Author: admin

ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ: 2018 ರಿಂದ 2025ರ ವರೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಶಿವಗಂಗಾ ಚಿತ್ರಮಂದಿರದ ಮಾಲೀಕನಿಗೆ ಪ.ಪಂಚಾಯಿತಿ ಅಧಿಕಾರಿ ವರ್ಗ ಶುಕ್ರವಾರ ಬಿಗ್ ಶಾಕ್ ನೀಡಿದ್ದು ಚಿತ್ರಮಂದಿರ, ಕಲ್ಯಾಣ ಮಂಟಪ, ಹೋಟೆಲ್ ಜಪ್ತಿ ಮಾಡಿ 3 ದಿನದ ಒಳಗೆ ಕಂದಾಯ ಪಾವತಿ ಮಾಡುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕೊರಟಗೆರೆ ಪಟ್ಟಣ ಪಂಚಾಯಿತಿಯ ವಾರ್ಡ್ ನಂ.1 ರ ಗಂಗಾಧರಯ್ಯ ಬಿನ್ ಬಸೇಟಪ್ಪ ಖಾತೆ ನಂ.37/37 ರ ಬಾಕಿ ಇರುವ ಆಸ್ತಿ ತೆರಿಗೆಯನ್ನು 1964 ರ ಕಲಂ ಪುರಸಭಾ ಕಾಯ್ದೆ ಮತ್ತು ಸ್ವಯಂ ಘೋಷಣೆ ತೆರಿಗೆ ಪದ್ಧತಿಯಂತೆ ನಿಯಾಮನುಸಾರ ಪಾವತಿಸಬೇಕು. ಪ.ಪಂಚಾಯಿತಿ ಈಗಾಗಲೇ ತೆರಿಗೆ ಪಾವತಿಸುವಂತೆ 2018 ರಿಂದ 2022 ರವರೆಗೆ 6 ಬಾರಿ ತಿಳುವಳಿಕೆ ನೋಟಿಸ್ ನೀಡಿದ್ದು ಅಂತಿಮವಾಗಿ ನೋಟಿಸ್ ರಿಜಿಸ್ಟರ್ ಮೂಲಕ ಕಳುಹಿಸಲಾಗಿತ್ತು. ತಿಳುವಳಿಕೆ ಪತ್ರ ಸ್ವೀಕರಿಸದೆ ತಿರಸ್ಕೃತ ಮಾಡಿದ ಕಾರಣ ಶಿವಗಂಗಾ ಚಿತ್ರಮಂದಿರಕ್ಕೆ ಮತ್ತು ಕಲ್ಯಾಣ ಮಂಟಪ, ಹೋಟೆಲ್ ಜಪ್ತಿ ಮಾಡಿ ಮಾಲೀಕನಿಗೆ ಪಟ್ಟಣ ಪಂಚಾಯಿತಿ…

Read More

ಭಾರತ — ಪಾಕಿಸ್ತಾನ ಸಂಘರ್ಷದ ಬಳಿಕ ಪಾಕಿಸ್ತಾನದ ಮೇಲಿನ ದ್ವೇಷ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಪಾಕ್ ಎಂಬ ಹೆಸರಿದೆ ಎನ್ನುವ ಕಾರಣಕ್ಕೆ “ಮೈಸೂರು ಪಾಕ್” ಹೆಸರನ್ನು ಬದಲಿಸಲಾಗಿದೆ. ರಾಜಸ್ಥಾನದಲ್ಲಿ ಮೈಸೂರು ಪಾಕ್ ನ ಹೆಸರನ್ನು ಮೈಸೂರು ಶ್ರೀ ಎಂದು ಬದಲಿಸಲಾಗಿದೆ. ಮೈಸೂರು ಪಾಕ್ ನಲ್ಲಿ ಪಾಕ್ ಎಂಬ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ  ಸಿಹಿ ತಿನಿಸುಗಳ ಅಂಗಡಿ ಮಾಲೀಕರು ‘ಪಾಕ್’ ಪದವನ್ನು ತೆಗೆದು ಅಲ್ಲಿಗೆ ‘ಶ್ರೀ’ ಎಂದು ಹೆಸರಿಟ್ಟಿದ್ದಾರೆ. ಮೈಸೂರು ಪಾಕ್ ನ ಹೆಸರು ಮಾತ್ರವಲ್ಲದೇ ಮೋತಿ ಪಾಕ್, ಗೊಂಡ್ ಪಾಕ್ ಹೆಸರನ್ನೂ ಬದಲಿಸಲಾಗಿದ್ದು, ಪಾಕ್ ಎಂಬ ಶಬ್ದದ ಬದಲಿ ಶ್ರೀ ಎಂದು ಬದಲಿಸಲಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಭಾರತದಲ್ಲಿರುವ ಸಿಹಿ ತಿನಿಸುಗಳ ಹೆಸರಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಪಾಕ್ ಎಂದರೆ ಪಾಕಿಸ್ತಾನವಲ್ಲ, ಪಾಕ ಎಂದರ್ಥ ಆದ್ರೆ, ವ್ಯಾಪಾರಿಗಳು ಪಾಕ್ ಎಂಬ ಹೆಸರು ಬಳಸಲು ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ವಿಜಯಪುರ: ಪಾಪ ಕುಮಾರಸ್ವಾಮಿಗೆ ಮೆಂಟ್ಲು, ಹೆಚ್ಚು ಕಡಿಮೆ ಆಗಿರಬೇಕು. ಕುಮಾರಸ್ವಾಮಿಗೆ ತಲೆ ಸರಿ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರನ್ಯಾ ಚಿನ್ನದ ವಿಚಾರ ಹೇಳಿದ್ದು ಕಾಂಗ್ರೆಸ್‌ ನ ಮಹಾ ನಾಯಕ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿಗೆ ಮೆಂಟ್ಲು. ಪಾಪ ಮೆಂಟ್ಲು ಹೆಚ್ಚು ಕಡಿಮೆ ಆಗಿರಬೇಕು. ಅವರಿಗೆ ತಲೆ ಸರಿ ಇಲ್ಲ. ಸುಳ್ಳಿಗೆ ಮತ್ತೊಂದು ಹೆಸರೇ ಕುಮಾರಸ್ವಾಮಿ ಎಂದು ಕಿಡಿಕಾರಿದರು. ಇದೇ ವೇಳೆ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅದು ಬೆಂಗಳೂರು ಜಿಲ್ಲೆ. ರಾಮನಗರ ಚೆಂಜ್ ಮಾಡ್ತಿಲ್ಲ, ರಾಮನಗರ ರಾಮನಗರವಾಗಿಯೇ ಇರುತ್ತೆ. ಇವ್ರ್ಯಾಕೆ ಹಾಸನದಿಂದ ಬಂದ್ರು. ಹಾಸನದಿಂದಲೇ ರಾಜಕಾರಣ ಮಾಡಬೇಕಿತ್ತಲ್ಲ? ಇವ್ರ ಹೆಸ್ರನ್ನ ಮೊದಲು ಚೆಂಜ್ ಮಾಡಿಕೊಳ್ಳಲಿ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ಮಂಗಳೂರು: ವ್ಯಕ್ತಿಯೊಬ್ಬರನ್ನು ಸಂಬಂಧಿಕನೇ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರು ನಗರದ ಹೊರವಲಯದ ವಳಚ್ಚಿಲ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ. ವಾಮಂಜೂರಿನ ಸುಲೇಮಾನ್ (50) ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಹತ್ಯೆಯನ್ನು ತಡೆಯಲು ಬಂದ ಸುಲೇಮಾನ್ ಅವರ ಇಬ್ಬರು ಮಕ್ಕಳಿಗೂ ಚಾಕುವಿನಿಂದ ಇರಿಯಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಳಚ್ಚಿಲ್ ನಿವಾಸಿ ಮುಸ್ತಾಫಾ (30) ಕೊಲೆಯಾಗಿದ್ದಾನೆ. ಈತನಿಗೆ ಎಂಟು ತಿಂಗಳ ಹಿಂದೆ ಮದುವೆಯಾಗಿದ್ದು, ಬಳಿಕ ಕೌಟುಂಬಿಕ ಕಲಹದಿಂದ ಈತನ ಪತ್ನಿ ತನ್ನ ತವರು ಮನೆಗೆ ಹೋಗಿದ್ದಳು. ಇದೇ ವಿಚಾರದಲ್ಲಿ ಮಾತುಕತೆಗಾಗಿ ಸುಲೇಮಾನ್ ತಮ್ಮಿಬ್ಬರು ಮಕ್ಕಳೊಂದಿಗೆ ಬಂದಿದ್ದ ವೇಳೆ ಏಕಾಏಕಿ ಕೋಪಗೊಂಡ ಮುಸ್ತಾಫಾ ಸುಲೇಮಾನ್ ಕುತ್ತಿಗೆಗೆ ಇರಿದಿದ್ದು,  ತಡೆಯಲು ಬಂದ ಸುಲೇಮಾನ್ ಅವರ ಮಗ  ಶಿಹಾಬ್ ನ ಎದೆಗೆ, ರಿಯಾಬ್ ನ ಬಲ ತೋಳಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ನಟ ದರ್ಶನ್  ಹಾಗೂ ಅವರ ಗೆಳತಿ ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ಅಂತರ ಕಾಯ್ದುಕೊಂಡಿದ್ದಾರೆ. ಅತ್ತ ಪತ್ನಿ ವಿಜಯಲಕ್ಷ್ಮೀ ಜೊತೆಗೆ ದರ್ಶನ್ ಅನ್ಯೋನ್ಯವಾಗಿ ಹೊಸ ಜೀವನ ಆರಂಭಿಸಿದ್ದಾರೆ. ಈ ನಡುವೆ ಮೇ 20ರಂದು ಕೋರ್ಟ್ ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಭೇಟಿಯಾಗಿದ್ದಾರೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ ಅವರು ನಂಬರ್ ಕೂಡ ಎಕ್ಸ್ ಚೇಂಜ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಹೊಸ ತಿರುವೊಂದು ಲಭ್ಯವಾಗಿದೆ. ಹೌದು..! ನಟ ದರ್ಶನ್ ಭೇಟಿಯ ಬಳಿಕ ಪವಿತ್ರಾ ಗೌಡ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸಾಕಷ್ಟು ಸದ್ದು ಮಾಡುತ್ತಿದ್ದು, ಪವಿತ್ರಾ ಗೌಡ ಅವರು ಯಾರಿಗಾಗಿ ಈ ಪೋಸ್ಟ್ ಹಾಕಿದ್ದಾರೆ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ. ಸಮಯ, ತಾಳ್ಮೆ, ಮೌನದ ಮಹತ್ವ ತಿಳಿಸುವ ಬಗ್ಗೆ ಪವಿತ್ರಾ ಗೌಡ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಕಾಲ ಹಾಗೂ ತಾಳ್ಮೆಯೇ ಕೀಲಿ ಕೈ. ಮೌನ ಎಲ್ಲಾ ಪ್ರಶ್ನೆಗಳಿಗೂ ಒಳ್ಳೆಯ…

Read More

ಬೆಂಗಳೂರು: ನಟ ದರ್ಶನ್ ತಮ್ಮ ಮೈಸೂರು ಫಾರಂ ಹೌಸ್​ ನಲ್ಲಿ ವಿದೇಶಿ ಬಾತುಕೋಳಿ ಸಾಕಿದ್ದಕ್ಕೆ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ನರಸೀಪುರ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ನಿಷೇಧಿತ ‘ಬಾರ್‌ ಹೆಡೆಡ್‌ ಗೂಸ್‌’ ಎಂಬ ಬಾತುಕೋಳಿಗಳನ್ನು ಸಾಕಿದ್ದ ದರ್ಶನ್ ಅವರ ಮೈಸೂರಿನ ಕೆಂಪಯ್ಯನ ಹುಂಡಿಯಲ್ಲಿರುವ ತೋಟದ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ವಿದೇಶಿ ಪ್ರಭೇದದ ಬಾತು ಕೋಳಿ ವಶಕ್ಕೆ ಪಡೆದಿದ್ದರು. ಪ್ರಕರಣದ ವಿಚಾರಣೆಯು ಮೈಸೂರು ಜಿಲ್ಲೆ ಟಿ.‌ನರಸೀಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇದೀಗ ನ್ಯಾಯಾಲಯವು ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಸಮನ್ಸ್ ಜಾರಿ ಮಾಡಿ ಜುಲೈ 4 ರಂದು ನ್ಯಾಯಾಲಯಕ್ಕೆ ಜರಾಗುವಂತೆ ಸೂಚಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ಹಾಸನ: ತಾಳಿ ಕಟ್ಟುವ ವೇಳೆ ವಧು ಇಷ್ಟವಿಲ್ಲದ ಮದುವೆಯನ್ನು ನಿರಾಕರಿಸಿದ ಘಟನೆ ಹಾಸನ ನಗರದಲ್ಲಿ ನಡೆದಿದೆ. ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಜೊತೆ ಮದುವೆ ನಿಶ್ಚಯವಾಗಿತ್ತು. ಮುಹೂರ್ತದ ವೇಳೆ ವಧುವಿಗೆ ಕರೆ ಬಂದಿದೆ. ಕರೆ ಬಂದ ಬೆನ್ನಲ್ಲೇ ವಧು ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡ ಎಂದು ಹಠ ಹಿಡಿದಿದ್ದಾಳೆ.  ತಕ್ಷಣವೇ ಮದುವೆ ಬೇಡ ಎಂದು ಪಲ್ಲವಿ ಕೊಠಡಿಗೆ ಹೋಗ ಬಾಗಿಲು ಹಾಕಿಕೊಂಡಿದ್ದಾಳೆ. ಪಲ್ಲವಿಯ ಮನವೊಲಿಸಲು ಪೋಷಕರು ಶತಾಯಗತಾಯ ಪ್ರಯತ್ನಪಟ್ಟಿದ್ದಾರೆ. ವಿಚಾರ ತಿಳಿದು ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸಿದ್ದಾರೆ. ಆದರೆ ಯುವತಿಗೆ ಈ ಮದುವೆ ಇಷ್ಟವಿಲ್ಲದ ಕಾರಣ ಆಕೆ ಮದುವೆಯನ್ನು ನಿರಾಕರಿಸಿದ್ದು, ಜೊತೆಗೆ ಇಷ್ಟವಿಲ್ಲದ ಮದುವೆ ಬೇಡ ಎಂದು ತೀರ್ಮಾನಿಸಿದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವ ವರ ವೇಣುಗೋಪಾಲ ನನಗೂ ಈ ಮದುವೆ ಬೇಡ ಎಂದು ಹಿಂದೆ ಸರಿದಿದ್ದು, ಹೀಗಾಗಿ ಮದುವೆ…

Read More

ಮದುವೆ ಆಗ್ತೀನಿ ಅಂತ ಮಾತು ಕೊಟ್ಟಿದ್ದಕ್ಕೆ ನಾನು ಪದೇ ಪದೇ ಮೋಸ ಹೋದೆ. ಮನು ಮೊದಲು ಮಾಡಿದ್ದು ಅತ್ಯಾಚಾರ, ಮನೆಯವರನ್ನು ಒಪ್ಪಿಸಿ ಆಮೇಲೆ ಮದುವೆ ಆಗ್ತೀನಿ ಅಂತ ನಂಬಿಸುಸುತ್ತಲೇ ಬಂದಿದ್ದ ಎಂದು ಕುಳದಲ್ಲಿ ಕೀಳ್ಯಾವುದೋ ಚಿತ್ರದ ನಾಯಕ ಮಡೆನೂರು ಮನು ವಿರುದ್ಧ  ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. ಮಾರ್ಚ್ 31 ರವರೆಗೂ ಅವನು ಕೊಟ್ಟಿರುವ ದೈಹಿಕ ಟಾರ್ಚರ್ ಅನ್ನು ಸಹಿಸಿಕೊಂಡೇ ಬಂದಿದ್ದೇನೆ. ನನಗೆ ಬೇರೆ ಅವರೊಂದಿಗೆ ಜೀವನವಿತ್ತು, ಅದು ಅವನಿಗೆ ಗೊತ್ತಿತ್ತು. ಅದನ್ನು ಈಗ ಹಾಳು ಮಾಡಿದ್ದಾನೆ. 2022ರಲ್ಲಿ ಆಗಿರುವ ಘಟನೆಯನ್ನು ಇಟ್ಟುಕೊಂಡು ಈಗ ದೂರು ನೀಡಿದ್ದು ಯಾಕೆ ಎಂದು ಜನ ಕೇಳುತ್ತಿದ್ದಾರೆ. ಅವನು ನನ್ನ ಖಾಸಗಿ ವಿಡಿಯೋ ಮಾಡಿಕೊಂಡಿದ್ದಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದರು. ಮೊದಲ ಬಾರಿಗೆ ಅತ್ಯಾಚಾರ ಆಗಿದ್ದಾಗ ಫುಲ್ ಶಾಕ್‌ನಲ್ಲಿದ್ದೆ, ಏನು ಮಾಡಬೇಕು ಎಂದು ನನಗೆ ತೋಚಲಿಲ್ಲ. ಆ ಸಮಯದಲ್ಲಿ 4 ಗೋಡೆ ಮಧ್ಯೆ ತಾಳಿ ಕಟ್ಟಿದ್ದ, 2 ವರ್ಷಗಳ ನಂತರ ಎಲ್ಲರ ಮುಂದೆ ಮದುವೆಯಾಗ್ತೀನಿ…

Read More

ನವದೆಹಲಿ: ಕ್ಯಾಮೆರಾಗಳ ಮುಂದೆ ಮಾತ್ರ ಏಕೆ ನಿಮ್ಮ ರಕ್ತ ಕುದಿಯುತ್ತಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಮಿಲಿಟರಿ ಯುದ್ಧವನ್ನು ನಿಲ್ಲಿಸಲು ಒಪ್ಪುವ ಮೂಲಕ ಪ್ರಧಾನಿ ಮೋದಿ ಭಾರತದ ಪ್ರತಿಷ್ಠೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರಾಜಸ್ಥಾನದ ಬಿಕಾನೇರ್‌ ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮೋದಿ ಭಾರತ ಮಾತೆಯ ಸೇವಕ ಅನ್ನೋದನ್ನ ಪಾಕಿಸ್ತಾನ ಮರೆತಿತ್ತು ಅನ್ನಿಸುತ್ತೆ. ನಾನು ಶಾಂತವಾಗಿದ್ದರೂ ನನ್ನ ರಕ್ತ ನಾಳಗಳಲ್ಲಿ ʻಸಿಂಧೂರʼ ಹರಿಯುತ್ತಲೇ ಇರುತ್ತದೆ ಎಂದು ಹೇಳಿದ್ದರು. ಪ್ರಧಾನಿ ಮೋದಿ ಭಾಷಣದ ತುಣುಕೊಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಮೂರು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ. “ಮೋದಿ ಜೀ, ಪೊಳ್ಳು ಭಾಷಣ ಮಾಡುವುದನ್ನು ನಿಲ್ಲಿಸಿ. ಹೇಳಿ: ಭಯೋತ್ಪಾದನೆಯ ಕುರಿತು ಪಾಕಿಸ್ತಾನದ ಹೇಳಿಕೆಯನ್ನು ನೀವು ಏಕೆ ನಂಬಿದ್ದೀರಿ? ಟ್ರಂಪ್‌ ಗೆ ತಲೆಬಾಗುವ ಮೂಲಕ ನೀವು ಭಾರತದ ಹಿತಾಸಕ್ತಿಗಳನ್ನು ಏಕೆ ತ್ಯಾಗ ಮಾಡಿದ್ದೀರಿ? ಕ್ಯಾಮೆರಾಗಳ…

Read More

ತುಮಕೂರು:  ಕಂಟ್ರೋಲ್ ತಪ್ಪಿದ ಬಿಎಂಟಿಸಿ‌ ಬಸ್ ನಿಂತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ  29 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗ ನಡೆದಿದೆ. ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ BMTC ಬಸ್‌ ರಸ್ತೆ ಬದಿಯಲ್ಲಿ ನಿಂತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನಾಗೇಶ್, ಧನಂಜಯ, ಮನ್ವಿತ್‌ ಹಾಗೂ ಪಾರ್ವತಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ತುಮಕೂರು‌ ಜಿಲ್ಲಾಸ್ಪತ್ರೆಗೆ‌ ರವಾನೆ ಮಾಡಲಾಗಿದೆ. ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More