Subscribe to Updates
Get the latest creative news from FooBar about art, design and business.
- ಬರ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ಕ್ರಮವಹಿಸಿ: ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ಸೂಚನೆ
- ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ
- ಬಾಬು ಜಗಜೀವನರಾಂ ಭವನ ನಿರ್ಮಿಸಲು 75 ಲಕ್ಷ ಹಣ ಮೀಸಲಿಡಲಾಗಿದೆ: ಶಾಸಕ ಸಿ.ಬಿ.ಸುರೇಶ್ ಬಾಬು
- ಮಧುಗಿರಿ: ಜೂ.28ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ
- ಕೊಡಿಗೇನಹಳ್ಳಿಯಲ್ಲಿ ಅಪರೂಪದ ಚಿಪ್ಪು ಹಂದಿ (ಪ್ಯಾಂಗೊಲಿನ್) ಪ್ರತ್ಯಕ್ಷ : ಜನರಲ್ಲಿ ಕುತೂಹಲ, ಆತಂಕ
- ಕೊರಟಗೆರೆ: ಜೂ.28 ರಿಂದ ಪೋಲಿಯೋ ಲಸಿಕೆ ಕಾರ್ಯಕ್ರಮ
- ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಪಿಎಸ್ ಐ ತೀರ್ಥೇಶ್
- ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ
Author: admin
ವಿಜಯಪುರ: ಕಳೆದ ಎರಡು ವರ್ಷಗಳಿಂದ ವಿಜಯಪುರ ಜಿಲ್ಲೆಯ ಗಡಿ ಭಾಗಗಳಲ್ಲಿ ಭೂಕಂಪನದ ಅನುಭವ ಉಂಟಾಗುತ್ತಿದೆ ಎಂದು ಜನರು ಹೇಳುತ್ತಿರುವ ಬೆನ್ನಲ್ಲೇ ಗುರುವಾರ ಭೂಕಂಪನದ ಅನುಭವ ಉಂಟಾಗಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ, ಕಳ್ಳಕವಟಗಿ, ಹುಬನೂರ. ಟಕ್ಕಳಕಿ, ಸಿದ್ದಾಪುರ ಕೆ. ಗ್ರಾಮದಲ್ಲಿ ಭೂಮಿ ಕಂಪಿಸಿದೆ ಎಂದು ಜನರು ಹೇಳುತ್ತಿದ್ದಾರೆ. ಕರ್ನಾಟಕದ ಗಡಿ ಹಾಗೂ ಮಹಾರಾಷ್ಟ್ರದ ಬಿವರಗಿ, ಮೊರಬಗಿ ಗ್ರಾಮದ ಸುತ್ತಮುತ್ತ ಸಹ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ 10.05 ಮತ್ತು ಇಂದು ಬೆಳಗಿನ ಜಾವ 1.47ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7 ರಷ್ಟು ತೀವ್ರತೆ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ರಾಯಚೂರು ಜಿಲ್ಲೆ ಲಿಂಗಸೂಗೂರು ಪಟ್ಟಣದ ವಿಸಿಬಿ ಕಾಲೇಜಿನಲ್ಲಿ ಕ್ಲಾಸ್ ಅರ್ಧಕ್ಕೆ ಬಿಟ್ಟು ಹಾಸ್ಟೆಲ್‌ಗೆ (Hostel) ಬಂದು ಫ್ಯಾನ್‌ಗೆ ನೇಣು ಹಾಕಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಲಿಂಗಸೂಗೂರು ತಾಲೂಕಿನ ಗೋನವಾಟ್ಲ ತಾಂಡಾದ ಐಶ್ವರ್ಯ (18) ಎಂದು ತಿಳಿದು ಬಂದಿದೆ. ಲಿಂಗಸೂಗೂರು ವಿಶ್ವೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ ಐಶ್ವರ್ಯ ಆತ್ಮಹತ್ಯೆಗೆ (Suicide) ಪ್ರಾಂಶುಪಾಲರೇ ಕಾರಣ ಎಂದು ವಿದ್ಯಾರ್ಥಿನಿ ಪೋಷಕರು ಆರೋಪ ಮಾಡಿದ್ದಾರೆ. ಇನ್ನೂ ವಿದ್ಯಾರ್ಥಿನಿ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದರೂ ಇದುವರೆಗೂ ಮೃತದೇಹ ತೆಗೆಯಲು ಪೋಷಕರು ಬಿಡದೆ ವಸತಿ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಅಲ್ಲದೇ ಪ್ರಾಂಶುಪಾಲರು ಬರೋ ತನಕ ಮೃತದೇಹ ತೆಗೆಯಲು ಬಿಡಲ್ಲ ಎಂದು ಪೋಷಕರು ಹಾಗೂ ಸಂಬಂಧಿಕರು ರಾತ್ರಿಯ ತನಕ ಪಟ್ಟು ಹಿಡಿದಿದ್ದಾರೆ. ಸದ್ಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಲಿಂಗಸೂಗೂರು ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಕಾಲೇಜು ಆಡಳಿತ ಮಂಡಳಿ ಜೊತೆಗೆ ಚರ್ಚೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಲಿಂಗಸೂಗೂರು…
ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ(KMF) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವುದರ ಮೂಲಕ ಅಭ್ಯರ್ಥಿಗಳಿಗೆ ಸಿಹಿಸುದ್ದಿ ನೀಡಿದೆ. ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಹುದ್ದೆಗಳು ಖಾಲಿ ಇದ್ದು194 ಟೆಕ್ನಿಷಿಯನ್, ಕೆಮಿಸ್ಟ್, ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ನೇಮಕಾತಿ ಅಧಿಸೂಚನೆ ಪ್ರಕಾರ ಮಾರ್ಚ್ 3, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ)- 17, ಸಹಾಯಕ ವ್ಯವಸ್ಥಾಪಕರು (ಆಡಳಿತ)- 1, ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್)- 3, ಎಂಐಎಸ್ /ಸಿಸ್ಟಂ ಆಫೀಸರ್- 1, ಮಾರುಕಟ್ಟೆ ಅಧಿಕಾರಿ- 2, ತಾಂತ್ರಿಕ ಅಧಿಕಾರಿ(ಅಭಿಯಂತರ)-2, ತಾಂತ್ರಿಕ ಅಧಿಕಾರಿ(ಗುಣನಿಯಂತ್ರಣ)- 2, ತಾಂತ್ರಿಕ ಅಧಿಕಾರಿ(ಡಿಟಿ)- 14,ಕೆಮಿಸ್ಟ್ (ದರ್ಜೆ 1)- 4,ವಿಸ್ತರಣಾಧಿಕಾರಿ (ದರ್ಜೆ 3)- 17, ಆಡಳಿತ ಸಹಾಯಕ (ದರ್ಜೆ 2)- 17, ಲೆಕ್ಕ ಸಹಾಯಕ (ದರ್ಜೆ 2)- 12, ಮಾರುಕಟ್ಟೆ ಸಹಾಯಕ (ದರ್ಜೆ 2)- 10,…
ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆ ಸಮಿತಿಗೆ ಡಿಸಿಎಂ ಜಿ. ಪರಮೇಶ್ವರ್ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ನಲ್ಲಿ ಭಾರಿ ಬಂಡಾಯಕ್ಕೆ ಕಾರಣವಾಗುತ್ತಿದೆ. ಡಿ.ಕೆ ಶಿವಕುಮಾರ್ ನಡೆಗೆ ಬೇಸತ್ತು ರಾಜಿನಾಮೆ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಚುನಾವಣೆ ಕಾವು ಹೆಚ್ಚಿರುವಾಗಲೆ ಪರಮೇಶ್ವರ್ ರಾಜಿನಾಮೆ ವಿರೋಧ ಪಕ್ಷಗಳಿಗೆ ರಾಜಕೀಯ ಅಸ್ತ್ರವಾಗಲಿದ್ದು ಕಾಂಗ್ರೆಸ್ ದಲ್ಲಿ ಬೀತಿ ಶುರುವಾಗಿದೆ. ತಮ್ಮೊಡನೆ ಚರ್ಚೆ ನಡೆಸದೆ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಿಲ್ಲಾ ಪ್ರವಾಸದ ವೇಳೆ ತಾವೇ ತೀರ್ಮಾನ ಮಾಡಿ ಉಚಿತ ಘೋಷಣೆಗಳನ್ನು ಮಾಡುತ್ತಿದ್ದಾರೆ ಎಂಬ ಬೇಸರದಿಂದ ರಾಜಿನಾಮೆ ನೀಡುತ್ತಿರುವುದಾಗಿ ತಮ್ಮ ಆಪ್ತರ ಬಳಿ ಪರಮೇಶ್ವರ್ ಬೇಸರ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರನ್ನು ಸಮಾಧಾನಪಡಿಸಲು ಉಸ್ತುವಾರಿ ರಣದೀಪ್ ಸುರ್ಜೇವಾಲಾ ಧಾವಿಸಿದ್ದಾರೆ ಎನ್ನಲಾಗಿದ್ದು. ಪ್ರಜಾಧ್ವನಿ ಕಾರ್ಯಕ್ರಮದ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆಯಲಿದ್ದು,ನಾಳಿನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸುರ್ಜೇವಾಲ, ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…
ಅಮೂಲ್ನ ಬೆಲೆ ಏರಿಸುವುದರ ಮೂಲಕ ಬಳಕೆದಾರರಿಗೆ ಮತ್ತೆ ಶಾಕ್ ನೀಡಿದೆ. ನಿರಂತರ ಎರಡು ತಿಂಗಳಿನಿಂದ ಬೆಲೆ ಏರಿಕೆಯಾಗುತ್ತಿದ್ದು ಅಮೂಲ್ ತಾಜಾ ಹಾಲು ಬೆಲೆ ಒಂದು ಲೀಟರ್ಗೆ 54 ರೂ ಗೆ ಹೆಚ್ಚಾಗಿದೆ. ಹಸು ಹಾಲಿನ ಬೆಲೆ 56 ರೂ, ಎಮ್ಮೆ ಹಾಲಿನ ಬೆಲೆ 70 ರೂಪಾಯಿಗೆ ಹೆಚ್ಚಾಗಿದೆ. ಇನ್ನು ಅಮೂಲ್ ಗೋಲ್ಡ್ ಹಾಲು ಒಂದು ಲೀಟರ್ಗೆ 66 ರೂ ಆಗಿದೆ ಹಾಲಿನ ಉತ್ಪಾದನೆ ಮತ್ತು ಕಾರ್ಯನಿರ್ವಹಣೆಯ ವೆಚ್ಚ ಹೆಚ್ಚಾಗಿದೆ. ಇದರಿಂದ ಗ್ರಾಹಕರಿಗೆ ಹಾಲಿನ ಬೆಲೆ ಹೆಚ್ಚಿಸುವುದು ಅನಿವಾರ್ಯ ಎಂದು ಅಮೂಲ್ ತನ್ನ ಬೆಲೆ ಏರಿಕೆ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದು ಅಮೂಲ್ ತಾಜಾ ಒಂದು ಲೀಟರ್: 54 ರೂ, ಅಮೂಲ್ ಗೋಲ್ಡ್ ಒಂದು ಲೀಟರ್: 66 ರೂ, ಅಮೂಲ್ ಹಸು ಹಾಲು ಒಂದು ಲೀಟರ್: 56 ರೂ ಹಾಗೂ ಅಮೂಲ್ ಎಮ್ಮೆ ಹಾಲು: 70 ರೂ ಸಧ್ಯದ ದರವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493…
ಹಂದಿಕುಟೆ ಅಗ್ರಹಾರ ಕೆರೆಯಲ್ಲಿ ಮುಳುಗುತ್ತಿದ್ದ ಹೆಣ್ಣುಮಕ್ಕಳನ್ನು ರಕ್ಷಿಸಿ ಜೀವ ಉಳಿಸಿದ್ದ ಶಿರಾ ಕೆ.ಎಸ್.ಆರ್.ಟಿ.ಸಿ ನೌಕರ ಮಂಜುನಾಥ್ ಅವರನ್ನು ಶಿರಾ ತಹಶೀಲ್ದಾರ್ ಮಮತಾ ಎಂ. ಅವರು ಸನ್ಮಾನಿಸಿ ಗೌರವಿಸಿದರು. ಹಂದಿಕುಂಟೆ ಅಗ್ರಹಾರ ಕೆರೆ ಬಳಿಗೆ ತಾಯಿಯೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಮಕ್ಕಳು ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದರು. ಇದೇ ವೇಳೆ ಈ ರಸ್ತೆಯಲ್ಲಿ ಬಸ್ ಚಲಾಯಿಸಿಕೊಂಡು ಬರುತ್ತಿದ್ದ ಸರ್ಕಾರಿ ಬಸ್ ಚಾಲಕ ಮಂಜುನಾಥ್ ಅವರು ಬಸ್ ನಿಲ್ಲಿಸಿ, ತಮ್ಮ ಪ್ರಾಣದ ಹಂಗು ತೊರೆದು ಕೆರೆಗೆ ಹಾರಿ ಇಬ್ಬರು ಬಾಲಕಿಯರನ್ನೂ ರಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಮತಾ ಎಂ. ಅವರು ಸನ್ಮಾನಿಸಿದ್ದಾರೆ. ಇದೇ ವೇಳೆ ಬರಗೂರು ಶಾಲೆಯ ವಿದ್ಯಾರ್ಥಿ ಆರ್.ಸಿ. ಗೌಡ ಕಛೇರಿಯಲ್ಲಿ ಸನ್ಮಾನಿಸಿ ವೈಯಕ್ತಿಕವಾಗಿ 5000/- ರೂಗಳನ್ನು ಬಹುಮಾನವಾಗಿ ನೀಡಿದರು. ವರದಿ: ಮಾರನಹಳ್ಳಿ ಗಣೇಶ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ನವದೆಹಲಿ: ಸಿಡಿ ಪ್ರಕರಣಕ್ಕೊಂದು ಅಂತ್ಯ ಹಾಡಲು ನಿರ್ಧರಿಸಿರುವ ರಮೇಶ್ ಜಾರಕಿಹೊಳಿ ನಿನ್ನೆ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಅವರ ಜೊತೆ ಮಾತನಾಡಿರುವ ಅಮಿತ್ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದ್ದುಇನ್ನು ಎರಡು ದಿನ ನವದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಿತ್ ಶಾ ಭೇಟಿ ವೇಳೆ ರಮೇಶ್ ಜಾರಕಿಹೊಳಿ ಅವರಿಗೆ ರಾಜ್ಯ ನಾಯಕರು ಸಾಥ್ ನೀಡಿದ್ದಾರೆ. ಸುಮಾರು 20 ನಿಮಿಷ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ನೀಡುತ್ತೇನೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಜಾತ್ಯಾತೀತ ಜನತಾದಳದ ವೇದಿಕೆ ಮೇಲೆ ಸರ್ವ ಧರ್ಮ ಗುರುಗಳ ಉಪಸ್ಥಿತಿಯಲ್ಲಿ ನಾಸಿರ್ ಭಗವಾನ್ ಅವರ 66ನೇ ಹುಟ್ಟುಹಬ್ಬ ವನ್ನು ಅಪಾರ ಜನ ಸಮೂಹ ಮಧ್ಯೆ ಆಚರಣೆ ಮಾಡಲಾಯಿತು. ಜೆ ಡಿ ಎಸ್ ರಾಜ್ಯಾಧ್ಯಕ್ಷರು ಕಾರ್ಯಕ್ರಮವನ್ನು ಉದ್ಘಾಟಿಕೆ ಮಾತನಾಡಿದ ನಾಸೀರ್ ಭಗವಾನ್ ಖಾನಾಪುರ್ ಕ್ಷೇತ್ರದ ಜನತೆಯನ್ನು ಜಾತಿ ಧರ್ಮ ಮತಗಳಿಂದ ನೋಡದೆ ನಿಸ್ವಾರ್ಥ ಸೇವೆ ಮಾಡುತ್ತಾ ಇದ್ದಾರೆ. ಈ ಬಾರಿ ನೀವು ನಾಸಿರ್ ಭಗವಾನಗೆ ಆಶೀರ್ವಾದ ಮಾಡಿ ನಿಮ್ಮ ಸ್ವಸಹಾಯ ಸಂಘಗಳ ಸಾಲಮನ್ನ ಮಾಡಿ ರೈತರ ಗಳಿಗೆ ಪ್ರತಿ ಎಕ್ಕರೆಗೆ ರೂ.10,000 ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಸೌಲತ್ತುಗಳನ್ನು ಸರ್ಕಾರ ರಚನೆ ಆದ ನಂತರ ನೀಡಲಿದ್ದೇವೆ ಇನ್ನು ಅನೇಕ ಹಲವಾರು ಯೋಜನೆಗಳನ್ನು ಜನರಿಗೆ ನೀಡಲಿದ್ದೇವೆ . ನಾಸಿರ್ ಭಾಗವಾನ್ ಮಾತನಾಡುತ್ತಾ ಈ ಕ್ಷೇತ್ರದ ಜನ ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ ನಾನು ಅವರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಇದೇ ವೇಳೆ ತನ್ನ ತಾಯಿಯನ್ನು ನೆನೆದು ಭಾವುಕರಾದ ನಾಸಿರ್ ಭಗವಾನ್ ನನ್ನ ತಾಯಿ ತರಕಾರಿ…
ಕೇಂದ್ರ ಬಜೆಟ್ ಬಗ್ಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದ್ದು, 120 ಲಕ್ಷ ಕೋಟಿ ರೂ. ಸಾಲ ಮಾಡಿರುವುದು ಬಿಜೆಪಿ ಸರ್ಕಾರದ ಸಾಧನೆ ಎಂದು ಕಿಡಿಕಾರಿದ್ದಾರೆ. ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಈ ಬಾರಿಯ ಕೇಂದ್ರ ಬಜೆಟ್ ವೇಳೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಕ್ಕೆ 155 ಲಕ್ಷ ಕೋಟಿ ಸಾಲವಿದ್ದು, ವರ್ಷಾಂತ್ಯಕ್ಕೆ 18ಲಕ್ಷ ಕೋಟಿ ಹೊಸ ಸಾಲ ಪಡೆಯುವುದಾಗಿ ಹೇಳಿದ್ದಾರೆ. ಈ ಮೂಲಕ ದೇಶದ ಸಾಲ ವರ್ಷಾಂತ್ಯಕ್ಕೆ 173 ಲಕ್ಷ ಕೋಟಿಗೆ ಏರಿಕೆಯಾಗಲಿದೆ. 1947ರಿಂದ 2014ರವರೆಗೆ ದೇಶದ ಮೇಲೆ ಇದ್ದ ಸಾಲ 53 ಲಕ್ಷ ಕೋಟಿ. ಆದರೆ ಕಳೆದ ಎಂಟು ವರ್ಷಗಳ ಅವಧಿಯಲ್ಲಿ 120 ಲಕ್ಷ ಕೋಟಿ ಸಾಲ ಮಾಡಿರುವುದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ದೇಶ ಪ್ರತಿವರ್ಷ 10.81 ಲಕ್ಷ ಕೋಟಿ ಬಡ್ಡಿ ಕಟ್ಟಬೇಕಿದೆ.ಅಂದರೆ 100 ರೂಪಾಯಿಯಲ್ಲಿ 42 ರೂಪಾಯಿ ಬಡ್ಡಿಗೆ ಹೋಗಲಿದೆ. ಈ ರೀತಿ ಮಾಡಿದ ಕೀರ್ತಿ ಬಿಜೆಪಿಗೆ…
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಬಗ್ಗೆ ಟೀಕಿಸಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಕಾಂಗ್ರೆಸ್ ಬಸ್ ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದಲ್ಲಿ ನಿಂತೋಗಿದೆ ಎಂದು ಲೇವಡಿ ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತಾಡಿದ ಹೆಚ್.ಡಿ ರೇವಣ್ಣ, ಕಾಂಗ್ರೆಸ್ ಪಕ್ಷ ನಿರ್ನಾಮಗೊಂಡಿರುವ ಪಕ್ಷ. ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ಎ ಟೀಮ್ ಬಿ ಟೀಮ್ ಅಂತ ಕರೆಯುತ್ತಾರೆ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಹೆಚ್ ಡಿ ದೇವೇಗೌಡರು ಸೋಲೋದಕ್ಕೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು. ಹಾಸನದಲ್ಲಿ ಮುಸ್ಲಿಂ ಮತದಾರರು ವೋಟ್ ನೀಡದೆ ಹೋಗಿದ್ದಕ್ಕೆ ಬಿಜೆಪಿ ಅಭ್ಯರ್ಥಿ ವಿಧಾನ ಸಭೆಗೆ ಆಯ್ಕೆಯಾದರು. ಕಾಂಗ್ರೆಸ್ ಎಂಥ ಪಕ್ಷ ಅಂತ ಜನರಿಗೆ ಗೊತ್ತಾಗಿದೆ ಎಂದು ಕಿಡಿಕಾರಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy