Subscribe to Updates
Get the latest creative news from FooBar about art, design and business.
- ವಿಕಲಚೇತನರ ಹಿತರಕ್ಷಣೆಗಾಗಿ ಕಾನೂನು ಜಾಗೃತಿ ಮೂಡಿಸುವುದು ಅಗತ್ಯ: ವಕೀಲ ಮಣಿರಾಜು
- ಸರಗೂರು | ದೇವಲಾಪುರ ರಸ್ತೆ ಒತ್ತುವರಿ ತೆರವು: ತಹಶೀಲ್ದಾರ್ ನೇತೃತ್ವದಲ್ಲಿ ಕ್ರಮ
- ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ: ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ, ಪರಿಶೀಲನೆ
- ನರೇಗಾ ಹೆಸರು ಬದಲಾವಣೆ ಖಂಡನೀಯ: ಶಾಸಕ ಎಸ್.ಆರ್. ಶ್ರೀನಿವಾಸ್ ಆಕ್ರೋಶ
- ತಿಪಟೂರು: ದಲಿತರ ಭೂಮಿ ಒತ್ತುವರಿ ಆರೋಪ, ಓಡಾಡಲು ರಸ್ತೆ ಇಲ್ಲದೇ ದಲಿತರು ಕಂಗಾಲು
- ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ
- ಶ್ರವಣೂರು: ಭ್ರಷ್ಟಾಚಾರದ ಆರೋಪ; ಪಿಡಿಒ ವಿರುದ್ಧ ಎರಡನೇ ದಿನವೂ ಮುಂದುವರಿದ ಪ್ರತಿಭಟನೆ
- ತುರುವೇಕೆರೆ: ಚಿರತೆ ಸಿಕ್ಕರೂ ಗ್ರಾಮಸ್ಥರಲ್ಲಿ ದೂರವಾಗದ ಆತಂಕ
Author: admin
ಬಾಲಿವುಡ್ ನಟ ಮತ್ತು ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ವಿರುದ್ಧ 1996 ರಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡದೊಂದಿಗೆ ಶಿಕ್ಷೆಯನ್ನು ವಿಧಿಸಿದೆ. ವರದಿಗಳ ಪ್ರಕಾರ ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಬಬ್ಬರ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ರಾಜ್ ಬಬ್ಬರ್ ಅವರಿಗೆ ನ್ಯಾಯಾಲಯವು 8,500 ರೂಪಾಯಿ ದಂಡವನ್ನೂ ವಿಧಿಸಿದೆ.ಸರ್ಕಾರಿ ಕರ್ತವ್ಯಗಳಲ್ಲಿ ಹಸ್ತಕ್ಷೇಪ ಮತ್ತು ದೈಹಿಕ ಹಲ್ಲೆ ನಡೆಸಿದ ಆರೋಪದಲ್ಲಿ ರಾಜ್ ಬಬ್ಬರ್ ಅವರನ್ನು ತಪ್ಪಿತಸ್ಥರೆಂದು ಗುರುತಿಸಲಾಗಿದೆ. ಈ ಘಟನೆ 1996 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದಿತ್ತು. ಉತ್ತರ ಪ್ರದೇಶದ ವಜೀರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎರಡು ದಶಕಗಳ ಹಿಂದೆ ಬಬ್ಬರ್ ವಿರುದ್ಧ ಚುನಾವಣಾಧಿಕಾರಿಯೊಬ್ಬರು ದೂರು ದಾಖಲಿಸಿದ್ದರು. ಮಾಧ್ಯಮ ವರದಿಗಳ ಪ್ರಕಾರ, ರಾಜ್ ಬಬ್ಬರ್ ನಿಂದ ಹಲ್ಲೆಗೊಳಗಾದ ಚುನಾವಣಾ ಅಧಿಕಾರಿಯನ್ನು ಶ್ರೀ ಕೃಷ್ಣ ಸಿಂಗ್ ರಾಣಾ ಎಂದು ಹೆಸರಿಸಲಾಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಮತ್ತು ಹಲ್ಲೆ ಮಾಡಿದ ಆರೋಪದ ಮೇಲೆ ರಾಜ್ ಬಬ್ಬರ್ ಅವರನ್ನು…
ಮಂಗಳೂರು: ಮೆದುಳಿನ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ ಬಹುಜನ ಚಳುವಳಿಯ ಹಿರಿಯ ನಾಯಕ, ಅಂಬೇಡ್ಕರ್ ವಾದಿ ಪಿ. ಡೀಕಯ್ಯನವರು ನಿನ್ನೆ ರಾತ್ರಿ ಮಣಿಪಾಲ ಕೆಎಂಸಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪಿ. ಡಿಕಯ್ಯನವರು, ತಮ್ಮ ಬಹು ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಯ ಬಳಿಕ ಪದ್ಮುಂಜದಲ್ಲಿರುವ ಅವರ ನಿವಾಸದ ಬಳಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿ ಬೆಳೆಸಿದ ಪಿ.ಡೀಕಯ್ಯನವರು, ದೇಶದ ಇತಿಹಾಸದ ಜೊತೆಗೆ ತುಳುನಾಡಿನ ಇತಿಹಾಸವನ್ನೂ ಅರೆದು ಕುಡಿದಿದ್ದರು. ತುಳುನಾಡಿನಲ್ಲಿ ತಮ್ಮದೇ ಶೈಲಿಯಲ್ಲಿ ಯುವಕರಲ್ಲಿ ಬಹುಜನ ಚಳುವಳಿಯನ್ನು ತುಂಬಿ, ಸಾಕಷ್ಟು ನಾಯಕರನ್ನು ಸೃಷ್ಟಿಸಿದ್ದರು. ಕಾನದ ಕಟದರ ಇತಿಹಾಸದ ಕುರಿತು ಅಧ್ಯಯನ ಮಾಡಿ ಪುಸ್ತಕ ಬರೆದಿದ್ದ, ಡೀಕಯ್ಯರು ಅಪ್ರತಿಮ ಬರಹಗಾರರು ಕೂಡ ಆಗಿದ್ದರು. ಮನುವಾದದ ಕಡು ವಿರೋಧಿಯಾಗಿದ್ದ ಡೀಕಯ್ಯರು, ಅಸ್ಪೃಶ್ಯತೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಪಿ.ಡೀಕಯ್ಯನವರ ಅಕಾಲಿಕ ನಿಧನದಿಂದ ಅವರ ಅಭಿಮಾನಿಗಳು, ಹಿತೈಷಿಗಳು ತೀವ್ರವಾಗಿ ದುಃಖಿತರಾಗಿದ್ದಾರೆ. ಸಾಕಷ್ಟು ಹೋರಾಟಗಳಿಗೆ ಮಾರ್ಗದರ್ಶಕರಾಗಿದ್ದ…
ಲಂಡನ್: ಕನ್ಸರ್ವೇಟಿವ್ ಪಕ್ಷದ ನೇತೃತ್ವದ ಸರ್ಕಾರವು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದ ಬೆನ್ನಲ್ಲೇ ಈಗ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರದಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದೆ ವೇಳೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಜಾನ್ಸನ್, ನೂತನ ಪ್ರಧಾನಿ ನೇಮಕವಾಗುವವರೆಗೆ ತಾವು ಪ್ರಧಾನಿಯಾಗಿ ಮುಂದುವರೆಯುವುದಾಗಿ ಹೇಳಿದ್ದಾರೆ. ಅವರ ಆಪ್ತ ಮಿತ್ರರಲ್ಲಿ ಒಬ್ಬರಾದ ನಧಿಮ್ ಜಹಾವಿ ಅವರು ದೇಶದ ಒಳಿತಿಗಾಗಿ ಪ್ರಧಾನಿಗೆ ರಾಜೀನಾಮೆ ನೀಡುವಂತೆ ಮನವಿ ಮಾಡಿದ ನಂತರ ಜಾನ್ಸನ್ ಅವರು ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದ್ದಾರೆ ಎಂದು ಮಾಧ್ಯಮಗಳು ವರೆದಿ ಮಾಡಿವೆ. ಜಾನ್ಸನ್ ಅವರ ಸಂಪುಟದಲ್ಲಿ ಹಲವಾರು ಸಚಿವರು ರಾಜೀನಾಮೆ ನೀಡಿದ ನಂತರವು ಅವರು ಅಧಿಕಾರಕ್ಕೆ ಅಂಟಿಕೊಂಡಿದ್ದರು. ಬುಧುವಾರದಂದು ಸಂಸತ್ತಿನಲ್ಲಿ ಮಾತನಾಡುತ್ತಾ ಅವರು ಒಂದು ವೇಳೆ ಸರ್ಕಾರವನ್ನು ನಡೆಸಲು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.ಅದಕ್ಕೂ ಮೊದಲು ಅವರು ತಮಗೆ ಜನರ ಬೆಂಬಲವಿದೆ ಆದ್ದರಿಂದ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದರು. ಸುನಕ್ ಸೇರಿದಂತೆ ಕನಿಷ್ಠ 32 ಬ್ರಿಟಿಷ್ ಸಂಸದರು ರಾಜೀನಾಮೆ ನೀಡಿದ್ದರು,…
ಕುಣಿಗಲ್ : ಬಾಯ್ಲರ್ ಗೆ ಸೌದೆ ಹಾಕುತ್ತಿದ್ದ ವ್ಯಕ್ತಿಯೊಬ್ಬರ ತಲೆಯ ಮೇಲೆ ಸೌದೆ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿ ಹೆಗ್ಗತಿಹಳ್ಳಿ ಜೆಪಿ ಡಿಸ್ಟಲರಿ ಕಾರ್ಖಾನೆಯಲ್ಲಿ ನಡೆದಿದೆ. 48 ವರ್ಷ ವಯಸ್ಸಿನ ಹೆಗ್ಗತ್ತಿಹಳ್ಳಿ ಗ್ರಾಮದ ಕುಮಾರ್ ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಲಾರಿಯಿಂದ ಸೌದೆ ಇಳಿಸಿ ಬಾಯ್ಲರ್ ಗೆ ಹಾಕುವ ವೇಳೆ ಸೌದೆ ತುಂಡು ಕುಮಾರ್ ಅವರ ತಲೆಗೆ ಬಿದ್ದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ಡು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಗಾಯಗೊಂಡ ತಕ್ಷಣವೇ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ತುಮಕೂರು: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟ ದಾರುಣ ಘಟನೆ ತಿಪಟೂರು ತಾಲ್ಲೂಕಿನ ತಿಮ್ಲಾಪುರ- ಮತ್ತೀಹಳ್ಳಿ ಗೇಟ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ. ಶಿರಾ ಸಮೀಪದ ಕಡವಗೆರೆ ನಿವಾಸಿಗಳು ಮೃತಪಟ್ಟವರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಹಿರಿಯೂರು: ಬೇಡಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿದ್ದ ಅಖಿಲ ಭಾರತ ಬೇಡ ಜಂಗಮ ಸಮಾಜ ಸಂಸ್ಥೆ ಅಧ್ಯಕ್ಷ ಬಿ.ಡಿ.ಹಿರೇಮಠರನ್ನು ಬಂಧಿಸಿರುವ ಪೋಲಿಸರ ಕ್ರಮ ಖಂಡಿಸಿ ಹಿರಿಯೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹಿರಿಯೂರು ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಯಿಸಿ ಪ್ರತಿಭಟನೆಕಾರರು ನಂತರ ತಹಶೀಲ್ದಾರರನ್ನು ಭೇಟಿಯಾಗಿ ಸರ್ಕಾರದ ಕ್ರಮದ ವಿರುದ್ಧ ಖಂಡನೆ ವ್ಯಕ್ತಪಡಿಸಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಬೇಡ ಜಂಗಮ ಸಮಾಜದ ಮುಖಂಡ ಎಚ್. ಟಿ. ಚಂದ್ರಶೇಖರಯ್ಯ, ಸಂವಿಧಾನ ಬದ್ದ ಹಕ್ಕು ಪಡೆಯಲು ಹೋರಾಟ ನಡೆಸಿದರೆ ಪೋಲಿಸರು ಬಂಧಿಸುತ್ತಿದ್ದಾರೆ. ಬಿ.ಡಿ.ಹಿರೇಮಠ ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತ ಧರಣಿ ನಡೆಸುತ್ತಿದ್ದ ವೇಳೆ ಆಗಮಿಸಿದ ಪೋಲಿಸರು ವಿನಾ ಕಾರಣ ಬಂಧಿಸಿದ್ದಾರೆ. ಅಲ್ಲದೇ ಅತ್ಯಂತ ಕೆಟ್ಟ ರೀತಿಯಲ್ಲಿ ಅವರನ್ನು ನಡೆಸಿಕೊಳ್ಳಲಾಗಿದೆ. ಗಲಾಟೆ ಗದ್ದಲ ಮಾಡದೆ ಗಾಂಧಿ ಮಾರ್ಗದಲ್ಲಿ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ವೇಳೆ ಬಂಧಿಸಲಾಗಿದೆ. ರಾಜ್ಯದಲ್ಲಿ ಪ್ರತಿಭಟನೆ ನಡೆಸುವುದು ಕಾನೂನು…
ಕೊರಟಗೆರೆ : ತಾಲ್ಲೂಕಿನ ಇರಕಸಂದ್ರ ಕಾಲೋನಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದಲ್ಲಿ ಕೊರಟಗೆರೆ ಪ್ರಾದೇಶಿಕ ಅರಣ್ಯ ಇಲಾಖೆಯ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಜಯಣ್ಣ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕೊರಟಗೆರೆ ವಲಯ ಅರಣ್ಯಾಧಿಕಾರಿಯಾದ ಹೆಚ್.ಎಂ.ಸುರೇಶ್, ಉಪ ವಲಯ ಅರಣ್ಯಧಿಕಾರಿ ನಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಲಿಂಗಮ್ಮ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಈಶ್ವರ್,ಉಪಾದ್ಯಕ್ಷರಾದ ಕಿರಣ್ ಕುಮಾರ್, ತೋವಿನಕೆರೆಯ ಸ್ವಯಂ ಸೇವಾ ಸಂಸ್ಥೆಯ ವಸಂತಮ್ಮ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಚಾಂದ್ ಪಾಷಾ, ಮಂಜುನಾಥ್, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಗಳು ಮತ್ತು ಶಾಲಾ ಕಾಲೇಜು ಮಕ್ಕಳು, ಸಾರ್ವಜನಿಕರು ಹಾಜರಿದ್ದರು. ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದ ತೊಂದರೆಗೊಳಗಾಗಿರುವವರನ್ನು ರಕ್ಷಿಸುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ. ಈ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಾಜಿ ಉಪಪ್ರಧಾನಿ ಜಗಜೀವನರಾಂ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ವಿಧಾನಸೌಧದ ಅವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಮಳೆಯಿಂದ ಕೆಲ ಕಡೆಗಳಲ್ಲಿ ಹಾನಿಯಾಗಿದೆ, ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು. ಮಳೆ ಹೆಚ್ಚಿರುವ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪಡೆಗಳನ್ನು ನಿಯೋಜಿಸಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಹೇಳಿದ್ದೇನೆ. ರಕ್ಷಣಾ ಕಾರ್ಯದ ನಂತರ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕ್ಕೊಳ್ಳಲಾಗುವುದು ಎಂದರು. ಬಾಬು ಜಗಜೀವನರಾಂ ಸ್ಮರಣೆ: ಇದೇ ಸಂದರ್ಭದಲ್ಲಿ ದೇಶದ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ್ ಅವರ ಸೇವೆಯನ್ನು ಸ್ಮರಿಸಿದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ದೇಶ ಆಹಾರದ ಪರಾವಲಂಬನೆ ಸ್ಥಿತಿಯಲ್ಲಿದ್ದಾಗ ಹಸಿರು ಕ್ರಾಂತಿ ಮೂಲಕ ದೇಶವನ್ನು ಆಹಾರ ಸ್ವಾವಲಂಬಿಯಾಗಿಸಿದ್ದು ಬಾಬು ಜಗಜೀವನರಾಮ್ ಎಂದರು. ರಕ್ಷಣಾ ಖಾತೆ ಸೇರಿದಂತೆ ಹಲವು ಉನ್ನತ…
ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಮೃತ್ ಪೌಲ್ ಪಿಎಸ್?ಐಗಳ ಮೊದಲ ನೇಮಕ ಪ್ರಕ್ರಿಯೆಯಲ್ಲಿ ಕೋಟ್ಯಾಂತರ ಹಣ ಮಾಡಲು ಆಕಾಂಕ್ಷಿಗಳ ಎಲ್ಲ ವಿವರಗಳನ್ನು ತಿಳಿದ ಬಳಿಕ ಡೀಲ್ ಗೆ ಓಕೆ ಮಾಡಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ. ಪಿಎಸ್ ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಇಲ್ಲಿಯವರೆಗೆ ಬಂಧಿತ ಪ್ರಮುಖ ಆರೋಪಿಗಳು ಅಭ್ಯರ್ಥಿಗಳಿಂದ ವಸೂಲಿ ಮಾಡಿದ ಹಣದಲ್ಲಿ ಅಮೃತ್ ಪೌಲ್ ಅವರಿಗೆ ಪಾಲು ನೀಡಿದ್ದು ಅದು ಕೋಟ್ಯಾಂತರ ರೂಗಳಾಷ್ಟಾಗಿದೆ ಎನ್ನುವುದು ತನಿಖೆಯಲ್ಲಿ ಸಾಬೀತಾಗಿದೆ. ಕಳೆದ ೨೦೨೦ರ ಫೆ.೨ರಂದು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅಮೃತ್ ಪೌಲ್ ವಿಭಾಗದ ಎಲ್ಲಾ ಮಾಹಿತಿಯನ್ನು ಕಲೆ ಹಾಕಿದ್ದರು. ನೇಮಕಾತಿ ವಿಭಾಗದಲ್ಲಿ ಠಿಕಾಣಿ ಹೂಡಿದ್ದ ಡಿವೈಎಸ್?ಪಿ ಶಾಂತಕುಮಾರ್ ಜೊತೆ ಹಲವು ಬಾರಿ ಚರ್ಚೆ ನಡೆಸಿದ್ದು ಹಣಕಾಸಿನ ವ್ಯವಹಾರಗಳ ಪ್ರಸ್ತಾಪದ ವೇಳೆ ನೇಮಕಾತಿ ಡೀಲ್ ನ ಮಾತುಕತೆ ನಡೆಸಲಾಗಿತ್ತು.ಅದಕ್ಕೆ ಎಡಿಜಿಪಿ ಗ್ರೀನ್ ಸಿಗ್ನಲ್ ತೋರಿಸುತ್ತಿದರು. ಇದರ ಬೆನ್ನಲ್ಲೇ ಕೋವಿಡ್ ಲಾಕ್? ಡೌನ್ ತೆರವಾದ ನಂತರ ೨೦೨೧ರ…
ಕಾಂಗ್ರೆಸ್ ಕಾಲದಲ್ಲಿ ನಡೆದಿರುವ ಅಕ್ರಮ ನೇಮಕಾತಿಗಳ ಕುರಿತು ದಾಖಲೆ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ನೀಡಿರುವ ಹೇಳಿಕೆಗೆ ಕಿಡಿ ಕಾರಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಾಖಲೆಗಳಿದ್ದರೆ ನಮ್ಮ ಕಾಲದ ನೇಮಕಾತಿಯ ಬಗ್ಗೆಯೂ ತನಿಖೆ ನಡೆಸಿ ಎಂದು ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಅಕ್ರಮ ನೇಮಕಾತಿ ನಡೆದಿದೆ ಎಂಬುದು ಸುಳ್ಳು, ಆಗ ವಿರೋಧ ಪಕ್ಷದಲ್ಲಿದ್ದರು. ಏನು ಮಾಡುತ್ತಿದ್ದರು. ಕಡಲೆ ಪುರಿ ತಿಂತಾ ಇದ್ದರಾ, ಯಾಕೆ ಸುಮ್ಮನಿದ್ದರು. ಆಗ ಏಕೆ ಮಾತನಾಡಲಿಲ್ಲ ಎಂದು ಹರಿಹಾಯ್ದರು. ದಾಖಲೆ ಇದ್ದರೆ ಆಗಲೇ ಹೇಳಬೇಕಿತ್ತಲ್ಲ. ಸುಮ್ಮನೆ ಇದ್ದಿದ್ದು ಅಪರಾಧ, ಕಾನೂನು ಇವರಿಗೆ ಗೊತ್ತಿಲ್ಲವಾ? ನನ್ನ ಕುರ್ಚಿಯನ್ನು ಉಳಿಸೋಕೆ ಮಾತನಾಡಿರಲಿಲ್ಲವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ದಾಖಲೆ ಇದ್ದರೆ ನಮ್ಮ ಕಾಲದ ನೇಮಕಾತಿ ಬಗ್ಗೆಯೂ ತನಿಖೆ ಮಾಡಿಸಿ ಎಂದೂ ಅವರು ಸವಾಲು ಹಾಕಿದರು. ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಗೃಹ ಸಚಿವ ಅರಗಜ್ಞಾನೇಂದ್ರ ಅವರು ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಅವರನ್ನು…