Author: admin

ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಮತ್ತು ಮೆರವಣಿಗೆ ನಡೆಸುತ್ತಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಸಂಸತ್ ಭವನ ಮತ್ತು ರಾಷ್ಟ್ರಪತಿ ಭವನದ ಕಡೆಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಜಾಥಾ ಹೊರಟಿದ್ದರು. ಈ ವೇಳೆ ದೆಹಲಿ ಪೊಲೀಸರು ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೆಹಲಿ ಪೊಲೀಸರ ಮೇಲೆ ಹಲ್ಲೆ ಆರೋಪ: ಕಸ್ಟಡಿಗೆ ತೆಗೆದುಕೊಳ್ಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಪಕ್ಷದ ಕಾರ್ಯಕರ್ತರ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳ ವಿರುದ್ಧ ನಾವು ದನಿ ಎತ್ತುತ್ತಿದ್ದೇವೆ. ಆದರೆ ಪೊಲೀಸರು ನಮಗೆ ಮುಂದುವರೆಯಲು ಅವಕಾಶ ನೀಡಲಿಲ್ಲ” ಎಂದು ಹೇಳಿದ್ದಾರೆ. “ಈ ಶಕ್ತಿಗಳನ್ನು ವಿರೋಧಿಸುವುದು ನಮ್ಮ ಕೆಲಸ. ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ನಮ್ಮ ಕೆಲಸ. ಹಣದುಬ್ಬರ ಮತ್ತು ನಿರುದ್ಯೋಗದಂತಹ ಜನರ ಸಮಸ್ಯೆಗಳನ್ನು ತೊಡೆದುಹಾಕುವುದು ನಮ್ಮ ಕೆಲಸ…

Read More

ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಲೈವ್ ಆಗಿದೆ. ಸಾಮಾನ್ಯ ಬಳಕೆದಾರರಿಗೆ, ಈ ಸೇಲ್ ಇಂದು ರಾತ್ರಿ ಮಧ್ಯರಾತ್ರಿಯಿಂದ ಪ್ರಾರಂಭವಾಗುತ್ತದೆ. ಪ್ರತಿ ವರ್ಷ ನಡೆಯುವ ಈ ಫ್ರೀಡಂ ಸೇಲ್‌ ನಲ್ಲಿ ಬಳಕೆದಾರರು ಸ್ಮಾರ್ಟ್‌ಫೋನ್‌ ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಇತ್ಯಾದಿಗಳ ಮೇಲೆ ಭಾರೀ ರಿಯಾಯಿತಿ ಪಡೆಯಬಹುದು. ಕೆಲವು ದಿನಗಳ ಹಿಂದೆ, ಅಮೆಜಾನ್ ಈ ಮಾರಾಟದಲ್ಲಿ ಲಭ್ಯವಿರುವ ಪ್ರಮುಖ ಕೊಡುಗೆಗಳನ್ನು ಬಹಿರಂಗಪಡಿಸಿದೆ. ಈ ಸೇಲ್ ಆಗಸ್ಟ್ 10 ರ ಮಧ್ಯರಾತ್ರಿಯವರೆಗೆ ಇರುತ್ತದೆ. ಈ ಫ್ರೀಡಂ ಸೇಲ್ ನಲ್ಲಿ ಹೊಸದಾಗಿ ಬಿಡುಗಡೆಯಾದ OnePlus 10T , iQOO 9T ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಈ ವರ್ಷ ಪರಿಚಯಿಸಲಾದ ಬಜೆಟ್, ಮಿಡ್ ಬಜೆಟ್ ಮತ್ತು ಪ್ರೀಮಿಯಂ ಫೋನ್‌ಗಳ ಮೇಲೆ ಕೂಡಾ ರಿಯಾಯಿತಿ ಸಿಗಲಿದೆ. ಇದಲ್ಲದೆ, ಬಳಕೆದಾರರು ಸ್ಮಾರ್ಟ್ ಟಿವಿಗಳು, ಲ್ಯಾಪ್‌ಟಾಪ್‌ಗಳು, ಗೃಹೋಪಯೋಗಿ ವಸ್ತುಗಳು, ಇತ್ಯಾದಿಗಳ ಮೇಲೆ ರಿಯಾಯಿತಿ ಪಡೆಯಲಿದ್ದಾರೆ. ಅಮೆಜಾನ್ ಹೊರತುಪಡಿಸಿ, ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್…

Read More

ಪಿಎಸ್ ಐ  ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಭಂದಿಸಿದಂತೆ ನಗರದಲ್ಲಿ ಸಿಐಡಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಎಂಟು ಅಭ್ಯರ್ಥಿಗಳನ್ನ ಬಂಧಿಸಿದ್ದಾರೆ. ಬಂಧಿತರು ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ ತಾಲೂಕಿನ ನಿವಾಸಿಗಳು ಎಂದು ಹೇಳಲಾಗಿದೆ. ಇವರು ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮವಾಗಿ ಪಿಎಸ್ಐ ಪರೀಕ್ಷೆ ಬರೆದಿದ್ದರು. ಎಂಟು ಜನ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದರು. ಎಂಟು ಅಭ್ಯರ್ಥಿಗಳ ಹೆಸರು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿತ್ತು. ಇವರು ನಗರದ ಎಸ್.ಬಿ.ಆರ್. ಮತ್ತು ಸರ್ಕಾರಿ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದರು. 1) ರವಿರಾಜ್ ಅಖಂಡೆ 2) ಪೀರಪ್ಪ ಹಾಸ್ಟೆಲ್‌ನಲ್ಲಿ ಕುಕ್ಕರ್ 3) ಶ್ರೀಶೈಲ್ 4) ಭಗವಂತರಾಯ್ 5) ಸಿದ್ದುಗೌಡ ಪಾಟೀಲ್ ಎಫ್‌ಡಿಎ 6) ಸೋಮನಾಥ್ 7) ಕಲ್ಲಪ್ಪ ಅಲ್ಲಾಪುರ ಕಾನ್ಸ್ಟೆಬಲ್ 8) ವಿಜಯಕುಮಾರ್ ಈ ಬಂಧಿತ ಅಭ್ಯರ್ಥಿಗಳು ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಕ್ಯಾಂಡಿಡೆಟ್‌ಗಳು ಎಂದು ಹೇಳಲಾಗಿದೆ. ಇವರು ತಲಾ 40 ಲಕ್ಷಕ್ಕೂ ಅಧಿಕ ಹಣವನ್ನ ಕಿಂಗ್‌ ಪಿನ್ ಆರ್‌.ಡಿ. ಪಾಟೀಲ್‌…

Read More

ಸ್ಯಾಂಡಲ್ ವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಅದ್ಬುತ ಸಿನಿಮಾಗಳು ತೆರೆ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಆಗಸ್ಟ್ ತಿಂಗಳಿನಲ್ಲಿ ಸಿನಿಮಾಭಿಮಾನಿಗಳಿಗೆ ಭರಪೂರ ಮನರಂಜನೆ ಸಿಕ್ಕಿದೆ. ಯಾಕಂದ್ರೆ ಸಾಲು ಸಾಲು ಒಳ್ಳೊಳ್ಳೆ ಸಿನಿಮಾಗಳು ತೆರೆಕಂಡಿದೆ ಜೊತೆ ರಿಲೀಸ್ ಆಗಲು ಬಾಕಿಯಿದೆ. ಡಾಲಿ ಧನಂಜಯ, ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಯಶ ಶಿವಕುಮಾರ್ ನಟನೆಯ “ಮಾನ್ಸೂನ್ ರಾಗ” ಸಿನಿಮಾ ಇದೇ ಆಗಸ್ಟ್ 19ರಂದು ತೆರೆಯ ಮೇಲೆ ರಂಗೇರಿಸಲು ಸಿದ್ಧವಾಗಿದೆ.”ಮಾನ್ಸೂನ್ ರಾಗ”ಸಿನಿಮಾದ ಟ್ರೀಲರ್ ಮತ್ತು ಹಾಡುಗಳಿಂದಲೇ ಜನಮನ ಗೆದ್ದಿದೆ. ‘ಸೆಕ್ಸ್ ವರ್ಕರ್’ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಳ್ಳೋದ್ರ ಮೂಲಕ ವಿಭಿನ್ನ ಕಥೆಯನ್ನ ತೆರೆಯ ಮೇಲೆ ಹೇಳಲು ಹೊರಟಿದ್ದಾರೆ. ಈ ಸಿನಿಮಾದಲ್ಲಿ ಸೆಕ್ಸ್ ವರ್ಕರ್ ಪಾತ್ರದಲ್ಲಿ ಕಾಣಿಸಿಕೊಳ್ಳೋ ರಚಿತಾ ರಾಮ್ ಮೇಲೆ ಡಾಲಿಗೆ ಲವ್ ಆಗೋ ಸೂಚನೆ ಟ್ರೇಲರ್ ಮೂಲಕ ಸಿಕ್ಕಿದೆ. ಟ್ರೇಲರ್ ನೋಡಿದ್ರೆ ಅದ್ಬುತ ಸ್ಟೋರಿ ಈ ಚಿತ್ರದಲ್ಲಿ ಇರೋದು ಪಕ್ಕಾ ಆಗಿದೆ.ಸಿನಿಮಾದ ಟೈಟಲ್ ಹೇಳುವಂತೆ ಆಲ್ ಮೋಸ್ಟ್ ಸಿನಿಮಾ ಮಳೆಯಲ್ಲೇ…

Read More

ತುಮಕೂರು: ಕಳೆದ ಹಲವು ದಿನಗಳಿಂದ ತುಮಕೂರು ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು,  ಸಾಕಷ್ಟು ಪ್ರದೇಶಗಳಲ್ಲಿ ಮನೆಗಳು ಕುಸಿದಿವೆ. ಹಲವಾರು ಮನೆಗಳು ಕುಸಿಯುವ ಹಂತದಲ್ಲಿದ್ದರೂ ಇನ್ನೂ ಅಧಿಕಾರಿಗಳು ಚಳಿ ಬಿಟ್ಟು ಕೆಲಸ ಮಾಡಲು ಮುಂದಾಗುತ್ತಿಲ್ಲ ಎಂದು ಮಳೆಯಿಂದ ಸಂಕಷ್ಟದಲ್ಲಿರುವ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ತಾಲ್ಲೂಕು ಮತ್ತು ಜಿಲ್ಲೆಯ  ಹೆತ್ತೆನಹಳ್ಳಿ, ಗೂಳೂರು ಹೋಬಳಿಯಲ್ಲಿ  ತೀವ್ರ ಮಳೆಯಿಂದಾಗಿ ಸುಮಾರು 10 ಮನೆಗಳು ಬೀಳುವ ಹಂತದಲ್ಲಿತ್ತು. ಈ ಬಗ್ಗೆ ಇಲ್ಲಿನ ನಿವಾಸಿಗಳು ಅಧಿಕಾರಿಗಳಿ ಸಾಕಷ್ಟು ಬಾರಿ ಹೇಳಿದರೂ ಯಾವುದೇ ಕ್ರಮಕೈಗೊಂಡಿಲ್ಲ  ಎಂದು ಸ್ಥಳೀಯರು ನಮ್ಮ ತುಮಕೂರು ಪ್ರತಿನಿಧಿಯೊಂದಿಗೆ ದೂರಿದ್ದಾರೆ. ಸಾರ್ವಜನಿಕರ ಹೇಳಿಕೆಯನ್ನು ದಾಖಲಿಸಿದ ನಮ್ಮ ಪ್ರತಿನಿಧಿ ಪಿಡಿಓ ಅವರನ್ನು ಸಂಪರ್ಕಿಸಿದ್ದು, ತಕ್ಷಣವೇ ಕಾರ್ಯಪ್ರವೃತರಾದ ಪಿಡಿಓ, ಸಂಕಷ್ಟದಲ್ಲಿದ್ದ ಜನರಿಗೆ  ತಾತ್ಕಾಲಿಕವಾಗಿ ಉಳಿದುಕೊಳ್ಳಲು ಪಂಚಾಯತ್ ನ ಹಳೆಯ ಕಟ್ಟಡದಲ್ಲಿ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಪಿಡಿಓ ಅವರು ಕ್ಷಿಪ್ರವಾಗಿ ಕೈಗೊಂಡ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಏರಿಯಾದಲ್ಲಿ 10 ಮನೆಗಳಿಗೆ ಹಾನಿಯಾಗಿದ್ದು, ಇಲ್ಲಿ ವಾಸಿಸುತ್ತಿರುವ ಜನರು ಮುಂದಿನ ಜೀವನ ಹೇಗೆ…

Read More

ಕೊರಟಗೆರೆ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಮೂಡಲಪಣ್ಣೆಯ ಮಲ್ಲಮ್ಮ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ. ನವೀನ್ ಕುಮಾರ್(27) ಆತ್ಮಹತ್ಯೆ ಮಾಡಿಕೊಂಡ ಯುವಕ. ಟೀ ಅಂಗಡಿ ವ್ಯಾಪಾರಿ ಆಗಿರುವ ನವೀನ್ ರಾತ್ರಿ 8 ಗಂಟೆಯ ವೇಳೆ ಮನೆಯಿಂದ, ಅವರ ಅಕ್ಕಳನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಬರುತ್ತೇನೆಂದು ಹೇಳಿ ಹೋಗಿದ್ದು,  ಅಂಗಡಿಯ ಮೇಲಿರುವ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದ್ದು, ಪಿಎಸ್ ಐ ನಾಗರಾಜು. ಬಿ ಮುಖ್ಯಪೇದೆ ಪುರುಷೋತ್ತಮ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ವರದಿ:  ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಹಿರಿಯೂರು: ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹಿರಿಯೂರು ನಗರ ಹಬ್ಬಕ್ಕೆ ಸಿದ್ಧವಾಗುತ್ತಿದ್ದು, ಖರೀದಿ ಭರಾಟೆಯೂ ಜೋರಾಗಿದೆ. ಇದರ ಜೊತೆಗೆ ಜನರ ಜೇಬಿಗೆ ಸಹ ಕತ್ತರಿ ಬೀಳುವಂತಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಖರೀದಿ ಜನರಿಗೆ ಕಗ್ಗಂಟಾಗಿದೆ. ವರಮಹಾಲಕ್ಷ್ಮೀ ಹಬ್ಬದಲ್ಲಿ ಲಕ್ಷ್ಮೀ ದೇವಿ ಪೂಜಿಸಿದರೆ ವರ ದೇವಿ ಕರುಣಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ. ಈ ಹಬ್ಬ, ವ್ರತ ಆಚರಿಸಲು ಜನ ಸಡಗರದಿಂದ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಬ್ಬದಲ್ಲಿ ಲಕ್ಷ್ಮೀಯ ಅನುಗ್ರಹಕ್ಕೆ ಜನರು ಸಂಭ್ರಮದಿಂದ ತಯಾರಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಅಗತ್ಯ ವಸ್ತುಗಳ ಖರೀದಿ ಜೋರಾಗಿಯೇ ನಡೆಯುತ್ತದೆ. ರಸ್ತೆಗಳಲ್ಲಿ ವಾಹನ ದಟ್ಟಣೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಹಿರಿಯೂರು ನಗರದ ಗಾಂಧಿ ಸರ್ಕಲ್ ಬಳಿ ಇರುವಂತಹ ನೆಹರು ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರಾಗಿಯೇ ನಡೆದಿದೆ. ಮಾರುಕಟ್ಟೆಯಲ್ಲಿ ಜನಜಾತ್ರೆಯಂತೆ ಕಂಡು ಬಂತು. ಹಬ್ಬಕ್ಕಾಗಿ ವಸ್ತುಗಳನ್ನು ಕೊಳ್ಳಲು ಜನ ತರಾತುರಿಯಲ್ಲಿ ಹಳ್ಳಿಗಳಿಂದ ಹಿರಿಯೂರು ನಗರಕ್ಕೆ ಬೆಳ್ಳಂ ಬೆಳ್ಳಗೆ ಬರತೊಡಗಿದ್ದರು. ಇದೇ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಸ್ಥರು ನಮ್ಮ ತುಮಕೂರು ಮಾಧ್ಯಮದ…

Read More

ತುಮಕೂರು: ಜಿಲ್ಲೆ ತುರುವೇಕೆರೆ ತಾಲೂಕಿನ ಹೋಬಳಿ ಅರೆ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ವಸತಿ ಶಿಕ್ಷಣ ಸಂಸ್ಥೆಗಳ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 2022 23ನೇ ಸಾಲಿನ ಶೈಕ್ಷಣಿಕ ವರ್ಷದ ಪೋಷಕರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳ ಪೋಷಕರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಶಾಲೆಯ ಪ್ರಾಂಶುಪಾಲರಾದ ಪರಣ್ಣರವರು ಸಭೆಯಲ್ಲಿ ಹಾಜರಿದ್ದ ಮಕ್ಕಳ ಪೋಷಕರುಗಳಿಗೆ ಈ ಸಭೆಯನ್ನು ಕರೆದಿರುವ ಉದ್ದೇಶ ಹಾಗೂ ಮಕ್ಕಳಿಗೆ ಕೊಡ ಬೇಕಾದ ಊಟ ಉಪಚಾರ ನಮ್ಮ ಕಡೆಯಿಂದ ಮಕ್ಕಳಿಗೆ ಆಗಬೇಕಾದ ಅನುಕೂಲಗಳು ಪಾಠ ಪ್ರವಚನದ ಬಗ್ಗೆ ಕುಲಂಕುಶವಾಗಿ ತಿಳಿಸಿಕೊಟ್ಟರು. ಈ ಸಭೆಯಲ್ಲಿ ಶಿಕ್ಷಕರುಗಳಾದ ಡಿ ಪಿ ವೇಣುಗೋಪಾಲ್, ವಿನೋದ್ ಕುಮಾರ್, ಹರ್ಷವರ್ಧನ್, ಮಂಜುನಾಥ್, ರವಿಕಿರಣ್, ರಾಘವೇಂದ್ರ ಶಿಕ್ಷಕಿಯರುಗಳಾದ ಶಿಲ್ಪಾ ಶ್ರೀ, ಸಬಿ ಹಾಬಾನು, ಆಶಾ , ಶ್ಯಾಮ್ ಸುಂದರ್ ಮತ್ತಿತರರು ಭಾಗವಹಿಸಿದ್ದರು. ವರದಿ: ಸುರೇಶ್ ಬಾಬು ಎಂ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಸರಗೂರು: ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ನೆರೆಯಿಂದಾಗಿ 15ಕ್ಕೂ ಹೆಚ್ಚು ಮನೆಗಳು ಕುಸಿತಗೊಂಡಿದ್ದು, ವಾಸಿಸಲು ಯೋಗ್ಯ ಮನೆ ಇಲ್ಲದೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಕಂದಾಯ ಇಲಾಖಾಧಿಕಾರಿಗಳು ಮನಬಂದಂತೆ ಪರಿಹಾರ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಬಿನಿ ಜಲಾಶಯ ನಿರ್ಮಾಣಗೊಂಡ ಬಳಿಕ ಗ್ರಾಮವನ್ನು ಸ್ಥಳಾಂತರ ಮಾಡಲಾಗಿದ್ದು, ಗ್ರಾಮದಲ್ಲಿರುವ ಮನೆಗಳು ಸಂಪೂರ್ಣವಾಗಿ ಮಣ್ಣಿನಿಂದ ನಿರ್ಮಾಣಗೊಂಡಿರುವ ಮನೆಗಳಾಗಿವೆ. ಹೀಗಾಗಿ ಮಳೆಗೆ ಮಣ್ಣಿನ ಗೋಡೆಗಳು ಹಾಗೂ ಮೇಲ್ಛಾವಣಿ ಕುಸಿದಿದೆ. ಗ್ರಾಮದ ಸಣ್ಣಮ್ಮ ಬಸವನಾಯಕ, ಸಿದ್ದಮ್ಮ ಬಸವರಾಜು, ದೇವಮ್ಮ ಚಿಕ್ಕನಾಯಕ, ಕಾಳನಾಯಕ ತಿಮ್ಮನಾಯಕ, ಸುಧಾ ಶಿವಪ್ಪ, ನಾಗಮ್ಮ ಪುಟ್ಟಲಿಂಗನಾಯಕ, ದೇವಮ್ಮರಾಮನಾಯಕ, ಸವಿತಾ ರೇವಣ್ಣ, ಜಯಶ್ರೀ ಮಹೇಶ್, ಕಮಲಮ್ಮ ಇಂದ್ರನಾಯಕ ಅವರ ಮನೆಗಳು ಸಂಪೂರ್ಣ ಕುಸಿತಗೊಂಡಿದ್ದು, ಕಂದಾಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ನೀಡದೇ ಮೀನಾಮೇಷ ಎಣ ಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ದೇವಮ್ಮರಾಮನಾಯಕ ಅವರಿಗೆ ವಿಕಲಚೇತನ ಮಗನಿದ್ದು, ಜೀವನಕ್ಕಾಗಿ ಕೂಲಿನಾಲಿ ಮಾಡುತ್ತಿದ್ದಾರೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಕೇವಲ 5 ಸಾವಿರ ರೂ.…

Read More

ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಮಾವತ್ತೂರು  ಗ್ರಾಮದ ದೊಡ್ಡಕೆರೆಗೆ ಬಿಜೆಪಿ ಮುಖಂಡರದ ಕೆ.ಎಂ.ಮುನಿಯಪ್ಪರವರು ರೈತರೊಂದಿಗೆ ತೆರಳಿ ತುಂಬಿದ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಅವರು, 25 ವರ್ಷಗಳ ನಂತರ ಕೂಡಿಬಿದ್ದ ಮಾವತ್ತೂರು ಕೆರೆ ತುಂಬಿ,  ಹರಿಯುತ್ತಿರುವ ನದಿಗಳು ಮತ್ತು ಕೆರೆಗಳಿಗೆ ಕೃತಜ್ಞತಾ ಅರ್ಪಣಾ ಮನೋಭಾವದಿಂದ ಪೂಜೆ ಸಲ್ಲಿಸುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ. ರೈತರ ಬದುಕಿನಲ್ಲಿ ಜೀವನಾಡಿಯಾಗಿರುವ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಿದರೆ ಮುಂದಿನ ದಿನಮಾನಗಳಲ್ಲಿಯೂ ಕೆರೆಗಳು ನೀರಿನಿಂದ ತುಂಬಿರಲಿ ಎನ್ನುವ ಭಕ್ತಿ ಸಮರ್ಪಿಸಿದಂತಾಗಿದೆ ಎಂದು ಹೇಳಿದರು. ಬಯಲು ಸೀಮೆಯ ಭಾಗವಾದ ಕೊರಟಗೆರೆ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದ್ದು, ಅದರಲ್ಲೂ ಈ ಬಾರಿ ನಿರೀಕ್ಷೆಗೂ ಮೀರಿದ ಮಳೆಯಾಗಿ ಕೆರೆ ಕಟ್ಟೆಗಳಿಗೆ, ಹಳ್ಳಕೊಳ್ಳಗಳಿಗೆ, ನೀರು ತುಂಬಿರುವ  ಹಿನ್ನೆಲೆಯಲ್ಲಿ ಕೆರೆಗಳನ್ನು ಪೂಜಿಸುವುದು ಕರ್ತವ್ಯವಾಗಿದೆ ಎಂದರು. ಗಂಗೆ ನಮ್ಮೆಲ್ಲರ ಮೇಲೆ ದಯೆ ತೋರಿ, ಪ್ರತಿ ವರ್ಷ ಕೆರೆಗಳು ತುಂಬುವ ಮೂಲಕ ರೈತರಿಗೆ ದಯೆ ತೋರಲಿ ಈ ನಿಟ್ಟಿನಲ್ಲಿ ಕ್ಷೇತ್ರದ ಅನ್ನದಾತರ ಬೆನ್ನೆಲುಬಾಗಿ…

Read More