಿ ಭಾರತ ಸರ್ಕಾರದ ಪ್ರತಿಷ್ಟಿತ ಪ್ರಶಸ್ತಿಯಾದ  ಪದ್ಮಶ್ರೀ ಗೆ ಭಾಜನರಾಗಿರುವ  ನಾಡಿನ ಹಿರಿಯ ತಮಟೆ ಕಲಾವಿದರಾದ ಪಿಂಡಿಪಾಪನಹಳ್ಳಿ ನಾಡೋಜ ಮುನಿವೆಂಕಟಪ್ಪ ಅವರನ್ನು  ಅದ್ದೂರಿ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಬೆಂಗಳೂರಿನ ರವೀಂದ್ರ ಕಲಾಭವನದ ಹಿಂಭಾಗದ ಸಂಸ ಬಯಲು ಮಂದಿರದಲ್ಲಿ ಸಂಜೆ ನಡೆದ ಕಾರ್ಯಕ್ರಮ ಜಾನಪದ ಹಾಡುಗಳ ಆಹ್ಲಾದಕರ ವಾತಾವರಣದಲ್ಲಿ ವಿಜೃಂಭಣೆಯಿಂದ ಕೂಡಿತ್ತು. ಪದ್ಮ ಪ್ರಶಸ್ತಿಗೆ ಭಾಜನರಾಗಿರುವ ನಾಡೋಜ ಮುನಿವೆಂಕಟಪ್ಪನವರಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಶುಭ ಹಾರೈಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಹೆಬ್ರಿ: ಕುಡಿದು ಬಂದು ತಂದೆಯೊಂದಿಗೆ ಗಲಾಟೆ ಮಾಡಿದ ಪರಿಣಾಮವಾಗಿ ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ  ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ವರಂಗ ಮೂಡುಬಿಟ್ಟುವಿನಲ್ಲಿ ಪೆ.24ರ ರಾತ್ರಿ 9 ಗಂಟೆಗೆ ಸಂಭವಿಸಿತ್ತು. ಸತೀಶ್ ಪೂಜಾರಿ 42 ಮೃತಪಟ್ಟ ವ್ಯಕ್ತಿ ಮತ್ತು ಕುಟ್ಟಿ ಪೂಜಾರಿ ಇಬ್ಬರೇ ಮನೆಯಲ್ಲಿ ವಾಸವಿದ್ದು, ಸತೀಶ್ ಪೂಜಾರಿ ಪ್ರತಿದಿನ ಕುಡಿದು ಮನೆಗೆ ಬಂದು ತಂದೆಯೊಂದಿಗೆ ಗಲಾಟೆ ಮಾಡುತ್ತಿದ್ದರು. ನಿನ್ನೆ ರಾತ್ರಿಯೂ ವಿಪರೀತ ಕುಡಿದು ಬಂದು ಕುಟ್ಟಿ ಪೂಜಾರಿ ಮಲಗಿದ್ದ ಕೋಣೆಯ ಬಾಗಿಲಿಗೆ ಕಾಲಿನಿಂದ ಒದ್ದು ಅವರನ್ನು ಮನೆಯ ಹೊರಗೆ ಎಳೆದು ತಂದಾಗ ಕೋಪಗೊಂಡ ಕುಟ್ಟಿ ಪೂಜಾರಿ ಅಡುಗೆ ಕೋಣೆಯಲ್ಲಿದ್ದ ಒಲೆಗೆ ಬೆಂಕಿ ಉದುವಾ ಕಬ್ಬಿಣದ ಕೊಳವೆಯಿಂದ ಮಗನಿಗೆ ಹಲ್ಲೆ ನಡೆಸಿದ ಪರಿಣಾಮ ಸತೀಶ್ ಪೂಜಾರಿ ಮೃತಪಟ್ಟಿದ್ದಾರೆ. ಈ ಕುರಿತು ಹೆಬ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More