Subscribe to Updates
Get the latest creative news from FooBar about art, design and business.
- ಪಾವಗಡ: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ
- ಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಹರಿಂದ ಅರ್ಜಿ ಆಹ್ವಾನ
- ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
- ಎಸ್.ಅಪ್ಪೇನಹಳ್ಳಿ: ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನವಿಲು ನರ್ತನ; ಗ್ರಾಮಸ್ಥರಲ್ಲಿ ಕುತೂಹಲ
- ನಾಲ್ಕು ದಶಕಗಳಿಂದ ರಸ್ತೆ ಅಭಿವೃದ್ಧಿ ಕಾಣದ ಬೆಟ್ಟಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಂಗನಾಥ್ ಚಾಲನೆ
- ಕಳ್ಳಂಬೆಳ್ಳ ಪೊಲೀಸರಿಂದ ರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ
- ಹರ್ತಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಸಚಿವ ಡಾ. ಜಿ. ಪರಮೇಶ್ವರ್ ಶಂಕುಸ್ಥಾಪನೆ
- ಸಚಿವ ಡಿ.ಸುಧಾಕರ್ ಪಾರ್ಥಿವ ಶರೀರಕ್ಕೆ ನಮನ: ಭಾವುಕರಾದ ಕೆ.ಎನ್.ರಾಜಣ್ಣ, ಕಂಬನಿ ಮಿಡಿದ ಜಿ.ಪರಮೇಶ್ವರ್
Author: admin
ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಗೀತಾ (32) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆಎಸ್ಆರ್ಪಿ ವಸತಿಗೃಹದಲ್ಲಿ ನಡೆದಿದೆ. ಗೀತಾ ಅನಾರೋಗ್ಯದ ಕಾರಣ ಮಧ್ಯಾಹ್ನ ಕೆಲಸದಿಂದ ಮನೆಗೆ ಬಂದಿದ್ದರು. ಮನೆಯಲ್ಲಿದ್ದ ಪತಿಯನ್ನು ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬರಲು ಕಳುಹಿಸಿದ್ದಾರೆ. ಹೀಗೆ ಹೋದ ಪತಿ, ಒಟಿಪಿಗಾಗಿ ಗೀತಾಗೆ ಕರೆ ಮಾಡಿದಾಗ ಆಕೆ ಉತ್ತರಿಸಿಲ್ಲ. ನಂತರ ಮನೆಗೆ ವಾಪಸ್ಸು ಬಂದು ನೋಡಿದಾಗ ಗೀತಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಾಮರಾಜನಗರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ಮರಳುಗಾಡಿನಲ್ಲಿದ್ದ ನಮಗೆ ತೊರೆ, ಕೆರೆ, ನದಿ ದಾಟಿಸಿ ಈಗ ಸಮುದ್ರದ ಬಳಿ ಕಾಂಗ್ರೆಸ್ ತಂದು ನಿಲ್ಲಿಸಿದೆ ಎಂದು ಹಾಸ್ಯ ನಟ ಸಾಧುಕೋಕಿಲ ಹೇಳಿದರು. ಗುಂಡ್ಲುಪೇಟೆಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಈಗ ನಾವು ದೊಡ್ಡ-ದೊಡ್ಡ ಬಿಲ್ಡಿಂಗ್, ಐಷರಾಮಿ ಜೀವನ, ಫ್ಲೈ ಓವರ್ ನೋಡುತ್ತಿದ್ದೇವೆ, ಆದರೆ ಸ್ವಾತಂತ್ರ್ಯ ಬಂದ ಬಳಿಕ ಇಷ್ಟು ದಿನ ನಮ್ಮನ್ನು ಕರೆತಂದಿದ್ದು ಕಾಂಗ್ರೆಸ್ ಎಂದರು. ಕಾಂಗ್ರೆಸ್ ಗೆ ಮೋಸ ಮಾಡಿದರೇ ತಂದೆತಾಯಿಗೆ ಮೋಸ ಮಾಡಿದಂತೆ, ಕಾಂಗ್ರೆಸ್ ಗೂ ಮತ್ತು ಜನರಿಗೂ ಇರುವ ಸಂಬಂಧ ಕೇವಲ ರಾಜಕೀಯದ್ದಲ್ಲ, ಹೃದಯದ ಸಂಬಂಧ ಎಂದರು. ಕಾಂಗ್ರೆಸ್ ಗೆ ಸಿದ್ದರಾಮಯ್ಯ ಹುಲಿ ಇದ್ದಂತೆ ಡಿ.ಕೆ.ಶಿವಕುಮಾರ್ ಸಿಂಹ ಇದ್ದಂತೆ ಇವರಿಬ್ಬರು ಇದ್ದ ಮೇಲೆ ಬೇರೆಯವರು ಏತಕ್ಕೆ, ಕಾಂಗ್ರೆಸ್ ನವರಿಗೆ ಓಟ್ ಹಾಕಿ ಎಂದು ಬೇಡಬೇಕಾ..?? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಗೆ ಮತ ಹಾಕುವುದು ನಮ್ಮ ಕರ್ತವ್ಯ, ಕಾಂಗ್ರೆಸ್ ಗೆ ಮತ ಹಾಕದಿದ್ದರೇ ತಂದೆ-ತಾಯಿಗೆ ಮೋಸ…
ರಾಜ್ಯ ಕಾಂಗ್ರೆಸ್ ಪಕ್ಷವು ಮೂರು ಹಂತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಫೆಬ್ರವರಿ 27 ರಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಫೈನಲ್ ಆಗಲಿದೆ ಎನ್ನಲಾಗಿದೆ. ಮೂರು ಹಂತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಯಾವುದೇ ಗೊಂದಲವಿಲ್ಲದ 140-150 ಕ್ಷೇತ್ರಗಳ ಮೊದಲ ಪಟ್ಟಿ, ಗೊಂದಲ ಬಗೆಹರಿಸಿಕೊಂಡ 30-40 ಅಭ್ಯರ್ಥಿಗಳ ಎರಡನೇ ಪಟ್ಟಿ, ಬಹಳಷ್ಟು ಗೊಂದಲ, ಸೋಲುವ ಆತಂಕವಿರುವ ಕ್ಷೇತ್ರಗಳ ಮೂರನೇ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕಾಂಗ್ರೆಸ್ ನವರ ಬೂಟಾಟಿಕೆ ಮಾತು, ಸುಳ್ಳು ಹೇಳುವ ಚಾಳಿಯಿಂದ ಸುಳ್ಳಿನ ಸುಳಿಯಲ್ಲಿ ಸಿಲುಕಿದ್ದಾರೆ. ತಮ್ಮ ಕಾಲದ ಭ್ರಷ್ಟಾಚಾರಗಳನ್ನು. ಜಾತಿಗಳನ್ನು ಒಡೆಯುವ ಕೆಲಸವನ್ನು ಮಾಡಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟ ಕಾಂಗ್ರೆಸ್ ನ್ನು ಶಾಶ್ವತವಾಗಿ ಜನರು ಮನೆಗೆ ಕಳಿಸಲಿದ್ದಾರೆ ಎಂದರು. ಹಾಸನ ಬಹಳ ವರ್ಷಗಳಿಂದ ಒಂದೇ ಪಕ್ಷದ ಹಿಡಿತದಲ್ಲಿದ್ದು, ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. 3 ವರ್ಷಗಳಿಂದ ಭಾಜಪ ಸರ್ಕಾರದ ಆಡಳಿತವನ್ನು ಜನರು ನೋಡಿದ್ದಾರೆ. ಹಲವು ವರ್ಷಗಳ ಸಮಸ್ಯೆಗಳನ್ನು ಕಗ್ಗಂಟಾಗಿಸಿ, ರಾಜ್ಯದ ಪ್ರಗತಿಯನ್ನು ಕುಂಠಿತಗೊಳಿಸಲಾಗಿತ್ತು. ಈ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕಿದೆ. ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಲಿರುವ ವಿಶ್ವಾಸ ನಮಗಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…
9-3-2023: ಕನ್ನಡ, ಅರೇಬಿಕ್ 11-3-2023: ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ 13-3-2023: ಅರ್ಥಶಾಸ್ತ್ರ 14-3-2023: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ 15-3-2023: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ 16-03-2023: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ 17-3-2023: ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್ 18-3-2023: ಭೂಗೋಶಶಾಸ್ತ್ರ, ಜೀವಶಾಸ್ತ್ರ 20-3-2023: ಇತಿಹಾಸ, ಭೌತಶಾಸ್ತ್ರ 21-3-2023: ಹಿಂದಿ 23-3-2023: – ಇಂಗ್ಲೀಷ್ 25-3-2023: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ 27-3-2023: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ 29-03-2023: ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ ಮಾರ್ಚ್ 9 ರಿಂದ ಮಾರ್ಚ್ 29 ರವರೆಗೂ ದ್ವೀತಿಯ ಪಿಯು ಪರೀಕ್ಷೆಗಳು ನಡೆಯಲಿದ್ದು, ಒಟ್ಟು 7,27,387 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್,…
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕೊಟಗಾರಲಹಳ್ಳಿ ಶಾಲೆಯ ಸಹ ಶಿಕ್ಷಕ ಪಿ.ನಾಗಭೂಷಣ್ ವಿದ್ಯಾರ್ಥಿನಿಯರ ಮೊಬೈಲ್‌ಗಳಿಗೆ ಅಸಭ್ಯ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇಲೆ ಆತನನ್ನು ಅಮಾನತು ಮಾಡಲಾಗಿದೆ. ಶಾಲಾ ವಿದ್ಯಾರ್ಥಿನಿಯರಿಗೆ ಅಸಭ್ಯ ಸಂದೇಶ ಕಳುಹಿಸುವುದು ಹಾಗೂ ಶಾಲಾ ವಿದ್ಯಾರ್ಥಿನಿಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಸಂದರ್ಭದಲ್ಲಿ ಉತ್ತರ ಬರೆದುಕೊಟ್ಟು ಹೆಚ್ಚು ಅಂಕ ನೀಡುತ್ತಿದ್ದರು. ಈ ಆರೋಪಗಳ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಶಿಕ್ಷಕ ನಾಗಭೂಷಣ್ ವರ್ತನೆಯನ್ನು ತಿದ್ದಿಕೊಳ್ಳುವುದಾಗಿ ತಿಳಿಸಿ ತಪ್ಪೊಪ್ಪಿಗೆ ಪತ್ರ ನೀಡಿದ್ದಾರೆ. ಶಿಕ್ಷಕರ ಈ ದುರ್ವರ್ತನೆ ವಿದ್ಯಾರ್ಥಿಗಳ ಕಲಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಶಿಕ್ಷಕನ ವಿರುದ್ಧ ಶಿಸ್ತುಕ್ರಮ ಜರುಗಿಸಲು ನಿರ್ಣಯಿಸಿ, ಆರೋಪಗಳ ಬಗ್ಗೆ ಇಲಾಖೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ವಿಜಯಪುರ : ಸರ್ಕಾರಿ ಶಾಲಾ ಶಿಕ್ಷಕಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಗಣೇಶ ನಗರದಲ್ಲಿ ನಡೆದಿದೆ. ಶಿಕ್ಷಕಿ ದಿಲ್ಶಾದ್ ಹವಾಲ್ದಾರ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಶಿಕ್ಷಕಿಯ ಪುತ್ರ ಮುಜಾಮಿಲ್ ಮೇಲೆಯೂ ಹಲ್ಲೆ ನಡೆಸಲಾಗಿದೆ. ಮುಜಾಮಿಲ್ ಸ್ಥಿತಿ ಗಂಭೀರವಾಗಿದ್ದು ವಿಜಯಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಭೀಕರ ಹತ್ಯೆಯಿಂದಾಗಿ ಇಂಡಿ ಪಟ್ಟಣದ ಜನರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾಗಿ ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇಂಡಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ಹಿಂಡಲಗಾ ಗ್ರಾಮದ ಕಲ್ಮೇಶ್ವರ ನಗರದ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ ಹಣ ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಕಾಮಗಾರಿಗಳಿಗೆ ಮಂಗಳವಾರ ಸಂಜೆ ಭೂಮಿ ಪೂಜೆಯನ್ನು ನಡೆಸಿ ಚಾಲನೆ ನೀಡಿದರು. ಇದೇ ವೇಳೆ, ಹಿಂಡಲಗಾ ಗ್ರಾಮದ ಶ್ರೀನಾಥ ನಗರದ ಚರಂಡಿ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಹಣ ಮಂಜೂರು ಮಾಡಿಸಿ, ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಸಹ ಲಕ್ಷ್ಮೀ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಆನಂದ ಪಾಟೀಲ, ನಿಖಿಲ ಮಾಸೇಕರ್, ಸಂದೀಪ ಮೊರೆ, ಗಜು ಕಾಕತ್ಕರ್, ರಾಗೋಜಿ, ಪಾಟೀಲ, ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಕುದುರೆಮನಿಕರ್, ವಿಠ್ಠಲ ದೇಸಾಯಿ, ಅಶೋಕ ಕಾಂಬಳೆ, ರಾಹುಲ್ ಉರನಕರ್, ಪ್ರವೀಣ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬಂಜಾರ ಸಮಾಜದ ನಾಯಕ ಮತ್ತು ಕಾರಭಾರಿ ಪಗಡಿಯ ವೈಭವ್ ನಗರದ ಕಲ್ಮೇಶ್ವರ ನಗರದಲ್ಲಿಸಮಾರಂಭ ಜರುಗಿತು.ಕಾರ್ಯಕ್ರಮದ ವಿಶೇಷತೆ ಎಂದರೆ ಬಂಜಾರ ಸಮುದಾಯ ತಮ್ಮ ನಾಯಕ ಮತ್ತು ಕಾರಭಾರಿ ಯನ್ನುಆಯ್ಕೆ ಮಾಡಿ ಅವರಿಗೆ ತಮ್ಮ ಸಮಾಜದ ನೇತೃತ್ವವನ್ನು ನೀಡುತ್ತಾರೆ. ನಾಯಕ ಮತ್ತು ಕಾರಭಾರಿ ಸಮಾಜದ ಧಾರ್ಮಿಕ ಸಮಾರಂಭದ ನೇತೃತ್ವ ವಹಿಸಿಕೊಳ್ಳುವುದು , ಸಮಾಜದ ಏಳಿಗೆಗಾಗಿ ಶ್ರಮಿಸುವುದು, ಮತ್ತು ಸಮಾಜದ ನ್ಯಾಯದಾನವಾಗಿ ಕಾರ್ಯನಿರ್ವಹಿಸುವುದು ಇವರ ಕರ್ತವ್ಯ ಇರುತ್ತದೆ. ಬಂಜಾರ ಸಮಾಜದ ಹಲವಾರು ಮುಖಂಡರುಗಳು ಹಾಗೂ ಸಮುದಾಯ ಜನರಗಳು ಈ ಸಮಾರಂಭದಲ್ಲಿ ಭಾಗವಹಿಸಿ ತಮ್ಮ ನಾಯಕ ಮತ್ತು ಕಾರಭಾರಿ ಪಗಡಿಯ ಆಯ್ಕೆ ಮಾಡಿ ಸಂಭ್ರಮಿಸಿತು ಸುರೇಶ ರಾಥೋಡ್ ಇವರು ಬಿ .ಕೆ ಕಂಗ್ರಾಳಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯುತ್ತಮ ಸಮಾಜ ಸೇವಕರಾಗಿ ಬಡ ಮತ್ತು ದೀನದಲಿತರಗಾಗಿ ಇವರ ಸಮಾಜ ಸೇವೆ ನಡೆಯುತ್ತಲೇ ಇದೆ .ಈಗ ಇವರ ನೇತೃತ್ವಕ್ಕೆ ಬಂಜಾರ ಸಮಾಜದ ನಾಯಕ ಪಟ್ಟ ದೊರಕಿದ್ದು ಈ ಸಮಾಜದ ಏಳಿಗೆಗಾಗಿ ಹಾಗೂ ಅಭಿವೃದ್ಧಿಗಾಗಿ. ನಮ್ಮತುಮಕೂರು.ಕಾಂನ…
ಬೆಳಗಾವಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಕಲ್ಲು ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲ್ಲೂಕಿನ ಬಸರಿಕಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಾರುತಿ ಕನ್ನೆಕರ (32) ಹತ್ಯೆ ಆದ ವ್ಯಕ್ತಿ. ಸೋಮವಾರ ರಾತ್ರಿ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ಹಾಕಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳುದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy