Author: admin

ಹಾವೇರಿ: ಸಾಲಕ್ಕೆ ಹೆದರಿ ಒಂದೇ ಕುಟುಂಬದ ಮೂವರು ಜನರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ. ಹನುಮಂತಗೌಡ ಪಾಟೀಲ (54), ಪತ್ನಿ ಲಲಿತಾ ಪಾಟೀಲ (50) ಮತ್ತು ಮಗಳು ನೇತ್ರಾ (22) ಮೃತ ದುರ್ಧೈವಿಗಳಾಗಿದ್ದು ಮಗಳ ವಿದ್ಯಾಭ್ಯಾಸ ಮತ್ತು ಮದುವೆಗಾಗಿ ಸಾಲ ಮಾಡಿ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಹನುಮಂತಗೌಡ ತಮ್ಮ ಪುತ್ರಿ ನೇತ್ರಾ ಅವರನ್ನು 7 ತಿಂಗಳ ಹಿಂದೆ ದಾವಣಗೆರೆಯ ಉಮಾ ಶಂಕರ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. 125 ಲಕ್ಷ ಸಾಲವನ್ನು ತೀರಿಸಲು ಸಾಧ್ಯವಾಗದೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ: ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬಸರೀಕಟ್ಟಿ ಗ್ರಾಮದಲ್ಲಿ ಫೆ.20ರ ರಾತ್ರಿ ವೇಳೆಯಲ್ಲಿ ಮಾರುತಿ ಪವನ ತಂದೆ ಪರಶುರಾಮ ಖನ್ನುಕರ, (32) ಎನ್ನುವವನನ್ನು ಕೊಲೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಯಾರೋ ದುಷ್ಕರ್ಮಿಗಳು ಮಾರುತಿಯನ್ನು ಕೊಲೆ ಮಾಡಿದ ಬಗ್ಗೆ ಆತನ ತಂದೆ ಪರಶುರಾಮ ಬಸವಂತ ಖನ್ನುಕರ್ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸ್ ಆಯುಕ್ತರು, ಡಿಸಿಪಿ (ಕಾ&ಸು) ಬೆಳಗಾವಿ ನಗರ ಹಾಗೂ ಗೋಪಾಲಕೃಷ್ಣ ಗೌಡರ ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ಮಾರಿಹಾಳ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ ತಿಗಡಿ ನೇತೃತ್ವದ ತಂಡವು ಕಾರ್ಯಪ್ರವೃತ್ತರಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. 1] ಸೋಮನಾಥ ಗುಂಡು ಗೋಮನ್ನಾಟೆ. (25) ಸಾ ತಾನಾಜಿ ಗಲ್ಲ, ನಿಲಜಿ. ತಾ,ಜಿ!! ಬೆಳಗಾವಿ, 2] ಪ್ರಶಾಂತ@ಪರಶುರಾಮ ವಸಂತ ಮೋದಗೇಕರ, (27) ಸಾ ಬ್ರಹ್ಮ ನಗರ, ನಿಲಜಿ. ತಾ,ಜಿ|| ಬೆಳಗಾವಿ ಬಂಧಿತರು. ಇವರನ್ನು ಪತ್ತೆ ಮಾಡಿ ದಿನಾಂಕ 23/02/2023…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ನೀಡಲಾಗುತ್ತಿರುವ 2022ನೆಯ ಸಾಲಿನ ಪ್ರತಿಷ್ಟಿತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿʼ ಹಾಗೂ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಹಿರಿಯ ಬರಹಗಾರರಾದ ಉಡುಪಿಯ ಶ್ರೀಮತಿ ವೈದೇಹಿಯವರನ್ನು ನೃಪತುಂಗ ಪ್ರಶಸ್ತಿಗೆ ಏಕಧ್ವನಿಯಲ್ಲಿ ಹಾಗೂ ಸರ್ವಾನುಮತದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿಯು 7(ಏಳು) ಲಕ್ಷ ರೂ. ನಗದು ಹಾಗೂ ಪ್ರಮಾಣಪತ್ರದ ಜೊತೆ ಫಲತಾಂಬೂಲವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯು ಜ್ಞಾನಪೀಠ ಪ್ರಶಸ್ತಿಗೆ ಸರಿಸಮಾನವಾದ ಕನ್ನಡ ನಾಡಿನ ಪ್ರಶಸ್ತಿಯೆಂದು ಪ್ರಖ್ಯಾತವಾಗಿದೆ. ಈ ಬಾರಿ ಹಿರಿಯ ಬರಹಗಾರ್ತಿ ವೈದೇಹಿ ಅವರನ್ನು ಈ ಮೌಲಿಕ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಜಾನಕಿ ಶ್ರೀನಿವಾಸಮೂರ್ತಿ ಅವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರಾಗಿದ್ದು,…

Read More

ಬೆಳಗಾವಿ: “ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಓರ್ವ ಶಾಸಕಿಯಾಗಿ ಕ್ಷೇತ್ರದಲ್ಲಿ ಕೈಗೊಂಡ ಎಲ್ಲ ತರಹದ ಅಭಿವೃದ್ಧಿ ಕೆಲಸಗಳು ಮನಸ್ಸಿಗೆ ತೃಪ್ತಿಯನ್ನುಂಟು ಮಾಡಿವೆ” ಎಂದು ಶಾಸಕಿ ಲಕ್ಷ್ಮೀ  ಹೆಬ್ಬಾಳಕರ್ ಹೇಳಿದರು. ಕುಕಡೊಳ್ಳಿ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ನೂತನ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ಕೈಗೊಂಡು ಚಾಲನೆ ನೀಡಿ ಅವರು ಮಾತನಾಡಿದರು. ಜನರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಜತೆಗಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರ ಜ್ವಲಂತ ಉದಾಹರಣೆಯಾಗಿದೆ” ಎಂದು ಅವರು ಹೇಳಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ವೀರನಗೌಡ ಪಾಟೀಲ, ಮಂಜು ಹುಬ್ಬಳ್ಳಿ, ರಮೇಶ ಮರಕಟ್ಟಿ, ಕಲ್ಲಪ್ಪ ಬಸರಿ, ತಾಯಪ್ಪ ಕಮ್ಮಾರ, ಶಿವಾನಂದ ದೇವಲತ್ತಿ, ಶಿವಾಜಿ ಭೈರೋಜಿ, ಬಸಪ್ಪ ಭೈರೋಜಿ, ಅರ್ಜುನ ಬಸರಗಿ, ಕಲ್ಲಪ್ಪ ಭೈರೋಜಿ, ನೂತನ ಬಸರಿ, ಈರಣ್ಣ ಕುರುಬರ, ನಾಗೇಶ ಮೆಟ್ಟಿನ್ ಹಾಗೂ ಮುಂತಾದವರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಕೊರಟಗೆರೆ : ಕಲ್ಪತರು ನಾಡಿನಲ್ಲಿಯೇ ಪ್ರಪ್ರಥಮ ಬಾರಿಗೆ ಕೊರಟಗೆರೆಯಲ್ಲಿ  ಕಾಂಗ್ರೆಸ್ ಭವನ ಕಟ್ಟಡವು ನಿರ್ಮಾಣವಾಗಿದ್ದು, ಮಾರ್ಚ್ 5 ರ ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ  ಎಂದು ಮಾಜಿ ಡಿಸಿಎಂ ಮತ್ತು ಶಾಸಕರಾದ ಡಾ.ಜಿ ಪರಮೇಶ್ವರ್ ರವರು ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕ್ಷೇತ್ರದ ಪ್ರತಿಯೊಂದು ಬೂತ್‍ ನಲ್ಲಿ ಹಾಗೂ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ಕಾಂಗ್ರೆಸ್ ಭವನವನ್ನು ನಿರ್ಮಿಸಲಾಗಿದೆ, ಕಾಂಗ್ರೆಸ್ ಪಕ್ಷದ ಕಟ್ಟಡ ಹೊರತು ಯಾರದು ಸ್ವಂತ ಕಟ್ಟಡವಲ್ಲ, ನಿರ್ಮಾಣಕ್ಕೆ 1.5 ಕೋಟಿಗೂ ಹೆಚ್ಚಿನ ಹಣ ಖರ್ಚಾಗಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ 50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನಸ್ತೋಮ ಸೇರಲಿದೆ ಎಂದು ಹೇಳಿದರು. ಪಕ್ಷದ ನಾಯಕರೆಲ್ಲಾ ಒಟ್ಟಾಗಿ ಪ್ರಜಾಧ್ವನಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ, ನಮ್ಮಲ್ಲಿ ಯಾವುಧೇ ಗುಂಪುಗಾರಿಕೆ ಇಲ್ಲ, ಸಂಘಟನೆಯಿಂದ ಇನ್ನಷ್ಟು ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಕಾಂಗ್ರೇಸ್‍ಗೆ ಬೆಂಬಲವಿದೆ. ವಿರೋಧ ಪಕ್ಷಕ್ಕೆ ಆಹಾರವಾಗದೆ 2023 ಕ್ಕೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ,…

Read More

ಸರಗೂರು: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಡಾ ಅಲೀಲ್ ಪಾಷಾ ತಿಳಿಸಿದರು. ಸರಗೂರು ತಾಲ್ಲೂಕಿನ ಹಾದನೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಶಾಲಾ ವಾರ್ಷಿಕೋತ್ಸವವನ್ನು ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಮಹೇಂದ್ರ ವಹಿಸಿ ಮಾತನಾಡಿ, ಪ್ರಸ್ತುತ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಏಕ ರೂಪ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರುವ ಕಾರಣ ಗುಣಮಟ್ಟದ ಶಿಕ್ಷಣ ಸಮನಾಗಿ ಮಕ್ಕಳಿಗೆ ದೊರೆಯುತ್ತಿದೆ. ಇದರ ಜತೆಯಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತಿರುವುದು ಮಕ್ಕಳನ್ನು ಉತ್ತೇಜಿಸಿದಂತಾಗುತ್ತಿದೆ ಎಂದರು. ಶಾಲಾ ವಾರ್ಷಿಕೋತ್ಸವಗಳಲ್ಲಿ ಸಾಂಸ್ಕೃತಿಕ ಕಲೆಗಳನ್ನು ಮಕ್ಕಳಿಂದ ಪ್ರದರ್ಶಿಸುವ ಮೂಲಕ ಅವರಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಿದಂತಾಗುತ್ತಿದೆ. ಈ ನಿಟ್ಟಿನಲ್ಲಿ ದೇಶೀಯ ಪರಂಪರೆಯನ್ನು ಬಿಂಬಿಸುವ ಕಲೆಗಳು ವಿದ್ಯಾರ್ಥಿಗಳಿಂದ ಮೂಡಿ ಬರಲು ಶಿಕ್ಷಕರ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು. ಗ್ರಾಪಂ ಸದಸ್ಯ ಪ್ರಕಾಶ್ ಮಾತನಾಡಿ, ಆಧುನಿಕ ಯುಗಕ್ಕೆ ಮಾರುಹೋಗುತ್ತಿರುವ ಯುವ ಜನತೆಗೆ ಐತಿಹಾಸಿಕ ವಿಚಾರವನ್ನು ತಿಳಿ ಹೇಳುವ ಅಗತ್ಯ ಇದೆ. ಪಠ್ಯದಲ್ಲಿ ಸಾಮಾಜಿಕ ವಾದ…

Read More

ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಬೆಂಡೋಣಿ ಗ್ರಾಮದ ಸಿದ್ದರಾಜು ಬಿ.ಎನ್ ಬಿನ್ ನರಸಿಂಹಯ್ಯ (45) ಎಂಬ ಬಡರೈತ ಸಾಲಬಾಧೆ ತಾಳಲಾರದೆ ತನ್ನದೇ ಜಮೀನಿನಲ್ಲಿ (ಸರ್ವೇ ನಂಬರ್ 22/2 ರಲ್ಲಿ) ಇರುವ ತುಗಲಿ ಮರಕ್ಕೆ ನೇಣು ಹಾಕಿಕೊಂಡು ಮೃತನಾಗಿದ್ದ ಘಟನೆ ಕಳೆದ ಮಂಗಳವಾರ ನಡೆದಿತ್ತು. ಕೊರಟಗೆರೆ ಕೆನರಾ ಬ್ಯಾಂಕ್ ನಲ್ಲಿ ದಾಳಿಂಬೆ ಬೆಳೆಯುವ ಸಲುವಾಗಿ ಐದು ಲಕ್ಷ ಸಾಲ, ವಿ ಎಸ್ ಎಸ್ ಎನ್ ಬೆಂಡೋಣಿ ಶಾಖೆಯಲ್ಲಿ ಐವತ್ತು ಸಾವಿರ ಸಾಲ, ಖಾಸಗಿ ಫೈನಾನ್ಸ್ ಸಂಸ್ಥೆಯಾದ ಸಮಸ್ತ ಫೈನಾನ್ಸ್ ನಲ್ಲಿ ಹೈನುಗಾರಿಕೆಗಾಗಿ 70,000 ಸಾಲವನ್ನು ಮಾಡಿದ್ದರು ಮತ್ತು ಮಗನ ಚಿಕಿತ್ಸೆಗಾಗಿ ಸ್ಥಳೀಯ ಸಾರ್ವಜನಿಕರಲ್ಲಿ ಕೈ ಸಾಲವನ್ನು ಸಹ ಮಾಡಿ ಅತಿಯಾದ ಬಡ್ಡಿಯಿಂದ ಸಾಲವನ್ನು ತೀರಿಸಲಾಗದೆ ಕೊರಟಗೆರೆಯ ಕೆನರಾ ಬ್ಯಾಂಕ್ ಕಳುಹಿಸಿದ್ದ ಲೀಗಲ್ ನೋಟಿಸ್ ತನ್ನ ಜೇಬಿನಲ್ಲಿಯೇ ಇಟ್ಟುಕೊಂಡು ಮರಕ್ಕೆ ನೀನು ತೆಗೆದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು. ಮೃತ ರೈತನ ಮನೆಗೆ ತಹಶೀಲ್ದಾರ್ ಮತ್ತು ಸಹಾಯಕ ಕೃಷಿ…

Read More

ಬೆಂಗಳೂರು: ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪದಲ್ಲಿ ತೊಡಗಿದ್ದ ಕಾಂಗ್ರೆಸ್ ಪಕ್ಷವನ್ನು ಮುಖ್ಯಮಂತ್ರಿ ಬಸವರಾಜ್.ಎಸ್. ಬೊಮ್ಮಾಯಿರವರು ವಿಧಾನಸಭೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದರು. ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿ ಎಸಿಬಿ ಮೂಲಕ 59 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾದ ವಿಷಯವನ್ನು ಹಾಗೂ ಅರ್ಕಾವತಿ ಬಡಾವಣೆ ಹೆಸರಿನಲ್ಲಿ ಡಿ ನೋಟಿಫಿಕೇಷನ್ ಕುರಿತು ನ್ಯಾ.ಕೆಂಪಣ್ಣ ಆಯೋಗದ ವರದಿಯನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು “ನೀವು ಭ್ರಷ್ಟರಾಗಿದ್ದಲ್ಲದೇ ವ್ಯವಸ್ಥೆಯನ್ನೂ ಭ್ರಷ್ಟಗೊಳಿಸಿದ್ದೀರಿ” ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಅಧಿಕಾರಕ್ಕೆ ಬಂದ ನಂತರ ಲೋಕಾಯುಕ್ತವನ್ನು ಪುನರ್ ಸ್ಥಾಪಿಸಿದ್ದು, ಎಲ್ಲಾ ಅಧಿಕಾರವನ್ನು ನೀಡಿದ್ದೇವೆ. ಕಾಂಗ್ರೆಸ್ ಆಡಳಿತ ಅವಧಿಯ ಎಲ್ಲಾ ಭ್ರಷ್ಟಾಚಾರದ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಬೊಮ್ಮಾಯಿ ಘೋಷಿಸಿದರು. ಹೈಕೋರ್ಟ್ ನ್ಯಾಯಾಧೀಶರೇ ಲೋಕಾಯುಕ್ತವನ್ನು ಪುನಃ ಆರಂಭಿಸಿ ಎಸಿಬಿ ಯನ್ನು ಮುಚ್ಚುವಂತೆ ಆದೇಶ ನೀಡಿದ್ದಾರೆ. ತನಿಖೆ ಬಾಕಿಯಿರುವ ಪ್ರಕರಣಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದಲೇ ಎಸಿಬಿ…

Read More

ರೈಲ್ವೆ ಹಳಿಗಳಲ್ಲಿ ನಿಂತು ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಿಸುತ್ತಿದ್ದ ವೇಳೆ ಇಬ್ಬರು ಯುವಕರು ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ದೆಹಲಿಯ ಕಾಂತಿ ನಗರಲ್ಲಿ ನಡೆದಿದೆ. ಮೃತರನ್ನು ಅಂತಿಮ ವರ್ಷದ ಬಿಟೆಕ್ ವಿದ್ಯಾರ್ಥಿ ವಂಶ್ ಶರ್ಮಾ (23) ಮತ್ತು ಸೇಲ್ಸ್ಮ್ಯಾನ್ ಮೋನು (20) ಎಂದು ಗುರುತಿಸಲಾಗಿದೆ. ಇಬ್ಬರೂ ಕಾಂತಿ ನಗರದ ನಿವಾಸಿಗಳಾಗಿದ್ದಾರೆ. ಯುವಕರು ಮೊಬೈಲ್ ನಲ್ಲಿ ಕಿರುಚಿತ್ರಗಳನ್ನು ಚಿತ್ರೀಕರಿಸುತ್ತಿರುವ ಹವ್ಯಾಸಹೊಂದಿದ್ದರು. ಆಗಾಗ ಲೈವ್ ವಿಡಿಯೊಗಳನ್ನು ಮಾಡಲು ರೈಲ್ವೆ ಹಳಿಗಳ ಬಳಿ ಬರುತ್ತಿದ್ದರು ಎಂಬುದು ವಿಷಯ ತಿಳಿದುಬಂದಿದೆ. ಪೊಲೀಸರ ಪ್ರಕಾರ, ಫೆಬ್ರವರಿ 22 ರಂದು ಈ ಘಟನೆ ನಡೆದಿದ್ದು, ಹಳೆ ದೆಹಲಿ ರೈಲ್ವೆ ನಿಲ್ದಾಣದ ಶಹದಾರ ಪೊಲೀಸ್ ಠಾಣೆಗೆ ಸಂಜೆ 4.35 ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ.. ರೈಲ್ವೆ ಹಳಿ ಮೇಲೆ ಅವರ ಮೊಬೈಲ್ ಗಳು  ಕೂಡ ಪತ್ತೆಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ತುರುವೇಕೆರೆ: ತಾಲೂಕು ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾಗಿ ಸೂಳೆಕೆರೆ ಮೋಹನ್ ಕುಮಾರ್ ಅವರನ್ನು ಮಾಜಿ ಶಾಸಕ ಎಂ ಟಿ ಕೃಷ್ಣಪ್ಪನವರು ಆಯ್ಕೆ ಮಾಡಿ ಅಭಿನಂದಿಸಿದರು. ಇದೇ ವೇಳೆ ಮಾತನಾಡಿದ ನೂತನವಾಗಿ ಆಯ್ಕೆಯಾದ ಸೂಳೆಕೆರೆ ಮೋಹನ್ ಕುಮಾರ್, ಕ್ಷೇತ್ರ ಅಭಿವೃದ್ಧಿಯಾಗಲು ಇರುವ ಅವಕಾಶಗಳನ್ನು ನಾವುಗಳು ಮೈಮರೆಯಬಾರದು, ಜೆಡಿಎಸ್ ಗೆ ಮತ ನೀಡುವ ಮೂಲಕ ಜೆ ಡಿ ಎಸ್ ಪಕ್ಷವನ್ನು ಬಲಿಷ್ಠಗೊಳಿಸಿ ಜೊತೆಗೆ ಚುನಾವಣಾ ಸಮಯದಲ್ಲಿ ಕೆಲವು ಆಸೆ ಆಮಿಷ ತೋರಿಸುತ್ತಾರೆ. ಯಾವುದೇ ಕಾರಣಕ್ಕೂ ಅಂಥವುಗಳಿಗೆ ಮಣೆ ಹಾಕದೆ ಈ ಬಾರಿ ಎಂ.ಟಿ.ಕೃಷ್ಣಪ್ಪನವರನ್ನು ತಾಲೂಕಿನ ಶಾಸಕರನ್ನಾಗಿ ಆಯ್ಕೆ ಮಾಡುವುದು ನಮ್ಮೆಲ್ಲರ ಗುರಿ ಎಂದರು. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ಗೋಣಿ ತುಮಕೂರು ನಾಗೇಂದ್ರ, ಸೂಳೆಕೆರೆ ಶಂಕರೇಗೌಡ, ಮಂಜುನಾಥ್ . ವೆಂಕಟೇಶ್, ಚಂದ್ರಣ್ಣ, ಗೋಣಿ ತುಮಕೂರು ಮಂಜು, (ಜಲ್ಲಿ) ಮಾದಿಹಳ್ಳಿ ಮಲ್ಲಿಕಾ, ಕಾಂತಣ್ಣ, ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ನಗರದ ಕಿರಣ್, ಕಲ್ಕೆರೆ ಅವಿನಾಶ್, ಇನ್ನು ಅನೇಕ ಮುಖಂಡರುಗಳು…

Read More