Subscribe to Updates
Get the latest creative news from FooBar about art, design and business.
- ಬೀದರ್ | ಪತ್ರಕರ್ತನ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹಿಸಿ ಗೃಹ ಸಚಿವರಿಗೆ ಮನವಿ
- ಕಬ್ಬು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
- ಕುಣಿಗಲ್ | ಶಾಸಕರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ: ಜೆಡಿಎಸ್ ಕಿಡಿ
- ತುಮಕೂರು | ಜಿಲ್ಲಾ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಸಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ
- ನಾಗರಹೊಳೆ–ಬಂಡೀಪುರ ಸಫಾರಿ ಬಂದ್ ಮಾಡಿ, ಕಾರ್ಯಾಚರಣೆ ನಡೆಸಿ: ಸಚಿವ ಖಂಡ್ರೆ ಸೂಚನೆ
- ಮೈಸೂರು: ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ!
- ಸರಿಯಾದ ಸಮಯಕ್ಕೆ ಬಾರದ ಪಿಡಿಓ– ಕಂಪ್ಯೂಟರ್ ಆಪರೇಟರ್: ಹಾಜರಾತಿ ಹಾಕುತ್ತಿರುವ ವಾಟರ್ ಮ್ಯಾನ್ !
- ತುಮಕೂರು ಜಿಲ್ಲಾ ಆಸ್ಪತ್ರೆ ಖಾಸಗೀಕರಣ ಕೈಬಿಡಲು ಪ್ರಗತಿಪರ ಮತ್ತು ನಾಗರಿಕ ಸಂಘಟನೆಗಳ ಒಕ್ಕೊರಲ ಆಗ್ರಹ
Author: admin
ಪಾವಗಡ: ಪ್ರವಾದಿ ಮಹಮ್ಮದ್ ಕುರಿತು ಲಘು ಹೇಳಿಕೆ ವಿವಿಧ ರಾಷ್ಟ್ರಗಳು ಭಾರತವನ್ನು ಕೆಂಗಣ್ಣಿನಿಂದ ನೋಡುವಂತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಉಗ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಬಿಜೆಪಿಯ ವಕ್ತಾರರೊಬ್ಬರು ಪ್ರವಾದಿ ಮಹಮ್ಮದ್ ಕುರಿತು ಲಘುವಾಗಿ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಇಡೀ ಪ್ರಪಂಚದ ವಿವಿಧ ರಾಷ್ಟ್ರಗಳು ಭಾರತದ ಬಗ್ಗೆ ಅನುಮಾನದ ಕೆಂಗಣ್ಣಿನಿಂದ ನೋಡುವಂತಾಗಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಬೆಲೆ ಏರಿಕೆಯಿಂದಾಗಿ ದೇಶ ತತ್ತರಿಸಿಹೋಗಿದೆ. ಹೀಗಾಗಿ ಮೋದಿ ಆಧುನಿಕ ಬಸ್ಮಾಸುರನಾಗಿದ್ದಾರೆ ಎಂದು ಅವರು ಇದೇ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಪ್ರತಿ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವಿದ್ಯಾರ್ಥಿಗಳಿಗೆ ಒಂದಲ್ಲಾ ಒಂದು ತೊಂದರೆ ಕೊಡ್ತಾನೆ ಇದೆ. ಸಿಇಟಿ ಪರೀಕ್ಷಾ ಶುಲ್ಕ ಪಾವತಿ ಮಾಡಿದ್ರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಡೌನ್ ಲೋಡ್ ಆಗುತ್ತಿಲ್ಲ. ಪರೀಕ್ಷೆ ಸಮಯಕ್ಕೆ ಸರಿಯಾಗಿ ಹಾಲ್ ಟಿಕೆಟ್ ಸಿಗುತ್ತೋ ಸಿಗಲ್ವೋ ಅಂತ ಸಾವಿರಾರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸಿಇಟಿ ಪರೀಕ್ಷೆಗೆ ಇನ್ನೂ ಕೇವಲ 9 ದಿನ ಮಾತ್ರ ಬಾಕಿ ಉಳಿದಿದೆ. ಸಿಇಟಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳಿಗೆ ಸಿಇಟಿ ಪರೀಕ್ಷೆ ಸಿಗೋದಿಲ್ಲ ಅನ್ನೂ ಆತಂಕಕ್ಕೆ ಒಳಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಈ ಕುರಿತು ಪೋಷಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದ್ರೆ, ಪ್ರಾಧಿಕಾರದಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಲ್ ಟಿಕೆಟ್ ಸಮಸ್ಯೆ ಒಂದಲ್ಲ, ಎರಡಲ್ಲ ಬರೋಬ್ಬರಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎದುರಾಗಿದೆ. ಎಲ್ಲಾ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಿದ್ದಾರೆ. ಆದ್ರೆ, ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಲು…
ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಜೂನ್ 9 ರಂದು ಕಾಂಗ್ರೆಸ್ ವಿಧಾನಸೌಧದಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಧರಣಿ ನಡೆಯಲಿದ್ದು, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಲಿದ್ದಾರೆ. ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈಗ ಪಠ್ಯದ ಪರಿಷ್ಕರಣೆ ನೆಪದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆಯುತ್ತಿದೆ. ಮೊದಲನೇ ಬಾರಿಗೆ ಸ್ವಾಮೀಜಿ,ಸಾಹಿತಿ, ಸಂಘಟನೆಗಳು ಸರ್ಕಾರದ ಧೋರಣೆಯನ್ನು ವಿರೋಧಿಸಿದ್ದಾರೆ. ಸಿದ್ದಗಂಗಾ ಶ್ರೀಗಳಿಗೆ, ಮುರುಘಾ ಮಠ ಶ್ರೀ, ಆದಿ ಚುಂಚನಗಿರಿ,ಸಾಣೆ ಮಠದ ಶ್ರೀಗಳಿಗೆ ನಮಸ್ಕಾರ ಹೇಳುತ್ತೇನೆ.ಅವರ ಧ್ವನಿ ಜೊತೆಗೆ ನಮ್ಮ ಧ್ವನಿ ಸೇರಿಸುತ್ತೇವೆ ಎಂದರು. ಚಿಕ್ಕ ವಯಸ್ಸಿನ ಮಕ್ಕಳಿಗೆ ಹೊಸ ರೂಪ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂಬುವುದನ್ನು ಪಠ್ಯದಲ್ಲಿ ತೆಗೆದು ಹಾಕಲಾಗಿದೆ. ಇದಕ್ಕಿಂತ ಅವಮಾನ ಏನು ಬೇಕು? ಇದು ಇಡೀ ಭಾರತ ಭೂಮಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿವೇಕಾನಂದ,ಪೆರಿಯಾರ್ ವಿಚಾರಗಳಿಗೆ ಕತ್ತರಿ ಹಾಕಲಾಗಿದೆ, ತಿರುಚಲಾಗಿದೆ. ಭಕ್ತಿ ಹಾಗೂ ಸೂಫಿ ಪಂಥದ…
ಕಲಬುರಗಿ: ಊಟ ಬೇಡಿದ ಮುಗ್ದ ಮಗುವಿನ ಕೈಗೆ ಮಲತಾಯಿ ಬರೆ ಹಾಕಿರುವ ಘಟನೆ ನಡೆದಿದೆ. ಈ ಕೃತ್ಯ ನಾಲವಾರ ಗ್ರಾಮದಲ್ಲಿ ನಡೆದಿದ್ದು, ನಾಲ್ಕು ವರ್ಷದ ಮಗುವಿಗೆ ಮಲತಾಯಿ ಚಿತ್ರಹಿಂಸೆ ನೀಡಿದ್ದಾಳೆ. ನಾಲ್ಕು ವರ್ಷದ ಮಗುವನ್ನು ಹಗ್ಗದಿಂದ ಮಂಚಕ್ಕೆ ಕಟ್ಟಿ ಹಾಕಿ, ಕೆಂಡದಿಂದ ಕೈಯನ್ನು ಸುಟ್ಟು ಕ್ರೂರತೆ ಮೆರೆದಿದ್ದಾಳೆ. ಇನ್ನು ಎರಡು ದಿನಗಳಿಂದ ಮಗು ಹೊರಗಡೆ ಬಾರದನ್ನು ಗಮನಿಸಿದ ಸ್ಥಳೀಯರು ಮಲತಾಯಿಯನ್ನು ವಿಚಾರಣೆ ಮಾಡಿದ್ದಾಳೆ. ಈ ಸಂದರ್ಭದಲ್ಲಿ ವಿಚಾರ ತಿಳಿದು, ಗ್ರಾಮಸ್ಥರು ಮಗುವನ್ನು ಆಕೆಯ ಕಪಿಮುಷ್ಟಿಯಿಂದ ಬಿಡಿಸಿಕೊಂಡು ಬಂದಿದ್ದಾರೆ. ಈ ವೇಳೆ ಸ್ಥಳೀಯರ ಜೊತೆ ವಾದಕ್ಕಿಳಿದ ಮಹಿಳೆ, ನಾನು ಸುಡುವುದು ಹೀಗೇ. ನೀವ್ಯಾರು ಕೇಳೋಕೆ ಅಂತ ವಾಗ್ವಾದ ನಡೆಸಿದ್ದಾಳೆ. ಇನ್ನು ಮಗುವಿನ ರೋಧನೆ ಕಂಡು ವಾಡಿ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಮಗುವಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ಪುಟ್ಟ ಕಂದಮ್ಮನ ತಂದೆ ತಿಪ್ಪಣ್ಣ ಎರಡನೇ ಮದುವೆಯಾಗಿದ್ದ. ಆದರೆ ಕೆಲಸದ ನಿಮಿತ್ತ ಮಗುವನ್ನು ಈಕೆಯ ಬಳಿ ಬಿಟ್ಟು ಕಳೆದ ಕೆಲ ದಿನಗಳ ಹಿಂದೆ…
ಉತ್ತರಪ್ರದೇಶದ ಶಾಮ್ಲಿಯಲ್ಲಿ ಕುತೂಹಲಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ವ್ಯಕ್ತಿಯೊಬ್ಬ ಎಮ್ಮೆ ಕರುವನ್ನು ಕಳ್ಳತನ ಮಾಡಿರುವ ಆರೋಪ ಮಾಡಿದ್ದಾನೆ. ಆದರೆ, ಯಾರ ಮೇಲೆ ಆರೋಪ ಮಾಡಲಾಗಿದೆಯೋ ಆ ವ್ಯಕ್ತಿ ಕೂಡಾ ಆರೋಪವನ್ನು ತಳ್ಳಿ ಹಾಕಿದ್ದಾನೆ. ಹೀಗಾಗಿ ಪೊಲೀಸರು ಸತ್ಯವನ್ನು ಕಂಡು ಹಿಡಿಯಲು ಮಾರ್ಗವೊಂದನ್ನು ಕಂಡು ಕೊಂಡಿದ್ದಾರೆ. ಎಮ್ಮೆಯ ಡಿಎನ್‌ಎ ಪರೀಕ್ಷೆ ನಡೆಸಿ ನಿಜವಾದ ಮಾಲೀಕನ ಪತ್ತೆ ಹಚ್ಚಲು ಪೊಲೀಸರು ತೀರ್ಮಾನಿಸಿದ್ದಾರೆ. 2020 ರಲ್ಲಿ ಕಳುವಾಗಿದ್ದ ಕರು : ಕೂಲಿ ಕೆಲಸ ಮಾಡುವ ಚಂದ್ರಪಾಲ್ ಕಶ್ಯಪ್ ಎಂಬ ವ್ಯಕ್ತಿ ಪೊಲೀಸರೆದುರು ಎಮ್ಮೆ ಕರು ಕಳ್ಳತನದ ದೂರನ್ನು ತೆಗೆದುಕೊಂಡು ಬಂದಿದ್ದಾರೆ. ಅವರ ಪ್ರಕಾರ 2020 ರ ಆಗಸ್ಟ್ 25 ರಂದು, 3 ವರ್ಷದ ಎಮ್ಮೆ ಕರುವನ್ನು ಕೊಟ್ಟಿಗೆಯಿಂದ ಕಳ್ಳತನ ಮಾಡಲಾಗಿದೆ. ನಂತರ ಆ ಕರುವಿಗಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಇದಾದ ಬಳಿಕ 2020 ರ ನವೆಂಬರ್ ನಲ್ಲಿ ಸಹರಾನ್‌ಪುರದಲ್ಲಿ ಎಮ್ಮೆ ಕರು ಪತ್ತೆಯಾಗಿದೆ. ಆದರೆ ಪತ್ತೆಯಾದ ಕರು ತಮ್ಮದು ಎನ್ನುವುದು ಸಹರಾನ್‌ಪುರದ ಸತ್ಬೀರ್…
ನಗರದಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಶ್ಮೀರದಿಂದ ಬೆಂಗಳೂರಿಗೆ ಬಂದು ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದ ಎಂದು ಹೇಳಲಾಗಿದೆ. ಜಮ್ಮು ಮತ್ತ ಕಾಶ್ಮೀರದ ಪೊಲೀಸರು ಬೆಂಗಳೂರಿನ ಶ್ರೀರಾಂಪುರದಲ್ಲಿ ಕಾರ್ಯಾಚರಣೆ ನಡೆಸಿ ತಾಲಿಬ್ ಹುಸೇನ್ (38) ನನ್ನು ಬಂಧಿಸಿದ್ದಾರೆ. ತಾಲಿಕ್ ಎಂದು ಹೆಸರು ಬದಲಿಸಿಕೊಂಡು ಈತ ಓಡಾಡುತ್ತಿದ್ದನಂತೆ. ಉಗ್ರ ತಾಲಿಬ್, ಬಿಎನ್ಎಲ್ ಏರ್ ಸರ್ವಿಸ್ನಲ್ಲಿ ಕೆಲಸ ಮಾಡುತ್ತಿದ್ದ. ಕಾಶ್ಮೀರದಿಂದ ಬೆಂಗಳೂರಿಗೆ ಬರುವ ವೇಳೆಯಲ್ಲಿ ಪೊಲೀಸ್ ಪತ್ನಿಯನ್ನೇ ಕರೆತಂದಿದ್ದಾನೆ. ಅದರಂತೆ ಪತ್ನಿ ಮತ್ತು ಮೂವರು ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ನೆಲಸಿದ್ದನು. ಮೂಲತಃ ಜಮ್ಮು ಕಾಶ್ಮೀರದವನೇ ಆದ ತಾಲೀಬ್ ಹುಸೇನ್, ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ. ಜಮ್ಮು ಮತ್ತು ಕಾಶ್ಮೀರ್ ಪೊಲೀಸರು ಹಾಗೂ 17 ನೇ ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈತ ಪೊಲೀಸರ ಹಿಟ್ ಲಿಸ್ಟ್‌ನಲ್ಲಿದ್ದ ಎಂದು ಮಾಹಿತಿ ದೊರೆತಿದೆ. ಈತ ಬೆಂಗಳೂರಿನಲ್ಲಿ ಬಿಎನ್ಎಲ್ ಏರ್ ಸರ್ವಿಸ್ ಲೋಡಿಂಗ್ ಅನ್ ಲೋಡಿಂಗ್ ಕೆಲಸ ಮಾಡಿಕೊಂಡಿದ್ದ. ನಗರದಲ್ಲಿ ಪತ್ನಿ ಮತ್ತು…
ಬೆಂಗಳೂರು : ನಗರದ ಟೌನ್ ಹಾಲ್ ನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂಜೆ ದಶಮ ಸಂಭ್ರಮ ಕಾರ್ಯಕ್ರಮದಲ್ಲಿ ತುರುವೇಕೆರೆ ತಾಲೂಕಿನ ಮುಗಳೂರು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಕು. ಮೌಲ್ಯ ಎಂ.ಎನ್. ಹಾಗೂ ಬೆಂಗಳೂರು ನಗರದ ಕು.ರಮ್ಯ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ.ಸಂತೋಷ್ ಭಾರತಿ ಶ್ರೀಪಾದಂಗಳವರು ಹಾಗೂ ಸಂಜೆ ಪ್ರಭ ದಿನಪತ್ರಿಕೆ ಸಂಪಾದಕರಾದ ವೆಂಕಟೇಶ್ ಪೈ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ವಿದ್ಯಾರ್ಥಿನಿ ಕು.ಮೌಲ್ಯ ಎಂ.ಎನ್.ಪ್ರಸ್ತುತ ಮಂಗಳೂರು ಮಹೇಶ್ ಇನ್ಸ್ಟಿಟ್ಯೂಷನ್ ತುಮಕೂರು ಅಶೋಕ ನಗರದ ಮಹೇಶ್ ಪಿ.ಯು. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ವೈದ್ಯೆಯಾಗುವ ಆಸೆ ಹೊತ್ತಿದ್ದಾರೆ. ಪ್ರತಿಭಾ ಪುರಸ್ಕಾರ ಆಯ್ಕೆಗೊಂಡ ವಿದ್ಯಾರ್ಥಿನಿಗೆ ಕಾಲೇಜು ಆಡಳಿತ ಮಂಡಳಿ ಮತ್ತು ಪೋಷಕರಿಂದ ಅಭಿನಂದಿಸಿದೆ. ಸಂಜೆ ಪ್ರಭ ದಿನಪತ್ರಿಕೆಯ 10ನೇ ವರ್ಷದ ದಶಮ ಸಂಭ್ರಮದ ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸಮಾಜ ಸೇವಕರನ್ನು ಗುರುತಿಸಿ ಅವರಿಗೆ ಸಂಜೆ ಪ್ರಭಾ ಸಾಮಾಜಿಕ ಸೇವಾ ರತ್ನ ಪ್ರಶಸ್ತಿಯನ್ನು ಹಾಗೂ ಮಾಧ್ಯಮ ಕ್ಷೇತ್ರದಲ್ಲಿ…
ಪಾವಗಡ: ಹಬ್ಬಗಳಂದ್ರೆ ಸಂಭ್ರಮ, ಸಡಗರ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಅನೇಕ ಬಗೆಯ ವಿಶಿಷ್ಠ ಹಬ್ಬಗಳನ್ನು ತಲೆತಲಾಂತರಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಪ್ರಸಿದ್ಧಿ, ವೈಶಿಷ್ಟ್ಯತೆ ಹೊಂದಿದ್ದು, ತುಮಕೂರು ಜಿಲ್ಲೆಯ ಪಾವಗಡದ ಲಂಬಾಣಿ ಸಮುದಾಯದವರು ಆಚರಿಸುತ್ತಿರುವ ಹಬ್ಬವೊಂದು ಒಮ್ಮೆ ಎಲ್ಲರನ್ನೂ ಆಕರ್ಷಿಸುತ್ತದೆ. ಹೌದು, ದವಸ ಧಾನ್ಯ, ತೆಂಗಿನ ಕಾಯಿಯನ್ನು ತಲೆ ಮೇಲೆ ಹೊತ್ತು ಬರುವ ಕನ್ಯೆಯರಿಗೆ ಶುದ್ಧ ನೀರಿನಿಂದ ಕಾಲ್ತೊಳೆಯುವ ವಿಶೇಷ ಹಬ್ಬ ನಡೆಯುತ್ತಿದೆ. ಜಿಲ್ಲೆಯ ಪಾವಗಡ ತಾಲೂಕಿನ ಭೂಪೂರು ಸೇರಿದಂತೆ ಇತರೆ ಲಂಬಾಣಿ ತಾಂಡಗಳಲ್ಲಿ ಕನ್ಯೆಯರಿಗೆ ಕಾಲ್ತೊಳೆಯುವ ಹಬ್ಬ ನಡೆಯುತ್ತಿದೆ. ಪ್ರತಿ ಮನೆಯಿಂದ ಒಬ್ಬೊಬ್ಬ ಕನ್ಯೆಯರು ತಮ್ಮ ಮನೆಯಿಂದ ದವಸ ಧಾನ್ಯ ಹೊತ್ತು ಕುಲದೇವತೆಗಳಾದ ತೋಳಚ ಶಕ್ತಿ, ಭೀಮಾಸತಿ, ಭೀಮಾ ಭೂಕ್ಯಾ ದೇವತೆಗಳನ್ನು ಆರಾಧಿಸುವ ಮನೆಗಳಿಗೆ ತೆರಳಿ ನೈವೇದ್ಯ ಅರ್ಪಿಸುತ್ತಾರೆ. ಈ ವೇಳೆ ಮನೆಗೆ ಬರುವ ಕನ್ಯೆ ಯರಿಗೆ ಶುದ್ದ ನೀರಿನಿಂದ ಕಾಳು ತೊಳೆದು ಕಾಲಿಗೆ ಬಿದ್ದು ಬರಮಾಡಿಕೊಳ್ಳುತ್ತಾರೆ. ಮನೆಗೆ ಬರುವ ವೇಳೆ ಕನ್ಯೆಯರು ಬರುವ ಹಾದಿಗೆ ನೀರು…
ತಿಪಟೂರು: ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಚನ್ನಬಸವಯ್ಯ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ,ತಹಶೀಲ್ದಾರ್ ಚಂದ್ರಶೇಖರ್ ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರಿ ಹಾಜರಿದ್ದರು. ಕೆಎಂಎಫ್ ನಿರ್ದೇಶಕ ಮಾದೀಹಳ್ಳಿ ಪ್ರಕಾಶ್, ಟಿಎಪಿಸಿಎಂ ಎಸ್ ಅಧ್ಯಕ್ಷ ಶಂಕರಮೂರ್ತಿ, ನಿಕಟಪೂರ್ವ ಅಧ್ಯಕ್ಷ ಚಿನ್ನಸ್ವಾಮಿ, ಮಾಜಿ ಅಧ್ಯಕ್ಷ ಮಾಧುಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ವೆಂಕಟೇಶ್ ಮತ್ತು ಸದಸ್ಯ ತಿಮ್ಮರಾಜು ಸೇರಿದಂತೆ ಗ್ರಾ.ಪಂ. ಸದಸ್ಯರು, ಕಾಂಗ್ರೆಸ್ ಮುಖಂಡರುಗಳು ಹಾಗೂ ಸ್ನೇಹಿತರು ಹಾಜರಿದ್ದು ಅಭಿನಂದನೆ ಸಲ್ಲಿಸಿದರು. ವರದಿ: ಆನಂದ್ ತಿಪಟೂರ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಪಾವಗಡ: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಆಟೋ ರಿಕ್ಷಾ ಪಲ್ಟಿಯಾಗಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯ ನಲಿಗಾನಹಳ್ಳಿ ಗ್ರಾಮದ ಬಳಿ ಸೋಮವಾರ ನಡೆದಿದೆ. ಕೋಣನ ಕುರಿಕೆ ಬಂಡಪ್ಪ (55) ಹಾಗೂ ಸಣ್ಣ ಸಿದ್ದಪ್ಪನವರ ಬಂಡಪ್ಪ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಆಟೋದಲ್ಲಿ ಬಿ ದೊಡ್ಡ ಹಟ್ಟಿ ಗ್ರಾಮದಿಂದ ಪಾವಗಡ ಪಟ್ಟಣಕ್ಕೆ ಏಳು ಜನ ಪ್ರಯಾಣಿಕರು ತೆರಳುತ್ತಿದ್ದರು, ನಲಿ ಗಾನ ಹಳ್ಳಿ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಗಮ್ಮ ಎಂಬ ಮಹಿಳೆಗೆ ತೀವ್ರ ತರಹದ ಗಾಯಗಳಾಗಿದ್ದು, ಗಾಯಾಳುಗಳನ್ನು ಪಾವಗಡ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ತಿಳಿದು ಸ್ಥಳೀಯ ಶಾಸಕ ವೆಂಕಟರಮಣಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…