Subscribe to Updates
Get the latest creative news from FooBar about art, design and business.
- ಕುಲವಿಲ್ಲದ ನೆಲೆಗಾಗಿ ನಡೆದಾಡಿದ ಸಂತ ಕವಿ ಕನಕದಾಸರು: ಬಿಡಗಲು ಶಿವಣ್ಣ ಅಭಿಮತ
- ಸಾಮಾಜಿಕ ನ್ಯಾಯ ಎತ್ತಿ ಹಿಡಿದವರು ಕನಕದಾಸರು: ಎಂ.ಬಿ.ಆನಂದ
- ರಾಜ್ಯ ಮಟ್ಟದ ಕನ್ನಡ ಸೇವಾರತ್ನ ಪ್ರಶಸ್ತಿಗೆ ಡಾ.ಸತ್ಯಕ್ಕ ಗಡ್ಡೆ ಆಯ್ಕೆ
- ನರಹಂತಕ ವ್ಯಾಘ್ರನ ಸೆರೆ: ಜನರ ನಿದ್ದೆಗೆಡಿಸಿದ 9 ವರ್ಷದ ಹುಲಿಯನ್ನು ಹಿಡಿದ ಅರಣ್ಯ ಇಲಾಖೆ
- ನರಹಂತಕ ಹುಲಿಯ ಸೆರೆಗಾಗಿ ಮುಂದುವರಿದ ಕಾರ್ಯಾಚರಣೆ: ಡ್ರೋನ್ ಕ್ಯಾಮೆರಾದಲ್ಲಿ ಹುಲಿ ಪತ್ತೆ!
- ಮಧುಗಿರಿ: ಎರಡು ವರ್ಷದ ಚಿರತೆ ಸೆರೆ
- ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಕನಕದಾಸರ ಕೊಡುಗೆ ಅಪಾರ: ಪ.ಪಂ. ಅಧ್ಯಕ್ಷ ಶಿವಕುಮಾರ್
- ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ
Author: admin
ಹಿರಿಯೂರು: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರ ಕಾರಿಗೆ ಓವರ್ ಟೇಕ್ ಮಾಡುವ ಭರದಲ್ಲಿ ಕಾರೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಶಾಸಕರ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಹಿರಿಯೂರು ಮಾರ್ಗ ಮಧ್ಯೆ ತೆರಳುತ್ತಿದ್ದ ವೇಳೆ ಅತೀ ವೇಗ ಹಾಗೂ ಅಜಾಗರೋಕತೆಯಿಂದ ಬಂದ ಕಾರೊಂದು ಶಾಸಕರ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರಿನ ಎಡ ಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯ ಅಧಿಕಾರಿ ಪಿ ಎಸ್ ಐ ಶಶಿಕಲಾ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವರದಿ: ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆಹಾರ ನಿರೀಕ್ಷಕರು , ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಹಿರಿಯೂರು ಸಿರಿಗನ್ನಡ ನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿತ್ತು. ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಾದ ರಂಜಿತ ಲಾಡ್ಜ್ ಬಳಿಯಿಂದ ಮೆರವಣಿಗೆ ಆರಂಭಿಸಿ, ತಾಲ್ಲೂಕು ಕಛೇರಿಯವರೆಗೂ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಹಿರಿಯೂರು ಕಂದಾಯ, ಆಹಾರ ನಿರೀಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಸಿರಿಗನ್ನಡನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಕುಂದ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಕಂದಾಯ, ಆಹಾರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿ ಯಾವುದೇ ಸಮಸ್ಯೆ ತೆಗೆದುಕೊಂಡು ಹೋದರೂ ಉಡಾಫೆಯ ಮಾತುಗಳನ್ನಾಡುತ್ತಾರೆ. ಸರ್ಕಾರದಿಂದ ಬಡವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಕೇಳಿದರೆ ದರ್ಪದ ಉತ್ತರ ನೀಡುತ್ತಾರೆ.…
ಗುಬ್ಬಿ: ಲಾರಿಯೊಂದಕ್ಕೆ ಮತ್ತೊಂದು ಲಾರಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಪಟ್ಟಣದ ಹೊರವಲಯದ ಸಿಂಗೋನಹಳ್ಳಿ ಬ್ರಿಡ್ಜ್ ಬಳಿ ಬೆಳಿಗ್ಗೆ ಮುಂದೆ ಸಾಗುತ್ತಿದ್ದ ಲಾರಿಗೆ ಕೋಳಿ ಸಾಗಾಟದ ಲಾರಿ ವೇಗವಾಗಿ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ ಪರಿಣಾಮವಾಗಿ ಲಾರಿಯಲ್ಲಿದ್ದ ಓರ್ವ ಸಾವನ್ನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದ ತೀವ್ರತೆಗೆ ಲಾರಿ ಚಾಲಕ ಲಾರಿಯಲ್ಲಿಯೇ ಸಿಲುಕಿಕೊಂಡಿದ್ದು, ಲಾರಿಯ ಹಾರನ್ ಮೊಳಗುತ್ತಲೇ ಇದ್ದ ದೃಶ್ಯ ಕಂಡು ಬಂದಿದೆ. ಲಾರಿಯ ಸಿಗ್ನಲ್ ಕೂಡ ಆನ್ ನಲ್ಲಿರುವುದು ಪತ್ತೆಯಾಗಿದ್ದು, ಭೀಕರತೆಯಿಂದ ಕೂಡಿದೆ. ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತನಿಖೆ ಮುಂದುವರಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವರದಿ: ಮಂಜುನಾಥ್, ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ಬಿ.ಕೋಡಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಒತ್ತಡಕ್ಕೆ ಭೇಟಿ ನೀಡಿ ಕಣ್ಣೊರೆಸುವ ಕೆಲಸ ಮಾಡಿದ್ದೀರಿ ಎಂದು ಫೋಷಕ ಚಿಕ್ಕೇಗೌಡ ಅಧಿಕಾರಿಗಳನ್ನು ತರಾಟೆಗೆತ್ತಕೊಂಡಿದ್ದು, ಹೆಣ್ಣು ಮಕ್ಕಳ ಕಿರಿಕಿರಿ ಅರ್ಥವಾಗುತ್ತಿಲ್ಲ. ನಿಮ್ಮ ಮನೆ ಮಕ್ಕಳನ್ನು ಇಲ್ಲಿಗೆ ಸೇರಿಸಿ ಆಗ ಬಡ ಮಕ್ಕಳ ಸಮಸ್ಯೆ ತಿಳಿಯುತ್ತೆ ಎಂದು ಸ್ಥಳೀಯ ಪೋಷಕ ಚಿಕ್ಕೇಗೌಡ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದ ಬಿಇಓ ಕಚೇರಿಯಲ್ಲಿ ನಡೆಯಿತು. ಸರ್ಕಾರಿ ಶಾಲೆಯಲ್ಲಿ ಕೃಷಿಕ ವರ್ಗದ ಮಕ್ಕಳೇ ಹೆಚ್ಚಾಗಿ ಕುಗ್ರಾಮದ ಶಾಲೆಗಳು ಬಳಸುತ್ತಾರೆ. ಶೌಚಾಲಯವಿಲ್ಲದೆ ಇಲ್ಲಿನ ಮಕ್ಕಳು ಬೇಲಿ ಸಾಲಿಗೆ ಸರದಿಯಲ್ಲಿ ಹೋಗುತ್ತಾರೆ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಪರದಾಟ ಹೇಳತೀರದು. ಶೌಚಾಲಯ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿತ್ತು. ವಿಡಿಯೋ ಸಂವಾದದಲ್ಲಿ ಸಚಿವರೇ ಆಸಕ್ತಿ ವಹಿಸಿ ಬಿಇಒ ಗೆ ಹೇಳಿ . ನಾಲ್ಕು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಶೌಚಾಲಯ…
ತಿಪಟೂರು: ವ್ಯಾಪಾರಿಗಳು ಹಾಗೂ ರೈತರುಗಳು ಸಹಕಾರಿ ಸಂಘದಲ್ಲಿ ಸಾಲ ಪಡೆದು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿ ಸಹಕಾರಿ ಸಂಘವನ್ನು ಇಂದುಶ್ರೀ ಗುರುಪರದೇಶಿ ಕೇಂದ್ರ ಅವರು ತಿಳಿಸಿದರು. ತಿಪಟೂರು ನಗರದಲ್ಲಿ ಶ್ರೀ ಗುರು ಪರದೇಶಿ ಕೇಂದ್ರ ಸೌಂದರ್ಯ ಪತ್ತಿನ ಸಹಕಾರ ಸಂಘವನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಶ್ರೀಗಳು, ವ್ಯಾಪಾರಿಗಳು ಮತ್ತು ರೈತರ ಹಿತದೃಷ್ಟಿಯಿಂದ ಸಹಕಾರ ಸಂಘವನ್ನು ತೆರೆದಿದ್ದು, ಸಾಲ ಪಡೆದ ಸದಸ್ಯರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ, ಮುಂದಿನ ಕಷ್ಟಸುಖಗಳಿಗೆ ನಿಮಗೆ ಹೆಚ್ಚು ಸಾಲ ಸಿಗುತ್ತದೆ. ಸಂಘವನ್ನು ಬೆಳೆಸುವ ಜವಾಬ್ದಾರಿ ನಿಮ್ಮದು ಎಂದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಕೆ ಷಡಕ್ಷರಿ ಎಪಿಎಂಸಿ ನಿರ್ದೇಶಕ ಕಂಚಗಟ್ಟ ಮಧುಸೂದನ್ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್ ಮಾದಿಹಳ್ಳಿ ಪ್ರಕಾಶ್ ನಾಗರಾಜ್ ಗಂಗನಘಟ್ಟ ಯೋಗಾನಂದ ಶಿವಪ್ರಸಾದ್ ಮುಂತಾದವರಿದ್ದರು ಇದ್ದರು ವರದಿ: ಆನಂದ, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ…
ಮಧುಗಿರಿ: ತಾಲೂಕು ವಾಸವಿ ಯುವತಿಯರ ಸಂಘ , ಆರ್ಯ ವೈಶ್ಯ ಮಂಡಳಿ ಮತ್ತು ಎಲ್ಲಾ ಆರ್ಯ ವೈಶ್ಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇತ್ತೀಚೆಗೆ ವಾಸವಿ ಜಯಂತಿಯ ಅಂಗವಾಗಿ ” ವಾಸವಿ ಶತ ಕಂಠ ಗೀತ ಗಾಯನ”, “108 ವಿಧ ನೈವೇದ್ಯ ಸಮರ್ಪಣೆ” ಮತ್ತು ” 108 ವಿಧದ ಹೂಗಳ ಅಲಂಕಾರ, ಹಾಗೂ 108 ಜನ ಮಹಿಳೆಯರಿಂದ ಸಾಂಪ್ರದಾಯಿಕ ಉಡುಗೆ ತೊಟ್ಟು, 108 ನಿಮಿಷಗಳ ಕಾಲ ಗೀತಗಾಯನ ನಡೆಸಿದ್ದರು. ಈ ಕಾರ್ಯಕ್ರಮವು ತೆಲುಗು ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ಸ್ಥಾನ ಪಡೆದಿದೆ. ಅಂದಿನ ಕಾರ್ಯಕ್ರಮದಲ್ಲಿ ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಗೀತಾಫಣೀಶ್, ನಿವೇದಿತಾ ಮಧು, ಸ್ವಪ್ನಾ ಸತೀಶ್, ಲಲಿತಾ ರಾಘವೇಂದ್ರ, ಆರ್ಯವೈಶ್ಯ ಮಂಡಳಿಯ ಗೌರವಾಧ್ಯಕ್ಷ ಡಿ.ಜಿ.ಶಂಕರನಾರಾಯಣ ಶೆಟ್ಟಿ, ಅಧ್ಯಕ್ಷ ಕೆ.ಎನ್.ಶ್ರೀನಿವಾಸ್ ಮೂರ್ತಿ, ಭಾಗವಹಿಸಿದ್ದರು. ತೆಲುಗು ಬುಕ್ ಆಫ್ ರೆಕಾರ್ಡ್ ಪ್ರಶಂಸಾ ಪತ್ರವನ್ನು ತಗ್ಗೀಹಳ್ಳಿ ರಾಮಕೃಷ್ಣ ಮಠದ ರಮಾನಂದ ಚೈತನ್ಯ ಸ್ವಾಮೀಜಿ ಸಂಘದ ಪದಾಧಿಕಾರಿಗಳಿಗೆ ನೀಡಿ ಗೌರವಿಸಿದ್ದಾರೆ ವರದಿ : ಅಬಿದ್, ಮಧುಗಿರಿ ನಮ್ಮತುಮಕೂರು.ಕಾಂನ…
ಚಿಕ್ಕನಾಯ್ಕನಹಳ್ಳಿ: ತಾಲೂಕು ಹುಳಿಯಾರು ಹೋಬಳಿ ಡಿಂಕನಹಳ್ಳಿ ಗ್ರಾಮದಲ್ಲಿ ಕೆಪಿಟಿಸಿಎಲ್ ವತಿಯಿಂದ 400ಕೆವಿ ಸ್ವಿಚಿಂಗ್ ಸ್ಟೇಷನ್ ಕಾಮಗಾರಿಯಿಂದ ನೂರಾರು ರೈತರಿಗೆ ತೊಂದರೆಯಾಗುತ್ತಿದ್ದು ಸರ್ಕಾರ ಕೂಡಲೇ ಸ್ವಿಚಿಂಗ್ ಸ್ಟೇಷನ್ ಬೇರೆಡೆಗೆ ಸ್ಥಳಾಂತರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ತಿಪಟೂರು ಗ್ರಾಮದೇವತೆ ಶ್ರೀಕೆಂಪಮ್ಮದೇವಿ ದೇವಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ದೊಡ್ಡಪೇಟೆ ಬಿ.ಹೆಚ್. ರಸ್ತೆ ಮೂಲಕ ಸಾಗಿ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಲಾಯಿತು. ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ಭಾರತೀಯ ಕಿಸಾನ್ ಮೋರ್ಚ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್ ಮಾತನಾಡಿ, ಸರ್ಕಾರ ಹುಳಿಯಾರು ಹೋಬಳಿ ಡಿಂಕನಹಳ್ಳಿ ಗ್ರಾಮದಲ್ಲಿ 400ಕೆವಿ ಸಾಮರ್ಥ್ಯದ ಸ್ವಿಚ್ಚಿಂಗ್ ಸ್ಟೇಷನ್ ಪ್ರಾರಂಭಿಸುತ್ತಿದ್ದು ಈ ಯೋಜನೆಯಿಂದ ಡಿಂಕನಹಳ್ಳಿ ಸೇರಿದಂತೆ ಸುತ್ತಮುತ್ತಲ ನೂರಾರು ಫಲವತ್ತಾದ ಕೃಷಿ ಜಮೀನು ಹಾಳಾಗುತ್ತಿದೆ ಎಂದರು. ಫಲಭರಿತ ತೆಂಗು, ಅಡಿಕೆ, ಬಾಳೆ ತೇಗ ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೆಳೆಗಳು ನಷ್ಟವಾಗುತ್ತದೆ. ಆದರಿಂದ ಸರ್ಕಾರ ಬಂಜರು ಭೂಮಿ ಇರುವಂತಹ ಕಡೆಗೆ ಸ್ಥಳಾಂತರ ಮಾಡಿ ಅಲ್ಲಿಯ…
ಮೈಸೂರು: ಮಹಿಳೆಯೊಬ್ಬಳು ಬಸ್ ನಿಲ್ದಾನದಲ್ಲಿ ಯುವಕನ ಕೈಗೆ ಮಗು ಕೊಟ್ಟು ನಾಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕಳೆದ 15 ದಿನಗಳ ಹಿಂದೆ ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬರು ತನ್ನ ಕೈಗೆ ಗಂಡು ಮಗು ಕೊಟ್ಟು ಪರಾರಿ ಆಗಿದ್ದಾರೆ ಎಂದು ಎಚ್. ಕೋಟೆಯ ಯುವಕ ರಘು ಕಥೆಕಟ್ಟಿದ್ದು,ನಂತರ ಆ ಮಗುವನ್ನು ಮೈಸೂರಿನ ಲಷ್ಕರ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದ. ಪ್ರಕರಣ ದಾಖಲಿಸಿದ ಪೋಲಿಸರು ತನಿಖೆ ಆರಂಭಿಸಿದ್ದು ಪೊಲೀಸರಿಗೆ ಆ ಮಗುವನ್ನು ತಂದುಕೊಟ್ಟಿದ್ದ ರಘು ಹಾಗೂ ಆ ಮಗುವಿನ ತಾಯಿಯ ನಿಜವಾದ ಸಂಬಂಧವನ್ನು ಕಂಡುಹಿಡಿದಿದ್ದಾರೆ. ಮಗುವಿನ ತಾಯಿಗೆ ರಘು ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಆತನಿಗೆ ಆ ಮಹಿಳೆಯೊಂದಿಗೆ ಒಡನಾಟ ಹೊಂದಿದ್ದನು. ಇದು ಮಹಿಳೆಯ ಗಂಡನಿಗೂ ಕೂಡ ತಿಳಿದಿತ್ತು. ಇವರಿಬ್ಬರ ಪ್ರೀತಿಗೆ ಮಗು ಅಡ್ಡಿಯಾಗುತ್ತದೆ ಎಂದು ಮಗುವನ್ನು ದೂರ ಮಾಡುವ ಯೋಜನೆ ಮಾಡಿದ ರಘು ಕಥೆಯನ್ನು ಸೃಷ್ಟಿಸಿದ್ದ.ಆದರೆ ಈತನ ನಡೆಯಿಂದ ಅನುಮಾನಗೊಂಡ ಪೊಲೀಸರು, ಮಗುವಿನ ತಂದೆಯನ್ನು ಪತ್ತೆ ಮಾಡಿ ವಿಚಾರಿಸಿದಾಗ ಇವರಿಬ್ಬರ…
ಚಂಡೀಗಢ: ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ರಾಜ್ಯ ಸಂಪುಟದಿಂದ ವಜಾಗೊಳಿ ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದು ಕೇವಲ ಎರಡು ತಿಂಗಳಾಗಿದ್ದು ಮಾನ್ಸಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ 52 ವರ್ಷದ ವಿಜಯ್ ಸಿಂಗ್ಲಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವುದಾಗಿ ಮುಖ್ಯಮಂತ್ರಿಗಳೇ ಘೋಷಿಸಿದರು. ತನ್ನ ಇಲಾಖೆಯ ಟೆಂಡರ್‌ಗಳು ಮತ್ತು ಖರೀದಿಗಳಲ್ಲಿ ಸಿಂಗ್ಲಾ ಶೇಕಡಾ 1 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆಯಿಡುತ್ತಿದ್ದಾರೆ ಎಂದು ತಿಳಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾನ್ ಹೇಳಿದರು. ಸಿಂಗ್ಲಾ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೂ ಸೂಚಿಸಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದು ಸಿಂಗ್ಲಾ ಅವರನ್ನು ಪಂಜಾಬ್ ಪೋಲಿಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಭಗವಂತ್ ಮಾನ್ ಸರ್ಕಾರವು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂಬುದನ್ನು ಇದು ಪ್ರತಿಪಾದಿಸಿದೆ. ‘ನನ್ನ ಸರ್ಕಾರದ ಓರ್ವ ಸಚಿವ ತಮ್ಮ ಇಲಾಖೆಯ ಪ್ರತಿ ಟೆಂಡರ್ ಅಥವಾ ಖರೀದಿಯಿಂದ ಶೇಕಡಾ ಒಂದರಷ್ಟು ಕಮಿಷನ್ ಕೇಳುತ್ತಿರುವ ಬಗ್ಗೆ…
ಬೆಂಗಳೂರು: ಆ್ಯಸಿಡ್ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ಕೊನೆಯ ಹಂತದ ಸರ್ಜರಿ ನಡೆಸಿದ್ದು, ಯುವತಿಗೆ ಆರೋಗ್ಯ ಸುಧಾರಿಸಲು ಎರಡು ತಿಂಗಳ ಕಾಲವಕಾಶ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ 25 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಗೆ ಇಂದು ಹೈ ಲೆವೆಲ್ ಎಕ್ಯೂಪ್ಮೆಂಟ್ ಬಳಸಿ ಸರ್ಜರಿ ಮಾಡಲಾಗಿದೆ. ಇನ್ನು ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ಸಚಿವ ಡಾ. ಸುಧಾಕರ್ ಆರೋಗ್ಯ ವಿಚಾರಿಸಿದ್ದಾರೆ. ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್‌ನನ್ನು ಪೊಲೀಸರು ಕರೆ ತರುವಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿದ್ದರು. ಸದ್ಯ ಆತನ ಪರಿಸ್ಥಿತಿಯ ಫೋಟೋವನ್ನು ಕಂಡ ಸಂತ್ರಸ್ತೆ ಯುವತಿ ಖುಷಿಪಟ್ಟಿದ್ದು,ತನ್ನ ಈ ಸ್ಥಿತಿಗೆ ಕಾರಣನಾದವನ ಗತಿಯನ್ನು ಕಂಡು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದಾಳೆ ಎನ್ನಲಾಗಿದೆ. “ಯುವತಿಗೆ ಸ್ಕಿನ್ ಬ್ಯಾಂಕ್ ನಿಂದ ಸ್ಕಿನ್ ನೀಡಲಾಗುವುದು.ಆ್ಯಸಿಡ್ ದಾಳಿಯಿಂದ ಶೇ.35ರಷ್ಟು ದೇಹದ ಭಾಗಗಳು ಸುಟ್ಟುಹೋಗಿವೆ. ಸಂತ್ರಸ್ತೆಯ ಸ್ಥಿತಿ ಸ್ಪಲ್ಪ ಕ್ಲಿಷ್ಟಕರವಾಗಿದೆ.…