ಕೊರಟಗೆರೆ: ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಬೋರಣ್ಣ ಸ್ವಪಕ್ಷದಲ್ಲೇ ಇದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬೋರಣ್ಣ ಮತ್ತು ರಂಗನರಸಯ್ಯ ತಾಲ್ಲೂಕು ಒಕ್ಕಲಿಗ ಸಂಘದ ವಿಷಯವಾಗಿ ಕ್ಷೇತ್ರದ ಶಾಸಕರಾದ ಡಾ.ಜಿ. ಪರಮೇಶ್ವರ್ ರವರ ಬಳಿ ಹೋದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕೆಲ ಮುಖಂಡರು ಅವರಿಗೆ ಹಾರ ಹಾಕಿ ಪೋಟೋ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇದನ್ನು ಅರಿತ ಬೋರಣ್ಣ ನೊಂದು ಈ ಪತ್ರಿಕಾ ಹೇಳಿಕೆ ನೀಡಿದ್ದಾರೆ ಇದು ಕಾಂಗ್ರೆಸ್ ಪಕ್ಷದವರಿಗೆ ಶೋಭೆ ತರುವುದಿಲ್ಲ, ಶಾಸಕರು ಕೂಡ ಇಂತಹ ಘಟನೆ ಬಗ್ಗೆ ಅವರ ಕಾರ್ಯಕರ್ತರಿಗೆ ಬುದ್ದಿ ಹೇಳಬೇಕು. 150 ವರ್ಷದ ಹಳೆಯ ಪಕ್ಷಕ್ಕೆ ಈ ರೀತಿಯ ಸ್ಥಿತಿ ಇದೆಯೇ..? ಬೋರಣ್ಣ ನಮ್ಮ ಹಿರಿಯ ಮುಖಂಡರಾಗಿದ್ದು ಪಕ್ಷದ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ ಎಂದು ಶಿವರಾಮಯ್ಯ ಹೇಳಿದರು.
ತಾಲ್ಲೂಕು ಜೆಡಿಎಸ್ ಪಕ್ಷ ಕಾರ್ಯಾದ್ಯಕ್ಷ ನರಸಿಂಹರಾಜು ಮಾತನಾಡಿ, ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಒಗಟ್ಟಾಗಿದೆ ಮಾಜಿ ತಾ.ಪಂ.ಸದಸ್ಯ ಬೋರಣ್ಣ ನವರ ಕಾಂಗ್ರೆಸ್ ಪಕ್ಷದ ಸೇರ್ಪಡೆ ವದಂತಿ ಸುಳ್ಳು ನಮ್ಮಲ್ಲಿ ಎಲ್ಲಾ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಗೌರವ ನೀಡುತ್ತೇವೆ. ಇಂತಹ ಕೆಲಸಗಳನ್ನು ಕಾಂಗ್ರೆಸ್ ಪಕ್ಷವರು ಮಾಡಬಾರದು ಎಂದರು.
ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಮುಂಬರುವ ದಿನಗಳಲ್ಲಿ ಇತರ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಸಾಕಷ್ಟು ಮುಖಂಡರು ಕಾರ್ಯಕರ್ತರು ಸೇರ್ಪಡೆಯಾಗಲಿದ್ದಾರೆ. ಆದರೆ ಅವರು ಸ್ವಇಚ್ಛೆಯಿಂದ ಪಕ್ಷಕ್ಕೆ ಬರುತ್ತಿದ್ದಾರೆ. ಬೋರಣ್ಣ ನವರ ವಿಷಯದಲ್ಲಿ ಕೊರಟಗರೆ ಕಾಂಗ್ರೆಸ್ ಪಕ್ಷದ ಮುಖಂಡರು ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದರು.
ಮಾಜಿ ತಾ.ಪಂ. ಸದಸ್ಯ ಬೋರಣ್ಣ ಮಾತನಾಡಿ, ನಾನು ನನ್ನ ಸಂಘದ ಕಟ್ಟಡದ ಅನುದಾನಕ್ಕಾಗಿ ನಮ್ಮ ಅಧ್ಯಕ್ಷರೊಂದಿಗೆ ಶಾಸಕ ಬಳಿ ಹೋದಾಗ ಅವರ ಪಕ್ಷದ ಮುಖಂಡರು ನನಗೆ ಶಾಲು ಹಾಕಿ ಹಾರ ಹಾಕಿದರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ನಂತರ ನನಗೆ ಕರೆ ಬಂದಾಗಲೇ ನನಗೂ ಕೂಡ ತಿಳಿದ್ದಿದು. ಅದರೆ ಇದು ಶಾಸಕರ ಅರಿವಿಗೂ ಬರಲ್ಲಿಲ್ಲ ಅವರ ಪಾತ್ರವೂ ಇಲ್ಲ. ಇದು ಅವರ ಮುಖಂಡರು ಮಾಡಿದ ಕೆಲಸ. ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರ ಲಕ್ಷ್ಮೀಶ್, ಮುಖಂಡರಾದ ಕಾಮರಾಜು, ದೊಡ್ಡಯ್ಯ, ಎಲ್.ವಿ.ಪ್ರಕಾಶ್, ಮುರುಡಪ್ಪ, ವೆಂಕಟೇಶ್, ಸಂತೋಷ್ಗೌಡ, ಸೇರಿದಂತೆ ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy