Subscribe to Updates
Get the latest creative news from FooBar about art, design and business.
- ಪಾವಗಡ: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ
- ಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಹರಿಂದ ಅರ್ಜಿ ಆಹ್ವಾನ
- ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
- ಎಸ್.ಅಪ್ಪೇನಹಳ್ಳಿ: ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನವಿಲು ನರ್ತನ; ಗ್ರಾಮಸ್ಥರಲ್ಲಿ ಕುತೂಹಲ
- ನಾಲ್ಕು ದಶಕಗಳಿಂದ ರಸ್ತೆ ಅಭಿವೃದ್ಧಿ ಕಾಣದ ಬೆಟ್ಟಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಂಗನಾಥ್ ಚಾಲನೆ
- ಕಳ್ಳಂಬೆಳ್ಳ ಪೊಲೀಸರಿಂದ ರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ
- ಹರ್ತಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಸಚಿವ ಡಾ. ಜಿ. ಪರಮೇಶ್ವರ್ ಶಂಕುಸ್ಥಾಪನೆ
- ಸಚಿವ ಡಿ.ಸುಧಾಕರ್ ಪಾರ್ಥಿವ ಶರೀರಕ್ಕೆ ನಮನ: ಭಾವುಕರಾದ ಕೆ.ಎನ್.ರಾಜಣ್ಣ, ಕಂಬನಿ ಮಿಡಿದ ಜಿ.ಪರಮೇಶ್ವರ್
Author: admin
ಬೆಂಗಳೂರು: ಸಮ್ಮಿಶ್ರ ಸರ್ಕಾರ ಹೇಗೆ ರಚನೆಯಾಯ್ತು ಎಂದು ಎಲ್ಲರಿಗೂ ಗೊತ್ತಿದೆ. ಸವಾಲಿನ ಸಂದರ್ಭದಲ್ಲಿ ನಾನು ಸಿಎಂ ಆಗಿದ್ದೇನೆ. ನಾವು ಆತ್ಮಸ್ಥೈರ್ಯದಿಂದ ಕೆಲಸ ಮಾಡಿದ್ದೇವೆ. ನಾವು ಒಂದು ದಿನವೂ ಸರಕಾರಿ ನೌಕರರಿಗೆ ಸಂಬಳ ನಿಲ್ಲಿಸಲಿಲ್ಲ. ತೆರಿಗೆ ಸುಧಾರಣೆಯಲ್ಲಿ ಗಣನೀಯ ಸುಧಾರಣೆ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು, ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ನೀಡಿದ್ದು ವಿಧಾನಸಭೆಯಲ್ಲಿ ಮಾತನಾಡಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರಚನೆಯಾದಾಗ ಪ್ರವಾಹ ಬಂದಿತ್ತು. ಬಳಿಕ ಕೊರೊನಾ ಬಂದಾಗ ಜೀವನ ನಡೆಸಲು ಸಮಸ್ಯೆಯಾಗಿತ್ತು. ಆಕ್ಸಿಜನ್ ಪೂರೈಕೆ ಮಾಡಲು ಸೂಕ್ತ ಕ್ರಮ ತೆಗೆದುಕೊಂಡೆವು. ಒಂದು ದಿನವೂ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಂಡಿದ್ದೇವೆ ಕೊರೊನಾ ಲಸಿಕೆ ನೀಡುವಾಗ ಅಪನಂಬಿಕೆಯ ಮಾತುಗಳು ಬಂದವು. ಆದರೆ ನಾವು ನೀಡಿದ ಲಸಿಕೆ ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಉತ್ತಮವಾಗಿ ತೆರಿಗೆ ಸಂಗ್ರಹ ಹಿನ್ನೆಲೆ ಉತ್ತಮ ಬಜೆಟ್ ಕೊಟ್ಟಿದ್ದೇವೆ. ರೈತರು…
ಮಾಜಿ ಶಾಸಕ ಹಾಗೂ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಫಿರೋಜ್ ಶೇಠ ಅವರು ತಮ್ಮ ರಾಜಕೀಯ ಹಾಗೂ 2023ರ ರಾಜ್ಯ ವಿಧಾನಸಭಾ ಚುನಾವಣೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.ಸರ್ ನೀವು ಈ ಚುನಾವಣೆಯನ್ನು ಯಾವ ರೀತಿ ನೋಡುತ್ತೀರಿ? ಇದೊಂದು ಬದಲಾವಣೆಯ ಸಮಯ ಇಲ್ಲಿ ಹಲವಾರು ರಾಜಕೀಯ ಬದಲಾವಣೆ ನಡೆಯುತ್ತಾ ಇದೆ ಈ ಕ್ಷೇತ್ರದಲ್ಲಿ ಜನ ಅದನ್ನು ಅನುಭವಿಸುತ್ತಿದ್ದಾರೆ. ನಾನುಬೆಳಗಾವಿ ನಗರ ಮತ್ತು ಉತ್ತರ ಕ್ಷೇತ್ರಕೆ10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ .ಬಡಜನರ ಸೇವೆ ನನಗೆ ಆಶೀರ್ವಾದ ಇದೆ ನಾನು ಇನ್ನಷ್ಟು ಹೆಚ್ಚು ಬಡ ಜನರ ಸೇವೆ ಮಾಡಲು ಹೆಚ್ಚುಕನಾಗಿದ್ದೇನೆ. ಸರ್ ಈ ಕ್ಷೇತ್ರ ಜಾತಿ ಧರ್ಮ ಆಧಾರಗಳ ಮೇಲೆ ವಿಭಾಗವಾಗಿದೆಯೆ? ಹೌದು ಅನ್ನುವಕ್ಕಿಂತ ಇದರಲ್ಲಿ ಕೆಲವು ಬದಲಾವಣೆಗಳು ಆಗಿದೆ ಮಾತ್ರ ನಿಜ ,ನಾವು ಎಲ್ಲರೂ ಜೊತೆ ಸಮಬಾಳು ಸಮಭಾಗ ಸಮಪಾಲು ಮತ್ತು ಗೌರವದೊಂದಿಗೆ ಜೀವನ ನಡೆಸಬೇಕೆಂದು ನಮ್ಮೆಲ್ಲರ ಬಯಕೆಯಾಗಿದೆ ಇಲ್ಲಿ ಧರ್ಮ ಜಾತಿ ಮತ ಯಾವುದು ಲೆಕ್ಕಕ್ಕಿಲ್ಲ ನಾವು ಎಲ್ಲರೊಂದಿಗೆ ಇದ್ದೇನೆ ಆದ್ದರಿಂದ…
ಶ್ರೀ ಶಿವಲಿಂಗೇಶ್ವರ ದೇವಸ್ಥಾನ ಮಹಾಪ್ರಸಾದ ಉತ್ಸವ ಸಮಿತಿ ವತಿಯಿಂದ ಮಹಾಶಿವರಾತ್ರಿಯ ನಿಮಿತ್ತ 7ನೇ ಮಹಾಪ್ರಸಾದ ಕಾರ್ಯಕ್ರಮವನ್ನು ಆಶ್ರಯ ಕಾಲೋನಿ ಗಣೇಶ ನಗರ್ ದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಫಿರೋಜ್ ಶೇಠ ಭಾಗವಹಿಸಿದ್ದ ಈ ಕಾರ್ಯಕ್ರಮ ಅಲಾರ ವಾಡ್ ಆಶ್ರಯ ಕಾಲೋನಿ ಗಣೇಶ ನಗರ್ ಶ್ರೀ ಶಿವಲಿಂಗೇಶ್ವರ ದೇವಸ್ಥಾನ ಮಹಾಪ್ರಸಾದ ಉತ್ಸವದ ವತಿಯಿಂದ ಏಳು ವರ್ಷ ಗಳಿಂದ ಮಹಾಪ್ರಸಾದ ಹಾಗೂ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು ಮಾಜಿ ಶಾಸಕರನ್ನು ಮಹಿಳೆಯರು ತಲೆಯ ಮೇಲೆ ಕುಂಭ ಕೊಡ ಹೊತ್ತುಕೊಂಡು ಮೆರವಣಿಗೆ ಮೂಲಕ ಸ್ವಾಗತ ಮಾಡಿದರು. ಮಂದಿರದ ಆವರಣದಲ್ಲಿ ಧ್ವಜಾರೋಹನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಶಾಸಕ ಇಲ್ಲಿ ಎಲ್ಲಾ ಜಾತಿಯ ಎಲ್ಲಾ ಧರ್ಮದ ಜನರಲ್ಲಿದ್ದಾರೆ. ಶ್ರೀ ಶಿವಲಿಂಗೇಶ್ವರ ದೇವಸ್ಥಾನ ಮಹಾಪ್ರಸಾದ ನಿಮಿತ್ತ ನಾವೆಲ್ಲರೂ ಇಲ್ಲಿ ಯಾವುದೇ ಜಾತಿ ,ಮತ ,ಧರ್ಮಗಳ ಭೇದವಿಲ್ಲದೆ ಈ ಆಚರಣೆಯಲ್ಲಿ ಎಲ್ಲರೂ ಭಾಗವಹಿಸಿದ್ದಾರೆ. ನಾವು ಈ ದೇಶ ಅಖಂಡತೆಯನ್ನು…
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಪೂಜೆ ಸರಣಿ ಮುಂದುವರಿದಿದ್ದು, ಸೋಮವಾರವೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹತ್ತಾರು ಕಾಮಗಾರಿಗಳಿಗೆ ಚಾಲನೆ ನೀಡಿದರು. ಭಾನುವಾರ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಪೂಜೆ ಮೂಲಕ ಚಾಲನೆ ನೀಡಿದ್ದರು. ಸೋಮವಾರ ಸಹ ಬೆಳಗ್ಗೆಯಿಂದಲೇ ವಿವಿಧ ಗ್ರಾಮಗಳಿಗೆ ತೆರಳಿ ಸುಮಾರು 5.42 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಅಂಬೇವಾಡಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ದೃಷ್ಟಿಯಿಂದ ಜಲಜೀವನ್ ಮಿಷನ್ ಯೋಜನೆಡಿಯಲ್ಲಿ 2.26 ಕೋಟಿ ರೂ, ಬಿಡುಗಡೆಯಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಅಮೂಲ್ ಭಾತ್ಕಂಡೆ, ಪುಂಡಲೀಕ್ ಬಾಂದುರ್ಗೆ, ವಿಕ್ರಂ ತೆರಳೆ, ಸಂಗೀತಾ ಅಂಬೇಕರ್, ಯಲ್ಲಪ್ಪ ಲೋಹಾರ್, ರಾಜು ಕೋಚೇರಿ, ಪ್ರಸಾದ ತೆರಳೆ, ಮನೋಹರ್ ಸಾವಂತ್, ಸುಭಾಷ ನಾಯ್ಕ್, ಜ್ಯೋತಿಬಾ ಶಹಾಪೂರಕರ್, ದತ್ತು ಚೌಗುಲೆ, ರಾಮಣ್ಣ ತೆರಳೆ…
ಹಾಸನ: ಹೊಳೆನರಸೀಪುರ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ ಕೋಟೆಯಲ್ಲಿ ಲಯನ್ಸ್ ಕ್ಲಬ್ ಹೊಳೆನರಸೀಪುರ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಹೆಣ್ಣೂರು ಮುಖ್ಯ ರಸ್ತೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಮುಖ್ಯ ಶಿಕ್ಷಕರಾದ ದವಲತ್ ರಾವ್ ಇವರ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಬುದ್ಧಿ ಮಾಂದ್ಯ, ಸೀಳು ತುಟಿ, ಪಾರ್ಶ್ವವಾಯು, ಧ್ವನಿ ತೊಂದರೆ, ಕಿವಿ ಸೋರುವಿಕೆ, ಕಲಿಕಾ ತೊಂದರೆ, ವಾಕ್, ಶ್ರವಣ, ದೋಷವುಳ್ಳ ಇಂತಹ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷೆ ಹರಿನಾಕ್ಷಿ ಬಿ.ಎಲ್., ಕಾರ್ಯದರ್ಶಿ ಲೀನಾಕ್ ಲಿದ್, ಮಹಮದ್ ಖಾಲಿದ್, ವಲಯ ಅಧ್ಯಕ್ಷರು ಮತ್ತು ಸದಸ್ಯರು ತಾಲ್ಲೂಕು ಅಂಗವಿಕಲ ಇಲಾಖೆಯವರಾದ ಕೆ.ಬಿ.ಹರೀಶ್, ಬಿ.ಆರ್.ಸಿ.ಕೇಂದ್ರದಿಂದ ವಿಶ್ವನಾಥ್, ಎಚ್.ಓಂಗಿರಪ್ಪ, ಪ್ರಶಾಂತ್, ಜ್ಯೋತಿಲಕ್ಷ್ಮೀ ಶಾಲೆಯ ಶಿಕ್ಷಕರು. ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ವರದಿ: ಮಂಜು, ಶ್ರವಣೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ…
ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಹಾಸನ ಮತ್ತು ಮಂಡ್ಯ ಗಡಿ ಭಾಗ ಶ್ರವಣಹಳ್ಳಿ ಗ್ರಾಮದ ಜವರೇಗೌಡ ಬಿನ್ ಚಂದ್ರೇಕಾಳೆಗೌಡ, ಸೇರಿದ ಮೂರು ಎಕರೆಯ ರಾಗಿ ಹೂಲ್ಲಿನ ಒಕ್ಕಣೆಗೆ ಸೋಮವಾರ ಮಧ್ಯಾಹ್ನ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಹುಲ್ಲಿನ ಗುಡ್ಡೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ ಎಂದು ವಾರಸುದಾರರು ತಿಳಿಸಿದ್ದು, ಘಟನೆಯಿಂದ ಸುಮಾರು 60,000ಕ್ಕೂ ಹೆಚ್ಚು ನಷ್ಟವಾಗಿದೆ. ತಾಲೂಕು ಆಡಳಿತ ಈ ಘಟನೆಯನ್ನು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿವೇಗೌಡ, ವಿಜಿ, ಮೊಗಣ್ಣಗೌಡ, ವೆಂಕಟೇಶ್, ರತ್ನಮ್ಮ, ಮಂಜಮ್ಮ, ಸೇರಿದಂತೆ ಉಪಸ್ಥಿತರಿದ್ದರು. ವರದಿ: ಮಂಜು ಶ್ರವಣೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಕೊರಟಗೆರೆ: ಲಾರಿ ಹಾಗೂ ಗಾರ್ಮೆಂಟ್ಸ್ ಕಾರ್ಮಿಕರು ಪ್ರಯಾಣಿಸುತ್ತಿದ್ದ ಬಸ್ ನಡುವೆ ಕೊರಟಗೆರೆ ಬೈಪಾಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಇಂದು ಸಂಜೆ ಈ ದುರ್ಘಟನೆ ನಡೆದಿದ್ದು, ಸಂಜೆ ಕೆಲಸ ಮುಗಿಸಿ ಕಾರ್ಮಿಕರು ತಮ್ಮ ಮನೆಗೆ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದೆ. ಘಟನೆ ವೇಳೆ ಬಸ್ ನಲ್ಲಿ ಸುಮಾರು 75ಕ್ಕೂ ಅಧಿಕ ಕಾರ್ಮಿಕರು ಇದ್ದರು. ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಸ್ಥಳಕ್ಕೆ ಆಗಮಿಸಿದ್ದು, ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳನ್ನು ತಮ್ಮ ವಾಹನದಲ್ಲೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1 ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ತುಮಕೂರು: ಕಾಲೇಜು ಶುಲ್ಕ ಪಾವತಿಸಿಲ್ಲ ಎಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಘಟನೆ ತುಮಕೂರಿನ ಎಸ್.ಎಸ್.ಪುರಂನ ಆಕಾಶ್ ಕಾಲೇಜಿನಲ್ಲಿ ನಡೆದಿದ್ದು, ಕಾಲೇಜು ಆಡಳಿತ ಮಂಡಳಿಯ ವರ್ತನೆಗೆ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಬೆಳಿಗ್ಗೆ ಪರೀಕ್ಷೆಗೆ ಹಾಜರಾಗಲು ಬಂದಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ. ಇಂದು ಕಾಲೇಜಿನಲ್ಲಿ ಕನ್ನಡ ಪರೀಕ್ಷೆ ನಡೆಯುತ್ತಿದ್ದು, ಕಾಲೇಜು ಶುಲ್ಕ ಪಾವತಿಸಿದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟು ಪರೀಕ್ಷೆ ನಡೆಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇನ್ನೂ ವಿಚಾರ ತಿಳಿದು ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ. ಈ ಕಾಲೇಜು ಏಟ್ರಿಯ ಅನ್ನೋ ಹೆಸರಿನಿಂದ ಈವರೆಗೆ ಕಾರ್ಯಾಚರಿಸುತ್ತಿತ್ತು. ಆ ಬಳಿಕ ದಿಢೀರನೇ ಕಾಲೇಜಿನ ಹೆಸರು ಆಕಾಶ್ ಎಂದು ಬದಲಾವಣೆ ಮಾಡಲಾಗಿದೆ. ಜೊತೆಗೆ ಆಡಳಿತ ಮಂಡಳಿ ಕೂಡ ಬದಲಾವಣೆಯಾಗಿದೆ. ಕಾಲೇಜಿನ ಆಡಳಿತ ಮಂಡಳಿಗೆ ಹಣವ ವಿಚಾರದಲ್ಲಿ…
ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ಬೀದಿಗೆ ಬಂದಿದ್ದು, ಇದೇ ವೇಳೆ ಸರ್ಕಾರದ ವರ್ಚಸ್ಸಿಗೆ ಈ ಗಲಾಟೆಗಳು ಕಾರಣವಾಗುತ್ತಿರುವುದರಿಂದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಅಧಿಕಾರಿಗಳನ್ನು ಜೊತೆಯಾಗಿ ಅಥವಾ ಪ್ರತ್ಯೇಕವಾಗಿ ಕರೆದು ಮಾತನಾಡಿ ಸ್ಪಷ್ಟೀಕರಣ ಪಡೆದು ಕಿವಿಮಾತು ಹೇಳಿ ಕಳುಹಿಸಲು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ ಎನ್ನಲಾಗಿದೆ. ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳಿಬ್ಬರೂ ಕಳೆದ 24 ಗಂಟೆಯಿಂದ ಪರಸ್ಪರ ದೋಷಾರೋಪಣೆಗೆ ಇಳಿದಿದ್ದು, ಕಾರ್ಯಾಂಗದ ಕ್ಷಮತೆ ಮೇಲೆ ಪರಿಣಾಮ ಬೀರಲಿದೆ. ಐಪಿಎಸ್, ಐಎಎಸ್ ಹುದ್ದೆಯ ಘನತೆ-ಗೌರವ ಜನಸಾಮಾನ್ಯರ ದೃಷ್ಟಿಯಲ್ಲಿ ಕುಸಿಯಲಿದೆ. ಸರ್ಕಾರದ ಬಗ್ಗೆ ಕೆಟ್ಟ ಅಭಿಪ್ರಾಯಕ್ಕೆ ಕಾರಣವಾಗಲಿದೆ ಎಂದು ಸಿಎಂ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಡೆಬಿಟ್ ಕಾರ್ಡ್ ಒಂದು ಆವಿಷ್ಕಾರವಾಗಿದ್ದು ಅದು ಹಣದ ವಹಿವಾಟುಗಳನ್ನು ಸುಲಭಗೊಳಿಸಿತು. ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್‌ನಂತಹ ಮರುಪಾವತಿಯ ಜ್ಞಾಪನೆಗಳೊಂದಿಗೆ ಗ್ರಾಹಕರನ್ನು ತೊಂದರೆಗೊಳಿಸುವುದಿಲ್ಲ, ಆದರೆ ವಹಿವಾಟಿನ ನಿಖರವಾದ ದಾಖಲೆಯಾಗಿದೆ. ಹಣವನ್ನು ಹಿಂಪಡೆಯುವುದನ್ನು ಹೊರತುಪಡಿಸಿ ಡೆಬಿಟ್ ಕಾರ್ಡ್ ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡೋಣ. ಜವಾಬ್ದಾರಿ ನಿಮ್ಮ ಡೆಬಿಟ್ ಕಾರ್ಡ್‌ಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ. ನಿಮ್ಮ ಪಿನ್ ತಿಳಿಯದೆ ಯಾರೂ ನಿಮ್ಮ ಡೆಬಿಟ್ ಕಾರ್ಡ್‌ನಿಂದ ಹಣವನ್ನು ಬಳಸಲು ಅಥವಾ ಹಿಂಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ನಿಮ್ಮ ಕಾರ್ಡ್‌ನೊಂದಿಗೆ ಮಾಡಿದ ವಹಿವಾಟುಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ. ನಿಮ್ಮ ಡೆಬಿಟ್ ಕಾರ್ಡ್ ಬಳಸಿ ಯಾರಾದರೂ ಅನಧಿಕೃತವಾಗಿ ಹಿಂಪಡೆಯಲು ಪ್ರಯತ್ನಿಸಿದರೆ ನಿಮ್ಮ ಫೋನ್‌ನಲ್ಲಿ ನೀವು ಸಂದೇಶವನ್ನು ಸ್ವೀಕರಿಸುತ್ತೀರಿ. ಈ ಮೂಲಕ ಅಕ್ರಮ ಹಣದ ವಹಿವಾಟು ತಡೆಯಬಹುದು. ಮೊದಲೇ ಹೇಳಿದಂತೆ, ಡೆಬಿಟ್ ಕಾರ್ಡ್‌ಗಳು ಹಣಕಾಸಿನ ವಹಿವಾಟಿನ ನಿಖರವಾದ ದಾಖಲೆಯಾಗಿದೆ. ಎಷ್ಟು ರೂಪಾಯಿ ಹಿಂಪಡೆಯಲಾಗಿದೆ ಮತ್ತು ಉಳಿದ ಮೊತ್ತವನ್ನು ಸಂದೇಶದ ರೂಪದಲ್ಲಿ ನೀವು ನಿಖರವಾಗಿ ನೋಡಬಹುದು. ಆದ್ದರಿಂದ, ಅಂತಹ ಪ್ರತಿಯೊಂದು ಸಂದೇಶವು ತ್ಯಾಜ್ಯವನ್ನು ತಡೆಯಲು…