ನಟ ದರ್ಶನ್ ಹಾಗೂ ಅವರ ಗೆಳತಿ ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ಅಂತರ ಕಾಯ್ದುಕೊಂಡಿದ್ದಾರೆ. ಅತ್ತ ಪತ್ನಿ ವಿಜಯಲಕ್ಷ್ಮೀ ಜೊತೆಗೆ ದರ್ಶನ್ ಅನ್ಯೋನ್ಯವಾಗಿ ಹೊಸ ಜೀವನ ಆರಂಭಿಸಿದ್ದಾರೆ. ಈ ನಡುವೆ ಮೇ 20ರಂದು ಕೋರ್ಟ್ ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಭೇಟಿಯಾಗಿದ್ದಾರೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ ಅವರು ನಂಬರ್ ಕೂಡ ಎಕ್ಸ್ ಚೇಂಜ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಹೊಸ ತಿರುವೊಂದು ಲಭ್ಯವಾಗಿದೆ.
ಹೌದು..! ನಟ ದರ್ಶನ್ ಭೇಟಿಯ ಬಳಿಕ ಪವಿತ್ರಾ ಗೌಡ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸಾಕಷ್ಟು ಸದ್ದು ಮಾಡುತ್ತಿದ್ದು, ಪವಿತ್ರಾ ಗೌಡ ಅವರು ಯಾರಿಗಾಗಿ ಈ ಪೋಸ್ಟ್ ಹಾಕಿದ್ದಾರೆ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ.
ಸಮಯ, ತಾಳ್ಮೆ, ಮೌನದ ಮಹತ್ವ ತಿಳಿಸುವ ಬಗ್ಗೆ ಪವಿತ್ರಾ ಗೌಡ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಇನ್ ಸ್ಟಾ ಸ್ಟೋರಿಯಲ್ಲಿ ಕಾಲ ಹಾಗೂ ತಾಳ್ಮೆಯೇ ಕೀಲಿ ಕೈ. ಮೌನ ಎಲ್ಲಾ ಪ್ರಶ್ನೆಗಳಿಗೂ ಒಳ್ಳೆಯ ಉತ್ತರ. ನಗು ಎಲ್ಲ ಸಂದರ್ಭಗಳಲ್ಲಿಯೂ ಉತ್ತಮ ಪ್ರತಿಕ್ರಿತೆ ಎಂದು ಬರೆದುಕೊಂಡಿದ್ದಾರೆ.
ಹಣೆಗೆ ಬಿಂದಿ ಇಟ್ಟು ಬಿಳಿ ಸೀರೆ ಉಟ್ಟು ಪೋಸ್ ಕೊಟ್ಟಿರುವ ಪವಿತ್ರಾ ಗೌಡ ಪೋಸ್ಟ್ ಶೇರ್ ಮಾಡಿದ್ದಾರೆ. ಇದರ ಜೊತೆಗೆ ಶ್ರೀಕೃಷ್ಣನ ಫೋಟೋ ಶೇರ್ ಮಾಡಿ, ಎಲ್ಲವನ್ನು ಕಳೆದುಕೊಂಡ ಹಾಗೆ ಸ್ವಲ್ಪ ದಿನ ನಟಿಸಿ ನೋಡು ನಿನ್ನವರು ಯಾರು ಎಂದು ತಿಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW