Subscribe to Updates
Get the latest creative news from FooBar about art, design and business.
- ಕೊರಟಗೆರೆ: ಜೂ.28 ರಿಂದ ಪೋಲಿಯೋ ಲಸಿಕೆ ಕಾರ್ಯಕ್ರಮ
- ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಪಿಎಸ್ ಐ ತೀರ್ಥೇಶ್
- ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ
- ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಪಾಲುದಾರಿಕೆ: ಶಾಸಕರ ಎಂ.ಟಿ.ಕೃಷ್ಣಪ್ಪ ಆರೋಪ
- ತುಮಕೂರು: ವಿವಿಧ ಸೌಲಭ್ಯಕ್ಕಾಗಿ ಆನ್ ಲೈನ್ ಅರ್ಜಿ
- ಜೂ. 28ರಂದು ಪಲ್ಸ್ ಪೋಲಿಯೋ ಲಸಿಕೆ, ಜಿಲ್ಲೆಯಾದ್ಯಂತ 1,86,831 ಮಕ್ಕಳಿಗೆ ಲಸಿಕೆ ಗುರಿ: ಡಾ.ಚಂದ್ರಶೇಖರ್
- ಬಿಜೆಪಿ ಶಾಸಕರ ವಿರುದ್ಧ ಅಡ್ಡಮತದಾನದ ಅಪಪ್ರಚಾರ: ಎಸ್ ಪಿ ಕಚೇರಿ ಬಳಿ ಪ್ರತಿಭಟನೆ: ಕ್ರಮಕ್ಕೆ ಆಗ್ರಹ
- ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ, ಜು.1 ರಿಂದ ನರೇಗಾ ಬದಲು ವಿಬಿಜಿ ರಾಮ್ ಜಿ ಯೋಜನೆ ಜಾರಿ : ಜಿಪಂ ಸಿಇಒ
Author: admin
ನವದೆಹಲಿ: ಲಡಾಖ್ ನಲ್ಲಿ ಸುಮಾರು 2000 ಚದರ ಕಿ.ಮೀ. ಭಾರತದ ಭೂಮಿ ಚೀನಾ ವಶದಲ್ಲಿದೆ ಎಂದು ರಾಹುಲ್ ಗಾಂಧಿ ಮತ್ತೆ ಆರೋಪ ಮಾಡಿದ್ದು, ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಅಪಾಯಕಾರಿ ಎಂದಿದ್ದಾರೆ. ಚೀನೀಯರು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಅತ್ಯಂತ ಅಪಾಯಕಾರಿ. ಇನ್ನೂ ಹೆಚ್ಚು ಆಕ್ರಮಣಕಾರಿ ಯೋಜನೆಗಳನ್ನು ರೂಪಿಸಲು ಚೀನಿಯರನ್ನು ಪ್ರೇರೇಪಿಸುತ್ತದೆ ಎಂದು ಎಚ್ಚರಿಕೆ ನೀಡಿದರು. ಚೀನಿಯರೊಂದಿಗೆ ವ್ಯವಹರಿಸುವ ಮಾರ್ಗವೆಂದರೆ ಅವರೊಂದಿಗೆ ದೃಢವಾಗಿ ವ್ಯವಹರಿಸುವುದು ಮತ್ತು ಅವರು ನಮ್ಮ ನೆಲವನ್ನು ಕಬಳಿಸಿರುವುದನ್ನು ನಾವು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದು ರಾಹುಲ್ ಗಾಂಧಿ ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಬಿಜೆಪಿಯೊಂದಿಗೆ ಮರುಮೈತ್ರಿಯ ಸಾಧ್ಯತೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ತಳ್ಳಿಹಾಕಿದ್ದಾರೆ. ತಮ್ಮ ಹಿಂದಿನ ಮಿತ್ರರೊಂದಿಗೆ ‘ಕೈಜೋಡಿಸುವ ಬದಲು ಸಾಯುವುದೇ ಲೇಸು’ ಎಂದು ಪ್ರತಿಪಾದಿಸಿದ್ದಾರೆ. ತಮ್ಮೊಂದಿಗೆ ಮೈತ್ರಿಯಲ್ಲಿದ್ದಾಗ ಬಿಜೆಪಿಯ ಹಿಂದುತ್ವ ಸಿದ್ಧಾಂತದ ಬಗ್ಗೆ ಯಾವಾಗಲೂ ವಿರುದ್ಧವಾಗಿರುವ ಮುಸ್ಲಿಮರು ಸೇರಿದಂತೆ ತಮ್ಮೆಲ್ಲಾ ಬೆಂಬಲಿಗರ ಮತಗಳನ್ನು ಅದು ಪಡೆಯುತ್ತಿತ್ತು ಎಂದು ಜೆಡಿಯು ನಾಯಕ ನೆನಪಿಸಿಕೊಂಡರು. ಮುಂದಿನ ವರ್ಷ ರಾಜ್ಯದ 40 ಲೋಕಸಭಾ ಸ್ಥಾನಗಳ ಪೈಕಿ 36 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ ಎಂದು ವ್ಯಂಗ್ಯವಾಡಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಪಾವಗಡ: ತಾಲ್ಲೂಕಿನ ವೈ.ಎನ್ .ಹೊಸಕೋಟೆ ಹೋಬಳಿಯ ಮರಿದಾಸನಹಳ್ಳಿ ಕ್ಲಸ್ಟರ್ ನ ಕಲಿಕಾ ಹಬ್ಬವನ್ನು ಸೋಮವಾರದಂದು ಮರಿದಾಸನಹಳ್ಳಿ ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು . ಇದೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅಂಜನೇಯಲು ಕೆ. ಅವರು ಕಲಿಕಾ ಹಬ್ಬದಲ್ಲಿ ಬರುವ ಪ್ರಮುಖ ನಾಲ್ಕು ಮೂಲಗಳು ಮಾಡು ಆಡು, ಕಾಗದ ಕತ್ತರಿ ಬಣ್ಣ ,ಊರು ತಿಳಿಯೋಣ ಹಾಗೂ ಹಾಡು ಆಡು ಇದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಶಾಲೆಯ SDMC ಅಧ್ಯಕ್ಷರಾದ ಆಂಜನೇಯಲು , SDMC ಸದಸ್ಯ ಪರಮೇಶ್ , ಮರಿದಾಸನಹಳ್ಳಿ ಕ್ಲಸ್ಟರ್ CRP ನಾಗೇಂದ್ರ ನಾಯ್ಕ , ಉತ್ತಮ ಶಿಕ್ಷಣ ಪುರಸ್ಕೃತರು ಹಾಗೂ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ರಾಜಗೋಪಾಲ್, ಕ್ಲಸ್ಟರ್ ಎಲ್ಲಾ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವರದಿ: ನಂದೀಶ್ ನಾಯ್ಕ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ಸಾಕಷ್ಟು ಜನರಿಗೆ ಹಣ್ಣು ಇಷ್ಟ ಆದ್ರೆ, ಯಾವ ಹಣ್ಣಿನಲ್ಲಿ ಏನನ್ನು ತಿನ್ನಬೇಕು? ಏನನ್ನು ಎಸೆಯ ಬೇಕು ಅನ್ನೋದು ತಿಳಿದಿರೋದಿಲ್ಲ. ಕೆಲವೊಂದು ಹಣ್ಣಿನ ಬೀಜವನ್ನು ಕೂಡ ಕೆಲವರು ಸೇವಿಸುತ್ತಾರೆ. ಆದರೆ ಅದರಿಂದ ಕೆಲವೊಂದು ದುಷ್ಪರಿಣಾಮಗಳು ಉಂಟಾಗೋದು ಸಹಜ. ಆ್ಯಪಲ್ ಅಂದ್ರೆ, ಯಾರಿಗೆ ಇಷ್ಟವಿಲ್ಲ ಹೇಳಿ, ಎಲ್ಲರಿಗೂ ಪ್ರಿಯವಾದದ್ದು ಮತ್ತು ಆರೋಗ್ಯಕ್ಕೂ ಅದು ಬಹಳ ಉತ್ತಮ. ದಿನದಲ್ಲಿ ಒಂದು ಆ್ಯಪಲ್ ಸೇವನೆ ಮಾಡೋದ್ರಿಂದ ಡಾಕ್ಟರ್ ನಿಂದ ದೂರವಿರಿ ಅನ್ನೋ ಮಾತುಗಳನ್ನೂ ನೀವು ಕೇಳಿದ್ದೀರಿ. ಆದ್ರೆ, ಆ್ಯಪಲ್ ನ ಬೀಜವನ್ನು ತಿನ್ನುವುದು ಅಷ್ಟು ಉತ್ತಮವಲ್ಲ. ಆ್ಯಪಲ್ ನ ಬೀಜ ಸೇವನೆ ಮಾಡೋದ್ರಿಂದ ನಮಗೆ ತಲೆ ನೋವು, ವಾಂತಿ, ಬಲಹೀನತೆ, ತಲೆ ಸುತ್ತು ಇತ್ಯಾದಿ ಲಕ್ಷಣಗಳು ಉಂಟಾಗಬಹುದು. ಮಕ್ಕಳಂತೂ ಆ್ಯಪಲ್ ನ ಬೀಜವನ್ನು ಸೇವಿಸಲೇ ಬಾರದು. ಆ್ಯಪಲ್ ನ ಒಂದೆರಡು ಬೀಜ ಸೇವನೆ ಮಾಡಿದ್ರೆ ಅಷ್ಟೊಂದು ಪರಿಣಾಮಕಾರಿಯಲ್ಲ, ಆದ್ರೆ, ಸಾಕಷ್ಟು ಸಂಖ್ಯೆಯಲ್ಲಿ ಆ್ಯಪಲ್ ಬೀಜವನ್ನು ತಿಂದರೆ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಹಾಗಾಗಿ ಆ್ಯಪಲ್ ಸೇವನೆ ವೇಳೆ ಬೀಜವನ್ನು…
ಇಸ್ಲಾಮಾಬಾದ್ : ಪಾಕಿಸ್ತಾನದ ಪೇಶಾವರದ ಮಸೀದಿಯೊಂದರಲ್ಲಿ ಬಾಂಬ್ ಸ್ಪೋಟ ಸಂಭವಿಸಿದ್ದು ಸ್ಫೋಟದಲ್ಲಿ 17 ಮಂದಿ ಸಾವನ್ನಪ್ಪಿದ್ದು ಸುಮಾರು 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ. ವಾಯುವ್ಯ ನಗರದ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, ಸ್ಪೋಟದ ತೀವ್ರತೆಗೆ ಮಸೀದಿಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ ಎಂದು ಪೊಲೀಸ್ ಅಧಿಕಾರಿ ಸಿಕಂದರ್ ಖಾನ್ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ 13 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸ್ಫೋಟದ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಬೆಳಗಾವಿ: ಸಿಡಿ ಪ್ರಕರಣಕ್ಕೆ ಡಿ.ಕೆ ಶಿವಕುಮಾರ ಸೂತ್ರಧಾರಿಯಾಗಿದ್ದು ಇದು ಇಬ್ಬರ ನಡುವಿನ ವೈಯಕ್ತಿಕ ಯುದ್ಧವಾಗಿದೆ ಕೂಡಲೆ ಡಿಕೇಶಿ ಸೇರಿದಂತೆ ನರೇಶ, ಶ್ರವಣ, ಪರಶಿವಮೂರ್ತಿ, ಮಂಡ್ಯ ಮೂಲದ ಇಬ್ಬರನ್ನು ಹಾಗೂ ಸಿಡಿ ಲೇಡಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಬೇಕೆಂದು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಆಗ್ರಹಿಸಿದರು. ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕಾರಣದಲ್ಲಿ ಆತ ಇಂತಹ ಷಡ್ಯಂತ್ರ ಮಾಡಬಾರದಿತ್ತು. ನೂರಾರು ದಾಖಲೆಗಳು ನಮ್ಮ ಬಳಿ ಆತನ ವಿರುದ್ಧ ಇವೆ. ನಾನು ಸೂಕ್ತ ಪ್ರಾಧಿಕಾರದ ಮುಂದೆ ಡಿಕೆಶಿ ವಿರುದ್ಧ ದಾಖಲಾತಿಗಳನ್ನು ಬಿಡುಗಡೆ ಮಾಡಿಯೇ ಮಾಡುತ್ತೇನೆ ಎಙದು ರಮೇಶ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಯುವತಿಯೊಬ್ಬಳನ್ನು ಮುಂದಿಟ್ಟುಕೊಂಡು ಡಿ. ಕೆ. ಶಿವಕುಮಾರ ಅವರು ನನ್ನ ತೇಜೋವಧೆ ಮಾಡಿದ್ದಾರೆ. ನಾನು ಮಾಡದ ಕೃತ್ಯವನ್ನು ಕಾನೂನಿನ ಕಾರಣಕ್ಕಾಗಿ ನಾನು ಒಪ್ಪಿಕೊಂಡಿದ್ದೆನಷ್ಟೇ. ನನ್ನ ಸಿಡಿ ಸಿದ್ಧಪಡಿಸಲು ಡಿ.ಕೆ.ಶಿವಕುಮಾರ ಸೂತ್ರಧಾರ. ನಾಲ್ವತ್ತು ಕೋಟಿ ರೂ. ಖರ್ಚು ಮಾಡಿ ನನಗೆ ಸಿಡಿಯಲ್ಲಿ ಸಿಲುಕಿಸಿದ್ದಾನೆ. ಅವನ ರಾಜಕೀಯ ಜೀವನ ಮುಗಿಸುವವರೆಗೂ ನಾನು ಸುಮ್ಮನೆ…
ಕೊಪ್ಪಳ: 2023ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ 1 ಲಕ್ಷ ರೂ ಸಾಲ ಮನ್ನಾ ಮಾಡುವೆ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದರು. ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ರೈತರು ಮತ್ತು ಮಹಿಳೆಯರು ಕಷ್ಟದಲ್ಲಿದ್ದು ಪ್ರತಿದಿನ ತಮ್ಮ ಅಳಲನ್ನು ತೋಡಿಕೋಳ್ಳುತ್ತಿದ್ದಾರೆ. ವಾಸಿಸಲು ಮನೆ ಇಲ್ಲವೆಂದು ಹೇಳುತ್ತಿದ್ದಾರೆ. ಕೋವಿಡ್ ವೇಳೆ ಮೃತ ಕುಟುಂಬಕ್ಕೆ ಇನ್ನೂ ಪರಿಹಾರ ಬಂದಿಲ್ಲಾ ಎನ್ನುತ್ತಾರೆ. ಅವರ ಕಷ್ಟಕ್ಕೆ ನಾನು ಸ್ಪಂದನೆ ಮಾಡುತ್ತಿದ್ದೇನೆ ಫಸಲ್ ಬಿಮಾ ಯೋಜನೆ ಹೆಸರಲ್ಲಿ ವಿಮಾ ಕಂಪನಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ. ಈ ಹಿಂದೆ ರೈತರ ಆತ್ಮಹತ್ಯೆ ಹೆಚ್ಚಾದವು. ಅವರ ನೋವು ಅರಿತು ರೈತರ ಸಾಲ ಮನ್ನಾ ಮಾಡುವೆ ಎಂದು ಹೇಳಿದ್ದೆ. ನನಗೆ ಪೂರ್ಣ ಬಹುಮತ ಬರಲಿಲ್ಲ. ಆದರೂ ರೈತರ ಸಾಲ ಮನ್ನಾ ಮಾಡಿದೆ ಎಂದು ಹೇಳಿದರು. ಕಾಂಗ್ರೆಸ್ ನನಗೆ ಒತ್ತಡ ಹಾಕಿದ್ರು, ನಿಮ್ಮ ಕಾರ್ಯಕ್ರಮಕ್ಕೆ ಹಣ ಹೊಂದಿಸಿ ಕೊಡುವೆ…
ಶ್ರೀನಗರ: ರಾಷ್ಟ್ರದಲ್ಲಿ ಭದ್ರತಾ ಪರಿಸ್ಥಿತಿ ಉತ್ತಮವಾಗಿದೆ ಎಂದು ಬಿಜೆಪಿ ಹೇಳುತ್ತಿದ್ದು ಇದು ನಿಜವಾಗಿದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮುವಿನಿಂದ ಲಾಲ್ ಚೌಕಗೆ ನಡೆದುಕೊಂಡು ಬರಲಿ ನೋಡೋಣ ಎಂದು ರಾಹುಲ್ ಗಾಂಧಿ ಸವಾಲ್ ಹಾಕಿದ್ದಾರೆ. ಕಾಂಗ್ರೆಸ್ ಭಾರತ ಜೋಡೊ ಯಾತ್ರೆಯು ಕೊನೆಯ ಹಂತ ತಲುಪಿದ್ದು ಕನ್ಯಾಕುಮಾರಿಯಿಂದ ಲಾಲ್ ಚೌಕ್ ತಲುಪಿದ ರಾಹುಲ್ ಗಾಂಧಿ ಅವರು ಮಾತನಾಡಿ ದೇಶದಲ್ಲಿ ಭದ್ರತೆ ಪರಿಣಾಮಕಾರಿಯಾಗಿ ಇಲ್ಲ ಎಂದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಮಿತ್ ಶಾ ದೇಶದಲ್ಲಿ ಎಲ್ಲವು ಚೆನ್ನಾಗಿದೆ ಎಂದು ಹೆಳುತ್ತಾರೆ ಹಾಗಿದ್ದರೆ ಲಾಲ್ ಚೌಕವರೆಗೂ ಅವರು ನಡೆದು ತೋರಿಸಲಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳು ಮತ್ತು ಬಾಂಬ್ ಸ್ಫೋಟಗಳು ಸಾಮಾನ್ಯ ಘಟನೆಯಾಗಿದೆ ಎಂದಿದ್ದಾರೆ.ಇತ್ತೀಚೆಗೆ ಭದ್ರತಾ ಲೋಪದಿಂದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಪೊಲೀಸರು ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ತಿಳಿಸಿದರೆ, ಬಿಜೆಪಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರದು ಆಧಾರರಹಿತ ಹೇಳಿಕೆ ಎಂದು ಆರೋಪಿಸಿ ಗೇಲಿ…
ವಂಚನೆಯನ್ನು ರಾಷ್ಟ್ರೀಯತೆ ಅಥವಾ ಆರೋಪಗಳಿಗೆ ತಿರಸ್ಕರಿಸುವ ಪ್ರತಿಕ್ರಿಯೆಗಳಿಂದ ಮರೆಮಾಚಲಾಗುವುದಿಲ್ಲ ಎಂದು ಅದಾನಿಗೆ ಹಿಂಡೆನ್‌ಬರ್ಗ್‌ನ ಉತ್ತರ. ಅಮೆರಿಕದ ಹಣಕಾಸು ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ವರದಿಯಲ್ಲಿರುವ ಎಲ್ಲಾ ಮಾಹಿತಿಗಳು ಭಾರತ ಮತ್ತು ಭಾರತೀಯ ಸಂಸ್ಥೆಗಳ ಮೇಲಿನ ದಾಳಿಯಾಗಿದೆ ಎಂದು ಅದಾನಿ ಗ್ರೂಪ್ ಪ್ರತಿಕ್ರಿಯಿಸಿದೆ. ಇದಾದ ಬಳಿಕ ಮತ್ತೆ ಅದಾನಿ ವಿರುದ್ಧ ಹಿಂಡೆನ್ ಬರ್ಗ್ ಪ್ರತಿಕ್ರಿಯಿಸಿದ್ದಾರೆ. ಹಿಂಡೆನ್‌ಬರ್ಗ್ ಅದಾನಿಯನ್ನು ಪ್ರಮುಖ ವಿಷಯಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಿದ್ದಾರೆ ಮತ್ತು ಆರೋಪಗಳಿಗೆ ರಾಷ್ಟ್ರೀಯತೆಯ ಮುಖವನ್ನು ನೀಡಿದ್ದಾರೆ ಎಂದು ಟೀಕಿಸಿದರು. ಮಾಡಿದ ಎಲ್ಲಾ ಪ್ರಮುಖ ಆರೋಪಗಳನ್ನು ನಿರ್ಲಕ್ಷಿಸುವಂತೆ ಪ್ರತಿಕ್ರಿಯೆ ನೀಡಲಾಯಿತು. ಯಾವುದೂ ವಂಚನೆಯನ್ನು ತೊಡೆದುಹಾಕಲು ಸಾಧ್ಯವಿಲ್ಲ. ಅದಾನಿ ಗ್ರೂಪ್ ಮತ್ತು ಗೌತಮ್ ಅದಾನಿ ಆಸ್ತಿಯನ್ನು ಭಾರತಕ್ಕೆ ಸೇರುವಂತೆ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ. ಅದಾನಿ ಸಮೂಹವೇ ‘ಭಾರತದ ಧ್ವಜದಲ್ಲಿ ಸುತ್ತಿ’ ಭಾರತದ ಭವಿಷ್ಯವನ್ನು ಹಿಂದಕ್ಕೆ ತಳ್ಳುತ್ತಿದೆ.ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಮಾಡಿದರೂ ವಂಚನೆಯೇ ವಂಚನೆ. ಹಿಂಡೆನ್‌ಬರ್ಗ್ ಪ್ರತಿಕ್ರಿಯಿಸಿದರು. ಅಂಕಿಅಂಶಗಳು ಉತ್ಪ್ರೇಕ್ಷಿತವಾಗಿವೆ ಎಂದು ಹಿಂಡೆನ್‌ಬರ್ಗ್ ವರದಿಯ ದಿನಗಳ ನಂತರ ಅದಾನಿ ಗ್ರೂಪ್ ಪ್ರತಿಕ್ರಿಯಿಸಿದೆ.…
ಮಹಾತ್ಮ ಗಾಂಧಿಯವರ ಹುತಾತ್ಮ ದಿನದಂದು ಅವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ಆಳವಾದ ಚಿಂತನೆಗಳನ್ನು ಸ್ಮರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರ ಸೇವೆಯಲ್ಲಿ ಹುತಾತ್ಮರಾದ ಎಲ್ಲಾ ಯೋಧರಿಗೆ ನಮನಗಳು. ಅವರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುವ ಅವರ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. ದೇಶೀಯತೆ ಮತ್ತು ಸ್ವಾವಲಂಬನೆಯ ಮಾರ್ಗವನ್ನು ಅನುಸರಿಸುವ ಮೂಲಕ ದೇಶವನ್ನು ಸ್ವಾವಲಂಬಿಯಾಗಲು ಪ್ರೇರೇಪಿಸಿದ ಮಹಾತ್ಮ ಗಾಂಧಿಯನ್ನು ಸ್ಮರಿಸುತ್ತೇನೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. ಇದೇ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಶ್ವಶಾಂತಿಗಾಗಿ ಮಹಾತ್ಮ ಗಾಂಧೀಜಿಯವರು ತೋರಿಸಿದ ಹಾದಿ ಇಂದಿಗೂ ಪ್ರಸ್ತುತವಾಗಿದೆ.ಅವರ ಪ್ರೇರಣೆಯಿಂದ ಇಂದು ನವ ಮತ್ತು ಸ್ವಾವಲಂಬಿ ಭಾರತ ನಿರ್ಮಾಣ ಪ್ರಗತಿಯಲ್ಲಿದೆ ಎಂದರು. ಮಹಾತ್ಮರು ಸತ್ಯ ಮತ್ತು ಅಹಿಂಸೆಯ ಮೂಲಕ ಮನುಕುಲದ ಶಾಂತಿ ಮತ್ತು ಕಲ್ಯಾಣಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೆನಪಿಸಿದರು. ನಿಮ್ಮ ಆದರ್ಶ ಜೀವನ…