Author: admin

ತಿಪಟೂರು: ನಗರದ ಪ್ರತಿಷ್ಠಿತ ಜನವಸತಿ ಪ್ರದೇಶಗಳಾದ ಮಾರನಗೆರೆ ಶಾರದಾ ನಗರ .ಶ್ರೀ ಸಿದ್ದಾರಾಮೇಶ್ವರ ಬಡಾವಣೆ.ನಾರಾಯಣಗೌಡ ಲೇಹೌಟ್.ಶಿವನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆಗಳ ಓಡಾಟ ಕಂಡುಬಂದಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ ಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ವಾಯುವಿಹಾರಿಗಳು ಸಂಚರಿಸುವ ಮಾರ್ಗವಾಗಿದ್ದು, ಜನವಸತಿ ಪ್ರದೇಶದ ಪಕ್ಕದ ತೋಟಗಳಲ್ಲಿ ಎರಡು ಚಿರತೆ ಸಂಚಾರ ಕಾಣಿಸಿಕೊಂಡ ಕಾರಣ ಆತಂಕಕ್ಕೆ ಕಾರಣವಾಗಿದ್ದು, ರಾತ್ರಿ ಚಿರತೆ ಸಂಚರಿಸುವಾಗ ವಾಹನ ಸವಾರೊಬ್ಬರು ತಮ್ಮ ಮೊಬೈಲ್ ಮೂಲಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದು, ವಿಡಿಯೋ ನೋಡಿದ ಇಲ್ಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಅರಣ್ಯ ಇಲಾಖೆ ಶೀಘ್ರವೇವಾಗಿ ಚಿರತೆ ಸೆರೆಹಿಡಿಯ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಭೇಟಿ ಪರಿಶೀಲನೆ ನಡೆದಿದ್ದಾರೆ. ವರದಿ: ಆನಂದ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಬೆಂಗಳೂರು: ಆಂಧ್ರಪ್ರದೇಶದ ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೆಂಗಳೂರಿನ ಶಿವಾಜಿನಗರ ಠಾಣೆಯ ಮೂವರು ಪೊಲೀಸ್​ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ಚಿತ್ತೂರು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದು, ಇತರ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ ಅಪಘಾತಕ್ಕೊಳಗಾದವರು ಬೆಂಗಳೂರಿನ ಶಿವಾಜಿ ನಗರದ ಪೊಲೀಸ್ ಠಾಣೆಯ ಸಿಬ್ಬಂದಿಯಾಗಿದ್ದು, ತನಿಖೆಯ ಸಂಬಂಧ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ತಿಪಟೂರು:  ತಾಲ್ಲೂಕಿನ ಅಯ್ಯನಬಾವಿ ಆಟದ ಮೈದಾನದಲ್ಲಿ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್  ರಾಘವೇಂದ್ರ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಅಯ್ಯನಬಾವಿ ರಾಯಲ್ ಕ್ರಿಕೆಟರ್ಸ್  ವತಿಯಿಂದ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್  ಪಂದ್ಯಾಟ ನಡೆಯಿತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್  ಉದ್ಘಾಟಿಸಿ,ಗ್ರಾಮೀಣ ಭಾಗಗಳಲ್ಲಿ ಇಂತಹ ಕ್ರೀಡಾ ಚಟುವಟಿಕೆಗಳು ನಡೆಯುತ್ತಿರುವುದು ತುಂಬ ಸಂತೋಷದ ಸುದ್ದಿ. ಇಂತಹ ಗ್ರಾಮೀಣ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಿ ಎಂದು ಶುಭ ಹಾರೈಸಿದರು. ಬಳಿಕ  ಬ್ಯಾಟು ಬೀಸುವುದರ  ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಗ್ರಾಮದ ಹಿರಿಯ ಮುಖಂಡ ಕೃಷ್ಣಪ್ಪ, ಸಮಾಜ ಸೇವಕ ಬೋಜೇಗೌಡ ಮತ್ತು ಪ್ರಥಮ ದರ್ಜೆ ಅರಣ್ಯ ಗುತ್ತಿಗೆದಾರ ಬಿ.ಆರ್.ಶಶಿಧರ್   ಮಾತನಾಡಿದರು. ಮತ್ತೀಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ತೇಜಾವತಿ ಶ್ರೀನಿವಾಸ್, ಸದಸ್ಯ ತಿಮ್ಮರಾಜು, ಮಾಜಿ ಸದಸ್ಯರಾದ ಮೂರ್ತಿ, ನಾಗರಾಜ್, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ                  ಬಿ.ಟಿ.ಕುಮಾರ್,  ಮುಖಂಡರಾದ ಗಂಗಾಧರಯ್ಯ ಮತ್ತು ಸತೀಶ್ ಸೇರಿದಂತೆ ಸಂಘಟನೆ ರಾಯಲ್ ಕ್ರಿಕೆಟರ್ಸ್ ನ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ವರದಿ: ಆನಂದ್…

Read More

ತಿಪಟೂರು:  ನಗರದ ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ಯಾರ್ಡ್ ನಲ್ಲಿರುವ ಟಿಎಪಿಸಿ ಎಂ ಎಸ್ ಲಿಮಿಟೆಡ್  ನ ಕಚೇರಿಯ ಬಾಗಿಲು ಮುರಿದು, ಸುಮಾರು   53 ಸಾವಿರ ನಗದು ದೋಚಿ ಘಟನೆ ನಡೆದಿದೆ. ಕಳ್ಳರು ಕೃತ್ಯದ ವೇಳೆ  ದಾಖಲಾತಿಗಳನ್ನು ಚೆಲ್ಲಾಪಿಲ್ಲಿ  ಮಾಡಿದ್ದು,  ಘಟನೆ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ  ಅಧ್ಯಕ್ಷ ಶಂಕರ ಮೂರ್ತಿ (ಮಡೇನೂರು) ,  ರಾತ್ರಿ ನಗರದ ನಮ್ಮ ಕಛೇರಿಯಲ್ಲಿ  ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಗರ ಮತ್ತು ತಾಲೂಕಿನಾದ್ಯಂತ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ತಾಲ್ಲೂಕು ಆಡಳಿತ  ಕಣ್ಮುಚ್ಚಿ ಕುಳಿತಿದೆ ಎಂದು ಘಟನೆ ಬೆನ್ನಲ್ಲೇ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ವರದಿ: ಆನಂದ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ತುಮಕೂರು: ಡಿ ಕೊರಟಗೆರೆಯ ಜಾತ್ರೆಯಲ್ಲಿ ಹಾಲಿ ಶಾಸಕರ ಬ್ಯಾನರ್ ಕಟ್ಟಿದ್ದಕ್ಕೆ ಮಾಜಿ ಶಾಸಕರ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿರುವ ಘಟನೆ ನಡೆದಿದೆ. ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಜೆಡಿಎಸ್ ಮುಖಂಡ ಪಾಲನೇತ್ರಯ್ಯ  ಗಂಭೀರ ಆರೋಪ ಮಾಡಿದ್ದು, ಶಾಸಕ ಡಿ.ಸಿ.ಗೌರಿಶಂಕರ್ ಫ್ಲಕ್ಸ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಡಿ.ಕೊರಟಗೆರೆ ಜಾತ್ರಾ ಮಹೋತ್ಸವಕ್ಕೆ ಹಾಲಿ ಶಾಸಕ ಗೌರಿಶಂಕರ್ ಫ್ಲಕ್ ಕಟ್ಟಲು ಪಕ್ಷದ ಬೆಂಬಲಿಗರು ಮುಂದಾಗಿದ್ದರು. ಈ ವೇಳೆ 20 ಜನರ ಗುಂಪು ಹಲ್ಲೆ ನಡೆಸಿದ್ದು, ಪರಿಣಾಮವಾಗಿ ಜೆಡಿಎಸ್ ಕಾರ್ಯಕರ್ತ ಸಿರಾಜ್ ಹಾಗೂ ಮತ್ತೊರ್ವನಿಗೆ ಗಂಭೀರ ಗಾಯವಾಗಿದೆ. ಉಮೇಶ್ ಚಂದ್ರು ಮತ್ತು ಬೆಂಬಲಿಗರ ಮೇಲೆ ಈ ಆರೋಪ ಕೇಳಿ ಬಂದಿದ್ದು, ಸದ್ಯ ಹಲ್ಲೆಗೊಳಗಾದವರು ತುಮಕೂರಿನ ವಿನಾಯಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿ : ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…

Read More

ಹಿರಿಯೂರು: ತಾಲ್ಲೂಕಿನ ಹಿರಿಯೂರು ನಗರಗಳಲ್ಲಿ ಶುಚಿತ್ವ ಕಾಪಾಡದ ಹೋಟೆಲ್ ಗಳಿಗೆ ನಗರಸಭೆಯ ನೂತನ ಅಧ್ಯಕ್ಷರಾದ ಎಸ್. ಶಿವರಂಜಿನಿ ಯಾದವ್ ದಿಢೀರ್ ದಾಳಿ ನಡೆಸಿ ಹೊಟೇಲ್ ಗಳಲ್ಲಿ ಶುಚಿತ್ವ ಕಾಪಾಡಲು ತಾಕೀತು ಮಾಡಿದರು. ಶುಕ್ರವಾರದಂದು ಹಿರಿಯೂರು ನಗರದ ವಿವಿಧ ಹೋಟೆಲ್ ಗಳಿಗೆ ನಗರಸಭೆಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ದಿಢೀರ್ ದಾಳಿ ನಡೆಸಿ ಸ್ವಚ್ಛತೆಯನ್ನು ಕಾಪಾಡುವಂತೆ ಅವರು ಎಚ್ಚರಿಕೆ ನೀಡಿದರು. ಹಿರಿಯೂರು ನಗರದ ಸ್ವಚ್ಛತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಇದೇ ಪುನರಾವರ್ತನೆಯಾದರೆ, ಸಾರ್ವಜನಿಕರಿಂದ ದೂರು ಬಂದರೆ ಎಷ್ಟೇ ಪ್ರಭಾವಿಗಳಿಂದ ಒತ್ತಡ ತಂದರೂ ನಾನು ಕೇಳುವುದಿಲ್ಲ. ಕಠಿಣಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮಾಂತರ ಪ್ರದೇಶಗಳಿಂದ ಬಂದ ಜನರಿಗೆ ಶುಚಿ-ರುಚಿಯಾದ ಊಟ-ತಿಂಡಿ ಸಿಗುವಂತಾಗಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ, ವಿವೇಚನೆಯಿಂದ ಹೋಟೆಲ್ ಗಳನ್ನು ನಡೆಸಬೇಕು ಎಂದುಹೋಟೆಲ್ ಮಾಲಿಕರಿಗೆ ಶಿವರಂಜನಿ ಯಾದವ್ ಸೂಚಿಸಿದರು. ಈ ಸಂದರ್ಭದಲ್ಲಿ ಹಿರಿಯೂರು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರುಗಳಾದ ಸಂಧ್ಯಾ ಮತ್ತು ಮೀನಾಕ್ಷಿ ಮಾತನಾಡಿ, ಸ್ವಚ್ಛ, ಸುಂದರ, ನೈರ್ಮಲ್ಯ ನಗರವನ್ನಾಗಿಸಲು ಎಲ್ಲಾ ಹೋಟೆಲ್, ಉದ್ದಿಮೆ, ಬೀದಿಬದಿ,…

Read More

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಪ್ರಸನ್ನ ಕುಮಾರ್ ರವರು ಇಂದು ನಿಧನರಾಗಿದ್ದಾರೆ. ವಿಶ್ವ ಪ್ರಸಿದ್ಧಿ ದಿವ್ಯಸ್ಥಳವಾದ ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಪ್ರಸನ್ನಕುಮಾರ್ ರವರು ಇಂದು ವಿಧಿವಶರಾಗಿದ್ದಾರೆ. ಗೊರವರನಹಳ್ಳಿ ಕ್ಷೇತ್ರದ ನಿರ್ಮಾತೃ ಶ್ರೀಮತಿ ಕಮಲಮ್ಮನವರ ಏಕೈಕ ಪುತ್ರರಾದ ಇವರು ತಾಯಿಯ ಮರಣದ ನಂತರ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ  ಸಲ್ಲಿಸುತ್ತಿದ್ದರು. ಕಳೆದೊಂದು ವಾರದಿಂದ ಬೆಂಗಳೂರಿನ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಇವರು ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೊರಟಗೆರೆ: ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಬೋರಣ್ಣ ಸ್ವಪಕ್ಷದಲ್ಲೇ ಇದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬೋರಣ್ಣ ಮತ್ತು ರಂಗನರಸಯ್ಯ ತಾಲ್ಲೂಕು ಒಕ್ಕಲಿಗ ಸಂಘದ ವಿಷಯವಾಗಿ ಕ್ಷೇತ್ರದ ಶಾಸಕರಾದ ಡಾ.ಜಿ. ಪರಮೇಶ್ವರ್ ರವರ ಬಳಿ ಹೋದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕೆಲ ಮುಖಂಡರು ಅವರಿಗೆ ಹಾರ ಹಾಕಿ ಪೋಟೋ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಅರಿತ ಬೋರಣ್ಣ ನೊಂದು ಈ ಪತ್ರಿಕಾ ಹೇಳಿಕೆ ನೀಡಿದ್ದಾರೆ ಇದು ಕಾಂಗ್ರೆಸ್ ಪಕ್ಷದವರಿಗೆ ಶೋಭೆ ತರುವುದಿಲ್ಲ, ಶಾಸಕರು ಕೂಡ ಇಂತಹ ಘಟನೆ ಬಗ್ಗೆ ಅವರ ಕಾರ್ಯಕರ್ತರಿಗೆ ಬುದ್ದಿ ಹೇಳಬೇಕು. 150 ವರ್ಷದ ಹಳೆಯ ಪಕ್ಷಕ್ಕೆ ಈ ರೀತಿಯ ಸ್ಥಿತಿ ಇದೆಯೇ..? ಬೋರಣ್ಣ ನಮ್ಮ ಹಿರಿಯ ಮುಖಂಡರಾಗಿದ್ದು ಪಕ್ಷದ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ ಎಂದು ಶಿವರಾಮಯ್ಯ ಹೇಳಿದರು. ತಾಲ್ಲೂಕು ಜೆಡಿಎಸ್ ಪಕ್ಷ ಕಾರ್ಯಾದ್ಯಕ್ಷ ನರಸಿಂಹರಾಜು…

Read More

ತುಮಕೂರು: ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶ್ರೀರಾಮನಗರ ವಾರ್ಡ್ ನಂಬರ್ ಐದು ಇವರ ಸಹಯೋಗದೊಂದಿಗೆ ನಗರದ ಶಿರಾಗೇಟ್ ನ ಡಿ.ಎಂ.ಪಾಳ್ಯ ಡಾನ್ ಬೋಸ್ಕೋ ಶಾಲಾವರಣದಲ್ಲಿ 2022 23 ನೇ ಸಾಲಿನ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಕೂಟಕ್ಕೆ ವಿವಿಧ ಗಣ್ಯರು ಚಾಲನೆ ನೀಡಿದರು. ಸಂಪ್ರದಾಯದಂತೆ ಮಕ್ಕಳಿಗೆ ಕ್ರೀಡಾಸಕ್ತಿ ಮೂಡಿಸುವ ಸಲುವಾಗಿ ವಿವಿಧ ಶಾಲೆಗಳಿಂದ ಆಗಮಿಸಿದ ಕ್ರೀಡಾಪಟುಗಳಿಂದ ಪತಸಂಚಲನ ನಡೆಸಲಾಯಿತು . 100 ಮೀಟರ್ ಓಟ, 200 ಮೀಟರ್ ಓಟ, ಕಬಡ್ಡಿ, ಫುಟ್ಬಾಲ್. ಗುಂಡು ಎಸೆತ ಸೇರಿದಂತೆ ವಿವಿಧ ಕ್ರೀಡೆಗಳು ನಡೆದವು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀರಾಮನಗರ ಪ್ರಾಥಮಿಕ ಪಾಠಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷ ಬಶೀರ್ ಅಹ್ಮದ್, ಕಳೆದ ಮೂರು ವರ್ಷಗಳಿಂದ ಶಾಲೆಗಳಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ರೀತಿಯ ಕ್ರೀಡಾ ಚಟುವಟಿಕೆಗಳು ನಡೆದಿರಲಿಲ್ಲ. ಇದೀಗ ಶಿಕ್ಷಣ ಇಲಾಖೆ ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ನೀಡಿದ್ದು ಹಿನ್ನೆಲೆಯಲ್ಲಿ ಹೋಬಳಿ ಮಟ್ಟದ ಕ್ರೀಡಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.…

Read More

ತುಮಕೂರು: ಕುಟುಂಬವೊಂದು ತಮ್ಮ ಮುದ್ದಿನ ಗಿಣಿಯನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಕರಪತ್ರ ಅಂಟಿಸುವ ಮೂಲಕ ಭಾರೀ ಸುದ್ದಿಯಾಗಿತ್ತು. ಇದೀಗ ಕೊನೆಗೂ ಗಿಣಿ ಮಾಲಿಕರ ಮಡಿಲು ಸೇರಿದ್ದು, ಹುಡುಕಿಕೊಟ್ಟವರ ಕೈಗೆ ಭರ್ಜರಿ ಬಹುಮಾನ ಸಿಕ್ಕಿದೆ. ರುಸ್ತುಮ್ ಎಂಬ ಹೆಸರಿನ ಗಿಣಿ ನಾಪತ್ತೆಯಾದ ಗಿಣಿಯಾಗಿದ್ದು, ಈ ಗಿಣಿಯು ತುಮಕೂರಿನ ಬಡ್ಡಿಹಳ್ಳಿಯ ತೋಟವೊಂದರ ಮರದ ಮೇಲೆ ಪತ್ತೆಯಾಗಿತ್ತು. ಗಿಣಿಯನ್ನು ನೋಡಿದ ಬಡ್ಡಿಹಳ್ಳಿಯ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ್ ಎಂಬವರು ತಮ್ಮ ಮನೆಗೆ ಕೊಂಡು ಹೋಗಿ ಸಾಕುತ್ತಿದ್ದರು. ಇತ್ತ ಗಿಣಿ ನಾಪತ್ತೆಯಾದ ಬಗ್ಗೆ ಪೋಸ್ಟರ್ ಕಂಡು ಗಿಣಿಯ ಮಾಲಿಕ ಅರ್ಜುನ್ ಅವರಿಗೆ ಕರೆ ಮಾಡಿದ್ದು, ಅವರು ತಕ್ಷಣ ಬಂದು ಈ ಗಿಣಿ ನಮ್ಮದು ಎಂದು ಖಾತರಿ ಪಡಿಸಿಕೊಂಡಿದ್ದಾರೆ.ಇನ್ನೂ ಗಿಣಿಯನ್ನು ಹುಡುಕಿಕೊಟ್ಟವರಿಗೆ ತಮ್ಮ ಮಾತಿನಂತಯೇ ಅರ್ಜುನ್ 85 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…

Read More