Author: admin

ನವದೆಹಲಿ: ಶಿವಸೇನೆಯ ಏಕನಾಥ್ ಶಿಂಧೆ ಬಣಕ್ಕೆ ಎರಡು ಖಡ್ಗಗಳು ಮತ್ತು ಶೀಲ್ಡ್ ಚಿಹ್ನೆಯನ್ನು ಚುನಾವಣಾ ಆಯೋಗ ಹಂಚಿಕೆ ಮಾಡಿದೆ. ಅವರಿಗೆ ನಿನ್ನೆ ಬಾಳಾಸಾಹೇಬಂಚಿ ಶಿವಸೇನಾ ಎಂಬ ಹೆಸರನ್ನು ನೀಡಲಾಯಿತು. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಚುನಾವಣಾ ಆಯೋಗದಿಂದ ಶಿವಸೇನೆಯ ಏಕನಾಥ್ ಶಿಂಧೆ ಹಾಗೂ ಉದ್ಧವ್ ಠಾಕ್ರೆ ಅವರಿಗೆ ನೀಡಲಾಗಿದ್ದಂತ ಬಿಲ್ಲು-ಬಾಣದ ಚಿನ್ಹೆಯನ್ನು ರದ್ದುಗೊಳಿಸಿತ್ತು. ಈ ಬಳಿಕ, ಏಕನಾಥ ಶಿಂಧೆಯಿಂದ ಹೊಸ ಚಿಹ್ನೆ ನೀಡೋದಕ್ಕೆ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಈ ಬೆನ್ನಲ್ಲೇ ಇಂದು ಚುನಾವಣಾ ಆಯೋಗದಿಂದ ಶಿವಸೇನೆಯ ಏಕನಾಥ ಶಿಂಧೆ ಅವರ ಬಣಕ್ಕೆ ಎರಡು ಖಡ್ಗ ಗಳು ಮತ್ತು ಶೀಲ್ಡ್ ಚಿಹ್ನೆಯನ್ನು ಲಾಂಛನವಾಗಿ ಹಂಚಿಕೆ ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ರಾಯಚೂರು: ಕಾಂಗ್ರೆಸ್ ಹಗರಣಗಳನ್ನು ಮುಂದಿನ ಅಧಿವೇಶನದಲ್ಲಿ ಬಯಲು ಮಾಡುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಲ್ಲಿ ನಡೆದೆ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ತನಿಖೆ ಮಾಡಿಸಿ ನಿಮ್ಮನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿಗೆ ನಿಲ್ಲಿಸುತ್ತೇವೆ. ನ್ಯಾಷನಲ್​ ಹೆರಾಲ್ಡ್​​​ ಹಗರಣ ಗೊತ್ತಿಲ್ಲವೇ.. ಹಗರಣವನ್ನೇ ಮಾಡದ ಪ್ರಧಾನಿ ಮೋದಿ ಬಗ್ಗೆ ಮಾತನಾಡ್ತೀರಾ. 25 ಲಕ್ಷ ಮೌಲ್ಯದ ಹ್ಯೂಬ್ಲೆಟ್​ ವಾಚ್​ ಕೊಟ್ಟಿದ್ಯಾರು ಗೊತ್ತಿಲ್ವಾ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು. ರಾಯಚೂರು ಜಿಲ್ಲೆಗೆ ಏಮ್ಸ್ ಕೊಡೊದಾಗಿ ಘೋಷಣೆ ಮಾಡುತ್ತೇವೆ. ಏಮ್ಸ್ ಕೊಟ್ಟರೆ, ಐದು ಕ್ಷೇತ್ರ ಗೆಲ್ಲಿಸಿ ಕೊಡತಿವಿ ಅಂತ ಹೇಳಿದ್ದಿರಾ. ಹಾಗೇನೆ ಇಂದೇ ರಾಯಚೂರಿಗೆ ಏಮ್ಸ್ ಘೋಷಣೆ ಮಾಡುತ್ತೇವೆ. ಮುಖ್ಯಮಂತ್ರಿ ಬೊಮ್ಮಾಯಿ ಏಮ್ಸ್ ಘೋಷಣೆ ಮಾಡಲಿದ್ದಾರೆ. 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ವಿಜಯಪುರ: ರಾಜಕೀಯವಾಗಿ ನನ್ನನ್ನು ಮುಗಿಸಲು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮಾತು ಕೇಳಿ ಕೆಲ ಮಾಧ್ಯಮಗಳು ವ್ಯವಸ್ಥಿವಾಗಿ ಅಪಪ್ರಚಾರ ಮಾಡಿದವು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ನನ್ನನ್ನು ಮುಗಿಸಲು, ಬಿಜೆಪಿ ಪಕ್ಷದ ಸನ್ಮಾನ್ಯ ಉಪಾಧ್ಯಕ್ಷ ವಿಜಯೇಂದ್ರನ ಮಾತು ಕೇಳಿ, ಕೊಟ್ಟ ಪ್ರಸಾದ ಸ್ವೀಕರಿಸಿ, ಕೇಂದ್ರದವರು 2500 ಕೋಟಿ ರೂ. ಕೇಳಿದ್ದಾರೆಂದು ನನ್ನ ಝೀರೋ ಮಾಡುವುದಕ್ಕಾಗಿ ಕೆಲ ದೃಶ್ಯಮಾಧ್ಯಮಗಳು ವ್ಯವಸ್ಥಿವಾಗಿ ಅಪಪ್ರಚಾರ ಮಾಡಿದವು ಎಂದರು. ದೆಹಲಿಯಿಂದ ಈಗಲೂ ಓರ್ವ ಸ್ವಾಮೀಜಿ 1,500 ಕೋಟಿ ರೂ. ಕೂಡಿಸಿಕೊಂಡು ದೆಹಲಿ ಬನ್ನಿ. ನಿಮ್ಮನ್ನು ಜೆ.ಪಿ.ನಡ್ಡಾ, ಮೋದಿ ಅವರ ಭೇಟಿಗೆ ಸಮಯ ನಿಗದಿ ಮಾಡುತ್ತೇನೆ ಅಂತೆಲ್ಲ ಹೇಳುತ್ತಾರೆ. ಇಂಥದ್ದನ್ನೆಲ್ಲ ನಂಬಬೇಡಿ ಎಂದಿದ್ದೇನೆ. ಇಂಥವರ ಮಾತು ನಂಬಿಕೊಂಡು ಹಲವರು ಭಾರಿ ಪ್ರಮಾಣದ ಹಣ ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ಸಿದ್ಧರಾಮಯ್ಯ ಹಿಂದುಳಿದ ವರ್ಗದವರ ಭಿಕ್ಷೆಯಲ್ಲಿ ಸಿಎಂ ಆದವರು. ಆದರೆ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಿಸಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟೀಕಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಎರಡು ತಂಡವಾಗಿ ಜನ ಸಂಕಲ್ಪಯಾತ್ರೆ ಮಾಡುತ್ತೇವೆ.  ಸರ್ಕಾರ ಎರಡು ಸಮುದಾಯದ ಬೇಡಿಕೆ ಈಡೇರಿಸಿದೆ. ಸಿದ್ಧರಾಮಯ್ಯ   ಅಹಿಂದ ನಾಯಕ ಎನ್ನುತ್ತಾರೆ. ಆದರೆ  ಹಿಂದುವಳಿದ ವರ್ಗದವರ ನ್ಯಾಯ ಕೊಡಿಸಲಿಲ್ಲ. ಸಿದ್ಧರಾಮಯ್ಯ ಅವಧಿಯಲ್ಲಿ ಮೀಸಲಾತಿ ಕೊಡಲಿಲ್ಲ. ಈಗ ಮೀಸಲಾತಿ ವಿರೋಧಿಸುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಗೆ ಯಾವ ನೈತಿಕತೆ ಇದೆ ಎಂದು ಕುಟುಕಿದರು. ನಾವು  ಕೆಲಸ ಮಾಡಿದ್ದೇವೆ ಕ್ರೆಡಿಟ್ ತೆಗೆದುಕೊಳ್ಳುತ್ತೇವೆ. ಭ್ರಷ್ಟಾಚಾರ ಶುರು ಮಾಡಿದ್ದೇ.  ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಎಂದು ಕಿಡಿಕಾರಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಅಕ್ಟೋಬರ್ 21ರಂದು ನಡೆಯುವ ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​ ಗೆ ಆಗಮಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಡಾ.ರಾಜ್ ಕುಟುಂಬ ಆಹ್ವಾನ ನೀಡಿತು. ಪುನೀತ್​ ರಾಜ್​ಕುಮಾರ್ ಅವರ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಅ.28ಕ್ಕೆ ಬಿಡುಗಡೆ ಆಗಲಿದೆ. ಈಗಾಗಲೇ ಇದರ ಟ್ರೇಲರ್ ಆಗಿದ್ದು,  ಸಖತ್​ ಸದ್ದು ಮಾಡುತ್ತಿದೆ.  ಅಕ್ಟೋಬರ್ 21ರಂದು ಪ್ರೀ-ರಿಲೀಸ್​ ಕಾರ್ಯಕ್ರಮ ನಡೆಯಲಿದ್ದು  ಪುನೀತ್ ರಾಜ್ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​, ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್​, ಯುವ ರಾಜ್​ಕುಮಾರ್​ ಇಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದರು. ಸಿನಿಮಾದ ರೀತಿ ಚಿತ್ರಮಂದಿರದಲ್ಲೇ  ಗಂಧದಗುಡಿ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ. ಅ.21ರಂದು ನಡೆಯಲಿರುವ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಿಕೊಳ್ಳಬೇಕು ಎಂದು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ವಿನಂತಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​’ನಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ‘ಪುನೀತ ಪರ್ವ’ ಎಂದು ಕರೆಯಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಮಧುಗಿರಿ : ಗಂಡ ಹೆಂಡತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಗಂಡನೇ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೋಮವಾರ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುಷ್ಪಲತಾ (24) ಕೊಲೆಯಾದ ಮಹಿಳೆ. ಕೂಲಿಯ ಹಣದ  ವಿಚಾರಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿಯ ನಡುವೆ ಮಾತಿಗೆ ಮಾತು ಬೆಳೆದಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಗಂಡ ರಾಮಾಂಜನೇಯ ತನ್ನ ಹೆಂಡತಿಯ ಮೇಲೆ ಮಚ್ಚಿನಿಂದ ಬೀಸಿದ್ದು, ಹೆಂಡತಿ ಮನೆಯಲ್ಲಿಯೇ ಮೃತಪಟ್ಟಿದ್ದು ಗಂಡ ರಾಮಾಂಜನೇಯ ತಲೆಮರೆಸಿಕೊಂಡಿದ್ದಾನೆ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು : ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಅವರನ್ನು ಕರ್ನಾಟಕದ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೊಲಿಜಿಯಂ ಸೆಪ್ಟೆಂಬರ್ 28 ರಂದು ನ್ಯಾಯಮೂರ್ತಿ ವರಾಳೆ ಅವರ ಉನ್ನತಿ ಶಿಫಾರಸು ಮಾಡಿತ್ತು. ನ್ಯಾ. ವರಾಳೆ ಅವರು 1962 ಜೂನ್ 23ರಂದು ಜನಿಸಿದ್ದು, 1985ರ ಆಗಸ್ಟ್ 12 ರಂದು ವಕೀಲರಾಗಿ ಸೇವೆ ಆರಂಭಿಸಿದರು. ಬಳಿಕ 1990ರಿಂದ 1992ರವರೆಗೆ ಔರಂಗಾಬಾದ್​ ನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಕಾನೂನು ಉಪನ್ಯಾಸಕರಾಗಿ ಮತ್ತು ಸಹಾಯ ಸರ್ಕಾರಿ ಮತ್ತು ಹೆಚ್ಚುವರಿ ಸರ್ಕಾರಿ ಅಭಿಯೋಜಕರಾಗಿ, ಹೈಕೋರ್ಟ್ ಪೀಠಿದಲ್ಲಿ ಸೇವೆ ಸಲ್ಲಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಅವಳಿ ಮಕ್ಕಳಿಗೆ ಪೋಷಕರಾಗಿರುವ ನಯನತಾರಾ- ವಿಘ್ನೇಶ್ ಶಿವನ್ ದಂಪತಿಗಳಿಗೆ ಇದೀಗ ತಮಿಳುನಾಡು ಸರ್ಕಾರ ಶಾಕ್ ನೀಡಿದೆ. ನಟಿ ನಯನತಾರ ಹಾಗೂ ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಮೂಲಕ ತಾವು ಪೋಷಕರಾಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಾದ ಬೆನ್ನಲ್ಲೆ ತನಿಖೆಗೆ ಸರಕಾರ ಆದೇಶಿಸಿದೆ. ಅಂದಹಾಗೆ ಬಾಡಿಗೆ ತಾಯ್ತನದ ಕುರಿತು ಸರಕಾರವು ಹಲವು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಬಾಡಿಗೆ ತಾಯಿ ಆರೋಗ್ಯವಾಗಿರಬೇಕು, ಆಕೆಯ ವಯಸ್ಸು 21-35ರ ಅಂತರದಲ್ಲಿ ಇರಬೇಕು. ಒಂದೇ ಸಲ ಬಾಡಿಗೆ ತಾಯಿ ಆಗಲು ಸಾಧ್ಯ ಹಾಗೂ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು : ರಾಜ್ಯದ ಮೂರು ವಿಶ್ವವಿದ್ಯಾಲಯಗಳಿಗೆ ಕುಲಸಚಿವರನ್ನಾಗಿ ಮೂವರು ಕೆಎಎಸ್ ಅಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಗುಲ್ಬರ್ಗ ವಿಶ್ವವಿದ್ಯಾಲಯಗಳಿಗೆ ಕುಲಸಚಿವರನ್ನು ನೇಮಿಸಿ ಆದೇಶ ಹೊರಡಿಸಿದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಕೆ. ಶಾಂತಲಾ, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಹೇಶ್ ಬಾಬು, ಗುಲ್ಬರ್ಗ ವಿವಿಗೆ ಡಾ. ಬಿ.ಶರಣಪ್ಪ ಅವರನ್ನು ಕುಲಸಚಿವರಾಗಿ ನೇಮಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಜಾರ್ಖಂಡ್: ವಿಶ್ವವಿದ್ಯಾಲಯದ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿ ಹಾಲ್​ ಟಿಕೆಟ್​ ನಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಚಿತ್ರದ ಫೋಟೋ ಲಗತ್ತಿಸಲಾಗಿದೆ. ಇದನ್ನು ಕಂಡು ವಿದ್ಯಾರ್ಥಿನಿಯೇ ಆಶ್ಚರ್ಯ ಚಕಿತರಾಗಿದ್ದಾರೆ. ಜಾರ್ಖಂಡ್​ ನ ಬಿನೋದ್ ಬಿಹಾರಿ ಮಹ್ತೊ ಕೊಯಲಾಂಚಲ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಮುಂದಿನ ವಾರ ನಡೆಯುವ ಪರೀಕ್ಷೆಗಾಗಿ ಆನ್​ಲೈನ್​ನಲ್ಲಿ ಹಾಲ್​ ಟಿಕೆಟ್​ ಪಡೆದಿದ್ದಾರೆ. ತಮ್ಮ ಚಿತ್ರದ ಜಾಗದಲ್ಲಿ ಐಶ್ವರ್ಯಾ ರೈ ಫೋಟೋ ಕಂಡು ವಿದ್ಯಾರ್ಥಿನಿ ಶಾಕ್ ಆಗಿದ್ದಾರೆ. ಈ ಬಗ್ಗೆ ಕುಲಪತಿಗಳಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿನಿ ನೀಡಿದ ಮಾಹಿತಿಯ ಮೇಲೆ ಹಾಲ್​ ಟಿಕೆಟ್​ ಸಿದ್ಧಪಡಿಸಲಾಗಿರುತ್ತದೆ. ಐಶ್ವರ್ಯಾ ರೈ ಅವರ ಚಿತ್ರ ಬರುವಂತೆ ಮಾಡಿದ್ದು, ವಿವಿಯ ಹೆಸರು ಕೆಡಿಸಲು ಯಾರೋ ಸಂಚು ರೂಪಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕುಲಪತಿ ತಿಳಿಸಿದ್ದಾರೆ. ಇನ್ನು, ವಿದ್ಯಾರ್ಥಿನಿ ಹಾಲ್​ ಟಿಕೆಟ್​ ನಲ್ಲಿ ಚಿತ್ರ ತಪ್ಪಾಗಿ ಮುದ್ರಿತವಾಗಿದ್ದು, ತಾವು ಪರೀಕ್ಷೆಯಿಂದ ಹೊರಬೀಳುವ ಆತಂಕದಲ್ಲಿದ್ದಾರೆ. ಆದರೆ, ವಿದ್ಯಾರ್ಥಿನಿಗೆ ತೊಂದರೆಯಾಗದಂತೆ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದು ವಿವಿ ಸಿಬ್ಬಂದಿ…

Read More