Subscribe to Updates
Get the latest creative news from FooBar about art, design and business.
- ಬರ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ಕ್ರಮವಹಿಸಿ: ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ಸೂಚನೆ
- ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ
- ಬಾಬು ಜಗಜೀವನರಾಂ ಭವನ ನಿರ್ಮಿಸಲು 75 ಲಕ್ಷ ಹಣ ಮೀಸಲಿಡಲಾಗಿದೆ: ಶಾಸಕ ಸಿ.ಬಿ.ಸುರೇಶ್ ಬಾಬು
- ಮಧುಗಿರಿ: ಜೂ.28ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ
- ಕೊಡಿಗೇನಹಳ್ಳಿಯಲ್ಲಿ ಅಪರೂಪದ ಚಿಪ್ಪು ಹಂದಿ (ಪ್ಯಾಂಗೊಲಿನ್) ಪ್ರತ್ಯಕ್ಷ : ಜನರಲ್ಲಿ ಕುತೂಹಲ, ಆತಂಕ
- ಕೊರಟಗೆರೆ: ಜೂ.28 ರಿಂದ ಪೋಲಿಯೋ ಲಸಿಕೆ ಕಾರ್ಯಕ್ರಮ
- ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಪಿಎಸ್ ಐ ತೀರ್ಥೇಶ್
- ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ
Author: admin
ತುರುವೇಕೆರೆ: ತಾಲೂಕು ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೀಯ ಚುನಾವಣೆಯಲ್ಲಿ ನೂರ್ ಆಯಿಷಾ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ 15 ದಿನಗಳಿಂದ ಹಿಂದಿನ ಉಪಾಧ್ಯಕ್ಷೆಯಾದ ‘ ಗೀತಾ ಹೆಚ್ಎಸ್ ‘ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಗ್ರಾಮ ಪಂಚಾಯಿತಿಯು 16 ಜನ ಸದಸ್ಯ ಬಲ ಹೊಂದಿರುವ ಪಂಚಾಯತಿ ಆಗಿದ್ದು ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ, ನೂರ್ ಆಯಿಷಾ ಒಬ್ಬರೇ ಸಲ್ಲಿಸಿದ್ದು. ಕೊನೆಯ ಘಳಿಗೆಯವರೆಗೂ ಯಾರೊಬ್ಬರೂ ಇವರ ವಿರುದ್ಧ ನಾಮಪತ್ರ ಸಲ್ಲಿಸಲಿಲ್ಲ. ಆದ ಕಾರಣ ಅಂತಿಮವಾಗಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತುರುವೇಕೆರೆ ತಾಲೂಕು ದಂಡಾಧಿಕಾರಿಗಳಾದ ವೈ ಎಂ ರೇಣು ಕುಮಾರ್ ರವರು ನೂರ್ ಆಯುಷಾ ರವರನ್ನು ಅವಿರೋಧ ಆಯ್ಕೆ ಉಪಾಧ್ಯಕ್ಷೆ ಎಂದು ಘೋಷಿಸಿದರು. ಆಯ್ಕೆಯಾದ ತಕ್ಷಣ ನೂತನ ಉಪಾಧ್ಯಕ್ಷೆಯ ಬೆಂಬಲಿಗರು ಹಾಗೂ ಅಭಿಮಾನಿಗಳು ಪಂಚಾಯಿತಿಯ ಹೊರಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು. ಪುಷ್ಪಮಾಲೆಯನ್ನು ಹಾಕಿ ಅಭಿನಂದನೆಯನ್ನು ಸಲ್ಲಿಸಿದರು. ಈ ಚುನಾವಣೆಯಲ್ಲಿ …
ತಿಪಟೂರು : ನನ್ನ ಕಣ್ಣೀರನ್ನು ನೋಡಿ ಹಲವಾರು ನಾಟಕವೆನ್ನುತ್ತಾರೆ, ಆದರೆ ಇದು ರಾಜ್ಯದ ಜನತೆಯ ಸಂಕಷ್ಟವನ್ನು ನೋಡಿ ಬರುತ್ತಿರುವ ಕಣ್ಣೀರು, ಹೃದಯದಿಂದ ಬರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು. ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕೆ.ಟಿ.ಶಾಂತಕುಮಾರ್ ಜೆ.ಡಿ.ಎಸ್ ಸೇರ್ಪಡೆ ಹಾಗೂ ಜೆ.ಡಿ.ಎಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಕಣ್ಣೀರು ಹಾಕುವುದನ್ನು ನೋಡಿ, ಕೆಲವರು ಗೇಲಿ ಮಾಡುತ್ತಾರೆ. ಯಾರ ಹೃದಯದಲ್ಲಿ ನೋವಿರುತ್ತದೋ ಅದು ಕಣ್ಣೀರಾಗಿ ಹರಿಯುತ್ತದೆ. ನನ್ನ ಕಣ್ಣೀರು ಅಂತಹದ್ದು ಎಂದರು. ರಾಜ್ಯದಲ್ಲಿ 2 ರಾಷ್ಟ್ರೀಯ ಪಕ್ಷಗಳು ಅಧಿಕಾರವನ್ನು ಮಾಡುತ್ತಾ ಜನರಿಗೆ ಇಲ್ಲದ ತೆರಿಗೆ ಹಾಕಿ ಜನರ ದುಡ್ಡಿನಲ್ಲಿ ಸರ್ಕಾರಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆಯೇ , ಹೊರತು ಯಾವುದೇ ಕಾರಣಕ್ಕೂ ಜನರ ಸಮಸ್ಯೆಯ ಬಗ್ಗೆ ಕಾಳಜಿ ಅವರಿಗಿಲ್ಲ. ಇವರಿಗೆ ಜನರ ಮತಗಳು ಮಾತ್ರ ಬೇಕು, ಜನರ ಸಮಸ್ಯೆ ಬೇಡ. ಇಂತಹ ರಾಜಕಾರಣಿಗಳು ನಿಮಗೇ ಬೇಕೆ ಎಂದು ಪ್ರಶ್ನಿಸಿದ ಅವರು, ನಾನು ಪಂಚರತ್ನ ಯಾತ್ರೆಯನ್ನು ಯಶಸ್ವಿಯಾಗುತ್ತಿರುವುದು ಅವರ ಕಣ್ಣುರಿಯಾಗುತ್ತಿದೆ. ಅವರು ಕಣ್ಣೀರು ಹಾಕುವ…
ಸರಗೂರು: ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಮಾರಾಮು ನೇಮಕಗೊಂಡಿದ್ದಾರೆ. ಶನಿವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳಾಗಿ ಸದಸ್ಯರಾದ ಎಸ್.ಎಲ್.ರಾಜಣ್ಣ, ಉಮಾರಾಮು, ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಶಿವಕುಮಾರ್ ಉಮಾರಾಮು ಅವರಿಗೆ ಬೆಂಬಲ ಸೂಚಿಸಿದರು. ಹೀಗಾಗಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಮಾರಾಮು ಆಯ್ಕೆಗೊಂಡರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಕಾಂಗ್ರೆಸ್ ಪಕ್ಷದ ಪಪಂ ಸದಸ್ಯರು ಚಲುವಕೃಷ್ಣ ಶ್ರೀನಿವಾಸ ಇಬ್ಬರು ಸದಸ್ಯರು ಬಿಜೆಪಿ ಪಕ್ಷದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಎಂಬುವರಿಗೆ ಸೂಚಕ ಹಾಗೂ ಅನುಮೋಧಕವಾಗಿ ಬಿಜೆಪಿ ಪಕ್ಷದ ಶಿವಕುಮಾರ್ ರವರಿಗೆ ಬೆಂಬಲ ಸೂಚಿಸಿದರು. ಸದಸ್ಯ ಎಸ್.ಎಲ್.ರಾಜಣ್ಣ ಮಾತನಾಡಿ, ಸಾಮಾನ್ಯ ಸಭೆಗೆ ಸಂಸದರು, ಶಾಸಕರಿಗೆ ಏಳು ದಿನಗಳೊಳಗೆ ನೋಟೀಸ್ ನೀಡಬೇಕು. ಆದರೆ, ಅಧಿಕಾರಿಗಳು ಜ.31ರಂದು ನೋಟೀಸ್ ನೀಡಿದ್ದಾರೆ. ಸಂಸದರು, ಶಾಸಕರ ಗೈರು ಹಾಜರಿಯಲ್ಲಿ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯ್ಕೆ ಅಸಿಂಧುವಾಗಿದೆ. ಮುಂದೆ…
ನೆಲಮಂಗಲ: ನಗರಸಭೆ ವ್ಯಾಪ್ತಿಯಲ್ಲಿ ಬರುವ ಜಕ್ಕಸಂದ್ರದ ಬ್ರಾಹ್ಮಣರ ಬೀದಿಯಲ್ಲಿ ಕರ್ನಾಟಕ ರಣಧೀರ ವೇದಿಕೆಯ ನೂತನ ಕೇಂದ್ರ ಕಚೇರಿಯನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರ್ ಗೌಡ್ರು ನೇತೃತ್ವದಲ್ಲಿ ಉದ್ಘಾಟನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಾಡಿನ ಒಳಿತಿಗಾಗಿ ನಾಡ ದೇವತೆಯಾದ ಶ್ರೀ ಭುವನೇಶ್ವರಿ ದೇವಿಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳೊಂದಿಗೆ ವಿವಿಧ ಹೋಮ ಹವನಗಳನ್ನು ಇದೇ ಸಂದರ್ಭದಲ್ಲಿ ಕೈಗೊಳ್ಳಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಕರ್ನಾಟಕ ರಣಧೀರರ ವೇದಿಕೆಯ ಕಾರ್ಯಕರ್ತರು ಈ ಶುಭ ಸಂದರ್ಭದಲ್ಲಿ ಹಾಜರಾಗಿ ತಾಯಿ ಭುವನೇಶ್ವರಿ ದೇವಿಯ ಕೃಪೆಗೆ ಪಾತ್ರರಾದರು. ಕಚೇರಿ ಉದ್ಘಾಟನೆಯಾದ ನಂತರ ನೂತನವಾಗಿ ವಿಜಯಪುರ ಜಿಲ್ಲೆಯ ಜಿಲ್ಲಾ ಘಟಕವನ್ನು ಇದೆ ಸಂದರ್ಭದಲ್ಲಿ ಸ್ಥಾಪಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಮಹೇಶ್ ಆಯ್ಕೆಯಾದರು. ಕಾರ್ಯಧ್ಯಕ್ಷರಾಗಿ ಜಾವಿದ್ ಹಾಕಿಯಾದರೂ ಹಾಗೂ ಜಿಲ್ಲಾ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು ಆಯ್ಕೆಯಾದ ಎಲ್ಲಾ ಕಾರ್ಯಕರ್ತರಿಗೂ ನೇಮಕಾತಿ ಆದೇಶ ಪತ್ರವನ್ನು ನೀಡಿ ಅಭಿನಂದಿಸಲಾಯಿತು. ಕಲ್ಯಾಣ ಕರ್ನಾಟಕ ಭಾಗದ ರಾಜ್ಯ ಉಸ್ತುವಾರಿಯಾಗಿ ಬಸವರಾಜ್ ರವರನ್ನು ಇದೇ ಸಂದರ್ಭದಲ್ಲಿ ರಾಜ್ಯ ಘಟಕದ ಮುಖಂಡರುಗಳ…
ಬೀದರ್: ಜಿಲ್ಲೆಯ ಔರಾದ್ ‘ಬಿ’ ಪಟ್ಟಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಪಕ್ಷದ ಟಿಕೆಟ್ ಆಕಾಂಕ್ಷಿಗಳು ಭವ್ಯವಾಗಿ ಸ್ವಾಗತ ಮಾಡಿದರು. ಇದೇ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ದುರಾಡಳಿತದ ವಿರುದ್ಧ ಕಿಡಿಕಾರಿದ ಅವರು, ಔರಾದ್ ಕ್ಷೇತ್ರದ ಪಶು ಸಂಗೋಪನೆ ಸಚಿವರಾದ ಪ್ರಭು ಚೌಹಾಣರ ವಿರುದ್ಧ ವಾಗ್ದಾಳಿ ನಡೆಸಿದರು. ದುರಾಡಳಿತ ಮಾಡುತ್ತಿರುವ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರುವಂತೆ ಅವರು ಮನವಿ ಮಾಡಿಕೊಂಡರು. ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದ ತರುವ ನಿಟ್ಟಿನಲ್ಲಿ ಪ್ರಜಾ ಧ್ವನಿ ಯಾತ್ರೆಯನ್ನು ಇಡೀ ಕರ್ನಾಟಕ ರಾಜ್ಯದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು. ಈ ವೇಳೆ ಕೆಪಿಸಿಸಿ ಕಾರ್ಯಧ್ಯಕ್ಷರಾದ ಈಶ್ವರ್ ಬಿ ಖಂಡ್ರೆ ಮಾತನಾಡಿ, ಔರಾದ್ ಕ್ಷೇತ್ರದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ಅಭಿಮಾನಕ್ಕೆ ಅಭಿನಂದಿಸುವುದಾಗಿ ತಿಳಿಸಿದರು. ಕೆಪಿಸಿಸಿ ಕಾರ್ಯದರ್ಶಿಗಳಾದ ಮೀನಾಕ್ಷಿ ಸಂಗ್ರಾಮ, ಭೀಮಸೇನ್ ರಾವ್ ಶಿಂಧೆ, ಲಕ್ಷ್ಮಣ ಸೋರಲ್ಕರ್, ಸುಧಾಕರ್ ಕೊಳ್ಳುರ್, ರಾಮಣ ಒಡಿಯರ್, ಬಂಟಿ ದರ್ಬಾರೆ, ಹಾಗೂ ಬೀದರ್…
ಡ್ರಗ್ಸ್‌ನೊಂದಿಗೆ ಮತ್ತೆ ಭಾರತದ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಗಳನ್ನು ಬಿಎಸ್ ಎಫ್ ಯೋಧರು ಹೊಡೆದುರುಳಿಸಿದ್ದಾರೆ. ರಾಜಸ್ಥಾನದ ಅಂತರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ನಡೆದಿದ್ದು, 6 ಕೆಜಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಡ್ರೋನ್ ನ್ನು ಹೊಡೆದುರುಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಬ್ರವರಿ 4 ರ ಶನಿವಾರ ರಾತ್ರಿ ರಾಜಸ್ಥಾನದ ಶ್ರೀಗಂಗಾನಗರ ವಲಯದ ಶ್ರೀಕರನ್‌ಪುರ ಪ್ರದೇಶಕ್ಕೆ ಡ್ರೋನ್ ಆಗಮಿಸಿದೆ. ಪಾಕಿಸ್ತಾನದ ಡ್ರೋನ್ ಮತ್ತು 6 ಕೆಜಿ ತೂಕದ ಆರು ಪ್ಯಾಕೆಟ್ ಮಾದಕ ವಸ್ತುಗಳನ್ನು ಸ್ಥಳೀಯ ಪೊಲೀಸರ ಜಂಟಿ ತಂಡವು ವಶಪಡಿಸಿಕೊಂಡಿದೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ. ಶುಕ್ರವಾರ ಪಂಜಾಬ್ ನಲ್ಲಿ ಐದು ಕಿಲೋಗಳಷ್ಟು ಮಾದಕ ದ್ರವ್ಯಗಳನ್ನು ಹೊತ್ತೊಯ್ಯುತ್ತಿದ್ದ ಇದೇ ರೀತಿಯ ಡ್ರೋನ್ ಅನ್ನು ಗಡಿ ಪಡೆ ಹೊಡೆದುರುಳಿಸಿತು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ತಮಿಳುನಾಡು: ಉಚಿತ ಸೀರೆಗಾಗಿ ಮಹಿಳೆಯರು ಮುಗಿಬಿದ್ದ ಪರಿಣಾಮ ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ. ತಿರುಪತ್ತೂರಿನ ವಾಣಿಯಂಪಾಡಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಸಂಸ್ಥೆಯೊಂದು ಉಚಿತವಾಗಿ ಸೀರೆ, ನೀಡುವುದಾಗಿ ಘೋಷಿಸಿದ್ದು, ಇದಕ್ಕಾಗಿ ಕಂಪನಿಯವರು ಹೇಳಿದ ಜಾಗಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಸಾವಿರಾರು ಜನರು ಜಮಾಯಿಸುತ್ತಿದ್ದಂತೆ, ಕಾಲ್ತುಳಿತ ಸಂಭವಿಸಿದೆ. ಅಯ್ಯಪ್ಪನ್ ಎಂಬ ವ್ಯಕ್ತಿ ತೈಪುಯಂ ಹಬ್ಬದ ಆಚರಣೆಯ ಅಂಗವಾಗಿ ಉಚಿತ ಸೀರೆ ಮತ್ತು ಉಡುಪುಗಳನ್ನು ವಿತರಿಸಿದರು. ಇದಕ್ಕೆ ಟೋಕನ್ ನೀಡುವಾಗ ಅವಘಡ ಸಂಭವಿಸಿದೆ. 100ಕ್ಕೂ ಹೆಚ್ಚು ಮಹಿಳೆಯರು ಬಟ್ಟೆ ಖರೀದಿಸಲು ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು. ಅನೇಕ ಜನರು ಗಾಯಗೊಂಡರು. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಸುಪ್ರೀಂ ಕೋರ್ಟ್‌ಗೆ 5 ಹೊಸ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಕೊಲಿಜಿಯಂ ಶಿಫಾರಸು ಮಾಡಿದ ಎಲ್ಲ 5 ಮಂದಿಯ ನೇಮಕಕ್ಕೆ ಕೇಂದ್ರ ಅನುಮತಿ ನೀಡಿದೆ. ಅನುಮೋದನೆ ವಿಳಂಬಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಇದಾದ ಬಳಿಕ ಕೇಂದ್ರ ಸರ್ಕಾರ ನೇಮಕಾತಿಗೆ ಅನುಮತಿ ನೀಡಿತ್ತು. ಕೊಲಿಜಿಯಂ ನೀಡಿರುವ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಶೀಘ್ರವೇ ಅಂಗೀಕರಿಸಲಿದೆ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಬೆನ್ನಲ್ಲೇ ನೇಮಕಾತಿಗಳಿಗೆ ಅನುಮೋದನೆ ದೊರೆತಿದೆ. ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದು ತಿಳಿದುಬಂದಿದೆ. ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿತ್ತಲ್, ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್, ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್, ಪಾಟ್ನಾ ಹೈಕೋರ್ಟ್ ನ್ಯಾಯಾಧೀಶ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಮನೋಜ್ ಮಿಶ್ರಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿದೆ. ಇದರೊಂದಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೆ…
ಬೆಳಗಾವಿ: “ಎಲ್ಲ ಧರ್ಮ, ಧರ್ಮೀಯರನ್ನು ಪ್ರೀತಿಸಿ ಯಾವುದೇ ಭೇದಭಾವ ಮಾಡದೇ ಸೋದರತ್ವದಿಂದ ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಭಾವನೆಯೊಂದಿಗೆ ನಡೆದುಕೊಂಡು ಹೋದಾಗ ಜೀವನ ಪಾವನವಾಗುತ್ತದೆ,” ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. ಖಾನಾಪುರ ತಾಲೂಕಿನ ಸುಕ್ಷೇತ್ರ ಚಿಕ್ಕಮುನವಳ್ಳಿಯ ಆರೂಢ ಮಠದಲ್ಲಿ ಜರುಗಿದ ಸರ್ವ ಧರ್ಮ ಭಾವೈಕ್ಯತೆಯ ಸಮ್ಮೇಳನದಲ್ಲಿ ಭಾಗಿಯಾಗಿ, ಎಲ್ಲ ಮಠಾಧೀಶರ ಆಶೀರ್ವಾದ ಪಡೆದು, ಸಮ್ಮೇಳವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸರ್ವ ಜನಾಂಗದ ಶಾಂತಿಯ ತೋಟದಂತೆ ಇಂದು ಮಠಮಾನ್ಯಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ರವಾನಿಸುತ್ತಿವೆ. ಹಬ್ಬ ಮತ್ತು ಆಚರಣೆಗಳು ಸದಾಕಾಲವೂ ಭಾವೈಕ್ಯತೆಯ ಸಂಕೇತವಾಗಿ ಹೊರಹೊಮ್ಮುತ್ತಿವೆ. ಯುಗಾದಿಯ ಹೋಳಿಗೆಯ ಹೂರಣ, ಕ್ರಿಸ್ಮಸ್ ನ ಉಡುಗೊರೆಗಳು ಮತ್ತು ರಂಜಾನ್ ಖೀರನ್ನು ವಿನಿಮಯ ಮಾಡಿಕೊಳ್ಳುವ ಎಷ್ಟೋ ಕುಟುಂಬಗಳನ್ನು ನಾನು ನೋಡಿದ್ದೇನೆ, ಹಲವು ಬಾರಿ ನಾನೂ ಕೂಡ ಭಾಗವಹಿಸಿದ್ದೇನೆ,” ಎಂದು ಅವರು ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಚಿಕ್ಕಮುನವಳ್ಳಿಯ ಶ್ರೀ ದಿವ್ಯಚೇತನ ಶಿವಪುತ್ರ ಮಹಾಸ್ವಾಮಿಗಳು,…
ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರ ನಿಧಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ 50 ಹಳ್ಳಿಗಳಿಗೆ ಇದೇ ವರ್ಷ ಜಿಮ್ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣೆ ಮಾಡಲಾಗುತ್ತಿದ್ದು, ಈಗಾಗಲೆ 20 ಹಳ್ಳಿಗಳಿಗೆ ವಿತರಣೆ ಪೂರ್ಣಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ. ಶನಿವಾರ ಶಾಸಕ ಗೃಹ ಕಚೇರಿಯಲ್ಲಿ 10 ಗ್ರಾಮಗಳಿಗೆ ಜಿಮ್ ಹಾಗೂ ಕ್ರೀಡಾ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ನಗರ ಪ್ರದೇಶಗಳಲ್ಲಿ ಸಿಗುವ ಸೌಲಭ್ಯಗಳು ಗ್ರಾಮೀಣ ಪ್ರದೇಶದ ಯುವಕರಿಗೆ, ಮಕ್ಕಳಿಗೆ ಸಿಗಬೇಕೆನ್ನುವ ಉದ್ದೇಶದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಈ ಯೋಜನೆ ಹಾಕಿಕೊಂಡಿದ್ದಾರೆ. ತನ್ಮೂಲಕ ಗ್ರಾಮೀಣ ಜನತೆಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿನಂತಿಸಿದರು. ಕ್ಷೇತ್ರದಲ್ಲಿ ನಾಗರಿಕ ಸೌಲಭ್ಯಗಳ ಅಭಿವೃದ್ಧಿಯ ಜೊತೆಗೆ, ಕ್ರೀಡೆ, ಶಿಕ್ಷಣ ಸೇರಿದಂತೆ ಸರ್ವ ಎಲ್ಲ ವಿಧದಲ್ಲೂ ಕ್ಷೇತ್ರ ಮುಂದೆ ಬರಬೆಕೆನ್ನುವ ಧ್ಯೇಯ ಇಟ್ಟುಕೊಂಡು ಲಕ್ಷ್ಮೀ ಹೆಬ್ಬಾಳಕರ್ ಅವರು ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಹ ಜನರು…